Tag: publictv

  • ನದಿಗೆ ಉರುಳಿದ ಬಿಎಂಟಿಸಿ ಬಸ್- ಗರ್ಭಿಣಿ ಸೇರಿ ಹಲವು ಪ್ರಯಾಣಿಕರಿಗೆ ಗಾಯ

    ಬೆಂಗಳೂರು: ಬಿಎಂಟಿಸಿ ಬಸ್ಸೊಂದು ಸೇತುವೆಗೆ ಡಿಕ್ಕಿ ಹೊಡೆದು 10 ಅಡಿ ಆಳದ ನದಿಗೆ ಬಿದ್ದ ಪರಿಣಾಮ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ಇಂದು ನಡೆದಿದೆ.

    30 ಮಂದಿ ಪ್ರಯಾಣಿಕರನ್ನೊಳಗೊಂಡ 374ಎಂ ರೂಟ್‍ನ ಬಿಎಂಟಿಸಿ ಬಸ್ ಕೆಂಗೆರಿಯಿಂದ ನೆಲಮಂಗಲ ಕಡೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಬಸ್ ಅರ್ಕಾವತಿ ನದಿಯ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ತಾವರೆಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಘಟನೆಯಿಂದ ಚಾಲಕ ವೆಂಕಟೇಶ್, ನಿರ್ವಾಹಕಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಕುಟುಂಬವೊಂದು ಕೂಲಿ ಕೆಲಸಕ್ಕೆ ಯಾದಗಿರಿಯಿಂದ ಬಂದಿದ್ದು, ಇದರಲ್ಲಿದ್ದ ಗರ್ಭಿಣಿಯೊಬ್ಬರಿಗೆ ಗಾಯಗಳಾಗಿವೆ. ಘಟನೆ ನಡೆದ ತಕ್ಷಣ ಆಂಬುಲೆನ್ಸ್ ಬಾರದೆ ಕೆಲಕಾಲ ಗರ್ಭಿಣಿ ಪರದಾಡುವಂತಹ ಸ್ಥಿತಿ ಎದುರಾಯಿತು. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾವರೆಕೆರೆ ಪೊಲೀಸ್ರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

  • ಫುಡ್ ಫ್ಯಾಕ್ಟರಿಯಲ್ಲಿ ಕೊಳೆತ ಹಣ್ಣುಗಳಿಂದ ತಯಾರಾಗ್ತಿದೆ ಜಾಮ್!

    ಬೆಂಗಳೂರು: ಐಸ್‍ಕ್ರೀಂ ಮೇಲೆ ವಿವಿಧ ಬಗೆಯ ಫ್ರುಟ್‍ಗಳನ್ನು ಹಾಕಿ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಇನ್ಮುಂದೆ ಫ್ರುಟ್ಸ್ ಹಾಕಿದ ಐಸ್‍ಕ್ರೀಂ, ಜಾಮ್ ತಿನ್ನುವ ಮೊದಲು ಸರಿಯಾಗಿ ನೋಡಿ ತಿನ್ನಿ. ಯಾಕಂದ್ರೆ ಫ್ರೂಟ್ಸ್ ಹಾಗೂ ಜಾಮನ್ನು ಕೊಳೆತ ಹಣ್ಣುಗಳಿಂದ ತಯಾರು ಮಾಡುತ್ತಾರೆ.

    ಬೆಂಗಳೂರಿನ ಅಂಚೆಪಾಳ್ಯದಲ್ಲಿರುವ ಸಂತೋಷ್ ಫುಡ್ ಫ್ಯಾಕ್ಟರಿ ಫ್ರೂಟ್ಸ್ ಮತ್ತು ಜಾಮ್ ತಯಾರು ಮಾಡಿ ಕರ್ನಾಟಕದಾದ್ಯಂತ ಸರಬರಾಜು ಮಾಡ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ ಆಹಾರ ತಯಾರಿಕೆ ಸ್ಥಳ ಮತ್ತು ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಆದ್ರೆ ಅದ್ಯಾವುದೂ ಇಲ್ಲಿ ಕಾಣಿಸ್ತಿಲ್ಲ. ಕೊಳೆತ ಪಪ್ಪಾಯಿ ಹಣ್ಣು, ಜಾಮ್ ತಯಾರು ಮಾಡೋ ಯಂತ್ರಗಳ ಮೇಲೂ ಕಸ, ಕ್ರಿಮಿ, ಕೀಟಗಳು ಕಣ್ಣಿಗೆ ರಾಚುತ್ತೆ. ಈ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ ಸದಸ್ಯರೊಬ್ಬರು ಫ್ಯಾಕ್ಟರಿ ಮಾಲೀಕರನ್ನ ಪ್ರಶ್ನೆ ಮಾಡಿದ್ರೆ, ನನಗೆ ಕಮೀಷನರ್ ಗೊತ್ತು. ಪೊಲೀಸ್ ಅಧಿಕಾರಿ ಗೊತ್ತು ಅಂತಾ ಅವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸ್ಚಚ್ಛತೆ ಬಗ್ಗೆ ಕೇಳಿದ್ರೆ, ಸರಿಯಾಗಿ ಉತ್ತರ ನೀಡದೇ ನೀವು ಯಾರು ಪ್ರಶ್ನೆ ಮಾಡೋದಕ್ಕೆ ಅಂತಾ ಧಮ್ಕಿ ಹಾಕ್ತಾರೆ ಅಂತ ಆರೋಪಿಸಲಾಗಿದೆ.

    ಜಾಮ್ ಮತ್ತು ಚೆರ್ರಿ ತಯಾರು ಮಾಡಬೇಕಾದ್ರೆ 6 ದಿನಗಳ ಕಾಲ ಪಪ್ಪಾಯಿ ಹಣ್ಣನ್ನು ಕೊಳೆಯುವಂತೆ ಮಾಡಿ ತಯಾರು ಮಾಡುವುದು ಸರಿ. ಕೊಳೆತಿರುವುದರಿಂದ ಕೆಟ್ಟ ವಾಸನೆ ಬರುತ್ತೆ ಅದು ಸಹಜ ಅಂತ ಫುಡ್ ಫ್ಯಾಕ್ಟರಿ ಮಾಲೀಕ ಸಂತೋಷ್ ವಾದ ಮಾಡ್ತಾರೆ.

    ಸಂತೋಷ್ ಪುಡ್ ಫ್ಯಾಕ್ಟರಿ ವಿರುದ್ಧ ಆಹಾರ ಸುರಕ್ಷತಾ ಆಯುಕ್ತರಿಗೆ ಕರ್ನಾಟಕ ಕಾರ್ಮಿಕ ವೇದಿಕೆಯವರು ದೂರು ನೀಡಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಫ್ಯಾಕ್ಟರಿ ವಿರುದ್ಧ ಯಾವ ರೀತಿ ಕ್ರಮ ಜರುಗುಸುತ್ತೋ ಕಾದು ನೋಡ್ಬೇಕು.

  • ಶಾಕಿಂಗ್: ಯುವತಿಯ ಕಿವಿಯಲ್ಲಿ ಸಿಲುಕಿಕೊಳ್ತು ಹೆಬ್ಬಾವು!

    ಲಾಸ್ ಏಂಜಲಿಸ್: ಕೆಲವೊಮ್ಮೆ ಕಿವಿಯೊಳಗೆ ಇರುವೆಯೋ, ಜಿರಲೆಯೋ ಹೋಗಿ ಸಿಲುಕಿಕೊಂಡಿರೋ ಘಟನೆ ಬಗ್ಗೆ ಕೇಳಿರ್ತೀವಿ. ಆದ್ರೆ ಅಮೆರಿಕದಲ್ಲಿ ಯುವತಿಯೊಬ್ಬಳ ಕಿವಿಯ ರಂಧ್ರದಲ್ಲಿ ಹೆಬ್ಬಾವೊಂದು ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.

    ನಂಬಲು ಅಸಾಧ್ಯವಾದ್ರೂ ಇದು ನಿಜ. ಇಲ್ಲಿನ ಒರೆಗಾನ್ ನಿವಾಸಿಯಾದ 17 ವರ್ಷದ ಆಶ್ಲೀ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಕೆ ಸಾಕಿದ್ದ ಬಾಲ್ ಪೈಥಾನ್ ಜಾತಿಯ ಬಾರ್ಟ್ ಎಂಬ ಹೆಬ್ಬಾವು ಕಿವಿಯಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಆಕೆ ಗಾಬರಿಗೊಂಡು ಹಾವನ್ನು ಹೊರಗೆಳೆಯಲು ಹರಸಾಹಸ ಪಟ್ಟಿದ್ದಾಳೆ. ಆದ್ರೆ ಅದು ಸಾಧ್ಯವಾಗದಿದ್ದಾಗ ಎಮರ್ಜೆನ್ಸಿ ನಂಬರ್ ಗೆ ಕರೆ ಮಾಡಿದ್ದಾಳೆ. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು, ಅವರೂ ಕೂಡ ಹಾವನ್ನು ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ವೈದ್ಯರು ಆಕೆಯ ಕಿವಿಯನ್ನು ಮರಗಟ್ಟುವಂತೆ ಔಷಧಿ ನೀಡಿ ಹಾವನ್ನು ಹೊರತೆಗೆದಿದ್ದಾರೆ.

    ಕಿವಿಯ ರಂಧ್ರದೊಳಗೆ ಹಾವು ಹೋಗಲು ಹೇಗೆ ಸಾಧ್ಯ?: ಕಿವಿಯಲ್ಲಿ ದೊಡ್ಡದಾದ ರಂಧ್ರವಾಗುವಂತೆ ಕಿವಿ ಚುಚ್ಚಿಸುವುದು ಇತ್ತೀಚಿನ ಫ್ಯಾಶನ್. ಇದಕ್ಕೆ ಸ್ಟ್ರೆಚ್ ಪಿಯರ್ಸಿಂಗ್ ಅಂತಾರೆ. ರಿಂಗ್‍ವೊಂದನ್ನು ಕಿವಿಯ ಆಲೆಗೆ ಹಾಕಲಾಗಿರುತ್ತದೆ. ಆಶ್ಲೀ ಕೂಡ ಇದೇ ರೀತಿ ಕಿವಿ ಚುಚ್ಚಿಸಿಕೊಂಡಿದ್ದರಿಂದ ಹಾವು ಒಳಗೆ ಸಿಲುಕಿ ಈ ಫಜೀತಿ ಅನುಭವಿಸಬೇಕಾಯ್ತು.

  • 1 ತಿಂಗಳಿಂದ ಬಂದಾಗಿದ್ದ ಮೈಸೂರು ಮೃಗಾಲಯ ಇಂದಿನಿಂದ ಓಪನ್

    ಮೈಸೂರು: ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಇಂದಿನಿಂದ ತೆರೆಯಲಿದೆ. ಭೋಪಾಲ್ ಲ್ಯಾಬ್ ವರದಿ ಆಧಾರದ ಮೇಲೆ ಮೃಗಾಲಯ ರೀ ಓಪನ್ ಆಗುತ್ತಿದ್ದು ಪ್ರಾಣಿಪ್ರಿಯರ ಹಾಗೂ ಮೃಗಾಲಯ ಸಮೀಪದ ವ್ಯಾಪಾರಸ್ಥರ ಸಂತಸಕ್ಕೆ ಕಾರಣವಾಗಿದೆ.

    ಭೋಪಾಲ್ ಲ್ಯಾಬ್‍ನಲ್ಲಿ ಪಕ್ಷಿಗಳ ಎರಡನೇ ಮಾದರಿಯಲ್ಲೂ ಯಾವುದೇ ಸೊಂಕಿನ ಅಂಶ ಇಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಕಾರ್ಯದರ್ಶಿ ಹಾಗೂ ಸೆಂಟ್ರಲ್ ಝೂ ಅಥಾರಿಟಿ ಮೈಸೂರು ಮೃಗಾಲಯವನ್ನ ಪುನರಾರಂಭಿಸುವಂತೆ ಸೂಚನೆ ನೀಡಿದೆ. ಹಾಗಾಗಿ ಪ್ರವಾಸಿಗರು, ಸಾರ್ವಜನಿಕರು ಯಾವುದೇ ಅಳುಕಿಲ್ಲದೆ ಮೃಗಾಲಯಕ್ಕೆ ಹೋಗಿ ಬರಬಹುದು.

    ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ಮುಚ್ಚಲಾಗಿತ್ತು. ಮೃಗಾಲಯದ ಕೊಳ-3ರಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್‍ಐಎಚ್‍ಎಸ್‍ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವ ಬಗ್ಗೆ ದೃಢಪಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಅಲ್ಲಿನ ಆಡಳಿತ ಮಂಡಳಿ ಬಂದ್ ಮಾಡಿತ್ತು.

  • ದೇಶದ ಪ್ರತಿಷ್ಠಿತ ಶಾಲೆಯಲ್ಲೇ ಪ್ರಿನ್ಸಿಪಾಲ್‍ನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಇದೀಗ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಡೆಯಬಾರದ ಘಟನೆ ನಡೆದು ಹೋಗಿದೆ. ದೇಶದ ನಂಬರ್ 1 ಶಾಲೆಯೊಂದರ ಕಾಮುಕ ಶಿಕ್ಷಕನಿಗೆ ಪೊಲೀಸರೇ ಬೆನ್ನುಲುಬಾಗಿ ನಿಂತು ರಕ್ಷಿಸಿರುವ ಕುರಿತು ದಾಖಲೆ ಸಮೇತ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಪಾಠ ಹೇಳಿಕೊಡುವ ಪ್ರಿನ್ಸಿಪಾಲ್ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ಬೆಂಗಳೂರಿನ ಸದಾಶಿವನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಅಂದ್ರೆ ನೀವು ನಂಬಲೇ ಬೇಕು. ಹೌದು. ಈ ಶಾಲೆಯ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರೋದು ಬಹಿರಂಗವಾಗಿದೆ. ಈತನ ರಕ್ಷಣೆಗೆ ಬೆನ್ನ ಹಿಂದೆ ನಿಂತಿದ್ದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್!.

    ಏನಿದು ಪ್ರಕರಣ: ಜನವರಿ 14ರಂದು ಬೆಂಗಳೂರಿನ ನೋಡಲ್ ಚೈಲ್ಡ್ ಲೈನ್‍ಗೆ ಒಂದು ಫೋನ್ ಬಂತು. ಕೇಂದ್ರಿಯ ವಿದ್ಯಾಲಯದ ಶಿಕ್ಷಕರೇ ಮಾಡಿದ ಫೋನ್ ಅದಾಗಿತ್ತು. ಕಳೆದ ಮೂರು ವರ್ಷಗಳಿಂದ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿದ್ಯಾರ್ಥಿಗಳಿಗೆ ಲೈಂಗಿಕವಾಗಿ ಕಿರುಕುಳ ಕೊಡ್ತಿದ್ದಾರೆ. ನಮ್ಮ ಕೈಯಲ್ಲಿ ಏನು ಮಾಡೋಕೆ ಆಗ್ತಿಲ್ಲ. ದಯವಿಟ್ಟು ಮಕ್ಕಳ ಜೀವ, ಜೀವನ ಎರಡನ್ನೂ ಉಳಿಸಿ ಅಂತ ಕರೆಯಲ್ಲಿ ತಿಳಿಸಿದ್ರು. ತಕ್ಷಣ ಚೈಲ್ಡ್‍ಲೈನ್ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿ ತನಿಖೆ ನಡೆಸಲು ಸೂಚಿಸಿದ್ರು.

    ಪ್ರಕರಣವನ್ನ ಸೂಕ್ಷ್ಮವಾಗಿ ಬೆನ್ನುಹತ್ತಿದ ಬೆಂಗಳೂರು ಪೊಲೀಸರು ದೂರು ಕೊಟ್ಟ ಶಿಕ್ಷಕರನ್ನ ವಿಚಾರಣೆ ನಡೆಸಿದ್ರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಏಳು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದ್ರು. ಆಗ ಲೈಂಗಿಕ ಕಿರುಕುಳ ನೀಡಿರೋದು ಸಾಬೀತಾಯ್ತು. ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಷಯ ಮುಟ್ಟಿಸಿದ್ರು. ಆದ್ರೆ ಆ ಪೊಲೀಸ್ ಅಧಿಕಾರಿ ಟಿವಿಯವರಿಗೆ ಮಾಹಿತಿ ನೀಡದಂತೆ ಗೌಪ್ಯವಾಗಿ ಇಡಲು ಆದೇಶ ಮಾಡಿದ್ರು.

    ಹೌದು ನಂಬೋದಕ್ಕೆ ಕಷ್ಟವಾದ್ರೂ ಇದು ಸತ್ಯ. ಜನವರಿ 25ರಂದು ಕುಮಾರ್ ಠಾಕೂರ್ ಮೇಲೆ ಎಫ್‍ಐಆರ್ ಹಾಕಿ 6 ದಿನ ಆದ್ಮೇಲೆ ಅವ್ರನ್ನ ಅರೆಸ್ಟ್ ಮಾಡಿದ್ರು. ಆದ್ರೆ ಎರಡೇ ದಿನದಲ್ಲಿ ಅವರಿಗೆ ಬೇಲ್ ಸಿಗುವಂತೆಯೂ ಮಾಡಿ ಫೆಬ್ರವರಿ 1ರಂದು ಕುಮಾರ್ ಠಾಕೂರ್‍ಗೆ ಜಾಮೀನು ಕೂಡ ಸಿಕ್ಕಿದೆ. ಆದ್ರೆ ಇದೀಗ ಮಾಧ್ಯಮಗಳಿಗೆ ಈ ಮಾಹಿತಿ ಲಭಿಸಿದ್ದು, ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಆರೋಪಿ ಹಾಗೂ ಪೊಲೀಸರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ ಅಂತಾ ಕಾದುನೋಡಬೇಕು.

  • ದಿನಭವಿಷ್ಯ: 03-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಶುಕ್ರವಾರ, ಅಶ್ವಿನಿ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 8:31 ರಿಂದ 9:54
    ಅಶುಭ ಘಳಿಗೆ: ಬೆಳಗ್ಗೆ 11:18 ರಿಂದ 12:41

    ರಾಹುಕಾಲ: ಬೆಳಗ್ಗೆ 11:10 ರಿಂದ 12:37
    ಗುಳಿಕಕಾಲ: ಬೆಳಗ್ಗೆ 8:16 ರಿಂದ 9:43
    ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 4:58

    ಮೇಷ: ಆಸೆ ಆಕಾಂಕ್ಷೆಗಳಿಂದ ದೂರವಿರುವ ಆಲೋಚನೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ತೊಡಗುವಿರಿ.

    ವೃಷಭ: ಆಕಸ್ಮಿಕ ಬಂಧುಗಳ ಆಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸಂಕಷ್ಟ ಎದುರಾಗುವ ಸನ್ನಿವೇಶ, ಉದ್ಯೋಗದಲ್ಲಿ ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ.

    ಮಿಥುನ: ಮಾಡಿದ ತಪ್ಪುಗಳಿಂದ ಸಮಸ್ಯೆ, ಮೋಜು ಮಸ್ತಿಗಾಗಿ ಖರ್ಚು, ಆರ್ಥಿಕ ಸಂಕಷ್ಟಗಳು, ಹಣಕಾಸು ಅಡೆತಡೆ.

    ಕಟಕ: ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ, ಶೀತ ಬಾಧೆ, ಉಸಿರಾಟ ಸಮಸ್ಯೆ, ಮಹಿಳೆಯರಿಂದ ಕಳಂಕ ಸಾಧ್ಯತೆ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

    ಸಿಂಹ: ವಿದ್ಯಾಭ್ಯಾಸ ನಿಮಿತ್ತ ನಿದ್ರಾಭಂಗ, ಉದ್ಯೋಗ ಕಳೆದುಕೊಳ್ಳುವ ಭೀತಿ, ಆರ್ಥಿಕ ಸಂಕಷ್ಟ, ಮಿತ್ರರಿಂದ ಕಿರಿಕಿರಿ, ಕುಟುಂಬದ ಗೌರವಕ್ಕೆ ಚ್ಯುತಿ.

    ಕನ್ಯಾ: ಶತ್ರುಗಳ ನಾಶ, ಮಿತ್ರರಿಂದ ಅಕ್ರಮ ಸಂಪಾದನೆ, ದಾಯಾದಿಗಳ ಕಲಹ, ಪ್ರಯಾಣದಲ್ಲಿ ಅಡೆತಡೆ.

    ತುಲಾ: ಉದ್ಯಮದಲ್ಲಿ ನಷ್ಟ, ವ್ಯವಹಾರದಲ್ಲಿ ಸಂಕಷ್ಟ, ಕೇಸ್ ದಾಖಲಾಗುವ ಸಾಧ್ಯತೆ, ಅಧಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ವೃಶ್ಚಿಕ: ಶುಭ ಕಾರ್ಯಕ್ಕೆ ಸಕಾಲ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ದಾಂಪತ್ಯದಲ್ಲಿ ಅಹಂಭಾವ, ಸಂಗಾತಿಯನ್ನ ಶತ್ರುವಿನಂತೆ ಕಾಣುವಿರಿ.

    ಧನಸ್ಸು: ಮಕ್ಕಳೊಂದಿಗೆ ಮನಃಸ್ತಾಪ, ಸಾಲ ಬಾಧೆ, ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಸಂಗಾತಿಯಿಂದ ಮಾನಸಿಕ ನೆಮ್ಮದಿ.

    ಮಕರ: ಉನ್ನತ ಹುದ್ದೆಯ ಆಸೆ, ಸ್ಥಳ ಬದಲಾವಣೆ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮಕ್ಕಳ ಭವಿಷ್ಯದ ಚಿಂತೆ, ಸಂತಾನ ದೋಷ, ಮಾನಸಿಕ ವ್ಯಥೆ.

    ಕುಂಭ: ದೊಡ್ಡ ಸಾಹಸಕ್ಕೆ ಕೈ ಹಾಕುವಿರಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಮೇಲೆ ಸಾಲ ಮಾಡುವಿರಿ.

    ಮೀನ: ಮಕ್ಕಳಲ್ಲಿ ತುಂಟಾಟ, ಅನಗತ್ಯ ತೀರ್ಮಾನ, ಕುಟುಂಬದಲ್ಲಿ ಆತಂಕ, ಆತ್ಮೀಯರು ದೂರವಾಗುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ವ್ಯವಹಾರದಿಂದ ದೂರ ಉಳಿಯುವ ಯೋಚನೆ.

  • ಟ್ರಂಪ್ ಆಡಳಿತವನ್ನು ಪ್ರಶ್ನಿಸಿ ಸಿರಿಯಾದ 7ರ ಬಾಲಕಿಯ ಈ ಟ್ವೀಟ್ ಈಗ ಫುಲ್ ವೈರಲ್

    ಡಮಾಸ್ಕಸ್: ಅಮೆರಿಕಾ ಅಧ್ಯಕ್ಷ ಡೊನಾಳ್ಡ್ ಟ್ರಂಪ್‍ಗೆ ಟ್ವಿಟ್ಟರ್‍ನಲ್ಲಿ ಸಿರಿಯಾದ 7 ವರ್ಷದ ಬಾಲಕಿ ಕೇಳಿದ ಪ್ರಶ್ನೆ ಇದೀಗ ವಿಶ್ವಾದಾದ್ಯಂತ ಗಮನಸೆಳೆದಿದೆ.

    ಸಿರಿಯಾದ ಬಾನಾ ಅಲಬೇದ್ ಎಂಬ ಬಾಲಕಿ ಟ್ವಟ್ಟರ್‍ನಲ್ಲಿ `ಮಿಸ್ಟರ್ ಟ್ರಂಪ್, ನೀವು ಎಂದಾದರೂ ನೀರು, ಆಹಾರವಿಲ್ಲದೇ 24 ಗಂಟೆ ಬದುಕಿದ್ದೀರಾ?. ಹೀಗೆ ಸಿರಿಯಾದ ನಿರಾಶ್ರತಿರ ಹಾಗೂ ಮಕ್ಕಳ ಬಗ್ಗೆ ಸ್ವಲ್ಪ ಚಿಂತಿಸಿ ಅಂತಾ ಹೇಳಿದ್ದಾಳೆ. ಈಕೆಯ ಹೊಸ ಟ್ವಿಟ್ ಹೊಸ ಟ್ವಿಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯ ಈ ಟ್ವಿಟ್‍ಗೆ 7,462 ಮಂದಿ ರೀಟ್ವಿಟ್ ಮಾಡಿದ್ದು, 14,978 ಲೈಕ್ಸ್‍ಗಳು ಬಂದಿವೆ.

    ಬಳಿಕ ಈ ಹಿಂದೆ ಟ್ರಂಪ್ ವಲಸೆ ನಿಷೇಧದ ಬಗ್ಗೆ ಟ್ರಂಪ್ ಮಾಡಿದ್ದ `ನಮ್ಮ ದೇಶದಿಂದ ಕೆಟ್ಟ ಚಿಂತನೆಗಳುಳ್ಳ ಜನರನ್ನು ಹೊರಗಿಡುವುದು ಉದ್ದೇಶ’ ಎಂಬ ಟ್ವಿಟ್ ಗೂ ರೀಟ್ವೀಟ್ ಮಾಡಿದ ಈಕೆ `ನಾನು ಭಯೋತ್ಪಾದಕಿಯೇ?’ ಅಂತಾ ಪ್ರಶ್ನಿಸಿದ್ದಾಳೆ.

    ಟ್ರಂಪ್ ಇತ್ತೀಚೆಗಷ್ಟೇ ಸಿರಿಯಾ ಒಳಗೊಂಡಂತೆ ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ನಿಷೇಧಿಸಿ ಆದೇಶಕ್ಕೆ ಸಹಿ ಮಾಡಿದ್ದು ಇದು ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

    ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಲಬೇದ್ `ಪ್ರಿಯ ಟ್ರಂಪ್, ನಿರಾಶ್ರಿತರನ್ನು ನಿಷೇಧಿಸುವುದು ಅತಿ ಕೆಟ್ಟ ವಿಚಾರ. ಸರಿ, ಇದು ಒಳ್ಳೆಯದಾದ್ದರೆ, ನಾನು ನಿಮಗೊಂದು ಐಡಿಯಾ ಹೇಳ್ತೀನಿ. ಇತರ ರಾಷ್ಟ್ರಗಳಲ್ಲಿ ಶಾಂತಿ ನೆಲಸುವಂತೆ ಮಾಡಿ” ಎಂದು ಬರೆದಿದ್ದಳು.

    ಯುದ್ಧ ಜರ್ಜರಿತ ಸಿರಿಯಾ ನಗರ ಅಲೆಪ್ಪೋದಲ್ಲಿನ ಜನರ ಜೀವನದ ಬಗ್ಗೆ ಬರೆದು, ಸಹಾಯಕ್ಕಾಗಿ ತನ್ನ ತಾಯಿ ಫಾಥೇಮಾ ಅವರೊಂದಿಗೆ ಅಲಬೇದ್ ಸರಣಿ ಟ್ವೀಟ್ ಮಾಡುತ್ತಿದ್ದಾಳೆ. ಅಲಬೇದ್ ಮತ್ತು ಅವಳ ತಾಯಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೆಪ್ಟೆಂಬರ್ 2016 ರಿಂದ 3,66,000 ಜನ ಹಿಂಬಾಲಿಸುತ್ತಿದ್ದಾರೆ.

  • ಪತ್ನಿಯ ಮೇಲೆ ಅನುಮಾನಗೊಂಡ ಪತಿ ಮಧ್ಯರಾತ್ರಿ ಏನ್ ಮಾಡ್ದ ಗೊತ್ತಾ?

    ಕಾಬೂಲ್: ಪ್ರತೀ ಬಾರಿಯೂ ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ಅನುಮಾನದಿಂದಲೇ ವರ್ತಿಸುತ್ತಿದ್ದ ಪತಿ ಈ ಬಾರಿಯೂ ಅನುಮಾನಗೊಂಡು ಮಧ್ಯರಾತ್ರಿಯೇ ಆಕೆಯ ಎರಡೂ ಕಿವಿಗಳನ್ನು ಕತ್ತರಿಸಿದ ಅಮಾನವೀಯ ಘಟನೆಯೊಂದು ಅಫ್ಘಾನಿಸ್ತಾನದಲ್ಲಿ ನಡೆದಿದೆ.

    ಉತ್ತರ ಪ್ರಾಂತ್ಯದ ಬಾಲ್ಕ್ ನಿವಾಸಿ ಝರೀನಾ ಇದೀಗ ಎರಡೂ ಕಿವಿಗಳನ್ನು ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತನ್ನ ಪತಿಯ ಕೃತ್ಯದ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಝರೀನಾ, `ನನ್ನ ಪತಿ ಅನುಮಾನ ಪಿಶಾಚಿಯಾಗಿದ್ದಾನೆ. ಪ್ರತೀ ಬಾರಿಯೂ ನಾನು ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ನನ್ನನ್ನು ಅನುಮಾನದಿಂದಲೇ ನೋಡುತ್ತಿದ್ದ. ಈ ಬಾರಿಯೂ ನಾನು ಹೆತ್ತವರ ಮನೆಗೆ ಹೋಗಿ ಬಂದಿದ್ದೆ. ಅಂತೆಯೇ ಬಂದ ಬಳಿಕ ಮಧ್ಯರಾತ್ರಿ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಕಾರಣವಿಲ್ಲದೇ ಎರಡೂ ಕಿವಿಗಳನ್ನು ಕತ್ತರಿಸಿದ್ದಾನೆ ಅಂತಾ ತನ್ನ ಅಳಲು ತೋಡಿಕೊಂಡಿದ್ದಾರೆ.

    ಝರೀನಾಗೆ 13ನೇ ವಯಸ್ಸನಲ್ಲೇ ಮದುವೆಯಾಗಿತ್ತು. ಸದ್ಯ ಝರೀನಾ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದ್ದು, ಪತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಅಂತಾ ಪೊಲಿಸರ ಜೊತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಆರೋಪಿ ತಲೆಮರೆಸಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

  • ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಕೊಹ್ಲಿ ಮರು ಪ್ರಶ್ನೆ ಎಸೆದಿದ್ದು ಹೀಗೆ: ವಿಡಿಯೋ ನೋಡಿ

    ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಕೊಹ್ಲಿ ಮರು ಪ್ರಶ್ನೆ ಎಸೆದಿದ್ದು ಹೀಗೆ: ವಿಡಿಯೋ ನೋಡಿ

    ಬೆಂಗಳೂರು: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗುತ್ತಿದ್ದು ಈ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೊಹ್ಲಿ ಈ ರೀತಿ ಉತ್ತರ ನೀಡಿದ್ದಾರೆ.

    `ನಾನು ಹೆಚ್ಚು ರನ್ ಗಳಿಸಿದ ಸಂದರ್ಭದಲ್ಲಿ ಹೋ.. ಕ್ರಿಕೆಟ್ ಜಗತ್ತಿನಲ್ಲೇ ಕೊಹ್ಲಿ ಕ್ರಾಂತಿ ಮೂಡಿಸಿದ್ದಾರೆ ಅಂತ ಹೇಳ್ತಿರ ಹೊರತು ಬೇರೆ ಏನೂ ಕೇಳಲ್ಲ. ಆದ್ರೆ ಆದರೆ ಈಗ ನಾನು ರನ್ ಗಳಿಸಿದೇ ಇರುವುದು ನಿಮಗೆ ಸಮಸ್ಯೆಯಾಗಿ ಕಾಣುತ್ತಿದೆಯೇ ಎಂದು ಮರು ಪ್ರಶ್ನೆಯನ್ನು ಎಸೆದರು. ನನ್ನಂತೆಯೇ ಉಳಿದವರ ಆಟದತ್ತನೂ ಗಮನ ಕೊಡಿ. ಒಂದು ಟೀಂ ನಲ್ಲಿ 10 ಮಂದಿ ಆಟಗಾರರಿದ್ದಾರೆ. ನಾನೇ ಎಲ್ಲವನ್ನೂ ಮಾಡಿ ಮುಗಿಸಿದರೆ ಇನ್ನುಳಿದವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿದ ಕೊಹ್ಲಿ ಮೂರು ಪಂದ್ಯದಲ್ಲಿ ಒಟ್ಟು 52 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸರಣಿಯಲ್ಲಿ ನನ್ನ ಆಟದ ಬಗ್ಗೆ ಸಂತೋಷವಿದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ 70 ರನ್ ಗಳಿಸಿದ್ದರೆ ನೀವು ಈ ಪ್ರಶ್ನೆಯನ್ನು ಕೇಳುತ್ತಿದ್ರಾ ಅಂತಾ ಪ್ರಶ್ನಿಸಿದ ಅವರು, ಸರಣಿ ಆಟಗಳ ಬಗ್ಗೆ ಖುಷಿ ಪಡಿ. ಅದೇ ನಮಗೆ ಗೆಲುವು ತಂದುಕೊಡುತ್ತೆ ಅಂತಾ ಕೊಹ್ಲಿ ಹೇಳಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ರನ್ ಗೆ ಔಟಾಗಿದ್ದರು. ಈ ಪಂದ್ಯದಲ್ಲಿ ಸುರೇಶ್ ರೈನಾ, ಎಂಎಸ್ ಧೋನಿ, ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ 202 ರನ್ ಗಳಿಸಿತ್ತು. ಜತೆಗೆ ಇಂಗ್ಲೆಂಡ್ ತಂಡವನ್ನು 127 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 75 ರನ್ ಗಳಿಂದ ಜಯಗಳಿಸಿತ್ತು.

  • ಕಾಲೇಜು ಆವರಣದಲ್ಲೇ ಲವರ್‍ಗೆ ಬೆಂಕಿ ಹಚ್ಚಿ ಬಳಿಕ ತನ್ನ ಮೇಲೂ ಹಚ್ಕೊಂಡ!

    ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜು ಆವರಣದಲ್ಲೇ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿ ಬಳಿಕ ತನ್ನ ಮೇಲೂ ಬೆಂಕಿ ಹಚ್ಚಿಕೊಂಡು ಇಬ್ಬರೂ ಮೃತಪಟ್ಟ ಶಾಕಿಂಗ್ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

    ಮೃತರನ್ನು 20 ವರ್ಷದ ಲಕ್ಷ್ಮೀ ಹಾಗೂ 26 ವರ್ಷದ ಆದರ್ಶ್ ಎಂಬುವುದಾಗಿ ಗುರುತಿಸಲಾಗಿದೆ.

    ನಡೆದಿದ್ದೇನು?: ಆದರ್ಶ್ ಕೊಲ್ಲಂ ಜಿಲ್ಲೆಯಲ್ಲಿರುವ ಸ್ಕೂಲ್ ಆಫ್ ಮೆಡಿಕಲ್ ಎಜುಕೇಶ್ ಕಾಲೇಜಿನ 2009ನೇ ಬ್ಯಾಚ್‍ನ ವಿದ್ಯಾರ್ಥಿಯಾಗಿದ್ದಾನೆ. ಲಕ್ಷ್ಮೀ 2013ನೇ ಬ್ಯಾಚ್‍ನ ವಿದ್ಯಾರ್ಥಿನಿಯಾಗಿದ್ದಾಳೆ. ಇವರಿಬ್ಬರೂ ಮರು ಪರೀಕ್ಷೆ ಬರೆಯಲೆಂದು ಬುಧವಾರ ಕಾಲೇಜಿಗೆ ಆಗಮಿಸಿದ್ದರು. ಮಧ್ಯಾಹ್ನದ ಫ್ರೀ ಟೈಮ್‍ನಲ್ಲಿ ಮಾತಾಡಲಿದೆ ಅಂತಾ ಆದರ್ಶ್ ಲಕ್ಷ್ಮೀಯನ್ನು ಕರೆದಿದ್ದಾನೆ. ಆದ್ರೆ ಇದನ್ನು ಲಕ್ಷ್ಮೀ ನಿರಾಕರಿಸಿದ್ದು, ತನ್ನ ಗೆಳತಿಯರೊಂದಿಗೆ ತರಗತಿಯಲ್ಲಿ ಕುಳಿತು ಮಾತನಾಡಿಕೊಂಡಿದ್ದಳು.

    ಇದರಿಂದ ಕೋಪಗೊಂಡ ಆದರ್ಶ್ ಕಾಲೇಜಿನ ಹೊರಗಡೆ ಹೋಗಿ ಬಂದವನೇ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಸಮೇತ ಒಳಗಡೆ ಬಂದು ಏಕಾಏಕಿ ಲಕ್ಷ್ಮೀ ಮೈ ಮೇಲೆ ಸುರಿಯಲು ಯತ್ನಿಸಿ, ಕೂಡಲೇ ಬೆಂಕಿ ಹಚ್ಚಲು ತನ್ನ ಕಿಸೆಯಲ್ಲಿದ್ದ ಲೈಟರ್‍ನ್ನು ತೆಗೆದಿದ್ದಾನೆ. ಈ ವೇಳೆ ಲಕ್ಷ್ಮೀ ಅಲ್ಲಿಂದ ಓಡಿಹೋಗಿದ್ದಾಳೆ. ಅಂತೆಯೇ ಆಕೆಯನ್ನು ಬೆನ್ನಟ್ಟಿದ ಆದರ್ಶ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ತಕ್ಷಣವೇ ಅಲ್ಲಿದ್ದ ವಿದ್ಯಾರ್ಥಿಗಳು ಅವರಿಬ್ಬರನ್ನೂ ರಕ್ಷಿಸಲು ಮುಂದಾದ್ರೂ ಬೆಂಕಿಯನ್ನು ಬೇಗನೇ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿತ್ತು. ಬಳಿಕ ಇಬ್ಬರನ್ನೂ ಕೊಟ್ಟಾಯಂನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

    ಘಟನೆಗೆ ಕಾರಣವೇನು?: ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇವರಿಬ್ಬರೂ ಪ್ರೇಮಿಗಳಾಗಿದ್ದರು. ಲಕ್ಷ್ಮೀ 2013ರಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದರೆ, ಆದರ್ಶ್ ಇದೇ ವಿಷಯದಲ್ಲಿ ಅಧ್ಯಯನ ಮಾಡಿದ್ದ. ಇತ್ತೀಚೆಗಷ್ಟೇ ಲಕ್ಷ್ಮೀ ಈ ಸಂಬಂಧದಿಂದ ದೂರವಿದ್ದರು. ಇದೇ ಈ ಘಟನೆಗೆ ಕಾರಣ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.