Tag: publictv

  • ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಚೆನ್ನೈ: ತಮಿಳುನಾಡಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದೇಶಾದ್ಯಂತ ಸುದ್ದಿ ಮಾಡ್ತಿದೆ. ಈ ನಡುವೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಹೊಸ ಚಿತ್ರ ಮಾಡಲು ಹೊರಟಿದ್ದಾರೆ.

    ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾ ಹಾಗೂ ಶಶಿಕಲಾ ಸಂಬಂಧವನ್ನಿಟ್ಟುಕೊಂಡು ರಾಮಗೋಪಾಲ್ ವರ್ಮಾ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಚಿತ್ರಕ್ಕೆ `ಶಶಿಕಲಾ’ ಅಂತಾ ಟೈಟಲ್ ಇಡಲು ತೀರ್ಮಾನಿಸಲಾಗಿದ್ದು, ಚಿತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆಯಂತೆ. ದಿವಂಗತ ಜಯಲಲಿತಾರ ಬಗ್ಗೆ ನನಗೆ ಅಪಾರ ಗೌರವವಿದೆ. ಅದಕ್ಕಿಂತಲೂ ಹೆಚ್ಚಾಗಿ ಶಶಿಕಲಾರ ಪ್ರಾಮಾಣಿಕತೆ ಬಗ್ಗೆ ನನಗೆ ಹೆಚ್ಚು ಗೌರವ ಇದೆ. ಹಾಗಾಗಿ ನಾನು ಚಿತ್ರಕ್ಕೆ ಶಶಿಕಲಾ ಅಂತಾ ಹೆಸರಿಟ್ಟಿದ್ದೇನೆ ಅಂತಾ ರಾಮ್‍ಗೋಪಾಲ್ ವರ್ಮಾ ಹೇಳಿದ್ದಾರೆ.

    ಈ ಚಿತ್ರಕ್ಕೆ ರಾಜಕೀಯದ ಟಚ್ ಇಲ್ಲ. ಶಶಿಕಲಾ ತಮಿಳಿಗರ ಪಾಲಿಗೆ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಹಾಗಾಗಿ ಚಿತ್ರ ರಾಜಕೀಯೇತರವಾಗಿದ್ದು ಕಾಲ್ಪನಿಕ ಕಥೆ ಒಳಗೊಂಡಿದೆ ಅಂತಾ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಕೂಡ ವರ್ಮಾ ರಕ್ತಚರಿತ, ಕಿಲ್ಲಿಂಗ್ ವೀರಪ್ಪನ್, 26/11ರ ಮುಂಬೈ ದಾಳಿ ಕುರಿತ ಚಿತ್ರ್ರಗಳನ್ನು ಮಾಡಿದ್ದರು.

  • ದಿನಭವಿಷ್ಯ: 17-02-2017

    ದಿನಭವಿಷ್ಯ: 17-02-2017

    ಮೇಷ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸ್ತ್ರೀಯರಿಂದ ಅವಮಾನ, ಸಲ್ಲದ ಅಪವಾದ ನಿಂದನೆ, ಗೌರವಕ್ಕೆ ಧಕ್ಕೆ, ಮಕ್ಕಳು ದುಶ್ಚಟಕ್ಕೆ ಬಲಿಯಾಗುವರು, ಹಠ-ಮೊಂಡುತನ.

    ವೃಷಭ: ಸ್ಥಿರಾಸ್ತಿ ವಿಚಾರದಲ್ಲಿ ಮನಃಸ್ತಾಪ, ಶತ್ರುತ್ವ ಹೆಚ್ಚಾಗುವುದು, ಮಕ್ಕಳ ಭವಿಷ್ಯದ ಚಿಂತೆ, ಸ್ವಯಂಕೃತ್ಯಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ.

    ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ದುಶ್ಚಟಗಳಲ್ಲಿ ತೊಡಗುವಿರಿ.

    ಕಟಕ: ಶತ್ರುಗಳನ್ನು ನಿಂದಿಸುವಿರಿ, ಧಾರ್ಮಿಕ ಚಿಂತಕರಲ್ಲಿ ಮನಃಸ್ತಾಪ, ಹಣಕಾಸು ಮೋಸ, ಕೆಲಸಗಳಲ್ಲಿ ಆತುರ, ಮೊಂಡು ಧೈರ್ಯ ಪ್ರದರ್ಶನ ಮಾಡುವಿರಿ.

    ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಸಂಶಯ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಹಣಕಾಸು ಸಮಸ್ಯೆ.

    ಕನ್ಯಾ; ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಹಣಕಾಸು ನಷ್ಟ, ಭವಿಷ್ಯದ ಬಗ್ಗೆ ಚಿಂತೆ, ನಿದ್ದೆಯಲ್ಲಿ ಕೆಟ್ಟ ಕನಸು, ನಿದ್ರಾಭಂಗ, ಅನಗತ್ಯ ಮಾತಿನಿಂದ ಕಲಹ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

    ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆ, ಮಹಿಳಾ ಮಿತ್ರರಿಂದ ಅದೃಷ್ಟ ವಂಚನೆ, ಆತ್ಮ ಸಂಕಟಗಳು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವಿಪರೀತ ಹಣಕಾಸು ಸಮಸ್ಯೆ.

    ವೃಶ್ಚಿಕ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಸಾಲ ತೀರಿಸುವ ಮನಸ್ಸು, ಬಡ್ಡಿ ಕಟ್ಟುವ ಸಾಧ್ಯತೆ.

    ಧನಸ್ಸು: ಶತ್ರುಕಾಟದಿಂದ ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಆಕಸ್ಮಿಕ ಅದೃಷ್ಟ, ಗೌರವ ಸನ್ಮಾನ ಪ್ರಾಪ್ತಿ.

    ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ಅಲೆದಾಟ, ಆತ್ಮೀಯರೊಂದಿಗೆ ಕಲಹ, ಮೇಲಾಧಿಕಾರಿಗಳಿಂದ ಕಿರಿಕಿರಿ, ಉದ್ಯೋಗ ಬಡ್ತಿಗೆ ತೊಂದರೆ.

    ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ವಾಹನ ಅಪಘಾತ ಸಾಧ್ಯತೆ, ಪ್ರಯಾಣ ರದ್ದಾಗುವುದು, ಸ್ಥಿರಾಸ್ತಿ ನಷ್ಟ ಸಾಧ್ಯತೆ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.

    ಮೀನ: ಆಕಸ್ಮಿಕ ದುರ್ಘಟನೆ, ಮಕ್ಕಳ ಜೀವನದ ಮೇಲೆ ದುಷ್ಪರಿಣಾಮ, ದೇವತಾ ಕಾರ್ಯಗಳಲ್ಲಿ ಅಸಮಾಧಾನ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಸ್ನೇಹಿತರಿಂದ ಎಚ್ಚರಿಕೆ, ಹಿರಿಯ ವ್ಯಕ್ತಿಯೊಂದಿಗೆ ಸಂಧಾನ.

  • ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

    ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

    ಮಾಸ್ಕೋ: ದುಬೈನಲ್ಲಿರುವ ವಿಶ್ವದ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ರೂಪದರ್ಶಿಯೊಬ್ಬಳು ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    23 ವರ್ಷದ ವಿಕಿ ಒಡಿಂಕ್ಟೊವಾ ಎಂಬ ರಷ್ಯಾ ರೂಪದರ್ಶಿ ದುಬೈನಲ್ಲಿರುವ ಸುಮಾರು 1,004 ಅಡಿ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಈ ಫೋಟೋ ಶೂಟ್ ಮಾಡಿಕೊಂಡಿದ್ದಾಳೆ. ಮಾತ್ರವಲ್ಲದೇ ಬಳಿಕ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್  ವೀಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಆದ್ರೆ ಇದೀಗ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ, `ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರತೀ ಬಾರಿ ಈ ವಿಡಿಯೋ ನೋಡುವಾಗ್ಲೂ ನನ್ನ ಮೈ ಬೆವರುತ್ತದೆ ಅಂತಾ ಹೇಳಿಕೊಂಡಿದ್ದಾಳೆ.

    ಈಕೆಯ ಫಾಲೋವರ್ಸ್‍ಗಳಲ್ಲಿ ಹಲವು ಮಂದಿ `ಈಕೆ ಯಾವುದೇ ಸುರಕ್ಷತಾ ವಿಧಾನಗಳನ್ನು ಬಳಸದೆ ಫೋಟೋ, ವಿಡಿಯೋ ಮಾಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, `ಒಂದು ವೇಳೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಆಕೆ ಬದುಕಲು ಸಾಧ್ಯವೇ ಇಲ್ಲ’ ಅಂತಾ ಮಾತನಾಡಿಕೊಂಡಿದ್ದಾರೆ.

    ಮಾಡೆಲ್ ಫೋಟೋಗೆ ಕಮೆಂಟ್ ಹಾಕಿದ್ದರಲ್ಲಿ ಒಂದು ಕಮೆಂಟ್ ಹೀಗಿತ್ತು. `ನಿನ್ನ ಜೀವನವನ್ನು ಯಾಕೆ ಈ ರೀತಿ ನಿರ್ಲಕ್ಷ್ಯಿಸುತ್ತಿದ್ದಿ? ಒಂದು ವೇಳೆ ನಾನು ನಿನ್ನ ಪೋಷಕನಾಗಿದ್ದರೆ ನಿನ್ನನ್ನು ಹಾಗೂ ಪೋಟೋ ತೆಗೆದ ಗಡ್ಡಧಾರಿ ವ್ಯಕ್ತಿಯನ್ನು ಶಿಕ್ಷಿಸುತ್ತಿದ್ದೆ’ ಅಂತಾ ಬರೆಯಲಾಗಿತ್ತು.

    ಈಕೆಗೆ ಇನ್ ಸ್ಟಾಗ್ರಾಮ್  ನಲ್ಲಿ 30 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಹೀಗಾಗಿ ಈಕೆ ಪೋಸ್ಟ್ ಮಾಡಿದ ಕೂಡಲೇ ಫೋಟೋ, ವಿಡಿಯೋ ವೈರಲಾಗಿ ಹರಡಿದೆ.

    https://www.youtube.com/watch?v=R0wHh19dEIQ

     

  • ಮಾವುತರಿಂದಲೇ ಮರಿ ಆನೆಗೆ ಥಳಿತ- ಮನಕಲಕುವ ವೀಡಿಯೋ ನೋಡಿ

    ಮಾವುತರಿಂದಲೇ ಮರಿ ಆನೆಗೆ ಥಳಿತ- ಮನಕಲಕುವ ವೀಡಿಯೋ ನೋಡಿ

    ಬೆಂಗಳೂರು: ಇತ್ತೀಚೆಗೆ ಊರಿನ ಜನರ ಕೈಯಿಂದ ಏಟು ತಿಂದ ಸಿದ್ದ ಕೊನೆಗೆ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಿದಾಗ ಎಲ್ರೂ ಆತನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದರು. ಇದೀಗ ಇಂಥದ್ದೇ ಘಟನೆ ಮತ್ತೆ ಮರುಕಳಿಸಿದ್ದು, ಮರಿಯಾನೆಗೆ ಮಾವುತರೇ ಕೋಲು ಹಿಡಿದು ಸರಿಯಾಗಿ ಥಳಿಸಿದ ವಿಡಿಯೋ ವೈರಲ್ ಆಗ್ತಿದೆ.

    ದುಬಾರೆ ಎಲಿಫೆಂಟ್ ಕ್ಯಾಂಪ್ ನಲ್ಲಿ ನೀರಿಗಿಳಿಯದ ಮರಿಯಾನೆಗೆ ಮಾವುತರು ರಾಕ್ಷಸರಂತೆ ಹೊಡೆಯುತ್ತಾರೆ. ಪುಟ್ಟ ಆನೆ ಏಟಿನ ಹೊಡೆತ ತಾಳಲಾರದೇ ನೀರಿಗೆ ಬಿದ್ದು ಒದ್ದಾಡಿದ್ರು ಈ ರಾಕ್ಷಸರು ಬಿಡದೇ ಏಟು ನೀಡುತ್ತಾರೆ. ಪಕ್ಕದಲ್ಲಿ ನಿಂತಿದ್ದ ತಾಯಾನೆ ಇದೆಲ್ಲವನ್ನು ಮರುಗುತ್ತ ನೋಡೋ ದೃಶ್ಯ ಎಂಥವರ ಕಣ್ಣಲ್ಲಿ ನೀರು ತರಿಸುತ್ತೆ. ಇದೀಗ ಈ ಮಾವುತರ ವಿರುದ್ಧ ಅರುಣ್ ಪ್ರಸಾದ್ ಅನ್ನೋರು ಬೆಂಗಳೂರು ಪೊಲೀಸ್ ಕಮೀಷನರ್‍ಗೆ ಹಾಗೂ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

    https://www.youtube.com/watch?v=LRwenPuGuh0&feature=youtu.be

  • ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಇಂದಿಗೆ 100 ದಿನ. ಹೊಸ 2000 ಸಾವಿರ ನೋಟ್ ಕೈಗೆ ಬಂದು ಮೂರು ತಿಂಗಳೇ ಕಳೆದಿವೆ. ಈ ಮಧ್ಯೆ ಮೈಸೂರಿನಲ್ಲಿ 2000 ನೋಟು ಪುಡಿ ಪುಡಿಯಾಗಿದ್ದ ಸುದ್ದಿ ನೋಡಿದ್ರಿ. ಅದೇ ರೀತಿಯ ಘಟನೆ ಬೆಂಗಳೂರಿನ ಪೀಣ್ಯದಲ್ಲೂ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪೀಣ್ಯ ದಾಸರಹಳ್ಳಿಯ ನಿರಂಜನ್ ಹೆಗಡೆಯವರಿಗೆ ಸಿಕ್ಕಿರುವ 2000 ಸಾವಿರ ರೂ. ಹೊಸ ನೋಟ್ ಕೂಡ ಪುಡಿ ಪುಡಿಯಾಗಿ ಉದುರುತ್ತಿದೆ.

    ಕಳೆದ ಮೂರು ದಿನಗಳ ಹಿಂದೆ ನಿರಂಜನ್ ಹೆಗಡೆಯವರ ಹಾರ್ಡ್‍ವೇರ್ ಶಾಪ್‍ಗೆ ಬಂದ ಗ್ರಾಹಕರೊಬ್ಬರು ಈ ನೋಟನ್ನ ಕೊಟ್ಟಿದ್ದಾರೆ. ಆದ್ರೆ ಇದೀಗ ಈ ನೋಟ್‍ನ್ನು ಬ್ಯಾಂಕ್‍ನವರಿಗೆ ತೋರಿಸಿದ್ರೆ ಇದು ನಕಲಿ ನೋಟ್ ಅಲ್ಲ ಒರಿಜಿನಲ್ ನೋಟು ಅದ್ರೆ ಯಾಕೆ ಹೀಗೆ ಆಗ್ತಿದೆ ಅಂತಾ ಗೊತ್ತಿಲ್ಲ ಅಂತಾರೆ ಎಂಬುವುದಾಗಿ ತಿಳಿದುಬಂದಿದೆ.

    https://www.youtube.com/watch?v=VqP0ijlkl6Q&feature=youtu.be

  • ತುಮಕೂರಿನಲ್ಲಿ ವ್ಯಕ್ತಿ ಮೇಲೆ 2 ಕರಡಿಗಳು ದಾಳಿ: ಗಂಭೀರ ಗಾಯ

    ತುಮಕೂರಿನಲ್ಲಿ ವ್ಯಕ್ತಿ ಮೇಲೆ 2 ಕರಡಿಗಳು ದಾಳಿ: ಗಂಭೀರ ಗಾಯ

    ತುಮಕೂರು: ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ಮೇಲೆ ಏಕಾಏಕಿ 2 ಕರಡಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಜಿಲ್ಲೆ ಪಾವಗಡ ತಾಲೂಕಿನ ದೇವಲಕೆರೆ ಬಳಿ ನಡೆದಿದೆ.

    ರಾಜ್ ಕುಮಾರ್ ಕರಡಿಗಳ ದಾಳಿಗೊಳಗಾದ ವ್ಯಕ್ತಿ. ಕರಡಿಗಳ ದಾಳಿಯಿಂದ ರಾಜ್ ಕುಮಾರ್ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಇವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

  • ಚಿನ್ನಮ್ಮ ಜೈಲಿಗೆ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಮಾ ಮತ್ತಷ್ಟು ಚುರುಕು

    ಚಿನ್ನಮ್ಮ ಜೈಲಿಗೆ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಮಾ ಮತ್ತಷ್ಟು ಚುರುಕು

    ಚೆನ್ನೈ: ಅಂತೂ ಇಂತು ಅಕ್ರಮ ಹಣ ಸಂಪಾದನೆ ಕೇಸ್‍ನಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಆಕೆಯ ಸಂಬಂಧಿಗಳಾದ ಇಳವರಸಿ ಮತ್ತು ಸುಧಾಕರನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಯ್ತು. ಆದ್ರೆ ತಮಿಳುನಾಡಿನಲ್ಲಿ ಇಷ್ಟು ದಿನ ನಡೆದ ರಾಜಕೀಯ ಹೈಡ್ರಾಮ ಮತ್ತಷ್ಟು ಚುರುಕಾಗುವ ಲಕ್ಷಣ ಕಂಡುಬರುತ್ತಿದೆ.

    ಶಶಿಕಲಾ ಬೆಂಗಳೂರಿನ ಜೈಲು ಹಕ್ಕಿ ಆಗ್ತಿದ್ದ ಹಾಗೆ ಅತ್ತ ಚೆನ್ನೈನಲ್ಲಿ ರಾಜಕೀಯ ಗರಿಗೆದರಿದೆ. ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿದ ಪಳನಿಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ರು. ಆದ್ರೆ ಹೊಸದಾಗಿ ಶಾಸಕರ ಪಟ್ಟಿ ಕೊಡುವಂತೆ ಗವರ್ನರ್ ತಾಕೀತು ಮಾಡಿದ್ರು.

    ಒಂದು ಕಡೆ ಇಷ್ಟೆಲ್ಲಾ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ರೆ, ಅತ್ತ ಪನ್ನೀರ್ ಸೆಲ್ವಂ ಕೂಡ ತಮ್ಮದೇ ಲೆಕ್ಕಾಚಾರದಲ್ಲಿ ದಾಳ ಉರುಳಿಸುತ್ತಿದ್ದಾರೆ. ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಅವಕಾಶ ಕೊಡುವಂತೆ ಕೋರಿದ್ದಾರೆ. ಜಯಾ ಸೋದರ ಸಂಬಂಧಿ ದೀಪಾ ಬೆಂಬಲ ಪಡೆದಿರುವ ಸೆಲ್ವಂ ಜೊತೆ 22 ಶಾಸಕರಿದ್ದಾರೆ ಎನ್ನಲಾಗಿದೆ.

    ಶಶಿಕಲಾ ಎಂಎಲ್‍ಎಗಳನ್ನು ಒತ್ತಡದಿಂದ ಕೂಡಿ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗೋಲ್ಡನ್ ಬೇ ರೆಸಾರ್ಟ್‍ನಿಂದ ಎಲ್ಲರನ್ನು ಖಾಲಿ ಮಾಡಿಸಿದ್ದು, ಕೆಲವರನ್ನು ವಿಚಾರಣೆ ಕೂಡ ಮಾಡ್ತಿದ್ದಾರೆ. ಅದ್ರಲ್ಲಿ ಯಾರಾದರೂ ಒಂದಿಬ್ಬರು ಹೌದು ಕೂಡಿ ಹಾಕಿದ್ರು ಅಂತಾ ಹೇಳಿದ್ರೆ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವ ಪಳನಿಸ್ವಾಮಿ ವಿರುದ್ಧವೇ ಕಿಡ್ನಾಪ್ ಕೇಸ್ ಬೀಳುವ ಸಾಧ್ಯತೆಯೂ ಇದೆ.

    ಒಟ್ನಲ್ಲಿ ತಮಿಳುನಾಡು ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಈಗ ಇದ್ದ ಸ್ಥಿತಿ ಮಧ್ಯಾಹ್ನಕ್ಕೆ ಇಲ್ಲದಂತೆ ಆಗುತ್ತಿದೆ. ಪನ್ನೀರ್ ಸೆಲ್ವಂಗೆ ಕುರ್ಚಿ ಸಿಗುತ್ತೋ ಇಲ್ಲಾ ಪಳನಿಸ್ವಾಮಿ ಸಿಎಂ ಆಗ್ತಾರೋ ಅನ್ನೋದ್ರ ಜೊತೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಾ ಅನ್ನೋದು ಕೂಡ ಅಷ್ಟೇ ಮುಖ್ಯವಾಗಿದೆ.

     

  • ಸಿಎಂ ತವರು ಜಿಲ್ಲೆಯ ಈ ಗ್ರಾಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ರೂ ಜನರಿಗೆ ನೆಮ್ಮದಿಯಿಲ್ಲ

    ಸಿಎಂ ತವರು ಜಿಲ್ಲೆಯ ಈ ಗ್ರಾಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ರೂ ಜನರಿಗೆ ನೆಮ್ಮದಿಯಿಲ್ಲ

    ಮೈಸೂರು: ಆ ಹಳ್ಳಿ ಹೇಳಿ ಕೇಳಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸೋ ಗ್ರಾಮ. ಗ್ರಾಮದಲ್ಲಿ ಒಳ್ಳೆ ರಸ್ತೆ ಉಂಟು, ಚರಂಡಿ, ಕುಡಿಯಲು ನೀರು, ಅಂಗನವಾಡಿ, ಶಾಲೆ ಎಲ್ಲಾ ಉಂಟು. ಆದರೂ ಆ ಊರಿನ ಜನರಿಗೆ ಕಳೆದ ಎಂಟತ್ತು ವರ್ಷದಿಂದ ನೆಮ್ಮದಿ ಇಲ್ಲ.

    ಸಿಎಂ ಸಿದ್ದರಾಮಯ್ಯನವರ ತವರು ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಳ್ಳಿ ಸೋಮೇಶ್ವರಪುರ. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯವೂ ಇದೆ. ಆದ್ರೆ ಅಕ್ರಮ ಮದ್ಯ ಮಾರಾಟದಿಂದ ಊರಿನ ಜನರ ನೆಮ್ಮದಿಯೇ ಹಾಳಾಗಿ ಹೋಗಿದೆ.

    ಸೋಮೇಶ್ವರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಬಡ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಲಿ ಮಾಡಿ 300 ರೂ. ಗಳಿಸಿದ್ರೆ ಅದ್ರಲ್ಲಿ 200 ರೂ. ಹಣವನ್ನು ಮದ್ಯಕ್ಕಾಗಿ ಬಳಕೆ ಮಾಡ್ತಿದ್ದಾರೆ. ಮಾತ್ರವಲ್ಲದೇ ಮನೆಗೆ ಹೋಗಿ ಹೆಂಡತಿ ಮಕ್ಕಳಿಗೆ ತೊಂದ್ರೆ ಕೊಡ್ತಿದ್ದಾರೆ. ಇದರಿಂದ ಇಲ್ಲಿನ ಜನ ಬಹಳ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತಾ ಗ್ರಾಮಸ್ಥ ಮಹೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ರು.

    ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲೂ ಮದ್ಯ ಮಾರಾಟವಿಲ್ಲ. ಹೀಗಾಗಿ ಮದ್ಯಪಾನಿಗಳು ಇಲ್ಲಿಗೆ ಬಂದು ಮದ್ಯ ಖರೀದಿಸುತ್ತಾರೆ. ಹೀಗೆ ಕೂಲಿ ಕಾರ್ಮಿಕರು ತಾವು ದುಡಿದ ದುಡ್ಡನ್ನೆಲ್ಲಾ ಮದ್ಯಕ್ಕೆ ಸುರಿಯುತ್ತಿದ್ದು, ಹಲವರ ಸಂಸಾರ ಬೀದಿಗೆ ಬೀಳುವಂತಾಗಿದೆ. ಅಲ್ಲದೆ ಯುವಕರೂ ದಾರಿ ತಪ್ಪುತ್ತಿದ್ದಾರೆ. ಮದ್ಯ ಮಾರಾಟದ ವಿರುದ್ಧ ಗ್ರಾಮಸ್ಥರು ಹೋರಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಗ್ರಾಮದ ನಿವಾಸಿ ಗುರು ಮಲ್ಲೇಶ್ ಅಳಲು ತೋಡಿಕೊಂಡ್ರು.

    ಒಟ್ಟಾರೆ ಸಿಎಂ ತವರು ಕ್ಷೇತ್ರದ ಗ್ರಾಮವೊಂದರ ಕಥೆ ಹೀಗಾದ್ರೆ ಉಳಿದ ಪ್ರದೇಶಗಳ ಸ್ಥಿತಿಯೇನು ಅನ್ನೋದೇ ಜನಸಾಮಾನ್ಯರ ಮುಂದಿರುವ ಪ್ರಶ್ನೆಯಾಗಿದೆ. ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಅಂತ ಕಾದು ನೋಡ್ಬೇಕು.

  • ಮಹದಾಯಿ ಹೋರಾಟಗಾರರ ಕೇಸ್ ವಾಪಸ್; ಮೇಕೆದಾಟು ಯೋಜನೆಗೆ ಸಂಪುಟ ಅಸ್ತು

    ಮಹದಾಯಿ ಹೋರಾಟಗಾರರ ಕೇಸ್ ವಾಪಸ್; ಮೇಕೆದಾಟು ಯೋಜನೆಗೆ ಸಂಪುಟ ಅಸ್ತು

    – ಕಪ್ಪತ್ತಗುಡ್ಡ ಹೋರಾಟಕ್ಕೂ ಸಿಕ್ತು ಜಯ

    ಬೆಂಗಳೂರು: ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ಹಾಕಲಾಗಿದ್ದ ಎಲ್ಲಾ ಪ್ರಕರಣಗಳನ್ನ ಕೊನೆಗೂ ರಾಜ್ಯ ಸರ್ಕಾರ ಹಿಂಪಡೆದಿದೆ. 94 ಪ್ರಕರಣಗಳನ್ನ ವಾಪಸ್ ಪಡೆಯಲು ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯಿಸಲಾಯಿತು. ಇದರ ಜೊತೆಗೆ ಮೇಕೆದಾಟು ಯೋಜನೆಗೆ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜಿಸಲಾಗಿದೆ.

    ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದ್ರಲ್ಲಿ ಪ್ರಮುಖವಾದ ಅಂಶಗಳು ಹೀಗಿವೆ.
    * ಮಹದಾಯಿ ಹೋರಾಟದ 94 ಪ್ರಕರಣಗಳು ವಾಪಸ್ ಆಗಿವೆ.
    * ಮೇಕೆದಾಟು ವಿದ್ಯುತ್ ಯೋಜನೆಗೆ ತಾತ್ವಿಕ ಒಪ್ಪಿಗೆ.
    * 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ.
    * 5,912 ಕೋಟಿ ರೂ. ವೆಚ್ಚದಲ್ಲಿ ಮೇಕೆದಾಟು ಯೋಜನೆ.
    * ಮೇಕೆದಾಟು ಬಳಿ 60 ಟಿಎಂಸಿ ನೀರು ಸಂಗ್ರಹದ ಗುರಿ.
    * ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್.
    * ಕೂಡಲಸಂಗಮದಲ್ಲಿ 44.94 ಕೋಟಿ ವೆಚ್ಚದ ಬಸವೇಶ್ವರ ಮ್ಯೂಸಿಯಂ.
    * ಅಕ್ರಮ ಸಕ್ರಮದಲ್ಲಿ ಚದರಡಿ ಮಿತಿ 30*40ಗೆ ಏರಿಕೆ.
    * ಬೆಂಗಳೂರು ಉಪನಗರ ರೈಲ್ವೇ ಯೋಜನೆಗೆ ಒಪ್ಪಿಗೆ.

    ಕಪ್ಪತ್ತಗುಡ್ಡ ಹೋರಾಟಕ್ಕೂ ಸಿಕ್ತು ಜಯ: ಗದಗ ಜಿಲ್ಲೆಯ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ನಡೆಸಿದ ಅಹೋರಾತ್ರಿ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಹೋರಾಟಕ್ಕೆ ನೇತೃತ್ವ ವಹಿಸಿದ್ದ ತೋಂಟದಾರ್ಯ ಸ್ವಾಮಿಜಿಗಳಿಗೆ ಸಚಿವ ಎಚ್.ಕೆ.ಪಾಟೀಲ್ ಈ ಕುರಿತು ಭರವಸೆ ನೀಡಿದ್ದಾರೆ.

    ಫೆಬ್ರವರಿ 20 ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ವನ್ಯಜೀವಿ ಮಂಡಳಿ ಸಭೆ ಕರೆದಿದ್ದು, ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಅಂತಾ ಘೋಷಣೆ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಸಚಿವರು ದೂರವಾಣಿ ಮೂಲಕ ಶ್ರೀಗಳಿಗೆ ಭರವಸೆ ನೀಡಿದ್ದಾರೆ. ಆ ಮೂಲಕ ಕಳೆದ ಮೂರು ದಿನಗಳಿಂದ ಕಪ್ಪತ್ತಗುಡ್ಡ ರಕ್ಷಣೆಗಾಗಿ ನಡೆದ ಬೃಹತ್ ಆಂದೋಲನ ಗುರಿ ಈಡೇರಿಕೆಯಲ್ಲಿ ತಾತ್ಕಾಲಿಕ ಯಶ ಕಂಡಿದೆ.

  • ದೊಡ್ಡಮ್ಮನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗಿದ್ರೆ ಖುಷಿಯಾಗ್ತಿತ್ತು- ಜಯಾ ತಂಗಿ ಮಗಳ ಹೇಳಿಕೆ

    ದೊಡ್ಡಮ್ಮನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗಿದ್ರೆ ಖುಷಿಯಾಗ್ತಿತ್ತು- ಜಯಾ ತಂಗಿ ಮಗಳ ಹೇಳಿಕೆ

    ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗೋಕಿಂತ ದೊಡ್ಡಮ್ಮನನ್ನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಿಕ್ಷೆಯಾಗಿದ್ದಿದ್ರೆ ಖುಷಿಯಾಗ್ತಿತ್ತು. ಹೀಗಂತ ದಿವಂಗತ ಜಯಲಲಿತಾ ಅವರ ತಂಗಿ ಶೈಲಜಾ ಅವರ ಮಗಳು ಅಮೃತಾ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಕೊಲೆ ಅಂತ ಸಾಬೀತಾಗಿ ಶಶಿಕಲಾಗೆ ಶಿಕ್ಷೆಯಾದ ಬಳಿಕವೇ ನಾನು ದೊಡ್ಡಮ್ಮನ ಸಮಾಧಿಗೆ ಹೋಗಿ ಅವರ ಶವ ತೆಗೆದು ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಅಂತಾ ಪ್ರತಿಜ್ಞೆ ಮಾಡಿದ್ದಾರೆ.

    ಇಷ್ಟು ದಿನ ದೊಡ್ಡಮ್ಮನ ಮುಂದೆ ಮುಖವಾಡ ಹಾಕಿಕೊಂಡಿದ್ದವರ ನಿಜ ಮುಖ ಈಗ ಗೊತ್ತಾಗ್ತಿದೆ. ಅಜಿತ್ ಬಗ್ಗೆ ದೊಡ್ಡಮ್ಮನಿಗೆ ಅಭಿಮಾನವಿತ್ತು ಅಷ್ಟೆ. ಅವರನ್ನ ಸಿಎಂ ಮಾಡೋ ಆಸೆ ಇರಲಿಲ್ಲ ಅಂದಿದ್ದಾರೆ. ಶಶಿಕಲಾಗಿಂತಲೂ ದೀಪಾ ತುಂಬಾ ಡೇಂಜರ್. ಶಶಿಕಲಾ ನೇರವಾಗಿ ಚೂರಿ ಹಾಕಿದ್ರೆ, ದೀಪಾ ಬೆನ್ನಿಗೆ ಚೂರಿ ಹಾಕ್ತಾಳೆ ಅಂತ ಅಮೃತಾ ಹೇಳಿದ್ರು.