Tag: publictv

  • ಮಾರ್ಚ್ ನಂತ್ರ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ಕರೆ ಸಿಗಲ್ಲ!

    ಮಾರ್ಚ್ ನಂತ್ರ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ಕರೆ ಸಿಗಲ್ಲ!

    ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಿನಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಕ್ಕರೆ ವಿತರಣೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬಗ್ಗೆ ಆಹಾರ ಸಚಿವ ಯು ಟಿ ಖಾದರ್ ಸುಳಿವು ನೀಡಿದ್ದಾರೆ.

    ಇಂದು ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಕೆ.ಜಿ ಸಕ್ಕರೆಗೆ ಕೇಂದ್ರ ಸರ್ಕಾರ ಹದಿನೆಂಟೂವರೆ ರೂ. ಸಬ್ಸಿಡಿ ನೀಡುತ್ತಿತ್ತು. ಕಳೆದ ಬಜೆಟ್‍ನಲ್ಲಿ ಆ ಸಬ್ಸಿಡಿಯನ್ನ ನಿಲ್ಲಿಸಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೆ ಸಕ್ಕರೆ ವಿತರಣೆ ಮಾಡುವುದು ಹೊರೆಯಾಗುತ್ತಿದೆ ಅಂತಾ ಹೇಳಿದ್ರು.

    ಗ್ರಾಮೀಣಪ್ರದೇಶದಲ್ಲಿ ಎಲ್‍ಪಿಜಿ ಕನೆಕ್ಷನ್ ಇದ್ದವರಿಗೆ ಒಂದು ಲೀಟರ್ ಸೀಮೆಎಣ್ಣೆ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈ ಕುರಿತು ಗ್ರಾಮಪಂಚಾಯತಿಯಲ್ಲಿ ನೊಂದಾವಣಿ ಮಾಡಿಕೊಂಡ್ರೆ ಮಾರ್ಚ್‍ನಿಂದಲೇ ಸೀಮೆಎಣ್ಣೆ ವಿತರಣೆ ಆರಂಭವಾಗಲಿದೆ. ಎಲ್‍ಪಿಜಿ ಕನೆಕ್ಷನ್ ಇಲ್ಲದವರಿಗೆ 3 ಲೀಟರ್ ಸೀಮೆಎಣ್ಣೆ ವಿತರಿಸೋದಾಗಿ ಸಚಿವ ಖಾದರ್ ಹೇಳಿದ್ದಾರೆ.

    ರೇಷನ್ ಕಾರ್ಡ್‍ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳುವುದು ಜೂನ್ ತಿಂಗಳ ಕಾಲ ರಾಜ್ಯ ಸರ್ಕಾರ ಸಮಯ ನೀಡಿದೆ. ನಾಲ್ಕು ಕೋಟಿ ಸದಸ್ಯರಲ್ಲಿ ಮೂರೂವರೆ ಕೋಟಿ ಜನರು ಮಾತ್ರ ರೇಷನ್ ಕಾರ್ಡ್ ನಲ್ಲಿ ಆಧಾರ್ ಲಿಂಕ್ ಮಾಡಿಸಿಕೊಂಡಿದ್ದಾರೆ. ಇನ್ನೂ 55 ಲಕ್ಷ ಜನ ಸದಸ್ಯರು ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲ. ಆಧಾರ್ ಲಿಂಕ್ ಮಾಡಿಸಿಕೊಳ್ಳದವರಿಗೆ ಏಪ್ರಿಲ್ ನಿಂದ ಪಡಿತರ ವಿತರಣೆ ನಿಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಅಂತಾ ಖಾದರ್ ವಿವರಿಸಿದ್ರು.

    ಚಪ್ಪಲಿ ಹೇಳಿಕೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರ ಮಂಗಳೂರು ಭೇಟಿಯನ್ನ ವಿರೋಧಿಸುತ್ತಿದ್ದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಹೇಳಿಕೆ ಕುರಿತಂತೆ ಸಚಿವರು ಈ ವೇಳೆ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆ ಸಂವಿಧಾನ ವಿರೋಧಿಸುತ್ತಿದ್ದವರಿಗೆ ಮಾತ್ರ ಅನ್ವಯಿಸುತ್ತದೆ. ಆದ್ರೆ ಚಪ್ಪಲಿ ಅನ್ನೋ ಭಾಷೆ ಬಳಸಬಾರದಿತ್ತು. ಮುಂದೆ ಈ ರೀತಿಯ ಹೇಳಿಕೆ ನೀಡುವಾಗ ಎಚ್ಚರಂದಿರುತ್ತೇನೆ ಅಂತಾ ಹೇಳಿದ ಅವರು, ಪಾಕಿಸ್ತಾನದ ಪ್ರಧಾನಿಯವರನ್ನು ರಾಷ್ಟ್ರಕ್ಕೆ ಕರೆದು ಟೀ ಕುಡಿಸಿ ಕಳುಹಿಸುತ್ತಾರೆ. ನಮ್ಮ ಪಕ್ಕದ ರಾಜ್ಯದ ಕೇರಳ ಮುಖ್ಯಮಂತ್ರಿ ರಾಜ್ಯಕ್ಕೆ ಆಗಮಿಸೋದ್ರಲ್ಲಿ ತಪ್ಪೇನಿದೆ. ಇದನ್ನ ವಿರೋಧಿಸಿದ್ದು ಸರಿಯಲ್ಲ ಅಂತಾ ಖಾದರ್ ಹೇಳಿದ್ರು.

  • ಸಮಗ್ರ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ: ಅಜ್ಜಿಯನ್ನು ಧರಧರನೇ ಎಳೆದೊಯ್ದ ಪೊಲೀಸ್ರು!

    ಸಮಗ್ರ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ: ಅಜ್ಜಿಯನ್ನು ಧರಧರನೇ ಎಳೆದೊಯ್ದ ಪೊಲೀಸ್ರು!

    ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಸಮಗ್ರ ನೀರಾವರಿ ಯೋಜನೆಗೆ ಒತ್ತಾಯಿಸಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಅಜ್ಜಿಯೊಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದ ಘಟನೆ ನಡೆದಿದೆ.

    ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಎದುರಿನಿಂದ ಮೆರವಣಿಗೆ ಹೋಗಿ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದರು. ಮಾತ್ರವಲ್ಲದೇ ಚಾಲುಕ್ಯ ಸರ್ಕಲ್ ಮಧ್ಯೆಯೇ ಪ್ರತಿಭಟನಾಕಾರರು ಕುಳಿತ ಪರಿಣಾಮ ಸರ್ಕಲ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇದರಿಂದ ಯಾವುದೇ ಅಹಿತರ ಘಟನೆ ನಡೆಯಬಾರದೆಂದು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.


    ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಬಯಲುಸೀಮೆಯ ನೀರಿನ ಸಮಸ್ಯೆಗೆ ಏನು ಪರಿಹಾರ ಕೊಟ್ಟಿದ್ದೀರಿ?. ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಚಿಕ್ಕಾಬಳ್ಳಾಪುರ ರೈತರು ಕೂಡ ಇಂದು ಖುದ್ದಾಗಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಬಂದ್ ಸಹ ನಡೆಸುತ್ತೇವೆ. ಕರ್ನಾಟಕ ಬಂದ್ ಬಗ್ಗೆ ನಾಳೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ವರ್ಷ ಪ್ರತಿಭಟನೆ ನಡೆಸಿದಾಗ ತಜ್ಞರ ಸಮಿತಿ ರಚನೆ ಮಾಡಿ ನೀರಿನ ಪರಿಹಾರ ನೀಡೋದಾಗಿ ಹೇಳಿತ್ತು. ಆದ್ರೇ ಈಗ ಸಿಎಂ ನಿದ್ದೆಗಣ್ಣಲ್ಲಿದ್ದಾರೆ ಅಂತಾ ಇತ್ತ ಚಿಕ್ಕಬಳ್ಳಾಪುರ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಜ್ಜಿಯೊಬ್ಬರನ್ನೂ ಕೂಡ ಯಾವುದೇ ಮುಲಾಜಿಲ್ಲದೇ ಧರಧರನೇ ಎಳೆದೊಯ್ದಿದ್ದಾರೆ.

     

  • ಚಿಕ್ಕಮಗಳೂರಿನ ಈ ಅರಣ್ಯದಲ್ಲಿ ಬೆಂಕಿ -ಲಕ್ಷಾಂತರ ರೂ. ಮೌಲ್ಯದ ಮರ ನಾಶ!

    ಚಿಕ್ಕಮಗಳೂರಿನ ಈ ಅರಣ್ಯದಲ್ಲಿ ಬೆಂಕಿ -ಲಕ್ಷಾಂತರ ರೂ. ಮೌಲ್ಯದ ಮರ ನಾಶ!

    ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಸಮೀಪದಲ್ಲಿರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಾಗುವಾನಿ ಮರ ಸೇರಿದಂತೆ ಇತರೆ ಮರಗಳಿಗೂ ಬೆಂಕಿ ಪಸರಿಸಿ ಲಕ್ಷಾಂತರ ರೂ. ಮೌಲ್ಯದ ಮರ ನಾಶವಾಗಿರುವ ಘಟನೆ ಸಂಭವಿಸಿದೆ.

    ಚಿಕ್ಕಮಗಳೂರು ಜಿಲ್ಲೆಯ ಎನ್‍ಆರ್‍ಪುರ ತಾಲೂಕಿನ ಬಾಳೆಹೊನ್ನೂರಿನ ಮುದುಗುಣಿ ಅರಣ್ಯದಲ್ಲಿ ಬೆಂಕಿ ಕಾಣಿಸಿದೆ. ವಿಷಯ ತಿಳಿಸಿದ್ದರೂ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ತಡವಾಗಿ ಆಗಮಿಸಿದ್ದಕ್ಕೆ ಸ್ಥಳೀಯರು ಇಲಾಖೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ಹೊರಬೀಳುತ್ತಿದ್ದಂತೆಯೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳಿಯರಿಂದ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.

  • ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಇಂದು ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದ ವೇದಿಕೆಯಲ್ಲಿ ಅಸ್ವಸ್ಥರಾಗಿ ಸುಸ್ತಾದಂತೆ ಕಂಡುಬಂದರು.

    ಇಂದು ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಖಂಡಿಸಿ, ಹುನಗುಂದ ತಾಲೂಕು ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಉಮಾಶ್ರೀ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಉಮಾಶ್ರೀ ಅಸ್ವಸ್ಥರಾಗುತ್ತಿದ್ದಂತೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಕಾಂಗ್ರೆಸ್ ಮುಖಂಡರು ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರು.

    ಉಮಾಶ್ರೀ ಅವರಿಗೆ ಯಾವುದೇ ತೊಂದರೆಯಿಲ್ಲ, ವಿಶ್ರಾಂತಿ ಅಗತ್ಯವಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಕುಸುಮಾ ಮಾಗಿ ಹೇಳಿದ್ದಾರೆ.

     

  • ವಿಡಿಯೋ: ಆ ಚಿತ್ರದ ಬದಲು ಬೇರೊಂದು ಚಿತ್ರಕ್ಕೆ ಪ್ರಶಸ್ತಿ- ಆಸ್ಕರ್‍ನಲ್ಲಿ ಎಡವಟ್ಟು

    ವಿಡಿಯೋ: ಆ ಚಿತ್ರದ ಬದಲು ಬೇರೊಂದು ಚಿತ್ರಕ್ಕೆ ಪ್ರಶಸ್ತಿ- ಆಸ್ಕರ್‍ನಲ್ಲಿ ಎಡವಟ್ಟು

    ಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ಸಿನಿಮಾ ರಂಗದಲ್ಲೇ ಬಹುದೊಡ್ಡ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ವೇಳೆ ಅತ್ಯುತ್ತಮ ಚಿತ್ರದ ಹೆಸರು ಘೋಷಣೆ ಮಾಡುವಲ್ಲಿ ಗೊಂದಲವುಂಟಾಗಿದೆ.

    89ನೇ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಚಿತ್ರವೆಂದು `ಮೂನ್‍ಲೈಟ್’ ಬದಲು `ಲಾ ಲಾ ಲಾಂಡ್’ಗೆ ಪ್ರಶಸ್ತಿ ನೀಡಲಾಗಿದೆ. ತದನಂತರ ಮೂನ್‍ಲೈಟ್ ಚಿತ್ರ ಅತ್ಯುತ್ತಮವೆಂದು ಘೋಷಣೆ ಮಾಡಿದ್ದರು. ಈ ವೇಳೆ ಪ್ರಶಸ್ತಿ ಸ್ವೀಕರಿಸಿದ್ದ ಲಾ ಲಾ ಲಾಂಡ್ ಚಿತ್ರದ ನಿರ್ಮಾಪಕ ವೇದಿಕೆಯಲ್ಲೇ ಪ್ರಶಸ್ತಿಯನ್ನು ಹಿಂದಕ್ಕೆ ಕೊಡಬೇಕಾದ ಪ್ರಸಂಗ ಎದುರಾಯಿತು. ಬಳಿಕ ಮೂನ್‍ಲೈಟ್ ತಂಡಕ್ಕೆ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ವಾರೆನ್ ಬೆಟ್ಟಿ ಎಂಬವರು ಪ್ರಶಸ್ತಿ ನೀಡುವ ವೇಳೆ ಈ ಎಡವಟ್ಟು ಮಾಡಿದ್ದಾರೆ. ಇದು ಹಾಲಿವುಡ್ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಕಾರ್ಯಕ್ರಮದಲ್ಲಿ ನಡೆದಿರುವುದು ವಿಷಾದನೀಯ ಸಂಗತಿಯಾಗಿದೆ.

    ಪ್ರಶಸ್ತಿ ನೀಡುವಿಕೆಯಲ್ಲಿ ಗೊಂದಲ ಉಂಟಾಂದಂತೆಯೇ ಕರಣ್ ಜೋಹರ್, ರಿಷಿ ಕಪೂರ್ ಹಾಗೂ ಶಬಾನಾ ಆಜ್ಮಿ ಟ್ವೀಟ್ ಮಾಡಿದ್ದು, ಸಿನಿಮಾ ರಂಗದ ಬಹುದೊಡ್ಡ ಕಾರ್ಯಕ್ರಮದಲ್ಲೇ ಇಂತಹ ಎಡವಟ್ಟಾಗಿರುವುದು ನಾಚಿಗೇಡಿನ ಸಂಗತಿ ಅಂತಾ ಕಿಡಿಕಾರಿದ್ದಾರೆ.

    https://twitter.com/karanjohar/status/836087243689312256?ref_src=twsrc%5Etfw

  • ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಮಹೇರ್ಶಲಾ ಆಲಿ

    ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಮಹೇರ್ಶಲಾ ಆಲಿ

    ಲಾಸ್ ಏಂಜಲೀಸ್: ಸಿನಿಮಾ ರಂಗದ ಬಹುದೊಡ್ಡ ಪ್ರಶಸ್ತಿ ಅಂದ್ರೆ ಆಸ್ಕರ್ ಅವಾರ್ಡ್. ಈ ಅವಾರ್ಡ್‍ನ 89ನೇ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಮುಸ್ಲಿಂ ನಟರೊಬ್ಬರಿಗೆ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

    ಮಹೇರ್ಶಲಾ ಆಲಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂನ್ ಲೈಟ್ ಚಿತ್ರದಲ್ಲಿನ ನಟನೆಗಾಗಿ ಆಲಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಎಂಬ ಹೆಗ್ಗಳಿಕೆಗೆ ಅಲಿ ಪಾತ್ರರಾಗಿದ್ದಾರೆ.

    ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ `ಮೂನ್ ಲೈಟ್’ ಅತ್ಯತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಅಂತೆಯೇ `ಮ್ಯಾಂಚೆಸ್ಟರ್ ಬೈ ದಿ ಸೀ’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಲಾಲಾ ಲ್ಯಾಂಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಎಮಾ ಸ್ಟೋನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಾಲಾ ಲ್ಯಾಂಡ್ ಚಿತ್ರಕ್ಕಾಗಿ ಯುವ ನಿರ್ದೇಶಕ ಡ್ಯಾಮಿಯೆನ್ ಚಾಝೆಲ್ಲೆ ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

    ಇನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಲಿಯಾಸ್ ಪಿಗ್ಗಿ ಚಾಪ್ಸ್ ಕೂಡ ತನ್ನ ವಿಭಿನ್ನ ಗೆಟಪ್‍ನಿಂದ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ವೇದಿಕೆಗೆ ನಮಸ್ತೆ ಎಂದು ಹೇಳಿದ ಪ್ರಿಯಾಂಕಾ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಫೋಟೋಗಳನ್ನ ಪ್ರಿಯಾಂಕಾ ಚೋಪ್ರಾ ತನ್ನ ಇನ್‍ಸ್ಟ್ರಾಗ್ರಾಮ್ ಅಕೌಂಟ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

     

  • ಆಸ್ತಿ ಆಸೆಗೆ ಬಾವನಿಂದ ನಾದಿನಿಯ ಕಗ್ಗೊಲೆ

    ಆಸ್ತಿ ಆಸೆಗೆ ಬಾವನಿಂದ ನಾದಿನಿಯ ಕಗ್ಗೊಲೆ

    ಬೆಂಗಳೂರು: ಆಸ್ತಿ ಆಸೆಗಾಗಿ ಬಾವನೇ ನಾದಿನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಕತೀಯನಗರದ ನಾಯ್ಡು ಲೇಔಟ್‍ನಲ್ಲಿ ನಡೆದಿದೆ.

    18 ವರ್ಷದ ಪವಿತ್ರ ಕೊಲೆಯಾದ ದುದೈರ್ವಿ. ಪವಿತ್ರ ಅಕ್ಕನ ಗಂಡ ಜಗದೀಶ್ ಈ ಕೃತ್ಯವೆಸಗಿದ್ದಾನೆ. ಆಸ್ತಿ ವಿಚಾರಕ್ಕೆ ಪವಿತ್ರ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ.

    ಏನಿದು ಪ್ರಕರಣ: ಲಕ್ಷ್ಮಿದೇವಮ್ಮ ಎಂಬವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳನ್ನ ಜಗದೀಶ್‍ಗೆ ಮದುವೆ ಮಾಡಿಕೊಟ್ಟಿದ್ರು. ಜಗದೀಶ್ ಪತ್ನಿಯ ತಂಗಿ ಪವಿತ್ರಗೆ ಈಗಾಗಲೇ ಮದುವೆಯಾಗಿ ಗರ್ಭವತಿಯಾಗಿದ್ದು, ಇನ್ನೊಬ್ಬ ಯುವಕ ಯಶವಂತ್ ಎಂಬಾತನನ್ನ ಪ್ರೀತಿಸುತ್ತಿದ್ದರು. ಪ್ರೀತಿಸಿ ಮದುವೆಯಾದ್ರೆ ಆಸ್ತಿಯಲ್ಲಾ ಪವಿತ್ರಗೆ ಸೇರುತ್ತೆ ಅನ್ನೋ ಭಯದಲ್ಲಿ ಬಾವ ಜಗದೀಶ್ ಆಕೆಯನ್ನು ವೇಲೂರಿಗೆ ಕರೆದೊಯ್ದು ಮಾಟ ಮಂತ್ರ ಮಾಡಿಸಲು ಮುಂದಾಗಿದ್ದ. ಈ ವೇಳೆ ಪವಿತ್ರ ವೇಲೂರಿಗೆ ಹೋಗಲು ನಿರಾಕರಿಸಿದ್ದಾರೆ. ಪವಿತ್ರರನ್ನು ಕೊಲೆ ಮಾಡಿದ್ರೆ ಆಸ್ತಿ ನನಗೇ ಸಿಗುತ್ತೆ ಅಂತ ಜಗದೀಶ್ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಸದ್ಯ ಬಾವ ಜಗದೀಶ್, ಪ್ರೇಮಿ ಯಶವಂತ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರು ಜನರ ದಾಹ ನೀಗಿಸ್ತಿರೋದು ಕಲುಷಿತ ನೀರು – ಚರಂಡಿ ನೀರು ಕುಡಿದು ಜನ ಆಸ್ಪತ್ರೆ ಪಾಲು

    ಬೆಂಗ್ಳೂರು ಜನರ ದಾಹ ನೀಗಿಸ್ತಿರೋದು ಕಲುಷಿತ ನೀರು – ಚರಂಡಿ ನೀರು ಕುಡಿದು ಜನ ಆಸ್ಪತ್ರೆ ಪಾಲು

    ಬೆಂಗಳೂರು: ಸಚಿವರ ಕಾರು ತೊಳೆಯೋದಕ್ಕೆ, ಮನೆ ಗಾರ್ಡನ್‍ಗೆ ಶುದ್ಧವಾದ ಕಾವೇರಿ ನೀರು ಬೇಕು. ಆದ್ರೇ ಸಾಮಾನ್ಯ ಜನರ ಪಾಲಿಗೆ ಚರಂಡಿಯಲ್ಲಿ ಗಬ್ಬು ನಾರುವಂತ ನೀರು. ಈ ಬಗ್ಗೆ ದೂರು ಕೊಟ್ರೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.

    ಕಪ್ಪು ನೀಲಿ ಬಣ್ಣವಿರುವ ಕೆಟ್ಟ ವಾಸನೆಯ ನೀರಿನ ಮೇಲೆ ಪಾಚಿ ನೀರನ್ನು ಜಲಮಂಡಳಿ ಕಾವೇರಿ ನೀರು ಅಂತಾ ಪೂರೈಕೆ ಮಾಡುತ್ತಿದೆ. ಈ ಚರಂಡಿ ಮಿಶ್ರಿತ ಕಾವೇರಿ ನೀರು ಕುಡಿದು ಆಸ್ಪತ್ರೆಗೆ ಸೇರಿರೋದು ಕಲ್ಯಾಣ ನಗರದ ಜನ. ಕಳೆದೊಂದು ವಾರದಿಂದ ಈ ರೀತಿ ಚರಂಡಿ ಮಿಶ್ರಿತ ನೀರು ಬರ್ತಿದೆ. ಇಡೀ ಸಂಪ್‍ಗೆ ನೀರು ತುಂಬಿಸಿ ಜನ ಪ್ರತಿದಿನ ಲೀಟರ್‍ಗಟ್ಟಲೆ ನೀರನ್ನು ಮತ್ತೆ ಹೊರಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈಗಾಗಲೇ ಸಾಕಷ್ಟು ಜನ ಈ ನೀರು ಕುಡಿದು ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದು ವಾರದಿಂದಲೂ ಈ ಕಲುಷಿತ ನೀರು ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಅಂತ ಜನ ಆರೋಪಿಸಿದ್ದಾರೆ. ಸದ್ಯಕ್ಕೆ ಕಲ್ಯಾಣನಗರದ ಜನ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದ್ರೆ ಜಲಮಂಡಳಿ ಅಧಿಕಾರಿಗಳು ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ತೆಪ್ಪಗೆ ಕುಳಿತಿರುವುದು ಮಾತ್ರ ವಿಪರ್ಯಾಸ.

  • ಜೈಲಿನಲ್ಲಿ ಆತ್ಮಕಥೆ ಬರೆಯಲು ಶುರುಮಾಡಿದ ಶಶಿಕಲಾ

    ಜೈಲಿನಲ್ಲಿ ಆತ್ಮಕಥೆ ಬರೆಯಲು ಶುರುಮಾಡಿದ ಶಶಿಕಲಾ

    ಬೆಂಗಳೂರು: ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಪಾಲಾಗಿರೋ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇದೀಗ ಆತ್ಮಕಥೆ ಬರೆಯಲು ಹೊರಟಿದ್ದಾರೆ.

    ಜೈಲಿನ ಜೀವನ ಕ್ರಮಕ್ಕೆ ಈಗಾಗಲೇ ಹೊಂದಿಕೊಂಡಿರುವ ಶಶಿಕಲಾ, ಆತ್ಮಕಥೆ ಬರೆಯಲು ಜೀವನದ ಪ್ರಮುಖ ಘಟ್ಟಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದಾರೆ. ಆಯಾ ಸ್ಥಾನದಿಂದ ಅಣ್ಣಾಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ ಶಶಿಕಲಾ, ಪುರಚ್ಚಿ ತಲೈವಿ ಜಯಲಲಿತಾ ಕುರಿತಂತೆ ರಹಸ್ಯಗಳನ್ನು ದಾಖಲಿಸಲಿದ್ದಾರೆ ಎನ್ನಲಾಗಿದೆ. ಶಶಿಕಲಾ ಜೊತೆ ಜೈಲಿನಲ್ಲಿರೋ ಆಕೆಯ ಸಂಬಂಧಿ ಇಳವರಸಿ ರಾಜಕೀಯ ಹಾಗೂ ಖಾಸಗಿ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನ ಶಶಿಕಲಾ ನೆನಪಿಸಿಕೊಳ್ಳಲು ಸಹಾಯ ಮಾಡ್ತಿದ್ದಾರೆ. ಇನ್ನು ಜಯಲಲಿತಾ ನಿಗೂಢ ಸಾವಿನ ಬಗ್ಗೆಯೂ ಈ ಆತ್ಮಕಥೆಯಲ್ಲಿ ಉಲ್ಲೇಖಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕು.

    ಪೆಬ್ರವರಿ 14ರಂದು ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಶಶಿಕಲಾಗೆ 4 ವರ್ಷ ಜೈಲು ಹಾಗೂ 10 ಕೋಟಿ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿತು. ಶಶಿಕಲಾ ಜೊತೆಗೆ ಇಳವರಸಿ ಹಾಗೂ ಸುಧಾಕರನ್ ಕೂಡ ದೋಷಿಗಳೆಂದು ಸಾಬೀತಾಗಿದ್ದು, ಅದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.

  • ಬಿಎಸ್‍ವೈಗೆ ಜನ್ಮದಿನದ ಶುಭ ಕೋರಲು ನೂಕುನುಗ್ಗಲು – ಧವಳಗಿರಿ ಮನೆಯ ಗಾಜು ಪುಡಿಪುಡಿ

    ಬಿಎಸ್‍ವೈಗೆ ಜನ್ಮದಿನದ ಶುಭ ಕೋರಲು ನೂಕುನುಗ್ಗಲು – ಧವಳಗಿರಿ ಮನೆಯ ಗಾಜು ಪುಡಿಪುಡಿ

    – ಕುಮಾರ್ ಬಂಗಾರಪ್ಪ ಬಿಜೆಪಿ ಸೇರೋದು ಕನ್ಫರ್ಮ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಬೆಳಗ್ಗೆಯಿಂದಲೇ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ.

    ಸಚಿವರಾದ ಸುರೇಶ್ ಕುಮಾರ್, ವಿ.ಸೋಮಣ್ಣ, ಸಂಸದ ಭಗವಂತ ಖೂಬಾ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಬಿಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಶುಭಕೋರಿದ್ರು. ಇದೇ ವೇಳೆ ಬಿಎಸ್‍ವೈ ನಿವಾಸದ ಎದುರು ನೂಕುನುಗ್ಗಲು ಉಂಟಾಗಿದ್ದು, ನಿವಾಸದ ಹಾಲ್‍ನ ಗಾಜು ಪುಡಿ ಪುಡಿಯಾಗಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು. ಅದಕ್ಕಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನೋ ಸಂಕಲ್ಪ ಮಾಡಿದ್ದೇನೆ. ಬರಗಾಲ ಹಿನ್ನೆಲೆಯಲ್ಲಿ ಅದ್ಧೂರಿ ಬರ್ತ್‍ಡೇ ಆಚರಣೆ ಬೇಡ ಎಂದಿದ್ದೇನೆ. ಜೊತೆಗೆ ಇಂದು ತುಮಕೂರಿನ ಬೆಳ್ಳಾವಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಕೊಡ್ತೀನಿ ಅಂತಾ ಹೇಳಿದ್ರು. ಬಳಿಕ ಯಡಿಯೂರಪ್ಪ ಶ್ರೀಗಳ ಆಶೀರ್ವಾದ ಪಡೆಯಲು ಸಿದ್ದಗಂಗಾ ಮಠಕ್ಕೆ ತೆರಳಿದ್ರು.

     

    ಕುಮಾರ್ ಬಂಗಾರಪ್ಪ ಬಿಜೆಪಿಗೆ: ಬರ್ತ್‍ಡೇ ದಿನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈಗೆ ಭರ್ಜರಿ ಗಿಫ್ಟ್ ಸಿಕ್ಕಿದ್ದು, ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದು ಬಿಎಸ್‍ವೈ ಭೇಟಿಯಾಗಿ ಹುಟ್ಟುಹಬ್ಬದ ಶುಭಕೋರಿದ ಕುಮಾರ್ ಬಂಗಾರಪ್ಪ, ನಾವು ಬಿಎಸ್‍ವೈ ಜೊತೆಗಿದ್ದು ಶೀಘ್ರವೇ ಸುದ್ದಿಗೋಷ್ಠಿ ಕರೆದು ಅಧಿಕೃತವಾಗಿ ಪ್ರಕಟಿಸುತ್ತೇವೆ ಅಂತ ಹೇಳಿದ್ರು.