Tag: publictv

  • ಕೆಲಸದ ಆಸೆ ತೋರಿ ಸ್ನೇಹಿತೆಯನ್ನೇ ಸೌದಿ ಅರೇಬಿಯಾಗೆ ಮಾರಿದ್ಳಾ?

    ಕೆಲಸದ ಆಸೆ ತೋರಿ ಸ್ನೇಹಿತೆಯನ್ನೇ ಸೌದಿ ಅರೇಬಿಯಾಗೆ ಮಾರಿದ್ಳಾ?

    -ಗಂಡನಿಗೆ ಫೋನ್ ಮಾಡಿ ಕಣ್ಣೀರಿಟ್ಟ ಪತ್ನಿ

    ಬೆಂಗಳೂರು: ತನ್ನ ಹೆಂಡತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಸ್ನೇಹಿತೆಯೇ ಆಕೆಯನ್ನು ಸೌದಿ ಅರೇಬಿಯಾಗೆ ಮಾರಾಟ ಮಾಡಿದ್ದಾರೆಂದು ವ್ಯಕ್ತಿಯೊಬ್ಬರು ಆರೊಪಿಸಿದ್ದಾರೆ.

    ಮೂಲತಃ ಬೆಂಗಳೂರಿನ ಹೊರವಲಯ ತೋಟಗೆರೆಯ ನಿವಾಸಿ 28 ವರ್ಷದ ರಂಜಿತಾ ಕೆಲಸಕ್ಕಾಗಿ 1 ವರ್ಷದಿಂದ ಹುಡುಕಾಟದಲ್ಲಿದ್ದರು. ಅಂತೆಯೇ ರಂಜಿತಾಗೆ ತನ್ನ ಸ್ನೇಹಿತೆ, ಬೆಂಗಳೂರಿನ ಸಂಜಯ್ ನಗರದ ನಿವಾಸಿ ಕವಿತಾ ಭೇಟಿಯಾಗುತ್ತೆ. ಕೆಲಸದ ವಿಚಾರವನ್ನು ರಂಜಿತಾ ಕವಿತಾಗೆ ಹೇಳ್ತಾರೆ. ಆಗ ಕವಿತಾ ಕೆಲಸಕೊಡಿಸುತ್ತೇನೆ ತಿಂಗಳಿಗೆ 30 ಸಾವಿರ ಸಂಬಳ ಎಂದು ನಂಬಿಸಿದ್ದಾರೆ. ಇತ್ತ ಸೌದಿ ಅರೇಬಿಯಾಗೆ ಹೋಗಬೇಕು ಅಂತ ರಂಜಿತಾ ಗಂಡ ಭಾಸ್ಕರ್‍ನನ್ನು ಒಪ್ಪಿಸುತ್ತಾರೆ.

    ಕಳೆದ ವರ್ಷ ಆಗಸ್ಟ್‍ನಲ್ಲಿ ಕೆಲಸಕ್ಕೆಂದು ಹೋದ ರಂಜಿತಾ ಎಂಟು ತಿಂಗಳಾದರೂ ಮನೆಗೆ ಬಂದಿಲ್ಲ. ಈ ಬಗ್ಗೆ ಕವಿತಾರನ್ನು ವಿಚಾರಿಸಿದರೆ, ನನಗೆ ಗೊತ್ತಿಲ್ಲ. ನಿನ್ನ ಹೆಂಡತಿ ಬೇಕು ಅಂದ್ರೆ ಎರಡು ಲಕ್ಷ ರೂಪಾಯಿ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಭಾಸ್ಕರ್ ಆರೋಪಿಸಿದ್ದು, ಮಾರನಾಯಕನಹಳ್ಳಿ ಮತ್ತು ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸ್ರು ದೂರು ದಾಖಲು ಮಾಡಿಕೊಳ್ಳದೇ ಕವಿತಾ ಜೊತೆ ಕೂತು ಮಾತನಾಡಿ. ಇದರ ಬಗ್ಗೆ ದೂರು ದಾಖಲಾದ್ರೆ ಅಂತರಾಷ್ಟ್ರೀಯ ಮಟ್ಟದವರೆಗೂ ಹೋಗುತ್ತದೆ ಎಂದು ಬೇಜವಾಬ್ದಾರಿತನದ ಮಾತನ್ನಾಡಿದ್ದಾರಂತೆ.

    ಎಂಟು ತಿಂಗಳಾದ್ರು ರಂಜಿತಾ ಬಾರದೇ ಇರುವುದರಿಂದ ರಂಜಿತಾ ಅವರ ಮಗ 12 ವರ್ಷದ ಚೇತನ್ ಊಟ ಮಾಡದೇ ನೀರು ಕುಡಿಯದೇ ಅಮ್ಮನನನ್ನು ನೋಡಬೇಕು. ನನ್ನ ಅಮ್ಮನನ್ನು ನಮಗೆ ಹುಡುಕಿ ಕೊಡಿ ಎಂದು ಪರಿತಪಿಸುತ್ತಿದ್ದಾನೆ. ರಂಜಿತಾರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ ಸೌದಿ ಅರೇಬಿಯಾಗೆ ಮಾರಾಟ ಮಾಡಿದ್ದಾರೆ ಅಂತಾ ರಂಜಿತಾ ಗಂಡ ಭಾಸ್ಕರ್ ಆರೋಪಿಸಿದ್ದಾರೆ.

    ಸೌದಿ ಅರೇಬಿಯಾದಲ್ಲಿರುವ ರಂಜಿತಾ, ಮನೆ ಯಜಮಾನನ ಕಣ್ಣು ತಪ್ಪಿಸಿ ತನ್ನ ಗಂಡನಿಗೆ ದೂರವಾಣಿ ಮೂಲಕ ಮಾತನಾಡಿ ನನ್ನನ್ನು ನಮ್ಮ ದೇಶಕ್ಕೆ ಕರೆದುಕೊಂಡು ಹೋಗಿ ಅಂದಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಪ್ರತಿನಿಧಿ ಕೂಡ ಸೌದಿ ಅರೇಬಿಯಾದಲ್ಲಿರುವ ರಂಜಿತಾ ಅವರ ಜೊತೆ ಮಾತನಾಡಿದಾಗ, ಸರಿಯಾಗಿ ಊಟ ಕೊಡಲ್ಲ. ನನ್ನ ಕೈಯಲ್ಲಿ ಸಂಬಳ ಇಲ್ಲ. ನನ್ನ ಕೈಲಿ ಇಲ್ಲಿ ದುಡಿಯಕ್ಕಾಗಲ್ಲ ಅಂತಾ ಹೇಳಿದ್ರೆ ಇಲ್ಲಿನ ಏಜೆನ್ಸಿಗಳು ಹೊಡಿತಾರೆ. ಮುಖದ ಮೇಲೆ ಎಂಜಲು ಉಗಿತಾರೆ. ಎಲ್ಲಾ ಬಾಗಿಲುಗಳಿಗೆ ಬೀಗ ಹಾಕ್ತಾರೆ. ಹೊರಗಡೆ ಬರೋಕೆ ಬಿಡ್ತಾ ಇಲ್ಲ ಅಂತಾ ಅಲ್ಲಿನ ಪರಿಸ್ಥಿತಿ ಬಗ್ಗೆ ರಂಜಿತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಉಪ ಚುನಾವಣೆಗೆ ಕೊನೆಗೂ ಮುಹೂರ್ತ- ಎರಡ್ಮೂರು ದಿನಗಳಲ್ಲಿ ದಿನಾಂಕ ಘೋಷಣೆ

    ಉಪ ಚುನಾವಣೆಗೆ ಕೊನೆಗೂ ಮುಹೂರ್ತ- ಎರಡ್ಮೂರು ದಿನಗಳಲ್ಲಿ ದಿನಾಂಕ ಘೋಷಣೆ

    ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳಿಗೆ ಏಪ್ರಿಲ್ 2 ನೇ ವಾರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ ಅಂತಾ ಚುನಾವಣಾ ಆಯೋಗದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಕ್ಷೇತ್ರ ಮತ್ತು ಸಚಿವ ಮಹದೇವಪ್ರಸಾದ್ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಈ ಮೂಲಕ ಡೈರಿ ವಾರ್ ಜೊತೆಗೆ ಎಲೆಕ್ಷನ್ ವಾರ್‍ಗೆ ಸಿಎಂ ಸಿದ್ದರಾಮಯ್ಯ ಮತ್ತು ಬಿಎಸ್‍ವೈ ರೆಡಿಯಾಗಲಿದ್ದಾರೆ.

    ಈ ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣಾ ಕದನಕ್ಕೆ ಮುಂದಿನ ಎರಡು ಮೂರು ದಿನಗಳಲ್ಲಿ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.

  • ಅಪ್ಪನ ಸಾವಿಗೆ ಭಾವಿ ಪತ್ನಿಯನ್ನ ದೂಷಿಸಿ ಮದುವೆ ಮುರಿದ ವರ- ನೊಂದ ಯುವತಿ ಆತ್ಮಹತ್ಯೆಗೆ ಶರಣು

    ಅಪ್ಪನ ಸಾವಿಗೆ ಭಾವಿ ಪತ್ನಿಯನ್ನ ದೂಷಿಸಿ ಮದುವೆ ಮುರಿದ ವರ- ನೊಂದ ಯುವತಿ ಆತ್ಮಹತ್ಯೆಗೆ ಶರಣು

    ಬೆಂಗಳೂರು: ತಂದೆಯ ಸಾವಿಗೆ ಭಾವಿ ಪತ್ನಿಯನ್ನು ದೂಷಿಸಿ ವರ ಮದುವೆ ಮುರಿದಿದ್ದಕ್ಕೆ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    32 ವರ್ಷದ ನಾಗಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರಿಗೆ ಕಾರ್ತಿಕ್ ಎಂಬ ಯುವಕನ ಜೊತೆ ಕಳೆದ ವರ್ಷ ನಿಶ್ಚಿತಾರ್ಥವಾಗಿತ್ತು. ಆದ್ರೆ ಆ ಬಳಿಕ ಯುವಕನ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿತ್ತು. ನಂತರ ಮೇ 22ರಂದು ಮದುವೆ ನಿಶ್ಚಯವಾಗಿ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಆದ್ರೆ ಹುಡುಗಿ ದುರಾದೃಷ್ಟವೆಂದು ಹೇಳಿ ಕಾರ್ತಿಕ್ ಈ ಮದುವೆಯನ್ನು ಮುರಿದಿದ್ದು, ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾರೆ.

    ಆತ್ಮಹತ್ಯೆಗೂ ಮುನ್ನ ನಾಗಲಕ್ಷ್ಮೀ 5 ಪುಟಗಳ ಡೆತ್ ನೋಟ್ ಟೈಪ್ ಮಾಡಿ ತಂದೆಗೆ ಮೇಲ್ ಮಾಡಿದ್ದು, ಸದ್ಯ ಪೊಲೀಸರು ನಾಗಲಕ್ಷ್ಮಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಪರಿಶೀಲನೆ ನಡೆಸುತ್ತಿದ್ದಾರೆ.

    ಘಟನೆ ಸಂಬಂಧ ಯುವಕ ಕಾರ್ತಿಕ್ ನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ದಿನಭವಿಷ್ಯ: 01-03-2017

    ದಿನಭವಿಷ್ಯ: 01-03-2017

    ಮೇಷ: ಹೆತ್ತವರಲ್ಲಿ ದ್ವೇಷ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ.

    ವೃಷಭ: ದೇವರ ಕಾರ್ಯಗಳಲ್ಲಿ ಭಾಗಿ, ಮೆಕಾನಿಕ್ ಕೆಲಸದವರಿಗೆ ಲಾಭ, ಹಣಕಾಸು ಅನುಕೂಲ, ಸಹೋದರರಿಂದ ಕಲಹ, ಸ್ಥಾನ ಭ್ರಷ್ಟತ್ವ.

    ಮಿಥುನ: ಶೀತ ಸಂಬಂಧಿತ ರೋಗ, ತಂಪು ಪಾನೀಯಗಳಿಂದ ರೋಗ ಬಾಧೆ, ಅಧಿಕ ಖರ್ಚು, ತಾಳ್ಮೆ ಕಳೆದುಕೊಳ್ಳುವಿರಿ.

    ಕಟಕ: ರಾಜ ವಿರೋಧ, ಯತ್ನ ಕಾರ್ಯಗಳಲ್ಲಿ ಭಂಗ, ಹಣಕಾಸು ಅಡಚಣೆ, ಅಗ್ನಿಯಿಂದ ಭೀತಿ, ವಾಹನ ಅಪಘಾತ.

    ಸಿಂಹ: ಹೊಸ ವ್ಯವಹಾರಗಳಿಂದ ನಷ್ಟ, ಕಾರ್ಯದಲ್ಲಿ ವಿಳಂಬ, ಸಂತಾನ ಪ್ರಾಪ್ತಿ, ಮಾನಸಿಕ ನೆಮ್ಮದಿ, ಅನ್ಯರಲ್ಲಿ ದ್ವೇಷ.

    ಕನ್ಯಾ: ಈ ದಿನ ನೆಮ್ಮದಿ ಜೀವನ, ಐಶ್ವರ್ಯ ವೃದ್ಧಿ, ಸೇವಕರಿಂದ ಸಹಾಯ, ಕೀರ್ತಿ ಲಾಭ, ಶತ್ರುಗಳನ್ನು ಸದೆಬಡೆಯುವಿರಿ, ವಿಪರೀತ ಖರ್ಚು.

    ತುಲಾ: ಸ್ಥಳ ಬದಲಾವಣೆ, ಋಣ ಬಾಧೆ, ಅತಿಯಾದ ಕೋಪ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ನಾನಾ ರೀತಿ ಸಂಪಾದನೆ.

    ವೃಶ್ಚಿಕ: ಆರ್ಥಿಕ ಸಂಕಷ್ಟ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಸರಿ ತಪ್ಪುಗಳ ಬಗ್ಗೆ ಅವಲೋಕಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ.

    ಧನಸ್ಸು: ಅನಾವಶ್ಯಕ ವಸ್ತುಗಳ ಖರೀದಿ, ಭೂಮಿಯಿಂದ ಲಾಭ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ದಾನ-ಧರ್ಮದಲ್ಲಿ ಆಸಕ್ತಿ.

    ಮಕರ: ವ್ಯಾಪಾರದಲ್ಲಿ ಸಾಧಾರಣ ಲಾಭ, ಪ್ರೀತಿ ಪಾತ್ರರ ಆಗಮನ, ಆತ್ಮೀಯರಿಂದ ಸಹಾಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.

    ಕುಂಭ: ಮಾನಸಿಕ ಚಿಂತೆ, ಧನ ನಷ್ಟ, ವಾಹನ ಚಾಲನೆಯಲ್ಲಿ ತೊಂದರೆ, ಮಾನಸಿಕ ಗೊಂದಲ, ಹಿರಿಯರಿಂದ ಬೆಂಬಲ, ಅಪಕೀರ್ತಿ-ಅಗೌರವ, ಆರೋಗ್ಯದಲ್ಲಿ ಏರುಪೇರು.

    ಮೀನ: ಮಗಳಿಂದ ಶುಭ ಸುದ್ದಿ ಕೇಳುವಿರಿ, ಉತ್ತಮ ಬುದ್ಧಿಶಕ್ತಿ, ಸೈಟ್ ಖರೀದಿಸುವ ಚಿಂತೆ, ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ.

  • ಕರ್ನಾಟಕ ಸಿಎಂಗೆ ಕೇರಳ ಸಿಎಂ ಧನ್ಯವಾದ!

    ಕರ್ನಾಟಕ ಸಿಎಂಗೆ ಕೇರಳ ಸಿಎಂ ಧನ್ಯವಾದ!

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೋಮು ಸೌಹಾರ್ದ ಸಮಾವೇಶಕ್ಕೆ ರಾಜ್ಯ ಸರ್ಕಾರ ಭದ್ರತೆ ಒದಗಿಸಿದ ಹಿನ್ನೆಲೆಯಲ್ಲಿ ಕೇರಳ ಸಿಎಂ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಹಾಜರಾಗುವುದಕ್ಕೆ ಆರ್‍ಎಸ್‍ಎಸ್ ವಿರೋಧ ವ್ಯಕ್ತಪಡಿಸಿದ ಕುರಿತು ಪಿಣರಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಆರ್‍ಎಸ್‍ಎಸ್‍ನ ಈ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಏನಿದು ಘಟನೆ: ಫೆ.25ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೃಹತ್ ಕೋಮುಸೌಹಾರ್ದ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸಿ ಭಾಷಣ ಮಾಡಿದ್ದರು. ಆದ್ರೆ ಇದಕ್ಕೂ ಮೊದಲು ಸಂಘಪರಿವಾರ ಪಿಣರಾಯಿ ಆಗಮನ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಪಿಣರಾಯಿ ಮಂಗಳೂರಿಗೆ ಬರದಂತೆ ತಡೆಯಲು ಜಿಲ್ಲೆಯಾದ್ಯಂತ ಬಂದ್‍ಗೆ ಕರೆ ನೀಡಿದ್ದರು.

    ಆದ್ರೆ ಕಾರ್ಯಕ್ರಮದಲ್ಲಿ ಯಾವುದೇ ಅಹಿತರ ಘಟನೆ ಸಂಭವಿಸಬಾರದೆಂದು ಸರ್ಕಾರ ಮಂಗಳೂ ಕಮಿಷನರ್ ವ್ಯಾಪ್ತಿಯಲ್ಲಿ 144ಸೆಕ್ಷನ್ ಜಾರಿ ಮಾಡಿತ್ತು. ಮಾತ್ರವಲ್ಲದೇ 3 ಸಾವಿರಕ್ಕಿಂತಲೂ ಅಧಿಕ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. 600 ಸಿಸಿ ಕ್ಯಾಮೆರಾ ಹಾಗೂ 60 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.

  • 2 ದಿನದಲ್ಲಿ 39 ಲಕ್ಷ ವ್ಯೂ, 53 ಸಾವಿರ ಶೇರ್: ಗೆಳೆಯರ ಜೊತೆ ವರನ ಡ್ಯಾನ್ಸ್ ವೈರಲ್

    2 ದಿನದಲ್ಲಿ 39 ಲಕ್ಷ ವ್ಯೂ, 53 ಸಾವಿರ ಶೇರ್: ಗೆಳೆಯರ ಜೊತೆ ವರನ ಡ್ಯಾನ್ಸ್ ವೈರಲ್

    ಮದುವೆಯಲ್ಲಿ ವಧು ಡ್ಯಾನ್ಸ್ ಮಾಡಿರೋ ವಿಡಿಯೋಗಳು ಆಗಾಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರೋದು ಸಾಮಾನ್ಯವಾಗಿದೆ. ಆದ್ರೆ ಇದೀಗ ವಿವಾಹ ವೇದಿಕೆಯಲ್ಲೇ ಸ್ನೇಹಿತರ ಜೊತೆ ವರ ಕೂಡ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

    `ದಿ ಬ್ಯಾಕ್ ಬೆಂಚರ್ಸ್’ ಎಂಬ ಫೇಸ್ಬುಕ್ ಪೇಜ್‍ನಲ್ಲಿ ಫೆ.26ರಂದು ಈ ವಿಡಿಯೋವನ್ನು ಹಾಕಲಾಗಿದ್ದು, ಅಪ್‍ಲೋಡ್ ಆದ 2 ದಿನದಲ್ಲೇ 39 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 52 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, ಸುಮಾರು ಏಳೂವರೆ ಸಾವಿರ ಮಂದಿ ಕಮೆಂಟ್ಸ್ ಹಾಕಿದ್ದಾರೆ. ಸುಮಾರು 2 ನಿಮಿಷಗಳ ಈ ವಿಡಿಯೋದಲ್ಲಿ ವರ ತನ್ನ ಸ್ನೇಹಿತರ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.

    ವಿಡಿಯೋದಲ್ಲಿ ವರ ಬೂದು ಬಣ್ಣದ ಸೂಟ್, ಕತ್ತಿನಲ್ಲಿ ವರಮಾಲೆ ಹಾಕಿಕೊಂಡು ವೇದಿಕೆಗೆ ಬಂದಂತಹ ತನ್ನ ಆತ್ಮೀಯ ಗೆಳೆಯರ ಜೊತೆ ಅದ್ಭುತವಾಗಿ ಗಂಗ್ನಂ ಸ್ಟೈಲಿನಲ್ಲಿ ಸ್ಟೆಪ್ ಹಾಕಿದ್ದಾರೆ. ಇತ್ತ ವಧು ಮತ್ತು ನೆರೆದ ಸಂಬಂಧಿಕರು ಗೆಳೆಯರ ಜೊತೆ ವರ ಡ್ಯಾನ್ಸ್ ಮಾಡುತ್ತಿರುವುದನ್ನ ನೋಡಿಯೇ ಬಾಕಿಯಾಗಿದ್ದಾರೆ. ಕೊನೆಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ವರ ತನ್ನ ವಧುವಿನ ಪಕ್ಕ ಬಂದು ನಿಂತುಕೊಳ್ಳುತ್ತಾರೆ. ಈ ವೇಳೆ ಗೆಳೆಯರು ವೇದಿಕೆಯ ಮಧ್ಯಭಾಗಕ್ಕೆ ಬಂದು ಕುಣಿದು ಕುಪ್ಪಳಿಸಿದ್ದಾರೆ.

    ಮದುವೆ ಮಂಟಪದಲ್ಲೇ ಸಂಭ್ರಮದಲ್ಲಿ ಕುಣಿದ ಈ ವಿಡಿಯೋ ಇದೀಗ ಫೇಸ್ಬುಕ್‍ನಲ್ಲಿ ಭಾರೀ ಸದ್ದು ಮಾಡಿದೆ. ಮಾತ್ರವಲ್ಲದೇ ಕೆಲವರು ಗೇಳೆಯವರು ಅವರ ಗೆಳೆಯರಿಗೆ ಟ್ಯಾಗ್ ಮಾಡುವ ಮೂಲಕ ಅವರ ಮದುವೆಯಲ್ಲಿಯೂ ಇದೇ ರೀತಿ ಸ್ಟೆಪ್ ಹಾಕಬೇಕೆಂದು ಹೇಳಿಕೊಂಡಿದ್ದಾರೆ. ಇನ್ನು ಈ ಮದುವೆ ಎಲ್ಲಿ, ಯಾವಾಗ ನಡೆಯಿತು ಎಂಬುವುದರ ಬಗ್ಗೆ ಮಾಹಿತಿಯಿಲ್ಲ.

    https://www.facebook.com/thebackbenchersofficial/videos/1753254594691503/

     

  • ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಪೇಪರ್ ತಂದು ಕೊಡುವುದು, ಕೆಲವೊಂದು ಬಾರಿ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡಿರ್ತೀರ. ಆದ್ರೆ ನಾಯಿಗಳು ಡ್ಯಾನ್ಸ್ ಮಾಡೋದನ್ನು ಕೇವಲ ಸರ್ಕಸ್‍ನಲ್ಲಿ ಮಾತ್ರ ನೋಡಬಹುದು. ಆದ್ರೆ ಇಲ್ಲೊಂದು ಸಾಕುನಾಯಿ ಮಾಲಕಿಯಂತೆಯೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದೆ.

    ವಾಷಿಂಗ್ಟನ್‍ನ ಬೆಲ್ಲಿಂಗ್‍ಹ್ಯಾಮ್ ನಿವಾಸಿಯಾದ 16 ವರ್ಷದ ಯುವತಿ ಮೇರಿ, ತನ್ನ ಆಸ್ಟ್ರೇಲಿಯನ್ ಶೆಫರ್ಡ್ ತಳಿಯ 2 ವರ್ಷದ ಮುದ್ದು ನಾಯಿಮರಿ ಜೊತೆ ಐರಿಶ್ ಡ್ಯಾನ್ಸ್ ಸ್ಟೆಪ್ ಕಲಿಯುತ್ತಿರುವ ವಿಡಿಯೋವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಗೆಳೆಯರೊಬ್ಬರು ಈ ನಾಯಿಗಾಗಿಯೇ ಕೊರಿಯಾಗ್ರಫಿ ಮಾಡಿದ ಸ್ಟೆಪ್ ಕಲಿಯುತ್ತಿದ್ದೇವೆ ಅಂತ ಮೇರಿ ತನ್ನ ಪೋಸ್ಟ್‍ನಲ್ಲಿ ಹೇಳಿದ್ದಾರೆ.

    ಸೀಕ್ರೆಟ್ ಎಂಬ ಹೆಸರಿನ ಈ ನಾಯಿ ಮಾಲಕಿಯೊಂದಿಗೆ ಯೋಗಾಭ್ಯಾಸ ಕೂಡ ಮಾಡಿರುವ ವೀಡಿಯೋಗಳನ್ನ ಮೇರಿ ಹಂಚಿಕೊಂಡಿದ್ದು ಈಗಾಗಲೇ ಈ ನಾಯಿಗೆ ಇನ್ಸ್ಟಾಗ್ರಾಮ್‍ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಸುಮಾರು 65 ಸಾವಿರಕ್ಕೂ ಹೆಚ್ಚು ಮಂದಿ ಮೇರಿಯ ಅಕೌಂಟನ್ನ ಫಾಲೋ ಮಾಡ್ತಿದ್ದಾರೆ.

    ಮೇರಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನಾಯಿ ಹೇಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನಿಟ್ಟು ಡ್ಯಾನ್ಸ್ ಕಲಿಯುತ್ತಿದೆ ಎಂಬುವುದನ್ನು ಗಮನಿಸಬಹುದು. ಈ ವೀಡಿಯೋವನ್ನು ಇದುವರೆಗೆ 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋಗೆ ಸಾಕಷ್ಟು ಜನ ಕಮೆಂಟ್‍ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಓ ಮೈ ಗಾಡ್ ನಾಯಿ ಎಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತೆ ಅಂದ್ರೆ ಇನ್ನೂ ಕೆಲವರು ಇದು ನಿಜಕ್ಕೂ ಅದ್ಭುತವಾಗಿದೆ ಅಂತಾ ಹೇಳಿದ್ದಾರೆ.

    https://www.youtube.com/watch?v=ILmfmHevjBk

     

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿಯಿಂದ ಭ್ರಷ್ಟರ ಬೇಟೆ- ಬೆಂಗ್ಳೂರಲ್ಲಿ 8 ಕಡೆ ದಾಳಿ

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿಯಿಂದ ಭ್ರಷ್ಟರ ಬೇಟೆ- ಬೆಂಗ್ಳೂರಲ್ಲಿ 8 ಕಡೆ ದಾಳಿ

    ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಕುಳಗಳಿಗೆ ಶಾಕ್ ಕೊಟ್ಟಿದ್ದಾರೆ. ಬೀದರ್, ಬೆಳಗಾವಿ, ಗದಗ, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕು ಪಂಚಾಯತಿ ಇಓ ಜಗನ್ನಾಥ ಮಾಣಿಕಪ್ಪ ಹೋತಗಿ ನಿವಾಸದ ಮೇಲೆ ಎಸಿಬಿ ಎಸ್.ಪಿ ಅನೀತ್ ಹದ್ದಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಳಗಾವಿಯಲ್ಲಿ ಡೆಪ್ಯೂಟಿ ತಹಶಿಲ್ದಾರ್ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಆಸ್ತಿಗಳ ದಾಖಲೆಗಳನ್ನ ವಶ ಪಡಿಸಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲೂ ಎಸಿಬಿ ಇನ್ಸ್ ಪೆಕ್ಟರ್ ಮಹಾಂತೇಶ ನೇತೃತ್ವದಲ್ಲಿ ದಾಳಿ ನಡೆದಿದ್ದು ಯಾವಗಲ್ ಗ್ರಾಮಪಂಚಾಯತ್‍ನ 2015-16 ನೇ ಸಾಲಿನ ಯೋಜನೆಗಳ ಅವ್ಯವಹಾರ ಕುರಿತು ಕಾಮಗಾರಿಯ ಕಡತಗಳ ಪರಿಶೀಲನೆ ನಡೆಯುತ್ತಿದೆ.

    ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಮನೆಯ ಮೇಲೆ ಎಸಿಬಿ ದಾಳಿ ನಡೆದಿದ್ದು, ಇವರ ಸ್ನೇಹಿತರ ಮನೆಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಆರ್‍ಟಿಓ ಇನ್ಸ್‍ಪೆಕ್ಟರ್ ಕರುಣಾಕರ್ ಮನೆ ಮೇಲೆ ಎಸಿಬಿ ವೃತ್ತ ನಿರೀಕ್ಷಕ ಹಾಗೂ ಚಿತ್ರದುರ್ಗದ ಎಸಿಬಿ ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

    ಬೆಂಗಳೂರಿನಲ್ಲೂ ಎಂಟು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಬಲೆ ಬೀಸಿದ್ದು, ಜಯನಗರದ 3 ನೇ ಹಂತದಲ್ಲಿರುವ ಬಿಬಿಎಂಪಿಯ ಚೀಫ್ ಎಂಜಿನಿಯರ್ ಆಗಿರುವ ಕೆಟಿ ನಾಗರಾಜು ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಜಯನಗರ 4 ನೇ ಹಂತದಲ್ಲಿರುವ ಬಿಡಿಎ ಎಇಇ ಕುಮಾರ್ ನಿವಾಸ ಸೇರಿದಂತೆ ಹಾಸನದಲ್ಲೂ 2 ಕಡೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ 2 ಡಿವೈಎಸ್‍ಪಿ ಮತ್ತು ಹಾಸನದಲ್ಲಿ 2 ಡಿವೈಎಸ್ ಪಿ ನೇತೃತ್ವದಲ್ಲಿ ಅಕ್ರಮ ದಾಖಲೆಗಳ ಶೋಧ ಕಾರ್ಯ ನಡೆಯುತ್ತಿದೆ.

  • ಸ್ಯಾಂಡಲ್‍ವುಡ್ ನಿರ್ದೇಶಕ ರಿಷಿ ಅರೆಸ್ಟ್

    ಸ್ಯಾಂಡಲ್‍ವುಡ್ ನಿರ್ದೇಶಕ ರಿಷಿ ಅರೆಸ್ಟ್

    ಬೆಂಗಳೂರು: ಸಿನಿಮಾ ಮಾಡೋದಾಗಿ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್‍ವುಡ್‍ನ ವಿವಾದಿತ ನಿರ್ದೇಶಕ ರಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಒನ್ ವೇ ಚಿತ್ರದ ನಿರ್ಮಾಪಕ ದೀಪಕ್‍ರಿಂದ ನಿರ್ದೇಶಕ ರಿಷಿ 5 ಲಕ್ಷ ರೂಪಾಯಿ ಪಡೆದಿದ್ರು. ಬಳಿಕ ದೀಪಕ್ ಹಣ ವಾಪಸ್ ಕೇಳಿದಾಗ ಚೆಕ್ ನೀಡಿದ್ರು. ಆದ್ರೆ ಚೆಕ್ ಬೌನ್ಸ್ ಆಗಿದ್ರಿಂದ ರಿಷಿ ವಿರುದ್ಧ ನಿರ್ಮಾಪಕ ದೀಪಕ್ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ದೇಶಕ ರಿಷಿಯವರನ್ನು ಬಂಧಿಸಿದ್ದಾರೆ.

    `ಕೊಟ್ಲಲ್ಲಪ್ಪೋ ಕೈ’ ಚಿತ್ರದ ವಿವಾದದ ಮೂಲಕ ಸದ್ದು ಮಾಡಿದ್ದ ರಿಷಿ ಬಳಿಕ ನಟಿ ಮೈತ್ರೇಯಾ ಗೌಡ ಅವರನ್ನ ಮದುವೆ ಅಗಿದ್ದೀನಿ ಅಂತ ಕಾಂಟ್ರವರ್ಸಿ ಮಾಡಿದ್ದರು. ಇತ್ತೀಚೆಗೆ ಮಾಸ್ತಿಗುಡಿ ಸಿನಿಮಾದಲ್ಲಿ ನನ್ನ ಹಾಡು ಬಳಸಿದ್ದಾರೆ ಅಂತಾ ಫಿಲಂ ಚೇಂಬರ್ ಗೆ ದೂರು ನೀಡಿದ್ದರು.

  • ದಿನಭವಿಷ್ಯ: 28-02-2017

    ದಿನಭವಿಷ್ಯ: 28-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ
    ಉತ್ತರಾಯಣ ಪುಣ್ಯಕಾಲ,
    ಶುಕ್ಲ ಪಕ್ಷ, ಫಾಲ್ಗುಣ ಮಾಸ,
    ಮಂಗಳವಾರ, ದ್ವಿತೀಯ ತಿಥಿ,
    ಉತ್ತರ ಭಾದ್ರ ನಕ್ಷತ್ರ,

    ರಾಹುಕಾಲ: ಮಧ್ಯಾಹ್ನ 3:32 ರಿಂದ 5:02
    ಗುಳಿಕಕಾಲ: ಮಧ್ಯಾಹ್ನ 12:29 ರಿಂದ 2:00
    ಯಮಗಂಡಕಾಲ: ಬೆಳಗ್ಗೆ 9:26 ರಿಂದ 10:57

    ಮೇಷ: ಆಸ್ತಿ ವಿವಾದ, ಉನ್ನತ ವ್ಯಾಸಂಗ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಭವಿಷ್ಯದ ಆಲೋಚನೆ, ಸಲ್ಲದ ಅಪವಾದ-ನಿಂದನೆ, ಬಾಕಿ ವಸೂಲಿ.

    ವೃಷಭ: ಪ್ರೀತಿ ಪಾತ್ರರ ಆಗಮನ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ದಗಳಿಂದ ನಿಂದನೆ, ಅಕಾಲ ಭೋಜನ.

    ಮಿಥುನ: ಆತ್ಮೀಯರಿಂದ ಹಿತನುಡಿ, ಮನಸ್ಸಿನಲ್ಲಿ ಭಯ, ಸಾಧಾರಣ ಲಾಭ, ವ್ಯಾಪಾರದಲ್ಲಿ ಮಿಶ್ರಫಲ, ಮಕ್ಕಳಿಗೆ ಅನಾರೋಗ್ಯ.

    ಕಟಕ: ಆಕಸ್ಮಿಕ ಧನನಷ್ಟ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಜಯ, ಇಲ್ಲದ ಸಲ್ಲದ ತಕರಾರು, ಪರಸ್ಥಳ ವಾಸ, ಮೇಲಾಧಿಕಾರಿಗಳಿಂದ ತೊಂದರೆ.

    ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾತಿನ ಮೇಲೆ ಹಿಡಿತ ಅಗತ್ಯ, ಜನರಲ್ಲಿ ಕಲಹ, ಆರೋಗ್ಯ ವೃದ್ಧಿ, ಸುಖ ಭೋಜನ ಪ್ರಾಪ್ತಿ, ಶತ್ರುಗಳ ಬಾಧೆ ಹೆಚ್ಚು.

    ಕನ್ಯಾ: ಕೋರ್ಟ್ ಕೇಸ್‍ಗಳಲ್ಲಿ ಓಡಾಟ, ಕೆಲಸಗಳಲ್ಲಿ ಅತಿಯಾದ ಬುದ್ಧಿವಂತಿಕೆ, ದಾಂಪತ್ಯದಲ್ಲಿ ಸಾಮರಸ್ಯ.

    ತುಲಾ: ಇಷ್ಟವಾದ ವಸ್ತುಗಳ ಖರೀದಿ, ದೃಷ್ಟಿ ದೋಷ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ವಿವಾಹಕ್ಕೆ ಅಡೆತಡೆ, ರೋಗ ಬಾಧೆ.

    ವೃಶ್ಚಿಕ: ಅತೀ ವೇಗವಾಗಿ ವಿಷಯ ಗ್ರಹಿಸುವಿರಿ, ವಾಹನ ಖರೀದಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

    ಧನಸ್ಸು: ದ್ರವ್ಯ ವ್ಯಾಪಾರಿಗಳಿಗೆ ಲಾಭ, ವಿದೇಶ ಪ್ರಯಾಣ, ಕೃಷಿಕರಿಗೆ ಲಾಭ, ಮಹಿಳೆಯರಿಗೆ ವಿಶೇಷ ಲಾಭ, ಕಾರ್ಯದಲ್ಲಿ ವಿಳಂಬ.

    ಮಕರ: ಹೆತ್ತವರಲ್ಲಿ ಪ್ರೀತಿ, ನಂಬಿಕಸ್ಥರಿಂದ ಮೋಸ, ಹೊಗಳಿಕೆ ಮಾತಿಗೆ ಮರುಳಾಗದಿರಿ, ವೃಥಾ ತಿರುಗಾಟ, ಗುರು ಹಿರಿಯರಲ್ಲಿ ಭಕ್ತಿ, ಪರಸ್ತ್ರೀಯಿಂದ ತೊಂದರೆ.

    ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ನಿಂದನೆ, ಆಕಸ್ಮಿಕ ಧನಲಾಭ.

    ಮೀನ: ಸ್ತ್ರೀಯರಿಗೆ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ಶತ್ರುತ್ವ ಹೆಚ್ಚಾಗುವುದು, ಪ್ರತಿಭೆಗೆ ತಕ್ಕ ಗೌರವ.