Tag: publictv

  • ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ- ರಾಮಲಿಂಗಾ ರೆಡ್ಡಿಗೆ ಸಾರಿಗೆ ಜೊತೆ ಮುಜರಾಯಿ

    ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ- ರಾಮಲಿಂಗಾ ರೆಡ್ಡಿಗೆ ಸಾರಿಗೆ ಜೊತೆ ಮುಜರಾಯಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಂಪುಟದ ಸಚಿವರಿಗೆ ಕೊನೆಗೂ ಖಾತೆ (Cabinet) ಹಂಚಿಕೆ ಮಾಡಲಾಗಿದೆ. ಸಿಎಂ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅಂಕಿತ ಹಾಕಿದ ತಕ್ಷಣವೇ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

    ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ (Ramalingareddy) ಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಲಾಗಿದೆ. ಸಮಾಜ ಕಲ್ಯಾಣ ಅಥವಾ ಕಂದಾಯ ಖಾತೆ ಬಗ್ಗೆ ಒಲವು ಹೊಂದಿದ್ದರೆನ್ನಲಾದ ಕೆ.ಹೆಚ್ ಮುನಿಯಪ್ಪಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಜೊತೆಗೆ ಗ್ರಾಹಕ ವ್ಯವಹಾರಗಳ ಖಾತೆ ಜವಾಬ್ದಾರಿ ನೀಡಲಾಗಿದೆ.

    ಡಿಸಿಎಂ ಡಿಕೆಶಿಗೆ ಬೆಂಗಳೂರು ನಗರ ಅಭಿವೃದ್ಧಿ, ಜಲಸಂಪನ್ಮೂಲ, ಆರ್.ಬಿ.ತಿಮ್ಮಾಪುರ ಬಳಿ ಇದ್ದ ಮುಜರಾಯಿ ಖಾತೆ ರಾಮಲಿಂಗಾ ರೆಡ್ಡಿಗೆ ಹೆಚ್ಚುವರಿ ಖಾತೆಯಾಗಿ ನೀಡಲಾಗಿದೆ. ಎಂಬಿ ಪಾಟೀಲ್‍ಗೆ ಹೆಚ್ಚುವರಿ ಆಗಿ ನೀಡಲಾಗಿದ್ದ ಐಟಿಬಿಟಿ ಸಿಎಂ ಬಳಿಯೇ ಉಳಿಸಿಕೊಂಡಿದ್ದಾರೆ. ಎಂ.ಸಿ.ಸುಧಾಕರ್‍ಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಮೊದಲು ವೈದ್ಯಕೀಯ ಶಿಕ್ಷಣ ನೀಡಲಾಗಿತ್ತು. ಶರಣ ಪ್ರಕಾಶ್ ಪಾಟೀಲ್‍ಗೆ ವೈದ್ಯಕೀಯ ಶಿಕ್ಷಣ ನೀಡಲಾಗಿದೆ. ಮೊದಲು ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು ಎರಡು ಖಾತೆಯನ್ನ ಇಬ್ಬರಿಗೆ ಅದಲು ಬದಲು ಮಾಡಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಅತ್ತೆ-ಸೊತೆ ಇದ್ರೆ ಯಾರಿಗೆ ದುಡ್ಡು ಹಾಕಬೇಕು, ಮನೆ ಯಜಮಾನಿ ಯಾರು? – ಗ್ಯಾರಂಟಿ ಬಗ್ಗೆ ಡಿಕೆಶಿ ಮಾತು

    ಯಾರಿಗೆ ಯಾವ ಖಾತೆ..?:
    * ಸಿದ್ದರಾಮಯ್ಯ – ಹಣಕಾಸು, ಸಂಪುಟ ವ್ಯವಹಾರ, ಡಿಪಿಎಆರ್, ಗುಪ್ತಚರ, ವಾರ್ತಾ ಇಲಾಖೆ, ಐಟಿಬಿಟಿ
    * ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
    * ಪರಮೇಶ್ವರ್ – ಗೃಹ ಇಲಾಖೆ
    * ಹೆಚ್.ಕೆ.ಪಾಟೀಲ್ – ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
    * ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು
    * ಕೆ.ಜೆ.ಜಾರ್ಜ್ – ಇಂಧನ
    * ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ
    * ರಾಮಲಿಂಗಾರೆಡ್ಡಿ – ಸಾರಿಗೆ-ಮುಜರಾಯಿ
    * ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಇಲಾಖೆ
    * ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
    * ಜಮೀರ್ ಅಹಮದ್ – ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ
    * ಕೃಷ್ಣಬೈರೇಗೌಡ – ಕಂದಾಯ ಇಲಾಖೆ
    * ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    * ಚಲುವರಾಯಸ್ವಾಮಿ – ಕೃಷಿ ಇಲಾಖೆ
    * ಕೆ. ವೆಂಕಟೇಶ್- ಪಶು ಸಂಗೋಪನೆ, ರೇಷ್ಮೆ
    * ಡಾ.ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ
    * ಈಶ್ವರ್ ಖಂಡ್ರೆ – ಅರಣ್ಯ ಮತ್ತು ಪರಿಸರ
    * ಕೆ.ಎನ್.ರಾಜಣ್ಣ – ಸಹಕಾರ

    * ಶರಣಬಸಪ್ಪ ದರ್ಶನಾಪುರ್ – ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ
    * ಶಿವಾನಂದ ಪಾಟೀಲ್ – ಜವಳಿ, ಸಕ್ಕರೆ, ಕೃಷಿಉತ್ಪನ್ನ ಮಾರುಕಟ್ಟೆ
    * ಆರ್ ಬಿ ತಿಮ್ಮಾಪುರ್ – ಅಬಕಾರಿ
    * ಎಸ್‍ಎಸ್ ಮಲ್ಲಿಕಾರ್ಜುನ್ – ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ
    * ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ
    * ಡಾ.ಶರಣಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ ಇಲಾಖೆ
    * ಮಂಕಾಳ ಸುಬ್ಬವೈದ್ಯ – ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ
    * ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
    * ರಹೀಂ ಖಾನ್ – ಪೌರಾಡಳಿತ, ಹಜ್
    * ಡಿ ಸುಧಾಕರ್ – ಮೂಲಸೌಕರ್ಯ, ಯೋಜನೆ ಮತ್ತು ಸಾಂಖ್ಯಿಕ
    * ಬೈರತಿ ಸುರೇಶ್ – ನಗರಾಭಿವೃದ್ಧಿ (ಬೆಂಗಳೂರು ಹೊರತು ಪಡಿಸಿ)
    * ಸಂತೋಷ್ ಲಾಡ್ – ಕಾರ್ಮಿಕ, ಕೌಶಲ್ಯಾಭಿವೃದ್ಧಿ
    * ಎನ್.ಎಸ್.ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
    * ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
    * ಡಾ.ಎಂಸಿ ಸುಧಾಕರ್ – ಉನ್ನತ ಶಿಕ್ಷಣ
    * ಬಿ ನಾಗೇಂದ್ರ – ಯುವಜನ ಸೇವೆ, ಕ್ರೀಡೆ, ಮತ್ತು ಕನ್ನಡ ಸಂಸ್ಕೃತಿ ಇಲಾಖೆ

  • ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!

    ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!

    – ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್

    ಮೊದಲು ಈ ಫೋಟೋದಲ್ಲಿ ಕಾಣುತ್ತಿರುವ ಸೀರೆಯ ಕಥೆ ಹೇಳಿಬಿಡ್ತೀನಿ. ನಿನ್ನೆ (ಮೇ 21) ಕೆ.ಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ (KR Circle Underpass) ನೀರು ತುಂಬಿ ಕಾರಿನಲ್ಲಿ ಮುಳುಗಿದ್ದ ಕುಟುಂಬದವರು ಸಹಾಯಕ್ಕಾಗಿ ಅರಚಾಡುತ್ತಿದ್ರು. ಲೋಕಾಯುಕ್ತ ಕಚೇರಿಯ ಬಳಿ ಇದ್ದ ರಿಪೋರ್ಟರ್ ನಾಗೇಶ್ ಅರಚಾಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸುತ್ತಾರೆ. ಅವರ ಜೊತೆಗಿದ್ದ ʻಪಬ್ಲಿಕ್ ಟಿವಿʼ (Public Tv) ಕ್ಯಾಬ್ ಚಾಲಕ ವಿಜಯ್ (Public Hero Vijay) ಈಜು ಬರುತ್ತಿದ್ರಿಂದ ಹಿಂದೆ-ಮುಂದೆ ಯೋಚಿಸದೇ ನೀರಿನೊಳಗೆ ದುಮುಕಿ ಅಲ್ಲಿದ್ದವರ ರಕ್ಷಣೆಗೆ ಮುಂದಾಗುತ್ತಾರೆ.

    ನಾಗೇಶ್ (Public Hero Nagesh) ರಸ್ತೆಯಲ್ಲಿ ಹೋಗೋ ಬರೋರನ್ನೇಲ್ಲಾ ನಿಲ್ಲಿಸಿ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ತಾ ಇರ್ತಾರೆ. ಅಷ್ಟರಲ್ಲಿ ನಾಗೇಶ್ ಕಣ್ಣಮುಂದೆ ದೇವತೆ ಕಾಣಿಸಿದ್ದಾರೆ. ಅಂಡರ್ ಪಾಸ್‌ನ ಹೊರಗೆ ನಿಂತಿದ್ದ ಮಹಿಳೆ ಈ ಅರಚಾಟ, ಒದ್ದಾಟ ನೋಡಿ ಕ್ಷಣಕಾಲ ಯೋಚಿಸದೇ ತಾನು ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ರಂತೆ. ಇದನ್ನು ಇಲ್ಲೇ ಕಂಬಕ್ಕೆ ಕಟ್ಟಿ ಕೆಳಗೆ ಇದ್ದವರಿಗೆ ಕೊಡಿ.. ಸೀರೆ ಹಿಡ್ಕೊಂಡು ಮೇಲೆ ಬರಲಿ ಅಂದುಬಿಟ್ರಂತೆ. ನಾಗೇಶ್‌ಗೆ ಮಾತೇ ಬಾರದ ಸ್ಥಿತಿ. ಇನ್ನು ಸೀರೆ ಬಿಚ್ಚಿಕೊಟ್ಟ ಮಹಿಳೆಯನ್ನು ನೋಡಿ ಅಲ್ಲೆ ಇದ್ದ ಇನ್ನುಳಿದ ಮಹಿಳೆಯರು ದುಪ್ಪಟ್ಟಾವನ್ನು ಕೊಟ್ಟಿದ್ದಾರೆ. ಅಷ್ಟರಲ್ಲಿ ಕ್ವಿಕ್ ರೆಸ್ಕ್ಯೂ ಟೀಮ್ ವಾಹನ ರಸ್ತೆಯಲ್ಲಿ ಪಾಸ್ ಆಗ್ತಿರೋದನ್ನು ನೋಡಿದ ನಾಗೇಶ್ ತಕ್ಷಣ ಅವರಿಗೆ ಮನವಿ ಮಾಡಿಕೊಂಡು ಸ್ಥಳಕ್ಕೆ ಕರೆಸಿದ್ದಾರೆ.

    ಆ ಸೀರೆ ಬಿಚ್ಚಿ ಕೊಟ್ಟ ಮಹಿಳೆಗೆ ಪಕ್ಕದಲ್ಲಿಯೇ ನಿಂತ ವ್ಯಕ್ತಿಯೋರ್ವ ಶರ್ಟು ಬಿಚ್ಚಿ ಕೊಟ್ಟು ಆಕೆಯನ್ನು ಆಟೋದಲ್ಲಿ ಕೂರಿಸಿ ಕಳಿಸಿದ್ದಾರೆ. ಆ ಮಹಾ ತಾಯಿ ಯಾರೂ ಅನ್ನೋದೇ ಗೊತ್ತಾಗಲಿಲ್ಲ. ಆದ್ರೇ ಆಕೆಯ ಸೀರೆ ಅಲ್ಲಿದ್ದ ಜೀವಗಳನ್ನು ಕಾಪಾಡಿದೆ. ಇನ್ನು ವಿಜಯ್ ಕಾರಿನೊಳಗೆ ಇದ್ದ ನಾಲ್ವರನ್ನು ಹೇಗೋ ಎತ್ತಿ ಕಾರಿನ ಮೇಲೆ ಕೂರಿಸಿ ಜೀವವನ್ನು ಉಳಿಸಿದ್ದಾರೆ.

    ಇನ್ನೋರ್ವ ಯುವತಿಯನ್ನು ಎಳೆಯುವಾಗ ಆಕೆ ಸೀಟಿನ ಮಧ್ಯ ಭಾಗಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ತುಂಬಾ ಹೊತ್ತು ಒದ್ದಾಡಿದ ವಿಜಯ್ ಕಷ್ಟ ಪಟ್ಟು ಆಕೆಯನ್ನು ಮೇಲೆತ್ತಿ ರೆಸ್ಕ್ಯೂ ಟೀಮ್ ಗೆ ಒಪ್ಪಿಸಿದ್ದಾರೆ. ಆದ್ರೇ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬವಾಗಿದೆ. ಅಲ್ಲೂ ಕೂಡ ನಮ್ಮ ವರದಿಗಾರ ಲೋಕೇಶ್ ಸೇರಿದಂತೆ ಬೇರೆ ಚಾನೆಲ್‌ನವರು ಗಲಾಟೆ ಮಾಡಿದ ಮೇಲೆ ಟ್ರೀಟ್‌ಮೆಂಟ್‌ ಶುರುಮಾಡಿದ್ದಾರೆ. ಅಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ವಿಜಯ್, ನಾಗೇಶ್ ಕಣ್ಣಲ್ಲಿ ನಾಲ್ವರನ್ನು ಉಳಿಸಿದ ಸಂಭ್ರಮಕ್ಕಿಂತ ಆ ಯುವತಿಯ ಪ್ರಾಣ ಉಳಿಸಿಕೊಳ್ಳೋಕೆ ಆಗಿಲ್ಲವಲ್ಲ ಅಂತಾ ಅದ ನೋವೆ ಹೆಚ್ಚಿತ್ತು. ಜೀವ ಪಣಕ್ಕಿಟ್ಟು ಬೇರೆಯವರ ಬದುಕು ಉಳಿಸಲು ವಿಜಯ್ ಸಾಹಸ, ಸಾರ್ವಜನಿಕ ಸ್ಥಳದಲ್ಲಿ ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ಟ ಮಹಾತಾಯಿ ಇವರನ್ನೆಲ್ಲ ನೋಡುವಾಗ ನಮ್ಮ ನಡುವೆ ಅದೆಂಥ ಅದ್ಭುತ ಗುಣವಿರುವ ಮನುಷ್ಯರು ಇರುತ್ತಾರಲ್ಲ ಅಂತಾ ಅನಿಸುತ್ತಿದೆ.

  • ಬಿಗ್ ಬುಲೆಟಿನ್ 15 November 2022 Part 1

    ಬಿಗ್ ಬುಲೆಟಿನ್ 15 November 2022 Part 1

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬುಲೆಟಿನ್ 15 November 2022 Part 2

    ಬಿಗ್ ಬುಲೆಟಿನ್ 15 November 2022 Part 2

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬುಲೆಟಿನ್ 15 November 2022 Part 3

    ಬಿಗ್ ಬುಲೆಟಿನ್ 15 November 2022 Part 3

    Live Tv
    [brid partner=56869869 player=32851 video=960834 autoplay=true]

  • ಸರಳವಾಗಿ ಮಾಡಿ ಮಟನ್ ಮಸಾಲಾ

    ಸರಳವಾಗಿ ಮಾಡಿ ಮಟನ್ ಮಸಾಲಾ

    ನಾನ್‍ವೆಜ್ ಪ್ರಿಯರು ಪ್ರತಿ ವೀಕೆಂಡ್‍ನಲ್ಲಿ ಮಟನ್ ಮಸಾಲ, ಕಬಾಬ್, ಬಿರಿಯಾನಿ ಎಂದು ರುಚಿಯಾದ ಅಡುಗೆ ಮಾಡುತ್ತಾರೆ. ಆದರೆ ನೀವು ಇಂದು ರುಚಿ ರುಚಿಯಾಗಿ ಹೋಟೆಲ್‍ನಲ್ಲಿ ಮಾಡುವ ಹಾಗೇ ಮಟನ್ ಮಸಾಲೆ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಗಳು:
    * ಮೆಂತೆ ಸೊಪ್ಪು
    * ಪುದೀನಾ ಸೊಪ್ಪು
    * ಶುಂಠಿ, ಬೆಳ್ಳುಳ್ಳಿ
    * ಈರುಳ್ಳಿ- 2
    * ಅಡುಗೆ ಎಣ್ಣೆ- 1 ಕಪ್
    * ಚಕ್ಕೆ, ಲವಂಗ
    * ಕರಿ ಮೆಣಸು – 3 ಟೀಸ್ಪೂನ್
    * ಗಸಗಸೆ- 2 ಟೀಸ್ಪೂನ್
    * ಹಸಿ ಮೆಣಸಿನಕಾಯಿ- 4 ರಿಂದ 5
    * ತೆಂಗಿನ ಕಾಯಿ- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು
    * ಮಟನ್- 1 ಕೆಜಿ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಚಕ್ಕೆ, ಲವಂಗ, ಕರಿ ಮೆಣಸು, ಗಸಗಸೆ ಹಾಕಿ ಹುರಿದುಕೊಳ್ಳಿ.

    * ನಂತರ ಇದಕ್ಕೆ ಈರುಳ್ಳಿ ಹಾಕಿ, ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಬೇಕು.

    * ಬಳಿಕ ಅದೇ ಬಾಣಲೆಗೆ ಹಸಿ ಮೆಣಸು, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಫ್ರೈ ಮಾಡಿಕೊಳ್ಳಬೇಕು.

    * ನಂತರ ಮಿಕ್ಸಿ ಜಾರಿಗೆ ತೆಂಗಿನ ಕಾಯಿ ಹಾಕಿ, ಫ್ರೈ ಮಾಡಿದ ಮಸಲಾ ಹಾಕಿ ರುಬ್ಬಿಕೊಳ್ಳಬೇಕು.

    * ಬಳಿಕ ಒಂದು ಕುಕ್ಕರ್‌ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿ.

    * ಬಳಿಕ ಮಟನ್, ಉಪ್ಪು ಹಾಕಿ ಅದನ್ನು ಚೆನ್ನಾಗಿ ಹುರಿದುಕೊಳ್ಳಿ, ಬಳಿಕ ರುಬ್ಬಿದ ಮಿಶ್ರಣ ಹಾಕಿ 2 ವಿಜಿಲ್ ಬರಿಸಬೇಕು.

    * ಈಗ ರುಚಿಕರವಾದ ಮಟನ್ ಮಸಾಲಾ ಸವಿಯಲು ಸಿದ್ಧವಾಗುತ್ತದೆ.

  • ಬಿಗ್ ಬುಲೆಟಿನ್ 17 OCTOBER 2022 Part-1

    ಬಿಗ್ ಬುಲೆಟಿನ್ 17 OCTOBER 2022 Part-1

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬುಲೆಟಿನ್ 17 OCTOBER 2022 Part-2

    ಬಿಗ್ ಬುಲೆಟಿನ್ 17 OCTOBER 2022 Part-2

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬುಲೆಟಿನ್ 17 OCTOBER 2022 Part-3

    ಬಿಗ್ ಬುಲೆಟಿನ್ 17 OCTOBER 2022 Part-3

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬುಲೆಟಿನ್ 17 OCTOBER 2022 Part-4

    ಬಿಗ್ ಬುಲೆಟಿನ್ 17 OCTOBER 2022 Part-4

    Live Tv
    [brid partner=56869869 player=32851 video=960834 autoplay=true]