Tag: publictv

  • ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

    ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯಶ್ ಅವರ ಹೊಸ ಹೇರ್ ಸ್ಟೈಲ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಯಶ್ ಕೇಶ ವಿನ್ಯಾಸ ಮಾಡಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮುಂಬೈನ ಖ್ಯಾತ ಹೇರ್ ಸ್ಟೈಲಿಸ್ಟ್ ಆಗಿರುವ ಬಾಲಿವುಡ್ ವಲಯದಲ್ಲಿ ಆಲಿಮ್ ಹಕೀಮ್ ಅವರ ಸಲೂನ್‍ಗೆ ಯಶ್ ಹೋಗಿದ್ದಾರೆ. ಆಲಿಮ್ ಹಕೀಮ್ ಘಟಾನುಘಟಿ ಸೆಲೆಬ್ರಿಟಿಗಳಿಗೆ ಕೇಶ ವಿನ್ಯಾಸ ಮಾಡುತ್ತಾರೆ. ಅಮಿತಾಭ್ ಬಚ್ಚನ್, ಸಂಜತ್ ದತ್, ಹೃತಿಕ್ ರೋಷನ್, ಹಾರ್ದಿಕ್ ಪಾಂಡ್ಯ ಮುಂತಾದ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲ್ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತಿದೆ. ಯಶ್ ಅವರು ಆಲಿಮ್ ಹಕೀಮ್ ಸಲೂನ್‍ಗೆ ಭೇಟಿ ನೀಡಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಆಲಿಮ್ ಹಕೀಮ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಾವಿರಾರು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ದನ್ನೂ ಓದಿ: ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

     

    View this post on Instagram

     

    A post shared by Aalim Hakim (@aalimhakim)

    ಇತ್ತೀಚೆಗೆ ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ದೇಶ, ವಿದೇಶಗಳಲ್ಲಿ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಯಶ್ ಉದ್ದ ಕೂದಲು ಮೂಲಕವಾಗಿ ಮಿಂಚಿದ್ದರು. ಅಭಿಮಾನಿಗಳು ಯಶ್ ಅವರ ಉದ್ದ ಗಡ್ಡ, ಕೂದಲಿನ ಸ್ಟೈಲ್ ಇಷ್ಟವಾಗಿತ್ತು. ಇದೀಗ ಕೆಜಿಎಫ್2 ಸಿನಿಮಾದಲ್ಲೂ ಯಶ್ ಅದೇ ಖಡಕ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

  • ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    – ಪೈರಸಿ, ಕಳ್ಳರಿಗೆ ನಾನು ಹೆದರಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಹುನೀರಿಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ಕೋಟಿಗೊಬ್ಬ3. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತಾಗಿ ಕಿಚ್ಚ ಕೆಲವು ವಿಚಾರಗಳನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.


    ಕೋಟಿಗೊಬ್ಬ 3 ಸಿನಿಮಾ ಸುದೀಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಎರಡು ಸಿನಿಮಾ ರಿಲೀಸ್ ಆಗುತ್ತಿದ್ದು, ಖುಷಿಯಾಗುತ್ತಿದೆ. ಕಥೆ ಇಷ್ಟ ಆಗಿದೆ, ಸಿನಿಮಾ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಹುಚ್ಚ ಸಿನಿಮಾದಿಂದ ಶುರು ಮಾಡಿದರೆ, ಆ ಕಥೆ ಹೇಗೆ ಹೇಳಬೇಕೊ ಹಾಗೇ ಹೇಳಿದ್ದೇವೆ. ಹಾಗೇ ಈ ಕಥೆ ಹೇಗೆ ಹೇಳಬೇಕೊ ಹಾಗೆ ಹೇಳಿದ್ದೇವೆ ಎಂದಿದ್ದಾರೆ.

    ವಾಪಾಸು ಒಂದು ಪಯಣ ಶುರುವಾಗಿದೆ. ಕೊರೊನಾ ಸಮಯದಲ್ಲಿ ತುಂಬಾ ಎಫೆಕ್ಟ್ ಆಗಿದೆ. ಎಷ್ಟು ಜನ ಕೆಲಸ ಹೋಗಿದೆ. ಹಾಗಂತ ಕೆಲಸ ಮಾಡದು ನಿಲ್ಲಸಲ್ಲ ಎಂದಿದ್ದಾರೆ. ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ಅರ್ಜುನ್ ಮ್ಯೂಸಿಕ್ ಚೆನ್ನಾಗಿದೆ. ಹೊರ ದೇಶದ ರೋಡ್‍ಗಳಲ್ಲಿ ಆ್ಯಕ್ಷನ್ ಸಿಕ್ವೇಲ್‍ಗಳು ಚೆನ್ನಾಗಿದೆ. 50-30 ಕಾರುಗಳು ಚೇಸಿಂಗ್ ನೋಡೊಕೆ ಚೆನ್ನಾಗಿತ್ತು. ನನಗೆ ಹೊಸ ಅನುಭವವಾಗಿದೆ. ಪೈರಸಿಗೆ ಹೆದರಲ್ಲ. ಕಳ್ಳರಿಗೆ ನಾನು ಭಯ ಪಡಲ್ಲ. ನನ್ನ ಫ್ಯಾನ್ಸ್ ನಿಂದಲೇ ನಾನು ಇಲ್ಲಿ ಇರೋದು ಎಂದು ಹೇಳಿದ್ದಾರೆ.

  • ದಸರಾ ಸ್ತಬ್ಧಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

    ದಸರಾ ಸ್ತಬ್ಧಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

    ಮೈಸೂರು:ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ನಿರ್ಮಾಣದ ಸಿದ್ಧತಾ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದ್ದಾರೆ.

    ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ರಂಗಮಂದಿರ ಮಂಟಪದ ಎದುರಿನ ಮಳಿಗೆಯಲ್ಲಿ ನಿರ್ಮಿಸುತ್ತಿರುವ ಸ್ತಬ್ಧಚಿತ್ರ ಪರಿಶೀಲನೆ ಮಾಡಿದ್ದಾರೆ. ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದ ಕಲಾವಿದರ ಜೊತೆಗೆ ಸಮಾಲೋಚಿಸಿ ಮಾಹಿತಿ ಪಡೆದರು. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ತೀರ್ಮಾನದಂತೆ ಸ್ತಬ್ಧಚಿತ್ರಗಳನ್ನು ಕಡಿಮೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಬಾರಿ 6 ಸ್ತಬ್ಧಚಿತ್ರ ಪಾಲ್ಗೊಳ್ಳಲಿವೆ. ಅ.13ರ ಸಂಜೆ ಹೊತ್ತಿಗೆ ಸಂಪೂರ್ಣ ಸಿದ್ಧವಾಗಲಿದೆ. ಕಲಾತಂಡ ಭಾಗವಹಿಸಲಿವೆ. ದಸರಾ ಮಹೋತ್ಸವದ ಎಲ್ಲ ಸಿದ್ಧತೆ ಮುಗಿಯುತ್ತಿವೆ. ತಾಲೀಮಿಗೆ ಆನೆಗಳು ಸಜ್ಜಾಗಿವೆ ಎಂದರು. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಸರಳ ದಸರಾ ಮಹೋತ್ಸವ ಆಚರಣೆಯಾಗಿದ್ದರಿಂದ ಅಧಿಕಾರೇತರ ಸದಸ್ಯರನ್ನು ರಚನೆ ಮಾಡದೆ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ದಸರಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗುತ್ತಿವೆ ಎಂದು ಹೇಳಿದರು.

  • ಸಿದ್ದರಾಮಯ್ಯಗೆ ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲುತನವಿದೆ: ಎಚ್. ವಿಶ್ವನಾಥ್

    ಸಿದ್ದರಾಮಯ್ಯಗೆ ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲುತನವಿದೆ: ಎಚ್. ವಿಶ್ವನಾಥ್

    – ಸಿದ್ದರಾಮಯ್ಯ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ
    – ಬಿಎಸ್‍ವೈ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು

    ಮೈಸೂರು: ಯಡಿಯೂರಪ್ಪ ಅವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, ಯಡಿಯೂರಪ್ಪ ಅವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ದಾಳಿ ಖಂಡಿಸಿ ಹೇಳಿಕೆ ನೀಡಿ ವೀರಶೈವ ಲಿಂಗಾಯತ ಸಮುದಾಯ ಮೆಚ್ಚಿಸಲು ಹೋಗುತ್ತಿದ್ದೀರಾ? ಇದು ನಿಮ್ಮ ಉದ್ದೇಶವಾಗಿದ್ದರೆ ನಿಮ್ಮಂಥ ದಡ್ಡರು ಯಾರು ಇಲ್ಲ. ಯಾಕೆಂದರೆ ವೀರಶೈವ – ಲಿಂಗಾಯತರು ಬುದ್ದಿವಂತ ಸಮುದಾಯ. ನಿಮ್ಮ ಹೇಳಿಕೆಯಿಂದ ಅವರ ಮತ ನಿಮಗೆ ಬರುತ್ತದೆ ಎಂಬುದು ನಿಮ್ಮ ದಡ್ಡತನ ಎಂದರು. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಯಡಿಯೂರಪ್ಪ ಅವರೇ ಈ ದಾಳಿಗಳನ್ನು ಸ್ವಾಗತಿಸಿರುವಾಗ ನಿಮ್ಮದೇನೂ? ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಭ್ರಷ್ಟಾಚಾರದ ಪರವೋ ವಿರುದ್ದವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಜಿಂದಾಲ್ ವಿಚಾರ ಬಂದಾಗಲೂ ವಿರೋಧ ಪಕ್ಷದವರು ಧ್ವನಿ ಎತ್ತಲಿಲ್ಲ. ಈಗ ಐಟಿ ದಾಳಿ ನಡೆದರೆ ದಾಳಿಯನ್ನೆ ರಾಜಕೀಯ ಎಂದು ಆರೋಪ ಮಾಡುತ್ತೀರಾ? ನೀವು ಭ್ರಷ್ಟರ ಪರವಾ? ಎಂದು ಸಿದ್ದರಾಮಯ್ಯಗೆ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ

    ತಮ್ಮ ಹಗರಣ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನೆ ಮುಚ್ಚಿದವರು ಸಿದ್ದರಾಮಯ್ಯ. ಅವರ ಆಡಳಿತ ಭ್ರಷ್ಟಾಚಾರ ಮುಕ್ತವಾಗಿರಲಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಮಹಾ ಭ್ರಷ್ಟಾಚಾರವೇ ನಡೆಯಿತು. ಅಂದು ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟರು. ಇಂದು ಕೂಡ ಐಟಿ ದಾಳಿ ಖಂಡಿಸಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಸಿದ್ದರಾಮಯ್ಯ ಆಡಳಿತವಾಧಿಯಲ್ಲಿ ಮುಚ್ಚಿರೋ ಲೋಕಾಯುಕ್ತವನ್ನು ಮತ್ತೆ ಆರಂಭಿಸಬೇಕು. ಇವತ್ತು ಯಾರಿಗೂ ಭಯವಿಲ್ಲ. ಮತ್ತೆ ಲೋಕಾಯುಕ್ತ ಆರಂಭಿಸಿ ಎಲ್ಲರಿಗೂ ಭಯ ಮುಟ್ಟಿಸಬೇಕು. ನನ್ನಂಥ ಪ್ರಾಮಾಣಿಕ ಇನ್ನೊಬ್ಬ ಇಲ್ಲ ಅಂತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಾರೆ. ಆದರೆ ರಮೇಶ್ ಕುಮಾರ್ ನಂಥ ಭ್ರಷ್ಟ ಇನ್ನೊಬ್ಬ ಇಲ್ಲ. ಅರಣ್ಯ ಭೂಮಿಯನ್ನೆ ನುಂಗಿದ ಭ್ರಷ್ಟ ರಮೇಶ್ ಕುಮಾರ್. ರಮೇಶ್ ಕುಮಾರ್ ಯಶಸ್ವಿನಿ ಯೋಜನೆ ಮುಚ್ಚಿ ರೈತರಿಗೆ ಅನ್ಯಾಯ ಮಾಡಿದರು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

    ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ರಾಷ್ಟ್ರ ರಾಜಕಾರಣಕ್ಕೆ ಬರ್ತಿನಿ ಎಂಬ ಧೈರ್ಯ ತೊರಬೇಕಿತ್ತು ಸಿದ್ದರಾಮಯ್ಯ. ಆದರೆ ಸಿದ್ದರಾಮಯ್ಯ ರಾಜಕೀಯ ಪುಕ್ಕಲುತನ ಪ್ರದರ್ಶನ ಮಾಡುತ್ತಿದ್ದಾರೆ. ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡುವ ಸಿದ್ದರಾಮಯ್ಯಗೆ ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲುತನವಿದೆ. ನೀವು ಹೇಗೆ ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡಲು ಸಮರ್ಥರು? ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಿ ಪ್ರಧಾನಿ ಆದರೆ ನನಗೆ ಸಂತೋಷ ಎಂದರು.

  • ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

    ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

    ಕಾರವಾರ: ಪಕ್ಷದ ವರಿಷ್ಠರು, ಸಂಘಟನೆಗೆ ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

    ಇಂದು ಶಿರಸಿ ನಗರದ ಗೋಪಾಲಕೃಷ್ಣ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿಪೂಜೆಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಬೆಳೆಸಿದೆ. ಪಕ್ಷ ಎಂದಿಗೂ ನಮಗೆ ತಾಯಿಯಂತೆ, ವರಿಷ್ಠರು ಬಯಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ದಿಸಲು ಸಿದ್ದ ಎಂದಿದ್ದಾರೆ.

    ಪಕ್ಷವು ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೆ ಇಲ್ಲ, ಸಂಘಟನೆ ಅವರನ್ನು ಬೆಳಸಿದೆ. ಸಂಘಟನೆ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪಕ್ಷ ಕಟ್ಟಲು ರಾಜ್ಯಾದ್ಯಂತ ಪ್ರವಾಸ ಮಾಡುತಿದ್ದಾರೆ. ಬೈ ಎಲಕ್ಷನ್‍ನಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಯಡಿಯೂರಪ್ಪನವರ ನೇತ್ರತ್ವದಲ್ಲಿ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾದಳಗಳ ಸಹಜ ಪ್ರಕ್ರಿಯೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಸತ್ಯಕ್ಕೆ ದೂರವಾದದ್ದು, ಉಮೇಶ್, ಯಡಿಯೂರಪ್ಪ ಅವರ ಕಚೇರಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದು ನಿಜ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ ಎಂದರು. ಇದನ್ನೂ ಓದಿ: ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ

  • ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಭೋಪಾಲ್: ಮನೆಯಲ್ಲಿ ಹಣವವಿಲ್ಲದಿದ್ದರೆ ಮನೆ ಬಾಗಿಲು ಲಾಕ್ ಮಾಡಿ ಹೋಗುವ ಅವಶ್ಯಕತೆ ಏನಿತ್ತು ಎಂದು ಕಳ್ಳರು ಮನೆ ಮಾಲೀಕನಿಗೆ ಪಶ್ನಿಸಿ ಪತ್ರ ಬರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪತ್ರದಲ್ಲಿ ಏನಿದೆ?
    ಹಣವೇ ಇಲ್ಲದಿರುವಾಗ ಮನೆಯನ್ನು ಲಾಕ್ ಮಾಡುವ ಅಗತ್ಯವೇನಿತ್ತು? (ಜಬ್‍ಪೈಸೆ ನಹೀ ತೇ ತೋ ಲಾಕ್ ನಹಿ ಕರ್ನಾ ಥಾ ನಾ) ಎಂದು ಬರೆಯಲಾಗಿದೆ. ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ

    ಹಿನ್ನೆಲೆ ಏನು:
    ಭೋಪಾಲ್‍ನಿಂದ ಸ್ವಲ್ಪ ದೂರದಲ್ಲಿ ದೇವಾಸ್‍ನ ಸಿವಿಲ್ ಲೈನ್ ಪ್ರದೇಶದಲ್ಲಿ ಮಧ್ಯಪ್ರದೇಶದ ಉಪ ಜಿಲ್ಲಾಧಿಕಾರಿ ತ್ರಿಲೋಚನ್ ಗೌರ್ ಅವರ ಮನನೆ ಇದೆ. ಖಟೇಗಾಂವ್‌ ತಹಸಿಲ್‍ನಲ್ಲಿ (ಎಸ್‍ಡಿಎಮ್) ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಗೊಂಡಿರುವ ತ್ರಿಲೋಚನ್ ಗೌರ್ ಕಳೆದ 20 ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರು ಮನೆಗೆ ನುಗ್ಗಿದ್ದಾರೆ. ದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ತ್ರಿಲೋಚನ್ ಅವರು ಮರಳಿ ಮನೆಗೆ ಬಂದಾಗ ಮನೆಯಲ್ಲಿ ಇರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದವು, ಹಣ, ಚಿನ್ನಾಭರಣಗಳು ಕಳುವಾಗಿದ್ದವು. ತಕ್ಷಣ ಪೊಲೀಸರಲ್ಲಿ ದೂರು ನೀಡಿದ್ದಾರೆ. 30,000 ನಗದು ಮತ್ತು ಕೆಲವು ಆಭರಣಗಳನ್ನು ತ್ರಿಲೋಚನ್ ಗೌರ್ ಅವರ ಸರ್ಕಾರಿ ನಿವಾಸದಿಂದ ಕಳವು ಮಾಡಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ಉಮ್ರಾವ್ ಸಿಂಗ್ ಹೇಳಿದ್ದಾರೆ.

  • ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    – ಅಸ್ಪೃಶ್ಯತೆಯಂತಹ ನೀಚ ಪದ್ಧತಿಗಳನ್ನು ತೊಲಗಬೇಕು
    – ಧರ್ಮದ ಮೌಲ್ಯಗಳನ್ನು ತಿಳಿದುಕೊಳ್ಳಿ

    ನವದೆಹಲಿ:ಮದುವೆಯಾಗಲೆಂದೇ ಮತಾಂತರಗೊಳ್ಳುವುದು ತಪ್ಪು ಎಂದು (RSS)ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ಇಗಾಗಲೇ ಮತಾಂತರದ ಸುದ್ದಿ ಕುರಿತಾಗಿ ಎಲ್ಲ ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೀಗ ಈ ಕುರಿತಾಗಿ ಮೋಹನ್ ಭಾಗವತ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗ, ಹುಡುಗಿಯರು ಮದುವೆಯಾಗಲೆಂದೇ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದು ತಪ್ಪಾಗಿದೆ. ಹಿಂದೂ ಧರ್ಮದ ಪರಂಪರೆ ಮತ್ತು ಉದಾತ್ತತೆಯನ್ನು ಬಾಲ್ಯದಿಂದಲೇ ತಾಯಂದಿರು ಮಕ್ಕಳಿಗೆ ಕಲಿಸುತ್ತಿಲ್ಲ. ಹೀಗಾಗಿ ಮತಾಂತರ ನಡೆಯುತ್ತಿದೆ ಎಂದು ಮತಾಂತರ ಕುರಿತಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

    ಹಿಂದೂ ಹುಡುಗಿಯರು ಮತ್ತು ಹುಡುಗರು ಇತರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ? ಮದುವೆಯೆಂಬ ಅವರ ವೈಯಕ್ತಿಕ ಸ್ವಾರ್ಥಕ್ಕಾಗಿ ಆಗಿದೆ. ನಾವು ಮಕ್ಕಳಿಗೆ ಮನೆಯಲ್ಲಿ ನಮ್ಮ ಧರ್ಮದ ಮೌಲ್ಯಗಳನ್ನು ಕಲಿಸಬೇಕು. ನಮ್ಮ ಸ್ವಭಾವ, ನಮ್ಮ ಧರ್ಮ ಮತ್ತು ನಮ್ಮ ಪ್ರಾರ್ಥನೆ, ಸಂಪ್ರದಾಯಗಗಳ ಕುರಿತಾಗಿ ಗೌರವವನ್ನು ಬೆಳೆಸಬೇಕಿದೆ. ಒಟಿಟಿ (OTT) ಪ್ಲಾಟ್‍ಫಾರ್ಮ್‍ಗಳು ಮಕ್ಕಳಿಗೆ ಎಲ್ಲ ರೀತಿಯ ವಿಷಯಗಳನ್ನು ತೋರಿಸುತ್ತದೆ. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ನೋಡಬೇಕು, ನೋಡಬಾರದು ಎಂಬುದನ್ನು ತಿಳಿಸಿ ಹೇಳಬೇಕು. ಹಿಂದು ಸಮಾಜವನ್ನು ಸಂಘಟಿಸುವುದು  RSS ಗುರಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

    ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರಯಾಣ, ಉಡುಗೆ ಮತ್ತು ಮನೆ ಸೇರಿದಂತೆ ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಆರು ಮಂತ್ರಗಳು ಆಗಿವೆ. ಅಸ್ಪೃಶ್ಯತೆಯಂತಹ ನೀಚ ಪದ್ಧತಿ ತೊಲಗಬೇಕು ಎಂದು ಆಗ್ರಹಿಸಿದ್ದಾರೆ.

  • ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

    ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

    ಹುಬ್ಬಳ್ಳಿ: ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್ ಇಟ್ಟುಕೊಂಡು ಬಂದಿದ್ದವನಿಗೆ ಸಿಸಿಬಿ ಪೊಲೀಸ್ ಬಲೆ ಬೀಸಿ ಬಂಧಿಸಿರುವ ಘಟನೆ ಹುಬ್ಬಳ್ಳಿ ನಡೆದಿದೆ.

    ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಅಕ್ರಮ ಚಿನ್ನದ ಬೇಟೆಯಾಡಿದ್ದಾರೆ. ಹುಬ್ಬಳ್ಳಿ ನಗರದ ಗಿರಣಿ ಚಾಳದ ಏಳು ಮಕ್ಕಳ ತಾಯಿ ದೇವಸ್ಥಾನದ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಬಳಿಯಿಂದ 38 ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ದನ್ನೂಓದಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

    ಚೇತನ ದೇವೆಂದ್ರಪ್ಪ ಬಂಧಿತ ಆರೋಪಿಯಾಗಿದ್ದಾನೆ. ಈತ ಹುಬ್ಬಳ್ಳಿ ಕೇಶ್ವಾಪುರ ಮಧುರಾ ಎಸ್ಟೇಟ್ ನಿವಾಸಿಯಾಗಿದ್ದಾನೆ. ತನ್ನ ಪ್ಯಾಂಟ್‍ನ ಬೆಲ್ಟ್‍ನಲ್ಲಿ ಈ ಚಿನ್ನ ಇಟ್ಟುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಗೆ ಹಿಡಿದು ತಪಾಸಣೆ ಮಾಡಿದಾಗ ಪ್ಯಾಂಟಿನ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ. ದನ್ನೂ ಓದಿ:  ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    38 ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ಆರೋಪಿಯಿಂದ ವಶಕ್ಕೆ ಬರೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ. ದನ್ನೂ ಓದಿ:  ನಮ್ಮ ರಚನಾತ್ಮಕ ಸಲಹೆಗಳನ್ನು ಚೀನಾ ಒಪ್ಪಿಲ್ಲ: ಭಾರತೀಯ ಸೇನೆ

  • ಕೋವಿಡ್ ಲಸಿಕೆಗೆ ನೊಬೆಲ್ ಪ್ರಶಸ್ತಿ ಮಿಸ್ – ರಹಸ್ಯ ಬೆಳಕಿಗೆ

    ಕೋವಿಡ್ ಲಸಿಕೆಗೆ ನೊಬೆಲ್ ಪ್ರಶಸ್ತಿ ಮಿಸ್ – ರಹಸ್ಯ ಬೆಳಕಿಗೆ

    ನ್ಯೂಯಾರ್ಕ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಇಡೀ ಪ್ರಪಂಚವೇ ತತ್ತರಿಸಿ ಹೋಗಿತ್ತು. ಈ ಸಮಯದಲ್ಲಿ ಸಾಂಕ್ರಾಮಿಕಕ್ಕೆ ಮದ್ದಾಗಿದ್ದೇ ಕೋವಿಡ್ ಲಸಿಕೆ. ಈ ವರ್ಷ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ದೊರಕಬಹುದು ಎಂದು ಹಲವು ಊಹೆ ಮಾಡಿದ್ದರು. ಆದರೆ ಅದು ಸಿಗಲಿಲ್ಲ, ಇದಕ್ಕೆ ಕಾರಣ ಏನು ಎಂಬುದು ಬಯಲಾಗಿದೆ.

    ಪ್ರತಿವರ್ಷ ನೊಬೆಲ್ ಪುರಸ್ಕಾರಕ್ಕೆ ಅರ್ಹರ ಹೆಸರು ಶಿಫಾರಸು ಮಾಡಲು ಫೆ.1 ಕಡೆಯ ದಿನ ಅಷ್ಟರೊಳಗೆ ಸಲ್ಲಿಕೆಯಾದ ಹೆಸರುಗಳನ್ನು ಸ್ಟಾಕ್ ಹೋಂ ನೆರಾಯಲ್ ಸ್ವೀಡಿಶ್ ಅಕಾಡೆಮಿ(  Royal Swedish Academy of Sciences in Stockholm) ಪ್ರಶಸ್ತಿಗೆ ಪರಿಗಣತಿಸುತ್ತದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೂರರ ಪೋರಿ

    ಆದರೆ ಫೆ.1ಕ್ಕೆ ಮೊದಲೇ ಕೋವಿಡ್‍ಗೆ ಮೊದಲು ಎಂಆರ್‍ಎನ್‍ಎ (MRNA) ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತಾದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ನೀಡಲಾಗಿರಲಿಲ್ಲ. ಜೊತೆಗೆ ಅದರ ಪರಿಣಾಮಗಳ ಕುರಿತಾಗಿ ಹೆಚ್ಚನ ಮಾಹಿತಿ ಇರಲಿಲ್ಲ. ಹೀಗಾಗಿ ನಾಮನಿರ್ದೇಶನದ ವೇಳೆ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದವರ ಹೆಸರು ಸೇರ್ಪಡೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 7 ಮಕ್ಕಳ ನಾಪತ್ತೆ ಪ್ರಕರಣ – 4 ತಂಡ ಮಾಡಿ ಪತ್ತೆ ಕಾರ್ಯ

    ನೊಬೆಲ್ ಪ್ರಶಸ್ತಿ ನಾಮ ನಿರ್ದೇಶನ ಮಾಡಲು ನಿಗಧಿ ಕಾಲಮಿತಿ ಇರುತ್ತದೆ. ಇದರೊಟ್ಟಿಗೆ ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಕೋವಿಡ್ ಲಸಿಕೆ ಸಂಬಂಧಿದಂತೆ ಸಕಾಲದಲ್ಲಿ ಸಲ್ಲಿಕೆಯಾಗದಿದ್ದರಿಂದ ಪ್ರಶಸ್ತಿ ಪಟ್ಟಿಯಲ್ಲಿ ಇರಲಿಲ್ಲ. ಸಮಯ ಇದೇ ಕಾಯೋಣ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿಯ ಮಖ್ಯ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ಹೇಳಿದ್ದಾರೆ.

    ಕೋವಿಡ್ ಲಸಿಕೆ ನೀಜಕ್ಕೂ ಅದ್ಭುತವಾದ್ದು, ಮನುಕುಲಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಲಸಿಕೆ ತಯಾರಿಸಲು ಶ್ರಮಿಸಿದ ವಿಜ್ಞಾನಿಗಳಿಗೆ ಇಡೀ ಮನುಕುಲವೇ ಆಭಾರಿಯಾಗಿದೆ.

  • ತೆಂಗಿನಕಾಯಿ ತದ್ರೂಪಿ ಸೃಷ್ಠಿ ಯತ್ನ ಯಶಸ್ವಿ

    ತೆಂಗಿನಕಾಯಿ ತದ್ರೂಪಿ ಸೃಷ್ಠಿ ಯತ್ನ ಯಶಸ್ವಿ

    ತಿರುವನಂತಪುರಂ: ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯುತ್ತಾರೆ. ಈ ತೆಂಗಿನಕಾಯಿಯ ಮರದಿಂದ ಹಿಡಿದು ತೆಂಗಿನಕಾಯಿಯ ಸಿಪ್ಪೆಯವರೆಗೂ ಮನುಷ್ಯ ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾನೆ. ಇದರ ಕುರಿತಾಗಿ ವಿಜ್ಞಾನಿಗಳು ಸಂಶೋಧನೆಯೊಂದನ್ನು ಮಾಡಿದ್ದಾರೆ. ಜಗತ್ತಿನಲ್ಲಿ ಮೊದಲ ಬಾರಿಗೆ ತೆಂಗಿನ ಮರದ ತದ್ರೂಪಿ ಸೃಷ್ಠಿಸುವಲ್ಲಿ ಬೆಲ್ಜಿಯಂನ ಜೀವಶಾಸ್ತ್ರ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

    ಬೆಲ್ಜಿಯಂನ ಸಾಧನೆ: ತೆಂಗಿನ ಬೀಜವು ಒಂದೇ ಮೊಳಕೆಯೊಡೆದು ರೆಂಬೆಗಳಿಲ್ಲದೆ ನೇರವಾಗಿ ಬೆಳೆಯುವುದರಿಂದ ತದ್ರೂಪಿ ಸೃಷ್ಠಿ ಸಾಧ್ಯವಾಗಿರಲಿಲ್ಲ. ಹೊಸ ಕಸಿ ವಿಧಾನದ ಮೂಲಕವಾಗಿ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಈ ವಿಧಾನದಿಂದ ಒಂದೇ ಬೀಜದಿಂದ ಹಲವು ತೆಂಗಿನ ಸಸಿಗಳನ್ನು ತಯಾರಿಸ ಬಹುದಾಗಿದೆ. ಇದರಿಂದ ರೈತರಿಗೆ ತೆಂಗಿನ ತೋಟಕ್ಕೆ ಮಾಡುವ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ:  ವರುಣನ ಆರ್ಭಟಕ್ಕೆ ಬೆಳೆ ಹಾನಿ ಭೀತಿ – ಕೋಲಾರದಲ್ಲಿ ತೋಟದಲ್ಲೇ ಕೊಳೆಯುತ್ತಿವೆ ಟೊಮೆಟೋ

    ಕಸಿ ಮಾಡುವ ಮೂಲಕವಾಗಿ ತೆಂಗಿನ ತದ್ರೂಪಿ ಸೃಷ್ಠಿಸುವುದು ಹಾಗೂ ತೆಂಗಿನ ತಳಿಗಳನ್ನು ರಕ್ಷಿಸುವ ವಿಧಾನ ಇದಾಗಿದ್ದು, ತೆಂಗಿನ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಅಡಗಿದೆ. ಈ ತಂತ್ರಜ್ಞಾನ ಜನಸಾಮಾನ್ಯರ ಬಳಕೆಗೆ ಯಾವಾಗ ಸಿಗುತ್ತದೆ ಎನ್ನುವುದರ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ – ರಾಜ್ಯಾದ್ಯಂತ ಅಬ್ಬರಿಸ್ತಿದೆ ಮಳೆ

    ಬೆಲ್ಜಿಯಂನ ಕೆ.ಯು ಲೀವನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತದ್ರೂಪಿ ಸೃಷ್ಠಿಯ ಮೂಲಕ ತೆಂಗಿನ ಸಸಿಗಳು ಬೇಗ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತೆಂಗಿನ ವಂಶವಾಯಿ ಗುಣಗಳನ್ನು ದೀರ್ಘಾವಧಿಗೆ ಸಂರಕ್ಷಿಸಿಡುವ ವಿಧಾನವನ್ನೂ ಕಂಡುಹಿಡಿದಿದ್ದು, ಇದರಿಂದ ಭಾರತ ಮುಂತಾದ ದೇಶಗಳಲ್ಲಿ ತೆಂಗು ಬೆಳೆಗಾರರು ಎದುರಿಸುತ್ತಿರುವ ಹಳದಿರೋಗ, ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರುವಿಕೆ ಹಾಗೂ ತೆಂಗಿನ ತೋಟಗಳು ಹಳೆಯದಾಗಿರುವುದು ಮುಂತಾದ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.