Tag: publictv

  • ಪಬ್ಲಿಕ್‌ ಟಿವಿ ವಿದ್ಯಾಪೀಠ –  ಏಪ್ರಿಲ್‌ 27, 28ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

    ಪಬ್ಲಿಕ್‌ ಟಿವಿ ವಿದ್ಯಾಪೀಠ –  ಏಪ್ರಿಲ್‌ 27, 28ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

    ಬೆಂಗಳೂರು: ಎಲ್ಲಕ್ಕಿಂತ ಮಿಗಿಲಾದ ಸಂಪತ್ತು, ಯಾರಿಂದಲೂ ಕದಿಯಲಾಗದ ವಸ್ತು ಯಾವುದು ಎಂದರೆ ಅದು ವಿದ್ಯೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಕುಟುಂಬಕ್ಕೆ ಒಳ್ಳೆದಾಗುತ್ತದೆ ಎಂಬ ಕಾರಣಕ್ಕೆ ಈಗ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹಿಂದೆಂದಿಗಿಂತಲೂ ಭಾರೀ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಬಯಸಿದ್ದರೂ ಗುಣಮಟ್ಟದ ಶಿಕ್ಷಣ ಎಲ್ಲಿ ಸಿಗುತ್ತದೆ ಎನ್ನುವುದು ಬಹಳ ಕಷ್ಟ.  ಈ ಕಷ್ಟವನ್ನು ನಿವಾರಿಸಲು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿಮ್ಮ ಪಬ್ಲಿಕ್‌ ಟಿವಿ ವಿದ್ಯಾಪೀಠ (PUBLiC TV Vidhyapeeta) ಶೈಕ್ಷಣಿಕ ಮೇಳವನ್ನು ಆಯೋಜಿಸಿದೆ.

    ದ್ವಿತೀಯ ಪಿಯುಸಿ (Second PUC), ಪದವಿ (Degree) ಮುಗಿದ ನಂತರ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಯಾವ ಕೋರ್ಸ್‌ಗೆ ಸೇರಿಸಿದರೆ ಸೂಕ್ತ? ಯಾವ ಕಾಲೇಜಿನಲ್ಲಿ ಶುಲ್ಕ ಎಷ್ಟಿರುತ್ತೆ ಇತ್ಯಾದಿ ಗೊಂದಲ ಪೋಷಕರಲ್ಲಿ ಇರುವುದು ಸಹಜ.  ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಒಂದೇ ಸೂರಿನಡಿ ಸೂಕ್ತ ವೇದಿಕೆ ಕಲ್ಪಿಸಿ, ಗೊಂದಲ ನಿವಾರಣೆಗಾಗಿ ಪಬ್ಲಿಕ್‌ ಟಿವಿಯ 7ನೇ ಆವೃತ್ತಿಯ ವಿದ್ಯಾಪೀಠ ಶೈಕ್ಷಣಿಕ ಮೇಳ ಇದೇ ಏಪ್ರಿಲ್‌ 27 (ಶನಿವಾರ), ಏಪ್ರಿಲ್‌ 28(ಭಾನುವಾರ) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ (ಗೇಟ್‌ ನಂಬರ್‌ 4)  ನಡೆಯಲಿದೆ.

    ʼಇಂದಿನ ಕಲಿಕೆ, ನಾಳಿನ ದಾರಿ ದೀಪ’ ಎಂಬ ಘೋಷವಾಕ್ಯದೊಂದಿಗೆ ಆ್ಯಡ್‌6 ಸಹಯೋಗದಲ್ಲಿ ಆಯೋಜನೆಗೊಂಡಿರುವ ವಿದ್ಯಾಪೀಠ ಶೈಕ್ಷಣಿಕ ಮೇಳ  ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ  ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ.

    110ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ಕರ್ನಾಟಕದ (Karnataka) ಅತಿ ದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 110ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್ ಆರ್ಕಿಟೆಕ್ಚರ್, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ವಾಣಿಜ್ಯ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು, ಸಮೂಹ ಸಂವಹನ, ಎಂಬಿಎ ಸಂಸ್ಥೆಗಳು ವಿದ್ಯಾಪೀಠದಲ್ಲಿ ಭಾಗಿಯಾಗುತ್ತಿದ್ದಾರೆ.

    ಮತದಾನ ಮಾಡಿ, ಉಡುಗೊರೆ ಪಡೆಯಿರಿ
    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅದರಲ್ಲೂ ವಿಶೇಷವಾಗಿ  ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾವಣೆ ಮಾಡಿದ ವಿದ್ಯಾರ್ಥಿಗಳಿಗೆ ಆಕರ್ಷಕ ಉಡುಗೊರೆ ಸಿಗಲಿದೆ.

    ಚಿನ್ನದ ನಾಣ್ಯ,  ಸೈಕಲ್‌ ಉಡುಗೊರೆ: 
    ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಚಿನ್ನದ ನಾಣ್ಯ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು  ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ.

    ಪ್ಲಾಟಿನಂ ಪ್ರಾಯೋಜಕರು:
    ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಿಎಂಆರ್‌ ಯೂನಿವರ್ಸಿಟಿ,  ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌, ಗಾರ್ಡನ್‌ ಸಿಟಿ ಯೂನಿವರ್ಸಿಟಿ,  ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌  ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ,  ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌,  ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ,  ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌.

    ಸಿಲ್ವರ್‌ ಪ್ರಾಯೋಜಕರು:
    ಏಮ್ಸ್‌ ಇನ್‌ಸ್ಟಿಟ್ಯೂಟ್‌,  ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ್‌ ಯೂನಿವರ್ಸಿಟಿ, SEA ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌,  ಅಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ,  ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಚಾಣಾಕ್ಯ ಯುನಿವರ್ಸಿಟಿ, ಅಚಾರ್ಯ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌,  GMಯೂನಿವರ್ಸಿಟಿ.

    ಬ್ಯಾಂಕಿಂಗ್‌ ಪಾರ್ಟ್‌ನರ್‌
    ಕೆನರಾ ಬ್ಯಾಂಕ್

    ಬೆವರೇಜ್‌ ಪಾರ್ಟ್‌ನರ್‌
    ನಂದಿನಿ – ಕೆಎಂಎಫ್‌, ಬಾಯರ್ಸ್‌ ಕಾಫಿ, ಸ್ಪ್ರಿಂಗ್ಸ್‌ ಫುಡ್‌ ಆಂಡ್‌ ಬೆವರೇಜಸ್‌ ಪ್ರೈ. ಲಿ.

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಮಿಲೆಟ್‌ ಮಿಕ್ಸ್, ಆಡ್‌ ಜೆಲ್‌

    ದಿನಾಂಕ:  ಏಪ್ರಿಲ್‌ 27 ಮತ್ತು 28
    ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರು
    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

     

  • ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಕೊನೆಯ ದಿನ – ಬನ್ನಿ ಪಾಲ್ಗೊಳ್ಳಿ

    ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಕೊನೆಯ ದಿನ – ಬನ್ನಿ ಪಾಲ್ಗೊಳ್ಳಿ

    ಬೆಂಗಳೂರು: ಮಲ್ಲೇಶ್ವರದ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಬ್ಲಿಕ್ ಟಿವಿ (PUBLiC TV) ವಿದ್ಯಾಮಂದಿರ ((VidhyaMandira) ಮೆಗಾ ಎಜುಕೇಷನ್ ಎಕ್ಸ್‌ಪೋಗೆ ಮೊದಲ ದಿನ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು ಇಂದು ಸಂಜೆ ಈ ಕಾರ್ಯಕ್ರಮ ಕೊನೆಯಾಗಲಿದೆ.

    ಡಿಗ್ರಿ ಮುಗಿದ ಮೇಲೆ ಯಾವ ಕೋರ್ಸ್ ಮಾಡಬೇಕು? ಸ್ನಾತಕೋತ್ತರ ಪದವಿಯನ್ನ (Post Graduation) ಯಾವ ಕಾಲೇಜಿನಲ್ಲಿ ಮಾಡಬಹುದು? ಯಾವ ಕ್ಷೇತ್ರ ತೆಗೆದುಕೊಂಡರೆ ಒಳ್ಳೆಯದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ವಿದ್ಯಾಮಂದಿರ ಎರಡನೇ ಆವೃತ್ತಿಯನ್ನು ಆಯೋಜನೆ ಮಾಡಿದೆ. ಇದನ್ನೂ ಓದಿ: ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್

    ಪ್ರಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ Ad6 ಸಹಯೋಗದಲ್ಲಿ ಈ ಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯತ್ತಿದೆ. ಬೆಳಗ್ಗೆ 9 ರಿಂದ ಆರಂಭಗೊಂಡು ಸಂಜೆ 6:30ಕ್ಕೆ ಅಂತ್ಯವಾಗಲಿದೆ. ಒಂದೇ ಸೂರಿನಡಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿದ್ದು, ಶನಿವಾರ ಬೆಳಗ್ಗೆಯಿಂದಲೇ ಸಾವಿರಾರು ವಿದ್ಯಾರ್ಥಿಗಳು ಪೋಷಕರೊಂದಿಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ.

    ಇಂದು ವಿಶೇಷ ಸೇಮಿನಾರ್‌ಗಳ ಜೊತೆಗೆ ವಿದ್ಯಾರ್ಥಿಗಳಿಗೆ ಚರ್ಚೆ ಸ್ಪರ್ಧೆ ಸಹ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಮತ್ತು ಮೊಬೈಲ್ ಪೋನ್ ಬಹುಮಾನವಾಗಿ ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ್ NCAPಗೆ ಚಾಲನೆ; ಕಂಪನಿಗಳಿಗೆ ಎಷ್ಟು ಲಾಭವಾಗುತ್ತೆ ಗೊತ್ತಾ..?

    ಭಾರತ್ NCAPಗೆ ಚಾಲನೆ; ಕಂಪನಿಗಳಿಗೆ ಎಷ್ಟು ಲಾಭವಾಗುತ್ತೆ ಗೊತ್ತಾ..?

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಂಗೆ (Bharat NCAP) ಚಾಲನೆ ನೀಡಿದರು.

    ನಮ್ಮ ಜನ ಈಗ ಹೊಸ ಕಾರು ಖರೀದಿಸುವಾಗ ಬೆಲೆ, ವೈಶಿಷ್ಟ್ಯಗಳಿಗಿಂತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬೆಲೆ ತುಸು ಹೆಚ್ಚಾದರೂ ಪರವಾಗಿಲ್ಲ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಇರುವ ಕಾರನ್ನೇ ಖರೀದಿಸೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ಜನ ಈಗಾಗಲೇ ಬಂದಿದ್ದಾರೆ. ಇಷ್ಟು ವರ್ಷ ಗ್ಲೋಬಲ್ NCAP ಮತ್ತು ASEAN NCAP ಕ್ರ‍್ಯಾಶ್ ಟೆಸ್ಟ್‌ (Crash Test) ನಡೆಸಿ ಕಾರುಗಳಿಗೆ ರೇಟಿಂಗ್ ನೀಡುತ್ತಿದ್ದರು. ಇದೀಗ ಈ ಸುರಕ್ಷತಾ ರೇಟಿಂಗ್ ನೀಡುವ ವ್ಯವಸ್ಥೆ ಅಕ್ಟೊಬರ್ 1ರಿಂದ ಭಾರತದಲ್ಲಿಯೇ ಆರಂಭವಾಗಲಿದೆ.

    ಭಾರತ ಸ್ವಂತ ಕಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಸಿಸ್ಟಮ್ ಹೊಂದಿರುವ ಐದನೇ ದೇಶವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪರೀಕ್ಷೆಗೆ ಒಳಪಡುವ ಕಾರುಗಳು ಭಾರತ್ NCAP ಲೋಗೋ ಮತ್ತು ಅದರ ರೇಟಿಂಗ್ ಸೂಚಿಸುವ ಸ್ಟಿಕ್ಕರ್ ಹೊಂದಿರುತ್ತವೆ. ಭಾರತ್ NCAPಗೆ ಈಗಾಗಲೇ ೩೦ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಲು ಬೇಡಿಕೆ ಬಂದಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

    ಭಾರತ್ NCAP ಕಾರ್ಯಕ್ರಮದ ಅಡಿಯಲ್ಲಿ ಕಾರನ್ನು ಪರೀಕ್ಷಿಸಲು ಸುಮಾರು 60 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದೇ ರೀತಿಯ ಪರೀಕ್ಷೆಯನ್ನು ವಿದೇಶದಲ್ಲಿ ಮಾಡಿದರೆ ಸುಮಾರು 2.5 ಕೋಟಿ ರೂಪಾಯಿಗಳು ಬೇಕಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು. ಇದನ್ನೂ ಓದಿ: ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಸಚಿವಾಲಯ, ಮಾರುಕಟ್ಟೆಯಲ್ಲಿ ಲಭ್ಯ ಇರುವ ವಾಹನಗಳ ಕ್ರ್ಯಾಶ್ ಸುರಕ್ಷತೆಯ ತುಲನಾತ್ಮಕ ಮೌಲ್ಯಮಾಪನ ಮಾಡಲು ಕಾರು ಗ್ರಾಹಕರಿಗೆ ಒಂದು ಸಾಧನವನ್ನು ಒದಗಿಸುವ ಗುರಿಯನ್ನು ಭಾರತ್ NCAP ಹೊಂದಿದೆ ಎಂದು ತಿಳಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕಾರು ತಯಾರಕರು ಸ್ವಯಂಪ್ರೇರಣೆಯಿಂದ ತಮ್ಮ ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ನೀಡಬಹುದು ಮತ್ತು ಈ ಪರೀಕ್ಷೆ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AIS) 197ರ ಪ್ರಕಾರ ಈ ನಡೆಯುತ್ತದೆ ಎಂದು ಸಹ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಗ್ಲೋಬಲ್ NCAPನಲ್ಲಿ ರೇಟಿಂಗ್ ನೀಡುವಂತೆ ಭಾರತ್‌ ಎನ್‌ಸಿಎಪಿ ಸಹ ಕಾರಿನ ಕಾರ್ಯಕ್ಷಮತೆಯ ಆಧಾರದ ಮೇಲೆ, ವಯಸ್ಕರ ಸುರಕ್ಷತೆಗೆ ನೀಡುವ ಅಡಲ್ಟ್‌ ಆಕ್ಯುಪೆನ್ಸ್ ಪ್ರೊಟೆಕ್ಷನ್‌ (AOP) ಮತ್ತು ಮಕ್ಕಳ ಸುರಕ್ಷತೆಗೆ ನೀಡುವ ಚೈಲ್ಡ್ ಆಕ್ಯುಪೆನ್ಸ್ ಪ್ರೊಟೆಕ್ಷನ್‌ (COP) ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಕಾರುಗಳನ್ನು ಕೊಳ್ಳುವ ಗ್ರಾಹಕರು ಈ ಸ್ಟಾರ್ ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ ಸ್ಪೋರ್ಟ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ- ಬಗೆಹರಿಸುವ ಭರವಸೆ ನೀಡಿದ ಸಂಸ್ಥೆ

    ಭಾರತ್‌ ಎನ್‌ಸಿಎಪಿ ಸುರಕ್ಷಿತ ಕಾರುಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗಿದೆ, ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಕಾರು ತಯಾರಕರನ್ನು ಉತ್ತೇಜಿಸುತ್ತದೆ. ಹೆಚ್ಚಿನ ಸುರಕ್ಷತಾ ಮಾನದಂಡಗಳೊಂದಿಗೆ, ಭಾರತದ ಕಾರುಗಳು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಹಾಗೂ ಭಾರತದ ಕಾರು ತಯಾರಕರ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]