Tag: publictv

  • ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ

    ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ

    ಬೆಂಗಳೂರು: ಮಹಿಳೆಯರಿಗೆ ಚಿನ್ನದ ಅಭರಣಗಳೆಂದರೆ ಅಚ್ಚುಮೆಚ್ಚು. ಮದುವೆ, ಸಮಾರಂಭಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವನ್ನು ಮಹಿಳೆಯರು ನೀಡುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೇ ನಟಿ ಮಣಿಯರು ಚಿನ್ನದ ಆಭರಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇದೀಗ ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ ಆಯ್ಕೆ ಆಗಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ದೇಶದ ಅತಿಡೊಡ್ಡ, ಅತ್ಯುತ್ತಮ ಅಭರಣ ಪ್ರದರ್ಶನ ಮತ್ತು ಮಾರಟ ಮೇಳ ನಡೆಯುತ್ತಿದೆ. ಜ್ಯುವೆಲ್ಸ್ ಆಫ್ ಇಂಡಿಯಾದವರು ಇದೇ ತಿಂಗಳು 15ರಿಂದ 18ನೇ ತಾರೀಖಿನವರಗೆ ಆಯೋಜಿಸಿದ್ದಾರೆ. ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿರುವ ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರರವರು ಸುದ್ದಿಗೋಷ್ಠಿ ನಡೆಸಿದರು.

     

    View this post on Instagram

     

    A post shared by priyanka upendra (@priyanka_upendra)

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅಭರಣಗಳೆಂದರೆ ಅಚ್ಚುಮೆಚ್ಚು. ಭಾರತೀಯ ಪಾರಂಪಾರಿಕ ಶೈಲಿಯ ಮತ್ತು ದೆಹಲಿ, ಮುಂಬೈ, ಗುಜರಾತ್, ರಾಜಸ್ಥಾನ್ ವಿವಿಧ ರಾಜ್ಯದ ಅಭರಣ ಪ್ರದರ್ಶನ ಮತ್ತು ಮಾರಾಟ ನಾಲ್ಕು ದಿನಗಳ ಕಾಲ ನಡೆಯುತ್ತದೆ ಎಂದರು.

    ಜುವೆಲ್ಸ್ ಆಫ್ ಇಂಡಿಯಾ ಪ್ರಚಾರ ರಾಯಭಾರಿ ಎರಡು ಸಲ ಆಯ್ಕೆಯಾಗಿದ್ದೇನೆ. ಕಳೆದ 20 ತಿಂಗಳಿಂದ ಕೊರೊನಾ ಕಾಲದಿಂದ ಮಹಿಳೆಯರು ಅಭರಣ ಖರೀದಿಸಲು ಆಗಿಲ್ಲ. ದೀಪಾವಳಿ ಹಬ್ಬವು ಹತ್ತಿರ ಬರುತ್ತಿದೆ, ಅದ್ದರಿಂದ ಜುವೆಲ್ಸ್ ಆಫ್ ಇಂಡಿಯಾ ವತಿಯಿಂದ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ ಬನ್ನಿ ಆಗಮಿಸಿ ಎಂದು ಹೇಳಿದ್ದಾರೆ.

  • ಯಡಿಯೂರಪ್ಪರ ಭೇಟಿ ಸಾಬೀತಾದರೆ ರಾಜಕೀಯ ಸನ್ಯಾಸ: ಸಿದ್ದರಾಮಯ್ಯ

    ಯಡಿಯೂರಪ್ಪರ ಭೇಟಿ ಸಾಬೀತಾದರೆ ರಾಜಕೀಯ ಸನ್ಯಾಸ: ಸಿದ್ದರಾಮಯ್ಯ

    – ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು

    ಕಲಬುರಗಿ: ಸಭೆ, ಸದನ ಬಿಟ್ಟರೆ ಯಾವುದೇ ಸಂದರ್ಭದಲ್ಲಿ ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿಲ್ಲ. ಉಳಿದ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದು, ಸಾಬೀತು ಮಾಡಿದ್ದಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.

    ಕಲಬುರಗಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಹುಟ್ಟು ಹಬ್ಬದ ಸಂದರ್ಭದಲ್ಲಿ ಭೇಟಿ ಮಾಡಿದ್ದೆ, ನಂತರ ಅವರನ್ನು ಭೇಟಿ ಮಾಡಿಲ್ಲಾ. ಭೇಟಿ ಮಾಡೋದು ಅದೇ ಕುಮಾರಸ್ವಾಮಿ ಎಂದು ನೇರವಾಗಿ ಅರೋಪಿಸಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಯಡಿಯೂರಪ್ಪ ಅವರ ಆಪ್ತರ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿಗಳು ಬಿಜೆಪಿಯವರು ಅವರು ನನ್ನ ಮಾತು ಕೇಳಿ ರೈಡ್ ಮಾಡ್ತಾರಾ? ಎಂದು ಮರುಪ್ರಶ್ನಿಸಿದರು. ಈ ಹಿಂದೆ ನಾನು ತಾಲೂಕು ಬೋರ್ಡ್ ಸದಸ್ಯ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ, ಆಗಲು ಕೂಡಾ ಅಧಿಕಾರದಲ್ಲಿದ್ದವರನ್ನು ಭೇಟಿ ಮಾಡುತ್ತಿರಲಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ದಾಂತ ಎಂದಿದ್ದಾರೆ.

    ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲಾ ಅದು ಏನು ಆವಾಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ, ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು, ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತೆಗೆದುಕೊಳ್ಳಲಿಕ್ಕೆ ಹೋಗಿದ್ರಾ ಎಂದ ಅವರು ಅಂತವರಿಂದ ಪಾಠ ಕಲಿಬೇಕಾಗಿ ಬಂದಿರೋದು ನಮ್ಮ  ದುಸ್ಥಿತಿ ಎಂದು ಮರುಗಿದರು.

  • ಅಗ್ನಿಅವಘಡಕ್ಕೆ ಸುಟ್ಟು ಭಸ್ಮವಾಯ್ತು 20 ಬೈಕ್

    ಅಗ್ನಿಅವಘಡಕ್ಕೆ ಸುಟ್ಟು ಭಸ್ಮವಾಯ್ತು 20 ಬೈಕ್

    ಮುಂಬೈ: ಸೊಸೈಟಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಲ್ಲಿ ನಿಲ್ಲಿಸಿದ್ದ ಸುಮಾರು 20 ಮೋಟಾರ್ ಬೈಕ್ ಸುಟ್ಟು ಭಸ್ಮವಾಗಿರುವ ಘಟನೆ ಮುಂಬೈನ ನೆಹರು ನಗರದ ಕುರ್ಲಾ ವಸತಿ ಸೊಸೈಟಿಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮದ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಕಾಣಿಕೊಳ್ಳಲು ಕಾರಣವೇನು ಎಂದು ಪರಿಶೀಲನೆ ಮಾಡುತ್ತಿದ್ದಾರೆ.

    ಬೆಂಕಿಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿಯ ಬೃಹತ್ ಜ್ವಾಲೆ ಕಟ್ಟಡದ ಎಂಟನೇ ಮಹಡಿಯಷ್ಟು ಎತ್ತರಕ್ಕೆ ಹಾರಿತ್ತು. ಯಾರೂ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ. ಸಿಗರೇಟ್ ಸೇದು ಇಟ್ಟಿದ್ದಾರೆ ಹೀಗಾಗಿ ಬೆಂಕಿ ಹೊತ್ತಿ ಉರಿದಿದೆ ಎಂದು ಸ್ಥಳೀಯ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಕುರಿತಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

  • ರಸ್ತೆ ಇಲ್ಲದೆ, ವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ತಂದ ಸ್ಥಳೀಯರು

    ರಸ್ತೆ ಇಲ್ಲದೆ, ವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ತಂದ ಸ್ಥಳೀಯರು

    ಚಿಕ್ಕಮಗಳೂರು: ಸೂಕ್ತ ರಸ್ತೆ ಇಲ್ಲದೆ ವಯೋವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ. ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಗ್ರಾಮದಲ್ಲಿ ವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕಳಸ ಸಮೀಪದ ಕಳಕೋಡು ಗ್ರಾಮದಿಂದ ಈಚಲುಹೊಳೆ ಗ್ರಾಮದವರೆಗೂ ವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಅಲ್ಲಿಂದ ಆಟೋದಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಉದ್ದವಾದ ಮರದ ಕೊಂಬೆಗೆ ಬೆಡ್‍ಶೀಟ್ ಕಟ್ಟಿಕೊಂಡು ವೃದ್ಧೆಯನ್ನು ಮಲಗಿಸಿಕೊಂಡು ಹೊತ್ತು ಬಂದಿದ್ದಾರೆ. ಇದನ್ನೂ ಓದಿ:  ಗೊಬ್ಬರಕ್ಕೆ 28,6555 ಕೋಟಿ ಸಬ್ಸಿಡಿ

    ಕಳಕೋಡು ಗ್ರಾಮದ 70 ವರ್ಷದ ವೃದ್ಧೆ ಲಕ್ಷ್ಮಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನ ಆಸ್ಪತ್ರೆಗೆ ದಾಖಲಿಸಲು ಸೂಕ್ತ ರಸ್ತೆ ಇಲ್ಲದ ಕಾರಣ ಜೋಳಿಗೆಯಲ್ಲಿ ಹೊತ್ತು ತಂದಿದ್ದಾರೆ. ಕಳಕೋಡು ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳಿವೆ. ಆದರೆ ಓಡಾಡಲು ಸೂಕ್ತ ರಸ್ತೆ ಇಲ್ಲ. ಕಾಡುದಾರಿಯೇ ಇವರಿಗೆ ಜೀವಾಳ. ಹುಟ್ಟು-ಸಾವು ಸೇರಿದಂತೆ ಮನೆಗೆ ದಿನಸಿ ಸಾಮಾನುಗಳನ್ನ ತರಲು ಕಾಡಿನ ಕಾಲು ದಾರಿಯನ್ನೇ ನಂಬಿಕೊಂಡಿದ್ದಾರೆ. ರಸ್ತೆ ಇಲ್ಲದ ಕಾರಣ ಸುಮಾರು ನಾಲ್ಕು ಕಿ.ಮೀ. ವೃದ್ಧೆಯನ್ನ ಜೋಳಿಗೆಯಲ್ಲೇ ಸಾಗಿಸಿದ್ದಾರೆ. ಈಗಾಗಲೇ ಸ್ಥಳೀಯರು ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಜಿಲ್ಲಾಧಿಕಾರಿ, ಶಾಸಕರು, ಸಂಸದರಿಗೆ ಮನವಿ ಮಾಡಿದ್ದಾರೆ. ಆದರೆ ಈವರೆಗೂ ಯಾರೂ ಕೂಡ ಸ್ಪಂದಿಸಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  25 ಸಾವಿರ ಬಿಸ್ಕೆಟ್, ಬೇಕರಿ ತಿಂಡಿಯಿಂದ ತೆಯ್ಯಂ ಕಲಾಕೃತಿ-ಕೇರಳ ಕಲಾಕಾರನ ಕೈಚಳಕ

    ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ರಸ್ತೆ ಸಂಪರ್ಕವಿಲ್ಲದ ಹತ್ತಾರು ಗ್ರಾಮಗಳಿವೆ. ಸ್ಥಳೀಯರು ಸೇತುವೆ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ನೊಂದವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ತಾವೇ ಕಾಲು ಸಂಕ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಇದನ್ನೂ ಓದಿ:  ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

  • ಗೊಬ್ಬರಕ್ಕೆ 28,6555 ಕೋಟಿ ಸಬ್ಸಿಡಿ

    ಗೊಬ್ಬರಕ್ಕೆ 28,6555 ಕೋಟಿ ಸಬ್ಸಿಡಿ

    ನವದೆಹಲಿ: ಹಿಂಗಾರು ಬೆಳೆಗಳಿಗೆ ರೈರಿಗೆ ಕೈ ಗೆಟುಕುವ ದರದಲ್ಲಿ ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸಕಾರ ಫಾಸ್ಫೆಟಿಕ್ ಮತ್ತು ಪೊಟಾಸಿಕ್ ರಸಗೊಬ್ಬರಗಳಿಗೆ 28.655 ಕೋಟಿ ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಕ್ಯಾಬಿನೆಟ್ ಸಮಿತಿ ಸಭೆ 2021ರ ಅಕ್ಟೋಬರ್ ನಿಂದ 2022ರ ಮಾರ್ಚ್‍ವರೆಗೆ ಈ ಎರಡೂ ರಸಗೊಬ್ಬರಗಳ ಮೇಲಿನ ಸಬ್ಸಿಡಿ ನೀಡಲು ಸಮ್ಮತಿ ನೀಡಿದೆ.

    ನ್ಯೂಟ್ರಿಯೆಂಟ್ ಆಧಾರಿತ ಸಬ್ಸಿಡಿ ಪ್ರಕಾರ ಪ್ರತಿ ಕೇಜಿಯ ಸಾರಾಜನಕಕ್ಕೆ 18.789ರೂ. ಫಾಸ್ಫರಸ್‍ಗೆ 45.323ರೂ, ಪೋಟ್ಯಾಷ್‍ಗೆ 10,116ರೂ, ಮತ್ತು ಸಲ್ಫರ್‍ಗೆ 2.374ರೂ ನಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದನ್ನೂ ಓದಿ:  ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಡಿಎಪಿ 5716 ಕೋಟಿ ರೂ. ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. ರೈತರು ಅತಿ ಹೆಚ್ಚು ಬಳಸುವ ಡಿಎಪಿಗೆ ಹೆಚ್ಚುವರಿ 5716 ಕೋಟಿ ರೂಪಾತಿ ನಷ್ಟು ವಿಶೇಷ ಸಬ್ಸಿಡಿ ಪ್ಯಾಕೇಜ್ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ಯಥೇಚ್ಚವಾಗಿ ಬಳಸಲಾಗುವ ಎನ್‍ಪಿಕೆಯ ಮೂರು ಮಾದರಿ ರಸಗೊಬ್ಬರಗಳಿಗೆ 837 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಪ್ರಕಟಿಸಲಾಗಿದೆ. ಇದನ್ನೂ ಓದಿ: ಸಮಂತಾರಿಂದ ದೂರವಾಗ್ತಿದ್ದಂತೆ ಹೊಸ ಮನೆ ಖರೀದಿಸಿದ ನಟ ನಾಗಚೈತನ್ಯ

    ಅಲ್ಲದೆ ಈ ಕ್ಯಾಬಿನೆಟ್ ಸಮಿತಿಯು ಮೊಲಾಸಸ್‍ನಿಂದ ಉತ್ಪತ್ತಿಯಾಗುವ ಪೊಟ್ಯಾಷ್‍ಅನ್ನು ಸಹ ನ್ಯೂಟ್ರಿಯೆಂಟ್ ಆಧಾರಿತ ಸಬ್ಸಿಡಿ ಮಾಡಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಮುಂಗಾರು ಆರಂಭವಾಗುವ ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ, ಡಿಎಪಿ ಸೇರಿದಂತೆ ಇತರೆ ಯೂರಿಯಾಯೇತರ ರಸಗೊಬ್ಬರಗಳಿಗೆ 14.755 ಕೋಟಿ ರೂ. ನಷ್ಟು ಸಬ್ಸಿಡಿ ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರ 2021-22ರಲ್ಲಿ ರಸಗೊಬ್ಬರಗಳಿಗೆ 79.600 ಕೋಟಿ ರೂಪಾಯಿ ಸಬ್ಸಡಿ ನೀಡಿತ್ತು. ಇದರ ಹೊರತಾಗಿ ಈಗ ಹೆಚ್ಚುವರಿ ಹಣವನ್ನು ನೀಡಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ

  • ಯಶ್, ರಾಧಿಕಾ ದುಬೈ ಟ್ರಿಪ್

    ಯಶ್, ರಾಧಿಕಾ ದುಬೈ ಟ್ರಿಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ಆಗಿರುವ ಯಶ್, ರಾಧಿಕಾ ದುಬೈನಲ್ಲಿ ಜಾಲಿ ಮೂಡ್‍ನಲ್ಲಿ ಸುತ್ತಾಟ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೆಲವು ವೀಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಇತ್ತೀಚೆಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಯಶ್ ಈಗ ತಮ್ಮ ಮಡದಿ ರಾಧಿಕಾ ಪಂಡಿತ್ ಜೊತೆ ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ರಾಧಿಕಾ ಪಂಡಿತ್ ಹಾಗೂ ಯಶ್ ಅವರು ದುಬೈಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಅಧಿಕಾರಿಗಳು ಈ ಜೋಡಿಯನ್ನು ಬರ ಮಾಡಿಕೊಂಡಿದ್ದಾರೆ. ಯಶ್ ಅವರ ಜೊತೆ ಅವರ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಯಶ್ ಹೊಸ ಹೇರ್ ಸ್ಟೈಲ್‍ನಲ್ಲಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.  ದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

     

    View this post on Instagram

     

    A post shared by Radhika Pandit (@iamradhikapandit)

    ಮಕ್ಕಳ ಜೊತೆಗೆ ಮಾಲ್ಡೀವ್ಸ್ ಪ್ರವಾಸ ಮಾಡಿದ್ದ ಈ ಜೋಡಿ ಇದೀಗ ಇಬ್ಬರೇ ದುಬೈಗೆ ಹೋಗಿ ಸುತ್ತಾಡುತ್ತಿದ್ದಾರೆ. ಯಶ್ ಕೆಲವು ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣ ಮತ್ತು ಸಲೂನ್‍ವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಯಶ್ ಅವರ ಹೇರ್ ಸ್ಟೈಲ್ ಸುದ್ದಿಯಾಗಿತ್ತು. ದನ್ನೂ ಓದಿ: ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದ ವೇಳೆ ಅಭಿಮಾನಿಗಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ದೇಶ, ವಿದೇಶಗಳಲ್ಲಿ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಯಶ್ ಉದ್ದ ಕೂದಲು ಮೂಲಕವಾಗಿ ಮಿಂಚಿದ್ದರು. ಅಭಿಮಾನಿಗಳು ಯಶ್ ಅವರ ಉದ್ದ ಗಡ್ಡ, ಕೂದಲಿನ ಸ್ಟೈಲ್ ಇಷ್ಟವಾಗಿತ್ತು. ಇದೀಗ ಕೆಜಿಎಫ್2 ಸಿನಿಮಾದಲ್ಲೂ ಯಶ್ ಅದೇ ಖಡಕ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದನ್ನೂ ಓದಿ:  ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

  • ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

    ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

    ಸಿಹಿ ಅಡುಗೆ ಇದ್ದರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಬರುತ್ತದೆ. ನವರಾತ್ರಿ ಹಬ್ಬವನ್ನು 9 ದಿನ ಆಚರಣೆ ಮಾಡುವುದರಿಂದ ಪ್ರತಿ ದಿನ ಒಂದೊಂದು ಬಗೆಯ ಸಿಹಿ ಅಡುಗೆಯನ್ನು ಮಾಡುವುದು ಸಾಮಾನ್ಯ. ಎಳ್ಳು ಉಂಡೆ ಸರವಾಗಿ ಮಾಡುವ ರುಚಿಯಾದ ಅಡುಗೆಯಾಗಿದೆ. ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ನವರಾತ್ರಿ ಹಬ್ಬವನ್ನು ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ. 9 ದಿನ ಆಚರಿಸುವ ಈ ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ವಿವಿಧ ಸಿಹಿತಿಂಡಿಗಳನ್ನು ಮಾಡುತ್ತೇವೆ.

    ಬೇಕಾಗುವ ಸಾಮಗ್ರಿಗಳು:
    * ಬಿಳಿಎಳ್ಳು- 1 ಕಪ್
    * ಬೆಲ್ಲ- 1ಕಪ್
    * ತುಪ್ಪ- ಅರ್ಧ ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ಪಿಸ್ತಾ (ಹುರಿದು ಪುಡಿ ಮಾಡಿದ್ದು)- ಸ್ವಲ್ಪ


    ಮಾಡುವ ವಿಧಾನ:
    * ಎಳ್ಳುನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೂ ಹಾಗೂ ಎಳ್ಳು ಕಂದು ಬಣ್ಣಕ್ಕೆ ಬರುವವರೆಗು ಹುರಿದು ಒಂದು ಕಡೆ ತೆಗೆದಿಟ್ಟುಕೊಳ್ಳಿ.
    * ಈಗ ಅದೇ ಪಾತ್ರೆಗೆ ತುಪ್ಪ ಹಾಗೂ ಬೆಲ್ಲ ಸೇರಿಸಿ ಕರಗಿಸಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು.

    * ನಂತರ ಬೆಲ್ಲ ಇರುವ ಪಾತ್ರೆಗೆ ಹುರಿದ ಎಳ್ಳು, ಪಿಸ್ತಾ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆ ಮಾಡುವ ಹದಕ್ಕೆ ಬರುವರೆಗೂ ಬೇಯಿಸಿಕೊಳ್ಳಿ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?


    * ನಂತರ ಮೇಲೆ ಸ್ವಲ್ಪ ತುಪ್ಪ ಹಾಕಿ. ಅದನ್ನು ತಕ್ಷಣಕ್ಕೆ ಬೇಕಾದ ಆಕಾರಕ್ಕೆ ಉಂಡೆ ಮಾಡಿಕೊಳ್ಳಿ.
    * ಈಗ ರುಚಿಯಾದ ಎಳ್ಳು ಉಂಡೆ ಸವಿಯಲು ಸಿದ್ಧವಾಗುತ್ತದೆ. ಈ ಉಂಡೆಯನ್ನು ನೀವು 20 ದಿನ ಬೇಕಾದರು ಸಂಗ್ರಹಿಸಿ ಇಡಬಹುದಾಗಿದೆ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

  • 2 ತಲೆ, 3 ಕಣ್ಣು ಇರುವ ಕರು ಜನನ – ಪೂಜಿಸಿದ ಗ್ರಾಮಸ್ಥರು

    2 ತಲೆ, 3 ಕಣ್ಣು ಇರುವ ಕರು ಜನನ – ಪೂಜಿಸಿದ ಗ್ರಾಮಸ್ಥರು

    ಭುವನೇಶ್ವರ: 2 ತಲೆ, ಮೂರು ಕಣ್ಣು ಇರುವ ಕರುವೊಂದು ಜನನವಾಗಿದೆ. ನವರಾತ್ರಿ ಸದಂರ್ಭದಲ್ಲಿಯೇ ಇಂಥಹ ವಿಚಿತ್ರ ಕರುವೊಂದು ಜನಿಸಿದ್ದರಿಂದ ದುರ್ಗಾದೇವಿಯ ಅವತಾರ ಎಂದು ಜನರು ಪೂಜೆ ಮಾಡಿರುವ ಘಟನೆ ಒರಿಸ್ಸಾದ ನಬ್ರಂಗ್​ಪುರದಲ್ಲಿ ನಡೆದಿದೆ.

    ನಬ್ರಂಗ್‍ಪುರದ ಧನಿರಾಂ ಅವರ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪವಾದ, ವಿಶೇಷವಾದ ಕರು ಜನಿಸಿದೆ. ಈ ಕರುಗೆ ಎರಡು ತಲೆ, ಮೂರು ಕಣ್ಣುಗಳಿವೆ. ಹೀಗೆ ವಿಶೇಷವಾಗಿ ಜನಿಸಿದ ಈ ಕರುವನ್ನು ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಕರು ಆರೋಗ್ಯದಿಂದಿದ್ದು, ದುರ್ಗಾ ಮಾತೆಯ ಪ್ರತಿರೂಪ ಎಂದು ಪೂಜೆ ಮಾಡಿದ್ದಾರೆ. ಇದನ್ನೂ ಓದಿ:  ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದರು. ಈ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಹೀಗೆ ವಿಶೇಷವಾಗಿರುವ ಈ ಕರು ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ

    ಮುಕ್ಕಣ್ಣನಂತಿರುವ ಈ ಕರುವಿಗೆ ಎರಡು ತಲೆಗಳಿರುವುದರಿಂದ ಹಾಲು ಕುಡಿಯಲು ಕಷ್ಟವಾಗುತ್ತಿದೆ. ಹಸುವಿನ ಕೆಚ್ಚಲಿನಿಂದ ಕರುವಿಗೆ ಹಾಲು ಕುಡಿಯುವುದು ಕಷ್ಟವಾದ್ದರಿಂದ ಹೊರಗಿನಿಂದ ಪ್ಯಾಕೆಟ್ ಹಾಲನ್ನು ಖರೀದಿಸಿ ನೀಡಲಾಗುತ್ತಿದೆ. ಈ ಕರುವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಇಬ್ಬರು ಬಿಜೆಪಿ ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ: ಸತೀಶ್ ಜಾರಕಿಹೊಳಿ

    ಇಬ್ಬರು ಬಿಜೆಪಿ ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಬಿಜೆಪಿ ಇಬ್ಬರು ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸಭೆ ಮುಂದೂಡಲಾಗುತ್ತಿದೆ. ಈ ಬಗ್ಗೆ ಬಿಜೆಪಿ ಶಾಸಕರು ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

    ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನು ಸಭೆ ಹೋಗಲು ಬಿಡುತ್ತಿಲ್ಲ. ನಾವು ಮಂಜೂರು ಮಾಡಿದ ಕೆಲಸಗಳು ಇನ್ನು ಪೆಂಡಿಂಗ್ ಇವೆ. ಬೆಳಗಾವಿ ಅಭಿವೃದ್ಧಿ ಕುಂಠಿತವಾಗಿದೆ. ಬೆಳಗಾವಿ ನಗರದಲ್ಲಿ ಅನುದಾನ, ಸಹಾಯಧನ,ಪ್ರೋತ್ಸಾಹ ಧನ,ಎಲ್ಲವೂ ಕಟ್ ಆಗಿದೆ. ಇದಕ್ಕೆ ಶಾಸಕರೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    satish jarkiholi

    ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಹಾಗೂ ಉಪ ಮೇಯರ್ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಬೆಳಗಾವಿ ಮೇಯರ್ ಆಯ್ಕೆ ಆಗಲು ಒಂದು ವರ್ಷ ಬೇಕು. ವ್ಯವಸ್ಥೆ ಹದಗೆಟ್ಟಿದೆ ಏನು ಮಾಡೋಕೆ ಆಗಲ್ಲ. ಅಧಿಕಾರ ಯಾರು ಮಾಡಬೇಕು ಅವರಿಗೆ ಸಿಗುತ್ತಿಲ್ಲ. ಬುಡಾದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಪಾಲಿಕೆ ಸದಸ್ಯರೆಲ್ಲ ಶಾಸಕರ ಸುತ್ತಲು ಸುತ್ತಬೇಕಷ್ಟೆ ಪಾಲಿಕೆಯಲ್ಲಿ ಹಿಂದೆ ಕೆಲವೇ ಜನ ಅಧಿಕಾರ ನಡೆಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ- ಮಕ್ಕಳ ಜೊತೆ ಪೂಜೆ ಮಾಡಿದ ನಟಿ

  • ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ- ಮಕ್ಕಳ ಜೊತೆ ಪೂಜೆ ಮಾಡಿದ ನಟಿ

    ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ- ಮಕ್ಕಳ ಜೊತೆ ಪೂಜೆ ಮಾಡಿದ ನಟಿ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ನೀಲಿ ಚಿತ್ರ ನಿರ್ಮಾಣದ ಕೇಸ್‍ನಿಂದಾಗಿ ಬೇಸರಕ್ಕೆ ಒಳಗಾಗಿದ್ದರು. ಆದರೆ ಈಗ ಈ ಎಲ್ಲ ಬೇಸರದಿಂದ ಹೊರಗೆ ಬಂದು ಮಕ್ಕಳ ಜೊತೆಗೆ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಶಿಲ್ಪಾ ಆಚರಣೆ ಮಾಡಿದ್ದಾರೆ.

    ಕೆಲವು ವಿಚಾರಗಳನ್ನು ನಾವು ಆಚರಿಸದ ಹೊರತು ನಮ್ಮ ಮುಂದಿನ ತಲೆಮಾರಿನವರಿಗೆ ಅವುಗಳನ್ನು ದಾಟಿಸಲು ಸಾಧ್ಯವಿಲ್ಲ. ನಮ್ಮ ತಂದೆ-ತಾಯಿ ನಮ್ಮನ್ನು ಬೆಳೆಸಿದ ರೀತಿಯಲ್ಲೇ ಮೌಲ್ಯ ಮತ್ತು ಸಂಪ್ರದಾಯದೊಂದಿಗೆ ನಮ್ಮ ಮಕ್ಕಳು ಕೂಡ ಬೆಳೆಯಬೇಕು ಎಂಬುದು ನನಗೆ ತುಂಬ ಮುಖ್ಯವಾಗಿದೆ. ನನ್ನ ಇಬ್ಬರು ಮಕ್ಕಳಲ್ಲೂ ನಂಬಿಕೆಯ ಬೀಜ ಬಿತ್ತುತ್ತಿದ್ದೇನೆ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡು ಮಕ್ಕಳ ಜೊತೆಗೆ ಪೂಜೆ ಮಾಡುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    ಮಕ್ಕಳ ಜೊತೆ ಸೇರಿ ಅವರು ಸಡಗರದಿಂದ ಹಬ್ಬ ಆಚರಿಸಿದ್ದಾರೆ. ದೇವರಿಗೆ ವಿಶೇಷ ಅಲಂಕಾರ, ನೈವೇದ್ಯ ಮಾಡಿ, ಭಕ್ತಿಯಿಂದ ಪೂಜೆ ನೆರವೇರಿಸಿದ್ದಾರೆ. ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ವೀಡಿಯೋದಲ್ಲಿ ವಿಹಾನ್ ಕುಂದ್ರಾ ಭಕ್ತಿಯಿಂದ ಭಜನೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿ. ಈ ವೀಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಪ್ಪ ಅರೆಸ್ಟ್, ಅಮ್ಮ ಕಣ್ಣೀರು – ಪೋಸ್ಟ್ ಮಾಡಿ ಸುದ್ದಿಯಾದ ಶಿಲ್ಪಾ ಶೆಟ್ಟಿ ಮಗ

    ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರ ನಿರ್ಮಾಣದ ಪ್ರಕರಣದಿಂದ ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಒಂದಷ್ಟು ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದ ಅವರು ಈಗ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಈ ಪ್ರಕರಣ ಕುರಿತಾಗಿ ಕೋರ್ಟ್ ಯಾವ ರೀತಿ ತೀರ್ಪು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.