Tag: publictv

  • IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

    IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

    ಚಿತ್ರದುರ್ಗ: ಐಪಿಎಲ್ ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

    ದಸರಾ ಹಬ್ಬದ ಆಯುಧ ಪೂಜೆ ಹಿನ್ನೆಲೆಯಲ್ಲಿ ಇಸ್ಪಿಟ್ ಜೂಜುಕೋರ ತಮ್ಮಣ್ಣಗೆ ಪರಶುರಾಂಪುರ ಠಾಣೆಯಲ್ಲಿ ಪಿಎಸ್‍ಐ ಸ್ವಾತಿ ಸನ್ಮಾನಿಸಿದ್ದಾರೆ. ಪರಶುರಾಂಪುರ ಠಾಣೆ ಪಿಎಸ್‍ಐ ಸ್ವಾತಿ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮದ ಅಂಗವಾಗಿ ಸನ್ಮಾನ ಸಮಾರಂಭ ನಡೆದಿದ್ದೂ, ಅಕ್ರಮ ದಂಧೆಕೋರರಿಗೆ ಪೊಲೀಸರು ಸನ್ಮಾನ ಮಾಡಿ ಸತ್ಕರಿಸಿದ್ದಾರೆ.  ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!

    ಇನ್ನು ಈ ದಂಧೆಕೋರ ತಮ್ಮಣ್ಣ ತಳಕು ಠಾಣೆ ವ್ಯಾಪ್ತಿಯ ಐಪಿಎಲ್ ಬೆಟ್ಟಿಂಗ್, ಇಸ್ಪಿಟ್ ಜೂಜಾಟ ಕೇಸುಗಳಲ್ಲಿ ಭಾಗಿಯಾಗಿದ್ದೂ, ಈ ದಂಧೆಕೋರರ ದಂಧೆಗೆ ಪೊಲೀಸರು ಸಾಥ್ ನೀಡ್ತಿದ್ದಾರೆಂಬ ಆರೋಪ ಸಹ ವ್ಯಕ್ತವಾಗಿದೆ. ಇಂತಹ ಸಮಾಜಘಾತುಕರನ್ನು ಮಟ್ಟ ಹಾಕಬೇಕಾದ ಪೊಲೀಸರೇ ಈ ರೀತಿ ಅಕ್ರಮ ದಂಧೆಕೋರರಿಗೆ ಹಾರ, ತುರಾಯಿ, ಶಾಲು ಹಾಕಿ ಸನ್ಮಾನಿಸಿರೋದು ಸಾರ್ವಜನಿಕರ ಆಕ್ರೋಶಕ್ಕೆ ದಾರಿಯಾಗಿದೆ. ಇನ್ನು ತಮ್ಮಣ್ಣನನ್ನು ಪಿಎಸ್‍ಐ ಸನ್ಮಾನಿಸುತ್ತಿರೋ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದೂ, ಪೊಲೀಸರ ಈ ಕೆಲಸಕ್ಕೆ ಪ್ರಜ್ಞಾವಂತರಿಂದ ಬಾರಿ ಟೀಕೆಗಳು ಕೇಳಿಬಂದಿವೆ. ಇದನ್ನೂ ಓದಿ: IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

  • ಹಾಡಿನ ಮೂಲಕ ನೋವು ತೋಡಿಕೊಂಡ ರೈತ – ವೀಡಿಯೋ ವೈರಲ್

    ಹಾಡಿನ ಮೂಲಕ ನೋವು ತೋಡಿಕೊಂಡ ರೈತ – ವೀಡಿಯೋ ವೈರಲ್

    ಬೀದರ್: ಮಳೆ ನಿಂತರು ರೈತರ ಜಮೀನಿನಲ್ಲಿ ನೀರು ನಿಂತ್ತಿದ್ದು, ಸೋಯಾ ಬೆಳೆ ಕಳೆದುಕೊಂಡ ರೈತ ಹಾಡಿನ ಮೂಲಕ ತನ್ನ ನೋವು ವ್ಯಕ್ತಪಡಿಸಿದ ವೀಡಿಯೋ ಈಗಾ ವೈರಲ್ ಆಗಿದೆ.

    ಸೋಯಾ ಬೆಳೆದಿದ್ದ ಬೆಳೆ ಕೊಳೆತು ಹೋಗಿರುವ ಜಮೀನಿನಲ್ಲಿ ನಿಂತ ರೈತ ಹಾಡು ಹಾಡುತ್ತಾ ತನ್ನ ಅಳಲು ತೋಡಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ರೈತರ ಕಿರಣ್ ಖಂಡ್ರೆ ವೀಡಿಯೋ ಮಾಡಿದ್ದು, ರೈತರ ಗೋಳನ್ನು ಈ ವೀಡಿಯೋದಲ್ಲಿ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ರೈತರ ಗೋಳು ಕೇಳೋರು ಯಾರಣ್ಣ, ದೇಶಕ್ಕೆ ಅನ್ನ ಹಾಕುವರು ನಮ್ಮ ರೈತರು ಎಂದು ಹೇಳೋರು ನಮ್ಮ ಪ್ರಧಾನಿ ಮೋದಿಯಣ್ಣ, ರಾಜಕೀಯ ನಾಯಕರು ತಮ್ಮ ಡೊಂಬರಾಟ ಮಾಡಿ ಹೋಗುವರಣ್ಣ ಎಂದು ಹಾಡು ಹಾಡುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ರೈತ ಹಿಡಿಶಾಪ ಹಾಕಿದ್ದಾರೆ. ಈಗಾಗಲೇ ಮಹಾ ಮಳೆ ಹಾಗೂ ನೆರೆಗೆ ಲಕ್ಷಾಂತರ ಎಕರೆ ಬೆಳೆ ಕಳೆದುಕೊಂಡು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

  • ಮೈಸೂರು ದಸರಾ ವಿದ್ಯುತ್ ದೀಪಾಲಂಕಾರ ಇನ್ನೂ 9 ದಿನ ವಿಸ್ತರಣೆ: ಬೊಮ್ಮಾಯಿ

    ಮೈಸೂರು ದಸರಾ ವಿದ್ಯುತ್ ದೀಪಾಲಂಕಾರ ಇನ್ನೂ 9 ದಿನ ವಿಸ್ತರಣೆ: ಬೊಮ್ಮಾಯಿ

    ಮೈಸೂರು: ಮೈಸೂರು ದಸರಾ ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

    ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು, ನಾಡಿನ ವಿವಿಧ ಕಡೆಗಳಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಯ ಮೇರೆಗೆ ವಿದ್ಯುತ್ ದೀಪಾಲಂಕಾರವನ್ನು ವಿಸ್ತರಿಸುತ್ತಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಧಾರವಾಡದಲ್ಲಿ ಕೃತಕ ಆನೆ ಬಳಸಿ ದಸರಾ ಮೆರವಣಿಗೆ

    ದಸರಾ ಹಿನ್ನೆಲೆಯಲ್ಲಿ ಅರಮನೆಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ದಸರಾ ವೈಭವದಲ್ಲಿ ದೀಪಾಲಂಕಾರವೂ ವಿಶೇಷತೆಯನ್ನು ಹೊಂದಿದೆ. ಇದನ್ನ ನೋಡಲು ಸಾವಿರಾರು ಜನ ಬರುತ್ತಾರೆ. ಹೀಗಾಗಿ ದೀಪಾಲಂಕಾರವನ್ನ ವಿಸ್ತರಣೆ ಮಾಡೋದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ:  ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

  • ಪತಿಯನ್ನು ಕೊಂದು ಸೂಟ್‍ಕೇಸ್‍ನಲ್ಲಿ ಸಾಗಿಸಿದಳು

    ಪತಿಯನ್ನು ಕೊಂದು ಸೂಟ್‍ಕೇಸ್‍ನಲ್ಲಿ ಸಾಗಿಸಿದಳು

    – ಬೇರೆ ಹೆಣ್ಣಿನ ಸಂಬಂಧ ಹೊಂದಿದ್ದ ಪತಿ

    ಬ್ರೆಸಿಲಿಯಾ: ತನ್ನ ಗಂಡನನ್ನೇ ಕೊಂದು ಮೃತ ದೇಹವನ್ನು ಸೂಟ್‍ಕೇಸ್‍ನಲ್ಲಿರಿಸಿ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಮಾರ್ಕೋಸ್ ಮಟ್ಸುನಾಗಾ ಮೃತನಾಗಿದ್ದಾನೆ. ಎಲೀಟ್ ಮುಟ್ಸುನಾಗಾ ಪತಿಯನ್ನು ಕೊಲೆ ಮಾಡಿದ್ದಾಳೆ. ಮಹಿಳೆ ತನ್ನ ಪತಿಯ ಮೇಲಿನ ಸಿಟ್ಟು ತೀರಿಸಲು ಕೊಲೆ ಮಾಡಿದ್ದಾಳೆ. ನಂತರ ಸೂಟ್‍ಕೇಸ್‍ನಲ್ಲಿ ಪತಿಯ ತುಂಡಾದ ದೇಹವನ್ನು ಸಾಗಿಸುತ್ತಿರುವಾಗ ಪೊಲೀಸರಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಇದನ್ನೂ ಓದಿ: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

    ಎಲೀಟ್ ಮುಟ್ಸುನಾಗಾ ಮನೆಯವರ ಹಾಗೂ ತನ್ನ ಇಚ್ಛೆಯಂತೆ ಮಾರ್ಕೋಸ್‍ನನ್ನು ಮದುವೆಯಾಗುತ್ತಾಳೆ. ಗಂಡ ಬೇರೊಬ್ಬ ಯುವತಿ ಜೊತೆಗೆ ಸಂಬಂಧದಲ್ಲಿದ್ದನು. ಈ ವಿಚಾರವಾಗಿ ನೊಂದ ಎಲೀಟ್ ತನ್ನ ಪತಿಯನ್ನೇ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ಎಲೀಟ್ ಮುಟ್ಸುನಾಗಾ ತನ್ನ ಬಾಲ್ಯ ಜೀವನವನ್ನು ಕಷ್ಟದಿಂದ ಕಳೆದವಳಾಗಿದ್ದಳು. ಮಲೆತಂದೆಯ ಮನೆಯಲ್ಲಿ ಬೆಳೆದ ಆಕೆಗೆ ಶಾಲೆಯ ಫೀಸ್ ಕಟ್ಟಲು ಹಣವಿರಲಿಲ್ಲ. ಕೊನೆಗೆ ಲೈಂಗಿಕ ವ್ಯವಹಾರ ನಡೆಸಲು ಮುದಾಗುತ್ತಾಳೆ. ಈ ಮೂಲಕ ಹಣ ಸಂಪಾದಿಸಿ ಶಾಲೆ ಫೀಸ್ ಕಟ್ಟುತ್ತಾಳೆ. ಈ ವೇಳೆ ಜಪಾನ್ ಮೂಲದ ಉದ್ಯಮಿ ಮಾರ್ಕೋಸ್ ಮುಟ್ಸುನಾಗಾರನ್ನು ಭೇಟಿಯಾಗುತ್ತಾಳೆ. ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ, ಆದರೆ ಆತನಿಗೆ ಅದಾಗಲೇ ಒಂದು ಮದುವೆಯಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎಲೀಟ್ ಜೊತೆ ನೆಲೆಸುತ್ತಾನೆ. ಇಬ್ಬರು ಒಟ್ಟಿಗೆ ಜೀವನ ನಡೆಸಲು ಆರಂಭಿಸುತ್ತಾರೆ. ಇದರ ನಡುವೆ ಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಆದರೆ ಈತ ಮತ್ತೊಂದು ಹೆಣ್ಣಿನ ಸಂಬಂಧವನ್ನು ಬೆಳೆಸುತ್ತಾನೆ. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಇದನ್ನೂ ಓದಿ:  ಸರಳ ದಸರಾ – ಅರಮನೆಗೆ ಬಂದ ಜಂಬೂಸವಾರಿ

    ಒಂದು ದಿನ ರೂಮಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಗಂಡನಿಗೆ ಶೂಟ್ ಮಾಡುತ್ತಾಳೆ. ಸತ್ತ ಗಂಡನ ಶವನನ್ನು ಮನೆಯಿಂದ ಹೊರ ಹಾಕಲು ತುಂಡು ತುಂಡಾಗಿ ಕತ್ತರಿಸುತ್ತಾಳೆ. ನಂತರ 3 ಸೂಟ್‍ಕೇಸ್‍ನಲ್ಲಿ ತುಂಬಿಸಿ ಬೇರೆ ಕಡೆಗೆ ಸಾಗಿಸುತ್ತಿರುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅನುಮಾನಗೊಂಡು ಪೊಲೀಸರು ವಿಚಾರಿಸಿದಾಗ ಸೂಟ್‍ಕೇಸ್‍ನಲ್ಲಿ ಶವ ಇರುವುದು ಪತ್ತೆಯಾಗಿದೆ.

  • ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

    ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

    -ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರಬೇಕು

    ನಾಗಪುರ: ಭಯ ಮೂಡಿಸುವುದಕ್ಕಾಗಿ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ದಾಳಿಗೆ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರ ಕಾನೂನು ತರಬೇಕು. ಇದನ್ನು ಪ್ರತಿಯೊಬ್ಬರೂ ಸ್ವೀಕರಿಸುತ್ತಾರೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ನಾಗಪುರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿ ಅವರು ಸದಾ ಸನ್ನದ್ಧರಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಬಿಟ್ ಕಾಯಿನ್ ಮತ್ತು ವೇದಿಕೆ ಕುರಿತು ಪ್ರಸ್ತಾಪಿಸಿದ ಅವರು ಇವುಗಳ ಮೇಲೆ ನಿಯಂತ್ರಣ ಹೇರಲು ಸರ್ಕಾರ ಪ್ರಯತ್ನಿಸಬೇಕು ಎಂದೂ ಸಲಹೆ ನೀಡಿದರು. ಇದನ್ನೂ ಓದಿ:  ಜನಸಂಖ್ಯಾ ಅಸಮತೋಲನ ತಡೆಗೆ ಹೊಸ ನೀತಿ ಜಾರಿಗೊಳಿಸಬೇಕು: ಮೋಹನ್ ಭಾಗವತ್

    ರಾಷ್ಟ್ರದ ಅಭಿವೃದ್ಧಿಗೆ ತೊಡಕಾಗಿರುವುದು ವೇಗವಾಗಿ ವೃದ್ಧಿಸುತ್ತಿರುವ ಜನಸಂಖ್ಯೆ. ಇದರ ಬಗ್ಗೆ ಹಲವರು ಕಳವಳಗೊಂಡಿದ್ದಾರೆ. ಜನಸಂಖ್ಯೆ ವೃದ್ಧಿಯಿಂದ ಸಾಕಷ್ಟು ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗಲಿವೆ. ಸಮಯೋಚಿತವಾಗಿ ಜನಸಂಖ್ಯೆ ನಿಯಂತ್ರಣದ ಸವಾಲು ತೆಗೆದುಕೊಳ್ಳಬೇಕಿದೆಎಂದಿದ್ದಾರೆ. ಇದನ್ನೂ ಓದಿ: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

    ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ವವ್ಯಾಪಿ ಮತ್ತು ಪರಿಣಾಮಕಾರಿ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕು. ಸರ್ವರಿಗೂ ಅರಿವು ಮೂಡಿಸಬೇಕು. ತಾರತಮ್ಯವಿಲ್ಲದೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೂಲ ಹಿಂದುಗಳಿಗೆ ಕಿರುಕುಳ, ಅಪರಾಧ ಕೃತ್ಯಗಳ ಹೆಚ್ಚಳ ಮತ್ತು ಹುಟ್ಟಿದ ಊರನ್ನೇ ತೊರೆಯುವಂತಹ ಒತ್ತಡಗಳು ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾ ವೃದ್ಧಿ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂದರ್ಭ ಹಿಂಸಾಕೃತ್ಯಗಳು ಸ್ಫೋಟಗೊಳ್ಳಲು ಮತ್ತು ಅಲ್ಲಿನ ಹಿಂದುಗಳಲ್ಲಿ ದಯಾನಿಯ ಪರಿಸ್ಥಿತಿ ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾ ವೃದ್ಧಿ ಮತ್ತು ಅಲ್ಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು ಕಾರಣವಾಗಿದೆ ಎಂದಿದ್ದಾರೆ.

  • IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

    IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

    ಬಾಗಲಕೋಟೆ: ಐಪಿಎಲ್ ಬೆಟ್ಟಿಂಗ್ ನಿಂದ ಸಾಲ ಮಾಡಿಕೊಂಡು ನದಿಗೆ ಹಾರಿದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

    ಸೈಯದ್ ವಾಳೆ( 38) ಮೃತನಗಿದ್ದಾನೆ. ಹಣ್ಣಿನ ವ್ಯಾಪಾರಿಯಾಗಿರುವ ಈತ ಸಾಲ ಮಾಡಿಕೊಂಡು ನದಿಗೆ ಹಾರಿ ಪ್ರಾನ ಬಿಟ್ಟಿದ್ದಾನೆ. ಮೃತನು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ನಿವಾಸಿಯಾಗಿದ್ದನು. ಈತನ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕಾತರಕಿ ಗ್ರಾಮದ ಬಳಿಯ ಘಟಪ್ರಭಾ ನದಿಗೆ ಹಾರಿ ಸಾವನ್ನಪಿದ್ದಾನೆ. ಇದನ್ನೂ ಓದಿ:  ಸರಳ ದಸರಾ – ಅರಮನೆಗೆ ಬಂದ ಜಂಬೂಸವಾರಿ

    ಈತನಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ, ಮೀನುಗಾರರರು ಹುಡುಕಾಟ ನಡೆಸಿದ್ದರು. ಆದರೆ ಮೃತ ಸಯ್ಯದ್ ಪತ್ರೆಯಾಗಿರಲಿಲ್ಲ. ಇಂದು ಬೆಳಿಗ್ಗೆ ನದಿಯಲ್ಲಿ ಶವ ಪತ್ತೆಯಾಗಿದೆ. ಸೈಯದ್ ಐಪಿಎಲ್‍ನಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್ ಆಡಿ ಸೋತಿದ್ದ. ಹೀಗಾಗಿ 20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಚಿವ ಎಸ್.ಟಿ ಸೋಮಶೇಖರ್‌ರಿಂದ ಡೋಲು ಬಡಿತ, ವೀರಗಾಸೆ ಕುಣಿತ

    ಈ ಹಿನ್ನೆಲೆ ಸಾಲ ಕೊಟ್ಟವರ ಕಿರಿಕಿರಿ ಬೆದರಿಕೆ ಹಾಗೂ ಪಡೆದ ಸಾಲ ತೀರಿಸಲಾಗದೆ ಮನನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಕಲಾದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

  • ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

    ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

    ಮೈಸೂರು: ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಮುಂಜಾನೆ 4.40ರಿಂದ ಅರಮನೆಯಲ್ಲಿ ಹೋಮ ಆರಂಭವಾಗಿದೆ.

    ಹೋಮಕ್ಕೆ ಯದುವೀರ್ ಒಡೆಯರ್ ಅವರಿಂದ ಪೂರ್ಣಾಹುತಿ. 5.45ಕ್ಕೆ ಆನೆ ಕುದುರೆ ಹಸುಗಳ ಆಗಮನವಾಗಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೇರವೇರಿದೆ. ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ. ಉತ್ತರ ಪೂಜೆ ನಂತರ ಶಮಿ ಪೂಜೆ ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗಿದೆ.

    ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7.20ರಿಂದ 7.40ರವರೆಗೆ ಅರಮನೆ ರಾಜಪುರೋಹಿತರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆ ನಡೆಸಿದ ಯದುವೀರ್ ಒಡೆಯರ್, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

    ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2021 ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕೆಂಪು ಸೀರೆಯುಡಿಸಿ ಅಲಂಕಾರ ಮಾಡಲಾಗಿದೆ. ಬೆಳ್ಳಿ ರಥದ ಮೂಲಕ ತಾಯಿ ಚಾಮುಂಡೇಶ್ವರಿಯನ್ನು ಕರೆದೊಯ್ಯುಲಾಗಿದೆ. ಸಚಿವ ಎಸ್.ಟಿ.ಸೋಮಶೇಖರ್‌ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆಗೆ ಬರಲಿದೆ. ತಾಯಿಯನ್ನು ಸ್ವಾಗತಿಸಲು ಭಕ್ತರು ಉತ್ಸುಕರಾಗಿದ್ದಾರೆ. ಬೆಟ್ಟದ ಪಾದದಿಂದ ಅರಮನೆಯ ರಸ್ತೆಯ ವರೆಗೆ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕಲಾಗಿದೆ. ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್

    ಜನಪದ ಕಲಾತಂಡಗಳೊಂದಿಗೆ ಸ್ಟೆಪ್ ಹಾಕಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜಾನಪದ ಕಲಾ ತಂಡಗಳ ಜೊತೆಗೆ ನೃತ್ಯ ಮಾಡಿ ಕಂಸಾಳೆ ಬಡಿದು ಹುರುಪು ತುಂಬಿದ್ದಾರೆ. ಅರಮನೆಯಂಗಳದಲ್ಲಿರುವ ಜಾನಪದ ಕಲಾ ತಂಡದ ಜೊತೆಗೆ ವೀರಗಾಸೆ ಕತ್ತು ಗುರಾಣಿ ಹಿಡಿದು ಉಸ್ತುವಾರಿ ಸಚಿವರು ಕುಣಿದ ಕುಪ್ಪಳಿಸಿದ್ದಾರೆ. ಸರಳ ದಸರಾದಲ್ಲಿ ಅದ್ದೂರಿ ಸ್ಟಪ್ ಹಾಕಿದ ಸೋಮಶೇಖರ್ ಎಲ್ಲಾ ಜಾನಪದ ಕಲಾ ತಂಡಗಳೊಂದಿಗೆ  ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಎಸ್‍ಟಿಎಸ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಸಾಥ್ ನೀಡಿದ್ದಾರೆ.

    ಜಯಮಾರ್ತಂಡ ದ್ವಾರದ ಮೂಲಕ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆ ಆವರಣ ಪ್ರವೇಶಿಸಿದೆ. ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ತಾಯಿ ಉತ್ಸವ ಮೂರ್ತಿಗೆ ಪೂರ್ಣ ಕುಂಭ ಸ್ವಾಗತ ಮಾಡಲಾಗಿದೆ. ಅಂಬಾವಿಲಾಸ ಅರಮನೆ ದ್ವಾರ ಪ್ರವೇಶಿಸಿದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಂಪ್ರದಾಯ ಪೂಜೆ ವಿಧಿವಿಧಾನ ಮೂಲಕ ಉತ್ಸವ ಮೂರ್ತಿ ಬರ ಮಾಡಿಕೊಂಡ ಅರಮನೆ ಅರ್ಚಕರು ಉತ್ಸವ ಮೂರ್ತಿ ಅಂಬಾವಿಲಾಸ ಅರಮನೆಗೆ ಶಿಫ್ಟ್ ಮಾಡಲಾಗಿದೆ. ದಸರಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ  ನಡೆಯುತ್ತಿವೆ.

  • ಅಕ್ಟೋಬರ್ 17ರವರೆಗೆ ಭಾರೀ ಮಳೆ ಮುನ್ಸೂಚನೆ

    ಅಕ್ಟೋಬರ್ 17ರವರೆಗೆ ಭಾರೀ ಮಳೆ ಮುನ್ಸೂಚನೆ

    ಬೆಂಗಳೂರು: ಅಕ್ಟೋಬರ್ 17ರವರೆಗೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಅಕ್ಟೋಬರ್ 17ರವರೆಗೆ ಭಾರೀ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಿನಲ್ಲಿ ಭರ್ಜರಿ ಮಳೆ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ. ಮಳೆಯಿಂದ ಹಾನಿಯಾದರೆ 6 ಓಆಖಈ ತಂಡ ಸಿದ್ಧತೆ ನಡೆಸಿದೆ. ಹೀಗಾಗಿ ಹವಾಮಾನ ಇಲಾಖೆ ಈ ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

    ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಎರಡು ಗಂಟೆಗಳ ಕಾಲ ಧಾರಕಾರವಾಗಿ ಮಳೆ ಸುರಿದಿದೆ. ನಗರದ್ಯಾಂತ ತಗ್ಗು ಪ್ರದೇಶಗಳಲ್ಲಿ ಅಲ್ಲಲ್ಲಿ ನೀರು ನಿಂತಿದೆ. ನಿನ್ನೆ ಸಂಜೆ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ, ಮಧ್ಯರಾತ್ರಿ ಮತ್ತೆ ಮಳೆಯಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ಮಧ್ಯ ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆಗೆ ಬೆಂಗಳೂರಲ್ಲಿ ಹಲವೆಡೆ ಹಾನಿಯಾಗಿದೆ. ಲಕ್ಷ್ಮೀನಾರಾಯಣ ಪುರ, ಬಸವೇಶ್ವರ ನಗರ, ಗಾಯತ್ರಿ ನಗರ 3 ಕಡೆ ಮನೆಗಳಿಗೆ ನೀರು ನುಗ್ಗಿದೆ.ಆರ್ ಆರ್ ನಗರ ಐಡಿಯಲ್ ಹೋಮ್ಸ್ (ಅಕ್ಕಮಹಾದೇವಿ ಕನ್ವೆನ್ಷನ್ ಹಾಲ್ ಬಳಿ), ಪೀನ್ಯ ವಾರ್ಡ್ ನಂ. 38. 4ನೇ ಬ್ಲಾಕ್‍ನಲ್ಲಿ ಎರಡು ಕಡೆ ಮನೆಗಳಿಗೆ ನೀರು ನುಗ್ಗಿದೆ. ಚಿಕ್ಕಸಂದ್ರ ಕೆರೆ ಏರಿಯಾ, ಗುಂಡಪ್ಪ ಲೇಔಟ್, ರಾಯಲ್ ಎನ್ಕ್ಲೇವ್, ಬಿಟಿಎಸ್ ಲೇಔಟ್ ದಾಸರಹಳ್ಳಿಯಲ್ಲಿ ಡ್ರೈನೇಜ್ ನೀರು ತುಂಬಿ ಅವಾಂತರವಾಗಿದೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ನಿನ್ನೆ ರಾತ್ರಿಯಿಡಿ ಸುರಿದ ಮಳೆಗೆ ರಸ್ತೆಯಲ್ಲೇ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಟ ಮಾಡುವಂತಾಗಿದೆ. ಗಾಯಿತ್ರಿನಗರ ಪಾರ್ಕ್‍ನಲ್ಲಿ ಬೃಹತಾಕಾರದ ಮರ ಧರೆಗೆ ಉರುಳಿದೆ. ಪಾರ್ಕ್‍ನಲ್ಲಿ ಮಳೆ ಬಂದಾಗ ಕೂರಲು ವ್ಯವಸ್ಥೆ ಮಾಡಿರುವ ಎಂಚಿನ ಮನೆ ಸ್ಪೇಸ್ ಮೇಲೆ ಮರ ಬಿದ್ದಿದೆ.

  • ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ಹುಬ್ಬಳ್ಳಿ: ಕನ್ನಡದ ಹಿರಿಯ ನಟ ಪ್ರೊ.ಜಿ.ಕೆ ಗೋವಿಂದ ರಾವ್ ಇಂದು ಮುಂಜಾನೆ ನಿಧನರಾಗಿದ್ದಾರೆ.

    ಹಿನ್ನೆಲೆ:
    ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಅವರು ಇಂದು ಬೆಳಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಜಿ.ಕೆ. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು, ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಅವರು ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಕೆರೆ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗಿನ ಅರ್ಪಣೆ

    ಸಾಹಿತ್ಯ:
    ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ, ಸಿನಿಮಾರಂಗದ ಒಡನಾಟ ಅವರಿಗಿದೆ. ಈಶ್ವರ ಅಲ್ಲಾ (ಕಿರು ಕಾದಂಬರಿ), ಶೇಕ್ಸ್‍ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‍ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು) ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ಜಿ.ಕೆ.ಗೋವಿಂದರಾವ್ ನಿಧನದ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಹಿರಿಯ ಲೇಖಕ, ಚಿಂತಕ, ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು.ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

  • ಬೇಯಿಸಿದ ಮೊಟ್ಟೆಯಿಂದ ಪ್ರಾಣ ಬಿಟ್ಟ ಮಹಿಳೆ

    ಬೇಯಿಸಿದ ಮೊಟ್ಟೆಯಿಂದ ಪ್ರಾಣ ಬಿಟ್ಟ ಮಹಿಳೆ

    ಹೈದರಾಬಾದ್: ಊಟದ ವೇಳೆ ಬೇಯಿಸಿದ ಮೊಟ್ಟೆ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಮಹಿಳೆ ಮೃತಪಟ್ಟಿರುವ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದೆ.

    ನೀಲಮ್ಮ ಮೃತಳು. ಬೇಯಿಸಿದ ಮೊಟ್ಟೆಯನ್ನು ತಿನ್ನಲು ಹೋಗಿ ಅದು ಗಂಟಲಿನಲ್ಲಿ ಸಿಲುಕಿ ಈಕೆ ಸಾವನ್ನಪ್ಪಿದ್ದಾಳೆ. ಒಂದು ಮೊಟ್ಟೆ ಮಹಿಳೆಯ ಜೀವವನ್ನು ತೆಗೆದಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ನೀಲಮ್ಮ ಊಟ ಮಾಡುತ್ತಿದ್ದಳು. ಈ ವೇಳೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ದೊಡ್ಡ ಮೊಟ್ಟೆಯನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾಳೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿದೆ. ಗಂಟಲಲ್ಲಿ ಮೊಟ್ಟೆ ಸಿಲುಕಿಕೊಂಡಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದೆ. ಈ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಕುಟುಂಬಸ್ಥರು ಆಕೆಯ ಸಾವಿನ ಬಳಿಕ ಮೊಟ್ಟೆಯನ್ನು ಕತ್ತರಿಸಿ ತಿಂದಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಮತ್ತೆ ಸರ್ಜಿಕಲ್‌ ಸ್ಟ್ರೈಕ್‌? – ಪಾಕಿಸ್ತಾನಕ್ಕೆ ಅಮಿತ್‌ ಶಾ ಎಚ್ಚರಿಕೆ