ಧಾರವಾಡ: ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರ್‌ಎಸ್‍ಎಸ್‍ನ್ನು ಟೀಕೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಮುಸ್ಲಿಂ ವಿರೋಧಿಗಳು ಅಲ್ಲ, ಯಾವ ಸಮುದಾಯದ ವಿರೋಧವೂ ನಮಗಿಲ್ಲ. ಆದರೆ ಅವರು ಮುಗ್ದ ಮುಸ್ಲಿಂರ ವೋಟ್ ಪಡೆಯಲು ಆರ್‍ಎಸ್‍ಎಸ್ ಬಿಜೆಪಿ ಬೈಯುತ್ತಾರೆ ಎಂದರು. ಇದನ್ನೂ ಓದಿ:ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್
ಬಿಜೆಪಿ, ಆರ್‌ಎಸ್‍ಎಸ್‍ನ್ನು ಭೂತದಂತೆ ತೋರಿಸುತ್ತಿದ್ದಾರೆ. ಅದಕ್ಕಾಗಿಯೇ ಸಿದ್ದರಾಮಯ್ಯ, ಎಚ್‍ಡಿಕೆ ಸ್ಪರ್ಧಿಗೆ ಬಿದ್ದಿದ್ದಾರೆ. ಇನ್ನು ಬೇರೆ ವೋಟ್ ಬ್ಯಾಂಕ್ ಎಲ್ಲ ಅವರದು ಕಡಿಮೆ ಆಗುತ್ತಿದೆ ಹೀಗಾಗಿ ಆ ರೀತಿ ಮಾತನಾಡುತ್ತಾರೆ ಎಂದು ಜೋಶಿ ಹೇಳಿದರು. ಜನಸಂಖ್ಯೆ ನಿಯಂತ್ರಣ ಬಗ್ಗೆ ಆರ್‌ಎಸ್‍ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಭಾಗವತ್ ಹೇಳಿರುವ ವಿಚಾರ ಸತ್ಯವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಸರ್ಕಾರಗಳು ಗಂಭೀರ ಚಿಂತನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಸರ್ಜಾ ಕುಟುಂಬದ ಸೊಸೆಯಾಗಿರುವ ಮೇಘನಾ ರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಾಳೆ ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನಲೆ ಪತಿಯ ಸವಿನೆನೆಪಿನಾರ್ಥಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾರೆ.
ರಾಜ ರಾಣಿ ಥೀಮ್‍ನಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದಾಗಿದೆ. ರಾಜ ವಿಧಿವಶರಾದ ಬಳಿಕ ರಾಣಿ, ಮಗನಿಗೆ ಆ ರಾಜನ ಬಗ್ಗೆ ತಿಳಿಸುವ ಥೀಮ್ ಅನ್ನು ಫೋಟೋಶೂಟ್ ಒಳಗೊಂಡಿದೆ. ರಾಜನ ನಿಧನದ ಬಳಿಕ ರಾಣಿ ತನ್ನ ಸಾಮ್ರಾಜ್ಯವನ್ನು ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂಬ ಥೀಮ್‍ನಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಫೋಟೋ ಪೇಂಟಿಂಗ್ ಮಾಡುತ್ತಿರುವ ಮೇಘನಾ ರಾಜ್ ರಾಣಿಯಂತೆ ಕಾಣಿಸುತ್ತಿದ್ದಾರೆ. ಮೇಘನಾ ಮಗ ರಾಯನ್ ಸರ್ಜಾ ಈ ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ. ಫೋಟೋಶೂಟ್ ಥೀಮ್ ತುಂಬಾ ಚೆನ್ನಾಗಿದೆ. ಮಧುರಾ ರೆಡ್ಡಿ ಅವರ ಕಾನ್ಸೆಪ್ಟ್‍ನಲ್ಲಿ ಎಎಂ ಸ್ಟುಡಿಯೋ ಜೊತೆ ಸೇರಿ ಈ ಹೊಸ ಫೋಟೋಶೂಟ್ ಮಾಡಲಾಗಿದೆ. ನಾಳೆ ಚಿರು ಹುಟ್ಟುಹಬ್ಬವಾಗಿದ್ದು, ಮೇಘನಾ ರಾಜ್ ಅವರ ಹೊಸ ಸಿನಿಮಾ ಕೂಡ ಲಾಂಚ್ ಆಗಲಿದೆ. 2 ವರ್ಷಗಳ ಬಳಿಕ ಮತ್ತೆ ಬಿಗ್ ಸ್ಕ್ರೀನ್‍ಗೆ ಮೇಘನಾ ರಾಜ್ ಮರಳಲಿದ್ದಾರೆ. ಇದನ್ನೂ ಓದಿ: 16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ
ಒಟ್ಟಿನಲ್ಲಿ ಮೇಘನಾ ಅವರಿಗೆ ಈ ಅಕ್ಟೋಬರ್ ತಿಂಗಳು ತುಂಬಾ ವಿಶೇಷವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮಗ ರಾಯನ್ ರಜ್ ಸರ್ಜಾರ ಮತ್ತು ಪತಿ ಚಿರಂಜೀವಿ ಸರ್ಜಾ ಒಂದೆ ತಿಂಗಳಿನಲ್ಲಿ ಜನಿಸಿದ್ದಾರೆ. ಈ ಕುಟುಂಬದಲ್ಲಿ ಚಿರು ಜೊತೆಗೆ ಇಲ್ಲ ಎನ್ನುವ ದುಃಖ ಇದೆ. ಚಿರುವ ಅವರ ಸವಿನೆನೆಪನ್ನು ವಿಶೇಷವಾಗಿಸಲು ಮೇಘನಾ ರಾಜ, ರಾಣಿ ಕಾನ್ಸೆಪ್ಟ್‍ನಲ್ಲಿ ಜೀವನದ ಕಥೆ ಹೇಳುವ ಪ್ರಯತ್ನ ತುಂಬಾ ವಿಭಿನ್ನವಾಗಿದೆ. ಮೇಘನಾ ಮುದ್ದು ಮಗ ರಾಯಜ್ ರಾಜ್ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರು ತೆರೆ ಮೇಲೆ ಬಂದು ಅಭಿಮಾನಿಗಳನ್ನು ರಂಜಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್
ಭೋಪಾಲ್: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮೈದಾನದಲ್ಲಿ ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿತ್ತು. ಈ ವೀಡಿಯೋ ಮೂಲಕವಾಗಿ ಇದೀಗ ಪ್ರಜ್ಞಾ ಸಿಂಗ್ ಠಾಕೂರ್ ಸುದ್ದಿಯಾಗುತ್ತಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಬಡ್ಡಿ ಆಡಿರುವ ವೀಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದವರು ರಾವಣರು. ದುರ್ಗಾ ಪೂಜೆಯ ವೇಳೆ ಆರತಿ ಬೆಳಗಲು ಹೋಗಿದ್ದೆ. ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ ಕಬಡ್ಡಿ ಆಡುವಂತೆ ಕೇಳಿಕೊಂಡರು. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಸಿಂಧಿಗಳಲ್ಲಿ ಯಾರೋ ರಾವಣನ ವ್ಯಕ್ತಿತ್ವದವರು ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಿನಂತೆ ನೋಡುತ್ತಿದ್ದಾರೆ. ದೇಶಭಕ್ತರು, ಕ್ರಾಂತಿಕಾರಿಗಳು, ನನ್ನ ರೀತಿಯ ಸಂತರೊಡನೆ ಸಂಘರ್ಷಕ್ಕಿಳಿದರೆ ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗಿ ಹೋಗುತ್ತದೆ ಎಂದು ಪ್ರಜ್ಞಾ ಸಿಂಗ್ ಠಾಕೂರ್ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಗೋಮೂತ್ರದಿಂದ ನನ್ನ ಸ್ತನಕ್ಯಾನ್ಸರ್ ವಾಸಿಯಾಯ್ತು- ಸಾಧ್ವಿ ಪ್ರಜ್ಞಾಸಿಂಗ್
Pragya Thakur, 51, is out on bail in the Malegaon blasts case on health grounds and has begged off several court hearings over medical issues.
But critics say the BJP MP has displayed no infirmity in recent videos that went viral.After Garba Dance,Pragya Thakur Plays Kabaddi pic.twitter.com/LDTbDRglRk
ಪ್ರಜ್ಞಾ ಸಿಂಗ್ ಮಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆದರೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿತ್ತು. ಸಾಕಷ್ಟು ಸಮಯದಿಂದ ವ್ಹೀಲ್ ಚೇರ್ ಮೇಲೆ ಕುಳಿತೇ ಸಂಚರಿಸುತ್ತಿದ್ದರು. ಆದರೆ ಮೈದಾನದಲ್ಲಿ ಅವರು ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಠಾಕೂರ್ ಕಬಡ್ಡಿ ಆಡುತ್ತಿರುವ ವೀಡಿಯೋ ನೋಡಿದವರು ಆಶ್ಚರ್ಯ ಹೊರಹಾಕಿದ್ದಾರೆ. ಜೈಲು ವಾಸದಿಂದ ತಪ್ಪಿಸಿಕೊಳ್ಳಲು ಅವರು ಅನಾರೋಗ್ಯದ ಕಾರಣವೊಡ್ಡಿದ್ದಾರೆ. ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆದಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುವಷ್ಟು ದೈಹಿಕವಾಗಿ ಫಿಟ್ ಇದ್ದಾರೆ ಎಂದ ಮೇಲೆ ಜಾಮೀನು ಪಡೆದಿದ್ದೇಕೆ? ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
ನವದೆಹಲಿ: ನಾನು ಎಐಸಿಸಿ ಹಂಗಾಮಿ ಅಧ್ಯಕ್ಷೆಯಲ್ಲ, ಪೂರ್ಣಾವಧಿಯ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ನೇರವಾಗಿ ಚರ್ಚಿಸಿ ಎನ್ನುವ ಮೂಲಕ ಸೋನಿಯಾ ಗಾಂಧಿ ಕಾಂಗ್ರೆಸ್‍ನೊಳಗಿರುವ ಭಿನ್ನಮತೀಯರಿಗೆ ತೀಕ್ಷ್ಣ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.
ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, G23 ಬಣ ಸೇರಿದಂತೆ ನೂತನ ಅಧ್ಯಕ್ಷರ ಬಗ್ಗೆ ಆಕ್ಷೇಪ ಎತ್ತುತ್ತಿದ್ದ ನಾಯಕರಿಗೆ ನೇರವಾಗೇ ಉತ್ತರ ನೀಡಿದ್ದಾರೆ.
G23 ನಾಯಕರು ಸೇರಿದಂತೆ ಕಾಂಗ್ರೆಸ್‍ನ ಹಲವು ನಾಯಕರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗಬೇಕು ಎಂದು ಮಾಧ್ಯಮಗಳಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಅಂಶವನ್ನ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಸೋನಿಯಾ ಗಾಂಧಿ, ಮಾಧ್ಯಮಗಳ ಮೂಲಕ ನಾಯಕತ್ವದ ಬಗ್ಗೆ ಚರ್ಚೆ ಮಾಡಬೇಡಿ ಏನೇ ಇದ್ದರೂ ನನ್ನಲ್ಲಿ ಚರ್ಚಿಸಿ ಎಂದು ಚಾಟೀ ಬೀಸಿದರು. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
ಇನ್ನು ಇದೇ ವೇಳೆ ಕಾಂಗ್ರೆಸ್ ಪಕ್ಷದ ಪುನಶ್ಚೇತನ ಆಗಬೇಕು ಎಂದು ಸೋನಿಯಗಾಂಧಿ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನಿಂದ ಸಂಘಟನೆ ಆಗಬೇಕಿದ್ದು, ಪಕ್ಷದ ಹಿತಾಸಕ್ತಿ ನಮ್ಮ ಪರಮೋಚ್ಚ ಧ್ಯೇಯವಾಗಬೇಕಿದೆ ಎಂದು ಹಿರಿಯ ನಾಯಕರಿಗೆ ಹೇಳಿದರು. ಪಕ್ಷದ ಸಾಂಸ್ಥಿಕ ಚುನಾವಣೆ ಬಹಳ ಬೇಗ ಆಗಬೇಕಿದ್ದು, ಈ ಬಗ್ಗೆ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ವಿವರಿಸಲಿದ್ದಾರೆ ಪ್ರಸ್ತಾವಿಕ ಭಾಷಣದಲ್ಲಿ ಸೋನಿಯಾ ಗಾಂಧಿ ಹೇಳಿದರು. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
ಬೆಂಗಳೂರು: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ. ಅದು ಒಂದು ಬೇರೆ ರೀಸನ್. ಅದರಿಂದ ಸಿನಿಮಾಕ್ಕೆ ತೊಂದರೆ ಆಗಲಿಲ್ಲ, ಆಗೋದೂ ಇಲ್ಲ ಎಂದು ನಟ ಸುದೀಪ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡುತ್ತಾ, ಸಿನಿಮಾ ರಿಲೀಸ್ ಒಂದು ದಿನ ತಡವಾಗಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ನಾನು ಕೋಟಿಗೊಬ್ಬ3ಗೆ ವೇಟ್ ಮಾಡ್ತಿರಲಿಲ್ಲ. ನಾನು ನೋಡುತ್ತಾ ಇದ್ದೆ. ಅಭಿಮಾನಿಗಳು ಸಿನಿಮಾ ರಿಲೀಸ್ ಆಗುವುದು ತಡವಾಗಿದ್ದರೂ ಮಳೆಯಲ್ಲಿ ಬಂದು ಸಿನಿಮಾ ನೋಡಿದ್ದಾರೆ. ನಾನು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡಬೇಕು. ಒಂದು ಸಿನಿಮಾ ಯಶಸ್ಸು ಕಂಡ್ರೆ ಸುಮ್ಮನೆ ಕೂರುವುದಿಲ್ಲ. ಮುಂದೆ ಇನ್ನೂ ಚೆನ್ನಾಗಿ ಏನು ಮಾಡಬೇಕು ಎಂದು ಯೋಚನೆ ಮಾಡುತ್ತೇನೆ. ಸಂದರ್ಶನದಲ್ಲಿ ಎಲ್ಲ ಪ್ರಶ್ನೆ ಹೇಗೆ ಮುಖ್ಯವಾಗುತ್ತೋ ಹಾಗೇ ಸಿನಿಮಾ ಆಯ್ಕೆಯೂ ಮುಖ್ಯವಾಗುತ್ತದೆ. ಹೀರೊ ಆಗೋವರೆಗೂ ಮಾತ್ರ ನಂತರ ಜನರನ್ನು ಸಿನಿಮಾ ಮಂದಿರಕ್ಕೆ ಎಳೆದು ತರಬೇಕು ಎಂದು ಹೇಳುವ ಮೂಲಕ ಸಿನಿಮಾ ಆಯ್ಕೆ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
ಅರ್ಜುನ್ ಜನ್ಯ ಒಳ್ಳೆ ಸಂಗೀತವನ್ನು ನೀಡಿದ್ದಾರೆ. ಮ್ಯೂಸಿಕ್ ಇಂದ ಕೂಡಾ ಸಿನಿಮಾ ಹಾಳಾಗುತ್ತದೆ. ಆದರೆ ಅರ್ಜುನ್ ಅವರ ಮ್ಯೂಸಿಕ್ ಮಾತ್ರ ಚೆನ್ನಾಗಿದೆ. ರವಿಶಂಕರ್ ನನ್ನದೂ ಒಂದು ಲಾಂಗ್ ಜರ್ನಿಯಾಗಿದೆ. ಅವರು ಬೆಸ್ಟ್ ಪರ್ಸನ್. ಶಿವಾ ಮತ್ತು ಸತ್ಯಗೆ 2 ಪಾತ್ರವನ್ನು ಮಾಡಬೇಕಿತ್ತು. ಮೇಕಪ್, ಬಾಡಿ ಲ್ಯಾಂಗ್ವೇಜನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ಕೋಟಿಗೊಬ್ಬ3 ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು
ಊಟದಲ್ಲಿ ಕೂದಲು ಬಿದ್ದರೆ ಪಕ್ಕಕ್ಕಿಡಬೇಕು ಹೊರತು ಹಾವು ಅಂತ ತಿಳಿದು ಊಟ ಬಿಡಬಾರದು. ಅದು ಕೂದಲಷ್ಟೇ ಅಲ್ಲವೇ. ಇದು ಯಾರ ಷಡ್ಯಂತ್ರ ಅನ್ನೋದು ನನಗೆ ಗೊತ್ತಿದೆ. ಅಂಥವರನ್ನ ದೂರಕ್ಕಿಡುತ್ತೇನೆ. ಹಣ ನನಗೆ ಮುಖ್ಯವಲ್ಲ. ಕೆಲವೊಮ್ಮೆ ಬಿಟ್ಟುಕೊಡಬೇಕಾಗುತ್ತದೆ. ಆದಷ್ಟು ಬಿಟ್ಟುಕೊಡ್ತೀನಿ. ನನಗೂ ಹೆಂಡತಿ ಮಕ್ಕಳು ಇದ್ದಾರೆ. ಮಂಜು, ಕುಮಾರ್, ಸುಪ್ರೀತ್ ಅಂತವರಿಂದ ಇವತ್ತು ಕೋಟಿಗೊಬ್ಬ ಸಿನಿಮಾವನ್ನ ಕಾಪಾಡೋಕೆ ಸಾಧ್ಯವಾಗಿದ್ದು. ವಿರೋಧಿಗಳಿಗೆ ನಾನು ಖಡಕ್ ಸಂದೇಶ ಕೊಡಲ್ಲ. ನಿನ್ನೆ ಸಿನಿಮಾ ರಿಲೀಸ್ ಆಯ್ತಲ್ಲ ಅದೇ ಉತ್ತರವಾಗಿದೆ. ಚಿಲ್ಲರೆ ಬುದ್ಧಿಗಳು ಇವೆಲ್ಲ. ಶತ್ರುಗಳು ಅನ್ನೋದು ದೊಡ್ಡ ಸ್ಥಾನವಾಗಿದೆ. ಆ ಹೆಸರನ್ನ ಇಂಥವರಿಗೆ ಹೇಳಕಾಗಲ್ಲ. ಅಂಥವರಿಗೆ ಉತ್ತರ ಕೊಡಲ್ಲ ನಾನು ಎಂದು ಹೇಳಿದ್ದಾರೆ.
ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ. ಅದು ಒಂದು ಬೇರೆ ರೀಸನ್. ಅದರಿಂದ ಸಿನಿಮಾಕ್ಕೆ ತೊಂದರೆ ಆಗಲಿಲ್ಲ. ಆಗೋದೂ ಇಲ್ಲ. ಸೂರಪ್ಪ ಬಾಬು ಸಿನಿಮಾ ಮಾಡಬೇಕು ಅಂದಾಗ ನಾನು ಹೇಳ್ದೆ ಕೋಟಿಗೊಬ್ಬ 2 ಇಂದ ಒಂದು ನಾಟ್ ಇತ್ತು. ಅದನ್ನ ಸೂರಪ್ಪ ಬಾಬುಗೆ ಹೇಳಿದ್ದೆ. ಆಗ ಶಿವಕಾರ್ತಿಕ್ ಹೊಸಬರು ಅವರು ಕಥೆ ಹೇಳಿದ್ರು, ಕೊನೆಗೆ ಅದನ್ನ ಡೆವಲಪ್ ಮಾಡಿದೆವು ಎಂದು ಸಿನಿಮಾ ಕಥೆ ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ.
ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾನು ತಡಮಾಡಿದ್ದೇನೆ ಎಂದು ಹೇಳುವ ಮೂಲವಾಗಿ ದಸರಾ ಶುಭಾಶಯವನ್ನು ಅಭಿಮಾನಿಗಳಿಗೆ ಹೇಳಿದ್ದಾರೆ.
ನಾನು ತಡ ಮಾಡಿದ್ದೇನೆ ಎಂಬುದು ಗೊತ್ತು. ಆದರೂ ದಸರಾ ಹಬ್ಬದ ಶುಭಾಶಯಗಳು. ಹಬ್ಬ ಎಂದರೆ ನಗು ಮತ್ತು ಸಂಭ್ರಮ. ಹಬ್ಬದಲ್ಲಿ ಮಾತ್ರವಲ್ಲದೇ ಸದಾ ಕಾಲ ಖುಷಿ ನೀಡಲು ಬಯಸುತ್ತೇನೆ. ನನ್ನನ್ನು ಅಥವಾ ನನ್ನ ಕೆಲಸವನ್ನು ನೋಡಿದಾಗ ನಿಮ್ಮ ಮುಖದಲ್ಲಿ ಖುಷಿ ಮೂಡಿಸಲು ನಾನು ಬಯಸುತ್ತೇನೆ. ಇದನ್ನು ಹೇಳಬೇಕು ಎನಿಸಿತು. ನೀವೆಲ್ಲರೂ ನನ್ನ ಪಾಲಿನ ಬೆಸ್ಟ್ ವ್ಯಕ್ತಿಗಳು ಎಂದು ಅಭಿಮಾನಿಗಳಿಗೆ ರಶ್ಮಿಕಾ ವಿಶ್ ಮಾಡಿ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ
ಸದ್ಯ ರಶ್ಮಿಕಾ ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ಬೇಡಿಕೆ ಇರುವ ನಟಿ ಮಣಿಯಾಗಿದ್ದಾರೆ. ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅಲ್ಲು ಅರ್ಜುನ್ ಜೊತೆ ನಟಿಸಿರುವ ಪುಷ್ಪ ಚಿತ್ರ ಡಿಸೆಂಬರ್ 17ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಶ್ರೀವಲ್ಲಿ ಎಂಬ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಶ್ರೀವಲ್ಲಿ ಪಾತ್ರದ ಪೋಸ್ಟರ್ ಮತ್ತು ಸಾಂಗ್ ಬಿಡುಗಡೆ ಆಗಿತ್ತು. ಪುಷ್ಪ ಚಿತ್ರದಿಂದ ರಶ್ಮಿಕಾ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಅತ್ತ ಬಾಲಿವುಡ್‍ನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಅವರು ಅಭಿಮಾನಿಗಳ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀ ಅವರು ವಿಭಿನ್ನವಾಗಿ ಅಭಿಮಾನಿಗಳಿಗೆ ಶುಭಕೊರಿದ್ದಾರೆ.
– ನಾನು ಆರ್‌ಎಸ್‍ಎಸ್ ವಿರೋಧಿ – ಬಿಎಸ್‍ವೈ ಭೇಟಿ ದೃಢಪಡಿಸಿದರೆ ರಾಜಕೀಯ ನಿವೃತ್ತಿ
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‍ಎಸ್‍ನವರು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಹಾನಗಲ್ ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಯಾವುದು ಹೊಸ ರಾಜಕೀಯ ಚಿಂತನೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಎಸ್‍ವೈ ಭೇಟಿ ವಿಚಾರವನ್ನ ಅಲ್ಲಗೆಳೆದಿದ್ದಾರೆ. ಇದನ್ನೂ ಓದಿ:ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ
ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ. ಅವರ ತಂದೆ ಆರ್‌ಎಸ್‍ಎಸ್‍ನಲ್ಲಿ ಇದ್ದರಾ..? ಬೊಮ್ಮಾಯಿ ಕುರ್ಚಿ ಉಳಿಸಿಕೊಳ್ಳಲು ಆರ್‍ಎಸ್‍ಎಸ್ ಹೊಗಳಬೇಕು ಅಲ್ವಾ ಎಂದು ಆರ್‌ಎಸ್‍ಎಸ್ ಕುರಿತಾಗಿ ಮಾತನಾಡುತ್ತಾ ಸಿಎಂ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್
ರಾಜ್ಯದಲ್ಲಿ ಚಾಣಕ್ಯ ವಿವಿ ಸ್ಪಾಪನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ. ಚಾಣುಕ್ಯ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಪಾಪನೆ ಮಾಡಲು ಆರ್‌ಎಸ್‍ಎಸ್ ನವರು ಹೊರಟಿದ್ದಾರೆ. ಒಂದೂವರೆ ಕೋಟಿ ರೂಪಾಯಿಗೆ ಒಂದು ಎಕರೆಯಂತೆ ವಶಪಡಿಸಿಕೊಂಡ 116 ಎಕರೆ 16 ಗುಂಟೆ ಜಮೀನನ್ನ ನೀಡಲು ಸರ್ಕಾರ ಮುಂದಾಗಿದೆ. ಆ ಭೂಮಿಯನ್ನ ಕೇವಲ 50 ಕೋಟಿ ರೂಪಾಯಿಗೆ ಆ ಜಮೀನನ್ನ ನೀಡಲು ಹೊರಟಿದ್ದಾರೆ. ಆದರೆ ಅದು ಸಧ್ಯ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಆಗಿದೆ. ಅತಂಹ ಬೆಲೆ ಬಾಳುವ ಜಮೀನನ್ನು ವಿವಿ ಸ್ಥಾಪನೆಗೆ ನೀಡಲು ಮುಂದಾಗಿರುವುದು ಸರಿಯಲ್ಲವೆಂದು ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ರಾಜಕೀಯ ಭೇಟಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ನಾನು ಭೇಟಿಯಾಗಿದ್ದು ಅಪ್ಪಟ್ಟ ಸುಳ್ಳು. ಅವರು ಆರ್‌ಎಸ್‌ಎಸ್‌ನಿಂದ ಬಂದವರು. ನಾನು ಆರ್‌ಎಸ್‍ಎಸ್ ವಿರೋಧಿ. ನಾನು ಅವರ ತದ್ವಿರುದ್ಧ. ನಾನು ಬಿಎಸ್‍ವೈ ಅವರು ಭೇಟಿಯಾಗಿದ್ದು, ದೃಢಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲ ಎಸೆದಿದ್ದಾರೆ.
ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಎಚ್‍ಡಿಕೆ ಜಟಾಪಟಿ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೆ ಸಿದ್ದರಾಮಯ್ಯ ಎಚ್‍ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಸೋಮಾರಿಗಳ ಮಾಡುವ ಯೋಜನೆ ಅನ್ನೋ ಎಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ. ಅದು ಹೊಟ್ಟೆ ತುಂಬಿದವರು ಹೇಳುವ ಹೇಳಿಕೆ. ಹಸಿವು ಯಾರು ಅನುಭವಿಸಿದವರು ಮತ್ತು ಹಸಿದವರು ಎಂದು ಹೀಗೆ ಮಾತನಾಡಲ್ಲ. ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ. ಬಡವರು ಹೇಳಿದರೆ ಅದು ಬೇರೆ. ಕುಮಾರಸ್ವಾಮಿಗೆ ಮಾತಿಗೆ ಕಿಮ್ಮತ್ತು ಕೊಡುವ ಹಂಗಿಲ್ಲ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್
ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಜಗಳ ನಿಂತಿಲ್ಲ. ಸಿದ್ದರಾಮಯ್ಯ ವಿರುದ್ಧ ಪುಟಗೋಸಿ ಪದ ಬಳಸಿದ್ದ ಕುಮಾರಸ್ವಾಮಿ ಈಗ ರಾಜಕೀಯ ನರಮೇಧ ಮತ್ತು ಕಿರಾತಕ ಪದ ಬಳಸಿದ್ದಾರೆ. ಕಾಲ ಚಕ್ರ ತಿರುತ್ತಿದೆ, ನಿಮ್ಮ ಅಂತ್ಯಕಾಲವೂ ಸನ್ನಿಹಿತವಾಗಿದೆ. ನಿಮ್ಮ ನಿಜ ಬಣ್ಣ ಗೊತ್ತಾಗುತ್ತಿದೆ. ತೊಟ್ಟಿಲು ತೂಗಿ, ಮಗು ಚಿವುಟುತ್ತಾ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜಕಾರಣ ಎಂದು ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು
– ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು – ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ದಹಸ್ತ ಸೂತ್ರಧಾರಿ – ತೊಟ್ಟಿಲನ್ನೂ ತೂಗಿ, ಮಗು ಚಿವುಟುತ್ತಾ, ಕತ್ತು ಕುಯ್ಯುವ ರಾಜಕಾರಣ – ಸಿದ್ದಹಸ್ತರೇ ನಿಮಗೆ ಪಾಠ ಕಲಿಸುವ ಜನತಾಪರ್ವ ಆರಂಭವಾಗಿದೆ
ಬೆಂಗಳೂರು: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಾರ್ ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಎಚ್‍ಡಿಕೆ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ‘ಸಿದ್ದಹಸ್ತ’ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ. ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ‘ಅಹಿಂದ’ ಎಂದು ಜನರನ್ನು ಅಡ್ಡದಾರಿ ಹಿಡಿಸಿದ ‘ಸಿದ್ದಹಸ್ತ ಶೂರರು’ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು
ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ #ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ! 1/12
ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ದಹಸ್ತ ಸೂತ್ರಧಾರಿಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್‍ನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ರಾಜಕೀಯ ನರಮೇಧಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ. 2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ. ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ಸಿದ್ದಸೂತ್ರ ಹಣೆದಿದ್ದು ಯಾರು? ಎಂದು ಕ್ರಾಂಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?
ಈ ಸಿದ್ದಹಸ್ತರ ಸಿದ್ದಸೂತ್ರ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ. ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ. 2023ರ ಚುನಾವಣೆಯಲ್ಲಿ ಭೈರತಿ ಸುರೇಶ್‍ಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು? ಎಂದು ಕಾಂಗ್ರೆಸ್‍ಗೆ ಪ್ರಶ್ನೆಗಳ ಬಾಣವನ್ನು ಬಿಟ್ಟಿದ್ದಾರೆ.
ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು ‘ಅಡ್ಡದಾರಿ’ ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ #ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ.2/12
ಕಳೆದ ಲೋಕಸಭೆ ಚುನಾವಣೆ ನಂತರ ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್‍ಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ. ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನವದುರ್ಗೆಯರ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮಂಗಳೂರು ದಸರಾಕ್ಕೆ ತೆರೆ
2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ!! ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು? 4/12
ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ರಸಸ್ವಾದ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ, ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ ಎಂದು ಕಾಂಗ್ರೆಸ್ ನಡೆ ಕುರಿತಾಗಿ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.
ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ! 2023ರ ಚುನಾವಣೆಯಲ್ಲಿ ಭೈರತಿ ಸುರೇಶ್ʼಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು?6/12
ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ಕಿರಾತಕ ರಾಜಕಾರಣ ಮಾಡಿದಿರಿ. ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ. ಸಿದ್ದಹಸ್ತರೇ ನಿಮಗೆ ಪಾಠ ಕಲಿಸುವ ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ಮೋಹಕ ತಾರೆ ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ದಸರಾ ಹಬ್ಬಕ್ಕೆ ಕ್ಯೂಟ್ ಆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ದಸರಾ ಅಥವಾ ದೀಪಾವಳಿ ಹಬ್ಬಕ್ಕೆ ಈ ಫೋಟೋಶೂಟ್ ಮಾಡಿಸಿದ್ದೇವಾ ಎಂದು ನನಗೆ ಸರಿಯಾಗಿ ನೆನೆಪು ಆಗುತ್ತಿಲ್ಲ. 2016 ರಲ್ಲಿ ತೆಗೆದಿರುವ ಫೋಟೋ ಎನ್ನಿಸುತ್ತದೆ. ನನಗೆ ಯಾವಾಗ ಎಂದು ಸರಿಯಾಗಿ ಗೊತ್ತಾಗುತ್ತಿಲ್ಲ ಎಂದು ಬರೆದುಕೊಂಡು ಅವರು 2016ರಲ್ಲಿ ತೆಗೆಸಿರುವ ಮುದ್ದಾದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಭರ್ಜರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು
ವಾಸುಕಿ ವೈಭವ್, ಅದ್ವಿತಿ ಶೆಟ್ಟಿ, ಚೈತ್ರಾ ರೈ ಸೇರಿದಂತೆ ಹಲವು ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಮ್ಯಾ ಅವರು ಸಿನಿಮಾದಿಂದ ದೂರವಾಗಿ ಹಲವು ವರ್ಷ ಕಳೆದಿದೆ. ಆದರೆ ಇವರ ಅಭಿಮಾನಿಗಳ ಬಳಗ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಪದ್ಮಾವತಿಯನ್ನು ತೆರೆ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಕಾಯುತ್ತಿದೆ. ಆದರೂ ಕೂಡ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಘಟನೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಾ ಅಭಿಮಾನಿಗಳ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.