Tag: publictv

  • ಮನೆಯವರ ಒತ್ತಾಯಕ್ಕೆ ಮದುವೆ- 10ನೇ ದಿನಕ್ಕೆ ಗರ್ಭಿಣಿ, ಪತಿಗೆ ಶಾಕ್‌!

    ಮನೆಯವರ ಒತ್ತಾಯಕ್ಕೆ ಮದುವೆ- 10ನೇ ದಿನಕ್ಕೆ ಗರ್ಭಿಣಿ, ಪತಿಗೆ ಶಾಕ್‌!

    ಲಕ್ನೋ: ಮದುವೆಯಾದ 10ನೇ ದಿನ ನವವಿವಾಹಿತೆ 8 ತಿಂಗಳ ಗರ್ಭಿಣಿ ಆಗಿದ್ದಾಳೆ ಎಂದು ವೈದ್ಯರು ಹೇಳಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ನವವಿವಾಹಿತ ಯುವತಿ ಮದುವೆಯಾಗಿ 10 ದಿನಕ್ಕೆ ವಿಪರೀತ ಹೊಟ್ಟೆ ನೋವು ಎಂದಳು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ವೈದ್ಯರು ಪರೀಕ್ಷೆ ನಡೆಸಿದಾಗ ಯುವತಿ 8 ತಿಂಗಳ ಗರ್ಭಿಣಿ ಎಂದು ತಿಳಿದಿದೆ. ವಿಷಯ ತಿಳಿದ ಪತಿ ಮತ್ತು ಮನೆಯವರಿಗೆ ಶಾಕ್ ಆಗಿದೆ. ಇದನ್ನೂ ಓದಿ:  RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

    ಮದುವೆಗೂ ಮುಂಚೆಯೇ ಇವರಿಬ್ಬರೂ ಒಟ್ಟಿಗಿದ್ದರು, ಆದ್ದರಿಂದಲೇ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಮಾತನಾಡಿದ್ದಾರೆ. ಅದಕ್ಕೆ ಉತ್ತರಿಸಿದ ಪತಿ, ತಾನು ಆಕೆಯೊಂದಿಗೆ ಮದುವೆಗೆ ಮುನ್ನ ಯಾವುದೇ ದೈಹಿಕ ಸಂಪರ್ಕ ಹೊಂದಿರಲಿಲ್ಲ. ಈ ಗರ್ಭಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದಾನೆ. ಮನೆಯವರ ಒತ್ತಾಯಕ್ಕೆ ಈ ಹುಡುಗಿ ಮದುವೆಗೆ  ಆಗಿದ್ದಾಳೆ ಎನ್ನುವುದು ನಂತರ ತಿಳಿದು ಬಂದಿದೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    ಯುವತಿಗೆ ತನ್ನ ಪ್ರಿಯಕರನನ್ನೇ ಮದುವೆಯಾಗಲು ಮನಸ್ಸಿತ್ತಂತೆ. ಆದರೆ ಮನೆಯವರು ಅದಕ್ಕೆ ಒಪ್ಪಿರಲಿಲ್ಲ. ಪ್ರೀತಿಸಿದವನನ್ನು ಮದುವೆಯಾಗಲು ಬಿಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಬೆದರಿಸಿದ್ದಳಂತೆ. ಈ ಎಲ್ಲಾ ವಿಚಾರಗಳನ್ನು ನೆರೆಹೊರೆಯವರು ಈಗ ಹೇಳುತ್ತಿದ್ದಾರೆ.

  • RSS ಮುಖಂಡರು ಹೇಳುವ ಕೆಲವು ವಿಚಾರ ಸರಿ ಇರುತ್ತವೆ: ಹೊರಟ್ಟಿ

    RSS ಮುಖಂಡರು ಹೇಳುವ ಕೆಲವು ವಿಚಾರ ಸರಿ ಇರುತ್ತವೆ: ಹೊರಟ್ಟಿ

    – ರಾಜಕಾರಣ ಬರೀ ಟೀಕೆ ಮಾಡೋದಾಗಿದೆ

    ಕೊಪ್ಪಳ:  RSS ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರತ್ತವೆ ಎಂದು (RSS) ಆರ್‌ಎಸ್‍ಎಸ್‍ ಮೇಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಾಫ್ಟ್ ಕಾರ್ನರ್ ತೋರಿ ಕೊಪ್ಪಳದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆರ್‌ಎಸ್‍ಎಸ್‍ ಕುರಿತು ಹೇಳಿಕೆ ವಿಚಾರವಾಗಿ ನಾನು ರಾಜಕಾರಣವನ್ನು ಮಾತಾನಾಡೋದಿಲ್ಲ. ಆರ್‌ಎಸ್‍ಎಸ್‍ ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರತ್ತವೆ. ಅವರ ಅವರ ವೈಯಕ್ತಿಕವಾಗಿದೆ, ನಾನು ಏನೂ ಮಾತನಾಡುವದಿಲ್ಲ ಎಂದು ಬಸವರಾಜ್ ಹೊರಟ್ಟಿ ಆರ್‌ಎಸ್‍ಎಸ್‍ ಮೇಲೆ ಮೃದು ಧೋರಣೆಯನ್ನು ತೋರಿದ್ದಾರೆ. ಇದನ್ನೂ ಓದಿ:  RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

    ಅಂದಿನ ರಾಜಕಾರಣ ತತ್ವದ ಆಧಾರದ ಮೇಲೆ ಇತ್ತು. ಇವತ್ತಿನ ರಾಜಕಾರಣ ಬರೀ ಟೀಕೆ ಮಾಡೋದಾಗಿದೆ. ಇದು ಜನರಿಗೆ ಬೇಜಾರಾಗಿದೆ. ಎಲ್ಲ ಪಕ್ಷದವರಿಗೂ ನಾನು ಹೇಳುತ್ತೆನೆ, ಬರೀ ಟೀಕೆ ಮಾಡಿ ಜನರ ಮೇಲೆ ಪರಿಣಾಮ ಬಿರೋದಿಲ್ಲ. ನಾವು ಏನ್ ಕೆಲಸ ಮಾಡುತ್ತೇವೆ ಅನ್ನೋದ ಜನರಿಗೆ ಗೊತ್ತಾಗಬೇಕು ಎಂದು ಹೊರಟ್ಟಿ ಇಂದಿನ ರಾಜಕೀಯ ಸ್ಥಿತಿ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

  • ಕೂಡಲೇ ಸಭೆ ಕರೆಯಿರಿ – ಸೋನಿಯಾಗೆ ಪತ್ರ ಬರೆದು ಸಿಧು ಆಗ್ರಹ

    ಕೂಡಲೇ ಸಭೆ ಕರೆಯಿರಿ – ಸೋನಿಯಾಗೆ ಪತ್ರ ಬರೆದು ಸಿಧು ಆಗ್ರಹ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಂಜಾಬ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮುಂದೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರ ಕಾರ್ಯಗಳ ಸಂಬಂಧ ಪತ್ರ ಬರೆದಿದ್ದಾರೆ.

    ಅಕ್ಟೋಬರ್ 15ರಂದೇ ಸಿಧು ಪತ್ರ ಬರೆದಿದ್ದು, ಇಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದ ಸಿಧು, ಎಲ್ಲವೂ ಬಗೆಹರಿದಿದೆ ಎಂದು ಪ್ರತಿಕ್ರಿಯಿಸಿದ್ದರು. ಅದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದು ಕೂತುಹಲ ಕೆರಳಿಸಿದೆ. ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

    ಪತ್ರದಲ್ಲಿ ಏನಿದೆ: ಧರ್ಮ ಅಪವಿತ್ರಗೊಳಿಸಿದ ಪ್ರಕರಣಗಳಲ್ಲಿ ನ್ಯಾಯ, ಪಂಜಾಬ್‍ನ ಡ್ರಗ್ಸ್ ಕಿರುಕುಳ, ಕೃಷಿ ವಿಚಾರಗಳು, ಉದ್ಯೋಗ ಅವಕಾಶಗಳು, ಮರಳು ಗಣಿಗಾರಿಕೆ ಹಾಗೂ ಹಿಂದುಳಿದ ವರ್ಗಗಳ ಉನ್ನತಿ ಕುರಿತ ಅಂಶಗಳು ಪಕ್ಷದ ಪ್ರಚಾರ ಕಾರ್ಯಸೂಚಿಯಲ್ಲಿವೆ. ಮುಂದಿನ ವರ್ಷ ಪಂಜಾಬ್ ವಿಧಾನಸಭೆಗೆ ಚುನಾವಣೆ ನಿಗದಿಯಾಗಿದ್ದು, ಹದಿಮೂರು ಅಂಶಗಳನ್ನು ಒಳಗೊಂಡ ಕಾರ್ಯಸೂಚಿಯನ್ನು ಪ್ರಸ್ತುತ ಪಡಿಸಲು ಸಭೆ ಸೇರುವ ಕುರಿತು ಸಿಧು ಸೋನಿಯಾ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

  • RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

    RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

    -ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ
    – ನಾನು ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದೀನಾ?
    – ರಾಜಕೀಯಕ್ಕೆ ಬಂದಾಗಿನಿಂದ ಆರ್‌ಎಸ್‍ಎಸ್‍ ವಿರೋಧಿಸುತ್ತಾ ಬಂದಿದ್ದೇನೆ

    ಹುಬ್ಬಳ್ಳಿ: ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು ಹೀಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳುತ್ತಾರೆ. ಹೀಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆ. ನಾನು ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದೀನಾ? ಎಂದು ನಮ್ಮ ಪಕ್ಷದ ಅಲ್ಪಸಂಖ್ಯಾತ ನಾಯಕರು ಹೇಳ್ತಾರೆ, ನಾನು ಈ ಬಗ್ಗೆ ಮಾತನಾಡಲ್ಲ ಎಂದು ಹೇಳುತ್ತಾ ಮಾಜಿ ಮಯಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಆರ್‌ಎಸ್‍ಎಸ್‍ ಒಂದು ಕೋಮುವಾದಿ ಸಂಘಟನೆ, ಅವರು ಮನುಸ್ಮøತಿ ಮತ್ತು ಶ್ರೇಣೀಕೃತ ವ್ಯವಸ್ಥೆ ಪರವಾಗಿದ್ದಾರೆ. ನಾನು 1971 ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದ ಈ ಸಂಘಟನೆಯನ್ನು ವಿರೋಧಿಸುತ್ತಾ ಬಂದಿದ್ದೇನೆ. ಆರ್‌ಎಸ್‍ಎಸ್‍ ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಅವರ ಇತಿಹಾಸವನ್ನು ನೋಡಿದರೆ ಅವರು ಸಮಾಜ ಒಡೆಯುವವರು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಸಬ್ ಕ ಸಾಥ್, ಸಬ್ ಕಾ ವಿಕಾಸ್ ಎಂಬುದು ಬರಿ ಸುಳ್ಳು. ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಶಾಸಕ ಇದ್ದಾರ? ಯಾಕೆ ಅವರಿಗೆ ಪಕ್ಷದ ಟಿಕೆಟ್ ಕೊಡಲ್ಲ? ಎಂದು ವಿರೋಧ ಪಕ್ಷವಾದ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    ಅಲ್ಪಸಂಖ್ಯಾತರಿಗೆ ಬಿಜೆಪಿ ಟಿಕೆಟ್ ಬೇಕಾದರೆ ತಮ್ಮ ಕಚೇರಿ ಕಸ ಗುಡಿಸಬೇಕು ಎಂದು ಈಶ್ವರಪ್ಪ ಹೇಳುತ್ತಾರೆ. ಬಿಜೆಪಿಯವರು ಪ್ರಜಾಪ್ರಭುತ್ವ, ಬ್ರಾತ್ರುತ್ವ, ಸಮಾನತೆ, ಸೌಹಾರ್ದತೆ, ಸರ್ವಧರ್ಮ ಸಹಿಷ್ಣುತೆ ಸಾರುವ ಸಂವಿಧಾನ ಬದಲಾವಣೆ ಮಾಡುತ್ತೆವೆ. ಕಾಂಗ್ರೆಸ್ ಕಚೇರಿಯಿಂದ ಎಲ್ಲರಿಗೂ ಪ್ರಚಾರಕ್ಕೆ ಬರುವಂತೆ ಪತ್ರ ಕಳಿಸಿದ್ದಾರೆ. ಸಿ.ಎಂ ಇಬ್ರಾಹಿಂ ಅವರಿಗೆ ಚುನಾವಣಾ ಪ್ರಚಾರಕ್ಕೆ ಬರಬೇಡಿ ಎಂದು ಯಾರೂ ಹೇಳಿಲ್ಲ. ಮುಂದೆ ಅವರು ಬಂದರೂ ಬರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ 

    ಸಂಗೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದವರು ಉದಾಸಿ, ಉಪಾಧ್ಯಕ್ಷರಾಗಿದ್ದವರು ಶಿವರಾಜ್ ಸಜ್ಜನರ್. ಈ ಇಬ್ಬರೂ ಸೇರಿ ಕಾರ್ಖಾನೆಯನ್ನು ಸಂಪೂರ್ಣ ಹಾಳು ಮಾಡಿದರು. ಇದಕ್ಕೆ ನಾವೇನು ಮಾಡಬೇಕು? ಇವತ್ತು ಕಾರ್ಖಾನೆಯನ್ನು ಬೋಗ್ಯಕ್ಕೆ ಕೊಟ್ಟಿರೋದು ಸುಳ್ಳಾ? ಉದಾಸಿ ಅಧ್ಯಕ್ಷರಾಗುವ ಮೊದಲು ಕಾರ್ಖಾನೆ ಲಾಭದಲ್ಲಿ ಇದ್ದಿದ್ದು, ಸುಳ್ಳಾ? ಈ ಬಗ್ಗೆ ಮಾತಾಡಿ ಎಂದು ಜನರೇ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಸತ್ಯ ವಿಚಾರವನ್ನು ನಿನ್ನೆ ಹೇಳಿದ್ದೆನೆ ಎಂದು ಹೇಳಿದ್ದಾರೆ.

    ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡಿಸೇಲ್ ಬೆಲೆ 45 ರೂಪಾಯಿ ಇತ್ತು, ಈಗ 100 ರೂಪಾಯಿ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರದ ತೆರಿಗೆ ಹೆಚ್ಚಳ ಕಾರಣ. ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ 3 ರೂಪಾಯಿ 45 ಪೈಸೆ ಇದ್ದ ಅಬಕಾರಿ ಸುಂಕವನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 31 ರೂಪಾಯಿ 84 ಪೈಸೆಗೆ ಹೆಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 125 ಡಾಲರ್‍ಗೆ ತಲುಪಿದಾಗಲೂ ಡೀಸೆಲ್ ಬೆಲೆ 50 ರೂಪಾಯಿಯ ಆಸುಪಾಸಿನಲ್ಲೇ ಇತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿಮೆ ಮಾಡಲಿ. ಪೆಟ್ರೋಲ್ ಮೇಲೆ ತೆರಿಗೆ ಹಾಕೋದು ರಾಜ್ಯಗಳ ಹಕ್ಕು, ಪೆಟ್ರೋಲ್ ಡೀಸೆಲ್ ಜಿಎಸ್‍ಟಿಗೆ ಸೇರಿಸಿದರೆ ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕು ಹೋಗುತ್ತದೆ. ಇದಕ್ಕೆ ನನ್ನ ವಿರೋಧವಿದೆ ಎಂದು ಆಢಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಹಿಂದೆ ಜಿ.ಎಸ್.ಟಿ ಕೌನ್ಸಿಲ್ ಸಭೆಗೆ ಯಡಿಯೂರಪ್ಪ ಅವರ ಪರವಾಗಿ ಹೋಗುತ್ತಿದ್ದದ್ದು, ಬಸವರಾಜ ಬೊಮ್ಮಾಯಿ ಅವರೆ, ರಾಜ್ಯದ ಆರ್ಥಿಕ ಸ್ಥಿತಿಗತಿ ಏನಿದೆ ಅಂತ ಮುಖ್ಯಮಂತ್ರಿ ಆದವರಿಗೆ ಗೊತ್ತಿರಲ್ವಾ? ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಅಷ್ಟೆ. ವಕಿರ್ಂಗ್ ಕಮಿಟಿಯ ಹಲವಾರು ಮಂದಿ ಸದಸ್ಯರು ನೀವೆ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ರಾಹುಲ್ ಗಾಂಧಿಯವರ ಬಳಿ ಒತ್ತಾಯ ಮಾಡಿದ್ದಾರೆ. ನಿಮ್ಮೆಲ್ಲರ ಮನವಿಯ ಬಗ್ಗೆ ಯೋಚನೆ ಮಾಡುತ್ತೆನೆ ಎಂದು ರಾಹುಲ್ ಗಾಂಧಿಯವರು ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬುದು ನನ್ನ ಅಭಿಪ್ರಾಯ. ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೆ ಎಂದು ತಿಳಿಸಿದ್ಧಾರೆ.

  • 12 ವರ್ಷದಲ್ಲಿ ಚಿರುಗೆ ನಾನೇ ಮೊದಲು ವಿಶ್ ಮಾಡಿದ್ದು: ಮೇಘನಾ ರಾಜ್

    12 ವರ್ಷದಲ್ಲಿ ಚಿರುಗೆ ನಾನೇ ಮೊದಲು ವಿಶ್ ಮಾಡಿದ್ದು: ಮೇಘನಾ ರಾಜ್

    – ಮೊದಲ ಸಿನಿಮಾದಂತೆ ಈಗಲೂ ಭಯವಿದೆ
    – ನಾನು ಇದುವರೆಗೂ ಮಾಡದ ಪಾತ್ರ ಇದು

    ಬೆಂಗಳೂರು: ಚಿರು ಪರಿಚಯವಾದಾಗಿನಿಂದ 12 ವರ್ಷಗಳವರೆಗೂ ನಾನೇ ಮೊದಲು ಚಿರುಗೆ ವೀಶ್ ಮಾಡಿದ್ದೇನೆ. ಕುಣಿದಾಡಿಕೊಂಡು ವಿಶ್ ಮಾಡುತ್ತಿದ್ದೆ. ಈಗಲೂ ಅದೇ ಮಾಡುತ್ತಿದ್ದೇನೆ ಎಂದು ಹೇಳುತ್ತಾ ನಟಿ ಮೇಘನಾ ರಾಜ್ ಚಿರಂಜೀವಿ ಸಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೇಘನಾ ರಾಜ್, ಈ ಒಂದು ವರ್ಷ ನಾನು ಎಂಜಾಯ್ ಮಾಡಿದ್ದೇನೆ ನೀವು ನೋಡಿದ್ದೀರ. ನಾನು ಮಗುವನ್ನು ನೋಡುತ್ತಾ ತೃಪ್ತಿಯಿಂದ ಇದ್ದೇನೆ. ಈ ವರ್ಷದ ನನ್ನ ದೊಡ್ಡ ಉಡುಗೊರೆ ಎಂದರೆ ನನ್ನ ಮಗುವಾಗಿದೆ. ನಾನು ತಾಯಿ ಆದ ಮಲೆ ನಿದ್ದೆ ಇಲ್ಲದ ರಾತ್ರಿಗಳು, ಜವಾಬ್ದಾರಿಗಳು ಎಷ್ಟೋ ಚಾಲೇಂಜ್ ಆಗಿರುತ್ತದೆ ಎಂದು ಹೇಳುತ್ತಾ ಮಗುನ ಲಾಲನೆ ಪಾಲನೆ ದಿನಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ನನಗೆ ನನ್ನ ಮೊದಲ ಸಿನಿಮಾ ಮಾಡಿದಾಗ ಇರುವ ಭಯ ಇವತ್ತು ಇದೆ. ನಿನ್ನೆ ರಾತ್ರಿ ನಾನು ನಿದ್ದೆ ಮಾಡಿಲ್ಲ, ಒಂದು ರಾಯನ್ ಆದರೆ ಇನ್ನೊಂದು ನನಗೆ ಒಂದು ದೊಡ್ಡ ಜವಾಬ್ದಾರಿಯಾಗಿದೆ. ನನ್ನ ಚಿರು ಸ್ನೇಹಿತ ಆಗಿರುವ ಪನ್ನಗಾಭರಣನಿಗೆ ನಾನು ಚಿರು ಅವರ ಜಾಗದಲ್ಲಿ ನಿಂತು ಸಪೋಟ್ ಮಾಡಬೇಕಿದೆ. ಇದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಇದು ನನ್ನ ಕಮ್ ಬ್ಯಾಕ್ ಸಿನಿಮಾ ಎಂದು ಹೇಳಲುಬುಹುದು. ನನಗೆ ಈ ಸಿನಿಮಾದಲ್ಲಿ ತುಂಬಾ ಜವಾಬ್ದಾರಿಗಳಿವೆ. ನಾನು ಇದುವರೆಗೂ ಮಾಡದ ಪಾತ್ರ ಇದಾಗಿದೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ನಿನ್ನೆ ನಾನು ಮಾಡಿರುವ ಫೋಟೋಶೂಟ್ ಒಂದು ಥೀಮ್ ನನಗೆ ಇಷ್ಟವಾಯಿತ್ತು. ಹೀಗಾಗಿ ಚಿರು ಹುಟ್ಟುಹಬ್ಬದ ಅಂಗವಾಗಿ ಮಾಡಿದೆವು. ಚಿರು ನನಗೆ ಕಿಂಗ್ ಎಂದು ಹೇಳುತ್ತಿರುತ್ತೆನೆ ಇದನ್ನೆ ಒಂದು ಥೀಮ್ ಆಗಿ ಮಾಡಿಕೊಂಡು ಫೋಟೋಶುಟ್ ಮಾಡಿದ್ದೇವೆ. ಅದು ಎಲ್ಲರಿಗೂ ಇಷ್ಟವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    meghana raj

    ಚಿರು ಹುಟ್ಟುಹಬ್ಬ ಎಂದರೆ ನಾನು ಚಿರುನನ್ನು ನೆನೆಪು ಮಾಡಿಕೊಳ್ಳುತ್ತೇನೆ. ಚಿರು ಪರಿಚಯವಾಗಿರುವ 12 ವರ್ಷದಲ್ಲಿ ಅವರಿಗೆ ನಾನೆ ಮೊದಲು ವಿಶ್ ಮಾಡಿದ್ದಾಗಿದೆ. ಅವರಿಗೆ ನಾನೇ ಮೊದಲು ವಿಶ್ ಮಾಡಬೇಕು ಎಂದು ನಾನು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ, ಬೇರೆ ಯಾರಾದರೂ ವೀಶ್ ಮಾಡಿ ಬಿಡುತ್ತಾರೆ ಎಂದು ನನಗೆ ಭಯವಾಗುತ್ತಿತ್ತು. ನಾನು ಕುಣಿದಾಡಿಕೊಂಡು ಚಿರುಗೆ ವೀಶ್ ಮಾಡುತ್ತಿದ್ದೆ. ಈಗಲೂ ನಾನು ಅದೇ ಮಾಡುತ್ತಿದ್ದೇನೆ. ನನಗೆ ಗೊತ್ತು ಚಿರು ಕೇಳಿಸಿಕೊಳ್ಳುತ್ತಿದ್ದಾನೆ. ಈ ವರ್ಷವು ನಾನೆ ಮೊದಲು ವೀಶ್ ಮಾಡಿದ್ದೇನೆ ಎಂದು ಚಿರು ನೆನಪನ್ನು ಹಂಚಿಕೊಂಡಿದ್ದಾರೆ.

    ರಾಯನ್ ಎಲ್ಲರ ಬಳಿ ಹೋಗುತ್ತಾನೆ. ಪನ್ನಾ ಸಿನಿಮಾ ಕಥೆಯನ್ನು ಹೇಳಿದಾಗ ನನಗೆ ಮಗನನ್ನು ಬಿಟ್ಟು ಹೇಗೆ ಇರುವುದು ಎಂದು ಕೇಳಿದಾಗ ಸೆಟ್‍ಗೆ ಕರೆದುಕೊಂಡು ಬಾ.. ನಾವೆಲ್ಲರು ಇರುತ್ತವೆ ನೋಡಿಕೊಳ್ಳುತ್ತೆವೆ ಎಂದು ಪನ್ನಗಾ ಹೇಳಿದ್ದಾನೆ. ನನೆಗ ಭಯ ಇದೆ. ನಾನು ಫೋಟೋಶೂಟ್‍ಗೆ ಹೋಗಿ ಬಂದಾಗ ರಾಯನ್, ನನ್ನ ಮೇಕಪ್‍ನಲ್ಲಿ ನೋಡಿ 10 ನಿಮಿಷ ನನ್ನ ಬಳಿ ಬರಲೇ ಇಲ್ಲ. 10 ದಿನ ರಾಯನ್‍ನಿಂದ ದೂರ ಇದ್ದರು ನಂತರ ನೂರು ದಿನ ಅವನ ಹತ್ತಿರ ಇರುತ್ತೆನೆ. ನಾನು ಏನೇ ಮಾಡಿದ್ರೂ ರಾಯನ್‍ಗಾಗಿಯೇ ಆಗಿದೆ ಎಂದು ತಮ್ಮ ಮುದ್ದು ಮಗನ ಕುರಿತಾಗಿ ಹೇಳಿಕೊಂಡಿದ್ದಾರೆ.

  • ಯಾರು ಏನೇ ಅಂದ್ರೂ ಚಿರು ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತೇವೆ: ಮೇಘನಾ ರಾಜ್

    ಯಾರು ಏನೇ ಅಂದ್ರೂ ಚಿರು ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತೇವೆ: ಮೇಘನಾ ರಾಜ್

    – ಚಿರುಗೆ ಸಂಡೇ ಎಂದರೆ ತುಂಬಾ ಇಷ್ಟವಾದ ದಿನ
    -ಪನ್ನ ನನಗೋಸ್ಕರ ಈ ಕಥೆಯನ್ನು ಮಾಡಿದ್ದಾರೆ

    ಬೆಂಗಳೂರು: ಮೇಘನಾ ರಾಜ್ ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಕೇಳುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಮೇಘನಾ ರಾಜ್ ಉತ್ತರವನ್ನು ನೀಡಿದ್ದಾರೆ. ಪತಿಯ ಜನ್ಮ ದಿನದಂದೇ ಮತ್ತೆ ಬಣ್ಣ ಹಚ್ಚುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರು ಚಿರು ಹುಟ್ಟುಹಬ್ಬದ ದಿನವಾದ ಇಂದು ಸುದ್ದಿಗೋಷ್ಠಿಯಲ್ಲಿ, ತಮ್ಮ ಹೊಸ ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಪನ್ನಗಾಭರಣ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಈ ಒಂದು ವರ್ಷ ನನ್ನ ಕುಟುಂಬ, ಸ್ನೇಹಿತರ ಬಳಗಕ್ಕೆ ತುಂಬಾ ಕಷ್ಟದ ದಿನಗಳಾಗಿತ್ತು. ನನಗೆ ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಸಿನಿಮಾ ಮಾಡಲು ಸಮಯ ಇದೆ. ನಾನು ಎಲ್ಲವನ್ನೂ ಮರೆತು ಸಿನಿಮಾ ಮಾಡಬೇಕಿತ್ತು. ನಾನು ಒಂದು ದಿನ ಜಾಹೀರಾತು ಚಿತ್ರೀಕರಣ ಮುಗಿಸಿದೆ. ಆಗ ನನಗೆ ಪನ್ನಾಗಾಭರಣ ಹೇಗಿತ್ತು ಶೂಟಿಂಗ್ ಎಂದು ಕೇಳಿದ್ದನು. ನಾನು ಆಗ ಹೇಳಿದೆ, ನನಗೆ ಒಂದು ಸಹಜ ಅನುಭವ ಬಂದಿರುವ ಹಾಗೆ ಆಗಿದೆ ಎಂದು. ಆಗ ಅವರು ಒಂದು ಸಿನಿಮಾ ಕಥೆ ಇದೆ ಎಂದು ಹೇಳಿದರು. ಸಿನಿಮಾ ಕಥೆಯನ್ನು ಕೇಳಿ ನಾನು ಅರ್ಧ ಗಂಟೆ ಶಾಕ್‍ನಲ್ಲಿದ್ದೆ. ಒಂದು ಬಿರುಗಾಳಿ ಬಂದು ಹೋಗಿರುವ ಹಾಗೆ ಈ ಸಿನಿಮಾ ಕಥೆ ನನಗೆ ಅನುಭವವನ್ನು ನೀಡಿತ್ತು ಎಂದು ಸಿನಿಮಾ ಕಥೆಯ ಕುರಿಯಾಗಿ ಮೇಘನಾ ಮಾತನಾಡಿದ್ದಾರೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ನಾನು ಈ ಕಥೆಯನ್ನು ಪ್ರೊಡ್ಯೂಸ್ ಮಾಡುತ್ತಿದ್ದೇನೆ. ನೀನು ಈ ಸಿನಿಮಾದಲ್ಲಿ ನಟಿಸುತ್ತೀಯ ಎಂದು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಚಿರು ಅವರು ಮಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರಿಗೆ ಥ್ರಿಲ್ಲರ್ ಸಿನಿಮಾ ಎಂದರೆ ತುಂಬಾ ಇಷ್ಟವಾಗುತ್ತಿತ್ತು. ಈ ಸಿನಿಮಾ ಕಥೆಯನ್ನು ಕೇಳಿದಾಗ ಚಿರು ಈ ಕಥೆಯನ್ನು ಇಷ್ಟ ಪಡುತ್ತಾನೆ ಎಂದು ನನಗೆ ಗೊತ್ತು, ಹೀಗಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    ದಸರಾ ಹಬ್ಬ, ಚಿರು ಹುಟ್ಟುಹಬ್ಬ ಆಗಿರುವುದರಿಂದ ನನಗೆ ವಿಶೇಷ ದಿನವಾಗಿದೆ. ಹೀಗಾಗಿ ನಾವು ಈ ಪ್ರತಿ ವರ್ಷ ಚಿರು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇವೆ, ಯಾರು ಏನೇ ಅಂದ್ರೂ ಕೂಡಾ ನಾವು ಸೆಲೆಬ್ರೆಟ್ ಮಾಡುತ್ತೇವೆ. ಭಾನುವಾರ ಚಿರು ಅವರಿಗೆ ತುಂಬಾ ಇಷ್ಟವಾಗುವ ದಿನವಾಗಿದೆ. ಸಂಡೇ ಖುಷಿ ಪಡುತ್ತಿದ್ದರು, ನೆಮ್ಮದಿಯಾಗಿ ಇರುತ್ತಿದ್ದರು. ಹೀಗಾಗಿ ನಾವು ಭಾನುವಾರ ಹೊಸ ದಿನದ ಆರಂಭವಾಗುವ ಈ ವಾರದಂದೇ ಒಳ್ಳೆ ಕೆಲಸಕ್ಕೆ ಕೈ ಹಾಕುತ್ತಿದ್ದೇವೆ. ಪನ್ನಗಾಭರಣ ಅವರ ತಂದೆ ನಾಗಾಭರಣ ಅವರು ಮತ್ತು ನಮ್ಮ ತಂದೆ ಸುಂದರ್ ರಾಜ್ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ, ಅವರ ಮಕ್ಕಳಾಗಿರುವ ನಾವು ಅವರಂತೆ ನಾವು ಹಿಟ್ ಸಿನಿಮಾ ನೀಡಲು ಬಯಸುತ್ತೇವೆ. ಪನ್ನಾ ನನಗೋಸ್ಕರ ಈ ಕಥೆಯನ್ನು ಮಾಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತದ ಇರಲಿದೆ ಎಂದು ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ.

  • ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ಸಂತಸದ ವಿಚಾರವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

    ಮೇಘನಾ ಹೇಳಿದ್ದೇನು?: ತನ್ನ ಅಧಿಕೃತ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ, ಬೇರೆ ಯಾವ ದಿನವೂ ಉತ್ತಮವಾಗಿರಲಿಲ್ಲ, ಬೇರೆ ಯಾವುದೇ ತಂಡವು ಇಷ್ಟು ಉತ್ತಮವಾಗಿರಲಾರದು, ಇದು ನಿಮ್ಮ ಜನ್ಮದಿನ, ಇದು ನಮ್ಮ ಕನಸು ಆಗಿದೆ. ಇದು ನಿಮಗಾಗಿ ಚಿರು, ಪನ್ನ ಇಲ್ಲದಿದ್ದರೆ ನಾನು ಈ ಬಗ್ಗೆ ಯೋಚಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ, ಅಧಿಕೃತವಾಗಿ ಹೇಳುತ್ತಿದ್ದೇನೆ ಕ್ಯಾಮರಾ, ರೋಲಿಂಗ್, ಆ್ಯಕ್ಷನ್ ಎಂದು ಬರೆದುಕೊಂಡು ತಾವು ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಕುರಿತಾಗಿ ಚಿರು ಹುಟ್ಟುಹಬ್ಬದಂದು ಹೇಳಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಚಿರು ಹುಟ್ಟುಹಬ್ಬದ ದಿನ ಮೇಘನಾ ರಾಜ್ ತಾವು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವಾನ್ನು ಹೇಳಿರುವುದು ಅಭಿಮಾನಿಗಳಿಗೆ ಸಖತ್ ಸಂತೋಷ ತಂದಿದೆ. ಮೇಘನಾ ಚಿರು ಹುಟ್ಟುಹಬ್ಬದ ನಿಮಿತ್ತ ಸಾಕಷ್ಟು  ಸರ್ಪ್ರೈಜ್ ನೀಡಲಿದ್ದಾರೆ ಎಂದು ಈ ಮೊದಲೇ ತಿಳಿಸಿದ್ದರು. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    ಚಿರಂಜೀವಿ ಸರ್ಜಾ ನಿಧನದ ಬಳಿಕ ನಟನೆಯಿಂದ ಗ್ಯಾಪ್ ಪಡೆದುಕೊಂಡಿದ್ದ ಮೇಘನಾ ರಾಜ್ ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರ ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಸೆಟ್ಟೇರುತ್ತಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಮೇಘನಾ ಆದಷ್ಟು ಬೇಗ ಕಮ್‍ಬ್ಯಾಕ್ ಮಾಡಬೇಕು ಎಂಬುದೇ ಫ್ಯಾನ್ಸ್ ಬಯಕೆ ಆಗಿತ್ತು. ಆ ಬಯಕೆಯನ್ನು ಮೇಘನಾ ಈಡೇರಿಸುತ್ತಿದ್ದಾರೆ. ಚಿರು ಸ್ನೇಹಿತ ಪನ್ನಗಾಭರಣ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನಲೆ ಪತಿಯ ಸವಿನೆನಪಿನಾರ್ಥಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್‍ನಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದಾಗಿದೆ. ರಾಜ ವಿಧಿವಶರಾದ ಬಳಿಕ ರಾಣಿ, ಮಗನಿಗೆ ಆ ರಾಜನ ಬಗ್ಗೆ ತಿಳಿಸುವ ಥೀಮ್ ಅನ್ನು ಫೋಟೋಶೂಟ್ ಒಳಗೊಂಡಿದೆ. ರಾಜನ ನಿಧನದ ಬಳಿಕ ರಾಣಿ ತನ್ನ ಸಾಮ್ರಾಜ್ಯವನ್ನು ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂಬ ಥೀಮ್‍ನಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನಿನ್ನೆ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಇಂದು ಮೇಘನಾ ರಾಜ್ ಪತಿಯ ಕುರಿತಾಗಿ ಭಾವನಾತ್ಮಕವಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವು ಅಭಿಮಾನಿಗಳು ಕಣ್ಣೀರು ತುಂಬಿಕೊಂಡಿದ್ದಾರೆ. ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುವುತ್ತಿರುವುದರ ಕುರಿತಾಗಿ ಕಮೆಂಟ್ ಮಾಡುತ್ತಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರು ಅಭಿಮಾನಿಗಳಿಂದ, ಕುಟುಂಬದಿಂದ ದೂರವಾಗಿರಬಹುದು. ಆದರೆ ಅವರು ನಟಿಸಿರುವ ಸಿನಿಮಾಗಳ ಮೂಲಕವಾಗಿ ಎಂದಿಗೂ ಜೀವಂತವಾಗಿದ್ದಾರೆ.

  • ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

    ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

    ಮುಂಬೈ: ಡ್ರಗ್ಸ್ ಕೇಸ್‍ನಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್( Bollywood) ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್(aryan khan) ಇನ್ನೆಂದೂ ಕೆಟ್ಟ ಹಾದಿ ತುಳಿಯಲ್ಲ, ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.

    ಇನ್ನು ನಾನು ಕೆಟ್ಟ ಹಾದಿ ತುಳಿಯಲ್ಲ, ಮುಂದಿನ ದಿನಗಳಲ್ಲಿ ಬಡವರು, ತುಳಿತಕ್ಕೊಳಗಾದವರ ಏಳಿಗೆಗಾಗಿ ಕೆಲಸ ಮಾಡುತ್ತೇನೆ. ಅಲ್ಲದೆ ಮುಂದೊಂದು ದಿನ ಎಲ್ಲರೂ ಹೆಮ್ಮೆ ಪಡುವಂತೆ ಬೆಳೆಯುತ್ತೇನೆ ಎಂದು (ಎಸ್‍ಸಿಬಿ ಅಧಿಕಾರಿಗಳ) ಮುಂಬೈ ವಲಯದ ನಿರ್ದೇಶಕ ಅಮೀರ್ ವಾಂಖೆಂಡೆ ಮುಂದೆ ಆರ್ಯನ್ ಖಾನ್ ಹೇಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಅ.2 ರಂದು ಮಧ್ಯರಾತ್ರಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ರೇವ್‍ಪಾರ್ಟಿ ಮಾಡುತ್ತಿದ್ದ ವೇಳೆ ಎನ್‍ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ 23 ವರ್ಷದದ ಆರ್ಯನ್ ಖಾನ್, ಆಥೂರ್ ರಸ್ತೆ ಜೈಲಿನಲ್ಲಿದ್ದಾನೆ. ನಿನ್ನೆ ಆತನ ಜೊತೆ ಎನ್‍ಸಿಬಿ ಮತ್ತು ಸಾಮಾಜಿಕ ಕಾರ್ಯಕರ್ತರು ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಮುಂದೊಂದು ದಿನ ಕೆಟ್ಟ ಕಾರಣಕ್ಕೆ ಸುದ್ದಿಯಾಗುವ ಕೃತ್ಯದಲ್ಲಿ ನಾನು ಭಾಗಿಯಾಗಲ್ಲ. ಬಡವರಿಗೆ ಸಹಾಯ ಮಾಡುತ್ತೆನೆ, ಸಾಮಾಜಿಕ ಬಲವರ್ಧನೆಗೆ ಕೆಲಸ ಮಾಡುತ್ತೇನೆ ಎಂದು ಆರ್ಯನ್‍ಖಾನ್ ಹೇಳಿದ್ದಾನೆ. ಆರ್ಯನ್ ಖಾನ್ ಜಾಮೀನು ಅರ್ಜಿ ತೀರ್ಪು ಅ.20 ರಂದು ಹೊರಬೀಳಲಿದೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

  • ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

    ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್, ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಭಾವನಾತ್ಮಕವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

    ಕಷ್ಟಗಳ ಕೊನೆಯಲ್ಲಿ ಯಾವಾಗಲೂ ವಿಜಯೋತ್ಸವ ಇದ್ದೇ ಇರುತ್ತದೆ. ಬೆಂಕಿ ಇರು ಹಾದಿ ಹಲವು ವಿಷಯಗಳನ್ನು ಸಾಧಿಸುವ ಮಾರ್ಗವಾಗಿದೆ. ಆದರೆ ಪ್ರಯೋಗವು ಎಂದಿಗೂ ಸುಲಭವಲ್ಲ. ಎಲ್ಲಾ ಭರವಸೆಗಳು ಮಸುಕಾದಾಗ, ಜೀವನವೆಂಬ ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ. ನನಗೆ ಆ ಬೆಳಕು ಚಿರು. ನನ್ನ ಪ್ರಯಾಣವು ಪ್ರಕಾಶಮಾನವಾಗಿ ಬೆಳೆಯಲು ಆ ಬೆಳಕಿನ ಕಡೆಗೆ ಸಾಗಬೇಕಾಗಿದೆ. HAPPY BIRTHDAY DEAR HUSBAND, ನನ್ನ ಜೀವನ, ನನ್ನ ಬೆಳಕು ನೀನು ಎಂದು ಬರೆದುಕೊಂಡು ಮೇಘನಾ ರಾಜ್ ಚಿರು ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ ರಾಜ್ ಅವರ ಈ ಭಾವನಾತ್ಮಕ ಸಾಲುಗಳನ್ನು ನೋಡಿದ ಕೆಲವು ಅಭಿಮಾನಿಗಳು ಕಣ್ಣೀರು ತುಂಬಿಕೊಂಡಿದ್ದಾರೆ. ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುತ್ತಿರುವ ಕುರಿತಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರು ಅಭಿಮಾನಿಗಳಿಂದ, ಕುಟುಂಬದಿಂದ ದೂರವಾಗಿರಬಹುದು. ಆದರೆ ಅವರು ನಟಿಸಿರುವ ಸಿನಿಮಾಗಳ ಮೂಲಕವಾಗಿ ಎಂದಿಗೂ ಜೀವಂತವಾಗಿದ್ದಾರೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನಲೆ ಪತಿಯ ಸವಿನೆನೆಪಿನಾರ್ಥಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್‍ನಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದಾಗಿದೆ. ರಾಜ ವಿಧಿವಶರಾದ ಬಳಿಕ ರಾಣಿ, ಮಗನಿಗೆ ಆ ರಾಜನ ಬಗ್ಗೆ ತಿಳಿಸುವ ಥೀಮ್ ಅನ್ನು ಫೋಟೋಶೂಟ್ ಒಳಗೊಂಡಿದೆ. ರಾಜನ ನಿಧನದ ಬಳಿಕ ರಾಣಿ ತನ್ನ ಸಾಮ್ರಾಜ್ಯವನ್ನು ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂಬ ಥೀಮ್‍ನಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ.

  • ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    ಜೈಪುರ್: ಹಳ್ಳಿಯೊಂದಕ್ಕೆ ಕೋವಿಡ್ 19 ಲಸಿಕೆ ಹಿಡಿದು ಬಂದ ಆರೋಗ್ಯ ಸಿಬ್ಬಂದಿಯನ್ನು ಹಿರಿಯ ಮಹಿಳೆಯೊಬ್ಬರು ಹಾವು ತೋರಿಸಿ ಹೆದರಿಸಿರುವ ಘಟನೆ ರಾಜಸ್ಥಾನದ ಅಜ್ಮೇರ್​​ನಲ್ಲಿ ನಡೆದಿದೆ.

    ಅಜ್ಮೇರ್ ಜಿಲ್ಲೆಯ ಪಿಸಂಗನ್‍ನ ನಾಗೇಲಾವ್ ಗ್ರಾಮಕ್ಕೆ ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಅದರಂತೆ ಒಂದು ಮನೆಯ ಬಾಗಿಲಲ್ಲಿ ನಿಂತ ಅವರಿಗೆ ಅಕ್ಷರಶಃ ಶಾಕ್ ಕಾದಿತ್ತು. ಆ ಮನೆಯ ಮಹಿಳೆ ಕಮಲಾ ದೇವಿ ಕೈಯಲ್ಲೊಂದು ಚಿಕ್ಕ ಬುಟ್ಟಿ ಹಿಡಿದಿದ್ದರು. ಅದರಲ್ಲಿ ನಾಗರಹಾವು ಹೆಡೆಬಿಚ್ಚಿ ಕುಳಿತಿತ್ತು.  ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ

    ಕಮಲಾದೇವಿ ಕಲ್ಬೇಲಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಹಾವು ಹಿಡಿಯುವುದು, ಅದನ್ನು ನಿಯಂತ್ರಿಸಿ, ಆಟ ಆಡಿಸುವುದು ಇವರ ಕಸುಬಾಗಿದೆ. ಆದರೆ ಆ ಹಾವನ್ನು ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರ ವಿರುದ್ಧ ಶಸ್ತ್ರವಾಗಿ ಆಕೆ ಬಳಸಿದ್ದಾಳೆ. ನನಗೆ ಲಸಿಕೆ ಬೇಡ. ಲಸಿಕೆ ಹಾಕಲು ಮುಂದೆ ಬಂದರೆ ನಿಮ್ಮ ಮೇಲೆ ಹಾವನ್ನು ಬಿಡುತ್ತೇನೆ ಎಂದು ಅವರು ಹೆದರಿಸುತ್ತಿದ್ದರು. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ವೈದ್ಯಕೀಯ ಸಿಬ್ಬಂದಿ, ಅದರಿಂದ ಏನೂ ಅಪಾಯವಿಲ್ಲ ಎಂದು ಹೇಳಿ ಆಕೆಯನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾವನ್ನು ತೋರಿಸಿದಾಗ ಹೆದರಿದ ವೈದ್ಯಕೀಯ ಸಿಬ್ಬಂದಿ ತಮಗೆ ಸಹಾಯ ಮಾಡುವಂತೆ ಸ್ಥಳೀಯರನ್ನು ಕೇಳಿಕೊಂಡಿದ್ದಾರೆ. ನಂತರ ಇನ್ನೂ ಕೆಲವರು ಬಂದು ಎಲ್ಲರೂ ಸೇರಿ ಕಮಲಾ ದೇವಿಯಲ್ಲಿ ತಿಳಿವಳಿಕೆ ಮೂಡಿಸಿದರು. ಬಳಿಕ ಅವರು ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಕಮಲಾ ದೇವಿ ಜತೆ ಇನ್ನೂ 20 ಮಂದಿ ತಮಗೆ ಲಸಿಕೆ ಬೇಡ ಎನ್ನುತ್ತಿದ್ದರು. ಆದರೆ ಈಕೆ ವ್ಯಾಕ್ಸಿನ್ ಪಡೆಯುತ್ತಿದ್ದಂತೆ ಅವರೂ ಕೂಡ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:  ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್