ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 3 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಬರೋಬ್ಬರಿ 5.55 ಕೋಟಿ ದಂಡ ವಸೂಲಿ ಮಾಡಲಾಗಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 1,16,521 ಜನ ಟಿಕೆಟ್ ರಹಿತ ಪ್ರಯಾಣಿಕರನ್ನು ಹಿಡಿಯಲಾಗಿದೆ. ಇವರಿಂದ 5.52 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2435 ಪ್ರಕರಣಗಳನ್ನು ದಾಖಲಿಸಿ 13.74 ಲಕ್ಷ ದಂಡ ವಸೂಲಿ ಮಾಡಲಾಗಿತ್ತು. ಟಿಕೆಟ್ ತಪಾಸಣಾ ಸಿಬ್ಬಂದಿ ಕಾರ್ಯ ನಿರ್ವಹಣೆ ಈ ಸಲ ಪ್ರಶಂಸನೀಯವಾಗಿದೆ ಎಂದು ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ
ಹುಬ್ಬಳ್ಳಿ ವಿಭಾಗದಲ್ಲಿ 3ತಿಂಗಳಲ್ಲಿ 20457 ಪ್ರಕರಣ ದಾಖಲಿಸಿ 89.57 ಲಕ್ಷ, ಬೆಂಗಳೂರು ವಿಭಾಗದಲ್ಲಿ 61502 ಪ್ರಕರಣಗಳನ್ನು ದಾಖಲಿಸಿ 316.05 ಲಕ್ಷ ಅಂದರೆ 3.16 ಕೋಟಿ, 24659 ಪ್ರಕರಣ ದಾಖಲಿಸಿ 1.03 ಕೋಟಿ, ಸ್ಕಾuಟಿಜeಜಿiಟಿeಜಡ್ ತಂಡವೂ 9903 ಪ್ರಕರಣ ದಾಖಲಿಸಿ 43.33 ಲಕ್ಷ ರೂ. ಸೇರಿದಂತೆ ಒಟ್ಟು 1,16521 ಪ್ರಕರಣ ದಾಖಲಿಸಿದೆ. ಇದರಿಂದ ಒಟ್ಟು 552.27 ಲಕ್ಷ ಅಂದರೆ 5.52 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ದಂಪತಿ ಮುದ್ದು ಮಗಳಾದ, ವಮಿಕಾ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುತ್ರಿ ವಮಿಕಾ ಜೊತೆ ಕಾಲಕಳೆಯುತ್ತಿರುವ ಕೊಹ್ಲಿ ಫೋಟೋವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಪುತ್ರಿ ಜೊತೆ ಆಟವಾಡುತ್ತಿರುವ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದುವರೆಗೂ ವಮಿಕಾ ಮುಖದ ಫೋಟೋ ರಿವೀಲ್ ಮಾಡಿಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಮಿಕಾ ಮುಖ ಕಾಣುತ್ತಿಲ್ಲ. ಈ ಹಿಂದಿನಂತೆ ರಹಸ್ಯ ಉಳಿಸಿಕೊಂಡೇ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ
ಐಪಿಎಲ್ ಟೂರ್ನಿ ಮುಗಿಸಿದ ಕೊಹ್ಲಿ ಕ್ವಾರಂಟೈನ್‍ಲ್ಲಿದ್ದರು. ಹೀಗಾಗಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭೇಟಿಯಾಗಿರಲಿಲ್ಲ. ಕ್ವಾರಂಟೈನ್ ಮುಗಿಸಿದ ಕೊಹ್ಲಿ ಮತ್ತೆ ಜೊತೆಯಾಗಿದ್ದಾರೆ. ಕೊಹ್ಲಿ ಸದ್ಯ ಪಂದ್ಯದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅಕ್ಟೋಬರ್ 24 ರಂದು ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ರೋಚಕ ಪಂದ್ಯಕ್ಕಾಗಿ ಕೌಂಟ್‍ಡೌನ್ ಆರಂಭಗೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು
ಬೆಂಗಳೂರು: ಕೋವಿಡ್-19 ವೈರಾಣು ಸೋಂಕಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಗಳವಾರಸುದಾರರ ಕುಟುಂಬಗಳು ಕಾನೂನುಬದ್ಧ ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!
ರಾಜ್ಯ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆಯಡಿ ಕೋವಿಡ್ ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕುಟುಂಬದ ಒಬ್ಬ ಕಾನೂನು ಬದ್ಧ ವಾರಸುದಾರರಿಗೆ ರೂ. 1.00 ಲಕ್ಷಗಳ ಪರಿಹಾರ ಹಾಗೂ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಡಿಆರ್‍ಎಫ್)ಯಡಿ ರೂ. 50,000ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ (ಡಿಬಿಟಿ) ಮೂಲಕ ಪಾವತಿಸಲಾಗುವುದು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಕಾನೂನುಬದ್ಧ ವಾರಸುದಾರರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು. ಅರ್ಜಿದಾರರು ನಿಗದಿಪಡಿಸಿದ ನಮೂನೆ-1(ಫಾರಂ-1)ರಲ್ಲಿ ಮೃತ ವ್ಯಕ್ತಿ ಮತ್ತು ಅರ್ಜಿದಾರರ ವಿವರಗಳು ಹಾಗೂ ದಾಖಲೆಗಳನ್ನು ನೀಡಬೇಕು.
ದಾಖಲೆಗಳು:
– ಕೋವಿಡ್-19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ(ಬಿ.ಯು. ಸಂಖ್ಯೆ)
– ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ (ಫಾರಂ-4/4ಎ),
– ಮೃತ ವ್ಯಕ್ತಿಯ ಆಧಾರ್ ಪ್ರತಿ ಅಥವಾ ಇತರೆ ಗುರುತಿನ ಪತ್ರಗಳು,
– ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ),
– ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ),
– ಬ್ಯಾಂಕ್ / ಅಂಚೆ ಖಾತೆ ಪುಸ್ತಕ ಪ್ರತಿ, ಅರ್ಜಿದಾರರ ಸ್ವಯಂ ಘೋಷಣಾ ಪತ್ರ (ಫಾರಂ-2)
– ಮೃತ ವ್ಯಕ್ತಿಯ ಪತಿ/ ಪತ್ನಿಯನ್ನು ಹೊರತುಪಡಿಸಿ, ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ-3) ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಟಾ ಹೊನ್ನಾವರ ಕ್ಷೇತ್ರದ ಡಾ.ಎಂ.ಪಿ ಕರ್ಕಿ ಅವರು ವೈದ್ಯರಾಗಿ ವೃತ್ತಿ ಆರಂಭಿಸಿದ ಕರ್ಕಿಯವರು ಜನಸಂಘ ದಿಂದ ಬಿಜೆಪಿ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಜಿಲ್ಲಾಧ್ಯಕ್ಷರಾಗಿ ರಾಜಕೀಯ ಸೇವೆ ಮಾಡಿದ ಇವರು 1983 ಮತ್ತು 1994ರಲ್ಲಿ ಎರಡುಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಂದು ಬಾರಿ ಲೋಕಸಭೆಗೆ ಕೂಡ ಸ್ಪರ್ಧೆ ಮಾಡಿದ್ದರು.ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು ಹೊನ್ನಾವರದ ಎಂ.ಪಿ.ಇ ಸೊಸೈಟಿ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!
ಹಿರಿಯರು, ಮಾಜಿ ಶಾಸಕರಾದ ಡಾ. ಎಂ.ಪಿ.ಕರ್ಕಿಯವರು ದೈವಾಧೀನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಸಂಘಟನೆಯನ್ನು ಕಟ್ಟಿ ಬೆಳೆಸಿದ್ದ ಒಬ್ಬ ಹಿರಿಯರನ್ನು ಪಕ್ಷ ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವೆ. ಓಂ ಶಾಂತಿ pic.twitter.com/JNWA2S7O4d
ಖಾಯಿಲೆಯಿಂದ ಬಳಲುತಿದ್ದ ಇವರಿಗೆ ಕೆಲವು ತಿಂಗಳ ಹಿಂದೆ ಮಣಿಪಾಲ್ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಎಂ.ಪಿ ಕರ್ಕಿ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಬೀಜಿಂಗ್: ಮನೆ ಕೆಲಸ, ಉದ್ಯೋಗ ಎಂದು ಎಷ್ಟೋ ಮಹಿಳೆಯರಿಗೆ ಆರೋಗ್ಯ, ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಹಿಳೆಯರಿಗೆ ಉಳಿದ ರಜೆಗಳ ಜೊತೆ ಲವ್ ರಜೆ (LOVE LEAVE) ನೀಡಲು ಚೀನಾ ಸರ್ಕಾರ ಮುಂದಾಗಿದೆ.
ಕ್ಯಾಷುವಲ್ ಲೀವ್(CL), ಸಿಕ್ ಲೀವ್(SL), ಹೀಗೆ ಇರುವ ರಜೆಗಳ ಜೊತೆ ತಿಂಗಳಿಗೊಮ್ಮೆ ಮಹಿಳೆಯರಿಗೆ ಲವ್‍ಲೀವ್ ಎಂದು ಘೋಷಿಸಲಾಗಿದೆ. ಆದರೆ ಇದು ಸಿಗುವುದು ಅವಿವಾಹಿತೆಯರಿಗೆ ಮಾತ್ರವಾಗಿದೆ. ಚೀನಾದ ಹ್ಯಾಂಗ್ಜೌದಲ್ಲಿರುವ ಕಂಪೆನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಡೇಟಿಂಗ್ ರಜೆ ನೀಡುತ್ತಿವೆ. ಶಾಲಾ ಶಿಕ್ಷಕರಿಗೆ ನೂತನವಾಗಿ ಡೇಟಿಂಗ್ ರಜೆ ಆರಂಭಿಸಲಾಗಿದೆ. ಪ್ರೀತಿ ಯಾವಾಗ? ಎಲ್ಲಿ ಆಗುತ್ತದೆ ಎಂದು ಹೇಳಲು ಬರುವುದಿಲ್ಲ, ಹೀಗಾಗಿ ಒಂದು ದಿನ ಮುಂಚಿತವಾಗಿ ರಜೆ ಹಾಕುವುದನ್ನು ತಿಳಿಸಿದರೆ ಸಾಕಂತೆ. ಇದನ್ನೂ ಓದಿ: ಪ್ರವಾಹದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ- ಪಾತ್ರೆಯಲ್ಲಿ ಕುಳಿತು ಮಂಟಪಕ್ಕೆ ತೆರಳಿದ್ರು!
ಮಹಿಳೆಯರು ಮದುವೆಯಾಗಲು ನಿರಾಕರಿಸುತ್ತಾರೆ. ಇದಕ್ಕೆ ಕಾರಣ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮದುವೆಯಾಗದೇ, ಮಕ್ಕಳಾಗುವುದಿಲ್ಲ, ಇದು ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು. ಆದ್ದರಿಂದ ತಮ್ಮ ಸಂಗಾತಿ ಜೊತೆ ಅವರು ತಿಂಗಳಿಗೊಮ್ಮೆ ಸಮಯ ಕಳೆದು ನಂತರ ಅವರನ್ನು ಮದುವೆಯಾಗುವ ಬಗ್ಗೆ ಚಿಂತೆ ಮಾಡಬಹುದು ಎಂದು ಚೀನಾ ಸರ್ಕಾರ ಹೇಳಿದೆ. ಮಹಿಳಾ ಉದ್ಯೋಗಿಗಳಿಗೆ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಆಗಿರಬೇಕು. ಈ ಮೊದಲು ಮದುವೆಯಾಗಿರಬಾರದು ಎಂದು ಸರ್ಕಾರ ಷರತ್ತುಗಳನ್ನು ವಿಧಿಸಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!
ಕೊಪ್ಪಳ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.
ರಾಜೇಶ್ ಕುಮಾರ್(26) ಮತ್ತು ಮಧುಕಿರಣ್ (25) ಮೃತರು. ಇವರು ಹೈದ್ರಾಬಾದ್ ಮೂಲದವರಾಗಿದ್ದು, ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಂತರ ಮೃತ ದೇಹ ಪತ್ತೆಯಾಗಿವೆ. ಪ್ರವಾಸಕ್ಕೆ ಬಂದಿರುವ ನಾಲ್ವರು ಯುವಕರು ಸಾಣಾಪುರ ಕೆರೆ ದಡದ ಮೇಲೆ ಸ್ನಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ:ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ
ನಾಲ್ವರ ಪೈಕಿ ಕೇವಲ ಒಬ್ಬರಿಗೆ ಮಾತ್ರ ಈಜು ಬರುತ್ತಿತ್ತು. ಅಲೋಕ್ ಕುಮಾರ್ ಮಾತ್ರ ಕೆರೆಯಲ್ಲಿ ಈಜಲು ಹೋಗಿದ್ದ ಇನ್ನೂಳಿದ ಮೂವರು ಕೆರೆ ದಡದ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದರು. ಇನ್ನೂ ಅಲೋಕ್ ಕುಮಾರ್ ಸ್ವೀಮೀಂಗ್ ಮುಗಿಸಿಕೊಂಡು ಮೇಲೆ ಬಂದಿದಾನೆ. ಈ ವೇಳೆ ಇನ್ನೂ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಮೂವರಲ್ಲಿ ನರಸಿಂಹ ಎಂಬಾತ ಕಾಲು ಜಾರಿ ಕೆರಯಲ್ಲಿ ಬಿದ್ದಿದ್ದಾನೆ. ನರಸಿಂಹ ಕೆರೆಯಲ್ಲಿ ಬಿಳುತ್ತಿದ್ದಂತೆ ಆತನನ್ನು ಕಾಪಡಲು ಈಜು ಬಾರದ ರಾಜೇಶ್ ಮತ್ತು ಮಧು ಕಿರಣ ಕೆರೆಗೆ ಹಾರಿದ್ದಾರೆ. ಇದನ್ನು ನೋಡಿದ ಅಲೋಕ್ ಮೂವರನ್ನು ಕಾಪಾಡಲು ಆತನು ಕೆರೆಗೆ ಹಾರಿದ್ದಾನೆ ಆದರೆ ವಿಧಿಯಾಟ ಕಾಲು ಜಾರಿ ಬಿದ್ದ ನರಸಿಂಗ್ ನನ್ನು ಮಾತ್ರ ಅಲೋಕ್ ಕಾಪಾಡಲು ಸಾಧ್ಯವಾಯಿತು ನರಸಿಂಗ್‍ನನ್ನು ದಡೆಕ್ಕೆ ತಂದು ಬಿಡುವಷ್ಟರಲ್ಲಿ ತನ್ನ ಇನ್ನಿಬರು ಸ್ನೇಹಿತರು ನೀರುಪಾಲಾಗಿದ್ದರು. ಇನ್ನೂ ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರಿ: ಬಿಜೆಪಿಗೆ ಡಿಕೆಶಿ ಪ್ರಶ್ನೆ
ಹಾವೇರಿ: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ಕೆಲವರಕೊಪ್ಪದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರೆಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಅಭ್ಯರ್ಥಿ ಶಿವರಾಜ್ ಸಜ್ಜನ ಸೇರಿದಂತೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲೇ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಡಿಕೆಶಿ ಪ್ರಶ್ನಿಸಿದರು. ಇದನ್ನೂ ಓದಿ:ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ
ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರ್ಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ, ಜೊತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು, ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್
ಸಿಎಂ ಬಸವರಾಜ ಬೊಮ್ಮಾಯಿ ಅವರು ವೀರಾವೇಶದಿಂದ ಮಾತಾಡಿದ್ದಾರೆ. ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಕೆಲಸ ನೋಡಿ ಎಂದು ಸವಾಲು ಹಾಕಿದ್ದಾರೆ. ನೋಡೋಣ ಎಂದು ಈಗ ನಿಮ್ಮೂರಿಗೆ ಕಾರಿಳಿದು ನಡೆದುಕೊಂಡೇ ಬಂದೆ. ರೋಡ್ ಕಣಿವೆ ಇದ್ದಂತಿದೆ. ಅದಕ್ಕೆ ನೀವೇ ಸಾಕ್ಷಿ. ಇದೇನಾ ಅಭಿವೃದ್ಧಿ ಕೆಲಸ ಅಂದ್ರೆ? ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ, ಹಿಂದಿನ ಸಿಎಂ ಯಡಿಯೂರಪ್ಪನವರು 1800 ಕೋಟಿ ರುಪಾಯಿ ಕೊರೋನಾ ಪ್ಯಾಕೇಜ್ ಅನೌನ್ಸ್ ಮಾಡಿದ್ದರು. ನಿಮ್ಮ ಅಕೌಂಟ್ ಗೇನಾದರೂ ಪರಿಹಾರದ ಹಣ ಬಂತಾ? ಸತ್ತವರ ಕುಟುಂಬಗಳಿಗೇನಾದರೂ ಪರಿಹಾರ ಬಂತಾ? ರೈತರಿಗೆ ಬೆಳೆ ಹಾನಿ ಹಣ ಬಂತಾ? ಹೆಕ್ಟೇರಿಗೆ 10 ಸಾವಿರ ರು ಪರಿಹಾರ ಘೋಷಣೆ ಮಾಡಿದ್ದರು. ಅಂದರೆ ಕುಂಟೆಗೆ 100 ರುಪಾಯಿ. ಇದಕ್ಕೆ ಯಾರಾದರೂ ಆನ್ ಲೈನ್ ನಲ್ಲಿ ಅರ್ಜಿ ಹಾಕ್ತಾರಾ? ಎಂಜಿನಿಯರಿಂಗ್ ಪದವೀಧರ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಬೇಕು.
ದೇವರು ಸಿ.ಎಂ. ಉದಾಸಿ ಅವರನ್ನು ಬೇಗನೆ ಕರೆಸಿಕೊಂಡಿದ್ದಾನೆ. ನಾನು ಅವರನ್ನು ತಕ್ಕಮಟ್ಟಿಗೆ ಬಲ್ಲೆ. ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಬಹಳ ಸಜ್ಜನ ವ್ಯಕ್ತಿತ್ವ ಅವರದು. ಅವರ ಮೇಲೆ ದೂಷಣೆ ಮಾಡಲು ನಾನಿಲ್ಲಿಗೆ ಬಂದಿಲ್ಲ. ಅವರ ವಿರುದ್ಧ ನಮ್ಮ ಶ್ರೀನಿವಾಸ ಮಾನೆ ಅವರು ಸೋತಿದ್ದರೂ ಸಹ ಆಗಾಗ್ಗೆ ಅವರ ಆರೋಗ್ಯ ವಿಚಾರಿಸುತ್ತಿದ್ದೆ. ಅವರೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ನಮ್ಮ ಉದಾಸಿ ಅವರ ಮನಸ್ಸಿಗೆ ಇದ್ದ ನೋವೇನೆಂದರೆ, ಅಷ್ಟು ಹಿರಿಯ ನಾಯಕರಾದರೂ ತಮ್ಮನ್ನು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವಲ್ಲಾ ಅಂತಾ. ಅವರನ್ನೇಕೆ ಮಂತ್ರಿ ಮಾಡಲಿಲ್ಲ ಎಂದು ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಇದೇ ಕೊರಗಿನಲ್ಲಿ ಉದಾಸಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬುದು ನನ್ನ ಭಾವನೆ. ವ್ಯಕ್ತಿ ಸತ್ತಮೇಲೆ ಅವರನ್ನು ಹೊಗಳುವುದಲ್ಲ, ಆತ ಬದುಕಿದ್ದಾಗ ನೀವು ಅವರನ್ನು ಯಾವ ರೀತಿ ಗೌರವಿಸಿದಿರಿ ಎಂಬುದು ಮುಖ್ಯ. ಎಂದು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ ಕೊಟ್ಟರಾ? ಬೀದಿ ವ್ಯಾಪಾರಿಗಳಿಗೆ ಪರಿಹಾರ ಕೊಟ್ಟರಾ? ಚಿಕಿತ್ಸೆಯಿಂದ ಆಕ್ಸಿಜನ್ ವರೆಗೂ ಎಲ್ಲದಕ್ಕೂ ಕ್ಯೂ ನಿಲ್ಲುವಂತೆ ಮಾಡಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಇಲಿಗಳಂತೆ ವಿಲ, ವಿಲ ಒದ್ದಾಡಿ ಪ್ರಾಣ ಬಿಟ್ಟರು. ಒಬ್ಬ ಶಾಸಕ, ಮಂತ್ರಿ ಅವರನ್ನು ಭೇಟಿ ಮಾಡಿ ಸಹಾಯ ಮಾಡಲಿಲ್ಲ. ನಾನು, ಸಿದ್ದರಾಮಯ್ಯ ಹಾಗೂ ಧೃವನಾರಾಯಣ್ ಅವರು ಹೋಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ರಾಜ್ಯ ಸರಕಾರದವರು ಕೇಂದ್ರಕ್ಕೆ ಆಕ್ಸಿಜನ್ ಸಮಸ್ಯೆಯಿಂದ ಒಬ್ಬರೂ ಸತ್ತಿಲ್ಲ ಎಂದು ವರದಿ ಕೊಟ್ಟಿದ್ದಾರೆ. ನಾವು ನಿಮ್ಮ ಪರವಾಗಿ ಮನೆ, ಮನೆಗೂ ಹೋಗಿ ಅವರಿಗೆ 1 ಲಕ್ಷ ರು. ನೆರವು ನೀಡಿ, ಸಾಂತ್ವನ ಹೇಳಿದ್ದೇವೆ. ರಾಜ್ಯದುದ್ದಗಲಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ.
ಮುಂಬೈ: ಬಾಲಿವುಡ್ ನಟಿ, ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಸ್ಟೈಲ್ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ತಲೆಕೂದಲಿನ ಅಂಡರ್‌ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಬಜ್ ಕಟ್‍ನಲ್ಲಿ ಒಂದು ವಿಧವಾದ ಈ ಅಂಡರ್‍ಕಟ್ ಮಾಡಿಸಿಕೊಂಡಿರುವ ನಟಿ ತಮ್ಮ ಹೇರ್ ಸ್ಟೈಲ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್ನೆಸ್ ವೀಡಿಯೋ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಕಟ್ ಮಾಡಿಸಿಕೊಂಡ ವಿಷಯವನ್ನೂ ಹಂಚಿಕೊಂಡಿದ್ದಾರೆ. ನಟಿಯ ಹೇರ್ ಕಟ್ ನೋಡಿದ ಅಭಿಮಾನಿಗಳು ಕೆಲವರು ಮೆಚ್ಚಿಕೊಂಡಿದ್ದಾರೆ, ಇನ್ನು ಕೆಲವರು ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್
ಅಂಡರ್‌ಕಟ್ ಎಂದರೆ ತಲೆಯ ಹಿಂಭಾಗದಲ್ಲಿರುವ ನೀಳವಾದ ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸುವುದು. ಈ ಹೇರ್ ಸ್ಟೈಲ್ ಆಗಾಗ ಟ್ರೆಂಡ್ ಆಗುತ್ತಿರುತ್ತದೆ. ಸಾಕಷ್ಟು ಮಂದಿ ಈ ಹೇರ್ ಕಟ್ ಅನ್ನು ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಶಿಲ್ಪಾ ಶೆಟ್ಟಿಯಂತಹ ನಟಿ ಈ ರೀತಿಯ ಹೇರ್ ಕಟ್ ಮಾಡಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.
ಪತಿ ರಾಜ್ ಕುಂದ್ರಾ ಅವರಿಗೆ ಜಾಮೀನು ಸಿಗುವ ಮುನ್ನವೇ ರಿಯಾಲಿಟಿ ಡ್ಯಾನ್ಸ್ ಶೋಗೆ ಮರಳಿದ್ದ ಶಿಲ್ಪಾ ಶೆಟ್ಟಿ, ಮತ್ತೆ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. ಫೋಟೋಶೂಟ್? ಹಾಗೂ ಹೊಸ ಪ್ರಾಜೆಕ್ಟಟ್‍ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಶಿಲ್ಪಾ ಶೆಟ್ಟಿಯ ಹೇರ್ ಸ್ಟೈಲ್ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಅಕ್ಟೋಬರ್ 25 ರಿಂದ ಪ್ರಾಥಮಿಕ ಶಾಲೆ ತೆರೆಯಲು ಸರ್ಕಾರ ಅಧಿಕೃತ ಆದೇಶ ಜಾರಿ ಮಾಡಿದೆ.
ಕೋವಿಡ್ 19 ನಿಂದ ಬಂದ್ ಆಗಿದ್ದ 1 ರಿಂದ 5ನೇ ತರಗತಿ ತೆರೆಯಲು ಸರ್ಕಾರ ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಹಿಂದೆ ಶಿಕ್ಷಣ ಸಚಿವ ನಾಗೇಶ್ ಅವರು ದಸರಾ ಬಳಿಕ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಸರ್ಕಾರ ತಜ್ಞರ ವರದಿಯನ್ನು ಪಡೆದು ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
– ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
– ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು
– ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಕೂರಬೇಕು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು.
– ಪೋಷಕರ ಅನುಮತಿ ಪಡೆದು ಮಕ್ಕಳು ತರಗತಿಗೆ ಬರಬಹುದು
– ಪ್ರವೇಶ ದ್ವಾರಗಳಲ್ಲಿ ಸೇರದಂತೆ ಶಾಲೆಯ ಒಳಗೆ, ಆವರಣದಲ್ಲಿ, ತರಗತಿಗಳ ಒಳಗೆ ಗುಂಪುಗೂಡುವಂತಿಲ್ಲ.
– ಶಿಕ್ಷಕರು, ಸ್ಟಾಫ್ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು.
– ಎರಡು ಡೋಸ್ ಪೂರ್ಣ ಮಾಡಿರುವ ಶಿಕ್ಷಕರು, ಸ್ಟಾಫ್ ಗೆ ಮಾತ್ರ 1-5 ತರಗತಿಗಳೊಳಗೆ ಪ್ರವೇಶ.
ಸ್ವಿಮ್ಮಿಂಗ್ ಪೂಲ್‍ಗೆ ಅನುಮತಿ:
– ಶೇ.50 ರಷ್ಟು ಸಾಮರ್ಥ್ಯದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಕೆಗೆ ಅನುಮತಿ ನೀಡಲಾಗಿದೆ. ಕೋವಿಡ್ ನಿಯಮಗಳ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ.
– ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ – ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ, ಜೆಡಿಎಸ್ ಹೈಕಮಾಂಡ್ ಪದ್ಮನಾಭ ನಗರದಲ್ಲಿ – RSS ವಿರುದ್ಧ ಮಾತಾನಾಡುತ್ತಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ
ಬೆಂಗಳೂರು: ಕುಮಾರಸ್ವಾಮಿ ಯಾರನ್ನು ಸಹಿಸಿಕೊಳ್ಳುವುದಿಲ್ಲ, ಅವರು ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲ. ರೇವಣ್ಣ ಅವರು ಡಿಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧವಾಗಿ ಬಾಂಬ್ ಸಿಡಿಸಿದ್ದಾರೆ.
ಕುಮಾರಸ್ವಾಮಿ RSS ವಿರುದ್ಧ ಮಾತಾನಾಡುತ್ತಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ ಆಗಿದೆ. ಅವರು ಯಾರನ್ನ ಬೆಳೆಸಿದ್ದಾರೆ? ಒಬ್ಬ ಒಕ್ಕಲಿಗರನ್ನೂ ಬೆಳೆಸಲಿಲ್ಲ. ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ, ರೇವಣ್ಣ ಡಿಸಿಎಂ ಆಗ್ತಾರೆ ಅಂತ ಬಿಜೆಪಿಗೆ ಅಧಿಕಾರ ಕೊಡಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಗಂಭಿರ ಆರೋಪವನ್ನು ಮಾಡಿದ್ಧಾರೆ.
20-20 ಸರ್ಕಾರದಲ್ಲಿ ಅವರು ಬಿಜೆಪಿಗೆ ಯಾಕೆ ಅಧಿಕಾರ ಬಿಟ್ಟುಕೊಡಲಿಲ್ಲ ಗೊತ್ತಾ? ಬಿಜೆಪಿಗೆ ಬಿಟ್ಟುಕೊಡಬೇಕು ಅಂತಲ್ಲ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರೆ ರೇವಣ್ಣ ಡಿಸಿಎಂ ಆಗುತ್ತಾರೆ ಅನ್ನೋದನ್ನ ಸಹಿಸಿಕೊಳ್ಳೋಕೆ ಕುಮಾರಸ್ವಾಮಿಗೆ ಆಗಲಿಲ್ಲ. ಮುಸ್ಲಿಂ ಆಗಿ ನಾನೇ ಹೇಳಿದೆ ಆಡಿದ ಮಾತಿನಂತೆ ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಕೊಡೋಣ ಎಂದಿದ್ದೆ. ಅವರು ಕೇಳಲಿಲ್ಲ ಅದನ್ನ ಈಗ ಅನುಭವಿಸುತ್ತಿದ್ದಾರೆ ಎಂದು ಕುಮಾಸ್ವಾಮಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್
ಸಿದ್ದರಾಮಯ್ಯ ಜೆಡಿಎಸ್‍ನಲ್ಲಿ ಇದ್ದಾಗ ಜೆಡಿಎಸ್ 58 ಸೀಟ್ ಗೆದ್ದಿತ್ತು. ಅಮೇಲೆ 28, 40, 37 ಸೀಟು ಗೆದ್ದಿದ್ದಾರೆ ಯಾವಾಗಲಾದರು 58ಕ್ಕೆ ರೀಚ್ ಆಯ್ತ, ಸಿದ್ದರಾಮಯ್ಯ ಬಿಟ್ಟಮೇಲೆ? ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇದೆ. ಜೆಡಿಎಸ್ ಹೈ ಕಮಾಂಡ್ ಪದ್ಮನಾಭ ನಗರದಲ್ಲೇ ಇದೆ ಎನ್ನುತ್ತಾರೆ. ಇಲ್ಲೇ ಘೋಷಣೆ ಮಾಡಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ನನ್ನನ್ನ ಜೆಡಿಎಸ್ ನಿಂದ ಸಿಎಂ ಮಾಡೋದಾದರೆ ಮೊದಲು ದೇವೇಗೌಡರು ಕುಮಾರಸ್ವಾಮಿ ಪ್ರೆಸ್ ಮೀಟ್ ಮಾಡಿ ಹೇಳಲಿ ಬಹಿರಂಗವಾಗಿ ಆಮೇಲೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ
ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು? ರಾಮನಗರ ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಬೈ ಎಲೆಕ್ಷನ್‍ನಲ್ಲೂ ಅದರೂ ಬೇರೆ ಅಭ್ಯರ್ಥಿ ನಿಲ್ಲಲು ಹೇಳಬೇಕಿತ್ತು. ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ದರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು. ಮುಸ್ಲಿಂ ಕಾಳಜಿ ತೋರಿಸಬೇಕಿತ್ತು. ಕುಮಾರಸ್ವಾಮಿ ಸ್ವಂತ ಅಣ್ಣಾ ರೇವಣ್ಣ ಸಹಿಸಿಕೊಳ್ಳಲಿಲ್ಲ. ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಟ್ರೆ ರೇವಣ್ಣ ಡಿಸಿಎಂ ಆಗುತ್ತಾನೆ ಅಂತ ಅಧಿಕಾರ ಬಿಟ್ಟು ಕೊಡಲಿಲ್ಲ. ದೇವೇಗೌಡರು ಜಾತ್ಯತೀತ ನಾಯಕರಾಗಿದ್ದಾರೆ. ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ. ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್‍ಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದವರು. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ಎಂದು ಪ್ರಶ್ನೆ ಮಾಡಿದ್ಧಾರೆ. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ
ಜಾಫರ್ ಷರೀಫ್ ಅವರನ್ನ ರಾಜಕೀಯವಾಗಿ ಕೊಲೆ ಮಾಡಿದ್ರು. ಸಿಎಂ ಇಬ್ರಾಹಿಂ ಅವರನ್ನ ಅವರ ವಿರುದ್ಧ ನಿಲ್ಲಿಸಿ ಸೋಲಿಸಿದರು. ಜಾಫರ್ ಷರಿಫ್ ಬಗ್ಗೆ ಕಾಳಜಿ ತೋರಿಸಿದ್ರಾ? ಅವರ ಮೊಮ್ಮಗ ಹೆಬ್ಬಾಳದಲ್ಲಿ ಸೋಲಿಸಿದವರು ಜೆಡಿಎಸ್ ಅವರೇ ಆಗಿದ್ದಾರೆ. ಅವನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಸೋಲಿಸಿದ್ದಾರೆ. ಫಾರೂಖ್ ಅವರನ್ನ ಡಿಸಿಎಂ ಮಾಡಿ ಗೃಹ ಮಂತ್ರಿ ಮಾಡುತ್ತೇವೆ ಎಂದು 2018 ಪ್ರಚಾರ ಸಮಯದಲ್ಲಿ ಹೇಳಿದ್ದರು ಮಾಡಿದ್ರಾ? ಗೆದ್ದ ಬಳಿಕ ಪರಿಷತ್ ಸದಸ್ಯ ಮಾಡಿದ್ದೇ ಜಾಸ್ತಿಯಾಗಿದೆ. ಫಾರೂಕ್ ಕಾಲಿಗೆ ಬಿದ್ದು ಕೇಳಿದ್ರೂ ಮಾಡಲಿಲ್ಲ, ಇದು ಮುಸ್ಲಿಂರ ಮೇಲೆ ಇರೋ ಕಾಳಜಿಯಾಗಿದೆ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಜಮೀರ್ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಅಗರ ಕೆರೆ ರಾಜಕಾಲುವೆಗಳು, ಸುತ್ತಲಿನ ಲೇಔಟ್ ಚರಂಡಿ ದುರಸ್ತಿಗೆ ಶೀಘ್ರ ಕ್ರಮ: ಬೊಮ್ಮಾಯಿ