Tag: publictv

  • 70ನೇ ವರ್ಷಕ್ಕೆ ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ

    70ನೇ ವರ್ಷಕ್ಕೆ ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ

    ಗಾಂಧಿನಗರ: ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ತನ್ನ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮಹಿಳೆ ಮಗುವಿಗೆ ಜನ್ಮ ಕೊಟ್ಟಿರುವ ವಿಚಿತ್ರ ಘಟನೆಯೊಂದು ಗುಜರಾತ್‍ನ ಕಛ್‍ನಲ್ಲಿ ನಡೆದಿದೆ.

    ಜಿವುಬೆನ್ ವಾಲಾಭಾಯಿ ರಬಾರಿ 70 ನೇ ವರ್ಷಕ್ಕೆ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು, ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ.

    ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ ಈ ವಯಸ್ಸಿನಲ್ಲಿ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎಂದು ಹೇಳಿಕೊಂಡಿದ್ದರು. ಈ ವೃದ್ಧ ದಂಪತಿಗಳ ಬಯಕೆಗೆ ನಾವು ಮಣಿಯಲೇ ಬೇಕಾಯಿತು ಮತ್ತು ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ. ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‍ಗೆ ಸಲಹೆ ನೀಡಿದ್ದೇವು. ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಸಾಕಷ್ಟು ಭಾವುಕರಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ.

    ನಾವು ಮೊದಲು ಔಷಧಿಗಳನ್ನು ನೀಡವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಕ್ಕೆ ಚಿಕಿತ್ಸೆ ನೀಡಿದ್ದೇವೆ. ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು ಎಂದು ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಎರಡು ವಾರಗಳ ನಂತರ ಜಿವುಬೆನ್ ಅವರ ಸೋನೋಗ್ರಫಿ ಮಾಡಿದರು ಮತ್ತು ಭ್ರೂಣವು ಬೆಳೆಯುವುದಕ್ಕೆ ಪ್ರಾರಂಭವಾಯಿತ್ತು. ನಂತರ ಸಮಯಕ್ಕೆ ಸರಿಯಾಗಿ ಹೃದಯ ಬಡಿತವನ್ನು ಕಂಡುಕೊಂಡೆವು, ಯಾವುದೇ ದೋಷ ಕಾಣಲಿಲ್ಲ ಮತ್ತು ಆದ್ದರಿಂದ, ಗರ್ಭಧಾರಣೆಯೊಂದಿಗೆ ಮುಂದುವರೆದರು. ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ.

  • ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಕಾಫಿನಾಡ ಯುವಕನೇ ಸಾರಥಿ

    ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಕಾಫಿನಾಡ ಯುವಕನೇ ಸಾರಥಿ

    – ಬೇರೆಲ್ಲಾ ಉಪಗ್ರಹಗಳಿಗಿಂತ 50ರಷ್ಟು ವೇಗವಾಗಿ ಡೇಟಾ ರವಾನೆ

    ಚಿಕ್ಕಮಗಳೂರು: ಡಿಸೆಂಬರ್ ಒಳಗೆ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೊಳ್ಳಲಿದ್ದು, ಅದರ ಸಾರಥಿ ತಾಲೂಕಿನ ಆಲ್ದೂರಿನ ಯುವಕ ಅವೇಜ್ ಅಹಮದ್ ಆಗಲಿದ್ದಾರೆ.

    23ರ ಹರೆಯದ ಅವೇಜ್ ಅಹಮದ್ ಖಾಸಗಿ ಉಪಗ್ರಹ ಉಡಾವಣೆ ಸಂಬಂಧ ಈಗಾಗಲೇ ಪ್ರಧಾನಿ ಮೋದಿ ಜೊತೆ ಎರಡು ಬಾರಿ ಮಾತನಾಡಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮುಂಬರೋ ಡಿಸೆಂಬರ್ ಒಳಗೆ ಉಪಗ್ರಹ ಉಡಾವಣೆಗೊಳ್ಳಲಿದ್ದು, ಇಸ್ರೋ ದಿನಾಂಕ ನಿಗದಿ ಮಾಡಬೇಕಿದೆ. ಆರಂಭದಲ್ಲಿ ಈ ಉಪಗ್ರಹ ರಷ್ಯಾದಿಂದ ಉಡಾವಣೆಗೊಳ್ಳಬೇಕಿತ್ತು. ವಿಷಯ ತಿಳಿದ ಕೇಂದ್ರ ಸರ್ಕಾರ ವಿಜ್ಞಾನಿಗಳ ಜೊತೆ ಮಾತನಾಡಿ ನಿಮಗೆ ಬೇಕಾದ ಎಲ್ಲಾ ಸಪೋರ್ಟ್ ಮಾಡಲಿದ್ದೇವೆ ಎಂದು ಹೇಳಿದ್ದರಿಂದ ಇಂದು ಈ ಉಪಗ್ರಹ ಭಾರತದ ಮಣ್ಣಲ್ಲೇ ಉಡಾವಣೆಗೊಳ್ಳಲಿದೆ.

    ಭಾರತದಲ್ಲಿ ಹುಟ್ಟಿದ್ದೇವೆ. ಏನೇ ಮಾಡಿದರೂ ಭಾರತಕ್ಕೆ ಮಾಡಬೇಕು ಎಂದು ಅವೇಜ್ ಅಹಮದ್ ನಾಸದಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಬಂದಿದ್ದರು. ಬೆಂಗಳೂರಿನಲ್ಲಿ ಪಿಕ್ಸೆಲ್ ಕಂಪನಿ ತೆರೆದು ಓದುವಾಗಲೇ ಏರ್ ಸ್ಪೇಸ್‍ನತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಅದರ ಪರಿಣಾಮ ಇಂದು ದೇಶದ ಮೊದಲ ಖಾಸಗಿ ಉಪಗ್ರಹಕ್ಕೆ ಕಾಫಿನಾಡ ಹುಡುಗ ಸಾರಥಿಯಾಗಲಿದ್ದಾರೆ. ಮುಂದಿನ 2-3 ವರ್ಷದಲ್ಲಿ ಸುಮಾರು 36 ಖಾಸಗಿ ಉಪಗ್ರಹಗಳು ಉಡಾವಣೆಗೊಳ್ಳಲಿವೆ.

    ಯಾರು ಅವೇಜ್ ಅಹಮದ್: 23 ವರ್ಷದ ಅವೇಜ್ ಅಹಮದ್ ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ ನದೀಮ್ ಅಹಮದ್. ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ಮಗ ಏನು ಓದುತ್ತಾನೆ, ಅವನಿಗೆ ಯಾವುದರಲ್ಲಿ ಆಸಕ್ತಿ ಇತ್ತೋ ಅದರಲ್ಲೇ ಓದಿಸಿದ್ದಾರೆ. ಇಡೀ ಜೀವನವನ್ನೇ ಮಗನಿಗಾಗಿ ಮುಡಿಪಾಗಿಟ್ಟು ಒಂದು ಸ್ವಂತ ಮನೆಯನ್ನೂ ನಿರ್ಮಿಸಿಕೊಳ್ಳದೆ ಮಗನಿಗೆ ಜೀವನ ಸೆವೆಸಿದ್ದರಿಂದ ಇಂದು 23 ವರ್ಷದ ಅವೇಜ್ ಅಹಮದ್ ದೇಶವೇ ಮೆಚ್ಚುವ ಸಾಧನೆಗೈದಿದ್ದಾರೆ.

    ಆಲ್ದೂರು ಹಾಗೂ ಸಂಗಮೇಶ್ವರಪೇಟೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಅವೇಜ್ ಅಹಮದ್ ದೇಶದ ಬಿಡ್ಸ್ ಪಿಲಾನಿ ಯುನಿವರ್ಸಿಟಿಯಲ್ಲಿ ಓದಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವತಃ ಇಂದಿರಾ ಗಾಂಧಿಯೇ ಇನ್ಫ್ಲುಯೆನ್ಸ್ ಮಾಡಿದ್ರು ಸೀಟು ಸಿಗದ ಬಿಡ್ಸ್ ಪಿಲಾನಿ ಯುನಿವರ್ಸಿಟಿಯಲ್ಲಿ ಮೆರಿಟ್ ಸೀಟ್ ಪಡೆದು 477 ರ‍್ಯಾಂಕ್ಗಳಿಸಿದ್ದರು. ಮೊದಲ ವರ್ಷದ ಓದಿನಲ್ಲೇ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು.

    ಪಿಕ್ಸೆಲ್ ಕಂಪನಿ ಆರಂಭ : ಮೂರನೇ ವರ್ಷದಲ್ಲಿ ಓದುವಾಗಲೇ ಬೆಂಗಳೂರಿನಲ್ಲಿ ಏರೋಸ್ಪೇಸ್ ಎಂಬ ಪಿಕ್ಸೆಲ್ ಕಂಪನಿ ಆರಂಭಿಸಿದ್ದರು. ಅದು ಉಪಗ್ರಹ ತಯಾರಿಕಾ ಕಂಪನಿ. ಅವೇಜ್ ಅಹಮದ್ ತಯಾರಿಸಿದ ಆ ಉಪಗ್ರಹಗಳನ್ನ ಇಸ್ರೋದಿಂದಲೇ ಉಡಾವಣೆ ಮಾಡಬೇಕೆಂಬ ಹಠ, ಆಸೆ ಅವರದ್ದಾಗಿತ್ತು. ರಷ್ಯಾದಿಂದ ಉಡಾವಣೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಿ ಕೇಂದ್ರ ಸರ್ಕಾವೇ ಮುಂದೆ ನಿಂತು ಇಂದು ಉಪಗ್ರಹ ಉಡಾವಣೆಗೆ ಸಾಥ್ ನೀಡಿದೆ. ಈ ಖಾಸಗಿ ಉಪಗ್ರಹ ಕಳೆದ ವರ್ಷವೇ ಉಡಾವಣೆ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಉಪಗ್ರಹ ಡಿಸೆಂಬರ್ ಒಳಗೆ ಮುಗಿಲಿನತ್ತ ಮುಖ ಮಾಡಲಿದೆ.

    ಉಪಗ್ರಹದ ಸಾಮರ್ಥ್ಯ: ಈ ಉಪಗ್ರಹದ ಕುರಿತು 2020ರ ಡಿಸೆಂಬರ್ 14 ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಹಾಗೂ ಖಾಸಗಿ ಕಂಪೆನಿಗಳ ಸಿಇಓಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಆಗ ಅವೇಜ್ ಅಹಮದ್ ಕೂಡ ಮೋದಿ ಜೊತೆ ಮಾತನಾಡಿದ್ದರು. ಆಗ ಮೋದಿ ಕೇಂದ್ರ ಸರ್ಕಾರದಿಂದ ಎಲ್ಲಾ ಬೆಂಬಲ ನೀಡುವ ಭರವಸೆ ನೀಡಿದ್ದರು. ಬೇರೆ ಎಲ್ಲಾ ಉಪಗ್ರಹಗಳು ಯಾವ ರೀತಿ ಡೇಟಾವನ್ನ ಬಿಡುಗಡೆ ಮಾಡುತ್ತವೆಯೋ ಅವೇಜ್ ಅಹಮದ್ ರವರ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ ಶೇಕಡ 50ಕ್ಕಿಂತ ಹೆಚ್ಚು ಡೇಟಾವನ್ನ ಬಿಡುಗಡೆಗೊಳಿಸುತ್ತೆ. ಅವೇಜ್ ತಯಾರಿಸಿರೋ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ. ಇದನ್ನೂ ಓದಿ: ದೇಶದ ಎಲ್ಲಾ ಯೂನಿವರ್ಸಿಟಿಯಲ್ಲಿ RSS ಕಾರ್ಯಕರ್ತರನ್ನ ಸಿಂಡಿಕೇಟ್ ಮಾಡ್ಕೊಂಡಿದ್ದಾರೆ: ಹೆಚ್‍ಡಿಕೆ

    ಆಲ್ದೂರಿನ ಜನರಲ್ಲಿ ಹರ್ಷ : ಕಣ್ಣ ಮುಂದೆ ಆಡಿ ಬೆಳೆದವ ಇಂದು ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರೋದು ಊರಿನ ಜನರಿಗೆ ಖುಷಿ ತಂದಿದೆ. ವಿಷಯ ಕೇಳಿದಾಗ ನಾವು ತುಂಬಾ ಸಂತೋಷಪಟ್ಟೇವು. ನಮ್ಮ ಮಕ್ಕಳ ಇಂತಹಾ ಸಾಧನೆ ಮಾಡಿದ ಎಂದು ಖುಷಿಯಿಂದ ಸಿಹಿ ಹಂಚಿ ಸಂಭ್ರಮಿಸಿದ್ದೇವು ಎಂದಿದ್ದಾರೆ ಅವೇಜ್ ತಂದೆ ನದೀಮ್ ಅಹಮದ್ ಸ್ನೇಹಿತ ರವಿ. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

    ಅವೇಜ್ ತಂದೆ ನದೀಮ್ ಕೂಡ ಅದು ನಮ್ಮ ಜೀವಮಾನದ ಸಂತಸದ ಕ್ಷಣ ಎಂದು ಸಂತೋಷವಾಗಿದ್ದಾರೆ. ಎಲ್ಲಾ ಮಕ್ಕಳು ಇದೇ ರೀತಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಪ್ರತಿ ಮಗುವಿನಲ್ಲೂ ಒಂದೊಂದು ಕಲೆ ಇರುತ್ತೆ. ಎಲ್ಲಾ ಮಕ್ಕಳು ದೇಶದ ಪ್ರಗತಿ ಸಾಧನೆ ಮಾಡಬೇಕು ಎಂದು ಬಯಸಿದ್ದಾರೆ. ಅವೇಜ್ ಅವರ ಉಪಗ್ರಹಗಳು ಯಶಸ್ವಿಯಾಗಿ ಭಾರತದ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ ಅನ್ನೋದು ಪ್ರತಿಯೊಬ್ಬ ಕನ್ನಡಿಗನ ಬಯಕೆ.

  • ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    ನವದೆಹಲಿ: ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್‍ಬುಕ್(facebook) ತನ್ನ ಹೆಸರನ್ನು ಬದಲಿಸಲು ಚಿಂತಿಸಿದ್ದು, ಹೊಸ ಹೆಸರಿನೊಂದಿಗೆ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ.

    ಫೇಸ್‍ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್‍ಜುಕರ್ ಬರ್ಗ್(Mark Zuckerberg) ಅಕ್ಟೋಬರ್ 28 ರಂದು ನಡೆದ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಶೀಘ್ರದಲ್ಲಿ ಹೊಸ ಹೆಸರು ನಾಮಕರಣ ಮಾಡುವ ಸಾಧ್ಯತೆಗಳಿದೆ ಎಂದು ವರ್ಜ್ ವರದಿ ಮಾಡಿದೆ.ಇದನ್ನೂ ಓದಿ: ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

    ಹೆಸರು ಬದಲಾವಣೆ ಸುದ್ದಿ ಜೋರಾಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೇಸ್‍ಬುಕ್ ಈ ರೀತಿಯ ಯಾವುದೇ ಬೆಳವಣಿಗೆಗಳಿಲ್ಲ ಇದೊಂದು ಊಹಪೂಹಾದ ಸುದ್ದಿ ಎಂದು ಹೇಳಿದೆ. ಇದನ್ನೂ ಓದಿ: ಮೃತ ರೈತರಿಗೆ ಗೌರವ ಸಲ್ಲಿಸಿದ ಪ್ರಿಯಾಂಕಾ ಗಾಂಧಿ – ಲಖೀಂಪುರ್ ಖೇರಿಯಲ್ಲಿ ಭಾರಿ ಭದ್ರತೆ

    ಆದರೆ ಮೂಲಗಳ ಪ್ರಕಾರ ಫೇಸ್‍ಬುಕ್ ಮೇಲೆ ಕ್ಯಾಲಿಪೋನಿಯ ಸರ್ಕಾರ ಪರಿಶೀಲನೆ ಹೆಚ್ಚಿಸುತ್ತಿದ್ದು, ಈ ನಡುವೆ ಹಲವು ವಿವಾದಗಳಿಗೆ ಫೇಸ್‍ಬುಕ್ ಕಾರಣವಾಗಿದೆ. ಈಗ ಹೆಸರು ಬದಲಿಸುವ ಮೂಲಕ ತನ್ನ ಅಡಿಯಲ್ಲಿರುವ ಇನ್‍ಸ್ಟಾಗ್ರಾಮ್, ವಾಟ್ಸಾಪ್ ಸೇರಿದಂತೆ ಹಲವು ಕಂಪನಿಗಳನ್ನು ಪುನಶ್ಚೇತನ ಮಾಡಲು ಚಿಂತಿಸಲಾಗಿದೆ ಎನ್ನಲಾಗಿದೆ.ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

    ಯುರೋಪಿಯನ್ ಒಕ್ಕೂಟದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿರುವ ಫೇಸ್‍ಬುಕ್, ಮತ್ತಷ್ಟು ಜನರನ್ನು ಸೆಳೆಯುವ ಲೆಕ್ಕಕಾಗಿ ಫೇಸ್‍ಬುಕ್ ವರ್ಚುವಲ್ ರಿಯಾಲಿಟಿ (ವಿಆರ್), ವರ್ಧಿತ ರಿಯಾಲಿಟಿರಿಯಾಲಿಟಿ (ಎಆರ್ ) ಮೇಲೆ ಹೂಡಿಕೆ ಮಾಡಿದೆ.

  • ಬೆಳಗ್ಗಿನ ಉಪಹಾರಕ್ಕೆ ಮಾಡಿ ಬಿಸಿಯಾದ ತೊಗರಿ ಬೇಳೆ ದೋಸೆ

    ಬೆಳಗ್ಗಿನ ಉಪಹಾರಕ್ಕೆ ಮಾಡಿ ಬಿಸಿಯಾದ ತೊಗರಿ ಬೇಳೆ ದೋಸೆ

    ಬೆಳಗ್ಗಿನ ಉಪಹಾರಕ್ಕೆ ಬಿಸಿ ಬಿಸಿಯಾದ ದೋಸೆ ಇದ್ದರೆ ಚೆನ್ನಾಗಿರುತ್ತದೆ. ರುಚಿಯಾದ ಆಹಾರ ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಅಡುಗೆ ಮಾಡಲು ಸುಲಭವಾಗಿರುವ ರೆಸಿಪಿಗಳನ್ನು ನಾವು ಹುಡುಕುತ್ತಿರುತ್ತೇವೆ. ನಿಮ್ಮ ರುಚಿಗೆಟ್ಟ ನಾಲಿಗೆಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ಸರಳ ವಿಧಾನದಲ್ಲಿರುವ ತೊಗರಿ ಬೇಳೆ ದೋಸೆಯನ್ನು ತಯಾರಿಸುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 1ಕಪ್
    * ತೊಗರಿ ಬೇಳೆ- 1ಕಪ್
    * ಉದ್ದಿನಬೇಳೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕ್ಯಾರೆಟ್- ಅರ್ಧ ಕಪ್
    * ಹಸಿಮೆಣಸು- 3
    * ಶುಂಠಿ- ಸ್ವಲ್ಪ
    * ಕರಿಬೇವು- ಸ್ವಲ್ಪ
    * ಈರುಳ್ಳಿ- 1

    ಮಾಡುವ ವಿಧಾನ:
    * ಮೊದಲಿಗೆ ತೊಗರಿ ಬೇಳೆ, ಅಕ್ಕಿಯನ್ನು ಚೆನ್ನಾಗಿ ತೊಳೆದು 4ಗಂಟೆಗಲ ಕಾಲ ನೀರಿನಲ್ಲಿ ನೆನೆಸಿಟ್ಟಿರಬೇಕು.
    * ನಂತರ ಈಗಾಗಲೇ ನೆನೆಸಿಟ್ಟಿರುವ ಅಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತೆಗೆ ಹಾಕಿಕೊಂಡು ತುರಿದ ಕ್ಯಾರೆಟ್, ಹಸಿಮೆಣಸು, ಶುಂಠಿ, ಕರಿಬೇವು, ಉಪ್ಪು, ಈರುಳ್ಳಿಯನ್ನೆಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    * ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾದ ನಂತರ ಎಣ್ಣೆ ಹಾಕಿ ನಂತರ ದೋಸೆ ಹಿಟ್ಟು ಹಾಕಿ ದೋಸೆ ಮಾಡಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ತೊಗರಿ ಬೇಳೆ ದೋಸೆ ಸವಿಯಲು ಸಿದ್ಧವಾಗುತ್ತದೆ.

  • ಉಪಚುನಾವಣೆಯಲ್ಲಿ 2ಸ್ಥಾನ ಬಿಜೆಪಿ ಗೆಲ್ಲುತ್ತದೆ: ಕೋಟ ಶ್ರೀನಿವಾಸ್ ಪೂಜಾರಿ

    ಉಪಚುನಾವಣೆಯಲ್ಲಿ 2ಸ್ಥಾನ ಬಿಜೆಪಿ ಗೆಲ್ಲುತ್ತದೆ: ಕೋಟ ಶ್ರೀನಿವಾಸ್ ಪೂಜಾರಿ

    – ಕಾಂಗ್ರೆಸ್ ದೇಶದಲ್ಲೇ ಅಸ್ಥಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ

    ಉಡುಪಿ: ಉಪಚುನಾವಣೆಯಲ್ಲಿ ಕಾಂಗ್ರೆಸ್ ದೇಶದಲ್ಲೇ ಅಸ್ಥಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. 2 ಸ್ಥಾನವನ್ನು ಬಿಜೆಪಿ ಗೆಲ್ಲುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಡಳಿತಾತ್ಮಕ ವಿಚಾರದಲ್ಲಿ ಲೋಪದೋಷ ಇದ್ದರೆ ಆರೋಪ ಮಾಡಿ. ಅನಗತ್ಯ ಗೊಂದಲ ಸೃಷ್ಟಿಸಬೇಡಿ. ಈ ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತವೆಂದು ಹೇಳಿದ್ದಾರೆ. ಇದನ್ನೂ ಓದಿ:   50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

    ಉಡುಪಿ ಜಿಲ್ಲೆ ಕಾಪು ಪೊಲೀಸರು ವಿಜಯ ದಶಮಿ ಹಬ್ಬದ ದಿನ ಕೇಸರಿ ಬಟ್ಟೆ ಧರಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯ ಹಿಂದುತ್ವ ವಿರೋಧಿ ಹೇಳಿಕೆ ನೀಡುವುದು ಹೊಸತಲ್ಲ. ಎಲ್ಲರೂ ಸಮಾನರು ಅನ್ನುವುದು ಬಿಟ್ಟು ಕೆಲವರು ಮಾತ್ರ ಸಮಾನರು ಅಂತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  6 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಿಯಕರ

    ಸಿದ್ದರಾಮಯ್ಯ ಮತ್ತು ಅವರ ಪಕ್ಷ ಯಾವ ಸ್ಥಾನದಲ್ಲಿದೆ ಅರ್ಥಮಾಡಿಕೊಳ್ಳಲಿ. ಖಾಸಗಿಯಾಗಿ ಯಾವ ಉಡುಪು ಧರಿಸಬೇಕು ಅನ್ನುವ ಹಕ್ಕು ಪೊಲೀಸರಿಗೆ ಇದೆ. ಗೊಂದಲ ಮಾಡುವುದು ಉನ್ನತ ಸ್ಥಾನದಲ್ಲಿರುವ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

  • 6 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಿಯಕರ

    6 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಿಯಕರ

    ನವದೆಹಲಿ: ಪ್ರೀತಿಯನ್ನು ನಿರಾಕರಿಸಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದ್ವಾರಕಾದಲ್ಲಿ ನಡೆದಿದೆ.

    ಪ್ರೀತಿಯನ್ನು ನಿರಾಕರಿಸಿದ್ದ ಮಹಿಳೆಯನ್ನು ಪ್ರಿಯಕರ ಆಕೆಯ ಮನೆಯ ಬಳಿ ಹಲ್ಲೆ ಮಾಡಿದ್ದಾನೆ. ನಿಷ್ಠ ಆರು ಬಾರಿಯಾದ್ರೂ ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ ಎಂದು ಪೊಲೀಸರ ಹೇಳಿದ್ದಾರೆ. ಸೋಮವಾರ ರಾತ್ರಿ ರಕ್ತದ ಮಡುವಿನಲ್ಲಿ ಯುವತಿ ಬಿದ್ದಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ:   ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ಆರೋಪಿ ಈ ಹಿಂದೆಯೂ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕೊಲೆ ದೃಶ್ಯ ಸೆರೆಯಾಗಿದೆ. ಮೂವರು ಪುರುಷರು ಮಹಿಳೆ ಜೊತೆ ನಿಂತಿದ್ದಾರೆ. ನಂತರ ಅವರಲ್ಲಿ ಒಬ್ಬ ಅವಳಿಗೆ ಚಾಕುವಿನಿಂದ ಇರಿಯಲು ಆರಂಭಿಸಿದ್ದಾನೆ. ಈ ವೇಳೆ ಇತರರು ನೋಡುತ್ತಿದ್ದರು. ಅಲ್ಲಿನ ಸ್ಥಳೀಯರು ಮಹಿಳೆಯ ಕಿರುಚಾಟವನ್ನು ಕೇಳಿದರೂ, ಯಾರೂ ಆಕೆಗೆ ಸಹಾಯ ಮಾಡಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ:   50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

  • ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ- ಐವರ ಬಂಧನ

    ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ- ಐವರ ಬಂಧನ

    ಪಾಟ್ನಾ: ವಿವಾಹಿತ ಮಹಿಳೆ ಮೇಲೆ ಐವರು ಪುರುಷರು ಒಂದು ವಾರ ನಿರಂತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಪತಿಯೊಂದಿಗೆ ಅಕ್ಟೋಬರ್ 10ರಂದು ಜಗಳವಾಡಿ ಮನೆಯನ್ನು ಬಿಟ್ಟು ಹೋಗಿದ್ದರು. ಬಳಿಕ ಮಹಿಳೆ ಕೊಲ್ಕತ್ತಾಗೆ ಹೋಗಲು ನಿರ್ಧರಿಸಿ, ಪಾಟ್ನಾ ಜಂಕ್ಷನ್‍ಗೆ ಬಂದಿದ್ದಾರೆ. ಅಲ್ಲಿಂದ ಮಹಿಳೆ ಹೋಟೆಲ್‍ಗೆ ಹೋಗಿ, ಓನರ್ ಬಳಿ ಕೊಲ್ಕತ್ತಾಗೆ ಹೋಗುವ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದನ್ನೂ ಓದಿ:  ಭಾರೀ ಮಳೆಗೆ ಕೊಚ್ಚಿ ಹೋದ ಉತ್ತರಾಖಂಡ್ ರೈಲು ಹಳಿ

    ಹೋಟೆಲ್ ಮಾಲೀಕ ಗೋಪಾಲ್ ತನ್ನ ಸ್ನೇಹಿತ ಅಮಿತ್‍ಗೆ ಮಹಿಳೆಯ ಬಗ್ಗೆ ಹೇಳಿದ್ದಾನೆ. ಬಳಿಕ ಇಬ್ಬರೂ ಆಕೆಯನ್ನು ಅಜಯ್ ಇನ್ನೊಬ್ಬ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಅವರು ಕಾರ್ಬಿಗಾಹಿಯಾ ಎಂಬ ಪ್ರದೇಶದ ಒಂದು ಕೊಠಡಿಯಲ್ಲಿ ರೈಲು ಬರುವವರೆಗೆ ಕಾಯುವಂತೆ ಮಹಿಳೆಗೆ ಹೇಳಿದ್ದಾರೆ ಎಂದು ಜಕ್ಕನಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ಕೆಪಿ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ:   50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

    ಅಕ್ಟೋಬರ್ 17ರ ರಾತ್ರಿಯವರೆಗೆ ಸಂತ್ರಸ್ತೆಯನ್ನು ಆ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಒಬ್ಬ ಆರೋಪಿ ಆಕೆಯ ಮೇಲೆ ಕಣ್ಣಿಡಲು 24 ಗಂಟೆ ಕೋಣೆಯ ಹೊರಗೆ ಕಾಯುತ್ತಿದ್ದ. ಕೊಲ್ಕತ್ತಾ ತಲುಪಲು ಸಂತ್ರಸ್ತೆ ವಿಫಲವಾದ ಕಾರಣ, ಆಕೆಯ ಪತಿ ಜಕ್ಕನಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಟವರ್ ಪರಿಶೀಲಿಸಿದ್ದು, ಅದು ಪಾಟ್ನಾ ಜಂಕ್ಷನ್ ಆಕೆಯ ಕೊನೆಯ ಸ್ಥಳವೆಂದು ತೋರಿಸಿದೆ. ಸ್ಥಳೀಯ ಗುಪ್ತಚರ ಮಾಹಿತಿ ಆಧಾರದ ಮೇಲೆ ನಾವು ಮಹಿಳೆ ಇರುವ ಮನೆಯನ್ನು ತಲುಪಿದೆವು ಎಂದು ಅವರು ಹೇಳಿದ್ದಾರೆ.

  • 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

    50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ನಟಿ ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.

    ಲೈಂಗಿಕ ದೌರ್ಜನ್ಯ, ಮೋಸ, ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿ ರಾಜ್ ಕುಂದ್ರಾ ವಿರುದ್ಧ ಅಕ್ಟೋಬರ್ 14ರಂದು ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಜುಹು ಪೊಲೀಸ್ ಠಾಣೆಯ ಹೊರಭಾಗ ಪತ್ರಕರ್ತರ ಜೊತೆ ಮಾತನಾಡಿದ್ದ ಶೆರ್ಲಿನ್ ಚೋಪ್ರಾ , ಲೈಂಗಿಕ ದೌರ್ಜನ್ಯ, ಮೋಸ ಮಾಡಿದ್ದಾರೆ ಎಂದು ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. 2019ರ ಮಾರ್ಚ್ 17ರಂದು ರಾಜ್ ಕುಂದ್ರಾ ಅವರು ನನ್ನ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಶೆರ್ಲಿನ್ ಹೇಳಿದ್ದಾರೆ.

    ಪ್ರಾಜೆಕ್ಟ್‌ವೊಂದರ ಸಲುವಾಗಿ ಮಾರ್ಚ್ 27, 2019 ರಂದು ಬಿಸಿನೆಸ್ ಮೀಟಿಂಗ್ ನಡೆದ ನಂತರದಲ್ಲಿ ಮೆಸೇಜ್‍ಗಳ ವಿನಿಮಯ ವೇಳೆ ನನ್ನ ಹಾಗೂ ರಾಜ್ ಕುಂದ್ರಾ ಮಧ್ಯೆ ವಾಗ್ವಾದ ನಡೆದಿತ್ತು. ಈ ವೇಳೆ ಹೇಳದೇ ಕೇಳದೆ ರಾಜ್ ಕುಂದ್ರಾ ನನ್ನ ಮನೆಗೆ ಬಂದಿದ್ದರು ಎಷ್ಟೇ ವಿರೋಧಿಸಿದರೂ ಕೂಡ, ರಾಜ್ ಕುಂದ್ರಾ ನನ್ನನ್ನು ಚುಂಬಿಸಿದರು ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು.

    ಶೆರ್ಲಿನ್ ಚೋಪ್ರಾಗೆ ಲೀಗಲ್ ನೋಟಿಸ್:
    ಈಗಾಗಲೇ ಶೆರ್ಲಿನ್ ಚೋಪ್ರಾ ಅವರಿಗೆ ಶಿಲ್ಪಾ ಶೆಟ್ಟಿ ದಂಪತಿ ಲೀಗಲ್ ನೋಟಿಸ್ ನೀಡಲಾಗಿದೆ. ಸುಳ್ಳು, ಆಧಾರ ರಹಿತ ದೂರು ನೀಡಲಾಗಿದೆ. ಹಣ ಗಳಿಸಲು ಹೆಸರು ಹಾಳು ಮಾಡುವ ಮಾರ್ಗ ಅನುಸರಿಸಲಾಗುತ್ತಿದೆ ಎಂದು ಶಿಲ್ಪಾ ಶೆಟ್ಟಿ ವಕೀಲರು ಹೇಳಿದ್ದಾರೆ. ಶಿಲ್ಪಾ ದಂಪತಿ ವಿರುದ್ಧ ಶೆರ್ಲಿನ್ ಚೋಪ್ರಾ ಅವರು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದರು. ಟಿಆರ್‍ಪಿಗಳಿಸಲು, ಅನಗತ್ಯ ಕಾಂಟ್ರವರ್ಸಿ ಸೃಷ್ಟಿ ಮಾಡಲು ಶೆರ್ಲಿನ್ ಈ ಮಾರ್ಗ ಅನುಸರಿಸಿದ್ದಾರೆ ಎಂದು ಲೀಗಲ್ ನೋಟೀಸ್‍ನಲ್ಲಿ ನಮೂದಿಸಲಾಗಿದೆ.

    ಅಶ್ಲೀಲ ಸಿನಿಮಾಗಳ ಚಿತ್ರಿಕರಣ ಆರೋಪ ರಾಜ್ ಕುಂದ್ರಾ ಮೇಲಿದೆ. ಈ ಪ್ರಕರಣದಲ್ಲಿ ಶೆರ್ಲಿನ್ ಚೋಪ್ರಾ ಕೂಡ ಹೆಸರು ಕೇಳಿ ಬಂದಿತ್ತು. ಮುಂಬೈ ಪೊಲೀಸರು ರಾಜ್ ಕುಂದ್ರಾ ಅವರು ಈ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಆರೋಪ ಮಾಡಿದ್ದರು, ಅಷ್ಟೇ ಅಲ್ಲದೆ ಚಿತ್ರರಂಗಕ್ಕೆ ಬರುವ ಮಹಿಳೆಯನ್ನು ಈ ರೀತಿ ಸಿನಿಮಾ ಮಾಡುವಂತೆ ಒತ್ತಾಯ ಮಾಡಲಾಗುವುದು ಎಂದು ಕೂಡ ಹೇಳಲಾಗಿದೆ.