ನವದೆಹಲಿ: ಕಾಶ್ಮೀರದಲ್ಲಿ ನಡೆಯುತ್ತಿರುವ ಇತ್ತಿಚೀನ ದಾಳಿಗಳ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ವೀಡಿಯೋಯೊಂದನ್ನು ಬಿಡುಗಡೆ ಮಾಡಿರುವ ವಾಹಿನಿ ಈ ಸಾಕ್ಷ್ಯವನ್ನು ಪಾಕ್ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ವೀಡಿಯೋ ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ಮೂಲದ ಉಗ್ರರು ತರಬೇತಿ ನೀಡುತ್ತಿರುವ ಅಂಶ ಒಳಗೊಂಡಿದೆ. ಕಾಶ್ಮೀರದಲ್ಲಿ ಇತ್ತಿಚೆಗೆ ಬಂಧಿಸಲಾಗಿದ್ದ ಉಗ್ರನಿಂದ ವಶ ಪಡೆಸಿಕೊಂಡಿದ್ದ ಮೊಬೈಲ್‍ನಿಂದ ಈ ವೀಡಿಯೋ ಪಡೆಯಲಾಗಿದೆ ಎಂದು ವಾಹಿನಿ ಹೇಳಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
ವಿಚಾರಣೆ ವೇಳೆ ಉಗ್ರನಿಂದ ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದು ಆ ಮೊಬೈಲ್‍ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೇಗೆ ಲೋಡ್ ಮಾಡುವುದು, ಅದನ್ನು ಬಳಕೆ ಮಾಡುವುದು ಹೇಗೆ ಎಂದು ವೀಡಿಯೋ ಕಾಲ್ ಮೂಲಕ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ತರಬೇತು ನೀಡುತ್ತಿರುವ ವ್ಯಕ್ತಿ ಜೈಶ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯವನು ಎಂದು ಹೇಳಲಾಗಿದೆ. ಇದನ್ನೂ ಓದಿ:ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್
ಉಗ್ರರ ದಾಳಿ ಹೆಚ್ಚಾಗುತ್ತಿರುವ ಬೆನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ತೆರಳಲು ಮುಂದಾಗಿದ್ದಾರೆ. ಅಕ್ಟೋಬರ್ 23-25 ವರೆಗೂ ಅವರು ಕಾಶ್ಮೀರದಲ್ಲಿ ಇರಲಿದ್ದು, ಭದ್ರತಾ ವ್ಯವಸ್ಥೆಗಳ ಬಗ್ಗೆ ಸಭೆಗಳನ್ನು ನಡೆಸಲಿದ್ದಾರೆ. ಅಮಿತ್ ಶಾ ಭೇಟಿ ಹಿನ್ನಲೆ ಈಗಾಗಲೇ ಭದ್ರತೆಯನ್ನು ಹೆಚ್ಚು ಮಾಡಲಾಗುತ್ತಿದ್ದು, ಜಮ್ಮು ಕಾಶ್ಮೀರ ಪ್ರಮುಖ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕೋಬಿಂಗ್ ನಡೆಸಲಾಗುತ್ತಿದೆ. ಕಳೆದ ವಾರ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಒಂಬತ್ತು ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
ನವದೆಹಲಿ: ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾ ಪಾಂಡೆ ಅವರನ್ನು ಎನ್‍ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ಇಂದೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು.
ಎನ್‍ಸಿಬಿ ಸಮನ್ಸ್ ಹಿನ್ನಲೆಯಲ್ಲಿ ಇಂದು ಅನನ್ಯಾ ಪಾಂಡೆ ಮುಂಬೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಸುಧೀರ್ಘ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಆರ್ಯನ್ ಖಾನ್ ಜೊತೆಗಿನ ಸಂಬಂಧ ಕುರಿತು ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವೆ ಮಾದಕ ವಸ್ತುಗಳ ಹಂಚಿಕೆ ಸಂಬಂಧ ವ್ಯಾಟ್ಸಪ್‍ನಲ್ಲಿ ಚಾಟ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಎನ್‍ಸಿಬಿ ಅಧಿಕಾರಿಗಳು ಇದೇ ವ್ಯಾಟ್ಸಪ್ ಚಾಟ್ ಅನ್ನೇ ಪ್ರಮುಖ ಸಾಕ್ಷಿಯನ್ನಾಗಿಸಿಕೊಂಡು ಕೋರ್ಟ್‍ನಲ್ಲಿ ವಾದ ಮಂಡಿಸಿತ್ತು. ಇದನ್ನೂ ಓದಿ:ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್
ಈ ಸಾಕ್ಷ್ಯಗಳ ಮೇಲೆ ವಿಚಾರಣೆ ಮುಂದುವರಿಸಿರುವ ಎನ್‍ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರ್ಯನ್ ಖಾನ್ ಜೊತೆಗಿನ ವ್ಯಾಟ್ಸಪ್ ಮಾತುಕತೆಯಲ್ಲಿ ಗಾಂಜಾ ಬಗ್ಗೆ ಪ್ರಸ್ತಾಪಿಸಲಾಗಿದ್ದು ಆರ್ಯನ್ ಖಾನ್ ಬಾಲಿವುಡ್ ನ ಪ್ರಮುಖ ಜನರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
ಈ ಹಿಂದೆ ಕೋರ್ಟ್‍ನಲ್ಲಿವಾದ ಮಂಡಿಸಿದ್ದ ಎನ್‍ಸಿಬಿ ಪರ ವಕೀಲರು, ಆರ್ಯನ್ ಖಾನ್ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅವರಿಂದ ಮಾಧಕ ವಸ್ತುಗಳನ್ನು ಖರೀದಿಸಿ ಬಾಲಿವುಡ್ ಮಂದಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಸದ್ಯ ಇದೇ ಅಂಶಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ:ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಇದ್ದಾಗ ಬ್ಯಾಂಕ್ ಬಗ್ಗೆ ದೂರನ್ನ ನೀಡಲಾಗಿತ್ತು. ಆಗಲೇ ಅವರು ತನಿಖೆ ಮಾಡಬಹುದಿತ್ತು. ಈಗಲೂ ಅವರು ಭ್ರಷ್ಟಾಚಾರ ಪರವಾಗಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
ಇದೇ ವೇಳೆ 100 ಕೋಟಿ ವ್ಯಾಕ್ಸಿನ್ ಹಾಕಿರುವ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಕೋವಿಡ್ ಸಾವಿನ ಬಗ್ಗೆ ರಾಜಕಾರಣ ಮಾಡುತ್ತಾರೆ. ನಾವು ಒಂದೇ ಮನೊಭಾವನೆಯಿಂದ ಕೋವಿಡ್ ಎದುರಿಸಲು ದೀಪ ಹಚ್ಚಿ, ಚಪ್ಪಾಳೆ ತಟ್ಟುವ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಚಪ್ಪಾಳೆ ತಟ್ಟುವುದರಿಂದ ಕೋವಿಡ್ ಹೋಗಲ್ಲ. ಆದರೆ ಅದಕ್ಕಾಗಿ ಕೆಲಸ ಮಾಡಿದವರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದೇವೆ. ನಮ್ಮ ರಾಜ್ಯ 83 ರಷ್ಟು ಲಸಿಕೆ ನೀಡಿದ್ದು, ದೇಶದಲ್ಲೇ ನಾವು 3 ನೇ ಸ್ಥಾನದಲ್ಲಿ ಇದ್ದೇವೆ. ನಮ್ಮ ದೇಶ ನೂರು ಕೋಟಿ ವ್ಯಾಕ್ಸಿನ್ ನೀಡಿದ್ದರೆ, ಅಮೆರಿಕಾ 40 ಕೋಟಿ ಬ್ರೆಜಿಲ್ 24 ಕೋಟಿ ಲಸಿಕೆ ಕೊಟ್ಟಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
ಫಿಶ್ ಫ್ರೈ ರೆಸಿಪಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಭಾರತದ ಈ ಬಗೆಯ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.
ಬೇಕಾಗುವ ಸಾಮಗ್ರಿಗಳು:
* ಮೀನು – 1 ಕೆಜಿ (ಬಾಂಗುಡೆ)
* ಕೆಂಪು ಮೆಣಸಿನಕಾಯಿ ಪುಡಿ – 5 ಚಮಚ
* ಅರಿಶಿಣ ಪುಡಿ- 1 ಚಮಚ
* ಶುಂಠಿ – ಸ್ವಲ್ಪ
* ಬೆಳ್ಳುಳ್ಳಿ- 1
* ರುಚಿಗೆ ತಕ್ಕಷ್ಟು ಉಪ್ಪು
* ತೆಂಗಿನ ಎಣ್ಣೆ ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
ಮಾಡುವ ವಿಧಾನ:
* ಮೀನನನ್ನು ಚೆನ್ನಾಗಿ ತೊಳೆದುಕೊಳ್ಳಿ
* ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ, 2 ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನೂ ಓದಿ:ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗೂ 30 ನಿಮಿಷಗಳ ಕಾಲ ಇದು ನೆನೆಯಲು ಬಿಡಿ.
* ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ನಂತರ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
ಹೈದರಾಬಾದ್: ಸಿನಿಮಾ ಮತ್ತು ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕವಾಗಿ ನಟಿ ನಯನತಾರಾ ಸುದ್ದಿಯಲ್ಲಿರುತ್ತಿದ್ದರು. ಆದರೆ ಇದೀಗ ಇವರು ಮದುವೇಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.
ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಅವರು ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಶೀಘ್ರವೇ ಇವರ ಮದುವೆ ನಡೆಯಲಿದೆ. ಅಚ್ಚರಿ ಎಂದರೆ, ವಿಘ್ನೇಶ್ ಜತೆ ಮದುವೆ ಆಗುವುದಕ್ಕೂ ಮೊದಲು ಅವರು ಮರವನ್ನು ಮದುವೆ ಆಗಲಿದ್ದಾರಂತೆ.
ವಿಘ್ನೇಶ್ ಶಿವನ್ ಮತ್ತು ನಯನತಾರಾ ನಡುವಿನ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರಿಬ್ಬರ ಮದುವೆ ಪ್ಲ್ಯಾನ್ ಬಗ್ಗೆ ಪದೇಪದೇ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಈಗ ಮದುವೆ ಬಗ್ಗೆ ಅಚ್ಚರಿಯ ಸುದ್ದಿ ಕೇಳಿ ಬಂದಿದೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ನಯನತಾರಾ ಹಾಗೂ ವಿಘ್ನೇಶ್ ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಈ ಕಾರಣಕ್ಕೆ ಮದುವೆಗೂ ಮೊದಲು ತಮ್ಮ ಜಾತಕವನ್ನು ಅವರು ತೋರಿಸಿದ್ದಾರೆ. ಇದರಲ್ಲಿ ಕೆಲ ದೋಷಗಳು ಕಂಡಿವೆ. ಈ ಕಾರಣಕ್ಕೆ, ಮೊದಲು ಮರವನ್ನು ಮದುವೆ ಆಗಿ ನಂತರ ವಿಘ್ನೇಶ್ ಅವರನ್ನು ಮದುವೆ ಆಗುವಂತೆ ಜ್ಯೋತಿಷಿಗಳು ಸೂಚಿಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಮರ ಅಥವಾ ಪ್ರಾಣಿಯನ್ನು ಮದುವೆ ಆದರೆ ದೋಷ ನಿವಾರಣೆ ಆಗುತ್ತದೆ. ಈ ಕೆಲವರು ಇದನ್ನು ನಂಬುತ್ತಾರೆ. ಅದೇ ರೀತಿ ನಯತಾರಾ ಮತ್ತು ಅವರ ಭಾವಿ ಪತಿ ಕೂಡ ಈ ಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಅದನ್ನು ಆಚರಿಸೋಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ
ಹಾವೇರಿ: ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಓಲೈಸಲು ಕಾಂಗ್ರೆಸ್ ಪಕ್ಷದ ನಾಯಕರು RSS ಗುರಿಯಾಗಿಟ್ಟುಕೊಂಡು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆದರೆ ಆ ಪ್ರಯತ್ನದಲ್ಲಿ ಅವರು ಯಶಸ್ವಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ಹಾನಗಲ್ ತಾಲೂಕಿನ ನರೇಗಲ್ಲ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ವಿರಕ್ತಮಠಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಬೇರೆ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ ಆರ್‍ಎಸ್‍ಎಸ್ ಸಂಘಟನೆಯನ್ನು ಪ್ರಚಾರದಲ್ಲಿ ಎಳೆದು ತರುತ್ತಿದ್ದಾರೆ. ಆರ್‍ಎಸ್‍ಎಸ್ ಸಂಘಟನೆಯನ್ನು ಟೀಕಿಸಿದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದು ಎಂಬ ಕಾರಣದಿಂದ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಅವರು ಯಶಸ್ವಿ ಆಗುವುದಿಲ್ಲ ಎಂದರು. ಇದನ್ನೂ ಓದಿ: ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು
ತಮ್ಮ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳು ಸಣ್ಣತನದಿಂದ ಇವೆ. ಹೀಗಾಗಿ ಅಂತ ಸಣ್ಣತನದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದರು. ಅವರ ಸಣ್ಣತನದ ಹೇಳಿಕೆಗಳು ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಹಾನಗಲ್ ಕ್ಷೇತ್ರದ ಜನರ ವಿಶ್ವಾಸ ನಮ್ಮ ಮೇಲಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶಿವರಾಜ್ ಸಜ್ಜನ್ ಅವರನ್ನು ಇಲ್ಲಿನ ಜನತೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದರು. ಇದನ್ನೂ ಓದಿ: ರಮೇಶ್ ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
ಈಗಾಗಲೇ ಒಂದು ಬಾರಿ ಹಾನಗಲ್ ನಲ್ಲಿ ಬಹಿರಂಗ ಚುನಾವಣೆ ಪ್ರಚಾರ ಮಾಡಿದ್ದೇನೆ. ನಾಳೆಯಿಂದ ಮತ್ತೆ ಹಾನಗಲ್‍ನಲ್ಲಿ ಪ್ರಾಚಾರ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಚಿಕ್ಕಬಳ್ಳಾಪುರ: ಬೆಂಗಳೂರಿಲ್ಲಿ ದಿನಕ್ಕೊಂದು ಕಟ್ಟಡ ಕುಸಿತ ಪ್ರಕರಣಗಳು ನಮ್ಮ ಕಣ್ಣು ಮುಂದೆಯೇ ಇವೆ. ಮುಂದೊಂದು ದಿನ ಅಂತಹ ಘಟನೆಗೆ ಚಿಕ್ಕಬಳ್ಳಾಪುರವೂ ಸಾಕ್ಷಿಯಾಗಲಿದೆ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಮೂರು ಅಂತಸ್ತಿನ ಬೃಹತ್ ಕಟ್ಟಡಕ್ಕೆ ಜಲಕಂಟಕ ಎಂಬಂತೆ ಬೃಹತ್ ಕಟ್ಟಡದ ಪಿಲ್ಲರ್‌ಗಳಿಂದ ಅಂರ್ತಜಲ ಉಕ್ಕಿ ಬರುತ್ತಿದೆ.
ಆಸ್ಪತ್ರೆಯ ಕಟ್ಟಡ ಸಮರ್ಪಕ ನಿರ್ವಹಣೆ ಮಾಡದ ಅಧಿಕಾರಿಗಳ ಬೇಜಾವಾಬ್ದಾರಿಗೆ ಮೊದಲ ಅಂತಸ್ಥಿನಿಂದ ಜಲಪಾತದಂತೆ ಪಿಲ್ಲರ್‌ಗಳಿಂದ ನೀರು ಧುಮ್ಮುಕ್ಕುತ್ತಿದ್ದು, ಕಟ್ಟಡ ಯಾವಾಗ ಬೇಕಾದರೂ ಕುಸಿಯುವ ಭಯ ಹುಟ್ಟಿಸುವಂತಿದೆ. ಆರೋಗ್ಯ ಸಚಿವರ ತವರಲ್ಲೇ ಇದೆಂಥಹ ಅವ್ಯವಸ್ಥತೆ ಅನ್ನೋ ಹಾಗೆ ಅಧಿಕಾರಿಗಳ ಕಾರ್ಯವೈಖರಿಯನ್ನ ಪ್ರಶ್ನೆ ಮಾಡುವಂ-ತಿದೆ.
ಸಮಸ್ಯೆ ಏನು, ಯಾಕೆ ಆತಂಕ..?
ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಕಂದವಾರ ಕೆರೆಯಲ್ಲಿ ಎಚ್‍ಎನ್ ವ್ಯಾಲಿ ನೀರಿನಿಂದ ತುಂಬಿ ತುಳುಕುತ್ತಿರೋದ್ರಿಂದ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ ಆಗಿದೆ. ನಗರದ ಹಲವು ನೆಲಮಹಡಿ ಕಟ್ಟಡಗಳಲ್ಲಿ ಅಂರ್ತಜಲ ಉಕ್ಕುತ್ತಿದ್ದು, ಸೆಲ್ಲಾರ್‌ಗಗಳು ಸ್ವಿಮ್ಮಿಂಗ್ ಪೂಲ್‍ಗಳಾಗಿವೆ. ಅದರಲ್ಲೂ ಈ ಜಿಲ್ಲಾಸ್ಪತ್ರೆ ಕಟ್ಟಡವೂ ಒಂದಾಗಿದ್ದು, ಆಸಲಿಗೆ ಈ ಮುಂಚೆ ತಿಮ್ಮೇಗೌಡ ಕೆರೆಯಾಗಿದ್ದ ಈ ಜಾಗದಲ್ಲಿ ಜಿಲ್ಲಾಸ್ಪತ್ರೆಯನ್ನ ಸಹ ನಿರ್ಮಾಣ ಮಾಡಿರೋದು. ಹೀಗಾಗಿ ಸಹಜ ಎಂಬಂತೆ ಈಗ ಅಂರ್ತಜಲ ಉಕ್ಕಿ ಹರಿದು ಮೇಲೆ ಬರ್ತಿದ್ದು, ಇದು ಕಟ್ಟಡಕ್ಕೆ ಅಪಾಯವನ್ನುಂಟು ಮಾಡುವ ಭಯ ಕಾಡುತ್ತಿದೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ಅಧಿಕಾರಿಗಳ ನಿರ್ವಹಣೆ ಕೊರತೆ ಮತ್ತಷ್ಟು ಅಪಾಯ: ಅಂರ್ತಜಲ ಉಕ್ಕಿ ಬರ್ತಿರೋದು ಒಂದು ಕಡೆ ಪ್ರಕೃತಿ ಸಹಜ ಮೂಲಭೂತ ಸಮಸ್ಯೆ ಆದರೆ ಮತ್ತೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿ ನಿರ್ವಹಣೆ ಕೊರತೆಯಿಂದ ಇಡೀ ಕಟ್ಟಡ ಅದಷ್ಟು ಬೇಗ ಧರೆಗುರುಳೋ ಅಪಾಯದ ಅಂಚಿಗೆ ಸಾಗುತ್ತಿದೆ. ಸರಿಸುಮಾರು 30 ಕೋಟಿ ಖರ್ಚು ಮಾಡಿ 7-8 ವರ್ಷಗಳ ಹಿಂದೆ ಕಟ್ಟಿದ ಕಟ್ಟಡ ಈಗ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗಿ ಹೋಗುತ್ತಿದೆ. ನೆಲಮಹಡಿಯಲ್ಲಿನ ಪಿಲ್ಲರ್‌ಗಳು ಹಾಗೂ ಗೋಡೆಗಳು ಸಂದುಗಳಿಂದ ನೀರು ಉಕ್ಕಿ ಹರಿದುಬರುತ್ತಿದೆ. ಎಲ್ಲಂದರಲ್ಲಿ ನೀರು ಜಿನುಗುತ್ತಿದ್ದು, ಗೋಡೆಗಳು ಪಿಲ್ಲರ್‌ಗಳು ನೆಂದು ನೆಂದು ಹಾಳಾಗುತ್ತಿವೆ. ಸಾಲದು ಅಂತ ಮೊದಲ ಮಹಡಿಯಲ್ಲಿ ಸಮರ್ಪಕ ಡ್ರೈನೈಜ್ ವ್ಯವಸ್ಥೆಯನ್ನ ನಿರ್ವಹಣೆ ಮಾಡದೆ ಶೌಚಾಲಯ ಸೇರಿ ಇತರೆ ದಿನಬಳಕೆ ತ್ಯಾಜ್ಯ ನೀರೆಲ್ಲ ಪಿಲ್ಲರ್‌ಗಳ ಮೂಲಕ ನಿರಂತರವಾಗಿ ಇಳಿದುಬರುತ್ತಿದೆ. ಥೇಟ್ ಜಲಪತಾದಂತೆ ಪಿಲ್ಲರ್‌ಗಳ ಮೂಲಕ ನೆಲಮಹಡಿಗೆ ಮೊದಲ ಮಹಡಿಗಗಳ ಶೌಚಾಲಯ ಹಾಗೂ ಇತರೆ ತ್ಯಾಜ್ಯ ನೀರು ಹರಿದುಬರ್ತಿದೆ. ಪರಿಣಾಮ ನೆಲಮಹಡಿಯಲ್ಲಿನ ಪಿಲ್ಲರ್ ಒಂದು ಕೈಯಲ್ಲಿ ಸಿಮೆಂಟ್ ಕಿತ್ತರೆ ಕೈಗೆ ಬರುವ ಹಾಗೆ ಇದೆ. ಹೀಗಾಗಿ ಪಿಲ್ಲರ್‌ಗಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಬಹುತೇಕ ಪಿಲ್ಲರ್‌ಗಳ ಅವಸಾನದ ಅಂಚಿಗೆ ಸಾಗುತ್ತಿದ್ದು,ನೆಲಮಹಡಿಯ ಹಲವು ಕೊಠಡಿಗಳು ಸ್ವಿಮ್ಮಿಂಗ್ ಪೂಲ್ ಗಳಾಗಿವೆ. ಕೊಠಡಿಗಳೆಲ್ಲಿರೋ ವೈದ್ಯಕೀಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಇದು ಹೀಗೆ ಮುಂದುವರೆದರೇ ಮುಂದೊಂದು ದಿನ ಕಟ್ಟಡ ಏನಾಗುತ್ತೋ ಅನ್ನೋ ಆತಂಕ ಕಾಡುತ್ತಿದೆ. ಇದನ್ನೂ ಓದಿ: ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು
ಅಧಿಕಾರಿಗಳೇ ದಯಮಾಡಿ ಎಚ್ಚೆತ್ತುಕೊಳ್ಳಿ..! ಆಪತ್ತಿನಿಂದ ಪಾರಾಗಿ..! ಕೆರೆ ಇದ್ದ ಜಾಗದಲ್ಲಿ ಜಿಲ್ಲಾಸ್ಪತ್ರೆ ಕಟ್ಟಿರುವುದರಿಂದ ಅಂರ್ತಜಲ ಹೆಚ್ಚಾಗಿ ಪಿಲ್ಲರ್‌ಗಳು-ಗೋಡೆಗಳ ಸಂದುಗಳಿಂದ ನೀರು ಉಕ್ಕೋದು ಸಹಜ ಸಮಸ್ಯೆಯಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ, ಮತ್ತೊಂದೆಡೆ ಮೊದಲ ಮಹಡಿಯಿಂದ ಪಿಲ್ಲರ್‍ಗಳ ಮೂಲಕ ಇಳಿದು ಬರ್ತಿರೋ ತ್ಯಾಜ್ಯ ನೀರು ಭಾರೀ ಡೆಂಜರ್ ಎಂಬಂತಿದ್ದು, ಪಿಲ್ಲರ್‌ಗಳನ್ನೇ ಕರಗಿಸಿ ಅಲ್ಲಾಡಿಸಬಿಡಲಿದೆ. ಬಹುದೊಡ್ಡ ಪಿಲ್ಲರ್ ನಿರಂತರ ನೀರಿನಿಂದ ನೆಂದು ಸಿಮೆಂಟ್ ಕೈಗೆ ಕಿತ್ತು ಬರುತ್ತಿದೆ. ಅದ್ಯಾವ ಮಟ್ಟಿಗೆ ನೀರು ಹರಿಯುತ್ತಿರಬೇಡ? ಕಟ್ಟಡಕ್ಕೆ ಆಧಾರವಾಗಿರೋ ಪಿಲ್ಲರ್‌ಗಳೇ ಶಕ್ತಿ ಕಳೆದುಕೊಂಡ ಮೇಲೆ ಬೃಹತ್ ಕಟ್ಟಡ ಏನಾಗಬಹುದು? ಆಂತಹ ಅನಾಹುತ ಊಸಹಿಸೋಕು ಭಯಾನಕವಾಗಿದೆ. ಹೀಗಾಗಿ ಮುಂದೊಂದು ದಿನ ಇದೀ ದೇಶದ್ಯಾಂತ ಜಿಲ್ಲಾಸ್ಪತ್ರೆ ಕಟ್ಟಡ ಧೆರಗುರುಳಿದ ದುರಂತ ಆಂತ ಸುದ್ದಿಯಾಗೋ ಬದಲು ದಯಮಾಡಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ.
ಜೈಪುರ್: ಬೆಳ್ಳಿ ಕಾಲು ಗೆಜ್ಜೆಗಾಗಿ ಮಹಿಳೆಯ ಕಾಲನ್ನು ಹಂತಕರು ಕತ್ತರಿಸಿ ಕಳ್ಳತನ ಮಾಡಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಜಮ್ವಾ ರಾಮಗಢದಲ್ಲಿ ನಡೆದಿದೆ.
ಗೀತಾ ದೇವಿ ಶರ್ಮಾ(55) ಮೃತ ಮಹಿಳೆಯಾಗಿದ್ದಾಳೆ. ದರೋಡೆಕೋರರು ಆಕೆಯ ಕಾಲಿನಲ್ಲಿದ್ದ ಬೆಳ್ಳಿಯ ಗೆಜ್ಜೆಗಳನ್ನು ತೆಗೆಯಲಾಗದೆ ಪಾದಗಳನ್ನೇ ಕತ್ತರಿಸಿದ್ದಾರೆ. ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಓಡಿಹೋಗುವ ಮುನ್ನ ಮನೆಯ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಂದು ಆಕೆಯ ಸರ, ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಹಣವನ್ನು ಬಾಚಿಕೊಂಡಿದ್ದಾರೆ. ನಂತರ ಶಬ್ದ ಕೇಳಿ ಮನೆಯತ್ತ ಬರುತ್ತಿದ್ದ ಆಕೆ ಮೇಲೆ ಹೊಲದಲ್ಲೇ ದಾಳಿ ಮಾಡಿದ ದರೋಡೆಕೋರರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆಕೆಯನ್ನು ಕೊಲೆ ಮಾಡಿ ಓಡಿಹೋಗುವಾಗ ಕೆಳಗೆ ಬಿದ್ದಿದ್ದ ಆಕೆಯ ಕಾಲಿನಲ್ಲಿದ್ದ ಬೆಳ್ಳಿ ಗೆಜ್ಜೆ ಅವರ ಕಣ್ಣಿಗೆ ಬಿದ್ದಿದೆ. ಹೀಗಾಗಿ ಮಹಿಳೆಯ ಕಾಲು ಕತ್ತರಿಸಿ ಗೆಜ್ಜೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ಸಂತ್ರಸ್ತೆಯ ಕುಟುಂಬವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೋರಿದೆ. ಹಾಗೇ ರಾಜಸ್ಥಾನ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಕೋರಿದೆ. ನನ್ನ ತಾಯಿ ಇಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಯಾರು ದಾಳಿ ಮಾಡಿದರು ಎಂದು ನಮಗೆ ತಿಳಿದಿಲ್ಲ. ತನಿಖೆಗಳ ಬಗ್ಗೆ ಪೊಲೀಸರು ನಮಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.