ಯಾವುದೇ ಮನೆಗೆ ಹೋದರೂ ಟೀ ಬೇಕಾ ಎಂದು ಕೇಳುವುದು ವಾಡಿಕೆ. ಒಂದು ಪರಿಪೂರ್ಣವಾದ ಚಹಾ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಹೋದರೆ ನಮಗೆ ಒಂದೇ, ಎರಡೇ ಅನೇಕ ವಿಧಗಳು ಸಿಗುತ್ತವೆ. ಚಹಾದ ನಿಜವಾದ ರುಚಿ ಯಾವಾಗಲೂ ಅದರಲ್ಲಿ ಸೇರಿಸುವ ಮಸಾಲೆಯಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಈ ಮಸಾಲೆಗಳ ಮಿಶ್ರಣವು ನಮ್ಮ ಚಹಾವನ್ನು ಇನ್ನಷ್ಟು ಪರಿಮಳ ಭರಿತ ಮತ್ತು ರುಚಿಯನ್ನಾಗಿಸುತ್ತದೆ.

ಕುಟುಂಬದವರನ್ನೇ ಆಗಲಿ, ಅಪರಿಚಿತರನ್ನೇ ಆಗಲಿ ಅಥವಾ ಸಹೋದ್ಯೋಗಿಗಳನ್ನಿರಬಹುದು, ಒಟ್ಟಿಗೆ ತರುವ ಶಕ್ತಿ ಒಂದು ಕಪ್ ಚಹಾಕ್ಕಿದೆ. ಇಂತಹ ರುಚಿಯಾದ ಮತ್ತು ಆರೋಗುಕರವಾದ ಮಸಾಲಾ ಟೀ ಮಾಡುವ ವಿಧಾನವನ್ನು ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿಗಳು:
* ಏಲಕ್ಕಿ-2
* ಚಕ್ಕೆ-1
* ಕರಿಮೆಣಸು ಕಾಳು- 1 ಟೀ ಸ್ಪೂನ್
* ಲವಂಗ- 2
* ಟೀ ಪೌಡರ್- 2 ಚಮಚ
* ಒಣಗಿಸಿದ ಶುಂಠಿ ಪೌಡರ್- 1 ಚಮಚ
* ಸಕ್ಕರೆ- 4 ಚಮಚ
* ಹಾಲು- 1 ಲೋಟ

ಮಾಡುವ ವಿಧಾನ:
* ಏಲಕ್ಕಿ, ಚಕ್ಕೆ, ಕರಿಮೆಣಸು ಕಾಳು, ಲವಂಗ ಎಲ್ಲ ಮಸಾಲೆ ಪದಾರ್ಥಗಳನ್ನೂ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
* ನಂತರ ಪಾತ್ರೆಯಲ್ಲಿ 4 ಲೋಟ ನೀರು ಕುದಿಯಲು ಇಡಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

* ಕುದಿಯುವಾಗ ಟೀ ಪುಡಿ ಹಾಗೂ ಮಸಾಲಾ ಪುಡಿ, ಸಕ್ಕರೆ ಹಾಕಿ ಕುದಿಸಿ.
* ನಂತರ ಶುಂಠಿ ಪೌಡರ್ ಹಾಗೂ ಹಾಲು ಹಾಕಿ ಮತ್ತೆ ಕುದಿಸಿದರೆ ಮಸಾಲಾ ಟೀ ಸವಿಯಲು ಸಿದ್ಧವಾಗುತ್ತದೆ. ದನ್ನೂ ಓದಿ: ಫಟಾಫಟ್ ಅಂತಾ ಮಾಡಿ ರುಚಿಯಾದ ಸಿಗಡಿ ಮಸಾಲ























ಬಿ.ಜೆ.ಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಸಾಕಷ್ಟು ಸುದ್ದಿಯಾಗಿತ್ತು. ಇತ್ತಿಚೇಗೆ ದೀಪಕ್ ರಾವ್ ಸ್ಮರಣಾರ್ಥ ಕಾಟಿಪಳ್ಳದಲ್ಲಿ ಬಸ್‍ಸ್ಟ್ಯಾಂಡ್‍ನ್ನು ಸ್ಥಳೀಯ ಶಾಸಕ ಭರತ್ ಶೆಟ್ಟಿ ಲೋಕಾರ್ಪಣೆಗೊಳಿಸಿದ್ದರು. ಈ ಕುರಿತು ಲೋಕಂಡ್ವಾಲಾ ವಾಟ್ಸಪ್ ಗ್ರೂಪ್‍ನಲ್ಲಿ ಪಿಂಕಿ ನವಾಜ್ ತಂಡ ಚರ್ಚೆ ನಡೆಸಿ ಇದಕ್ಕೂ ಸಹ ಈ ಗ್ಯಾಂಗ್ ವಿರೋಧ ವ್ಯಕ್ತಪಡಿಸಿತ್ತು. ಇದರ ಜೊತೆ ಸುಪಾರಿ ಹತ್ಯೆ ಮಾಡುವುದಕ್ಕೂ ಈ ತಂಡ ರೆಡಿಯಾಗಿ ಇತ್ತು. ಸುರತ್ಕಲ್ ಪರಿಸರದಲ್ಲಿ ನಮ್ಮ ಹವಾ ಇನ್ಮುಂದೆಯು ಇರಬೇಕು ಜನ ಹೆದರಿಕೊಳ್ಳುವಂತೆ ಇರಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈ ಎಲ್ಲಾ ಮಾಹಿತಿ ಪಡೆದ ಪೊಲೀಸರು ಗ್ಯಾಂಗ್‍ನ ಪ್ರಮುಖರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: 


