Tag: publictv

  • ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಲಕ್ನೋ: ವಿರೋಧ ಪಕ್ಷಗಳು ಭಗವಾನ್ ರಾಮನ ವಿರುದ್ಧವಾಗಿವೆ, ಅಂತರ ಕಾಯ್ದುಕೊಳ್ಳಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ

    ರಾಮ ದ್ರೋಹಿಗಳು ಕೇವಲ ನಂಬಿಕೆಗಷ್ಟೇ ಘಾಸಿಯುಂಟುಮಾಡುತ್ತಿಲ್ಲ ಬದಲಾಗಿ ಸಾಮಾಜಿಕ ಸಂರಚನೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿದ್ದಾರೆ, ಇವರ ಆಳ್ವಿಕೆಯಲ್ಲಿ ರಾಜ್ಯವನ್ನು ದಂಗೆಯ ಬೆಂಕಿಗೆ ಎಸೆದಿದ್ದರು ಎಂದೂ ವಿರೋಧ ಪಕ್ಷದ ವಿರುದ್ಧವಾಗಿ ಕಿಡಿ ಕಾರಿದ್ದಾರೆ.

    ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ವಿಶ್ವಕರ್ಮ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ರಾಮನ ಹಿತೈಷಿಗಳಾಗದವರು ಎಂದಿಗೂ ನಿಮ್ಮ ಹಿತೈಷಿಗಳಾಗಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ರಕ್ಷಿಸುವ, ಗಲಭೆಕೋರರನ್ನು ಅಪ್ಪಿಕೊಳ್ಳುವ ರಾಮ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳುವುದು ಈಗಿನ ಹಾಗೂ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಅತ್ಯಗತ್ಯ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

  • ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

    ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

    ಬೆಂಗಳೂರು: ಕೊನೆಗಳಿಗೆಯಲ್ಲಿ ಸಿನಿಮಾ ರಿಲೀಸ್ ವೇಳೆ ನನ್ ಜೊತೆ ಸಂಪಾದಿಸಿರೋ ಜನ ಇದ್ದಾರೆ. ಒಂದು ದಿನ ಡಿಲೇ ಆಗಿದ್ದಕ್ಕೆ ಯಾವ ಮಾನ ಮಾರ್ಯದೆ ಹೋಗಲ್ಲ. ಬದನೆಕಾಯಿಯೂ ಆಗಿಲ್ಲ ಎಂದು ನಟ ಸುದೀಪ್ ಕೋಟಿಗೊಬ್ಬ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಹೇಳಿದ್ದಾರೆ.

    ದಸರ ಹಬ್ಬದ ಗಿಫ್ಟ್ ಆಗಿ ರಿಲೀಸ್ ಆಗಿರೋ ಕೋಟಿಗೊಬ್ಬ 3 ಸಿನಿಮಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದೆ. ಸಿನಿಮಾ ತೆರೆ ಮೇಲೆ ಅಬ್ಬರಿಸಿ, ಬಾಕ್ಸ್ ಆಫೀಸ್‍ನಲ್ಲಿ ಕಮಾಲ್ ಮಾಡಿದೆ. ಶಿವಕಾರ್ತಿಕ್ ಆಕ್ಷನ್‍ಕಟ್ ಹೇಳಿರೋ ಸಿನಿಮಾವಾಗಿದ್ದು, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಕೋಟಿಗೊಬ್ಬ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಚಿತ್ರ ಯಶಸ್ವಿಯಾಗಿದೆ, ಅದಕ್ಕೆ ಅಭಿನಂದನೆಗಳು. ನನ್ನನ್ನ ನಿರ್ದೇಶಕ ಮಾಡಿದ್ದು ಸೂರಪ್ಪ ಬಾಬು ಎಂದು ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

    Sudeep Kotigobba 3 interview

    ಈ ವೇಳೆ ಮಾತನಾಡಿದ ಸುದೀಪ್, ಕೊನೆಗಳಿಗೆಯಲ್ಲಿ ಸಿನಿಮಾ ರಿಲೀಸ್ ವೇಳೆ ನನ್ ಜೊತೆ ಸಂಪಾದಿಸಿರೋ ಜನ ಇದ್ದಾರೆ ಅವರಿಂದ ಅದಾಗಿದ್ದು. ಸೂರಪ್ಪ ಬಾಬು ಆಕ್ಟಿಂಗ್ ಮಾಡಿದ್ದಾರೆ. ಕಾಲೇಜ್ ದಿನಗಳಲ್ಲಿ ನಿಮ್ ಹತ್ರ ಬರಬೇಕಾದ್ರೆ ಇದ್ದ ದಿನಗಳನ್ನ ನಾನ್ ಯಾವತ್ತೂ ಮರೆಯಲ್ಲ, ಚಿತ್ರರಂಗದ ಪರವಾಗಿ ಶುಭ ಹಾರೈಸಿದ್ದೀರಿ ಥ್ಯಾಂಕ್ಸ್ ಎಂದು ಉಪೇಂದ್ರ ಅವರಿಗೆ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ಒಂದು ದಿನ ಡೀಲೆ ಅದ್ರೂ ಕೂಡ ನನ್ನ ಅಭಿಮಾನಿಗಳು ಸಹಕಾರ ನೀಡಿದ್ದಾರೆ. ಅ ಸ್ನೇಹಿತರು ನೀಡಿದ ಸಹಕಾರಕ್ಕೆ ಧ್ಯನವಾದಗಳು. ಒಂದು ದಿನ ಡಿಲೇ ಆಗಿದ್ದಕ್ಕೇ ಯಾವ ಮಾನ ಮಾರ್ಯದೆ ಹೋಗಲ್ಲ. ಬದನೆಕಾಯಿಯೂ ಕೂಡ ಆಗಿಲ್ಲ. ಅದಕ್ಕೆಲ್ಲ ತಲೆಕೆಡಸಿಕೊಳ್ಳಬಾರದು ಬಾಬು. ಒಬ್ಬ ರಿಟರ್ಡ್ ಆಂಕರ್‍ನ ಕರೆಸಿ ಸಮಾರಂಭ ಮಾಡುತ್ತಿದ್ದಾರೆ ಎಂದು ಅರುಣ್ ಸಾಗರ್ ಅವರಿಗೆ ಸುದೀಪ್ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ:  ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

  • ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

    ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ, ನಾಗಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದುಕೊಂಡ ನಂತರ ಚಾರ್ ಧಾಮ್ ಯಾತ್ರೆಯನ್ನು ಮಾಡಿದ್ದಾರೆ.

    ನಟಿ ಸಮಂತಾ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಂತರ ಸ್ನೇಹಿತರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ನಾಗ ಚೈತನ್ಯ ಅವರ ಜೊತೆಗಿನ ವಿಚ್ಛೇದನ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದಾಗಿನಿಂದ ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ. ಇದೀಗ ಅವರು ಚಾರ್ ಧಾಮ್ ಯಾತ್ರೆ ಮಾಡುತ್ತಿರುವ ಕುರಿತಾಗಿ ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

     

    View this post on Instagram

     

    A post shared by Samantha (@samantharuthprabhuoffl)

    ಯಶಸ್ವಿಯಾಗಿ ಚಾರ್ ಧಾಮ್ ಯಾತ್ರೆ ಪೂರ್ಣಗೊಳಿಸಿದ್ದೇನೆ. ಹಿಮಾಲಯ ಎಂದರೆ ತುಂಬಾ ಇಷ್ಟ. ಮಹಾಭಾರತ ಓದಿದಾಗಿನಿಂದ ಭೂಮಿಯ ಮೇಲಿನ ಈ ಸ್ವರ್ಗಕ್ಕೆ ಭೇಟಿ ಕೊಡಬೇಕೆಂದು ಅಂದುಕೊಂಡಿದ್ದೆ. ಹಿಮಾಲಯಕ್ಕೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಈ ಯಾತ್ರೆಯ ಅನುಭವ ನಿಜಕ್ಕೂ ವಿಶೇಷ ಎಂದು ಸಮಂತಾ ಬರೆದುಕೊಂಡಿದ್ದಾರೆ. ಅಲ್ಲಿ ಸುತ್ತಾಡಿದ ಕೆಲವು ಸುಂದರಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

     

    View this post on Instagram

     

    A post shared by Samantha (@samantharuthprabhuoffl)

    ಕೆಲ ಸಮಯ ರಿಷಿಕೇಷದಲ್ಲಿದ್ದ ಸಮಂತಾ ಅಲ್ಲಿನ ದೇವಾಯಲಗಳು ಮಠಗಳಿಗೆ ಭೇಟಿ ಕೊಟ್ಟಿದ್ದಾರೆ. ಜೊತೆಗೆ ಗಂಗೆಯ ತೀರದಲ್ಲಿ ನಡೆಯುವ ಪೊಜೆ ಹಾಗೂ ಹೋಮದಲ್ಲಿ ಭಾಗಿಯಾಗಿದ್ದಾರೆ. ಸ್ನೇಹಿತೆ ಶಿಲ್ಪಾ ರೆಡ್ಡಿ ಜೊತೆ ಸಮಂತಾ ಅವರು ಚಾರ್ ಧಾಮ್ ಯಾತ್ರೆಯನ್ನು ಮಾಡಿದ್ದಾರೆ. ಯಾತ್ರೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     samantha

    ಸಮಂತಾ, ನಾಗಚೈತನ್ಯ ವಿಚ್ಛೇದನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿಸುವ ಸುದ್ದಿಗಳ ಕುರಿತಾಗಿ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಾ, ಟ್ರೋಲ್ ಮಾಡುವುದನ್ನು ನಿಲ್ಲಿಸದೇ ಹೋದರೆ, ಕಾನೂನು ರೀತಿಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಕೆಲವು ಯೂಟ್ಯೂಬ್ ಚಾನಲ್‍ಗಳ ಮೇಲೆ ದೂರು ಸಹ ದಾಖಲಿಸಿದ್ದಾರೆ ಸಮಂತಾ.

  • ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

    ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

    ಶಿವಮೊಗ್ಗ: ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಧು ಬಂಗಾರಪ್ಪ ಅವರ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಜಿಲ್ಲೆಯ ಸೊರಬ ತಾಲೂಕಿನ ಕುಬಟೂರಿನಲ್ಲಿ ಇರುವ ಅವರ ನಿವಾಸಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ ಅಲ್ಲಿಯೇ ವಾಸ್ತವ್ಯಹೂಡಿದ್ದರು. ಇದನ್ನೂ ಓದಿ:  ಮೀನು ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ

    ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧು ಅವರು ತಮ್ಮ ತಂದೆ ಬಂಗಾರಪ್ಪರಂತೆ ರಾಜ್ಯ ನಾಯಕರಾಗುತ್ತಾರೆ. ಬಂಗಾರಪ್ಪನವರ ಸ್ಥಾನವನ್ನು ತುಂಬುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ:  ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

    ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆದ ಮಧು ಬಂಗಾರಪ್ಪ ಅವರನ್ನು ಒಂದು ಬಾರಿ ಶಾಸಕರನ್ನಾಗಿಸಿದ್ದೀರಿ, ಮುಂದಿನ ಬಾರಿ ಮತ್ತೆ ಅವರನ್ನು ಶಾಸಕರನ್ನಾಗಿ ಮಾಡಿ ಎಂದು ವಿನಂತಿಸಿದರು. ಮಧು ಬಂಗಾರಪ್ಪ ಅವರ ನಿವಾಸದ ಆವರಣದಲ್ಲಿ ಮಧು ಬಂಗಾರಪ್ಪನವರ ಜೊತೆ ವಾಯುವಿಹಾರ ನಡೆಸಿದ ಸಿದ್ದರಾಮಯ್ಯ ಬೆಳಗಿನ ಉಪಹಾರ ಮುಗಿಸಿ ಅಲ್ಲಿಂದ ಹಾನಗಲ್ ಪ್ರಚಾರಕ್ಕೆ ತೆರಳಿದರು.

  • ಮೀನು ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ

    ಮೀನು ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ

    ಚಿಕ್ಕಬಳ್ಳಾಪುರ: ಮೀನು ಹಿಡಿಯಲು ಹೋದ ಯುವಕನೊರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಣ್ಣೇಶ್ವರ ಗ್ರಾಮದ ಕೆರೆಯಲ್ಲಿ ನಡೆದಿದೆ.

    ಸಿದ್ದೇಶ್ವರ್ ಶರ್ಮಾ(27 )ಮೃತನಾಗಿದ್ದಾನೆ. ಈತ ಬಿಹಾರ ಮೂಲದವನಾಗಿದ್ದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ನಾಲ್ವರು ಸ್ನೇಹಿತರೊಂದಿಗೆ ಕೆರೆಯಲ್ಲಿ ಮೀನು ಹಿಡಿಯುವಾಗ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

    ಯುವಕ ಮೃತಪಟ್ಟಿದ್ದು 5-6 ಗಂಟೆಗಳ ಕಾಲ ಆಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದು, ದೇವನಹಳ್ಳಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷಗೆ ಕಳುಹಿಸಲಾಗಿದೆ. ಈ ಸಂಬಂಧ ಕೇಂಪೇಗೌಡ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಏರ್‌ಪೋರ್ಟ್‌ ದೇವನಹಳ್ಳಿ ಭಾರೀ ಮಳೆಯಾಗಿ ಕೆರೆ ತುಂಬಿಕೊಂಡಿತ್ತು. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್

  • ಮನೆ ಕಟ್ಟಿಸಲು ಹಣ ಡ್ರಾ ಮಾಡಿದ ಶಿಕ್ಷಕನಿಗೆ 2 ಲಕ್ಷ ಪಂಗನಾಮ!

    ಮನೆ ಕಟ್ಟಿಸಲು ಹಣ ಡ್ರಾ ಮಾಡಿದ ಶಿಕ್ಷಕನಿಗೆ 2 ಲಕ್ಷ ಪಂಗನಾಮ!

    ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಸ್ಪ್ರೇ ಮಾಡಿ ತುರಿಕೆ ಬರುತ್ತಿದ್ದಂತೆ ಗಮನ ಬೇರೆಡೆ ಸೆಳೆದು ಹಾಡಹಗಲೇ 2 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿರುವ ಘಟನೆ ಚಾಮರಾಜನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.

    ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್ ಹಣ ಕಳೆದುಕೊಂಡವರು. ಇವರು ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಸೇರಿದಂತೆ ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಒಟ್ಟು 2 ಲಕ್ಷ ರೂಪಾಯಿ ಹಣವನ್ನು ಬ್ಯಾಗ್‍ಗೆ ಹಾಕಿಕೊಂಡು ಬಸ್‍ಗಾಗಿ ಕಾಯುತ್ತಿದ್ದನ್ನು ಗಮನಿಸಿದ ವ್ಯಕ್ತಿವೋರ್ವ ಸ್ಪ್ರೇ ಮಾಡಿದ್ದಾನೆ. ಇದನ್ನೂ ಓದಿ: ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

    ಕೂಡಲೇ ಶಿವಕುಮಾರ್ ಅವರಿಗೆ ತುರಿಕೆ, ಉರಿ ಕಾಣಿಸಿಕೊಂಡಿದ್ದು ಬ್ಯಾಗ್ ಪಕ್ಕಕ್ಕಿಟ್ಟು ತಮ್ಮ ವಾಟರ್ ಬಾಟೆಲ್ ನಿಂದ ಕುತ್ತಿಗೆಗೆ ನೀರು ಹಾಕಿಕೊಳ್ಳುತ್ತಿರುವಾಗ ಮಧ್ಯ ವಯಸ್ಕ ವ್ಯಕ್ತಿವೋರ್ವ ಬ್ಯಾಗ್ ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಭುವನೇಶ್ವರಿ ವೃತ್ತದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

  • ಪತ್ನಿ ಮಾರಾಟ ಮಾಡಿ ಮೊಬೈಲ್ ಖರೀದಿಸಿದ

    ಪತ್ನಿ ಮಾರಾಟ ಮಾಡಿ ಮೊಬೈಲ್ ಖರೀದಿಸಿದ

    ಒಡಿಶಾ: ಮದುವೆಯಾಗಿ ಒಂದು ತಿಂಗಳಿಗೆ ಹೆಂಡತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಮೊಬೈಲ್ ಖರೀದಿಸಿರುವ ವಿಚಿತ್ರ  ಘಟನೆ ಒಡಿಶಾದಲ್ಲಿ   ನಡೆದಿದೆ.

    17 ವರ್ಷದ ಅಪ್ರಾಪ್ತ ತನ್ನ 26 ವರ್ಷದ ಪತ್ನಿಯನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಬಂದ ಹಣ್ಣದಲ್ಲಿ ಮೊಬೈಲ್ ಖರೀದಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

    ಅಪ್ರಾಪ್ತ ಬಾಲಕನಿಗೂ 26 ವರ್ಷದ ಯುವತಿಗೆ ಜುಲೈನಲ್ಲಿ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಜೋಡಿ ರಾಜಸ್ಥಾನಕ್ಕೆ ಬಂದಿದ್ದರು. ಇಲ್ಲಿನ ಒಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಪತಿಗೆ ಕೆಲಸ ಸಿಕ್ಕಿತ್ತು. ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಗಲಾಟೆ ಮಾಡುತ್ತಿದ್ದ. ಬರನ್ ಜಿಲ್ಲೆಯ 55 ವರ್ಷದ ವ್ಯಕ್ತಿಗೆ ತನ್ನ ಪತ್ನಿಯನ್ನು ಮಾರಾಟ ಮಾಡಿದ್ದಾನೆ. ಪತ್ನಿಯನ್ನು ಮಾರಿ ಬಂದಿದ್ದ ಹಣದಲ್ಲಿ ಹೊಸ ಮೊಬೈಲ್ ಖರೀದಿಸಿದ್ದಾನೆ. ಮಿಕ್ಕ ಹಣದಲ್ಲಿ ಪರಿಚಯಸ್ಥರೊಂದಿಗೆ ಕುಡಿದು ಪಾರ್ಟಿ ಮಾಡಿದ್ದಾನೆ. ಪತ್ನಿ ಮಾರಾಟ ಮಾಡಿರುವ ಹಣ ಖಾಲಿಯಾದ ಬಳಿಕ ಮರಳಿ ಊರಿಗೆ ವಾಪಸ್ ಬಂದಿದ್ದ. ಇದನ್ನೂ ಓದಿ: ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

    ಪತ್ನಿ ಕಡೆಯವರು ನನ್ನ ಮಗಳು ಎಲ್ಲಿ ಎಂದು ಕೇಳಿದ್ದಾರೆ. ಆಕೆ ನನಗೆ ಮೋಸ ಮಾಡಿ ಬಿಟ್ಟು ಹೋಗಿದ್ದಾಳೆ ಎಂದು ಹೇಳಿದ್ದಾನೆ. ಈತನ ಮಾತು ನಂಬದ ಪತ್ನಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆಗ ಪೊಲೀಸರ ಬಳಿ ನಡೆದ ಘಟನೆಯನ್ನೆಲ್ಲ ಹೇಳಿದ್ದಾನೆ. ಹೆಂಡತಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಯುವತಿ ಇರುವ ಸ್ಥಳ ತಿಳಿದು, ಕರೆದುಕೊಂಡು ಹೋಗಲು ಪೊಲೀಸರು ಮುಂದಾಗಿದ್ದರು. ಆದರೆ ಆ ಗ್ರಾಮದ ಜನ ಯುವತಿಯನ್ನು ವಾಪಸ್ ಕಳಿಸಲ್ಲ, ಆಕೆಯನ್ನು ದುಡ್ಡು ಕೊಟ್ಟು ಕರೆತರಲಾಗಿದೆ. ಹಣವನ್ನು ಹಿಂದಿರುಗಿಸಿ ಆಕೆಯನ್ನು ಕರೆದುಕೊಂಡು ಹೋಗಿ ಎಂದಿದ್ದಾರೆ. ನಂತರ ಪೊಲೀಸರು ಮನವೊಲಿಸಿ ಯುವತಿಯನ್ನು ರಕ್ಷಿಸಿದ್ದಾರೆ.

  • ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ

    ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ

    ವಾಷಿಂಗ್ಟನ್: ಕೊರೊನಾದಿಂದ ಜನರು ಇದೀಗ ಸಹಜ ಸ್ಥಿತಿಗೆ ಜನರು ಮರಳುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಅಮೆರಿಕದಲ್ಲಿ ಸಾಲ್ಮೊನೆಲ್ಲಾ(Salmonella)  ಬ್ಯಾಕ್ಟಿರಿಯಾ ಸೋಂಕು ಹರಡಿರುವ ಈರುಳ್ಳಿಯನ್ನು ಸೇವಿಸಿ 650 ಮಂದಿ ಅಸ್ವಸ್ಥರಾಗಿರುವ ಘಟನೆ ಅಮೆರಿಕಾರಿದಲ್ಲಿ ಆತಂಕವನ್ನು ಸೃಷ್ಟಿಮಾಡಿದೆ.

    ಮೆಕ್ಸಿಕೋದ(Mexico) ಚಿವಾವಾ ದಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಹಸಿಯಾಗಿ ಸೇವಿಸಿದ ಜನರಿಗೆ ಈ ಸೋಂಕು ಹರಡಿದೆ. ಪ್ರೋಸೋರ್ಸ್‌ ಎಂಬ ಕಂಪನಿ ಈ ಈರುಳ್ಳಿ ಆಮದು ಮಾಡಿಕೊಂಡು ಮಾರಾಟ ಮಾಡಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್‍ನಿಂದಲೇ ದೇಶದಲ್ಲಿ ರೋಗ ಹರಡುತ್ತಿದ್ದು, ಟೆಕ್ಸಾಸ್(Texas) ಮತ್ತು ಓಕ್ಲಹಾಮಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದಾರೆ. 129 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

    ಅನಾರೋಗ್ಯಪೀಡಿತರಲ್ಲಿ ಶೇ.75ರಷ್ಟು ಜನರು ತಾವು ಹಸಿ ಈರುಳ್ಳಿ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈರುಳ್ಳಿಯನ್ನು ತಿಂಗಳುಗಟ್ಟಲೆ ಇಡುವುದರಿಂದ ಜನರ ಬಳಿ ಈಗಲೂ ಸೋಂಕಿತ ಈರುಳ್ಳಿ ಇರಬಹುದು. ಕೆಂಪು, ಹಳದಿ ಮತ್ತು ಬಿಳಿ ಈರುಳ್ಳಿಗಳು ಮನೆಯಲ್ಲಿದ್ದರೆ ಎಸೆದುಬಿಡಿ ಎಂದು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲಿನ ಜನರು ಭಯಗೊಂಡು ಮನೆಯಲ್ಲಿರುವ ಈರುಳ್ಳಿಯನ್ನು ಎಸೆಯುತ್ತಿದ್ದಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್

    ಹೊಸ ಸೋಂಕು ಅಮೆರಿಕದಲ್ಲಿ ಈಗ ಆತಂಕ ಸೃಷ್ಟಿಸಿದೆ.  ಆಮದು ಮಾಡಲಾಗಿದ್ದ ಈರುಳ್ಳಿಯನ್ನು ಹಿಂಪಡೆಯುವುದಾಗಿ  ಹೇಳಿದೆ. ಜುಲೈ 1 ರಿಂದ ಆಗಸ್ಟ್ 27ರವರೆಗೆ ಆಮದು ಮಾಡಿದ ಎಲ್ಲಾ ಈರುಳ್ಳಿಯನ್ನು ಸ್ವಯಂಪ್ರೇರಣೆಯಿಂದ ವಾಪಸ್ ಪಡೆಯಲು  ಪ್ರೋಸೋರ್ಸ್‌ ಕಂಪನಿ ಒಪ್ಪಿಕೊಂಡಿದೆ ಎಂದು ಆಹಾರ ನೀತಿ ಮತ್ತು ಔಷಧ ಆಡಳಿತದ ಉಪ ಆಯುಕ್ತ ಫ್ರಾಂಕ್ ಯಿಯಾನಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • ರಾಯರ ಪವಾಡ ನನ್ನ ಬದುಕಿನ ವಿಸ್ಮಯ: ಜಗ್ಗೇಶ್

    ರಾಯರ ಪವಾಡ ನನ್ನ ಬದುಕಿನ ವಿಸ್ಮಯ: ಜಗ್ಗೇಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರ ತಾವು ನಡೆದು ಬಂದಿರು ಹಾದಿ, ಅನುಭವಗಳ ಕುರಿತಾಗಿ ಸೋಶಿಯಲ್‍ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳಿಗೆ ಸಂದೇಶ ನೀಡುತ್ತಿರುತ್ತಾರೆ. ಇದೀಗ ಜಗ್ಗೇಶ್ ಅವರ ಜೀವನದಲ್ಲಿ ರಾಯರು ಮಾಡಿರುವ ಪವಾಡಗಳ ಕುರಿತಾಗಿ ಹಂಚಿಕೊಂಡಿದ್ದಾರೆ.

    1980ರಲ್ಲಿ ಮಂತ್ರಾಲಯ ತುಂಗಾ ತೀರದ ಬಂಡೆಯ ಮೇಲೆ ಏಕಾಂಗಿ. ಆಗ ಮನದಲ್ಲಿ ಗುನುಗುತ್ತಿದ್ದ ಹಾಡು ನನ್ನವರಾರೂ ನನಗಿಲ್ಲ. ನೀನಲ್ಲದೇ ಬೇರೆ ಗತಿ ಇಲ್ಲ. ನನ್ನಲಿ ಏಕೆ ಕೃಪೆ ಇಲ್ಲ. ಗುರುರಾಯನೆ ನೀನೇ ನನಗೆಲ್ಲ. ರಾಯರಲ್ಲಿ ಅಂದಿನ ನನ್ನ ಬೇಡಿಕೆ ಒಂದೇ. ಮಡದಿಯಾಗಿ ಪರಿಮಳಾ ಬೇಕು, ವೃತ್ತಿಯಾಗಿ ಕಲಾರಂಗಬೇಕು ಎಂದು, ಬೇಡಿದ ಈ ವರಗಳನ್ನು ರಾಯರು ಕರುಣಿಸಿದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

    40 ವರ್ಷ ಹಿಂದೆ ತಿರುಗಿ ಈ ಚಿತ್ರ ನೋಡಿದಾಗ ರಾಯರ ಪವಾಡ ನನ್ನ ಬದುಕಿನ ವಿಸ್ಮಯ. ಮಾಯಸಂದ್ರವೆಲ್ಲಿ, ಚಿತ್ರರಂಗವೆಲ್ಲಿ. ಈಶ್ವರ ಗೌಡ ಜಗ್ಗೇಶ್ ಆದದ್ದೆಲ್ಲಿ. ಅರ್ಪಣಾಭಾವದಿಂದ ನಂಬಿದರೆ ರಾಯರು ಬೃಂದಾವನದಿಂದ ತಾಯಂತೆ ಎದ್ದುಬಂದು ಹರಸುವರು. ಗುರುಭ್ಯೋ ನಮಃ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್

    ಈ ಪೋಸ್ಟ್‍ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ ನೀವು ರಜನಿಕಾಂತ್ ರೀತಿ ಕಾಣುತ್ತೀರಿ ಎಂದು ಅಭಿಮಾನಿಯೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ. ಸಿನಿಮಾ ರಂಗದಲ್ಲಿ ಯಶಸ್ಸು ಪಡೆಯುವುದಕ್ಕಿಂತ ಮುನ್ನ ಜಗ್ಗೇಶ್ ಬದುಕಿನಲ್ಲಿ ಅನೇಕ ಸಮಸ್ಯೆಗಳಿದ್ದವು. ಅಂದುಕೊಂಡಿದ್ದು ನೆರವೇರಲಿ ಎಂದು ಅವರು ಬೇಡಿಕೊಂಡಿದ್ದು ಗುರುರಾಯರ ಬಳಿ. ಆಗಿನ ಸಮಯ ಹೇಗಿತ್ತು ಎಂಬುದನ್ನು ಜಗ್ಗೇಶ್ ಒಂದು ಫೋಟೋ ಮೂಲಕ ವಿವರಿಸಿದ್ದಾರೆ.

  • ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಮಣಿಯರ ಸಾಲಿನಲ್ಲಿ ರಾಧಿಕಾ ಪಂಡಿತ್ ಕೂಡಾ ಒಬ್ಬರಾಗಿದ್ದಾರೆ. ಫ್ಯಾಮಿಲಿ, ಪ್ರವಾಸ, ಹಬ್ಬದ ಸಂಬ್ರಮದ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಈಗ ರಾಧಿಕಾ ಪಂಡಿತ್ ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.

    ಐರಾ, ಮತ್ತು ಯಥರ್ವ್ ಸ್ವಿಮ್ಮಿಂಗ್‍ಪೂಲ್‍ನಲ್ಲಿ ಸನ್‍ಗ್ಲಾಸ್ ಹಾಕಿ ಆಟ ಆಡುತ್ತಿದ್ದಾರೆ. ಇಬ್ಬರೂ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳ ಖುಷಿಯಾಗಿದ್ದಾರೆ. ಅಲ್ಲದೆ ಐರಾ ಮತ್ತು ಯಥರ್ವ್ ಕ್ಯೂಟ್‍ನೆಸ್ ಬಣ್ಣಿಸಿದ್ದಾರೆ. ಕೆಲವರು ಈ ಫೋಟೋ ತೆಗೆದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಯಥರ್ವ್ ಸನ್‍ಗ್ಲಾಸ್ ಜೂಮ್ ಮಾಡಿ ನೋಡಿದ್ದಾರೆ. ಈ ಬಗ್ಗೆ ಕಮೆಂಟ್ ಕೂಡ ಮಾಡಿದ್ದಾರೆ.

    ರಾಧಿಕಾ ಪಂಡಿತ್ ಹಾಗೂ ಯಶ್ ಇತ್ತೀಚೆಗೆ ದುಬೈಗೆ ತೆರಳಿದ್ದರು. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ರಾಧಿಕಾ ಪಂಡಿತ್ ಅವರು ಹೊಸ ಹೇರ್ ಸ್ಟೈಲ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಮಿಂಚಿದ್ದರು. ಅಭಿಮಾನಿಗಳು ಮತ್ತೆ ಸಿನಿಮಾ ಮಾಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

     

    View this post on Instagram

     

    A post shared by Radhika Pandit (@iamradhikapandit)

    ರಾಧಿಕಾ ಪಂಡಿತ್ ಸದ್ಯ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದ್ದೇ ಇದೆ. ಆದರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರೋಕೆ ಮಕ್ಕಳ ಸಾಕಷ್ಟು ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್