Tag: publictv

  • ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    ಟ ಮಾಡಿದ್ದೇವೆ ಎನ್ನುವ ತೃಪ್ತಿ ಹೊಟ್ಟೆ ಮತ್ತು ನಾಲಿಗೆಗೆ ಬರಬೇಕಾದರೆ ಅನ್ನ ಇರಲೇ ಬೇಕು. ಅನ್ನ ತಿನ್ನುವುದರಿಂದ ದಪ್ಪಗಾಗುತ್ತೇವೆ. ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವರು ಹೇಳುವುದನ್ನು ಕೇಳಿರಬಹುದು. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವನ್ನು ಕೇಳಿದರೆ ಖಂಡಿತಾ ಆಶ್ಚರ್ಯವಾಗುವುದು ಹೌದು.

    * ಅಕ್ಕಿ ಪ್ರಿಬಯಾಟಿಕ್ (Prebiotic) ಆಗಿದೆ ಎಂದು ನ್ಯೂಟ್ರಿಷನ್ ತಜ್ಞರು ನಂಬುತ್ತಾರೆ. ಅನ್ನ ಸೇವನೆಯಿಂದ ಹೊಟ್ಟೆ ಬೇಗ ತುಂಬುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಕೂಡ ಬಲವಾಗಿರುತ್ತದೆ.

    * ಅನ್ನವನ್ನು ಮೊಸರು, ಕರಿ, ದ್ವಿದಳ ಧಾನ್ಯಗಳು, ತುಪ್ಪ ಮತ್ತು ಮಾಂಸದೊಂದಿಗೆ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಿಯಂತ್ರಣದಲ್ಲಿರಿಸುತ್ತದೆ.

    * ಅನ್ನ ಸೇವನೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಯಾರಿಗಾದರೂ ಕೂದಲು ಉದುರುವಿಕೆಯ ದೂರು ಇದ್ದರೆ ಖಂಡಿತವಾಗಿಯೂ ಅನ್ನವನ್ನು ಸೇವಿಸಬೇಕು.

    * ಉತ್ತಮ ಹಾರ್ಮೋನ್ ಸಮತೋಲನದಲ್ಲಿ ಅನ್ನ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ:   ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

    ಅಕ್ಕಿ ತೊಳೆದ ನೀರಿನ ಪ್ರಯೋಜನ

    * ಅಕ್ಕಿಯ ನೀರಿನಲ್ಲಿ ನಾರಿನ ಅಂಶ ಹೆಚ್ಚಳವಾಗಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ, ಇದರಿಂದಾಗಿ ಜೀಣಾರ್ಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

     

    * ಅಕ್ಕಿಯ ನೀರು  ಕೂದಲಿನ ಸೌಂದರ್ಯ ಹೆಚ್ಚಿಸುವ ಉತ್ಕರ್ಷಣ ನಿರೋಧಕವಾಗಿದೆ.  ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    * ದೀರ್ಘಕಾಲದ ಆಯಾಸ ಅಥವಾ ಬಳಲಿಕೆಯಿಂದ ಬಳಲುತ್ತಿರುವವರಿಗೆ, ಬೇಯಿಸಿದ ಅನ್ನದಿಂದ ಪಡೆದ ಒಂದು ಲೋಟ ಅಕ್ಕಿ ನೀರು ನೀಡಿದರೆ ಸಾಕು ಅವರು ಆರಾಮಾಗಿ ಬಿಡುತ್ತಾರೆ.

  • ಜನರಿಗೆ ತೊಂದರೆ ನೀಡುವಲ್ಲಿ ಮೋದಿ ಸರ್ಕಾರ ದಾಖಲೆ ಮಾಡಿದೆ: ಪ್ರಿಯಾಂಕಾ ಗಾಂಧಿ

    ಜನರಿಗೆ ತೊಂದರೆ ನೀಡುವಲ್ಲಿ ಮೋದಿ ಸರ್ಕಾರ ದಾಖಲೆ ಮಾಡಿದೆ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಜನರಿಗೆ ತೊಂದರೆ ಕೊಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದಾಖಲೆ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಇಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಸರ್ಕಾರ ಜನರಿಗೆ ತೊಂದರೆ ನೀಡುವಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಈ ವರ್ಷ ಪೆಟ್ರೋಲ್ ಬೆಲೆ ದಾಖಲೆಯ 23.53 ರೂ.ಗಳಷ್ಟು ಹೆಚ್ಚಾಗಿದೆ. ಮೋದಿ ಜಿ ಸರ್ಕಾರವು ಸಾರ್ವಜನಿಕರಿಗೆ ತೊಂದರೆ ನೀಡುವಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದೆ. ಅತಿ ಹೆಚ್ಚು ನಿರುದ್ಯೋಗ, ಸರ್ಕಾರಿ ಆಸ್ತಿ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

    ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಇದೇ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿ ಅಚ್ಛೇ ದಿನ್ (ಒಳ್ಳೆಯ ದಿನಗಳು) ಎಂದು ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸತತ ನಾಲ್ಕನೇ ದಿನವಾದ ಶನಿವಾರ ಪ್ರತಿ ಲೀಟರ್‍ಗೆ 35 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಮೇಲಿನ ದರವನ್ನು ಪ್ರತಿ ಲೀಟರ್‍ಗೆ 36 ರೂ. ಮತ್ತು ಡೀಸೆಲ್ ಮೇಲೆ 26.58 ರೂ.ಗೆ ಏರಿಕೆ ಮಾಡಲಾಗಿದೆ.

  • ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

    ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

    – ನಾನು ಕುಮಾರಸ್ವಾಮಿಗಾಗಿ ಬಸ್ ಡ್ರೈವರ್ ಆಗಿದ್ದೆ
    – ಕುಮಾರಸ್ವಾಮಿ ಲಾಭ ಇಲ್ಲದೇ ಯಾವುದೇ ಕೆಲಸ ಮಾಡಲ್ಲ
    – ಎಚ್‌ಡಿಕೆ  ಹಣಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿ ಕೊಡುತ್ತಾರೆ

    ವಿಜಯಪುರ: ಉಪಚುನಾವಣೆ ಅಖಾಡದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗ ಪಕ್ಷದ ನಾಯಕರೆಲ್ಲ ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪವನ್ನು ಮಾಡುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಿಂದಗಿ ಪಟ್ಟಣದಲ್ಲಿ ಶಾಸಕ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂಟ್‌ಕೇಸ್ ತಗೊಂಡು ಅಭ್ಯರ್ಥಿ ಹಾಕಿದ್ದಾರೆ. ಬಸವಕಲ್ಯಾಣದಲ್ಲಿ ಹತ್ತು ಕೋಟಿ ತಗೊಂಡು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದರು. ಜೆಡಿಎಸ್ ಸೂಟ್‌ಕೇಸ್ ರಾಜಕಾರಣ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕುತ್ತಿದೆ. 2005ರಲ್ಲಿ ನನ್ನ ಸೋಲಿಸಲು ಕೈ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ಋಣ ನನ್ನ ಮೇಲಿದೆ. ದೇವೇಗೌಡರಿಂದ ಶಾಸಕನಾಗಿದ್ದೇನೆಯೇ ವಿನಃ ಕುಮಾರಸ್ವಾಮಿಯಿಂದ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ನಾನು ಬಸ್ ಮಾಲೀಕನಾಗಿದ್ದೆ. ಕುಮಾರಸ್ವಾಮಿಯನ್ನು ಸಾಕಿದ್ದೇ ನಾನು. ನನ್ನ ತಾತನ ಜಮಾನದಿಂದ ಬಸ್ ಇದೆ. ನಿಮ್ಮ ಹಾಗೆ ನಾನು ಬಿಬಿಎಂಪಿಯಲ್ಲಿ ಸ್ಕೂಟರ್ ಇಟ್ಟುಕೊಂಡು ಕಸಗುಡಿಸುತ್ತಿರಲಿಲ್ಲ. ಕುಮಾರಸ್ವಾಮಿ ಬಗ್ಗೆ ಬಿಚ್ಚಿ ಹೇಳಬೇಕಾಗುತ್ತದೆ. ನಾನು ಸುಮ್ನೆ ಕೂರೋ ಮಗ ಅಲ್ಲಾ. ನನ್ನ ತಂಟೆಗೆ ಬಂದರೆ ಎಲ್ಲಾ ಬಿಚ್ಚಿಡಬೇಕಾಗುತ್ತದೆ. ನಮ್ಮ ನಾಯಕ ಸಿದ್ದರಾಮಯ್ಯ ಹುಲಿ ಇದ್ದಂಗೆ, ಕುಮಾರಸ್ವಾಮಿ ಬ್ರದರ್ ಬ್ರದರ್ ಅಂತ ಕತ್ತು ಕೊಯ್ಯುತ್ತಾನೆ. ನಾನು ಎಲ್ಲಾ ಚರ್ಚೆಗೆ ಸಿದ್ಧ, ಬೇಕಾದರೆ ಕುಮಾರಸ್ವಾಮಿ ಚರ್ಚೆಗೆ ಬರಲಿ ಎಂದು ಎಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ:   ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

    2004ರಲ್ಲಿ ಕುಮಾರಸ್ವಾಮಿ ಅದಾಯ ನಿಲ್ ಇತ್ತು. 2008 ರಲ್ಲಿ 360 ಕೋಟಿ ರೂಪಾಯಿ ಆದಾಯ ಕುಮಾರಸ್ವಾಮಿ ತೋರಿಸಿದ್ದಾರೆ. ಇಷ್ಟೊಂದು ಆದಾಯ ಕುಮಾರಸ್ವಾಮಿ ಅವರಿಗೆ ಎಲ್ಲಿಂದ ಬಂತು? ನಾನು ಮನೆ ಕಟ್ಟಿರೋದು ಕೂಡಾ ಅವರಿಗೆ ಸಹಿಸಲು ಆಗಲಿಲ್ಲ. ನಾನು ಕುಮಾರಸ್ವಾಮಿಗಾಗಿ ಬಸ್ ಡ್ರೈವರ್ ಆಗಿದ್ದೆ. ಕುಮಾರಸ್ವಾಮಿ ಯಾರು ಬೆಳೆಯೋದನ್ನು ಸಹಿಸಲ್ಲ. ಅಲ್ಪಸಂಖ್ಯಾತರು ಮಾತ್ರವಲ್ಲ, ಒಕ್ಕಲಿಗರು ಕೂಡಾ ಬೆಳೆಯೋದನ್ನು ಸಹಿಸಲ್ಲ. ಜೆಡಿಎಸ್, ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಲಾಭ ಇಲ್ಲದೇ ಯಾವುದೇ ಕೆಲಸ ಮಾಡಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ. ಹಣಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿ ಕೊಡುತ್ತಾರೆ. ಆರ್‌ಎಸ್‍ಎಸ್ ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡುತ್ತಿರುವುದು
    ಮುಸ್ಲಿಂ ಮತಕ್ಕಾಗಿ ವಿನಃ ಬೇರೆ ಉದ್ದೇಶ ಅಲ್ಲ. ನನ್ನ ಹಣೆಬರಹ ಬರೆದಿದ್ದು ದೇವರೇ ವಿನಃ ಕುಮಾರಸ್ವಾಮಿ ಅಲ್ಲ. ದೇವೇಗೌಡರು ಇನ್ನೂರರಷ್ಟು ಜ್ಯಾತ್ಯತೀತ ವ್ಯಕ್ತಿಯಾಗಿದ್ದಾರೆ. ಆದರೆ ಕುಮಾರಸ್ವಾಮಿ ಇಲ್ಲ ಕುಮಾರಸ್ವಾಮಿ ಆರ್‌ಎಸ್‍ಎಸ್‍ಚಡ್ಡಿ ಹಾಕಿರಬಹುದು ಎಂದು ಎಚ್‍ಡಿಕೆ ವಿರುದ್ಧವಾಗಿ ಕಿಡಿಕಾರಿದ್ದಾರೆ.

  • ಅಮೃತವರ್ಷಿಣಿ ಎಫ್‍ಎಂ ಚಾನೆಲ್ ಸ್ಥಗಿತಗೊಳಿಸದಂತೆ ಪಿಎಂಗೆ ಮನವಿ

    ಅಮೃತವರ್ಷಿಣಿ ಎಫ್‍ಎಂ ಚಾನೆಲ್ ಸ್ಥಗಿತಗೊಳಿಸದಂತೆ ಪಿಎಂಗೆ ಮನವಿ

    ಬೆಂಗಳೂರು: ಆಕಾಶವಾಣಿಯ ಅಮೃತವರ್ಷಿಣಿ ಎಫ್‍ಎಂ ಚಾನೆಲ್ (100.10 ಎಫ್‍ಎಂ) ಅನ್ನು ಸ್ಥಗಿತಗೊಳಿಸಬಾರದು ಎಂದು ಹಿರಿಯ ವಕೀಲರಾದ ಎಸ್.ವಿ.ಶ್ರೀನಿವಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

    ರಾಜ್ಯದ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಹಲವಾರು ವ್ಯಾಜ್ಯಗಳನ್ನು ಮುನ್ನಡೆಸಿರುವ ಹಿರಿಯ ವಕೀಲರಾದ ಶ್ರೀನಿವಾಸ್ ಅವರು ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆಕಾಶವಾಣಿಯು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಮಾಧ್ಯಮವಾಗಿದೆ. ಇದಕ್ಕೆ ಪೂರಕವಾಗಿ 2002ರಿಂದ ಇಲ್ಲಿವರೆಗೆ ಆಕಾಶವಾಣಿಯ ಅಮೃತವರ್ಷಿಣಿ ಎಫ್‍ಎಂ ಚಾನೆಲ್ ಕನ್ನಡನಾಡಿನ ಕಲೆ ಸಂಸ್ಕೃತಿಯನ್ನು ಬಿತ್ತರಿಸುತ್ತಾ ಬಂದಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    Amruthavarshini FM

    ಅಮೃತವರ್ಷಿಣಿಯು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತು ಕಲಾವಿದರಿಗೆ ಸೂಕ್ತ ವೇದಿಕೆಯಾಗಿದೆ ಮತ್ತು ಪ್ರತಿಭಾನ್ವಿತರನ್ನು ಹೊರ ಜಗತ್ತಿಗೆ ತೋರಿಸುವ ಒಂದು ಉತ್ತಮ ಸಜ್ಜಿಕೆಯಾಗಿದೆ. ಕಳೆದ 2 ದಶಕಗಳಿಂದ ದಿನದ 24 ಗಂಟೆಯೂ ಶಾಸ್ತ್ರೀಯ ಕಲಾವಿದರಿಂದ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಇದುವರೆಗೂ 3000 ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲೆಯನ್ನು ಈ ಚಾನೆಲ್ ಮೂಲಕ ನೀಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

     Amruthavarshini FM

    ಇಂತಹ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಅಮೃತವರ್ಷಿಣಿಯಂತಹ ದೇಶದ 14 ಚಾನೆಲ್‍ಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಬಿಟ್ಟು, ಚಾನೆಲ್ ಅನ್ನು ಇನ್ನೂ ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಸಮಸ್ತ ಕನ್ನಡಿಗರ ಪರವಾಗಿ ಹಾಗೂ ರಾಜ್ಯದ ಸಮಸ್ತ ಕಲಾವಿದರ ಪರವಾಗಿ ಸಾಮಾಜಿಕ ಕಾಳಜಿಯನ್ನು ತೋರಿಸಿರುವ ಹಿರಿಯ ವಕೀಲರಾದ ಶ್ರೀನಿವಾಸ್ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.

    ವಕೀಲರಾದ ಎಸ್.ವಿ ಶ್ರೀನಿವಾಸ್ ಸಮಸ್ಯೆಗಳಿಂದ ತೊಂದರೆಗೀಡಾದ ಜನಸಾಮಾನ್ಯರ ಧ್ವನಿಯಾಗಿದ್ದಾರೆ. ಕಳೆದ ದಶಕಗಳಿಂದ ರಾಜ್ಯದ ಪ್ರಮುಖ ಸಮಸ್ಯೆಗಳಾದ ರೈತರು ಹಾಗೂ ಜನಸಾಮಾನ್ಯರ ಪರವಾಗಿ ಉಚ್ಛನ್ಯಾಯಾಲಯಗಳಲ್ಲಿ ಧ್ವನಿ ಎತ್ತಿದ್ದಾರೆ. ಈ ಬಾರಿ ರಾಜ್ಯದ ಕಲಾವಿದರ ಪರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಮನವಿ ಮಾಡಿದ್ದಾರೆ.

  • ಕೋವಿಡ್‍ನಿಂದ ಭಾರತೀಯರ ಆಯಸ್ಸು 2 ವರ್ಷ ಇಳಿಕೆ

    ಕೋವಿಡ್‍ನಿಂದ ಭಾರತೀಯರ ಆಯಸ್ಸು 2 ವರ್ಷ ಇಳಿಕೆ

    ಮುಂಬೈ: ಕೊರೊನಾ ಮಹಾಮಾರಿ ಸೋಂಕಿನಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ ಸರಾಸರಿ 2ವರ್ಷ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

    ಮುಂಬೈನ ಅಂತರಾಷ್ಟ್ರೀಯ ಜನಸಂಖ್ಯಾ ಶಾಸ್ತ್ರದ ಸಂಸ್ಥೆ(ಐಐಪಿಎಸ್) ವಿಜ್ಞಾನಿಗಳು, ದೇಶದಲ್ಲಾಗುತ್ತಿರುವ ಸಾವಿನ ಪ್ರಮಾಣಕ್ಕೆ ಕೋವಿಡ್ ಹೇಗೆ ಪರೋಕ್ಷವಾಗಿ ಕಾರಣವಾಗಿದೆ ಎಂಬ ಕುರಿತಾಗಿ ಅಂಕಿ ಸಂಖ್ಯೆಗಳ ವಿಶ್ಲೇಷಣೆ ನಡೆಸಿದ್ದಾರೆ.

    ವರದಿಯು ಬಿಎಂಸಿ ಪಬ್ಲಿಕ್ ಹೆಲ್ತ್ ಜರ್ನಲ್‍ನಲ್ಲಿ ಪ್ರಕಟವಾಗಿದೆ. ಈ ಪ್ರಕಾರ ದೇಶದ ಮಹಿಳೆಯರು ಮತ್ತು ಪುರುಷರು ಆಯಸ್ಸು ತಲಾ 2 ವರ್ಷಗಳಷ್ಟು ಕಡಿತಗೊಂಡಿದೆ. 2019ರಲ್ಲಿ ಸರಾಸರಿ 69.5 ರಷ್ಟಿದ್ದ ಪುರುಷರ ಜೀವಿತಾವಧಿಯು ಸರಾಸರಿ 67.5ಕ್ಕೆ ಕುಸಿದಿದೆ. ಅದೇ ರೀತಿ ಮಹಿಳೆಯರು ಸರಾಸರಿ ಆಯಸ್ಸು 72 ವರ್ಷದಿಂದ 69.8ಕ್ಕೆ ಕುಸಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: 100 ಕೋಟಿ ಲಸಿಕೆ ವಿತರಣೆ – ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್

    ಕೊರೊನಾ ಮಹಾಮಾರಿಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಕೊರೊನಾ ವಿರುದ್ಧವಾಗಿ ಹೋರಾಡಲು ಭಾರತದಲ್ಲಿಯೇ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ಕಂಡು ಹಿಡಿಯಲಾಯಿತ್ತು. ಭಾರತ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆಯ ಸಾಧನೆ ಮಾಡಿದೆ. ಈ ಮೂಲಕ ಚೀನಾ ನಂತರ 100 ಕೋಟಿ ಲಸಿಕೆ ಸಾಧನೆ ಮಾಡಿದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, 100 ಕೋಟಿ ಲಸಿಕೆ ಕೇವಲ ಅಂಕಿಯಲ್ಲ, ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಹೊಸ ಅಧ್ಯಾಯ ಎಂದಿದ್ದಾರೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

  • ಪಾಕಿಸ್ತಾನ ಟಿವಿಗಳಲ್ಲಿ ಆಲಿಂಗನ, ಚುಂಬನ ದೃಶ್ಯ ಬಂದ್

    ಪಾಕಿಸ್ತಾನ ಟಿವಿಗಳಲ್ಲಿ ಆಲಿಂಗನ, ಚುಂಬನ ದೃಶ್ಯ ಬಂದ್

    ಇಸ್ಲಾಮಾಬಾದ್ : ಆಲಿಂಗನ ಹಾಗೂ ಚುಂಬನ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸ್ಥಳೀಯ ಟಿವಿ ಚಾನೆಲ್‍ಗಳಿಗೆ ಪಾಕಿಸ್ತಾನ ಇಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ.

    ಆಲಿಂಗನ, ಚುಂಬನಗಳಂತಹ ದೃಶ್ಯಗಳು ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ ಎನ್ನುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಇದನ್ನೂ ಓದಿ:  14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಅನುಚಿತ ಬಟ್ಟೆಗಳನ್ನು ಧರಿಸಿರುವ, ಚುಂಬನ ಹಾಗೂ ಆಲಿಂಗನದ ದೃಶ್ಯಗಳು ಹೆಚ್ಚು ಹೆಚ್ಚು ಪ್ರಸಾರವಾಗುತ್ತಿವೆ. ಇದು ಇಸ್ಲಾಮಿಕ್ ಸಂಸ್ಕೃತಿಯನ್ನು ನಾಶಮಾಡುತ್ತದೆ. ಇಂತಹ ದೃಶ್ಯಗಳನ್ನು ವಿಸ್ತಾರವಾಗಿ ತೋರಿಸುವುದರಿಂದ ಜನರ ಮನಸ್ಸು ಚಂಚಲಗೊಂಡು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

    ಅಪ್ಪುಗೆ, ವಿವಾಹೇತರ ಸಂಬಂಧಗಳು, ಅಸಭ್ಯ, ಬೋಲ್ಡ್ ಡ್ರೆಸ್ಸಿಂಗ್, ವಿವಾಹಿತ ದಂಪತಿ ಅನ್ಯೋನ್ಯತೆಯನ್ನು ಇಸ್ಲಾಮಿಕ್ ಬೋಧನೆಗಳು ಮತ್ತು ಪಾಕಿಸ್ತಾನಿ ಸಮಾಜದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ಹೀಗಾಗಿ ಪಾಕಿಸ್ತಾನದಲ್ಲಿ ಇಂತಹ ದೃಶ್ಯ ಪ್ರಸಾರ ಮಾಡದಂತೆ ಸೂಚನೆ ನೀಡಿದೆ. ಈ ಕುರಿತಾಗಿ ಹಲವು ದೂರುಗಳು ಬಂದಿವೆ. ಹೀಗಾಗಿ ಇಂತಹ ದೃಶ್ಯಗಳನ್ನು ನಿಷೇಧಿಸುವಂತೆ ಆದೇಶ ನೀಡಲಾಗಿದೆ.

  • ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

    ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

    ನವದೆಹಲಿ: ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಲು ಇಚ್ಛಿಸುವವರು ಇನ್ಮುಂದೆ ಮದ್ಯ, ಮಾದಕ ದ್ರವ್ಯ ಸೇವನೆ ಮಾಡಲ್ಲ ಎಂದು ಘೋಷಣೆ ಮಾಡಿ ಕೊಳ್ಳಬೇಕು. ಪಕ್ಷದ ಕಾರ್ಯಕ್ರಮ, ನೀತಿಗಳನ್ನು ಸಾರ್ವಜನಿಕವಾಗಿ ಟೀಕಿಸುವುದಿಲ್ಲ ಎಂಬ ವಾಗ್ದಾನ ಮಾಡಬೇಕಾಗಿದೆ.

    ಕಾಂಗ್ರೆಸ್ ನ.1ರಿಂದ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದ್ದು, ಅದರ ಫಾರಂನಲ್ಲಿ ಹೊಸದಾಗಿ ಪಕ್ಷದ ಸದಸ್ಯತ್ವ ಬಯಸುವವರು ದೇಶದ ಕಾನೂನು ಮೀರಿ ಯಾವುದೇ ಸ್ವತ್ತು ಹೊಂದಿಲ್ಲ ಮತ್ತು ಪಕ್ಷ ಸೂಚಿಸಿದ ಯಾವುದೇ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ಒಪ್ಪಿಕೊಳ್ಳಬೇಕು ಎಂಬ ಅಂಶಗಳಿವೆ. ಇದನ್ನೂ ಓದಿ:  14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಮುಂದಿನ ವರ್ಷ ಆ.21 ರಿಂದ ಸೆ. 20ರವರೆಗೆ ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ನ.1 ರಿಂದ ಮಾ.31ರವರೆಗೆ ಸದಸ್ಯತ್ವ ಅಭಿಯಾನವನ್ನು ಆರಂಭಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಸದಸ್ಯರೆಲ್ಲರೂ ಪಕ್ಷದ ಸಂವಿಧಾನವನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಷರತ್ತುಗಳೇನು?
    * ನಾನು ಪ್ರಮಾಣೀಕರಿಸಿದ ಖಾದಿ ಬಟ್ಟೆಯನ್ನು ತೊಡುವ ಅಭ್ಯಾಸ ಇರುವವನು.
    * ನನಗೆ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯ ಚಟಗಳಿಲ್ಲ.
    * ನಾನು ಸಾಮಾಜಿಕ ಅಸಮಾನತೆಯನ್ನೂ ನಂಬಲ್ಲ ಮತ್ತು ಪಾಲಿಸಲ್ಲ.
    * ಜಾತಿ, ಧರ್ಮ ಎಂಬ ಬೇಧವಿಲ್ಲದೆ ಸಾಮಾಜಿಕ ಏಕತೆಯಲ್ಲಿ ನಂಬಿಕೆ ಇದೆ.
    * ಕಾನೂನು ಮೀರಿ ನಾನು ಹೆಚ್ಚಿನ ಆಸ್ತಿಯನ್ನು ಹೊಂದಿಲ್ಲ.
    * ಕಾರ್ಯಕಾರಿ ಸಮಿತಿ ನಿರ್ಧರಿಸಿದ ಯಾವುದೇ ಕೆಲಸಕ್ಕೂ ನಾನು ಸಿದ್ಧ.

  • 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಚೆನ್ನೈ: 14 ವರ್ಷಗಳ ನಂತರ ಬೆಂಕಿ ಪೊಟ್ಟಣದ (matchbox) ಬೆಲೆ ಏರಿಕೆಯಾಗಿದೆ. ಡಿಸೆಂಬರ್ 1ರಿಂದ ಬೆಂಕಿಪೊಟ್ಟಣದ ಬೆಲೆ 2 ರೂಪಾಯಿ ಆಗಲಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ದಿನನಿತ್ಯ ಬಳಕೆಯ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳವಾಗುತ್ತಲೇ ಇದೆ. ಆದರೆ ಕಳೆದ 14 ವರ್ಷಗಳಿಂದ ಬೆಂಕಿಪೊಟ್ಟಣದ ಬೆಲೆ ಮಾತ್ರ ಕಿಂಚಿತ್ತೂ ಏರಿಕೆಯಾಗದೆ ಸ್ಥಿರವಾಗಿತ್ತು.

    ಈ ಹಿಂದೆ 50 ಪೈಸೆ ಇದ್ದ ಬೆಂಕಿ ಪೊಟ್ಟಣದ ಬೆಲೆಯನ್ನು 2007ರಲ್ಲಿ ಪರಿಷ್ಕರಿಸಲಾಗಿತ್ತು. ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚೆಸ್ (All India Chamber Of Matches) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ. ಇದನ್ನೂ ಓದಿ: ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಬೆಲೆ ಏರಿಕೆಗೆ ಕಾರಣವೇನು?: ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ


    ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಹೀಗಾಗಿ ಬೆಂಕಿಪೊಟ್ಟಣ ತಯಾರಕರು ಬೆಲೆಯೇರಿಕೆಯ ನಿರ್ಧಾರವನ್ನು ಅವಿರೋಧವಾಗಿ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ 600 ಬೆಂಕಿ ಪೊಟ್ಟಣಗಳ ಒಂದು ಬಂಡಲ್ 270ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅದನ್ನು 430ರಿಂದ 480 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

  • ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಆದರೆ ಹೋಟೆಲ್‍ಗಳಿಗೆ ಹೋಗಿ ತಿಂದರೆ ಕೆಲಮೊಮ್ಮೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಾರದ ಚಿಕನ್  65 ತಿನ್ನಬೇಕೆಂದು ಅನಿಸುತ್ತಿದೆಯೇ? ಹಾಗಾದರೆ ಹೋಟೆಲ್‍ಗೆ ಹೋಗುವ ಶ್ರಮವೇಕೆ? ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಚಿಕನ್ 65ಯನ್ನು ಸರಳ ವಿಧಾನದ ಜೊತೆಗೆ ಮಾಡಬಹುದು. ಹಾಗಿದ್ದರೆ ಚಿಕನ್ 65 ಮಾಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಅರ್ಧ ಕೆಜಿ (ಬೋನ್ ಲೆಸ್ ಬೆಸ್ಟ್)
    * ಜೋಳದ ಹಿಟ್ಟು-2 ಚಮಚ
    * ಮೈದಾ -2 ಚಮಚ ಖಾರದ ಪುಡಿ
    * ಮೊಟ್ಟೆ- 1
    * ಮೊಸರು- 1ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ರುಚಿಗೆ ತಕ್ಕ ಉಪ್ಪು
    * ಅಡುಗೆ ಎಣ್ಣೆ- 1ಕಪ್
    * ಹಸಿ ಮೆಣಸಿನಕಾಯಿ-3
    * ಗರಂ ಮಸಾಲ- ಸ್ವಲ್ಪ
    * ನಿಂಬೆ ರಸ- ಅರ್ಧ ಕಪ್
    * ಈರುಳ್ಳಿ -4
    * ಬೆಳ್ಳುಳ್ಳಿ- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಚಿಕನ್ ಚೆನ್ನಾಗಿ ತೊಳೆದು ತೆಗೆದಿಟ್ಟುಕೊಳ್ಳಿ
    * ಜೋಳದ ಹಿಟ್ಟು, ಮೈದಾ, ಮೊಟ್ಟೆ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕ ಉಪ್ಪನ್ನು ಒಂದು ಬಟ್ಟಲಿಗೆ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು.

    * ನಂತರ ಈ ಮಿಶ್ರಣಕ್ಕೆ ಚಿಕನ್ ಹಾಕಿ ಮಿಕ್ಸ್ ಮಾಡಿ 2 ಗಂಟೆ ಕಾಲ ಇಡಿ.
    * ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಈಗ ಕುದಿಯುತ್ತಿರುವ ಎಣ್ಣೆಗೆ ಚಿಕನ್ ಪೀಸ್ ಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.

    * ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಡುಗೆ ಎಣ್ಣೆ, ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.


    * ಈಗ ಗರಂ ಮಸಾಲ, ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ,
    * ನಂತರ ಫ್ರೈ ಮಾಡಿದ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ 65 ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ