Tag: publictv

  • ಪ್ಯಾಂಟ್ ಹಾಕದೇ ಟ್ರೋಲಿಗರಿಗೆ ಆಹಾರವಾದ ಶಾಹಿದ್ ಕಪೂರ್ ಪತ್ನಿ ಮೀರಾ

    ಪ್ಯಾಂಟ್ ಹಾಕದೇ ಟ್ರೋಲಿಗರಿಗೆ ಆಹಾರವಾದ ಶಾಹಿದ್ ಕಪೂರ್ ಪತ್ನಿ ಮೀರಾ

    ಮುಂಬೈ: ಬಾಲಿವುಡ್ ಮಂದಿ ಟ್ರೋಲಿಗರಿಗೆ ಆಹಾರವಾಗುತ್ತಿರುವುದು ಹೊಸದೇನು ಅಲ್ಲ. ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬರುವಾಗ ಮುಂಬೈ ಏರ್​ಪೋರ್ಟ್​ನಲ್ಲಿ ಮೀರಾ ಧರಿಸಿದ್ದ ಡ್ರೆಸ್ ಎಲ್ಲರ ಕಣ್ಣು ಕುಕ್ಕಿದೆ.

    ಪತ್ನಿ ಮೀರಾ ರಜಪೂತ್, ಮಕ್ಕಳಾದ ಮಿಶಾ ಮತ್ತು ಝೈನ್ ಜೊತೆಗೆ ಬಾಲಿವುಡ್ ನಟ ಶಾಹೀದ್ ಕಪೂರ್ ಮಾಲ್ದೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಮಾಲ್ದೀವ್ಸ್‍ನಲ್ಲಿ ಕೆಲ ದಿನಗಳನ್ನು ಕಳೆದ ಶಾಹೀದ್ ಕಪೂರ್ ಮತ್ತು ಫ್ಯಾಮಿಲಿ ಮೊನ್ನೆಯಷ್ಟೇ ಮುಂಬೈಗೆ ವಾಪಸ್ ಆದರು. ಮುಂಬೈ ವಿಮಾನ ನಿಲ್ದಾಣಕ್ಕೆ ಶಾಹೀದ್ ಕಪೂರ್ ಅಂಡ್ ಫ್ಯಾಮಿಲಿ ಬಂದಿಳಿದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಮೀರಾ ರಜಪೂತ್ ಶಾರ್ಟ್ಸ್ ಧರಿಸಿದ್ದರು. ಶಾರ್ಟ್ಸ್ ತೀರಾ ಚಿಕ್ಕದಾಗಿದ್ರಿಂದ ಮೀರಾ ರಜಪೂತ್ ಟ್ರೋಲ್ ಆಗಿದ್ದಾರೆ. ಮೀರಾ ರಜಪೂತ್ ಪ್ಯಾಂಟ್ ಹಾಕಿದ್ರೆ ಚೆನ್ನಾಗಿರುತ್ತಿತ್ತು, ಪ್ಯಾಂಟ್ ಹಾಕೋದನ್ನ ಮೀರಾ ಮರೆತುಬಿಟ್ರಾ?, ಮೈ ಪೂರ್ತಿ ಬಟ್ಟೆ ಧರಿಸಿ. ನಿಮ್ಮ ಶಾರ್ಟ್ಸ್ ಎಷ್ಟು ಚಿಕ್ಕದಾಗಿದೆ ಏನೂ ಧರಿಸಿಲ್ಲವೆಂಬಂತೆಯೇ ಕಾಣುತ್ತಿದೆ, ಪುರುಷರ ಮೇಲಿನ ಗೌರವ ನನಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಯಾಕಂದ್ರೆ ಸಾರ್ವಜನಿಕ ಪ್ರದೇಶಗಳಲ್ಲಿ ಮೈತುಂಬಾ ಬಟ್ಟೆ ತೊಟ್ಟು ಪುರುಷರು ತಮ್ಮ ಗೌರವವನ್ನು ಕಾಪಾಡಿಕೊಳ್ಳುತ್ತಾರೆ. ಮಗು ಮೈತುಂಬಾ ಬಟ್ಟೆ ಧರಿಸಿದೆ. ಆದರೆ ತಾಯಿನೇ ಪ್ಯಾಂಟ್ ಹಾಕಿಲ್ಲ ಅಂತೆಲ್ಲಾ ಟ್ರೋಲಿಗರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

     

    View this post on Instagram

     

    A post shared by Bollywood Pap (@bollywoodpap)

    2015 ಜುಲೈ 7ರಂದು ಶಾಹೀದ್ ಕಪೂರ್, ಮೀರಾ ರಜಪೂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್‍ರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಕಳೆದ ಜುಲೈ ತಿಂಗಳಿನಲ್ಲಿ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

  • ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ

    ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ

    ಲಕ್ನೋ: ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರಿಗೆ ಡೆಂಗ್ಯೂ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭಾನುವಾರ ಮಿಶ್ರಾ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ವೈದ್ಯರ ಸಲಹೆಯಂತೆ ಲಖಿಂಪುರ್ ಜೈಲಿನ ಅಧಿಕಾರಿಗಳು ಆಶಿಶ್ ಮಿಶ್ರಾ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಎರಡು ಬಾರಿ ರಕ್ತದ ಮಾದರಿ ಪರೀಕ್ಷೆ ನಡೆಸಿದಾಗಲೂ ಡೆಂಗ್ಯೂ ಇರುವುದು ದೃಢಪಟ್ಟಿದೆ.

    ಭದ್ರತೆ ದೃಷ್ಟಿಯಿಂದ ಆಸ್ಪತ್ರೆ ಹೊರಗಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾಸ್ಪತ್ರೆಯು ಮೂರನೇ ಬಾರಿಯ ರಕ್ತದ ಮಾದರಿ ಪರೀಕ್ಷೆ ವರದಿಗಾಗಿ ಕಾಯುತ್ತಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಲಖಿಂಪುರ್ ಖೇರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶೈಲೇಶ್ ಭಾತ್‍ನಗರ್, ಆಶಿಶ್ ಮಿಶ್ರಾ ಅವರ ರಕ್ತದ ಮಾದರಿಯನ್ನು ಮೂರನೇ ಬಾರಿಗೆ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ವರದಿ ಆಧರಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯತೆ ಕುರಿತು ತಜ್ಞರು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

    ಆಶಿಶ್ ಮಿಶ್ರಾ ಅವರ ವಕೀಲ ಅವದೀಶ್ ಕುಮಾರ್ ಸಿಂಗ್ ಮಾತನಾಡಿ, ಕಳೆದ ಮೂರು ದಿನಗಳಿಂದ ಮಿಶ್ರಾ ಅವರು ಜ್ವರದಿಂದ ಬಳಲುತ್ತಿದ್ದರು. ಭಾನುವಾರ ಪರೀಕ್ಷೆಗಾಗಿ ಅವರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಸ್ವೀಕರಿಸಿದ ನಂತರ ಮಿಶ್ರಾ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು’ ಎಂದು ಹೇಳಿದ್ದಾರೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಲಖಿಂಪುರ್ ಖೇರಿ ಅ.3ರಂದು ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

  • ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗಲು ಬಿಡುವುದಿಲ್ಲ: ಶ್ರೀಮಂತ ಪಾಟೀಲ್

    ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗಲು ಬಿಡುವುದಿಲ್ಲ: ಶ್ರೀಮಂತ ಪಾಟೀಲ್

    ಚಿಕ್ಕೋಡಿ: ನೀರಾವರಿಯ ಜೊತೆಗೆ ಕಾಗವಾಡ ಮತ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಲೋಕೂರ ಗ್ರಾಮದಲ್ಲಿ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಗಯಣಮಟ್ಟದಲ್ಲಿ ಯಾವುದೇ ಕೊರತೆ ಆಗಬಾರದು. ಕ್ಷೇತ್ರದಲ್ಲಿ ಸಮರ್ಪಕ ಕೊಠಡಿಗಳ ನಿರ್ಮಾಣಕ್ಕೆ ಒತ್ತು ಕೊಡಲಾಗಿದ್ದು ಎಲ್ಲೆ ಕೊಠಡಿಗಳ ಸಮಸ್ಯೆ ಇದ್ದರೂ ಬಗೆಹರಿಸುವ ಕಾರ್ಯವನ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯದ ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಪ್ರತಿ ಶಾಲೆಯಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕ್ಷೇತ್ರದ ಜನರು ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಬಂದರೇ ಪಕ್ಷ, ಜಾತಿ ಬೇಧ ಮರೆತು ಕಾರ್ಯ ನಿರ್ವಹಿಸುವದಾಗಿ ಹೇಳಿದು. ಈ ಸಂದರ್ಭದಲ್ಲಿ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್.ಆರ್ ಮುಂಜೆ, ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಭಗತ್, ದಶರಥ ಚವ್ಹಾಣ, ರಾಜಾರಾಮ್ ಗಡಗೆ, ರಶೀದ್ ತಾಂಬೋಳಿ, ಮುಖಂಡರು ಗ್ರಾಮ ಪಂಚಾಯತ್ ಸದಸ್ಯರು, ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

  • ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    ಭೋಪಾಲ್: ಬೇರೆ ಮನೆ ಮಾಡಲು ಒಪ್ಪದ ಪತಿ ವಿರುದ್ಧವಾಗಿ ಸಿಟ್ಟು ತೀರಿಸಿಕೊಳ್ಳಲು ತನ್ನ ಮೂರು ತಿಂಗಳ ಕಂದಮ್ಮನನ್ನು ತಾಯಿಯೇ ಕೊಂದು ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಸ್ವಾತಿ ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ. ಅಕ್ಟೋಬರ್ 12 ರಂದು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಈ ಮಧ್ಯಪ್ರದೇಶದ ಉಜ್ಜಯಿನಿಯ ಕಚ್ರೋಡ್‍ನಲ್ಲಿ ನಡೆದಿದೆ.

    ಕಾಣೆಯಾದ ಮಗುವಿಗಾಗಿ ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆ ಶೋಧದ ವೇಳೆ ಮೂರನೇ ಅಂತಸ್ತಿನಲ್ಲಿರುವ ನೀರಿನ ಟ್ಯಾಂಕರ್‌ನಲ್ಲಿ 3 ತಿಂಗಳ ಹೆಣ್ಣು ಮಗುವಿನ ಮೃತ ದೇಹ ಪತ್ತೆಯಾಗಿದೆ. ಆದರೆ ಕೊಲೆ ಮಾಡಿದ್ದು, ಯಾರು ಎಂಬುಂದು ಪೊಲೀಸರಿಗೆ ತಲೆ ನೋವಾಗಿತ್ತು. ಇದನ್ನೂ ಓದಿ:  2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ

    ಹಿನ್ನೆಲೆ ಏನು?:
    ಮನೆಯಲ್ಲಿ ಒಟ್ಟು 4 ಮಂದಿ ಜೊತೆಯಾಗಿ ವಾಸವಿದ್ದರು, ಮಹಿಳೆ ಹಾಗೂ ಆಕೆಯ ಪತಿ, ಗಂಡನ ಅಪ್ಪ-ಅಪ್ಪಇವರೆಲ್ಲರೂ ಒಟ್ಟಿಗೆ ಇದ್ದರು. ಪೊಲೀಸರಿಗೆ ಎಲ್ಲರ ಮೇಲೆ ಅನುಮಾನ ಮೂಡಿತ್ತು. ಮಗು ಮೃತಪಟ್ಟ 10 ದಿನಗಳ ಕಾಲ ಪ್ರತಿದಿನ ತಾಯಿ ಠಾಣೆಗೆ ತೆರಳಿ ಮಗು ಹುಡುಕಿಕೊಂಡುವಂತೆ ಕಣ್ಣೀರು ಹಾಕುತ್ತಾ, ನನ್ನ ಮಗು ಸಿಗದೇ ಇದ್ದರೆ ನಾನು ಸತ್ತು ಹೋಗುತ್ತೇನೆ ಎಂದು ಹೇಳಿದ್ದಳು. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಮಗುವಿನ ಕುಟುಂಬಸ್ಥರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮಗುವಿನ ತಾಯಿ ಮೋಬೈಲ್ ಫೋನ್ ಚೆಕ್ ಮಾಡಿದ್ದಾರೆ. ಆಗ ಗೂಗಲ್ ಹಾಗೂ ಯೂಟ್ಯೂಬ್‍ನಲ್ಲಿ ಮಗುವನ್ನು ಕೊಲ್ಲುವುದು ಹೇಗೆ ಎಂಬುದನ್ನು ತಾಯಿ ಸ್ವಾತಿ ಸರ್ಚ್ ಮಾಡಿರುವುದು ಕಂಡುಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ನಡೆದ ಘಟನೆಯನ್ನೆಲ್ಲ ತಾಯಿ ಸ್ವಾತಿ ಹೇಳಿದ್ದಾಳೆ. ಪೊಲೀಸರ ಒಂದು ಕ್ಷಣ ದಂಗಾಗಿಹೋಗಿದ್ದಾರೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ನಾನು ನನ್ನ ಗಂಡ ಸಪರೇಟ್ ಆಗಿ ಸಂಸಾರ ಮಾಡುವ ಕನಸು ಕಂಡಿದ್ದೇ, ತುಂಬಾ ಸಲ ಗಂಡನ ಬಳಿ ಬೇರೆ ಮನೆ ಮಾಡುವಂತೆ ಹೇಳಿದ್ದೆ. ಆದರೆ ಗಂಡ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಹೀಗಾಗಿ ಈ ರೀತಿಯ ಕೃತ್ಯ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

  • ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ನವದೆಹಲಿ: ಮಾದಕ ವಸ್ತು ಖರೀದಿ, ಮಾರಾಟ, ಸೇವೆನೆ ವಿದುದ್ಧ ಕಠಿಣ ಕ್ರಮಕ್ಕೆ ದೇಶಾದ್ಯಂತ ಒತ್ತಾಯ ಹೆಚ್ಚುತ್ತಿರುವ ನಡುವೆಯೇ, ವೈಯಕ್ತಿಕ ಉದ್ದೇಶಕ್ಕಾಗಿ ಸಣ್ಣಪ್ರಮಾಣದ ಡ್ರಗ್ಸ್ ಸೇವಿಸುತ್ತಿರುವ ವ್ಯಕ್ತಿಗಳನ್ನು ಅಪರಾಧದಿಂದ(ಜೈಲು ಶಿಕ್ಷೆಯಿಂದ) ಹೊರಗಡೆ ಇಡುವ ಮಹತ್ವ ಶಿಫಾರಸನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮಾಡಿದೆ. ಈ ಶಿಫಾರಸನ್ನು ಕೇಂದ್ರ ಕಂದಾಯ ಇಲಾಖೆಗೆ ಕಳಿಸಲಾಗಿದ್ದು, ಮಾದಕ ವಸ್ತು ನಿಗ್ರಹ ಕಾಯ್ದೆಎನ್‍ಡಿಪಿಎಸ್( Narcotic Drugs and Psychotropic Substances Act)ತಿದ್ದು ಪಡಿ ಮಾಡಬೇಕು ಎಂದು ತಿಳಿಸಿದೆ.

    ಇದೀಗ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದಕ್ಕೂ ಮುನ್ನ ಕನ್ನಡದ ಚಿತ್ರರಂಗದ ಹಲವು ಕಲಾವಿದರು ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಈ ಹೊಸ ಪ್ರಸ್ತಾಪಕ್ಕೆ ಮಹತ್ವ ಬಂದಿದೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಈಗ ಇರುವ ಎನ್‍ಡಿಪಿಎಸ್(NDPS) ಕಾಯ್ದೆ ಪ್ರಕಾರ ಮಾದಕ ವಸ್ತು ವ್ಯಸನಿಗಳನ್ನು ಅಪರಾಧಿಗಳು ಎಂದೇ ಪರಿಗಣಿಸಲಾಗುತ್ತದೆ. ಆದರೆ ತಾವಾಗೇ ಈ ವ್ಯಸನಿಗಳು ಮನಃಪರಿವರ್ತನೆ ಮಾಡಿಕೊಂಡು ಮರುವಸತಿ ಕೇಂದ್ರಗಳಲ್ಲಿ ತಮ್ಮ ಚಟವನ್ನು ಬಿಟ್ಟರೆ ಅವರಿಗೆ ತನಿಖೆ ಹಾಗೂ ಜೈಲಿನಿಂದ ವಿನಾಯ್ತಿ ದೊರಕುತ್ತದೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಈಗ ಹೊಸ ಪ್ರಸ್ತಾವದ ಪ್ರಕಾರ, ವೈಯಕ್ತಿಕ ಕಾರಣಗಳಿಗೆ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಕೊಡಿಸಬೇಕು. ಜೈಲುವಾಸದ ಬಲೆಗೆ ಈ ಆಯ್ಕೆಯುನ್ನು ಅವರಿಗೆ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಈಗಿನ ಎನ್‍ಡಿಪಿಎಸ್ ಕಾಯ್ದೆಯ 27ನೇ ಪರಿಚ್ಛೇದ ಹೇಳುವಂತೆ ಯಾವುದೇ ಮಾದಕ ವಸ್ತು ಇಟ್ಟುಕೊಂಡವರಿಗೆ 1ವರ್ಷದವರೆಗೆ ಕೈಲು ಶಿಕ್ಷೆ ಹಾಗೂ 20 ಸಾವಿರವರೆಗೆ ದಂಡ ವಿಧಿಸಲಾಗುತ್ತಿದೆ.

  • ED ನನ್ನ ಮೇಲೆ ದಾಳಿ ಮಾಡುವುದಿಲ್ಲ, ನಾನು BJP ಸಂಸದ: ಸಂಜಯ್ ಪಾಟೀಲ್

    ED ನನ್ನ ಮೇಲೆ ದಾಳಿ ಮಾಡುವುದಿಲ್ಲ, ನಾನು BJP ಸಂಸದ: ಸಂಜಯ್ ಪಾಟೀಲ್

    ಮುಂಬೈ: ನಾನು ಬಿಜೆಪಿ ಸಂಸದ, ಹೀಗಾಗಿ ನನ್ನ ಮೇಲೆ ಜಾರಿ ನಿರ್ದೇಶನಾಲಯ(ED)ದಾಳಿ ನಡೆಸುವುದಿಲ್ಲ ಎಂದು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಬಿಜೆಪಿ(BJP) ಸಂಸದ ಸಂಜಯ್ ಪಾಟೀಲ್(SANJAY PATIL  )ಹೇಳಿದ್ದಾರೆ.

    ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸಂಸದನಾದ್ದರಿಂದ ಇ.ಡಿ ನನ್ನ ಬಳಿ ಬರುವುದಿಲ್ಲ. 40 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಕಿದೆ. ನಮ್ಮ ಸಾಲದ ಮೊತ್ತ ನೋಡಿದರೆ ಇ.ಡಿಗೆ ಆಶ್ಚರ್ಯವಾಗಲಿದೆ. ಕೇಸರಿ ಪಕ್ಷದವರ ಮೇಲೆ ಯಾವುದೇ ತನಿಖೆ ಇರುವುದಿಲ್ಲ. ಹೀಗಾಗಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರ ಸರ್ಕಾರವು ಸಿಬಿಐ, ಇ.ಡಿ ಹಾಗೂ ಎನ್‍ಸಿಬಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಎನ್‍ಸಿಪಿ ವರಿಷ್ಠ ಶರದ್ ಪವಾರ್ ಇತ್ತೀಚೆಗೆ ಆರೋಪಿಸಿದರು. ಅದೇ ದಿನ ಹರ್ಷವರ್ಧನ್ ಪಾಟೀಲ್ ಕೂಡ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

  • 2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ

    2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ

    ಚೆನ್ನೈ: 14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ ಆಗಿರುವ ಬೆನ್ನಲ್ಲೆ ಇದೀಗ ಪೊಟ್ಟಣದಲ್ಲಿ(matchbox) ಇರುವ ಕಡ್ಡಿಗಳ ಸಂಖ್ಯೆಯಲ್ಲೂ ಏರಿಕೆ ಮಾಡಲಾಗಿದೆ. ಡಿಸೆಂಬರ್ 1ರಿಂದ ಬೆಂಕಿ ಪೊಟ್ಟಣದ ಬೆಲೆ 1 ರೂಪಾಯಿನಿಂದ 2ರೂ.ಗೆ ಏರಿಕೆಯಾಗುತ್ತಿದ್ದು, ಬೆಲೆ ಹೆಚ್ಚಾದರೂ ಪೊಟ್ಟಣದಲ್ಲಿ ಬೆಂಕಿ ಕಡ್ಡಿಗಳು ಹೆಚ್ಚಿಗೆ ಸಿಗುತ್ತಿದೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.

    14 ವರ್ಷದ ನಂತರ ಬೆಲೆ ಹೆಚ್ಚಿಸುತ್ತಿದ್ದು, 2ರೂಪಾಯಿಯ ಪೊಟ್ಟಣದಲ್ಲಿ ಇನ್ಮುಂದೆ36 ಕಡ್ಡಿಗಳ ಬದಲು 50 ಕಡ್ಡಿಗಳು ಇರಲಿದೆ ಎಂದು ತಿಳಿಸಿವೆ. ಬೆಂಕಿ ಪೊಟ್ಟಣ ತಯಾರಿಕೆಗೆ ಬಳಸುವ 14 ಕಚ್ಚಾವಸ್ತುಗಳು ಬೆಲೆ ಏರಿಕೆ ಸಮೇತ ವಿವರ ನೀಡಿರುವ ಕಂನಿಗಳು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿವೆ. ಇದನ್ನೂ ಓದಿ: ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ

    ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ದಿನನಿತ್ಯ ಬಳಕೆಯ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳವಾಗುತ್ತಲೇ ಇದೆ. ಆದರೆ ಕಳೆದ 14 ವರ್ಷಗಳಿಂದ ಬೆಂಕಿ ಪೊಟ್ಟಣದ ಬೆಲೆ ಮಾತ್ರ ಕಿಂಚಿತ್ತೂ ಏರಿಕೆಯಾಗದೆ ಸ್ಥಿರವಾಗಿತ್ತು. ಈ ಹಿಂದೆ 50 ಪೈಸೆ ಇದ್ದ ಬೆಂಕಿ ಪೊಟ್ಟಣದ ಬೆಲೆಯನ್ನು 2007ರಲ್ಲಿ ಪರಿಷ್ಕರಿಸಲಾಗಿತ್ತು. ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚೆಸ್ (All India Chamber Of Matches) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ. ಇದನ್ನೂ ಓದಿ: ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಬೆಲೆ ಏರಿಕೆಗೆ ಕಾರಣವೇನು?: ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಹೀಗಾಗಿ ಬೆಂಕಿ ಪೊಟ್ಟಣ ತಯಾರಕರು ಬೆಲೆಯೇರಿಕೆಯ ನಿರ್ಧಾರವನ್ನು ಅವಿರೋಧವಾಗಿ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ 600 ಬೆಂಕಿ ಪೊಟ್ಟಣಗಳ ಒಂದು ಬಂಡಲ್ 270ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅದನ್ನು 430ರಿಂದ 480 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ.

  • ಗರಿಗರಿಯಾದ ರವೆ ರೊಟ್ಟಿ ಮಾಡುವುದು ಸರಳ, ಅಷ್ಟೇ ರುಚಿ

    ಗರಿಗರಿಯಾದ ರವೆ ರೊಟ್ಟಿ ಮಾಡುವುದು ಸರಳ, ಅಷ್ಟೇ ರುಚಿ

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ರವೆ ರೊಟ್ಟಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಈ ರೊಟ್ಟಿ ಎಷ್ಟು ಸುಲಭ ಅಷ್ಟೇ ರುಚಿಯಾಗಿದೆ. ರವೆ ರೊಟ್ಟಿ ಮಾಡುವ ಸರಳ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಚಿರೋಟಿ ರವೆ-2ಕಪ್
    * ಈರುಳ್ಳಿ-2
    * ಕರೀಬೇವು- ಸ್ವಲ್ಪ
    * ಹಸಿಮೆಣಸು- 3
    * ಜೀರಿಗೆ- 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ- ಸ್ವಲ್ಪ
    * ಮೊಸರು- ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ರವೆ, ಇರುಳ್ಳಿ, ಕೊತ್ತಂಬರಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು, ಕರಿಬೇವು, ಹಸಿಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಈ ಮಿಶ್ರಣವನ್ನು ಅರ್ಧ ಗಂಟೆ ಹಾಗೇ ಇಟ್ಟಿರಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ಈಗ ಒಂದು ತವಾವನ್ನು ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆಯನ್ನು ಚೆನ್ನಾಗಿ ಸವರಿ ನಂತ್ರ ಅದಕ್ಕೆ ಈ ಮಿಶ್ರಣವನ್ನು ಹಾಕಿ ರೊಟ್ಟಿಯ ಆಕಾರದಲ್ಲಿ ತಟ್ಟಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಇದೀಗ ಚೆನ್ನಾಗಿ ಬೇಯಿಸಿದರೆ ರುಚಿಯಾದ ರವೆ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

  • ಮಕ್ಕಳಿಗೆ ಬಿಸಿಯೂಟ ನೀಡಲು ಗುಡ್ಡಗಾಡಲ್ಲಿ ನಡೆಯುವ ಶಿಕ್ಷಕ

    ಮಕ್ಕಳಿಗೆ ಬಿಸಿಯೂಟ ನೀಡಲು ಗುಡ್ಡಗಾಡಲ್ಲಿ ನಡೆಯುವ ಶಿಕ್ಷಕ

    ಛತ್ತೀಸ್‍ಗಢ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಬಾರದೆಂದು ನಿತ್ಯ ಗುಡ್ಡಗಾಡು ರಸ್ತೆಯಲ್ಲಿ 8 ಕಿಮೀ ನಡೆಯುವ ಶಿಕ್ಷಕರು ಬಿಸಿಯೂಟವನ್ನು ಹೊತ್ತು ತರುತ್ತಿರುವ ಘಟನೆ ಛತ್ತೀಸಗಢದ ಬಲರಾಮ್‍ಪುರ್ ಜಿಲ್ಲೆಯಲ್ಲಿ ಕಂಡು ಬಂದಿದೆ.

    ನಮ್ಮ ಶಿಕ್ಷಕರಾದ ಸುಶೀಲ್ ಯಾದವ್ ಮತ್ತು ಪಂಕಜ್ ಸಾರ್ವಜನಿಕ ಪಡಿತರ ಅಂಗಡಿಯಿಂದ ದಿನಸಿ ಹೊತ್ತು ಪ್ರತಿದಿನ 8 ಕಿಮೀ ಬೆಟ್ಟಗುಡ್ಡದ ಹಾದಿಯಲ್ಲಿ ನಡೆದು ಹೋಗುತ್ತಿದ್ದಾರೆ. ಅವರ ಬದ್ಧತೆ ಮತ್ತು ಕರ್ತವ್ಯನಿಷ್ಠೆಯ ಬಗ್ಗೆ ನಮಗೆ ಗೌರವವಿದೆ ಎಂದು ಬಲರಾಮ್‍ಪುರ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಎಕ್ಕಾ ಹೇಳಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಖಂಡಿಯಾ ದಾಮರ್ ಗ್ರಾಮ ಪಂಚಾಯಿತಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ನಡೆದೇ ಬರುವ ಶಿಕ್ಷಕರ ಬದ್ಧತೆಗೆ ಕೈಮುಗಿಯಬೇಕು ಎನ್ನಿಸುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಟೀಲ್‍ಗೆ ಸೀರೆ ಉಡಿಸಿದ್ರೆ ಆತ ಹೆಂಗಸು ಅಲ್ಲ, ಗಂಡಸು ಅಲ್ಲ: ಬೇಳೂರು ಗೋಪಾಲಕೃಷ್ಣ

    ಈ ರಸ್ತೆಯಲ್ಲಿ ಸಾಗಿಬರುವುದು ತುಂಬಾ ಕಷ್ಟವಾಗಿದೆ. ಮಳೆ ಬಿದ್ದರಂತೂ ಈ ರಸ್ತೆಯಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ. ಕಾಡುಪ್ರಾಣಿಗಳ ಹಾವಳಿಯೂ ಇದೆ. ಆದರೂ ಮಕ್ಕಳು ಪ್ರತಿದಿನ ಮಧ್ಯಾಹ್ನದ ಊಟ ತಪ್ಪಿಸಿಕೊಳ್ಳಬಾರದು ಎಂದು ನಾವಿಷ್ಟು ಕಷ್ಟ ಪಡುತ್ತಿದ್ದೇವೆ. ಮ್ಕಳಿಗೆ ಬಿಸಿಯೂಟ ತಪ್ಪಬಾರದು ಎನ್ನುವ ಕಾಳಜಿಯಿಂದ ಗುಡ್ಡ ಮೇಲಿರುವ ಶಾಲೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ ಎಂದು ಶಿಕ್ಷಕ ಸುಶೀಲ್ ಯಾದವ್ ಹೇಳಿದ್ದಾರೆ.

  • ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್

    ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್

    ನವದೆಹಲಿ: ಈಗ ಏನಾದರೂ ಶಾರೂಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ ಡ್ರಗ್ಸ್ ಎನ್ನುವುದು ಸಕ್ಕರೆಯ ಪುಡಿಯಾಗಿ ಬದಲಾಗಬಹುದು ಎಂದು ಮಹಾರಾಷ್ಟ್ರ ಸಚಿವ, ಎನ್‍ಸಿಪಿ ಮುಖಂಡ ಛಗನ್ ಭುಜ್‍ಬಲ್ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಜರಾತ್‍ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪದೇಪದೆ ಹೆರಾಯಿನ್‍ಗಳು ಸಿಕ್ಕಿವೆ. ಈ ಪ್ರಕರಣವನ್ನು ವ್ಯಾಪಕವಾಗಿ ತನಿಖೆ ನಡೆಸುವುದು ಬಿಟ್ಟು, ಎನ್‍ಸಿಬಿ ಶಾರುಖ್ ಖಾನ್ ಪುತ್ರನನ್ನು ಹಿಡಿದುಕೊಂಡಿದೆ. ಶಾರುಖ್ ಖಾನ್ ಬಿಜೆಪಿ ಸೇರ್ಪಡೆಯಾದರೆ  ಡ್ರಗ್ಸ್‌ನ್ನು ಸಕ್ಕರೆ ಪೌಡರ್ ಎಂದು ನಿರೂಪಿಸಿ, ಆರ್ಯನ್ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್  ಖಾನ್ ಪುತ್ರ ಆರ್ಯನ್ ಖಾನ್  ಬಂಧಿಸಿ,  ಜಾಮೀನು ಕೂಡ ನೀಡದೆ ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

    ಆರ್ಯನ್ ಖಾನ್ ಜೊತೆ ಸ್ನೇಹ ಹೊಂದಿರುವ ಅನನ್ಯಾ ಪಾಂಡೆ ಅವರಿಗೂ ಈಗ ಸಂಕಷ್ಟ ಎದುರಾಗಿದೆ. ಅವರ ಮನೆ ಮೇಲೆ ಎನ್‍ಸಿಬಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಸದ್ಯ ಅವರ ಮೊಬೈಲ್ ಮತ್ತು ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿನ ವಾಟ್ಸಪ್ ಚಾಟ್‍ಗಳನ್ನು ಪರಿಶೀಲಿಸಲಾಗುತ್ತಿದೆ.