ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಾ ಭಟ್ ಕುಚ್ಚಲಕ್ಕಿ ರೊಟ್ಟಿ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳಬಲ್ಲವನು ಶ್ರೀಮಂತ. ಪ್ರತಿ ಬಾರಿ ನಾನು ಒಳ್ಳೆಯ ಭಾವನೆಯನ್ನು ಅನುಭವಿಸುತ್ತೇನೆ. ನಾನು ನನ್ನ ಜನರ ಹತ್ತಿರ ಬಂದಿದ್ದೇನೆ. ತಾಜಾ ಗಾಳಿಯ ಉಸಿರು, ತಾಜಾ ದೃಷ್ಟಿಕೋನವನ್ನು ನಾನು ಮರಳಿ ಪಡೆಯುತ್ತಿದ್ದೇನೆ. ಒಂದು ಕಪ್ ಫಿಲ್ಟರ್ ಕಾಫಿ ಕುಡಿಯುವುದು, ಕಾಡಿನಲ್ಲಿ ನಡೆಯುವುದು, ಹೊಸದನ್ನು ಕಲಿಯುವುದು, ಪ್ರಕೃತಿಯ ಶಬ್ದಗಳನ್ನು ಕೇಳುವುದು ನನಗೆ ಅಪಾರ ಸಂತೋಷವನ್ನು ತರುತ್ತದೆ ಎಂದು ಬರೆದುಕೊಂಡು ಕುಚ್ಚಲಕ್ಕಿ ರೊಟ್ಟಿಯನ್ನು ತಾವು ಮಾಡುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಆಶಾ ಭಟ್ ಅವರು ಒಲೆಯ ಮೇಲೆ ರೊಟ್ಟಿಯನ್ನು ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಮ್ಮ ಹವ್ಯಕ ಕುಸು ತುಂಬಾನೇ ಸಿಂಪಲ್. ಎಲ್ಲೇ ಹೋದರು ಹೀಗೆ ಇರು. ನಮ್ಮ ಸಂಪ್ರದಾಯ ಉಳಿಸಿ ಬೆಳೆಸೋಣ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ನಟಿಯ ಪೋಸ್ಟ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
ಕೆಲವು ದಿನಗಳ ಹಿಂದೆ ಆಶಾ ಭಟ್ ಅವರು ತಮ್ಮ ಹಳ್ಳಿಯಲ್ಲಿ ಮಕ್ಕಳು ಮತ್ತು ತಮ್ಮ ಸ್ನೇಹಿತರ ಜೊತೆಗೆ ಚಿನ್ನಿಕೋಲು ಆಟವಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದರು. ರಾಬರ್ಟ್ ಚಿತ್ರದ ಮೂಲಕ ಮೊದಲನೆಯದಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದರು. ಇವರು ಕೇವಲ ಒಂದು ಕನ್ನಡ ಸಿನಿಮಾದಿಂದಲೇ ಸಾಕಷ್ಟು ಜನಪ್ರಿಯ ಆದರು ಮತ್ತು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ನಟಿ ಆಶಾ ಭಟ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ಮಾಡೆಲ್ ಆಗಿದ್ದರು.
– ಕೆರೆಯಂಗಳದಲ್ಲಿ ಕಾಂಪೌಂಡ್‍ಗಾಗಿ ಸರಿಸುಮಾರು 3 ಕೋಟಿ ಖರ್ಚು
ಚಿಕ್ಕಬಳ್ಳಾಪುರ: ಅಮಾನಿ ಗೋಪಾಲಕೃಷ್ಣ ಕೆರೆಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು, ಜಿಲ್ಲಾಡಳಿತದಿಂದ ಸರಿಸುಮಾರು 6 ಕೋಟಿ ರೂಪಾಯಿ ಖರ್ಚು ಮಾಡಿ ಕೆರೆಯಂಗಳದಲ್ಲಿ ಕಟ್ಟಲಾಗಿದ್ದ ಗಾಜಿನ ಮನೆ ಈಗ ಕೆರೆಯಪಾಲಾಗಿದೆ.
ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಐದಾರು ವರ್ಷಗಳ ಹಿಂದೆ 3 ಕೋಟಿ ಖರ್ಚು ಮಾಡಿ ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿನ ಗಾಜಿನ ಮನೆ ಮಾದರಿಯಲ್ಲೇ ಇಲ್ಲೂ ಸಹ ಗಾಜಿನ ಮನೆ ನಿರ್ಮಾಣ ಮಾಡಲಾಗಿತ್ತು. ಗಾಜಿನ ಮನೆ ಸುತ್ತ ಕೆರೆಯಂಗಳದಲ್ಲಿ ಕಾಂಪೌಂಡ್ ಹಾಗೂ ಮುಖ್ಯ ಪ್ರವೇಶ ದ್ವಾರ, ಗಾಜಿನ ಮನೆ ಕಾವಲುಗಾರರಿಗೆ ಮನೆ ಸೇರಿದಂತೆ ಬೊಟಾನಿಕಲ್ ಗಾರ್ಡನ್ ಮಾಡುವ ಉದ್ದೇಶದಿಂದ ಕೊಳವೆಬಾವಿಗಳನ್ನ ಕೊರೆಸಲು ಸರಿಸುಮಾರು 3 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿತ್ತು. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್
ಆದರೆ ಈಗ ಭಾರೀ ಮಳೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಗೆ ಕಂದವಾರ ಕೆರೆಯಿಂದ ಭರಪೂರ ನೀರು ಹರಿದುಬರ್ತಿದ್ದು, ಗಾಜಿನ ಮನೆ ಕೆರೆಯಪಾಲಾಗಿದೆ. ಈ ಹಿಂದೆಯೇ ಕೆರೆಯಂಗಳದಲ್ಲಿ ಗಾಜಿನ ಮನೆ ನಿರ್ಮಾಣ ವಿರೋಧಿಸಿ, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದು, ಗಾಜಿನ ಮನೆ ತೆರವು ಮಾಡಲು ಲೋಕಾಯುಕ್ತ ಸಂಸ್ಥೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿದೆ ಎನ್ನಲಾಗಿದ್ದು, ಗಾಜಿನ ಮನೆ ಮಾತ್ರ ತೆರವಾಗಿಲ್ಲ. ಆದರೆ ಜನರ ತೆರಿಗೆಯ 6 ಕೋಟಿ ಹಣ ಮಾತ್ರ ಈಗ ಕೆರೆಯ ನೀರಲ್ಲಿ ಹೋಮ ಮಾಡಿದಂತಾಗಿದೆ. ಇದನ್ನೂ ಓದಿ:ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
ನವದೆಹಲಿ: ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧವಾಗಿ ಹೋರಾಡಲು ನಮ್ಮ ಪಕ್ಷದಲ್ಲಿ ಏಕತೆ ಇರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಅಧ್ಯಕ್ಷರು ಮತ್ತು ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹೋರಾಡಲು ಪಕ್ಷದಲ್ಲಿ ಶಿಸ್ತು ಮತ್ತು ಏಕತೆ ತುಂಬ ಮುಖ್ಯ. ಬಿಜೆಪಿ ಮತ್ತು ಆರ್ಎಸ್ಎಸ್ನ ಕುಟಿಲತೆಯ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ಮಾಡಬೇಕು. ಅವರು ಹೇಳುತ್ತಿರುವುದು ಸುಳ್ಳು ಎಂಬುದನ್ನು ಜನರಿಗೆ ತೋರಿಸಿಕೊಡಬೇಕು. ಇದನ್ನೆಲ್ಲ ನಾವು ದೃಢವಿಶ್ವಾಸದಿಂದ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್
ಈ ದೇಶ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಐಸಿಸಿ ಪ್ರತಿದಿನ ಬಹಳ ಮುಖ್ಯವಾದ ಮತ್ತು ವಿವರವಾದ ಪ್ರಕಟಣೆಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಅವು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ತಲುಪುತ್ತಿದೆ ಎನ್ನುವ ಕುರಿತಾಗಿ ನನಗೆ ನಂಬಿಕೆಯಿಲ್ಲ. ಹಾಗೇ ಕಾಂಗ್ರೆಸ್ ನೀತಿಯ ಕುರಿತಂತೆ ನಮ್ಮ ರಾಜ್ಯಮಟ್ಟದ ನಾಯಕರಲ್ಲೂ ಸ್ಪಷ್ಟತೆ, ಒಗ್ಗಟ್ಟಿನ ಕೊರತೆಯಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
2022ರ ಚುನಾವಣೆಯಲ್ಲಿ ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದಲ್ಲಿನ ಸ್ಥಿರತೆ ಕಾಪಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.
– ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ – ಕುಮಾರಸ್ವಾಮಿ ಟಾರ್ಗೆಟ್ ಅಲ್ಪಸಂಖ್ಯಾತರು
ಹುಬ್ಬಳ್ಳಿ: ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಸಿಎಂ ಉದಾಸಿ ರೈಟ್ ಪರ್ಸನ್, ರಾಂಗ್ ಪಾರ್ಟಿಯಾಗಿದೆ. ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಹಾನಗಲ್‍ನಲ್ಲಿ ಶ್ರೀನಿವಾಸ ಮಾನೆ ಒಳ್ಳೆಯ ಕೆಲಸ ಮಾಡಿದ್ದಾರೆ. ಶ್ರೀನಿವಾಸ ಮಾನೆ ಯಾರು ಮಾಡದ ಕೆಲಸ ಮಾಡಿದ್ದಾರೆ, ಅವರು ಜಯ ನಿಶ್ಚಿತವಾಗಿದೆ. ಸಿಎಂ ಉದಾಸಿ ರೈಟ್ ಪರ್ಸನ್, ರಾಂಗ್ ಪಾರ್ಟಿ. ಬಿಜೆಪಿಯಿಂದ ಅವರ ಕುಟುಂಬಕ್ಕೆ ಟಿಕೆಟ್ ಬಿಡಬೇಕಾಗಿತ್ತು. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡದ ಕಾರಣಕ್ಕೆ ಅವರು ಸೋತು ಬಿಟ್ಟಿದ್ದಾರೆ. ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್
ಬಸವಕಲ್ಯಾಣದಲ್ಲಿ ಜೆಡಿಎಸ್ ನೋಡಿ ಮತ ಹಾಕಿಲ್ಲಾ, ಅಲ್ಲಿನ ವ್ಯಕ್ತಿಯ ನೋಡಿ ಮತ ಹಾಕಿದ್ದಾರೆ. ಇದರಿಂದ ಅಲ್ಲಿ ಬಿಜೆಪಿ ಗೆಲ್ಲಲು ಸಹಾಯವಾಗಿದೆ. ಉಪಚುನಾವಣೆಯಲ್ಲಿ ಸೂಟ್‍ಕೇಸ್ ರಾಜಕಾರಣ ಮಾಡಿ, ಅಲ್ಪಸಂಖ್ಯಾತರನ್ನ ಬಲಿ ತೆಗೆದುಕೊಂಡಿದ್ದಾರೆ. ಹಾನಗಲ್‍ನಲ್ಲಿ ಸೂಟ್‍ಕೇಸ್ ಬರದ ಕಾರಣ ಒಂದೇ ದಿನ ಪ್ರಚಾರ ಮಾಡಿದ್ದಾರೆ. ಸೂಟ್‍ಕೇಸ್ ಪದ್ದತಿಯ ಬಗ್ಗೆ ನಾನು ಹೇಳುತ್ತಿಲ್ಲ. ದೇವೇಗೌಡ್ರ ಮೊಮ್ಮಗ ಸಂಸದ ಪ್ರಜ್ವಲ್ ಹೇಳಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ. ತನ್ವೀರ್ ಸೇಠ್‍ರನ್ನ ಸೋಲಿಸಿದ್ದೇ ಕುಮಾರಸ್ವಾಮಿ. ಕುಮಾರಸ್ವಾಮಿ ಟಾರ್ಗೆಟ್ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ ಎಂದು ಜಮೀರ್ ಅಹ್ಮದ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್
– ಕುಮಾರಸ್ವಾಮಿ ಜನರಿಗೆ ಯಾರು ಅಂತಾನೇ ಗೊತ್ತೆ ಇರಲಿಲ್ಲ
– ಪ್ರಧಾನಿ ಮಂತ್ರಿ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು ನಾನೆ
– ನನ್ನ ರಾಜಕೀಯ ಗುರುಗಳು ದೇವೇಗೌಡ್ರ ಮತ್ತು ಸಿದ್ದರಾಮಯ್ಯ
ಹುಬ್ಬಳ್ಳಿ: ಕುಮಾರಸ್ವಾಮಿ ಅವರನ್ನು ಆನೆಯನ್ನಾಗಿ ಮಾಡಿದ್ದು ಯಾರು? ನಾನು, ಎಚ್‍ಡಿಕೆ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಸಿಎಮ್ ಆಗುವಾಗ ನಾನು ವಿರೋಧ ಮಾಡಿದ್ದೆ. ಅಲ್ಲದೇ ನಾನು ಮನೆಯಲ್ಲಿ ಕುಳಿತು ಕಣ್ಣೀರು ಸಹ ಹಾಕಿದ್ದೇನೆ ಎಂದು ಜಮೀರ್ ಜೆಡಿಎಸ್‍ನಲ್ಲಿ ಇದ್ದ ದಿನಗಳನ್ನು ನೆನೆದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳು ದೇವೇಗೌಡ್ರ ಮತ್ತು ಸಿದ್ದರಾಮಯ್ಯ. ದೇವೇಗೌಡ್ರು 100% ಸೆಕ್ಯೂಲರ್. ಜಯನಗರ ಬೈ ಎಲೆಕ್ಷನ್‍ನಲ್ಲಿ ಕುಮಾರಸ್ವಾಮಿ ಜನರಿಗೆ ಯಾರು ಅಂತಾನೇ ಗೋತ್ತೆ ಇರಲಿಲ್ಲ, ನಾನೇ ಮಾಜಿ ಪ್ರಧಾನಿ ಮಂತ್ರಿ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು. 2004 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಉಪಚುನಾವಣೆಯಲ್ಲಿ ಸೂಟ್‍ಕೇಸ್ ರಾಜಕಾರಣ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ನಾನು ಬಸ್ ಮಾಲೀಕ, ನಮ್ಮ ಅಜ್ಜನ ಕಾಲದಿಂದಲೂ ನಾವೂ ಮಾಲೀಕರು. ನಾನು ಯಾವತ್ತೂ ನಮ್ಮ ಬಸ್ ಕ್ಲೀನ್ ಮಾಡಿಲ್ಲ. ಅವರಿಗೆ ಎಲ್ಲಿ ಕುಳಿತುಕೊಳ್ಳಲು ಜಾಗ ಇರಲಿಲ್ಲ, ಕುಮಾರಸ್ವಾಮಿಯವರಂಗೆ ಬಿಬಿಎಂಪಿಯಲ್ಲಿ ಕಸ ಗೂಡಿಸುತ್ತಿರಲಿಲ್ಲ. ನಾನು ನಮ್ಮ ತಾತ ಬ್ರಿಟಿಷ್‍ರ ಕಾಲದಲ್ಲಿ ಗಾಡಿ ಇಟ್ಟುಕೊಂಡವರು. ಕುಮಾರಸ್ವಾಮಿ ನಮ್ಮ ಆಫೀಸ್‍ನಲ್ಲಿ ನಾಲ್ಕು ಗಂಟೆ ಕುಳಿತುಕೊಳ್ಳುತ್ತಿದ್ದರು. ನನಗೆ ಬೇಜಾರು ಆಗೋದು, ಅವರು ಡ್ರೈವರ್ ಅಂತಿದಾರಲ್ಲ. ನನಗೂ ನೋವಗಿದೆ. ಕುಮಾರಸ್ವಾಮಿ ಅವರನ್ನು ಸಾಕಿದ್ದೆ ನಾನು, ಕೂರಕ್ಕೆ ಜಾಗ ಇರಲಿಲ್ಲ ಅವರಿಗೆ, ಬಹಳಷ್ಟು ಇದೆ ಹೇಳೋಕೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್
ಒಬ್ಬ ರಾಜಕಾರಣಿ ಮಾತನಾಡುವ ಮಾತಾ ಇದು. ನಿಮ್ಮನ್ನ ಆನೆಯನ್ನಾಗಿ ಮಾಡಿದ್ದು ಯಾರು? ನಾನು, ಕುಮಾರಸ್ವಾಮಿ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಸಿಎಮ್ ಆಗುವಾಗ ನಾನು ವಿರೋಧ ಮಾಡಿದ್ದೆ. ಅಲ್ಲದೇ ನಾನು ಮನೆಯಲ್ಲಿ ಕುಳಿತು ಕಣ್ಣೀರು ಸಹ ಹಾಕಿದ್ದೇನೆ. ಕೊನೆಯ ಸಮಯದಲ್ಲಿ ನಾನು ಅನಿವಾರ್ಯವಾಗಿ ಹೋಗಬೇಕಾಯಿತು. ಕುಮಾರಸ್ವಾಮಿ ಯಾರು ಬೆಳೆಯುವುದನ್ನ ಸಹಿಸಿಕೊಳ್ಳುವುದಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳನ್ನ ಸೋತ ನಂತರ ಬೀದಿ ಪಾಲು ಮಾಡುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
ನಾನು, ಬಾಲಣ್ಣ ನಮ್ಮ ಸ್ನೇಹಿತರಯ ಸೇರಿ ಒತ್ತಾಯ ಮಾಡಿದ್ದೇವು. ನಿಮ್ಮನ್ನ ಆನೆಯನ್ನಾಗಿ ಮಾಡಿದ್ದು ನಾವು. ಇಬ್ರಾಹಿಂ ಹೊರಗಡೆ ನಿಂತು ಹೇಳುತ್ತಿದ್ದಾರೆ. ಇಲ್ಲೆ ಇದ್ದಾಗ ಅಲ್ಪಸಂಖ್ಯಾತರ ಬಗ್ಗೆ ಕೇಳಬಹುದು. ಸಿದ್ದರಾಮಯ್ಯನವರನ್ನ ಬೆಳಿಗ್ಗೆ ಎದ್ದರೆ ಸಾಕು ಟಾರ್ಗೇಟ್ ಮಾಡುತ್ತಾರೆ. ಅವರನ್ನ ಟಾರ್ಗೇಟ್ ಮಾಡಿದರೆ ಹೆಚ್‍ಡಿಕೆಗೆ ಬೆನ್ ಫಿಟ್ ಆಗುತ್ತೆ ಅಂತ ತಿಳ್ಕೋಂಡಿದ್ದಾರೆ. ನಮ್ಮ ಅಲ್ಪಸಂಖ್ಯಾರನ್ನ ಕ್ಯಾಂಡೆಂಟ್ ಮಾಡಿ ಬೀದಿಗೆ ತರ್ತಾರೆ. ಸಿದ್ದರಾಮಯ್ಯರನ್ನ ತಾಲಿಬಾನ್‍ಗೆ ಕಳುಹಿಸಬೇಕು ಎನ್ನೋ ಶ್ರೀನಿವಾಸ ಪ್ರಸಾದ್ ಹೇಳಿಕೆ ವಿಚಾರ. ಯಾಕೆ ಕಳುಹಿಸಬೇಕು, ಅಲ್ಪಂಖ್ಯಾತರ ಬಗ್ಗೆ ಪ್ರೀತಿ ತೋರಿಸಿದರೆ ಹೀಗೇ ಹೇಳೋದೆ. ಈಶ್ವರಪ್ಪನನ್ನು ಯಾರು ಪ್ರಚಾರಕ್ಕೆ ಕರೆದಿಲ್ಲ, ಅವರನ್ನ ಕರೆದರೆ ಯಾರು ವೋಟ್ ಕೊಡುತ್ತಾರೆ ಅಂತ ಬಿಜೆಪಿಯೇ ಮಾತನಾಡಿಕೊಂಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ
– ಎಚ್‍ಡಿಕೆ ಯಡಿಯೂರಪ್ಪನರವರಿಗೂ ಮೋಸ ಮಾಡಿದ್ದಾರೆ – ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಬಂದಿದ್ದು
ಹುಬ್ಬಳ್ಳಿ : ಹೆಚ್.ಡಿ.ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗುತ್ತಾನೆಂದು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಇದರ ಬಗ್ಗೆ ನನ್ನ ಬಳಿ ವೀಡಿಯೋ ದಾಖಲೆ ಇದೆ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಪರ್ ಶರೀಫರನ್ನು ರಾಜಕೀಯದಲ್ಲಿ ಮೇಲೆಳದಂತೆ ಮಾಡಿದ್ದು ಕುಮಾರಸ್ವಾಮಿ. ಗೆಲ್ಲುವ ಸಮಯದಲ್ಲಿ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ನೆನಪು ಏಕೆ ಬರುವುದಿಲ್ಲ. ಕೇವಲ ಅಲ್ಪಸಂಖ್ಯಾತರಿಗೆ ಅಷ್ಟೇ ಅಲ್ಲ, ಯಡಿಯೂರಪ್ಪನರವರಿಗೂ ಮೋಸ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ಅಧಿಕಾರ ಕೊಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೇನು. ಹೆಚ್.ಡಿ.ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗುತ್ತಾನೆಂದು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಇದರ ಬಗ್ಗೆ ನನ್ನ ಬಳಿ ವೀಡಿಯೋ ದಾಖಲೆ ಇದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ
ಕುಮಾರಸ್ವಾಮಿ ಸ್ವಂತ ಸಹೋದರನ ಏಳಿಗೆಯನ್ನ ಸಹಿಸಿಕೊಳ್ಳುವುದಿಲ್ಲ, ನಮ್ಮ ಏಳಿಗೆಯನ್ನ ಅವರು ಸಹಿಸಿಕೊಳ್ಳುವುದು ದೂರದ ಮಾತು. ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟ ಹಾಗೆ, ಅಲ್ಪಸಂಖ್ಯಾತರನ್ನ ಬಲಿ ಕೋಡುತ್ತಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಒಳ್ಳೆಯ ಯೋಜನೆಗಳನ್ನ ನೀಡಿದ್ದಾರೆ, ಹಲವು ಭಾಗ್ಯಗಳನ್ನ ನೀಡಿದ್ದಾರೆ. ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಬಂದಿದ್ದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
ನಾವು ಅಫ್ಘಾನಿಸ್ತಾನದ ಮೂಲಕ ಮಧ್ಯ ರಾಷ್ಟ್ರಗಳೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಬೇಕಿದೆ. ಇದರಿಂದ ಪಾಕಿಸ್ತಾನ ಮಾರುಕಟ್ಟೆ ವಿಸ್ತರಣೆಯಾಗಲಿದೆ. ನಮ್ಮ ನೆರೆ-ಹೊರೆಯಲ್ಲಿ ಎರಡು ಬೃಹತ್ ರಾಷ್ಟ್ರಗಳಿದ್ದು, ಅಲ್ಲಿ ದೊಡ್ಡ ಮಾರುಕಟ್ಟೆ ಇದೆ. ಇದರ ಸದುಪಯೋಗ ಪಡೆಯಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಭಾರತೀಯರ ಆಯಸ್ಸು 2 ವರ್ಷ ಇಳಿಕೆ
ಚೀನಾದೊಂದಿಗೆ ಈಗಾಗಲೇ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಿದೆ. ಆದರೆ ಹೇಗಾದರೂ ಮಾಡಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕಿದೆ. ಇದರಿಂದ ಪಾಕಿಸ್ತಾನದ ಆರ್ಥಿಕತೆಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಆದರೆ ಸದ್ಯ ಇದು ಸಾಧ್ಯವಿಲ್ಲ. ಏಕೆಂದರೆ ಭಾನುವಾರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ, ಭಾರತವನ್ನು ಸೋಲಿಸಿದೆ. ಈ ಸಮಯದಲ್ಲಿ ಮಾತುಕತೆ ಹಾಗೂ ಸಂಬಂಧ ಸುಧಾರಿಸುವ ಬಗ್ಗೆ ಮಾತನಾಡುವುದು ತಪ್ಪು ಅಂತಾ ಹೇಳಿದ್ದಾರೆ.ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ
ನಾವು ಉಪವಾಸ ದಿನಗಳಲ್ಲಿ ಉಪ್ಪಿಟ್ಟನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಈ ರುಚಿಯಾದ ನವಣೆ ಉಪ್ಪಿಟ್ಟನ್ನು ಮಾಡುವ ವಿಧಾನ ಸರಳ ಮತ್ತು ಸಖತ್ ರುಚಿಯಾಗಿದೆ. ಇಂದು ನೀವು ಮಾಡಿದರೆ ನಿಮ್ಮ ಮನೆಮಂದಿಗೆ ಇಷ್ಟವಾಗುತ್ತದೆ. ಇನ್ಯಾಕೆ ತಡ ಈ ರುಚಿಯಾದ ಉಪ್ಪಿಟ್ಟು ಮಾಡಲು ಇಂದೇ ಟ್ರೈ ಮಾಡಿ.
ಮಾಡುವ ವಿಧಾನ:
* ನವಣೆಯನ್ನು 2 ಗಂಟೆಗಳ ನೀರಿನಲ್ಲಿ ನೆನೆ ಹಾಕಿ ಇಟ್ಟಿರಬೇಕು.
* ನಂತರ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ, ಲವಂಗ, ಏಲಕ್ಕಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ಇದನ್ನೂ ಓದಿ:ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ಈಗ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
* ಈಗ ಹಸಿ ಮೆಣಸಿನ ಕಾಯಿ ಸೇರಿಸಿ 2-3 ಸೆಕೆಂಡ್ ಫ್ರೈ ಮಾಡಿ, ನೀರು ಹಾಕಿ, ಹಸಿ ಬಟಾಣಿ ಹಾಕಿ. ರುಚಿಗೆ ತಕ್ಕ ಉಪ್ಪು ಸೇರಿಸಿ. ಇದನ್ನೂ ಓದಿ ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ
* ನೀರು ಕುದಿಯಲಾರಂಭಿಸಿದಾಗ ನವಣೆ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಬೇಯಿಸಿದರೆ ರುಚಿಯಾದ ನವಣೆ ತಿನ್ನಲು ಸಿದ್ಧವಾಗುತ್ತದೆ. ಇದನ್ನೂ ಓದಿಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ
ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಅವರು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ದಾಂಪತ್ಯ ಜೀವನಕ್ಕೆ 6 ವರ್ಷ ತುಂಬಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕನ್ನಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್ ಎಂದು ಬರೆದುಕೊಂಡು ಮದುವೆಯ ವೀಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ:ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
ಪ್ರಜ್ವಲ್ ದೇವರಾಜ್ ತಮ್ಮ ಬಾಲ್ಯದ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ತಮ್ಮ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ನಂತರ ವಿವಾಹವಾಗಿದ್ದು, ಇದೀಗ ತಮ್ಮ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ರಾಗಿಣಿ ಅವರು ಸಹ ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್‍ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ
ಪ್ರಜ್ವಲ್ ದೇವರಾಜ್ ಅವರು ತಮ್ಮ ಅಭಿನಯದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ವಾರ್ಷಿಕಫತ್ಸವ ಸಂಭ್ರಮದಲ್ಲಿ ಇರುವ ಈ ಜೋಡಿಗೆ ಮದುವೆ ವಾರ್ಷಿಕೋತ್ಸವಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಾಹಾಗೂ ಉದ್ಯಮಿ ರಾಜ್ ಕುಂದ್ರಾ ಅವರ ಶ್ರೇಯಸ್ಸಿಗಾಗಿ ನಿನ್ನೆ ಕರ್ವಾ ಚೌತ್ ವ್ರತ ಹಾಗೂ ಪೂಜೆ ಮಾಡಿದ್ದಾರೆ. ಆದರೆ ಕರ್ವಾ ಚೌತ್ ಪೂಜೆಯಲ್ಲಿ ರಾಜ್ ಕುಂದ್ರಾ ಮಿಸ್ ಆದಂತೆ ಕಾಣುತ್ತಿರುವುದು ಎಲ್ಲಡೆ ಸುದ್ದಿಯಾಗಿದೆ.
ರಾಜ್ ಕುಂದ್ರಾ ಅವರ ಜೊತೆ ವಿವಾಹವಾದಾಗಿನಿಂದ ಶಿಲ್ಪಾ ಶೆಟ್ಟಿ ಅವರು ಪತಿಯ ಜೊತೆ ಕರ್ವಾ ಚೌತ್ ಆಚರಿಸುತ್ತಿದ್ದರು. ಈ ಫೋಟೋವನ್ನು ಪ್ರತಿವರ್ಷ ಹಂಚಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ಫೋಟೋ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಭಾರೀ ಸೋಶಿಯಲ್ ಮೀಡಿಯಾದಲ್ಲಿ ಅವರು ಒಬ್ಬರೇ ನಿಂತಿರುವ ಫೋಟೋ ಶೇರ್ ಮಡುವ ಮೂಲಕವಾಗಿ ಅಭಿಮಾನಿಗಳಿಗೆ ಗೊಂದಲ ಉಂಟು ಮಾಡಿದ್ದಾರೆ. ಇದನ್ನೂ ಓದಿ:ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
ಶಿಲ್ಪಾ ಶೆಟ್ಟಿ ಅವರ 12ನೇಕರ್ವಾ ಚೌತ್ ಇದಾಗಿದ್ದು, ಅವರು ಪ್ರತಿ ಸಲದಂತೆ ಈ ಸಲವೂ ಪತಿ ರಾಜ್ ಕುಂದ್ರಾಗಾಗಿ ಈ ವ್ರತವನ್ನು ಮಾಡಿದ್ದಾರೆ. ಆದರೆ ಈ ಸಲ ಅವರು ತಮ್ಮ ಫೋಟೋವನ್ನು ಮಾತ್ರ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಹಬ್ಬದ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!
ಪತಿಯ ದೀರ್ಘಾಯುವಿಗಾಗಿ ಇಡೀ ದಿನ ಉಪವಾಸ ಮಾಡಿ, ನಂತರ ಚಂದ್ರನ ದರ್ಶನ ಪಡೆದು, ಆಗಲೇ ಪತಿಯ ಮುಖ ನೋಡಿ, ಅವರ ಕೈಯಿಂದಲೇ ನೀರು ಕುಡಿದು ವ್ರತ ಪೂರ್ಣಗೊಳಿಸುತ್ತಾರೆ. ಈ ಸಲವೂ ವ್ರತ ಮಾಡಿರುವ ಶಿಲ್ಪಾ ಶೆಟ್ಟಿ, ಪತಿಯ ಜೊತೆ ಇದನ್ನು ಮಾಡಿದ್ದಾರೆಯೇ ಅನ್ನೋ ಅನುಮಾನ ಅವರು ಮಾಡಿರುವ ಪೋಸ್ಟ್ ನಿಂದ ಕಾಡಲಾರಂಭಿಸಿದೆ.