Tag: publictv

  • ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ: ರಾಹುಲ್ ಗಾಂಧಿ

    ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ: ರಾಹುಲ್ ಗಾಂಧಿ

    ಪಣಜಿ: ಇಂದು ಕೇರಳ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೋವಾಕ್ಕೆ ಭೇಟಿಕೊಟ್ಟು, ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಬರುವ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾದಲ್ಲಿ ಕಾಂಗ್ರೆಸ್ ಪ್ರಚಾರ ಶುರು ಮಾಡಿದೆ.

    ದಕ್ಷಿಣ ಗೋವಾದಲ್ಲಿ ಮೀನುಗಾರರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿ ಏಕತೆ ಮೂಡಿಸುವಲ್ಲಿ ಮತ್ತು ಎಲ್ಲರನ್ನೂ ಒಟ್ಟಾಗಿ ಮುಂದೆ ಕರೆದುಕೊಂಡು ಹೋಗುವಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಆದರೆ ಬಿಜೆಪಿ ಜನರ ಮಧ್ಯೆ ದ್ವೇಷ ಹುಟ್ಟಿಸುತ್ತಿದೆ. ಸಮುದಾಯಗಳನ್ನು ಇಬ್ಭಾಗ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪ್ರೀತಿಯನ್ನು ಪ್ರಸರಿಸುತ್ತದೆ ಎಂದು ಪಕ್ಷದ ಕುರಿತಾಗಿ ಹೇಳಿದ್ದಾರೆ.

    ನಾನು ಬಂದಿರುವುದು ಸಮಯ ವ್ಯರ್ಥ ಮಾಡಲು ಅಲ್ಲ. ನನ್ನ ಸಮಯ ಹಾಳು ಮಾಡಿಕೊಳ್ಳಲೂ ಇಲ್ಲಿಗೆ ಬಂದಿಲ್ಲ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೇವಲ ನಮ್ಮ ಬದ್ಧತೆಯಲ್ಲ. ನಿಶ್ಚಿತವಾಗಿಯೂ ನಡೆಸಿಕೊಡುತ್ತೇವೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನನಗೆ ತುಂಬ ಮುಖ್ಯ. ಉಳಿದ ನಾಯಕರಂತೆ ನಾನೂ ಸಹ ಇರಲು ಸಾಧ್ಯವಿಲ್ಲ. ನಾನೇನಾದರೂ ಹೇಳಿದ್ದೇನೆ ಅಂದರೆ ಅದನ್ನು ಮಾಡುತ್ತೇನೆ ಎಂದಿದ್ದಾರೆ.

    ಗೋವಾವವನ್ನು ಕಲ್ಲಿದ್ದಲು ಗಣಿಗಾರಿಕೆ ಹಬ್ ಮಾಡಲು ಅವಕಾಶ ಕೊಡುವುದಿಲ್ಲ. ಅದಕ್ಕೆ ನೀವು ಸಹಕರಿಸಬೇಕು. ನಾನೀಗ ಹೇಳಿದ್ದನ್ನು ಮಾಡುತ್ತೇನೆ. ಇಲ್ಲದೆ ಇದ್ದರೆ ನಾನು ಮುಂದೆ ಇನ್ನೊಮ್ಮೆ ಬರುವಷ್ಟರಲ್ಲಿ ನೀವೆಲ್ಲ ನನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುತ್ತೀರಿ. ಈ ಮೂಲಕ ನೈಋತ್ಯ ರೈಲ್ವೆ ಹಳಿಯನ್ನು ಡಬಲ್ ಮಾಡುವ ಯೋಜನೆಯನ್ನು ವಿರೋಧಿಸುತ್ತಿರುವ ಅಲ್ಲಿನ ಮೀನುಗಾರರಿಗೆ ಬೆಂಬಲಕ್ಕೆ ನೀಡುವ ಭರವಸೆಯನ್ನು ರಾಹುಲ್ ಗಾಂಧಿ ಕೊಟ್ಟಿದ್ದಾರೆ. ಈ ಯೋಜನೆಯನ್ನು ಮೀನುಗಾರರು ತೀವ್ರವಾಗಿ ವಿರೋಧಿಸುತ್ತಿದ್ದು, ಪ್ರಸ್ತುತ ಯೋಜನೆಯಿಂದ ಗೋವಾವನ್ನು ಕಲ್ಲಿದ್ದಲು ಹಬ್ ಆಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ ಎಮದು ಕಡಿಕಾರಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

  • ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

    ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

    ಪನೀತ್ ಅವರ ಮಗಳು ಧೃತಿ ಈಗಾಗಲೇ ದೆಹಲಿಯನ್ನು ತಲುಪಿದ್ದಾರೆ. ಅವರು ಬರಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. 5.30 ನಂತರ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ. ಯಾಕಂದರೆ ಜಾಗ ತುಂಬಾ ಕಿರಿದಾಗಿದ್ದು, ಕತ್ತಲಾದರೆ ಕಷ್ಟ ಸಾಧ್ಯ. ಹೀಗಾಗಿ ಪುನೀತ್ ಅವರ ಸಹೋದರ ಶಿವರಾಜ್‍ಕುಮಾರ್ ಅವರ ಬಳಿ ಹಾಗೂ ಕುಟುಂಬದ ಜೊತೆಗೆ ಚರ್ಚೆ ಮಾಡಿ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ. ನಾಳೆವರೆಗೂ ಅಭಿಮಾನಿಗಳಿಗೆ ಬರಲು ಅವಕಾಶ ನೀಡಲಾಗಿದೆ. ದಯವಿಟ್ಟು ನೀವು ಸಹಕರಿಸಿ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    PUNEET RAJKUMAR

    ಚಂದನವನದ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದು,  ನೆಚ್ಚಿನ ನಟ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳಿಗೆ ನಾಳೆವರೆಗೂ ಬರಲು ಅವಕಾಶ ನೀಡಲಾಗಿದೆ. ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಪುನೀತ್ ಪುತ್ರಿ ಧ್ರುತಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.15ಕ್ಕೆ ಆಗಮಿಸಲಿದ್ದಾರೆ. ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತವಲಯಕ್ಕಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

  • ತೆರೆದ ವಾಹನದಲ್ಲಿ ಅಪ್ಪು ಅಂತಿಮ ಯಾತ್ರೆ

    ತೆರೆದ ವಾಹನದಲ್ಲಿ ಅಪ್ಪು ಅಂತಿಮ ಯಾತ್ರೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ಅವರ ಅಂತಿಮ ದರ್ಶನವನ್ನು ತೆರೆದ ವಾಹನದಲ್ಲಿ ಮಾಡಲಾಗುತ್ತದೆ.

    ಕಂಠೀರವ ಸ್ಟೇಡಿಯಂ ನಿಂದ ಕಂಠೀರವ ಸ್ಟುಡಿಯೋವರೆಗೆ ಅಂತಿಮ ಯಾತ್ರೆ ನಡೆಯಲಿದೆ. 3-30 ಕ್ಕೆ ಕಂಠೀರವ ಸ್ಟೇಡಿಯಂ ನಿಂದ ಪಾರ್ಥಿವ ಶರೀರವನ್ನ ಕೊಂಡೊಯ್ಯಲಾಗುತ್ತದೆ. 5-30 ರ ಆಸುಪಾಸಿಗೆ ಕಂಠೀರವ ಸ್ಟೇಡಿಯಂಗೆ ಪಾರ್ಥಿವ ಶರೀರ ತಲುಪಲಿದೆ. ನಂತರ ಇಡೀಗ ಸುಮುದಾಯದ ವಿಧಿವಿಧಾನಗಳ ಮೂಲಕವಾಗಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ.

    ಈಗಾಗಲೇ ಯುವರತ್ನನನ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳು ಜಾಮಯಿಸುತ್ತಿದ್ದಾರೆ. ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗಾಲೇ ಟಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಹಲವು ನಟ, ನಟಿಯರು ಬಂದು ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಪುನೀತ್ ಅವರ ಮಗಳು ದೆಹಲಿಗೆ ಬಂದು ತಲುಪಿದ್ದಾರೆ. ಇನ್ನೇನು ಕೆಲವೇ ಗಂಟೆಯಲ್ಲಿ ಬೆಂಗಳೂರಿಗೆ ಬಂದು ತಲುಪಲಿದ್ದಾರೆ. ನಂತರ ಅಂತಿಮ ವಿಧಿ ವಿಧಾನ ನಡೆಯಲಿದೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

  • ಅಪ್ಪು ಅಗಲಿಕೆ ವಿಚಾರ ಸೋದರತ್ತೆಗೆ  ಗೊತ್ತೆ ಇಲ್ಲ

    ಅಪ್ಪು ಅಗಲಿಕೆ ವಿಚಾರ ಸೋದರತ್ತೆಗೆ ಗೊತ್ತೆ ಇಲ್ಲ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಡೀ ರಾಜ್ಯವೇ ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಿದ್ದೇವೆ ಎನ್ನುವಷ್ಟರ ಮಟ್ಟಿಗೆ ಕಂಬನಿ ಮಿಡಿದಿದೆ. ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಡಾ.ರಾಜ್‍ಕುಮಾರ್ ಹಿರಿಯ ಜೀವವೊಂದಕ್ಕೆ ಅಪ್ಪು ಅಗಲಿದ ವಿಚಾರವೇ ಗೊತ್ತಿಲ್ಲ.

    PUNEET RAJKUMAR

    ಆ ಹಿರಿಯ ಜೀವ ಬೇರೆ ಯಾರೂ ಅಲ್ಲ, ಡಾ.ರಾಜ್‍ಕುಮಾರ್ ಅವರ ತಂಗಿ, ಪುನೀತ್ ರಾಜ್‍ಕುಮಾರ್‍ಗೆ ಅತ್ಯಂತ ಪ್ರೀತಿಯ ಸೋದರತ್ತೆಯಾದ 90 ವರ್ಷದ ನಾಗಮ್ಮ. ಸೋದರತ್ತೆ ಎಂದರೆ ಅಪ್ಪುವಿಗೆ ಎಲ್ಲಿಲ್ಲದ ಪ್ರೀತಿ. ಹಾಗೆಯೇ ಡಾ.ರಾಜ್‍ಕುಮಾರ್ ಅವರ ಕಿರಿಯ ಪುತ್ರ ಎಂಬ ಕಾರಣಕ್ಕೆ ಪುನೀತ್ ಅವರನ್ನು ಕಂಡರೆ ನಾಗಮ್ಮ ಅವರಿಗೂ ತುಂಬಾ ವಾತ್ಸಲ್ಯ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ತಮಿಳುನಾಡಿನಲ್ಲಿರುವ ಗಾಜನೂರಿನ ಮನೆಗೆ ಹೋಗುತ್ತಿದ್ದುದೇ ತನ್ನ ಪ್ರೀತಿಯ ಸೋದರತ್ತೆ ನಾಗಮ್ಮ ಅವರನ್ನು ನೋಡಲು. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಇಂತಹ ಸೋದರತ್ತೆಗೆ ಈಗ ಪುನೀತ್ ರಾಜ್‍ಕುಮಾರ್ ನಿಧನ ಹೊಂದಿರುವ ವಿಚಾರವೇ ಗೊತ್ತಿಲ್ಲ. ಸಧ್ಯಕ್ಕೆ ಡಾ.ರಾಜ್ ಕುಟುಂಬದ ಅತ್ಯಂತ ಹಿರಿಯ ಜೀವ ಎನಿಸಿರುವ ನಾಗಮ್ಮ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒಂದು ವೇಳೆ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದರೆ ಆಘಾತವಾಗುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಅವರಿಗೆ ವಿಷಯ ತಿಳಿಯದಂತೆ ಗೌಪ್ಯತೆ ಕಾಪಾಡಲಾಗಿದೆ. ನಾಗಮ್ಮ ಅವರ ಪುತ್ರ ಗೋಪಾಲ್ ತಮ್ಮ ಹೆಂಡತಿ ಹಾಗೂ ಮಗಳನ್ನು ಕರೆದುಕೊಂಡು ನಿನ್ನೆಯೇ ಬೆಂಗಳೂರಿಗೆ ಹೋಗಿದ್ದಾರೆ. ಗಾಜನೂರಿನ ಮನೆಯಲ್ಲಿ ನೀರವ ಮೌನ ಆವರಿಸಿದೆ. ನಾಗಮ್ಮ ಅವರನ್ನು ಸಹಾಯಕಿಯರು ಉಪಚರಿಸುತ್ತಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

  • ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    ಬೆಂಗಳೂರು: ಕನ್ನಡ ಚಿತ್ರರಂಗದ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಕಂಠೀರವ ಸ್ಟೇಡಿಯಂಗೆ ಜನಸಾಗರವೇ ಹರಿದು ಬರುತ್ತಿದೆ.

    ಪುನೀತ್ ರಾಜ್‍ಕುಮಾರ್ ಅವರ ಪಾರ್ಥವ ಶರೀರವನ್ನು ನೋಡುತ್ತಿದ್ದಂತೆ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದಾರೆ ಹಾಗೂ ರಾಜ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಇತ್ತ ಬಾಲಿವುಡ್ ನಟ ಪ್ರಭುದೇವ್ ಅವರು ಕೂಡ ಇಂದು ಬೆಂಗಳೂರಿಗೆ ಆಗಮಿಸಿ ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದದು ದುಃಖಿತರಾಗಿದ್ದಾರೆ. ಮಧ್ಯರಾತ್ರಿಯಿಂದಲೂ ಅಪ್ಪು ಅಭಿಮಾನಿಗಳ ಸಾಗರ ಕರಗಿಲ್ಲ. ಅಭಿಮಾನಿಗಳ ಜೊತೆ ಸೆಲೆಟಬ್ರಿಗಳು ಕೂಡ ನೆಚ್ಚಿನ ನಟನ ಅಂತಿಮ ದರ್ಶನ ಪಡೆದು ಕಣ್ಣೀರಾಗುತ್ತಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಈಗಾಗಲೇ ಅಪ್ಪು ಮೊದಲ ಮಗಳು ಅಮೆರಿಕಾದಿಂದ ಹೊರಟಿದ್ದು, ಸಂಜೆಯ ವೇಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ನಟನ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಅಭಿಮಾನಿಗಳಿಗೆ ಇಂದು ಮಧ್ಯಾಹ್ನ 3 ಗಂಟೆಯವರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಹೀಗಾಗಿ ಕುಟುಂಬಸ್ಥರು 3 ಗಂಟೆಯ ಬಳಿಕ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬರದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಪುನೀತ್ ಪುತ್ರಿ ಧ್ರುತಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.15ಕ್ಕೆ ಆಗಮಿಸಲಿದ್ದಾರೆ. ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತವಲಯಕ್ಕಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

     

    ಪುನೀತ್ ಒಬ್ಬ ಒಳ್ಳೆ ಮನುಷ್ಯನಾಗಿದ್ದರು. ಅವರ ಅಗಲಿಕೆ ಆತಂಕವನ್ನುಂಟು ಮಾಡಿದೆ. ಅವರು ನನ್ನ ಸಂಬಂಧ ಅಣ್ಣ, ತಮ್ಮನ ಸಂಬಂಧವಾಗಿದೆ. ಒಂದೇ ತಾಯಿ ಮಕ್ಕಳಂತೆ ಇದ್ದೆವು. ಸಹೋದರಂತೆ ಬದುಕಿದ್ದೇವು. ನನ್ನ ಸಹೋದರ ಸಾವು ನನಗೆ ಆಘಾತವನ್ನುಂಟು ಮಾಡಿದೆ. ದೇವರು ಅನ್ಯಾಯವನ್ನು ಮಾಡಿದ್ದಾನೆ. ಅವರು ಅನಾಥಾಶ್ರಮ, ಶಾಲೆ ನಿರ್ಮಾಣ ಮಾಡಿ ಸಾಮಾಜಿ ಕಾರ್ಯವನ್ನು ಬದುಕಿದ್ದಾಗ ಮಾಡಿದ್ದಾರೆ. ಅವರ ನಿಧನದ ನಂತ್ರ ಅವರು ಕಣ್ಣನ್ನು ಧಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ಹೇಳುತ್ತಾ ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

  • ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ: ರಾಮ್ ಗೋಪಾಲ್ ವರ್ಮಾ

    ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ: ರಾಮ್ ಗೋಪಾಲ್ ವರ್ಮಾ

    – ಸಾವಿಗೆ ತಾರತಮ್ಯ ಇಲ್ಲ, ಯಾರನ್ನು ಬೇಕಾದರೂ ಕೊಲ್ಲುತ್ತದೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬೆಟ್ಟದ ಹೂ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳ ಬಳಗ ಕಂಬನಿ ಮಿಡಿಯುತ್ತಿದ್ದಾರೆ. ಇದೇ ವಿಚಾರವಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿ ಕೆಲವು ವಿಚಾರವನ್ನು ಹಂಚಿಕೊಂಡಿದ್ದಾರೆ.

    ರೆಗ್ಯೂಲರ್ ವರ್ಕೌಟ್ ಜೊತೆಗೆ ಆರೋಗ್ಯಕರ ಅಭ್ಯಾಸ ಇಟ್ಟುಕೊಳ್ಳುವುದು ಹಾಗೂ ಸಡನ್ ಸಾವು ಸಂಭವಿಸುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬ ಕಟು ಸತ್ಯವು ಪುನೀತ್ ಅವರ ದುರಂತ ನಿಧನದಿಂದ ಬಯಲಾಗಿದೆ. ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಬೇಕು ಎಂದು ಬರೆದುಕೊಂಡು ವರ್ಮಾ ಟ್ವೀಟ್ ಮಾಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಸಾವು ಈಗಲೂ ಒಂದು ಕೆಟ್ಟ ಕನಸಿನಂತೆ ಅನಿಸುತ್ತಿದೆ. ಅವರ ಆಪ್ತರ ಪರಿಸ್ಥಿತಿ ಏನಾಗಿರಬಹುದು ಅಂತ ಊಹಿಸಲೂ ಸಾಧ್ಯವಾಗುತ್ತಿಲ್ಲ. ಸಾವಿಗೆ ತಾರತಮ್ಯ ಇಲ್ಲ. ಅದು ಯಾರನ್ನು ಬೇಕಾದರೂ ಕೊಲ್ಲುತ್ತದೆ. ನಮ್ಮಲ್ಲಿ ಯಾರಾದರೂ ಯಾವಾಗ ಬೇಕಿದ್ದರೂ ಸಾಯಬಹುದು ಎಂಬುದು ಭಯಾನಕ ಸತ್ಯ. ಬದುಕಿರುವಾಗಲೇ ಫಾಸ್ಟ್ ಫಾರ್ವರ್ಡ್ ಮೋಡ್‍ನಲ್ಲಿ ಜೀವಿಸಬೇಕು ಎಂದು ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಫಿಟ್ನೆಸ್ ಕಾಪಾಡಿಕೊಂಡಿರುವವರಿಗೆ ಈ ರೀತಿ ಸಾವು ಸಂಭವಿಸುವುದಿಲ್ಲ ಎಂದು ಅನೇಕರು ಹೇಳುವುದುಂಟು. ಆದರೆ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಆ ಮಾತನ್ನು ನಂಬಲಾಗುತ್ತಿಲ್ಲ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಬಿಗ್‍ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಇದೇ ರೀತಿ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದು ಈಗ ನೆನಪಾಗುತ್ತಿದೆ. ಇಂದು ಸಂಜೆ ಕಂಠೀರವ ಸೇಡಿಯಂನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ತಿಯೆ ನಡೆಯಲಿದೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

  • ಚೆನ್ನೈನಲ್ಲಿ ಹುಟ್ಟಿ ಕನ್ನಡನಾಡಲ್ಲಿ ಬೆಳೆದ ಪವರ್ ಸ್ಟಾರ್ ಲೈಫ್ ಜರ್ನಿ ಇಲ್ಲಿದೆ

    ಚೆನ್ನೈನಲ್ಲಿ ಹುಟ್ಟಿ ಕನ್ನಡನಾಡಲ್ಲಿ ಬೆಳೆದ ಪವರ್ ಸ್ಟಾರ್ ಲೈಫ್ ಜರ್ನಿ ಇಲ್ಲಿದೆ

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ಸ್ಯಾಂಡಲ್‍ವುಡ್ ಆಳಿದ ‘ಯುವರತ್ನ’ ಅವರ ಹಿನ್ನೆಲೆಯನ್ನು ಒಮ್ಮೆ ಹಿಂದಿರುಗಿ ನೋಡುವುದಾದರೆ ಅವರ ಸಾಧನೆ ಅಪಾರವಾಗಿದೆ.

    ಜನನ: 1975 ಮಾರ್ಚ್ 17ರಂದು ಸೋಮವಾರ ಚೆನ್ನೈನಲ್ಲಿ ಹುಟ್ಟಿದ ಪುನೀತ್ ರಾಜ್‍ಕುಮಾರ್ ಅವರು ಬಾಲ್ಯವನ್ನು ಅಲ್ಲಿಯೇ ಕಳೆದರು. ಅವರ ಮೂಲ ಹೆಸರು ಲೋಹಿತ್, ಬಾಲನಟನಾಗಿ ಲೋಹಿತ್ ಎಂದೇ ಹೆಸರಾಗಿದ್ದ ಅಪ್ಪು, ನಂತರ ಹೀರೋ ಆಗಿ ನಟಿಸುವ ಹೊತ್ತಿಗೆ ಪುನೀತ್ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡರು. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಬಾಲ್ಯ: ಆತ್ಮೀಯರಿಗೆ ಅಪ್ಪು, ಅಭಿಮಾನಿಗಳಿಗೆ ಪವರ್‍ಸ್ಟಾರ್, ಚಿತ್ರರಂಗದ ಮಂದಿಗೆ ರಾಜಕುಮಾರ,ಪುನೀತ್ ಬಹುಮುಖ ಪ್ರತಿಭೆಯಾಗಿದ್ದರು. ಬಾಲನಟ, ಗಾಯಕ, ಟೆಲಿವಿಷನ್ ನಿರೂಪಕ, ನಿರ್ಮಾಪಕ, ಹಂಚಿಕೆದಾರ, ಉದ್ಯಮಿ ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ಕನ್ನಡ ನಾಡು ಕಂಡ ಮೇರುನಟ ರಾಜ್‍ಕುಮಾರ್ ಮಗನಾದ ಪುನೀತ್, ಥೇಟ್ ರಾಜಕುವರನಂತೆಯೇ ಬೇಳೆದರು. ಅಮ್ಮನ ಅಕ್ಕರೆ, ತಂದೆಯ ವಾತ್ಸಲ್ಯ ಮತ್ತು ಸಹೋದರ, ಸಹೋದರಿಯರ ಪ್ರೀತಿಯನ್ನು ಉಂಡು ಬೇಳೆದ ಅಪ್ಪು ಆರು ವರ್ಷವರಿದ್ದಾಗಲೇ ಕರ್ನಾಟಕಕ್ಕೆ ಬಂದರು. ಹೀಗಾಗಿ ಪುನೀತ್ ತಮಿಳು ಮತ್ತು ಕನ್ನಡ ಎರಡನ್ನೂ ಲೀಲಾಜಾಲವಾಗಿ ಮಾತನಾಡುತ್ತಿದ್ದರು.

    ಸಿನಿಪಯಣ: ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಢಿಮೆ ಮೆರೆದರು. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ, ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ, ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ


    ನಾಯಕನಟ: 2002 ರಲ್ಲಿ ತೆರೆಕಂಡ ಪುರಿ ಅಪ್ಪು ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತ್ತು. ನಂತರ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆಯ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು. ಆಗ ಪಪು ಅವರ ಲಕ್ ಬದಲಾಯಿತು. ನಂತರ ಅಪ್ಪು ನಟನೆ ಮಾಡಿದ ಪ್ರತಿಯೊಂದು ಸಿನಿಮಾ ಕೂಡ ಒಳ್ಳೆಯ ಪ್ರದರ್ಶನ ಕಂಡವು.

    ವೈವಾಹಿಕ ಜೀವನ: 1999 ಡಿಸೆಂಬರ್ 1ರಂದು ಚಿಕ್ಕಮಂಗಳೂರಿನ ಅಶ್ವನಿ ರೇವಂತ್ ಅವರನ್ನು ಪ್ರೀತಿಸಿ ವಿವಾಹ ಆದರು. ಆರಂಭದಲ್ಲಿ ಇಬ್ಬರೂ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಇವರಿಗೆ ಧೃತಿ ಹಾಗೂ ವಂದಿತಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ನಟನೆ, ಸಿನಿಮಾ, ನಿರ್ಮಾಣವೆಂದು ಎಷ್ಟು ಬ್ಯುಸಿ ಇದ್ದರು ಕುಟುಂಬಕ್ಕಾಗಿ ಸಮಯವನ್ನು ಮೀಸಲು ಇಡುತ್ತಿದ್ದರು. ಕುಟುಂಬದ ಜೊತೆಗೆ ವಿದೇಶ ಪ್ರವಾಸ ಹೋಗುತ್ತಾ ಸಮಯವನ್ನು ಕಳೆಯುತ್ತಿದ್ದರು. ಪವರ್ ಸ್ಟಾರ್ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಆಗಿದ್ದರು.

    ಗಾಯಕ: ಗಾಯಕನಾಗಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್, ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮಿಯರ್ ಫುಟ್‍ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು ಎಲ್‍ಇಡಿ ಬಲ್ಬ್‍ಗಳ ರಾಯಭಾರಿ. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು. ಇದನ್ನೂ ಓದಿ: ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ

    ನಿರೂಪಕ, ನಿರ್ಮಾಪಕ: ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಧಿಪತಿಯ ಎರಡು ಸೀಸನ್‍ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿದೆ. ಕವಲುದಾರಿ, ಮಯಾಬಜಾರ್ ಸಿನಿಮಾವನ್ನು ತಮ್ಮ ಹೋಮ್ ಬ್ಯಾನರ್‍ನಲ್ಲಿಯೇ ನಿರ್ಮಿಸಿದ್ದಾರೆ. ಪುನೀತ್ ತಮ್ಮ ಪ್ರೋಡಕ್ಷನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ ಪಿ.ಅರ್.ಕೆ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಕೊನೆಯದಾಗಿ ವಿಶೇಷ ಪೋಸ್ಟ್ ಮಾಡಿದ್ದ ಅಪ್ಪು

    ಪ್ರಶಸ್ತಿ: ಬಾಲನಟನಾಗಿದ್ದಾಗ ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್, ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ.

  • ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    – ಬಿಕ್ಕಿ ಬಿಕ್ಕಿ ಅತ್ತ ಎರಡನೇ ಮಗಳು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿರುವ ಅಭಿಮಾನಿಗಳು, ಸ್ಯಾಂಡಲ್‍ವುಡ್ ಸೇರಿದಂತೆ ಇಡೀ ಕುಟುಂಬವೇ ಕಣ್ಣೀರಿಡುತ್ತಿದೆ.

    ಅಪ್ಪು ಅವರ ಸದಾಶಿವನಗದರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ದೊಡ್ಮನೆಯ ಕಿರಿಯ ಪುತ್ರ ಇನ್ನಿಲ್ಲ ಎನ್ನುವ ಆಘಾತದ ಸುದ್ದಿ ಬರುತ್ತಲೇ ಪುನೀತ್ ರಾಜ್‍ಕುಮಾರ್ ಅವರ ಇಡೀ ಕುಟುಂಬ ಕಣ್ಣೀರ ಮಡುವಿನಲ್ಲಿ ಮುಳುಗಿದೆ. ಪುನೀತ್ ಅವರ ನಿವಾಸ, ಕಂಠೀರವ ಸ್ಟೇಡಿಯಂ ಮುಂದೆ ಅಪ್ಪು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

    ಜಿಮ್ ಮಾಡುವ ವೇಳೆ ಸುಸ್ತಾಗಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬ, ವೈದ್ಯರ ಸಲಹೆ ಮೇರೆಗೆ ನಿನ್ನೆ 11 ಗಂಟೆಯ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ವಿಧಿ ತನ್ನ ಆಟ ಮುಗಿಸಿತ್ತು. ಪುನೀತ್ ಇನ್ನಿಲ್ಲ ಎನ್ನವ ಸುದ್ದಿ ಬರುತ್ತಲೇ ಇಡಿ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಪತಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಅಶ್ವಿನಿ ಕಣ್ಣೀರುಡುತ್ತಲೇ ಮೌನಕ್ಕೆ ಶರಣಾಗಿದ್ದಾರೆ. ಇತ್ತ ಮಗಳು ಕೂಡ ಬಿಕ್ಕಿಬಿಕ್ಕಿ ಅಳುತ್ತಿದ್ದು, ಹಿರಿಯ ಮಗಳು ಧೃತಿ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇದೀಗ ಅಂತ್ಯಕ್ರಿಯೆ ನಡೆಸಲು ಇವರ ಬರುವಿಕೆಗಾಗಿ ಕಾಯುತ್ತಿದ್ದಾರೆ.  ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಪುನೀತ್ ಅವರ ನಿಧನದ ಸುದ್ದಿ ತಿಳಿದ ಸ್ನೇಹಿತರು, ಚಿತ್ರರಂಗದ ಕಲಾವಿದರು, ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದರು. ಇಂದು ಪುನೀತ್ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆಂದು ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗಿದೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತದ್ದು, ರಾಜ್ಯದ ಮೂಲೇ ಮೂಲೆಗಳಿಂದ ಅಭಿಮಾನಿ ಬರುತ್ತಿದ್ದಾರೆ. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

  • ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ನಂತ್ರ ಅವರ ಅಭಿಮಾನಿಗಳು, ಕಲಾವಿದರು, ಗಣ್ಯರು ಕಂಬನಿ ಮೀಡಿಯುತ್ತಿದ್ದಾರೆ. ನಟಿ ಶ್ರುತಿ ಮತ್ತು ಸುಧಾರಾಣಿ ಅವರು ಅಪ್ಪು ಅವರ ಕುರಿತಾಗಿ ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕವಾಗಿ ಅಪ್ಪು ಇನ್ನಿಲ್ಲ ಎನ್ನುವ ದುಃಖವನ್ನು ವ್ಯಕ್ತಪಡಿಸಿದ್ದಾರೆ.

    ನಟಿ ಸುಧಾರಾಣಿಯವರು ಅಪ್ಪು ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಚಾರಗಳನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯವಾಗಿದೆ. ಚಿಕ್ಕವರಾಗಿದ್ದಾಗ ಸ್ಟುಡಿಯೋ ಹೊರಗಡೆ ಕುಳಿತು ಆಟ ಆಡುತ್ತಾ ಇದ್ದಿದ್ದು, ಶಾಟ್ ಮುಗಿದ ಮೇಲೆ Chocolateನ ಹಂಚಿಕೊಂಡು ತಿನ್ನುತ್ತಾ ಇದ್ದಿದ್ದು, ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ನನ್ನನ್ನ  Ma’am  ಅಂತ ಕೂಗಿದ್ರೆ ನನಗೆ ಕೋಪ ಬರುತ್ತೆ ಅಪ್ಪು ಅಂತ ಅಂದರೂನು ಪ್ರೀತಿಯಿಂದ ನನ್ನ ಛೇಡಿಸೋದಕ್ಕೆ ಹಾಗೆ ಕರೆದು ನಗುತ್ತಾ ಇದ್ದ ಆ ನಗುಮುಖ ಇನ್ನೊಂದ್ಸಲ ನೋಡುವುದಕ್ಕೆ ಸಿಗುವುದಿಲ್ಲ. ಈ ಸತ್ಯಾನ ನಂಬೋದಕ್ಕೆ ಆಗ್ತಾ ಇಲ್ಲ. ಯಾಕ್ ಅಪ್ಪು, ಇಷ್ಟು ಬೇಗ ನಾವೆಲ್ಲರು ಬೇಡವಾಗಿ ಹೋದ್ವಾ? ಹೇಳೋದಕ್ಕೆ ಬೇಕಾದಷ್ಟಿದೆ, ಆದರೆ ಈ ರೀತಿ ಭೂತಕಾಲದಲ್ಲಿ ನಿಮ್ ಬಗ್ಗೆ ಮಾತಾಡೋದಕ್ಕೆ ಇಷ್ಟ ಇಲ್ಲ. ನಿಮ್ಮ ನಗು, ಬದುಕಿನ ಬಗ್ಗೆ ನಿಮಗಿದ್ದ ಪ್ರೀತಿ, ಸಿನಿಮಾಗಳ ಮೂಲಕ ನೀವು ಸದಾ ಅಮರ. ಮತ್ತೊಮ್ಮೆ ಕರ್ನಾಟಕದ ಮಣ್ಣಿನ ಮಗನಾಗಿ ಹುಟ್ಟಿ ಬನ್ನಿ ಅಪ್ಪು ಎಂದು ಅಪ್ಪು ಜೊತೆಗೆ ಕಳೆದ ದಿನವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

     

    View this post on Instagram

     

    A post shared by Sudharani (@sudharanigovardhan)

    ಎದೆಯಲ್ಲಿರುವ ದುಃಖವನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲಾ: ಶ್ರುತಿ
    ಕೆಲವು ಘಟನೆಗಳೇ ಹಾಗೆ, ಘಟಿಸಿದ್ದು ಒಂದು ಕ್ಷಣವೇ ಆದರೂ, ಉಸಿರಿರುವವರೆಗೆ ಅಚ್ಚುಳಿದು ಬಿಡುತ್ತದೆ. ಅಪ್ಪು ಅಂದು ನೀವಾಡಿದ ಮಾತು, ನಮ್ಮಿಬ್ಬರ ಚಿತ್ರದ ಬಗ್ಗೆ ನೀವು ಕಂಡ ಕನಸು, ನನ್ನ ಅಭಿನಯದ ಬಗ್ಗೆ ನೀವಾಡಿದ ಮೆಚ್ಚುಗೆಯ ಮಾತು, ಊಟಕ್ಕೆ ಮನೆಗೆ ಬನ್ನಿ ಎಂದು ಕರೆದ ಆತ್ಮೀಯತೆ, ಅದೆಲ್ಲವೂ ಇಷ್ಟು ಬೇಗ ಕೇವಲ ನೆನಪಾಗಿ ಹೋಯಿತೇ? ಎದೆಯಲ್ಲಿರುವ ದುಃಖವನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲಾ, RIP ಎಂದು ಹೇಳಲಾರೆ RETURN IF POSSIBLE ಎಂದಷ್ಟೇ ಪ್ರಾರ್ಥಿಸಬಲ್ಲೆ ಎಂದು ನಟಿ ಶ್ರುತಿ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಅಪ್ಪು ದೂರವಾಗಿರುವ ನೋವನ್ನು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

     

    View this post on Instagram

     

    A post shared by Shruthi (@shruthi__krishnaa)

    ಸ್ಯಾಂಡ್‍ವುಡ್‍ನ ಅನೇಕ ಹಿರಿಯ ಕಿರಿಯ ಕಲಾವಿದರು ಅಪ್ಪು ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಮೌನರೋದನೆ ವ್ಯಕ್ತಪಡಿಸಿದ್ದಾರೆ.

  • ಪ್ರೀತಿಯ ಅಪ್ಪುಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ತಂದ ಅಭಿಮಾನಿ

    ಪ್ರೀತಿಯ ಅಪ್ಪುಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ತಂದ ಅಭಿಮಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯೊಬ್ಬರು ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ಬದುಕಿದ್ದಾಗ ಕೊಡಲಾಗಲಿಲ್ಲ, ಈಗ ತೆಗೆದುಕೊಂಡು ಬಂದಿದ್ದೇನೆ ಎಂದು ಅಭಿಮಾನವನ್ನು ತೋರಿಸಿದ್ದಾರೆ.

    PUNEET RAJKUMAR

    ಯಲಹಂಕದಿಂದ ಬಂದಿರುವ ಅಭಿಮಾನಿ, ಪುನೀತ್ ಅವರ ಅಂಗ ರಕ್ಷಕ ಚಿಕ್ಕಣ್ಣಗೆ ಆನಂದ್ ಪರಿಚಯಸ್ಥರಾಗಿದ್ದಾರೆ. ಇವರಿಗೆ ಪುನೀತ್ ಅವರನ್ನು ಭೇಟಿಯಾಗುವ ಆಸೆ ಇತ್ತು. ಅದು ಈಡೇರಿರಲಿಲ್ಲ. ಹೀಗಾಗಿ ಅವರ ಸಾವಿನ ಸುದ್ದಿ ಕೇಳಿ ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ತಂದಿದ್ದರು. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

    PUNEET

    ಆನಂದ್ ಫ್ರೈಡ್ ರೈಸ್, ಗೋಬಿ ವ್ಯಾಪಾರಿಯಾಗಿದ್ದಾರೆ. ಚಿಕ್ಕಣ್ಣನಿಗೆ, ಆನಂದ್ ಕೇಳಿದ್ದರು ಪುನೀತ್ ರನ್ನ ಪರಿಚಯ ಮಾಡಿಸಬೇಕು ಎಂದು. ಪುನೀತ್‍ಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ಇಷ್ಟ ಅಂದಿದ್ದರು. ಬದುಕಿದ್ದಾಗ ಕೊಡಲಾಗಾಲಿಲ್ಲ. ಈಗ ತೆಗದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾ ಆನಂದ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಜನ ಮೆಚ್ಚುವ ಸಿನಿಮಾ ಹಾಗೂ ಯುವಕರಿಗೆ ಅಡ್ವೈಸ್ ಮಾಡುವಂತಹಾ ಸಿನಿಮಾ ಮಾಡಬೇಕು ಎಂಬುದು ಪುನೀತ್ ರಾಜ್‍ಕುಮಾರ್ ಅವರ ಕನಸಾಗಿತ್ತು. ಅವರಿಗೆ ಚಿಕ್ಕಮಗಳೂರಿನ ನೇಚರ್, ಕಾಫಿ ಎಂದರೆ ತುಂಬಾ ಇಷ್ಟ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ಭರತ್ ಪಬ್ಲಿಕ್ ಟಿವಿ ಜೊತೆ ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿದ್ದಾರೆ.