Tag: publictv

  • ಮಿಸ್ ಕೇರಳ ಸುಂದರಿಯರ ದುರಂತ ಅಂತ್ಯ

    ಮಿಸ್ ಕೇರಳ ಸುಂದರಿಯರ ದುರಂತ ಅಂತ್ಯ

    ತಿರುವನಂತಪುರಂ: ಕಾರು ಅಪಘಾತದಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಮೃತಪಟ್ಟಿದ್ದಾರೆ.

    ಮಾಜಿ ಮಿಸ್ ಕೇರಳ(Former Miss Kerala) ವಿಜೇತೆ ಆನ್ಸಿ ಕಬೀರ್(WinnerAnsi Kabeer), ರನ್ನರ್ ಅಪ್ ಅಂಜನಾ ಶಾಜನ್(Runner-up Anjana Shajan) ಮೃತರಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್‍ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಮಾಡೆಲಿಂಗ್ ಫೋಟೋ ಸೆಷನ್‍ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‌ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು ಮತ್ತು ತ್ರಿಶೂರ್‌ಗೆ  ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ರಜನಿಕಾಂತ್ ಡಿಸ್ಚಾರ್ಜ್ – ಮನೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ

    ಮಾಡೆಲಿಂಗ್ ಫೋಟೋ ಸೆಷನ್‍ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‍ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು. ಫೋಟೋಶೂಟ್ ಮುಗಿಸಿ ಮತ್ತೆ ತ್ರಿಶೂರ್‍ಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚಕ್ಕರಪರಂಬು ಜಂಕ್ಷನಲ್ಲಿ ಈ ಹಿಂದೆಯೂ ಹೆಚ್ಚು ಅಪಘಾತಗಳು ನಡೆದಿವೆ. ತಡರಾತ್ರಿ ಬೈಕ್ ಅಡ್ಡ ಬಂದ ಕಾರಣ, ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಬೈಕ್ ಸವಾರ ಮಾತ್ರ ಸಣ್ಣ ಪುಟ್ಟ ಗಾಯಗೊಂದಿಗೆ ಪಾವಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಆನ್ಸಿ ಮತ್ತು ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರನ್ನ ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಆದರೆ ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

    ಈ ದುರ್ಘಟನೆಗೆ ಮುನ್ನ ಆನ್ಸಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಾಕಿದ್ದಾರೆ. ಸಾವಿಗೆ ಕೊನೆಯ ಪಯಣಕ್ಕೂ ಮುನ್ನ ಮಾಜಿ ಸುಂದರಿ ಕೇರಳದ ಆನ್ಸಿ ಕಬೀರ್ ಅವರ ಮಾತು ಕೇಳಿ ಅಭಿಮಾನಿಗಳು ಮತ್ತು ಸ್ನೇಹಿತರು ಶಾಕ್ ಆಗಿದ್ದಾರೆ. ಇದು ಹೋಗಲು ಸಮಯ ಎಂದು ಆನ್ಸಿ ಕಬೀರ್ ಫೋಟೋವೊಂದರ ಜತೆ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದರು. ಆದರೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇವರು ಪ್ರಯಾಣಿಸುತ್ತಿದ್ದ ಕಾರು ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಇವರಿಬ್ಬರು ಒಳ್ಳೆಯ ಸ್ನೇಹಿತರು ಆಗಿದ್ದರು. ಯಾವುದೇ ಫೋಟೋಶೂಟ್‍ಗೆ ಹೋದರೂ ಒಟ್ಟಿಗೆಯಾಗಿ ಹೋಗುತ್ತಿದ್ದರಂತೆ. ಈಗ ಸಾವಿನಲ್ಲೂ ಈ ಮಾಡೆಲ್‍ಗಳಿಬ್ಬರು ಜೊತೆಯಾಗಿ ಇಹಲೋಕ ತ್ಯಜಿಸಿದ್ದಾರೆ.

  • ಹೊಳೆಗೆ ಬಿದ್ದ ಮಗನ ರಕ್ಷಣೆ ಮಾಡಲು ಹೋದ ತಾಯಿ ಸಾವು

    ಹೊಳೆಗೆ ಬಿದ್ದ ಮಗನ ರಕ್ಷಣೆ ಮಾಡಲು ಹೋದ ತಾಯಿ ಸಾವು

    ಮಡಿಕೇರಿ: ಹೊಳೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿರುವ ತಾಯಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು, ಸಾವನ್ನಪಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ರೇವತಿ(32), ಕಾರ್ಯಪ್ಪ (12)ಮೃತರಾಗಿದ್ದಾರೆ. ಜಾನುವಾರುಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋದ ಬಾಲಕನೋರ್ವ ಅಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು, ರಕ್ಷಣೆಗಾಗಿ ಮೊರೆ ಇಟ್ಟ ಪರಿಣಾಮ ಮನೆ ಕೆರೆಯ ಸಮೀಪ ಇದ್ದ ತಾಯಿ ಮಗನನ್ನು ರಕ್ಷಣೆ ಮಾಡಲು ಮುಂದಾಗಿ ತಾಯಿ ಮಗ ಇಬ್ಬರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ.

    ನಿನ್ನೆ ಕಾರ್ಯಪ್ಪ ಮನೆಯಲ್ಲಿ ಇದ್ದ ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸಿ ಬಳಿಕ ಮನೆಗೆ ಸಮೀಪ ಇರುವ ಕರೆಗೆ ನೀರು ಕುಡಿಸಲು ಮುಂದಾಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಕಾರ್ಯಪ್ಪ ರಕ್ಷಣೆ ಮಾಡುವಂತೆ ಕೂಗಿದ್ದಾನೆ. ಮಗನ ಕಿರುಚಾಟ ಕೇಳಿ ಕೆರೆ ಬಳಿ ಬಂದ ಕಾರ್ಯಪ್ಪ ತಾಯಿ ರೇವತಿ ಮಗನ ರಕ್ಷಣೆ ಮುಂದಾಗಿದ್ದಾರೆ. ಅದರೆ ಕೆರೆಯಲ್ಲಿ ಹೆಚ್ಚು ಕೆಸರು ಇದ್ದ ಪರಿಣಾಮ ಕೆರೆಯಿಂದ ಹೊರ ಬರಲಾಗದೆ ತಾಯಿ ಮಗ ಇಬ್ಬರು ಕೆರೆಯಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರತ್ನನ್ ಪ್ರಪಂಚ ನೋಡಿ ಕರೆ ಮಾಡಿದ್ರು: ಡಾಲಿ ಧನಂಜಯ್

    ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೋನ್ನಂಪೇಟೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತ ತಾಯಿ ಮಗನ ಮೃತ ದೇಹ ಸಿಕ್ಕಿದೆ. ವರ್ಷದ ಹಿಂದಷ್ಟೇ ಅನಾರೋಗ್ಯದಿಂದ ರೇವತಿಯವರ ಪತಿ ಮೃತಪಟ್ಟಿದ್ದು, ಮನೆಯಲ್ಲಿ ಯಾರು ಇಲ್ಲದೇ ಇರುವುದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೋನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಅಗಿದೆ.

  • ಭೀಕರ ಅಪಘಾತ-11 ಮಂದಿ ಸಾವು, ನಾಲ್ವರಿಗೆ ಗಾಯ

    ಭೀಕರ ಅಪಘಾತ-11 ಮಂದಿ ಸಾವು, ನಾಲ್ವರಿಗೆ ಗಾಯ

    ಡೆಹ್ರಾಡೂನ್ : ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ  ಡೆಹ್ರಾಡೂನ್ನ  ಚಕ್ರತಾ ತಹಸಿಲ್‍ನಲ್ಲಿ ನಡೆದಿದೆ.

    ಪ್ರಯಾಣಿಕರು ಸಾಗುತ್ತಿದ್ದ ವಾಹನವು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸಾವು ನೋವು ಸಂಭವಿಸಿದೆ. 11 ಮಂದಿ ಮೃತಪಟ್ಟಿದ್ದು, 4 ಜನಗಾಯಗೊಂಡಿದ್ದಾರೆ. ರಾಜಧಾನಿ ಡೆಹ್ರಾಡೂನ್‍ನಿಂದ ಸುಮಾರು 170ಕಿ.ಮೀ ದೂರದ ಗ್ರಾಮೀಣ ಭಾಗಲ್ಲಿ ಈ ಅಪಘಾತವಾಗಿದ್ದು, ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    ಸ್ಥಳಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳ ಜೊತೆ ಧಾವಿಸಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇದನ್ನೂ ಓದಿ:  ಇಬ್ಬರ ಬಾಳಿಗೆ ಬೆಳಕಾದ ಅಪ್ಪು

  • ಇಬ್ಬರ ಬಾಳಿಗೆ ಬೆಳಕಾದ ಅಪ್ಪು

    ಇಬ್ಬರ ಬಾಳಿಗೆ ಬೆಳಕಾದ ಅಪ್ಪು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.

    PUNEET RAJKUMAR

    ಪುನೀತ್ ಅವರು ದಾನ ಮಾಡಿದ್ದ ಕಣ್ಣುಗಳನ್ನು ನಿನ್ನೆ ಒಬ್ಬರಿಗೆ, ಇಂದು ಒಬ್ಬರಿಗೆ ನೀಡಲಾಗಿತ್ತು. ಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‍ಕುಮಾರ್ ಅವರು ತಂದೆ ರಾಜ್‍ಕುಮಾರ್ ಹಾದಿಯಲ್ಲೇ ಸಾಗಿದ್ದಾರೆ. ವೈದ್ಯರು ಪುನೀತ್ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

    ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದೆ ಮತ್ತು ಇಂದು ಮತ್ತೊಬ್ಬರಿಗೆ ಆಪರೇಷನ್ ಮಾಡಲಾಗಿದೆ. ಈ ಮೂಲಕ ಪುನೀತ್ ಅವರ ಎರಡೂ ಕಣ್ಣುಗಳ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನ ಬಳಿಕವೂ ಇಬ್ಬರ ಬಾಳಿನಲ್ಲಿ ಅಪ್ಪು ಬೆಳಕಾಗಿದ್ದಾರೆ. ನಾರಾಯಣ ನೇತ್ರಾಲಯ ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    PUNEET

    ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿತ್ತು. ಇದೀಗ ಅವರ ಕಣ್ಣುಗಳಿಂದ ಇಬ್ಬರ ಬಾಳಲ್ಲಿ ಬೆಳಕು ಮೂಡಿದೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಯನ್ನು ಈಡಿಗ ಸಂಪ್ರದಾಯದ ಮೂಲಕವಾಗಿ ನೆರವೇರಿಸಲಾಗಿದೆ. ಪುನೀತ್ ಅವರನ್ನು ಕಳೆದುಕೊಂಡ, ಅಭಿಮಾನಿಗಳು, ಕುಟುಂಬಸ್ಥರು, ಕಲಾವಿದರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

  • ಪುನೀತ್ ನಿಧನದ ಆಘಾತಕ್ಕೆ ಅಭಿಮಾನಿ ಸಾವು

    ಪುನೀತ್ ನಿಧನದ ಆಘಾತಕ್ಕೆ ಅಭಿಮಾನಿ ಸಾವು

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿ ಊಟ ಸೇವಿಸದೇ ಪ್ರಾಣಬಿಟ್ಟಿದ್ದಾರೆ. ಈ ಘಟನೆ ಮಂಡ್ಯ ತಾಲೂಕಿ ಕೆರಗೋಡು ಗ್ರಾಮದಲ್ಲಿ ನಡೆದಿದೆ.

    ಕೆ.ಎಂ.ರಾಜೇಶ್ (50) ಮೃತ ಅಭಿಮಾನಿಯಾಗಿದ್ದಾರೆ. ಈತ ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ನಿವಾಸಿಯಾಗಿದ್ದಾರೆ. ಪುನೀತ್ ನಿಧನದ ಸುದ್ದಿ ತಿಳಿದ ಬಳಿಕ ಸರಿಯಾಗಿ ಊಟ ಸೇವಿಸದೇ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

    ನಿನ್ನೆ ಅಂತಿಮ ದರ್ಶನಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದನು. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದರು. ಪುನೀತ್ ನಿಧನದ ಬಳಿಕ ಸರಿಯಾಗಿ ಊಟ ಸೇವಿಸದೇ ಅಸ್ವಸ್ಥನಾಗಿದ್ದನು. ಸಂಜೆ ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು. ಮಧ್ಯ ರಾತ್ರಿ 12 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

    ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್, ಡಾ.ರಾಜ್ ಕುಮಾರ್ ಎಂದು ಹೆಸರಿಟ್ಟು ಹೋಟೆಲ್ ನಡೆಸುತ್ತಿದ್ದನು. ಮಂಡ್ಯದಲ್ಲಿ ಅಪ್ಪು ಇಬ್ಬರು ಅಭಿಮಾನಿಗಳು ಸಾವನ್ನಪಿದ್ದಾರೆ. ನಿನ್ನೆ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ವೈ.ಎಸ್.ಸುರೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

  • ಲೋಹಿತ್ ಅಲ್ಪಾಯುಷ್ಯವೆಂದು ಪುನೀತ್ ಅಂತ ಹೆಸ್ರು ಚೇಂಜ್ ಮಾಡಲಾಗಿತ್ತು: ಕುಮಾರ್ ಬಂಗಾರಪ್ಪ

    ಲೋಹಿತ್ ಅಲ್ಪಾಯುಷ್ಯವೆಂದು ಪುನೀತ್ ಅಂತ ಹೆಸ್ರು ಚೇಂಜ್ ಮಾಡಲಾಗಿತ್ತು: ಕುಮಾರ್ ಬಂಗಾರಪ್ಪ

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖವನ್ನು ಶಾಸಕ ಕುಮಾರ್ ಬಂಗಾರಪ್ಪ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ಲೋಹಿತ್ ಆಗಿದ್ದವರು, ಅಪ್ಪು ಆಗಿರುವ ಕುರಿತಾಗಿ ಹೇಳಿಕೊಂಡಿದ್ದಾರೆ.

    ಅಪ್ಪು ಅಂತ್ಯಕ್ರಿಯೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪು ಬಾಲ್ಯದ ಹೆಸರು ಲೋಹಿತ್ ಆಗಿತ್ತು. ಹರಿಶ್ಚಂದ್ರ ನಾಟಕದಲ್ಲಿ ಲೋಹಿತನಿಗೆ ಅಲ್ಪ ಆಯುಷ್ಯ ಇರೋದ್ರಿಂದ ಮನೆಗಳಲ್ಲಿ ಸ್ವಲ್ಪ ಅಪಸ್ವರ ಇತ್ತು. ಹಿರಿಯರು ಕೂಡ ಹೆಸರು ಚೇಂಜ್ ಮಾಡಬೇಕು ಅಂದಿದ್ದರು. ಹೀಗಾಗಿ ಜ್ಯೋತಿಷ್ಯಗಳ ಸಲಹೆ ಮೆರೆಗೆ ಹೆಸರು ಬದಲಾವಣೆ ಮಾಡಲಾಯಿತ್ತು. ಹಿರಿಯರು ಆಡಿದ ಮಾತು ನನ್ನ ಕಿವಿಗೂ ಬಿದ್ದಿತ್ತು. ಲೋಹಿತ್ ಬೇಡ ಅಂತಾ ಪುನೀತನಾಗ್ಲಿ ಅಂತಾ ಪುನೀತ್ ರಾಜ್ ಕುಮಾರ್ ಅಂತಾ ಹೆಸರಿಟ್ಟರು. ಆದರೆ ಲೋಹಿತಾಶ್ವ ನಾಗಲಿ ಪುನೀತನಾಗಲಿ ವಿಧಿಯಾಟವೇ ಬೇರೆ ಇತ್ತು ಎಂದು ಹೇಳುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ. ಇದನ್ನೂ ಓದಿ:   ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರ ಸಲಹೆ ಮೇರೆಗೆ ಹೆಸರು ಬದಲಾವಣೆ ಮಾಡಲಾಯಿತ್ತು. ಮೈಸೂರು ರಸ್ತೆಯ ಫಾರ್ಮ್ ಹೌಸ್ ಹೆಸರು ಸಹ ಲೋಹಿತ್ ಅಂತಲೇ ಇತ್ತು. ಲೋಹಿತ್ ಹೆಸರನ್ನ ಪುನೀತ್ ಎಂದು ಬದಲಾದ ನಂತರ ಫಾರ್ಮ್ ಹೌಸ್ ಹೆಸರನ್ನ ಸಹ ಪುನೀತ್ ಫಾರ್ಮ್ ಹೌಸ್ ಅಂತಾ ಚೇಂಜ್ ಮಾಡಲಾಯಿತ್ತು. ಮಯೂರ ಚಿತ್ರದ ಮಲ್ಲಯುದ್ಧದ ಸಂದರ್ಭದಲ್ಲಿ ಅಪ್ಪು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅಪ್ಪು ಮತ್ತು ರಜನಿ ಒಂದೇ ಸಮಯಕ್ಕೆ ಚಿತ್ರ ರಂಗ ಪ್ರವೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.

  • ಮುಂದಿನ ಬಾರಿ ಮಂತ್ರಾಲಯಕ್ಕೆ ಬರ್ತೀನಿ: ಅಪ್ಪು ವೀಡಿಯೋ ವೈರಲ್

    ಮುಂದಿನ ಬಾರಿ ಮಂತ್ರಾಲಯಕ್ಕೆ ಬರ್ತೀನಿ: ಅಪ್ಪು ವೀಡಿಯೋ ವೈರಲ್

    ರಾಯಚೂರು: ಪುನೀತ್ ರಾಜ್‍ಕುಮಾರ್ ಅವರು ರಾಯರ ಸನ್ನಿಧಿಗೆ ಭೇಟಿ ನೀಡಿದ್ದ ವೇಳೆ ನಡೆದಿರುವ ಒಂದು ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

    ಅಪ್ಪು ರಾಯರ ಸನ್ನಿದಾನಕ್ಕೆ ಭೇಟಿ ನೀಡಿದ್ದ ವೇಳೆ ಅಪ್ಪು ಮಾತನಾಡುತ್ತಿದ್ದಾಗ ರಾಯರ ಮೂರ್ತಿ ಮತ್ತು ವೀಣೆ ಸ್ವಲ್ಪ ಅಲುಗಾಡಿತ್ತು. ನಾನು ಮುಂದಿನ ಬಾರಿ ಬರುತ್ತೇನೆ ಎಂದು ಹೇಳುವಾಗಲೇ ಮೂರ್ತಿ ಅಲುಗಾಡಿದ್ದು, ರಾಯರು ನೀಡಿದ ಮುನ್ಸೂಚನೆ ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:   ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    ಮಂತ್ರಾಲಯ ರಾಯರ ಮಠಕ್ಕೂ ಪುನೀತ್ ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಕೊನೆಯದಾಗಿ ಪುನೀತ್ ರಾಜಕುಮಾರ 2021 ಏಪ್ರಿಲ್5 ರಂದು ಯುವರತ್ನ ಸಿನೆಮಾ ಯಶಸ್ಸು ಕಾಣುತ್ತಿದ್ದ ಹಿನ್ನೆಲೆ ಸಿನಿ ತಂಡದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು.  ಇದನ್ನೂ ಓದಿ:  ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

    Puneeth Rajkumar Special Vehicle 5

    ಅದಕ್ಕೂ ಮುನ್ನ 2020 ಮಾರ್ಚ್ 2ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಧರ್ಂತಿ ಉತ್ಸವ ಹಿನ್ನೆಲೆ ಶ್ರೀ ಮಠಕ್ಕೆ ಆಗಮಿಸಿದ್ದ ಪುನೀತ್ ಭಾವುಕರಾಗಿ ಮಾತನಾಡಿದ್ದರು. ತಮ್ಮ ನೆನಪುಗಳನ್ನ ಬಿಚ್ಚಿಟ್ಟಿದ್ದರು. ವೇದಿಕೆ ಮೇಲೆ ರಾಯರ ಹಾಡು ಹೇಳಿದ ಪುನೀತ್ ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿದ್ದರು. ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜಕುಮಾರ್‍ರನ್ನ ಸನ್ಮಾನಿಸಲಾಗಿತ್ತು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

     

    PUNEETH RAJ KUMAR

    ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಪುನೀತ್ ಹೇಳಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಆರಾಧನೆ ಕಾರ್ಯಕ್ರಮವನ್ನ ಸರಳವಾಗಿ ಆಚರಿಸಿದ್ದರಿಂದ ಪುನೀತ್ ಮಂತ್ರಾಲಯಕ್ಕೆ ಬಂದಿರಲಿಲ್ಲ. ಸಾವಿರಾರು ಅಭಿಮಾನಿಗಳನ್ನ ಹೊಂದಿರುವ ಪುನೀತ್ ಈಗ ನೆನಪು ಮಾತ್ರ.

  • ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

    ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

    ಬೆಂಗಳೂರು: ನಟ ಪುನೀತ್ ಅವರ ಅಂತ್ಯಕ್ರಿಯೆ ಭಾನುವಾರ ಮುಂಜಾನೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವ ಗಳೊಂದಿಗೆ ನೆರವೇರಿತು. ಈ ವೇಳೆ ಮಾತನಾಡಿದ ರಮೇಶ್ ಅರವಿಂದ್ ಅವರು ಪುನೀತ್ ಕುರಿತಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡು ದುಃಖವನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ರಮೇಶ್ ಅರವಿಂದ್ ಅವರು, ಪುನೀತ್ ಹಾಗೂ ಮಗಳ ಭಾಂದವ್ಯದ ಕುರಿತಾಗಿ ಮಾಡತನಾಡಿದ್ದಾರೆ. ಗುರುಕಿರಣ್ ಬರ್ತಡೆ ಪಾರ್ಟಿಯಲ್ಲಿ ಮಗಳ ವಿಚಾರವಾಗಿ ಅನೇಕ ಬಾರಿ ಹೇಳಿಕೊಂಡಿದ್ದರು. ಮಗಳು ಮಲಗಿಬಿಡ್ತಾಳೆ, ನಾನು ಹೋತ್ತೇನೆ ಅವಳನ್ನು ನೈಟ್ ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗ್ ಬೇಕು ಎಂದು ತರಾತುರಿಯಲ್ಲಿ ಹೊರಟಿದ್ದರು. ಆದರೆ ಅಪ್ಪು ಬರುವಷ್ಟರಲ್ಲಿ ಮಗಳು ನಿದ್ದೆಗೆ ಜಾರಿದ್ದರು. ಸಾವಿನ ಮೊದಲ ದಿನ ಅಪ್ಪನ ಜೊತೆ ನೈಟ್ ವಾಕಿಂಗ್ ಮಿಸ್ ಮಾಡಿಕೊಂಡಿದ್ದರು. ಪುನೀತ್ ಕೊನೆ ಮಗಳಿಗೆ ಕಾಡುತ್ತಿದೆ ಆ ನೆನಪು, ಇದನ್ನು ತಾಯಿಯ ಬಳಿ ಪದೇ ಪದೇ ಹೇಳಿಕೊಂಡು ಕಣ್ಣೀರು ಇಡುತ್ತಾ ಇದ್ದಾಳೆ ಎಂದು ರಮೇಶ್ ಅರವಿಂದ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    PUNEETH RAJ KUMAR

    ಕ್ರಿಪ್ಟೋ ಕರೆನ್ಸಿ ಸೇರಿದಂತೆ ಸಿನಿಮಾ ಬಗ್ಗೆ ಮಾತನಾಡಿದ್ದರು. ಅವರು ಅಭಿನಯಿಸಿದ ಡಾಕ್ಯುಮೆಂಟರಿ ಗಂಧದ ಗುಡಿ ಕುರಿತಾಗಿ ವೀಡಿಯೋ ಕೂಡ ತೋರಿಸಿದ್ದರು ಎಂದು ರಮೇಶ್ ಅರವಿಂದ್ ಅವರು ಪುನೀತ್ ರಾಜ್‍ಕುಮಾರ್ ಜೊತೆಗೆ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ.  ಇದನ್ನೂ ಓದಿ: 2022ರ ಅಂತ್ಯಕ್ಕೆ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ವಿತರಣೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

  • ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ

    ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ

    ಗಾಂಧಿನಗರ: ಫಿಶ್ ಕರಿಗಾಗಿ ಗೆಳಯನನ್ನು ಕೊಂದಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ರಂಜಿತ್ ಕುನ್ವರಿಯ (32) ಮೃತನಾಗಿದ್ದಾನೆ. ಫಿಶ್ ಕರಿಗಾಗಿ ನಡೆದ ಗಲಾಟೆಯಲ್ಲಿ ಆತನನ್ನು ಕಾರಿನ ಕೆಳಗೆ ಹಾಕಿ ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಮಲಿಯ ಮಿಯಾನ ತಾಲೂಕಿನ ವೆನಸರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 2022ರ ಅಂತ್ಯಕ್ಕೆ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ವಿತರಣೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

    ರಂಜಿತ್ ಕುನ್ವರಿಯ, ಆತನ ಕಸಿನ್‍ಗಳಾದ ಅಶೋಕ್, ಸುನಿಲ್, ಪ್ರಕಾಶ್ ಡ್ರಿಂಕ್‍ಪಾರ್ಟಿಯೊಂದಕ್ಕೆ ಹೋಗಿದ್ದರು. ಈ ವೇಳೆ ನದಿಯಲ್ಲಿ ಫಿಶಿಂಗ್‍ಗೆ ಹೋಗಿದ್ದರು. ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    ಫಿಶ್ ಕರಿ, ಅನ್ನ ಮಾಡಿಕೊಂಡು ಭರ್ಜರಿಯಾಗಿ ಊಟ ಮಾಡಲು ಎಲ್ಲ ರೆಡಿ ಮಾಡಿಕೊಂಡರು. ಎಲ್ಲರೂ ಕುಳಿತು ಊಟ ಮಾಡುವಾಗ ಸಂದೀಪ್ ಇನ್ನೂ ಹೆಚ್ಚು ಫಿಶ್ ಕರಿ ಬೇಕೆಂದು ಹಠ ಮಾಡಿದ್ದಾನೆ. ಸಂದೀಪ್ ಅಡುಗೆಗೆ ಯಾವುದೇ ಸಹಾಯ ಮಾಡದ ಕಾರಣ ರಂಜಿತ್ ಹೆಚ್ಚು ಫಿಶ್ ಕರಿ ನೀಡಲು ಒಪ್ಪಲಿಲ್ಲ. ಈ ಅವಮಾನದಿಂದ ಸಂದೀಪ್‍ನ ಸೋದರ ಸುನಿಲ್‍ಗೆ ಬಹಳ ಕೋಪ ಬಂದು ಅಲ್ಲಿಂದ ಎದ್ದು ಹೋದ. ಆತ ಮನೆಗೆ ವಾಪಾಸ್ ಹೋಗುತ್ತಿರಬಹುದು ಎಂದು ಗೆಳೆಯರೆಲ್ಲ ಅಂದುಕೊಂಡರು. ಆದರೆ ಕೋಪದಿಂದ ಕಾರು ಸ್ಟಾರ್ಟ್ ಮಾಡಿದ ಸುನಿಲ್ ರಂಜಿತ್‍ನನ್ನು ಕಾರಿನ ಕೆಳಗೆ ಬೀಳಿಸಿ ಆತನ ಮೇಲೆ ಕಾರು ಹತ್ತಿಸಿದ. ಇದರಿಂದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ. ಬಳಿಕ ಸುನಿಲ್ ಅಲ್ಲೇ ಕಾರನ್ನು ಬಿಟ್ಟು ಓಡಿಹೋಗಿದ್ದಾನೆ. ಸುನಿಲ್ ವಿರುದ್ಧ ಕೇಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

  • ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ದೂರವಾಗಿದ್ದಾರೆ. ಅಪ್ಪುಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ ನಮನ ಸಲ್ಲಿಸಿದ್ದಾರೆ.

    ಮುಂಜಾನೆ 4.28 ಸಿಎಂ ಆಗಮನ ಕಂಠೀರವ ಸ್ಟೇಡಿಯಂ ಆಗಮಿಸಿ 4.34 ಸಿಎಂ ವೇದಿಕೆ ಬಳಿ ಆಗಮಿಸಿ ಶಿವಣ್ಣ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಬಸವರಾಜ ಬೊಮ್ಮಾಯಿ ಅವರು ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ್ದಾರೆ. ಕುಟುಂಬಸ್ಥರು, ಅಭಿಮಾನಿಗಳು, ಗಣ್ಯರು ಪುನೀತ್ ಅವರ ಪಾರ್ಥಿವ ಶರೀರದ ದರ್ಶನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

    ಈಗಾಗಲೇ ಅಪ್ಪು ಅಂತೀಮ ಯಾತ್ರೆ ತೆರೆದ ವಾಹನವಲ್ಲಿ ಪ್ರಾರಂಭವಾಗಿದೆ. ಯಾತ್ರೆಯಲ್ಲಿ ಅಭಿಮಾನಿಗಳ ಸಾಗರವೇ ಇದ್ದು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕರಿಗೆ ಅವಕಾಶ ವಿಲ್ಲ. ಪಾರ್ಥಿವ ಶರೀರದ ಜೊತೆಗೆ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರು ಇದ್ದಾರೆ. ಈಡಿಗ ಸಂಪ್ರದಾಯದಂತೆ ಪುನೀತ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು