Tag: publictv

  • ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ

    ನವದೆಹಲಿ: ಸ್ಥಳೀಯ ಮುಖಂಡರ ಸಹಾಯ ಪಡೆಯುವ ಮೂಲಕ ವ್ಯಾಕ್ಸಿನೇಷನ್ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಡಿಮೆ ವ್ಯಾಕ್ಸಿನೇಷನ್ ವರದಿ ಮಾಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ಮೋದಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

    ಒಂದು ಕೋಟಿ ಡೋಸ್ ನೀಡಿದ ಬಳಿಕವೂ ಹಲವು ಜಿಲ್ಲೆಗಳು ವ್ಯಾಕ್ಸಿನೇಷನ್‍ನಲ್ಲಿ ಹಿಂದೆ ಬಿದ್ದಿದ್ದು, ಈ ಜಿಲ್ಲೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಸಾಧನೆಗೆ ಬೇಸರ ವ್ಯಕ್ತಪಡಿಸಿದ ಅವರು ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ವ್ಯಾಕ್ಸಿನೇಷನ್ ಹೆಚ್ಚಿಸಲು ಸಣ್ಣ ಸಣ್ಣ ತಂಡಗಳನ್ನು ರಚಿಸಲು ಸೂಚಿಸಿದ ಅವರು, ಪ್ರತಿ ಹಳ್ಳಿ, ಪಟ್ಟಣಗಳಿಗೆ ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸಿ ಎಂದು ಮೋದಿ ಹೇಳಿದರು. ಅಲ್ಲದೇ ಪ್ರತಿ ಮನೆ ಮನೆಗೂ ತಲುಪಿ ಜನರನ್ನು ಕರೆ ತನ್ನಿ, ಅವಶ್ಯವಾದರೆನೆಗೆ ತೆರಳಿ ವ್ಯಾಕ್ಸಿನ್ ನೀಡಲು ಮೋದಿ ಸಭೆಯಲ್ಲಿ ಸೂಚನೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ರೋಗ ಮತ್ತು ಶತ್ರುಗಳ ವಿರುದ್ಧ ಕಡೆಯವರೆಗೂ ಹೋರಾಡಬೇಕು, ಒಂದು ಕೋಟಿ ಡೋಸ್ ಆಯಿತು ಎಂದು ಸುಮ್ಮನೆ ಕೂರುವಂತಿಲ್ಲ ಎರಡನೇ ಡೋಸ್ ಅನ್ನು ಜನರಿಗೆ ಅಗತ್ಯವಾಗಿ ನೀಡಬೇಕು. ಈ ನಿಟ್ಟಿನಲ್ಲಿ ಜನರನ್ನು ಗುರುತಿಸಿ ವ್ಯಾಕ್ಸಿನ್ ಪಡೆಯಲು ಪ್ರೇರೆಪಿಸಲು ಮೋದಿ ಹೇಳಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ವ್ಯಾಕ್ಸಿನೇಷನಗೆ ಮೌಡ್ಯ ಅಡ್ಡಿ ಉಂಟು ಮಾಡುತ್ತಿದ್ದು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ಸ್ಥಳೀಯ ಧಾರ್ಮಿಕ ಮುಖಂಡರ ಸಹಾಯ ಪಡೆದು ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಪ್ರಯತ್ನಿಸಿ ಎಂದ ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲೂ ಇದೇ ಪ್ರಯೋಗ ನಡೆದಿದೆ ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • ನಿಧನದ ಹಿಂದಿನ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು:  ಜಯಣ್ಣ

    ನಿಧನದ ಹಿಂದಿನ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು: ಜಯಣ್ಣ

    ಬೆಂಗಳೂರು: ನಿಧನದ ಹಿಂದಿನ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು ಎಂದು ನಿರ್ಮಾಪಕ ಜಯಣ್ಣ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಅಪ್ಪು ನಿಧನದ ಹಿಂದಿನ ದಿನ ವಜ್ರೇಶ್ವರಿ ಕಂಬೈನ್ಸ್‌ಗೆ ಭೇಟಿಕೊಟ್ಟಿದ್ದರು ಪುನೀತ್ ರಾಜ್‍ಕುಮಾರ್ ಅವರ ನಿಧನದ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು. ಗುರುವಾರ ನನ್ನ ಜೊತೆ ಪುನೀತ್ ಮಾತಾಡಿದ್ದರು. ಆಗಲೇ ಅವರಿಗೆ ನೋವು ಕಾಣಿಸಿಕೊಂಡಿರಬಹುದು. ನಿಧನದ ಹಿಂದಿನ ದಿನ ಅಪ್ಪು ನಮ್ಮ ಕಚೇರಿಗೆ ಬಂದು ಮಾತಾಡಿದ್ದರು ಎಂದು ಹೇಳಿದ್ದಾರೆ.

    PUNEET

    ವರ್ಷಕ್ಕೆ ಎರಡು ಸಿನಿಮಾ ಮಾಡಲು ಒಪ್ಪಿಕೊಂಡಿದ್ದ ಪುನೀತ್ ಅವರಿಗೆ ನಾನು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ಇಂಡಸ್ಟ್ರಿಗೆ ಕಷ್ಟವಾಗುತ್ತದೆ. ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂದು ಹೇಳಿದ್ದೆ. ಇನ್ಮುಂದೆ ಎರಡು ಸಿನಿಮಾ ಮಾಡ್ತೀನಿ ಅಂತ ಅಪ್ಪು ಸರ್ ಒಪ್ಪಿಕೊಂಡಿದ್ದರು ಎಂದು ಅಪ್ಪು ಕೊನೆಯ ಬಾರಿ ಮಾತನಾಡಿದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಅಪ್ಪು ನಮ್ಮೆಲ್ಲರನ್ನು ಅಗಲಿ ಇಂದಿಗೆ ಆರು ದಿನ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಪಡೆದು ನಮಿಸಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ಪುನೀತ್‍ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿರುವ ತೆಲುಗು ನಟ ರಾಮ್‍ಚರಣ್ ತೇಜ ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತಾಡಿದ ರಾಮ್‍ಚರಣ್ ಕಣ್ಣೀರಿಟ್ಟಿರು. ಪುನೀತ್ ಬಹಳ ಒಳ್ಳೆಯ ವ್ಯಕ್ತಿ. ಸಾವು ಯಾರಿಗಾದರೂ ಬರುತ್ತದೆ, ಆದರೆ ಪುನೀತ್ ನಮ್ಮನ್ನು ಅಗಲಿರುವುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಮನಗೆ ಅವರು ಬಂದ್ರೂ ನಾವೇ ಅತಿಥಿಗಳು ಅನ್ನೋ ಭಾವನೆ ಬರುವ ರೀತಿ ನಡೆದುಕೊಳ್ಳುತ್ತಿದ್ದರು. ಅಪ್ಪು ಅಷ್ಟು ವಿನಯಶೀಲರು ಎಂದು ರಾಮ್‍ಚರಣ್ ನೆನೆದು ಕಣ್ಣೀರಿಟ್ಟರು. ಇದಾದ ಬಳಿಕ ಶಿವಣ್ಣ ಅವರ ಮನೆಗೂ ರಾಮ್‍ಚರಣ್ ತೇಜ ಭೇಟಿ ನೀಡಿದ್ದರು.

  • ಬೆಲೆ ಏರಿಕೆ ಉತ್ತುಂಗದಲ್ಲಿದೆ, ಇದು ತಮಾಷೆಯ ವಿಚಾರವಲ್ಲ: ರಾಹುಲ್ ಗಾಂಧಿ

    ಬೆಲೆ ಏರಿಕೆ ಉತ್ತುಂಗದಲ್ಲಿದೆ, ಇದು ತಮಾಷೆಯ ವಿಚಾರವಲ್ಲ: ರಾಹುಲ್ ಗಾಂಧಿ

    ನವದೆಹಲಿ: ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

    RAHUL GANDHI

    ಈಗ ದೀಪಾವಳಿ ಹಬ್ಬ ಬಂದಿದೆ. ಬೆಲೆ ಏರಿಕೆ ಉತ್ತುಂಗದಲ್ಲಿದೆ. ಇದು ತಮಾಷೆಯ ವಿಚಾರವಲ್ಲ. ಸಾಮಾನ್ಯ ಜನರ ಪರಿಸ್ಥಿತಿ ಬಗ್ಗೆ ನರೇಂದ್ರ ಮೋದಿ ಸರ್ಕಾರ ಸ್ವಲ್ಪವಾದರೂ ಸಂವೇದನೆ ತೋರಬೇಕು ಎಂಬುದು ನನ್ನ ಆಶಯ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ

    ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಬೆಲೆಯಷ್ಟೇ ಅಲ್ಲದೆ, ಬಹುತೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದೆ. ಅಡುಗೆ ಎಣ್ಣೆ, ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಅದರಲ್ಲೂ ಇಂಧನ ದರವಂತೂ ಐತಿಹಾಸಿಕ ಹೆಚ್ಚಳಕಂಡಿದ್ದು, ಸಾಮಾನ್ಯ ಜನರಿಗೆ ಬಹುದೊಡ್ಡ ಹೊರೆಯಾಗಿದೆ. ಎಲ್‍ಪಿಜಿ ಸಿಲಿಂಡರ್ ಬೆಲೆ 266ರೂ.ಏರಿಕೆಯಾಗಿದ್ದು, ದೆಹಲಿಯಲ್ಲಿ 2000 ರೂ.ಗಡಿ ದಾಟಿದೆ. ಇದನ್ನೂ ಓದಿ:  ಕಡಿಮೆ ಲಸಿಕೆ ವಿತರಣೆ – 40ಕ್ಕೂ ಹೆಚ್ಚು ಡಿಸಿಗಳ ಜೊತೆ ಮೋದಿ ಸಭೆ

  • ದೀಪಾವಳಿ ಹಬ್ಬಕ್ಕೆ ಮಾಡಿ ಸ್ಪೆಷಲ್ ಬರ್ಫಿ

    ದೀಪಾವಳಿ ಹಬ್ಬಕ್ಕೆ ಮಾಡಿ ಸ್ಪೆಷಲ್ ಬರ್ಫಿ

    ಬ್ಬ ಎಂದರೆ ಸಿಹಿ ತಿಂಡಿ ಇರಲೇಬೇಕು. ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳ ಖಾದ್ಯಗಳು ತಯಾರಾಗುತ್ತವೆ. ಈ ವರ್ಷ ಕೊಂಚ ಭಿನ್ನವಾಗಿರುವ ಬರ್ಫಿಯನ್ನು ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಹಬ್ಬದ ಸಂತೋಷದ ಸಮಯದಲ್ಲಿ ಈ ಬರ್ಫಿಯನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ಸಂತೋಷವನ್ನು ಹೆಚ್ಚಿಸುತ್ತದೆ.

    ಬೇಕಾಗಿರುವ ಸಾಮಗ್ರಿಗಳು:
    * ಕಡ್ಲೆಹಿಟ್ಟು- 1 ಕಪ್
    * ಸಕ್ಕರೆ- 2 ಕಪ್
    * ಹಾಲು-1 ಕಪ್
    * ತುಪ್ಪ-1 ಕಪ್
    * ಕಾಯಿತುರಿ- 1 ಕಪ್
    * ಬಾದಾಮಿ- ಒಂದು ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆಗೆ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೆಹಿಟ್ಟು ಹಾಕಿ ಕಂದುಬಣ್ಣ ಬರುವವರೆಗೂ ಹುರಿಯಿರಿ.
    * ನಂತರ ಹಾಲು, ಸಕ್ಕರೆ ಮಿಶ್ರಣ ಮಾಡುತ್ತಾ ಚೆನ್ನಾಗಿ ಬೇಯಿಸಿರಿ.

    * ಇನ್ನು ಉಳಿದ ತುಪ್ಪ, ಬಾದಾಮಿ, ಕಾಯಿತುರಿ ಹಾಕಿ ಮಿಶ್ರಣ ಮಾಡಿ
    *ತದನಂತರ ಈ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಸುರಿದು ತಣಿಯಲು ಬಿಡಿ

    * ನಂತರ ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿದರೆ ರುಚಿಯಾದ ಬರ್ಪಿ ಸವಿಯಲು ಸಿದ್ಧವಾಗುತ್ತದೆ.

  • ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    ನವದೆಹಲಿ: ಇನ್ಪೋಸಿಸ್ ಫೌಂಡೇಶನ್ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಕ್ಕಳಿಗೆ ದೀಪಾವಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಪುಸ್ತಕ ದಿ ಸೇಜ್ ವಿತ್ ಟು ಹಾನ್ರ್ಸ್ ಇದನ್ನು ಅವರು ಮಕ್ಕಳಿಗಾಗಿ ಬರೆದಿದ್ದು, ಅದನ್ನೇ ದೀಪಾವಳಿ ಗಿಫ್ಟ್ ಆಗಿ ನೀಡಿದ್ದಾರೆ.

    ಪುಸ್ತಕದ ವಿಶೇಷತೆ:
    ಈ ಪುಸ್ತಕವು ಭಾರತೀಯ ಪುರಾಣಗಳ ಪುಟಗಳಲ್ಲಿ ಕಳೆದುಹೋಗಿರುವ ಹಲವಾರು ಯಾರಿಗೂ ತಿಳಿಯದ ಮತ್ತು ಆಕರ್ಷಕ ಕಥೆಗಳನ್ನು ಒಳಗೊಂಡಿದೆ. ರಾಜರು, ರಾಣಿಯರು, ದೇವರು ಮತ್ತು ದೇವತೆಗಳು, ಋಷಿಗಳು, ಅಸಾಮಾನ್ಯ ಬುದ್ಧಿವಂತಿಕೆಯ ಪುರುಷರು ಮತ್ತು ಮಹಿಳೆಯರ ಕಥೆಗಳು ಈ ಪುಸ್ತಕದಲ್ಲಿ ಇವೆ.

    Sudha Murty

    ದಿ ಮ್ಯಾನ್ ಫ್ರಮ್ ದಿ ಎಗ್, ಸಪೆರ್ಂಟ್ಸ್ ರಿವೇಂಜ್, ದಿ ಅಪ್‍ಸೈಡ್-ಡೌನ್ ಕಿಂಗ್ ಮತ್ತು ದಿ ಡಾಟರ್ ಫ್ರಮ್ ದಿ ವಿಶಿಂಗ್ ಟ್ರೀ ಗಳ ಅನುಸರಣೆಯಾಗಿದೆ. ಅಲ್ಲದೇ ಅವರ  Unusual Tales from mythology ಸರಣಿಯ ಐದನೇ ಮತ್ತು ಕೊನೆಯ ಪುಸ್ತಕವಾಗಿದೆ. ಅವರ ಪುಸ್ತಕಗಳು ಹಲವು ವಿಧಗಳಲ್ಲಿ ಭಿನ್ನವಾಗಿರುವಂತೆ ತೋರಬಹುದು. ಆದರೆ ಎಲ್ಲಾ ಆವೃತ್ತಿಗಳಲ್ಲಿ ಥ್ರೆಡ್ ಒಂದೇ ಆಗಿರುತ್ತದೆ. ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ಪೋಷಕ ಪಾತ್ರಗಳು ತಮ್ಮದೇ ಆದ ಜೀವನದ ದೃಷ್ಟಿಕೋನಗಳೊಂದಿಗೆ ಹೇಳಲು ತಮ್ಮದೇ ಆದ ಕಥೆಗಳನ್ನು ಹೊಂದಿವೆ ಎಂದು ಅವರು ಹೇಳುತ್ತಾರೆ. ಪಫಿನ್ ಪ್ರಕಟಿಸಿದ ಈ ಪುಸ್ತಕವು ಪ್ರಿಯಾಂಕರ್ ಗುಪ್ತಾ ಅವರ ಚಿತ್ರಣಗಳನ್ನು ಹೊಂದಿದೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ವಿಶ್ವದಲ್ಲಿ ಯಾವುದೇ ಹೆಸರಿನಿಂದ ಕರೆಯಬಹುದಾದ ಶಕ್ತಿಶಾಲಿ ಶಕ್ತಿಯಿದೆ. ಈ ಶಕ್ತಿಯು ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಸಾಕ್ಷಿಯಾಗಿದೆ ಹಾಗೂ ನಾವು ಅದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಿದ್ರೆ, ನಮಗೆ ಮಾರ್ಗದರ್ಶನ ನೀಡಲು ಯಾವಾಗಲೂ ಇರುತ್ತದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಇವರು ಕಾದಂಬರಿಗಳು, ತಾಂತ್ರಿಕ ಪುಸ್ತಕಗಳು, ಪ್ರವಾಸ ಕಥನಗಳು, ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಕಾಲ್ಪನಿಕವಲ್ಲದ ತುಣುಕುಗಳು ಹಾಗೂ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿದ್ದಾರೆ.ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

  • ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

    ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

    ನವದೆಹಲಿ: ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ (Neeraj Chopra), ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 12 ಕ್ರೀಡಾಪಟುಗಳನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    NEERAJ

    ಪ್ಯಾರಾಲಿಂಪಿಕ್ಸ್ ಪದಕ ವಿಜೇತ, ಕನ್ನಡಿಗ ಐಎಎಸ್ ಅಧಿಕಾರಿ ಸುಭಾಶ್ ಯತಿರಾಜ್, ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ ಅವಾರ್ಡ್ ಪ್ರಕಟಿಸಲಾಗಿದೆ. ಮೇಜರ್ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿಗೆ ಒಲಂಪಿಯನ್ ಅಥ್ಲಿಟ್ ನೀರಜ್ ಚೋಪ್ರಾ ಸೇರಿ 12 ಸಾಧಕರು ಭಾಜನರಾಗಿದ್ದಾರೆ. ಇದನ್ನೂ ಓದಿ:  ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಒಲಂಪಿಯನ್‍ಗಳಾದ ಕುಸ್ತಿಪಟು ರವಿ ಕುಮಾರ್ ದಹಿಯಾ, ಹಾಕಿ ಆಟಗಾರ ಶ್ರೀಜೇಶ್, ಮನ್‍ಪ್ರೀತ್ ಸಿಂಗ್, ಬಾಕ್ಸರ್ ಲವ್ಲಿನಾ, ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಪ್ಯಾರಾ ಒಲಂಪಿಯನ್‍ಗಳಾದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್, ಜಾವೆಲಿನ್ ತ್ರೋ ಕ್ರೀಡಾಪಟು ಸುಮಿತ್ ಅಂಟಿಲ್, ಶೂಟರ್ ಅವನಿ ಲಖರಾ, ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್ ಮತ್ತು ಮನೀಶ್ ನರ್ವಾಲ್‍ಗೆ ಖೇಲ್‍ರತ್ನ ಪಶಸ್ತಿ ಘೋಷಣೆ ಆಗಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ನವೆಂಬರ್ 13ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗುತ್ತದೆ.

  • ಹಾನಗಲ್‍ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮಾಡ್ತೇವೆ- ಬಿಎಸ್‍ವೈ

    ಹಾನಗಲ್‍ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮಾಡ್ತೇವೆ- ಬಿಎಸ್‍ವೈ

    ಚಿತ್ರದುರ್ಗ: ಹಾನಗಲ್ ವಿಧಾನಸಭಾ ಉಪಚುನಾವಣೆಯ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಬಳಿಕ ಮಾತನಾಡಿದ ಅವರು, ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ನಾವು 30ಸಾವಿರ ಅಂತರದಲ್ಲಿ ಗೆಲುವುಸಾಧಿಸಿದ್ದೇವೆ. ಆದರೆ ಬಹು ನಿರೀಕ್ಷೆಯ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಹೀಗಾಗಿ ಈ ಚುನಾವಣಾ ಸೋಲಿನ ಬಗ್ಗೆ ಕ್ಷೇತ್ರದ ಕಾರ್ಯಕರ್ತರು ಹಾಗು ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತೇವೆ ಎಂದಿದ್ದಾರೆ.

    ಹಾನಗಲ್‍ನಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇವೆ. ಇನ್ನು ಕೋವಿಡ್‍ನಿಂದಾಗಿ ಸತತ ಎರಡು ವರ್ಷಗಳಕಾಲ ಸ್ಥಗಿತವಾಗಿದ್ದ ರಾಷ್ಟ್ರೀಯನಾಟಕೋತ್ಸವ ಈ ಬಾರಿವಿಜೃಂಭಣೆಯಿಂದ ನಡೆಸಲಾಗಿದೆ. ಇದರಲ್ಲಿ ಭಾಗಿಯಾದನನಗೂ ಸಂತಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    VOTE

    ಹಾಗೆಯೇ ಇದಕ್ಕು ಮುನ್ನ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಣೇಹಳ್ಳಿಯಲ್ಲಿ ಸಾಂಸ್ಕøತಿಕ ವಿಶ್ವವಿದ್ಯಾಲಯ ಆರಂಭಿಸುವಂತೆ ಸಾಹಿತಿ ದೊಡ್ಡರಂಗೇಗೌಡ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ವೇಳೆ ನಾನು ಸಿಎಂ ಆಗಿದ್ದಿದ್ದರೆ ಈಗಲೇ ಅದನ್ನು ಘೋಷಣೆ ಮಾಡುತ್ತಿದ್ದೆನು. ಆದರೂ ಆತಂಕ ಏನು ಬೇಡ. ಸಿಎಂ ಬೊಮ್ಮಾಯಿ ರಾಷ್ಟ್ರೀಯ ನಾಟಕೋತ್ಸವ ಸಮಾರೋಪಕ್ಕೆ ಬರ್ತಿದ್ದಾರೆ. ಆಗ ಸಿಎಂ ಬೊಮ್ಮಾಯಿಗೆ ಸಾಂಸ್ಕೃತಿಕ ವಿಶ್ವ ವಿದ್ಯಾಲಯ ಬಗ್ಗೆ ಅವರಿಗೆ ಹೇಳುತ್ತೇನೆ. ಅಲ್ಲದೇ ಸಾಣೇಹಳ್ಳಿ ಎಂಬ ಕುಗ್ರಾಮ ಈಗ ಸಾಂಸ್ಕೃತಿಕ ಕೇಂದ್ರವಾಗಿದೆ. ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶ್ರೀಗಳು ನಾಟಕ ಚಳುವಳಿಯನ್ನೇ ಆರಂಭಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಈ ಶಿವಕುಮಾರ ಕಲಾ ಸಂಘ ದೇಶಾದ್ಯಂತ ಖ್ಯಾತಿ ಪಡೆದಿದ್ದೂ, ನಶಿಸಿಹೋಗುತ್ತಿದ್ದ ನಾಟಕ ಕಲೆ ಉಳಿವಿಗೆ ಶ್ರೀಗಳ ಶ್ರಮ ಅಪಾರವಾಗಿದೆ ಜೊತೆಗೆ ಶರಣ ಸಂಸ್ಕೃತಿ ಕಟ್ಟಿಕೊಡುವಲ್ಲಿ ನಾಟಕೋತ್ಸವ ಯಶಸ್ವಿಎಂದರು. ಈ ವೇಳೆ ಪಂಡೊತಾರಾಧ್ಯ ಶ್ರೀಗಳು, ಖನಿಜ ನಿಗಮ ಅಧ್ಯಕ್ಷ ಲಿಂಗ ಮೂರ್ತಿಸಾಹಿತಿ ದೊಡ್ಡರಂಗೇಗೌಡ ಮತ್ತು ಚನ್ನಗಿರಿ ಶಾಸಕಮಾಡಾಳ್ ವಿರುಪಾಕ್ಷಪ್ಪಇದ್ದರು.

  • ಸ್ಕೂಲ್, ಅನಾಥಾಶ್ರಮ ನಡೆಸುತ್ತಿದ್ದವ್ರಿಗೆ ಹೀಗೆ ಆಗಿರೋದು ನಿಜಕ್ಕೂ ಶಾಕಿಂಗ್: ನಾಗಾರ್ಜುನ ಭಾವುಕ

    ಸ್ಕೂಲ್, ಅನಾಥಾಶ್ರಮ ನಡೆಸುತ್ತಿದ್ದವ್ರಿಗೆ ಹೀಗೆ ಆಗಿರೋದು ನಿಜಕ್ಕೂ ಶಾಕಿಂಗ್: ನಾಗಾರ್ಜುನ ಭಾವುಕ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಟಾಲಿವುಡ್ ನಟ ನಾಗಾರ್ಜುನ ಅವರು ಪುನೀತ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ನಾಗಾರ್ಜುನ, ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದಾರೆ. ಪುನೀತ್ ಅವರ ಪತ್ನಿಗೆ ಸಾಂತ್ವನ ಹೇಳಿ, ಪುನೀತ್ ಅವರ ಜೊತೆಗೆ ಇರುವ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೃದಯ ಒಡೆದು ಹೋಗುವ ವಿಚಾರವಾಗಿದೆ. ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿರುವುದು ನಿಜವಾಗಿಯೂ ಹೀಗೆ ಆಗಿದ್ಯಾ ಎಂದು ಅನಿಸುತ್ತದೆ. ಇಲ್ಲೇ ಇದ್ದಾರೆ ಎಂದು ಅನ್ನಿಸುತ್ತಿದೆ. ಏನು ಮಾತನಾಡಲಿ ಎಂದು ನನಗೆ ಗೊತ್ತಾಗ್ತಾ ಇಲ್ಲ. ನಾನು ಇಲ್ಲಿ ಬಂದಾಗ ಶಿವಣ್ಣ ಅವರ ಹತ್ರ ಈ ಕುರಿತಾಗಿ ಏನು ಮಾತನಾಡಲಿ ಎಂದು ನನಗೆ ಗೊತ್ತಾಗಲಿಲ್ಲ ಎಂದು ದುಃಖತಪ್ತರಾಗಿದ್ದಾರೆ. ಇದನ್ನೂ ಓದಿ: ಪಂಜಾಬ್ ಲೋಕ್ ಕಾಂಗ್ರೆಸ್ -ಅಮರಿಂದರ್ ಸಿಂಗ್ ಹೊಸ ಪಕ್ಷ

    ಪುನೀತ್ ಅವರ ಬಗ್ಗೆ ಪ್ರತಿಯೊಬ್ಬರು ಒಳ್ಳೆಯ ಮನುಷ್ಯ ಎಂದು ಹೇಳುತ್ತಾರೆ. ಎಷ್ಟೊಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ನಾಲ್ಕು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದರು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸ್ಕೂಲ್, ಅನಾಥಾಶ್ರಮ ನಡೆಸುತ್ತಿದ್ದರು. ಇಂತಹವರಿಗೆ ಹೀಗೆ ಆಗಿದ್ದು ನಿಜಕ್ಕೂ ಶಾಕಿಂಗ್ ವಿಚಾರವಾಗಿದೆ. ಅವರಿಗೆ ಯಾಕೆ ಹೀಗೆ ಆಯ್ತು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ನನಗೆ ಈಗಲೂ ಅವರು ಕುಟುಂಬಕ್ಕೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ಧಾರೆ.