Tag: publictv

  • ಸಿಹಿಯಾದ ಗೋಧಿ ಪಾಯಸ ಸಖತ್ ಟೇಸ್ಟ್

    ಸಿಹಿಯಾದ ಗೋಧಿ ಪಾಯಸ ಸಖತ್ ಟೇಸ್ಟ್

    ಹಬ್ಬ ಎಂದರೆ ಸಿಹಿ ತಿಂಡಿ ಇರಲೇಬೇಕು. ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳ ಖಾದ್ಯಗಳು ತಯಾರಾಗುತ್ತವೆ. ಈ ವರ್ಷ ಕೊಂಚ ಭಿನ್ನವಾಗಿರುವ ಗೋಧಿ ಪಾಯಸ ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಹಬ್ಬದ ಸಂತೋಷದ ಸಮಯದಲ್ಲಿ ಗೋಧಿ ಪಾಯಸ ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ತಿಂದು ಸಂತೋಷವನ್ನು ಹೆಚ್ಚಿಸಿಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    * ಗೋಧಿ ನುಚ್ಚು- 1 ಕಪ್
    * ತೆಂಗಿನಕಾಯಿ ತುರಿ- 1 ಕಪ್
    * ಬೆಲ್ಲ -2 ಕಪ್
    * ಬಾದಾಮಿ – ಅರ್ಧ ಕಪ್ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    ಮಾಡುವ ವಿಧಾನ:
    * ಬಾಣಲೆಯಲ್ಲಿ ಒಂದು ಕಪ್ ಗೋಧಿ ನುಚ್ಚು ಹಾಕಿ ಸ್ವಲ್ಪ ಹುರಿದು ಕೊಂಡು ಕುಕ್ಕರಲ್ಲಿ ಹುರಿದ ನುಚ್ಚು ಮೂರು ಕಪ್ ನೀರು ಹಾಕಿ ಬೇಯಿಸಿಕೊಳ್ಳಬೇಕು.

    * ಮಿಕ್ಸಿಗೆ ತುರಿದ ತೆಂಗಿನ ಕಾಯಿ, ಬಾದಾಮಿ ಹಾಕಿ ನುಣ್ಣಗೆ ರುಬ್ಬಿ ಕೊಳ್ಳಬೇಕು

    * ಬೆಂದ ಗೋಧಿ ನುಚ್ಚಿಗೆ ಸೇರಿಸಿ, ಬೆಲ್ಲ ಹಾಕಿ ಕುದಿಸಿದರೆ ರುಚಿ ಮತ್ತು ಆರೋಗ್ಯಕರವಾದ ಗೋಧಿ ನುಚ್ಚಿನ ಪಾಯಸ ಸಿದ್ಧವಾಗುತ್ತದೆ.

  • ದಿನ ಭವಿಷ್ಯ: 04-11-2021

    ದಿನ ಭವಿಷ್ಯ: 04-11-2021

    ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯಣ,ಶರದ್ ಋತು,
    ಆಶ್ವಯುಜಮಾಸ,ಕೃಷ್ಣಪಕ್ಷ, ಅಮಾವಾಸ್ಯೆ,ಗುರುವಾರ,
    ಚಿತ್ತಾ ನಕ್ಷತ್ರ / ಉಪರಿ ಸ್ವಾತಿ ನಕ್ಷತ್ರ.
    ರಾಹುಕಾಲ: 01:35 ರಿಂದ 03:02
    ಗುಳಿಕಕಾಲ: 9:12 ರಿಂದ 10.40
    ಯಮಗಂಡಕಾಲ: 6:17 ರಿಂದ 7.45

    ಮೇಷ ರಾಶಿ:  ಅಧಿಕ ಧನಾಗಮನ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ

    ವೃಷಭ ರಾಶಿ: ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮನೋವೇದನೆ, ಸಾಲ ಮಾಡುವ ಸನ್ನಿವೇಶ
    ಆರೋಗ್ಯದಲ್ಲಿ ವ್ಯತ್ಯಾಸ

    ಮಿಥುನ ರಾಶಿ: ಪ್ರೀತಿ ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ, ಭಾವನೆಗಳು ಕಾಡುವುದು

    ಕಟಕ ರಾಶಿ:  ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ

    ಸಿಂಹರಾಶಿ:  ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ

    ಕನ್ಯಾ ರಾಶಿ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ, ಸ್ವಂತ ಉದ್ಯೋಗದವರಿಗೆ ಅನುಕೂಲ

    ತುಲಾ ರಾಶಿ:  ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಕಲ್ಪನೆಗಳಲ್ಲಿ ವಿಹರಿಸುವಿರಿ, ಸ್ವಂತ ಉದ್ಯಮದಲ್ಲಿ ಅನುಕೂಲ

    ವೃಶ್ಚಿಕರಾಶಿ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ಅಪಮಾನ

    ಧನಸ್ಸು ರಾಶಿ:  ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ, ಬಂಧುಗಳಿಂದ ಲಾಭ

    ಮಕರ ರಾಶಿ: ಅನಿರೀಕ್ಷಿತವಾಗಿ ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಅಧಿಕ ಖರ್ಚು

    ಕುಂಭ ರಾಶಿ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ
    ಉನ್ನತ ವಿದ್ಯಾಯೋಗ

    ಮೀನರಾಶಿ: ಮಕ್ಕಳಿಂದ ಆಕಸ್ಮಿಕ ನೋವು ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಆಯುಷ್ಯ ವೇದಾಂತ ಜ್ಞಾನದ ಬಗ್ಗೆ ಚಿಂತೆ

  • ನೋ ಪಟಾಕಿ ಎಂದವ್ರು 3 ದಿನ ಕಾರ್ ಬಳಸಬೇಡಿ, ನಡೆದುಕೊಂಡು ಹೋಗಿ: ಕಂಗನಾ ರಣಾವತ್

    ನೋ ಪಟಾಕಿ ಎಂದವ್ರು 3 ದಿನ ಕಾರ್ ಬಳಸಬೇಡಿ, ನಡೆದುಕೊಂಡು ಹೋಗಿ: ಕಂಗನಾ ರಣಾವತ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಪಟಾಕಿಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿರುವ ವಿರುದ್ಧ ಇನ್‍ಸ್ಟಾಗ್ರಾಮ್‍ವೊಂದರಲ್ಲಿ ಪೋಸ್ಟ್ ಹಾಕಿರುವುದು ಸಖತ್ ಸುದ್ದಿಯಾಗುತ್ತಿದೆ.

    ಸದ್ಗುರು ಪಟಾಕಿ ಬಗ್ಗೆ ಹೇಳಿರುವ ವಿಡಿಯೋವೊಂದನ್ನು ಹಂಚಿಕೊಂಡು, ಕಂಗನಾ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೀಪಾವಳಿ ಹೋರಾಟಗಾರರಿಗೆ ಇದು ಸರಿಯಾದ ಉತ್ತರ. ಅಂತಹವರು ಮೂರು ದಿನ ಆಫೀಸ್‍ಗೆ ಕಾರ್ ತೆಗೆದುಕೊಂಡು ಹೋಗಬೇಡಿ. ಮಿಲಿಯನ್‍ಗಟ್ಟಲೇ ಮರಗಳನ್ನು ವಿಶ್ವದಾದ್ಯಂತ ನೆಟ್ಟಿ ರೆಕಾರ್ಡ್ ಮಾಡಿದವರು ಈ ಮನುಷ್ಯ ಎಂದು ಕಂಗನಾ ರಣಾವತ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ಸದ್ಗುರು ಹೇಳಿದ್ದೇನು: ಚಿಕ್ಕವರಿದ್ದಾಗ ಸೆಪ್ಟೆಂಬರ್ ತಿಂಗಳು ಶುರುವಾಗುತ್ತಿದ್ದಂತೆ ಪಟಾಕಿ ಹೊಡೆಯುವ ಕನಸ್ಸು ಕಾಣುತ್ತಿದ್ದೆವು. ಕೆಲ ವರ್ಷಗಳಿಂದ ನಾನು ಪಟಾಕಿ ಹಚ್ಚಿಲ್ಲ. ದೀಪಾವಳಿ ಬರುವ ತನಕವೂ ಪಟಾಕಿ ಹೊಡೆಯುತ್ತಿದ್ದೆವು. ಆಮೇಲೆ ಒಂದು ತಿಂಗಳ ಬಳಿಕವೂ ಪಟಾಕಿ ಹೊಡೆಯುತ್ತಿದ್ದೆವು. ಕೆಲವರು ಪರಿಸರದ ಬಗ್ಗೆ ಇದ್ದಕ್ಕಿದ್ದಂತೆ ಕಾಳಜಿ ಮಾಡಿ ಮಕ್ಕಳು ಪಟಾಕಿ ಹೊಡೆಯಬಾರದು ಅಂತ ಹೇಳುತ್ತಿದ್ದಾರೆ, ಅದು ಸರಿಯಲ್ಲ. ಗಾಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು 3 ದಿನ ಆಫೀಸ್‍ಗೆ ಕಾರ್ ಓಡಿಸಬೇಡಿ, ಮಕ್ಕಳಿಗೆ ಪಟಾಕಿ ಹೊಡೆಯಲು ಬಿಡಿ. ಈ ತ್ಯಾಗ ಮಾಡುವುದರಿಂದ ಮಕ್ಕಳು ಪಟಾಕಿ ಹೊಡೆದು ಎಂಜಾಯ್ ಮಾಡಬಹುದು ಎಂದು ಸದ್ಗುರು ಹೇಳಿದ್ದಾರೆ. ಇದನ್ನೂ ಓದಿ: ಬ್ಲೇಡ್ ನಿಂದ ಅಪ್ಪು ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ

    ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಅವರು ಪಟಾಕಿ ಹೊಡೆಯೋದು ಬಹಳ ಹಳೆಯ ಸಂಪ್ರದಾಯ, ಜವಾಬ್ದಾರಿಯುತವಲ್ಲದ ದೀಪಾವಳಿ ಹಬ್ಬದ ಸಂಪ್ರದಾಯ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದಾದ ನಂತರದಲ್ಲಿ ಕಂಗನಾ ಈ ಪೋಸ್ಟ್ ಹಾಕಿದ್ದಾರೆ.

  • ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್

    ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್

    ಕೋಲಾರ : ನನ್ನನ್ನ ತುಂಬಾ ಜನರು ಜೈಲಿಗೆ ಕಳುಹಿಸಲು ಸಿದ್ದರಿದ್ದಾರೆ ಆದ್ರೆ ಅವರಿಗೆ ಗೊತ್ತಿಲ್ಲ ನಾನು ನಮ್ಮ ತಂದೆ ತಾಯಿಗೆ 8 ನೇ ಮಗ ಎಂದು, ಶ್ರೀಕೃಷ್ಣ ಕೂಡ ಅವರ ತಂದೆ ತಾಯಿಗೆ 8 ನೇ ಮಗ ಆತ ಹುಟ್ಟಿದ್ದು ಜೈಲಿನಲ್ಲೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮದಲ್ಲಿ ತೆಲುಗು ಬಾಷೆಯಲ್ಲಿ ತನ್ನ ವಿರೋಧಿಗಳಿಗೆ ಟಾಂಗ್ ಕೊಟ್ಟರು.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮಹಿಳಾ ಕಾಲೇಜು ಆವರಣದಲ್ಲಿ ಸುಮಾರು 300 ಸ್ತ್ರೀ ಶಕ್ತಿ ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ 23 ಕೋಟಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದುದ್ದಕ್ಕೂ ತೆಲುಗು ಬಾಷೆಯಲ್ಲಿ ವಿರೋಧಿಗಳಿಗೆ ಟಾಂಗ್ ಕೊಟ್ಟರು, ಇತ್ತೀಚೆಗೆ ಆರೋಗ್ಯ ಸಚಿವ ಸುಧಾಕರ್ ರಮೇಶ್ ಕುಮಾರ್ ಅವರನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದರು ಎಂದು ನೇರವಾಗಿ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ಡಿಸಿಸಿ ಬ್ಯಾಂಕ್ ರೈತರು ಹಾಗೂ ಮಹಿಳೆಯರಿಗೆ ದೇವಸ್ಥಾನ ಇದ್ದಂತೆ, ಅದನ್ನ ಹಾಳು ಮಾಡಲು ಸಾಕಷ್ಟು ಜನ ಕಾಯುತ್ತಿದ್ದಾರೆ 10 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ಅಸ್ಥಿತ್ವ ಕಳೆದುಕೊಂಡಿತ್ತು, ಆಗ ಯಾರೂ ಸಹ ಮಾತನಾಡಿಲ್ಲ, ಆದರೆ ಈಗ ಎಲ್ಲರೂ ಬ್ಯಾಂಕ್ ವಿರುದ್ದ ಮಾತನಾಡುತ್ತಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ತನ್ನ ಪತ್ನಿಯನ್ನ ನೆನೆದು ಭಾವುಕರಾದ ರಮೇಶ್ ಕುಮಾರ್, ಪತ್ನಿಗೆ ಅನಾರೋಗ್ಯ ಹಿನ್ನೆಲೆಯಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಸರ್ಜರಿಗೆ ಆಸ್ಪತ್ರೆಗೆ ತೆರಳುವ ವೇಳೆಯೂ ಜನರಿಗೆ ಒಳ್ಳೆಯದನ್ನ ಮಾಡಿ ಎಂದು ಕೈ ಹಿಡಿದುಕೊಂಡಾಕೆ ತನ್ನ ಸರ್ವಸ್ವವನ್ನ ಆಕೆ ನನಗಾಗಿ ಮುಡುಪಿಟ್ಟಿದ್ದಾಳೆ. ಆಕೆಗಾಗಿ ನಾನು ಏನೂ ಮಾಡಿಲ್ಲ, ಆಕೆ ನನ್ನ ಮಾವನ ಮಗಳು ಒಂದು ದಿನವೂ ನನಗೆ ಚಿನ್ನ, ಬಟ್ಟೆ ಬೇಕು ಎಂದು ಕೇಳಿಲ್ಲ ಭಾವುಕರಾಗಿ ಕಾರ್ಯಕ್ರಮದಲ್ಲಿದ್ದ ಹೆಣ್ಣು ಮಕ್ಕಳ ಗಮನ ಸೆಳೆದರು. ಇದನ್ನೂ ಓದಿ: ಬ್ಲೇಡ್ ನಿಂದ ಅಪ್ಪು ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ

    ಕಾರ್ಯಕ್ರಮದ ಬಳಿ ಮಾತನಾಡಿದ ಅವರು, ಸಿದ್ದರಾಮಯ್ಯ ಏನೇ ಹೇಳಿಕೆ ನೀಡಿದ್ದರು ಅದು ಸರಿಯಾಗಿಯೇ ಇರುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ರನ್ನ ರಮೇಶ್ ಕುಮಾರ್ ಸಮರ್ಥಿಸಿಕೊಂಡರು. ಅವರ ಹೇಳಿಕೆ ವಿರುದ್ದವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುವುದು ಸಹಜ, ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಪ್ರತಿಭಟನೆ ಮಾಡ್ತಿದೆ ಎಂದರೆ, ಅವರ ಹೇಳಿಕೆ ಸರಿಯಾಗಿಯೇ ಇರುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

  • ಗರ್ಲ್‍ಫ್ರೆಂಡ್ ಜೊತೆ ವಧು ಪರಾರಿ- ಪತಿಗೆ ಹೃದಯಾಘಾತ

    ಗರ್ಲ್‍ಫ್ರೆಂಡ್ ಜೊತೆ ವಧು ಪರಾರಿ- ಪತಿಗೆ ಹೃದಯಾಘಾತ

    ತಿರುವನಂತಪುರಂ: ಮದುವೆಯಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗರ್ಲ್‍ಫ್ರೆಂಡ್ ಜೊತೆ ಪರಾರಿಯಾಗಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

    ಮಹಿಳೆ ತಾನು ಮದುವೆಯಾದ ಮರುದಿನವೇ ಗಂಡನ ಮನೆಯಿಂದ ನಾಪತ್ತೆಯಾಗಿದ್ದಾಳೆ. ಹೆಂಡತಿ ಕಾಣದ ಕಾರಣ ಆಕೆಯ ಗಂಡನಿಗೆ ಹೃದಯಾಘಾತ ಉಂಟಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಶೂರ್‍ನ ಪಝುವಿಲ್‍ನ 23 ವರ್ಷದ ಮಹಿಳೆ ಹೀಗೆ ತನ್ನ ಗೆಳತಿಯೊಂದಿಗೆ ಪರಾರಿಯಾದಾಕೆ ಆಗಿದ್ದಾಳೆ. ಹೆಂಡತಿ ಪರಾರಿಯಾಗಿರುವ ಬಗ್ಗೆ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಆರು ದಿನ ತನಿಖೆ ಮಾಡಿದ ಪೊಲೀಸರಿಗೆ ಆಕೆ ತನ್ನ ಗೆಳತಿಯೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದೆ.

    ಮದುವೆಯಾದ ಮಾರನೇ ದಿನ ಬ್ಯಾಂಕ್‍ಗೆ ಹೋಗಿದ್ದ ಆಕೆ ಗಂಡನ ಮೊಬೈಲ್ ತೆಗೆದುಕೊಂಡು ನನ್ನ ಗೆಳತಿಯನ್ನು ಭೇಟಿ ಮಾಡಿ ವಾಪಾಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಬೈಕ್‍ನಲ್ಲಿ ಹೋದ ಆಕೆ ಮತ್ತೆ ವಾಪಾಸ್ ಬರಲೇ ಇಲ್ಲ. ಆಗ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ತ್ರಿಶೂರ್‍ನಿಂದ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಆ ಮಹಿಳೆ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಸಿಕ್ಕಿ ಬೀಳುತ್ತೇವೆಂಬ ಭಯದಿಂದ ಅವರಿಬ್ಬರೂ ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿಂದ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿಕೊಂಡು ಇದ್ದರು. ಅಂದಹಾಗೆ ವಿಚಿತ್ರವೆಂದರೆ ಇನ್ನೊಬ್ಬ ಮಹಿಳೆ ಕೂಡ ಕೆಲವೇ ದಿನಗಳ ಹಿಂದಷ್ಟೆ ಮದುವೆಯಾಗಿದ್ದಳು. ಇಬ್ಬರೂ ನವವಿವಾಹಿತೆಯರು ಮದುವೆಗೆ ತಮಗೆ ಹಾಕಿದ್ದ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದರು. ಅವರನ್ನು ಮಧುರೈನಲ್ಲಿ ಪತ್ತೆಹಚ್ಚಲಾಗಿದೆ. ಆ ಮಹಿಳೆಯನ್ನು ಹುಡುಕಿ ಗಂಡನ ಮನೆಗೆ ಸೇರಿಸಲಾಗಿದೆ.

    ಮದುವೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಓಡಿಹೋಗಲು ಬಯಸಿದ್ದಳು. ಆದರೆ ಮನೆಯಲ್ಲಿ ತನ್ನ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿಹೋಗಲು ನಿರ್ಧರಿಸಿದ್ದ ಆಕೆ ಅದಕ್ಕಾಗಿಯೇ ಮದುವೆಯಾಗಿದ್ದಳು ಎನ್ನಲಾಗಿದೆ.

  • ಬ್ಲೇಡ್ ನಿಂದ ಅಪ್ಪು  ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ

    ಬ್ಲೇಡ್ ನಿಂದ ಅಪ್ಪು  ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಗಲುವಿಕೆ ಸಹಿಸಲಾಗದೆ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯೊಬ್ಬಳು ಬೇಸತ್ತು ಬ್ಲೇಡ್ ನಿಂದ ಕೈ ಕೊಯ್ದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯಶಸ್ವಿನಿ ಎಂಬ ವಿದ್ಯಾರ್ಥಿನಿ ಅದೇ ಸಂಸ್ಥೆಗೆ ಸೇರಿದ ಹಾಸ್ಟೆಲ್ ನಲ್ಲಿದ್ದಳು. ಚಿಕ್ಕಂದಿನಿಂದಿಲೂ ಅಪ್ಪುವಿನ ಅಪ್ಪಟ ಅಭಿಮಾನಿಯಾಗಿರುವ ಯಶಸ್ವಿನಿ ಅಪ್ಪು ಹಠಾತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಖಿನ್ನತೆಗೊಳಗಾದ ಈಕೆ ಕೈ ಮೇಲೆ ಮೇಲೆ ಬ್ಲೇಡ್ ನಿಂದಲೇ ಅಪ್ಪು  ಎಂದು ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಕರವಸ್ತ್ರ ಹಾಗು ಬಿಳಿ ಹಾಳೆ ಮೇಲೆ ತನ್ನ ರಕ್ತದಿಂದಲೇ ಐ ಲವ್ ಯು ಅಪ್ಪು ಎಂದು ಬರೆದಿದ್ದಾಳೆ. ರಕ್ತಸ್ರಾವ ದಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

  • ವಾಯುಪಡೆಯ ಗ್ರೂಪ್​ ಕ್ಯಾಪ್ಟನ್ ಆಗಿ ಬಡ್ತಿ  ಪಡೆದ ಅಭಿನಂದನ್

    ವಾಯುಪಡೆಯ ಗ್ರೂಪ್​ ಕ್ಯಾಪ್ಟನ್ ಆಗಿ ಬಡ್ತಿ ಪಡೆದ ಅಭಿನಂದನ್

    ನವದೆಹಲಿ: ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿ ಅಭಿನಂದನ್ ವರ್ಧಮಾನ್ ಬಡ್ತಿ ಪಡೆದಿದ್ದಾರೆ.

    ವಿಂಗ್ ಕಮಾಂಡರ್ ಅಭಿನಂದನ್ ಎಂದಾಕ್ಷಣ ಅಂದು ಪಾಕ್‍ಗೆ ದಿಟ್ಟ್ ಉತ್ತರ ಕೊಟ್ಟು ಜೀವಂತ ಮರಳಿದ ಆರೋಚಕ ಕ್ಷಣಗಳು ನೆನಪಾಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಭಿನಂದನ್ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದರು. ಅವರಿದ್ದ ಮಿಗ್-21 ಹಾನಿಗೀಡಾದ ಕಾರಣ ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಜಿಗಿದು, ಸಿಕ್ಕಿಬಿದ್ದಿದ್ದರು. ನಂತರ ಪಾಕ್ ಯೋಧರು ಅವರನ್ನು ಬೇರೆಡೆಗೆ ಕರೆದೊಯ್ದಿದ್ದರು.

    ಬಂಧನದ ಅವಧಿಯಲ್ಲಿಯೂ ಆತ್ಮಗೌರವ ಕಾಪಾಡಿಕೊಂಡ ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ತಲೆ ಎತ್ತಿಯೇ ಗರ್ವದಿಂದ ಎಲ್ಲೆಡೆ ನಡೆಯುತ್ತಿದ್ದ ವೈಖರಿಯನ್ನೂ ಜನರು ಮೆಚ್ಚಿಕೊಂಡಿದ್ದರು. ಅಭಿನಂದನ್ ಅವರಿದ್ದ ವಾಯುಪಡೆಯ 51ನೇ ಸ್ಕ್ವಾರ್ಡನ್‍ಗೂ ಭಾರತ ಸರ್ಕಾರದಿಂದ ವಿಶೇಷ ಮಾನ್ಯತೆ ಸಿಕ್ಕಿತ್ತು. ಪಾಕಿಸ್ತಾನ ವಾಯುಪಡೆಯು ಫೆಬ್ರುವರಿ 27, 2019ರಂದು ಭಾರತದ ಮೇಲೆ ದಾಳಿ ನಡೆಸಲು ಮಾಡಿದ ಪ್ರಯತ್ನವನ್ನು ಹಿಮ್ಮೆಟ್ಟಿಸುವಲ್ಲಿ ಈ ತುಕಡಿಯ ಕಾರ್ಯಕ್ಷಮತೆ ಪರಿಣಾಮಕಾರಿಯಾಗಿತ್ತು. ಕೇಂದ್ರೀಯ ಮೀಸಲು ಪೊಲೀಸ್ ಸಿಬ್ಬಂದಿ ಇದ್ದ ಬಸ್ ಒಂದರ ಮೇಲೆ ಉಗ್ರರು ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತವು ಬಾಲಾಕೋಟ್‍ನಲ್ಲಿದ್ದ ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಅಭಿನಂದನ್ ವರ್ಧಮಾನ್ ಅವರಿಗೆ ಶೌರ್ಯ ಪ್ರಶಸ್ತಿಯನ್ನೂ ನೀಡಲಾಗಿತ್ತು. ಇದೀಗ ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಆಗಿ ಪದೋನ್ನತಿ ನೀಡಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

  • ತಂದೆಯ ಮೂಢನಂಬಿಕೆ, ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟ ಬಾಲಕಿ

    ತಂದೆಯ ಮೂಢನಂಬಿಕೆ, ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟ ಬಾಲಕಿ

    ತಿರುವನಂತಪುರಂ: ತೀವ್ರ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕಿ ಅಪ್ಪನ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

    ಈ ಸಂಬಂಧಬಾಲಕಿ ಫಾತಿಮಾಳ ಅಪ್ಪ ಸತ್ತಾರ್ ಹಾಗೂ ಸಲಹೆ ನೀಡಿದ ಮುಸ್ಲಿಂ ಧರ್ಮದ ಮಖಂಡ ಮೊಹಮ್ಮದ್ ಉವೈಸ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಹಿನ್ನೆಲೆ: ಬಾಲಕಿ ಫಾತೀಮಾ ತೀವ್ರ ಜ್ವರದಿಂದ ಬಳಲುತ್ತಿದ್ದಳು ಆಕೆಯ ಮೇಲೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂದು ಮೊಹ್ಮದ್ ಉವೈಸ್ ಹೇಳಿದ್ದಾರೆ. ಇವರು ಮುಸ್ಲಿಂ ಧರ್ಮದ ಮುಖಂಡ ಆಗಿದ್ದು, ಬಾಲಕಿಯ ಅಪ್ಪ ಅವರ ಬಳಿ ಕರೆದುಕೊಂಡು ಹೋಗಿದ್ದರು. ಆಕೆಗೆ ಪವಿತ್ರ ಎನಿಸುವ ನೀರು ಕುಡಿಸಿ ಅವರ ಎದುರಿಗೆ ಕುರಾನ್ ಓದಿದರೆ ಮಗಳು ಆರೋಗ್ಯವಾಗುತ್ತಾಳೆ ಎಂದು ಸಲಹೆ ನೀಡಿಲಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ಬಾಲಕಿ ಪರಿಸ್ಥಿತಿ ಬಿಗಡಾಯಿಸಿತ್ತು. ಇಂಥ ಪರಿಸ್ಥಿತಿಯಲ್ಲಿಯೂ ಆಕೆಯ ಅಪ್ಪ ಮುಖಂಡ ಹೇಳಿದಂತೆ ನೀರು ಕುಡಿಸಿ ಕುರಾನ್ ಓದತೊಡಗಿದ್ದಾನೆ. ಇಷ್ಟಾಗುತ್ತಲೇ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರೂ ಬಾಲಕಿ ಅಪ್ಪ ಕೇಳಿಲ್ಲ ಎಂದು ನೆರೆಯವರು ಹೇಳಿದ್ದಾರೆ. ಈ ಹೆನ್ನೆಲೆಯಲ್ಲಿ ಧರ್ಮದ ಮುಖಂಡ ಹಾಗೂ ಬಾಲಕಿಯ ಅಪ್ಪ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ತೀತ್ರ ಉಸಿರಾಟ ತೊಂದರೆಯಿಂದ ಬಳಲುತ್ತದ್ದದ್ದು ತಿಳಿದುಬಂದಿದೆ. ಸಾಯುವಂಥ ರೋಗ ಆಗಿರಲಿಲ್ಲ. ಬಾಲಕಿಗೆ ಸರಿಯಾದ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದಳು ಎಂದು ವೈದ್ಯರು ಹೇಳಿದ್ದಾರೆ.

  • ಮಗಳನ್ನು ಮಾರಾಟ ಮಾಡಿ ಬಿಕ್ಕಿಬಿಕ್ಕಿ ಅತ್ತ ತಂದೆ

    ಮಗಳನ್ನು ಮಾರಾಟ ಮಾಡಿ ಬಿಕ್ಕಿಬಿಕ್ಕಿ ಅತ್ತ ತಂದೆ

    ಕಾಬೂಲ್: 9 ವರ್ಷದ ಮಗಳನ್ನು 55 ವರ್ಷದವನಿಗೆ ಮಾರಾಟ ಮಾಡಿದ ತಂದೆ ಬಿಕ್ಕಿಬಿಕ್ಕಿ ಅತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಅಬ್ದುಲ್ ಮಲಿಕ್ ತನ್ನ 9 ವರ್ಷದಮಗಳನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾರೆ. ಅಬ್ದುಲ್ ಮಲಿಕ್ ಅವರ ಕುಟುಂಬದಲ್ಲಿ ಎಂಟು ಜನರಿದ್ದು, ಎಲ್ಲರೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿರುವ ಅಬ್ದುಲ್ ಕೊನೆಗೆ ಮಗಳನ್ನು ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಈಗ ಇದು ನಿಮ್ಮ (ಕೊರ್ಬಾನ್) ವಧು, ದಯವಿಟ್ಟು ಅವಳನ್ನು ನೋಡಿಕೊಳ್ಳಿ, ಈಗ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು, ಅವಳನ್ನು ಕೊಲ್ಲಬೇಡಿ ಎಂದು ಅಬ್ದುಲ್ ಮಲಿಕ್ ಮಗಳ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿ ಕಣ್ಣೀರು ಹಾಕಿದ್ದಾರೆ. ನಮಗೆ ತಿನ್ನಲು ಏನೂ ಇಲ್ಲದ ಕಾರಣ ನನ್ನ ತಂದೆ ನನ್ನನ್ನು ಮಾರಿದ್ದಾರೆ. ನನ್ನನ್ನು ಒಬ್ಬ ಮುದುಕನಿಗೆ ಮಾರಾಟ ಮಾಡಿದ್ದಾರೆ ಎಂದು 9 ವರ್ಷದ ಬಾಲಕಿ ಹೇಳಿದ್ದಾಳೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು