Tag: publictv

  • ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಹೈದರಾಬಾದ್: ಒಂದುವರೆಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ವ್ಯಕ್ತಿ ಕೋಣವೊಂದಕ್ಕೆ ತೊಡಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಹರಿಯಾಣದಿಂದ ಒಂದು ಕೋಣವನ್ನು ತರಿಸಲಾಗಿದ್ದು, ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್‍ನ ಚಾಪೆಲ್ ಬಜಾರ್‍ನ ಲಡ್ಡು ಯಾದವ್ ಎಂಬಾತ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬಾತನಿಂದ ತಂದು, ಸದರ್ ಉತ್ಸವದಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಈ ಕೋಣವನ್ನು ಪ್ರದರ್ಶನಕ್ಕಾಗಿ ಮಾತ್ರ ತಂದಿದ್ದು, ಇದಕ್ಕೆ ಕೋಣದ ಮಾಲೀಕ ಬಲ್ವೀರ್ ಸಿಂಗ್ ಯಾವುದೇ ಹಣವನ್ನೂ ಪಡೆದಿಲ್ಲ. ಕೋಣ ತಂದ ಲಡ್ಡು ಯಾದವ್ ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಿದ್ದಾನೆ. ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಉತ್ಸವವಾದ ಸದರ್ ಉತ್ಸವಕ್ಕೆ ಹೈದರಾಬಾದ್ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಕೋಣ ಸಾಕಷ್ಟು ಗಮನ ಸೆಳೆಯುತ್ತಿದೆ.

  • ಮಳೆ ನೀರಿನಿಂದ ಬಡಾವಣೆ ಜಲಾವೃತ

    ಮಳೆ ನೀರಿನಿಂದ ಬಡಾವಣೆ ಜಲಾವೃತ

    ಆನೇಕಲ್: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಡಾವಣೆಯೊಂದು ಸಂಪೂರ್ಣ ಜಲಾವೃತವಾಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ಕಂಡು ಬಂದಿದೆ.

    ಆನೇಕಲ್ ತಾಲೂಕಿನ ಹಾರಗದ್ದೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರೋ ವೀನಸ್ ಕೌಂಟಿ ಬಡಾವಣೆ ಕಳೆದ ಎರಡು ದಿನ ಸುರಿದ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಮಳೆಯ ನೀರಿನ ಜೊತೆಗೆ ಜಿಗಣಿ ಕೈಗಾರಿಕಾ ಪ್ರದೇಶದ ಕೊಳಚೆ ನೀರು ಸೇರಿ ಇಡೀ ಬಡಾವಣೆಯೇ ಗಬ್ಬುನಾರುತ್ತಿದೆ. ಈ ಸಮಸ್ಯೆಗೆ ಬಡಾವಣೆಯ ನಿರ್ಮಿಸಿದವರ ಅವೈಜ್ಞಾನಿಕ ಒಳಚರಂಡಿ ನಿರ್ಮಾಣ ಹಾಗೂ ಬಡಾವಣೆ ಪಕ್ಕದಲ್ಲಿದ್ದ 40 ಅಡಿ ರಾಜಕಾಲುವೆಯನ್ನು 20 ಅಡಿಯಷ್ಟು ಕಿರಿದು ಮಾಡಿರೋದು ಕಾರಣವಾಗಿದೆ. ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಕೇವಲ 2 ದಿನದ ಮಳೆಗೆ ಬಡಾವಣೆಯ ರಸ್ತೆಗಳು ಪಾರ್ಕ್ ಕೊಳಚೆ ನೀರಿನಿಂದ ತುಂಬಿಹೋಗಿದ್ದು ಇದೆ ನೀರಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದ್ದು ರೋಗದ ಭೀತಿ ಇಲ್ಲಿನ ಬಡಾವಣೆ ನಿವಾಸಿಗಳನ್ನು ಕಾಡುತ್ತಿದೆ. ಮಳೆ ನೀರು ಬಡಾವಣೆಗೆ ನುಗ್ಗಿದ್ದರಿಂದ ಬೈಕ್ ಕಾರುಗಳು ನೀರಿನಲ್ಲಿ ಮುಳುಗಿದ್ದು ದುರಸ್ತಿ ಮಾಡಲಾಗದಷ್ಟು ಹಾಳಾಗಿವೆ. ಈ ಸಂಬಂಧ ಬಡಾವಣೆ ನಿವಾಸಿಗಳು ಹಾರಗದ್ದೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಅವರ ಇದು ನಮ್ಮ ಕೆಲಸವಲ್ಲ ಎಂದು ಸ್ಥಳೀಯರು ದೂರಿದ್ದಾರೆ.

  • ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ  ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಕೋಲಾರ : ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಲಾರ ಸಂಸದ ಎಸ್. ಮುನಿಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

    ಕೋಲಾರದ ಕೆಜಿಎಫ್ ತಾಲ್ಲೂಕಿನ ಕೋಟಿಲಿಂಗ ಕ್ಷೇತ್ರದಲ್ಲಿ ಮೋದಿ ಅವರ ಕೇದರನಾಥ್ ದೇವಾಲಯ ಉದ್ಘಾಟನೆ ಕಾರ್ಯಕ್ರಮ ನೇರಪ್ರಸಾರ ವೀಕ್ಷಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅಹಿಂದ ಕಟ್ಟಿದ್ದಾಗ ನಾವು ಸಹ ದಲಿತರು ನಿಮ್ಮ ಹಿಂದೆ ಇದ್ದೇವು, ನಿಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಥ್ ನೀಡಿದ್ದೇವೆ. ಜೆಡಿಎಸ್‍ನಲ್ಲಿ ಕುಮಾರಸ್ವಾಮಿಯಿಂದ ಅಧಿಕಾರ ಸಿಗಲ್ಲ ಅನ್ನೋ ಕಾರಣಕ್ಕೆ ಕಾಂಗ್ರೇಸ್‍ಗೆ ಬಂದ್ರಿ, ಪುನರ್ಜನ್ಮ ಕೊಟ್ಟ ಕಾಂಗ್ರೇಸ್‍ನಲ್ಲಿ ಹಿರಿಯ ದಲಿತ ಮುಖಂಡರನ್ನ ತುಳಿದು ಸಿಎಂ ಅಗಿದ್ದು ನೀವು ಎಂದು ಕಿಡಿಕಾರಿದ್ದಾರೆ.

    ಪರಮೇಶ್ವರ ಅವರನ್ನ ಸೋಲಿಸಿ ನೀವು ಸಿಎಂ ಅಗಿದ್ದು, ದಲಿತರು ಸಿಎಂ ಆಗೋದನ್ನ ತಪ್ಪಿಸಿದ್ದೇ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು. ಅಲ್ಲದೆ ಹಿರಿಯ ಮುಖಂಡರಾಗಿ ದಲಿತರ ಬಗ್ಗೆ ಮಾತನಾಡುವಾಗ ಹಗುರವಾಗಿ ಮಾತನಾಡಬೇಡಿ, ಮುಂದಿನ ಚುನಾವಣೆಯಲ್ಲಿ ನಾವೇನೆಂದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಬಂದಿದ್ದು, ಹೊಟ್ಟೆ ಪಾಡಿಗಾ ಅಥವಾ ಅಧಿಕಾರ ದಾಹಕ್ಕ? ದಲಿತರು ಬಿಜೆಪಿಗೆ ಹೋಗಿರುವುದು ಹೊಟ್ಟೆ ಪಾಡಿಗಾಗಿ ವಿಚಾರಕ್ಕೆ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಎಸ್. ಮುನಿಸ್ವಾಮಿ, ದಲಿತರನ್ನ ಮೆಟ್ಟಿಲುಗಳಂತೆ ಉಪಯೋಗಿಸಿಕೊಂಡು ಸಿಎಂ ಆದವರು ನೀವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಟಾಂಗ್ ನೀಡಿದ್ದಾರೆ.

  • ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದಿದ್ದೇನೆ: ಸಿಧು

    ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದಿದ್ದೇನೆ: ಸಿಧು

    ಚಂಡೀಗಢ: ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದೇನೆ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ವೈಯಕ್ತಿಕ ಅಹಂಕಾರದ್ದಲ್ಲ. ಪ್ರತಿಯೊಬ್ಬ ಪಂಜಾಬಿಗರ ಹಿತಾಸಕ್ತಿಯಾಗಿತ್ತು. ಅದಕ್ಕಾಗಿಯೇ ನಾನು ನನ್ನ ಹೆಸರನ್ನು ಬಹಳ ಉಗ್ರವಾಗಿ ಸಮರ್ಥಿಸಿಕೊಳ್ಳುತ್ತೇನೆ. ಏಕೆಂದರೆ ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಎಂದಿದ್ದಾರೆ. ಪಂಜಾಬ್ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಗೊಂದಲಗಳ ನಡುವೆ ಈ ಇಬ್ಬರು ನಾಯಕನೊಂದಿಗೆ ಸಭೆ ನಡೆಸಿದ ಬಳಿಕ ಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ಸಿಧು ಹೇಳಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸಿಧು ಈ ರೀತಿಯ ಹೇಳಿಕೆ ನೀಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರೊಂದಿಗಿನ ಮುಸುಕಿನ ಗುದ್ದಾಟ ಹಿನ್ನೆಲೆಯಲ್ಲಿ ಸಿಧು ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಆರ್ಡರ್ ಮಾಡಿದ್ದು ಕವರ್, ಬಂದಿದ್ದು ಒರಿಜಿನಲ್ ಪಾಸ್‌ಪೋರ್ಟ್‌!

    ಆರ್ಡರ್ ಮಾಡಿದ್ದು ಕವರ್, ಬಂದಿದ್ದು ಒರಿಜಿನಲ್ ಪಾಸ್‌ಪೋರ್ಟ್‌!

    ತಿರುವನಂತಪುರಂ: ಆರ್ಡರ್ ಮಾಡಿದ ವಸ್ತುಗಳ ಬದಲಾಗಿ ಗ್ರಾಹಕರಿಗೆ ಬೇರೆ ವಸ್ತುಗಳನ್ನು ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ಪಾಸ್‍ಪೋರ್ಟ್ ಕವರ್ ಆರ್ಡರ್ ಮಾಡಿದೆ ಒರಿಜಿನಲ್ ಪಾಸ್‌ಪೋರ್ಟ್‌ ಡೆಲಿವರಿಯಾಗಿದೆ. ಈ ಘಟನೆ ವಯನಾಡು ಜಿಲ್ಲೆಯ ಕಣಿಯಂಬೆಟ್ಟ ಎಂಬಲ್ಲಿ ನಡೆದಿದೆ.

    ನಡೆದಿದ್ದೇನು: ಮಿಥುನ್ ಕಳೆದ ಅಕ್ಟೋಬರ್ 30ರಂದು ಆನ್ಲೈನ್‍ನಲ್ಲಿ ಪಾಸ್‌ಪೋರ್ಟ್‌ ಕವರ್ ಆರ್ಡರ್ ಮಾಡಿದ್ದರು. ನವೆಂಬರ್ 1 ರಂದು ಆರ್ಡರ್ ಮಾಡಿದ್ದ ಕವರ್‍ನ ಪಾರ್ಸೆಲ್ ತಲುಪಿದೆ. ಪಾರ್ಸೆಲ್ ತೆರೆದು ನೋಡಿದರೆ ಅದರಲ್ಲಿ ಪಾಸ್‍ಪೋರ್ಟ್ ಕವರ್ ಜೊತೆಗೆ ಬೇರೆ ವ್ಯಕ್ತಿಯ ಪಾಸ್‌ಪೋರ್ಟ್‌ ಕೂಡ ಬಂದಿದೆ. ಕೂಡಲೇ ಅವರು ಕಸ್ಟಮರ್ ಕೇರ್‍ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

     

    ಬಳಿಕ ಮಿಥುನ್ ಬಾಬು ಪಾಸ್‌ಪೋರ್ಟ್‌ಅನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಪ್ರಯತ್ನ ಆರಂಭಿಸಿದ್ದಾರೆ. ಪಾಸ್‌ಪೋರ್ಟ್‌ನಲ್ಲಿರುವ ವಿವರಗಳ ಪ್ರಕಾರ, ಅದು ತ್ರಿಶೂರ್‍ನ ಮೊಹಮ್ಮದ್ ಸಾಲಿಹ್ ಎಂಬುವರಿಗೆ ಸೇರಿದ್ದೆಂದು ಗೊತ್ತಾಗಿದೆ. ಪಾಸ್‌ಪೋರ್ಟ್‌ನಲ್ಲಿ ಫೋನ್‍ನಂಬರ್‍ನಂತಹ ವಿವರಗಳಿಲ್ಲ. ಹೀಗಿದ್ದರೂ ಮಿಥುನ್, ಸಾಲಿಹ್ ಅವರ ಮಾಹಿತಿ ಸಂಗ್ರಹಿಸಿ ಸಂಪರ್ಕಿಸಿದ್ದಾರೆ. ಶೀಘ್ರವೇ ತಮ್ಮ ಪಾಸ್‌ಪೋರ್ಟ್‌ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ


    ಸಾಲಿಹ್ ಮೊದಲು ಪಾಸ್‌ಪೋರ್ಟ್‌ ಕವರ್ ಆರ್ಡರ್ ಮಾಡಿದ್ದಾರೆ. ಕವರ್ ಬಂದಾಗ ಅದರಲ್ಲಿ ತನ್ನ ಪಾಸ್‌ಪೋರ್ಟ್‌ ಇಟ್ಟು ಚೆಕ್ ಮಾಡಿದ್ದಾರೆ. ಇಷ್ಟವಾಗದಿದ್ದಾಗ ಕವರ್ ವಾಪಸ್ ಕಳಿಸಿದ್ದಾರೆ. ಆದರೆ ಪಾಸ್‌ಪೋರ್ಟ್‌ ಅನ್ನು ಕವರ್‍ನಲ್ಲೇ ಬಿಟ್ಟು ವಾಪಸ್ ಮಾಡಿರಬಹದು ಎಂದು ಮಿಥುನ್ ಬಾಬು ಹೇಳಿದ್ದಾರೆ. ಕವರ್ ವಾಪಸ್ ಪಡೆದಿದ್ದ ಅಮೆಜಾನ್ ಅದನ್ನು ಪರಿಶೀಲನೆ ಮಾಡದೆ ಬೇರೆ ಆರ್ಡರ್ ಬಂದಾಗ ಅದನ್ನು ಮತ್ತೊಬ್ಬ ಗ್ರಾಹಕನಿಗೆ ಕಳುಹಿಸಿದ್ದಾಗ ಇಂಥಹ ಎಡವಟ್ಟು ಆಗಿದೆ.

  • ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ನವದೆಹಲಿ: ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಇಷ್ಟುದಿನ ತೈಲ ಬೆಲೆ ಏರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನೇತೃತ್ವ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದ ಸಾಮಾನ್ಯರ ಜೀವನ ಸಂಕಷ್ಟಕ್ಕೆ ತಿರುಗಿದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

     

    ಕೇಂದ್ರ ಸರ್ಕಾ ತೈಲ ಬೆಲೆ ಇಳಿಕೆ ಮಾಡಿದೆ. ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಇಳಿಕೆಯ ನಂತರ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ತೈಲ ಬೆಲೆ ಇಳಿಕೆ ಮಾಡಿದ್ದು, ಹೃಯದದಿಂದ ಅಲ್ಲ, ಬದಲಾಗಿ ಭಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೂಟಿಕೋರ ಸರ್ಕಾರಕ್ಕೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ ಎಂದು ಟ್ವೀಟ್ ಮಾಡಿ ಆಢಳಿತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 10 ರೂ. ಹಾಗೂ 5 ರೂ. ಕ್ಕೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿರಂತರವಾಗಿತ್ತು. ಅಕ್ಟೋಬರ್ ಒಂದೇ ತಿಂಗಳಲ್ಲಿ ಸುಮಾರು 30ಕ್ಕೂ ಅಧಿಕ ಬಾರಿ ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಕೆಯಾಗಿತ್ತು. ಇದರಿಂದ ಜನ ಸಾಮಾನ್ಯರಿಗೆ ನೇರವಾಗಿ ಪರಿಣಾಮ ಬೀರುವುದಲ್ಲದೇ ಪೆಟ್ರೋಲ್, ಡೀಸೆಲ್ ಅವಲಂಬಿತ ಎಲ್ಲ ವಸ್ತುಗಳ ಬೆಲೆಯೂ ಅಧಿಕವಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಜನ ಸಾಮಾನ್ಯರ ಆಕ್ರೋಶ ಎದುರಿಸಲಾಗದ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದವು. ಈ ವಿಚಾರವನ್ನು ಗಣನೆಗೆ ತೆಗೆದುಕೊಂಡ ಮೋದಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

  • ಪಟಾಕಿ ಸ್ಫೋಟಗೊಂಡು ಅಪ್ಪ, ಮಗನ ದೇಹ ಛಿದ್ರ ಛಿದ್ರ

    ಪಟಾಕಿ ಸ್ಫೋಟಗೊಂಡು ಅಪ್ಪ, ಮಗನ ದೇಹ ಛಿದ್ರ ಛಿದ್ರ

    ಪಾಂಡಿಚೆರಿ: ಅಪ್ಪ- ಮಗ ಪಟಾಕಿಗಳನ್ನು ತೆಗೆದುಕೊಂಡು ಸ್ಕೂಟರ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ನಡುರಸ್ತೆಯಲ್ಲಿ ಇದ್ದಕ್ಕಿದ್ದ ಹಾಗೇ ಪಟಾಕಿ ಸ್ಫೋಟಗೊಂಡು, ಅಪ್ಪ- ಮಗನ ದೇಹ ಛಿದ್ರ ಛಿದ್ರವಾಗಿ ಬಿದ್ದಿರುವ ಘಟನೆ ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ಈ ಘಟನೆ ನಡೆದಿದೆ.

    ತಂದೆ ಕಲೈನೇಸನ್ ಮತ್ತು ಅವರ ಮಗ ಪ್ರದೀಪ್ (7) ಮೃತರಾಗಿದ್ದಾರೆ. ಪಟಾಕಿಗಳ ಬಾಕ್ಸ್‍ನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ:ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

    ವೀಡಿಯೋದಲ್ಲಿ ಏನಿದೆ?
    ಕಲೈನಾಸನ್ ಸ್ಕೂಟರ್ ಓಡಿಸುತ್ತಿದ್ದಾಗ, ಅವರ ಮಗ ಪ್ರದೀಪ್ ಮುಂಭಾಗದಲ್ಲಿ ಕುಳಿತುಕೊಂಡಿದ್ದ. ತಿರುವಿನಲ್ಲಿ ವೇಗವಾಗಿ ಬಂದ ಸ್ಕೂಟರ್ ಸ್ಫೋಟಗೊಂಡು ಬಾಲಕ ಮತ್ತು ಆತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ದೃಶ್ಯ ಸಿಸಿಟಿವಿ ವೀಡಿಯೋದಲ್ಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ಈ ಘಟನೆಯಲ್ಲಿ ಸ್ಫೋಟಗೊಂಡ ಸ್ಕೂಟರ್ ಪಕ್ಕದಲ್ಲಿ ಬರುತ್ತಿದ್ದ ಮೂವರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್‍ಗೆ ಕರೆದೊಯ್ಯಲಾಯಿತು. ಒಂದು ಲಾರಿ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಘಟನೆ ನಡೆದ ಕೂಡಲೇ ವಿಲ್ಲುಪುರಂ ಜಿಲ್ಲಾ ಡಿಐಜಿ ಪಾಂಡಿಯನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

  • ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

    ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

    ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಪತ್ನಿ ತಾಹಿರಾ ಕಶ್ಯಪ್ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಕುರಿತಾದ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಾಹಿರಾ ತನ್ನದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಕೆಲವು ಸಂಗತಿಗಳು ವೈರಲ್ ಆಗಿದೆ. ಆಯುಷ್ಮಾನ್ ಮಾಡಿರುವ ತಮಾಷೆಯ ಘಟನೆಯನ್ನು ಬರೆದುಕೊಂಡಿದ್ದಾರೆ. ಈ ಪುಸ್ತಕವು ಮೊದಲ ಬಾರಿ ತಾಯಿಯಾಗುವ ಮಹಿಳೆಯರು ಮತ್ತು ಸಮಾಜದ ಇತರ ಮಹಿಳೆಯರಿಂದ ಸ್ವೀಕರಿಸುವ ತೀರ್ಪು ಕುರಿತು ವಿವರಿಸಿದ್ದಾರೆ. ಜೊತೆಗೆ ಪತಿ ಆಯುಷ್ಮಾನ್ ತನ್ನ ಎದೆ ಹಾಲನ್ನು ಸೇವಿಸಿದರ ಬಗ್ಗೆ ಹೇಳಿಕೊಂಡಿದ್ದಾರೆ.

    ಆಯುಷ್ಮಾನ್ ಪತ್ನಿ ತಾಹಿರಾ ಎರಡನೇ ಹನಿಮೂನ್‍ಗೆ ಬ್ಯಾಂಕಾಕ್ ಹೋಗಲು ನಿರ್ಧರಿಸಿದ್ದರು. ಮೂರು ದಿನಗಳ ಪ್ರವಾಸ ಇದಾಗಿತ್ತು. ಈ ಸಮಯದಲ್ಲಿ ತನ್ನ ಏಳು ತಿಂಗಳ ಮಗು ವಿರಾಜ್‍ವೀರ್‍ನನ್ನು ತನ್ನ ಹೆತ್ತವರ ಆರೈಕೆಯಲ್ಲಿ ಬಿಟ್ಟುಹೋಗುವುದೆಂದು ನಿರ್ಧರಿಸಿದ್ದರು. ತಾಹಿರಾ ಮತ್ತು ಆಯುಷ್ಮಾನ್ ಬ್ಯಾಂಕಾಕ್‍ಗೆ ಹೊರಡುವ ಮೊದಲು ಮಗುವಿಗಾಗಿ ಕೆಲವು ಬಾಟಲಿಯಲ್ಲಿ ಎದೆ ಹಾಲು ತುಂಬಿಸಿ ನಂತರ ವಿಮಾನ ನಿಲ್ದಾಣಕ್ಕೆ ಹೊರಟು ಬಂದರು. ಏರ್ಪೋರ್ಟ್ ತಲುಪಿ ಅಲ್ಲಿ ತಪಾಸಣೆ ಮಾಡುವ ವೇಳೆ ತಾಹಿರಾಗೆ ಮನೆಯಿಂದ ಕರೆ ಬರುತ್ತದೆ. ಮಗುವಿಗಾಗಿ ನೀನು ತುಂಬಿಸಿಟ್ಟಿದ್ದ ಎದೆ ಹಾಲು ಮುಗಿದಿದೆ ಎಂದು ಹೇಳುತ್ತಾರೆ. ಅದು ಮುಗಿದಿದೆ ಎಂಬ ಸುದ್ದಿ ಕೇಳಿ ಆಕೆಗೆ ಶಾಕ್ ಆಗುತ್ತದೆ. ಇಷ್ಟು ಬೇಗ ಹೇಗೆ ಖಾಲಿಯಾಗಿತು ಎಂದು ಆಲೋಚಿಸುತ್ತಾಳೆ. ನಡೆದ ಘಟನೆಯನ್ನು ಗಂಡನ ಬಳಿ ವಿವರಿಸುತ್ತಾಳೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    ತಾಹಿರಾ ಪತಿಯ ಬಳಿ ಹೇಳಿದಾಗ ಆಯುಷ್ಮಾನ್ ನಗುತ್ತಲೇ ಉತ್ತರಿಸುತ್ತಾರೆ. ಅದರಲ್ಲಿ ಎಲ್ಲ ಪೋಷಕಾಂಶಗಳೂ ತುಂಬಿವೆ ಎಂದು ಹೇಳುತ್ತಾರೆ. ಅಷ್ಟಕ್ಕೂ ಆದಿದ್ದೇನೆಂದರೆ, ಆಯುಷ್ಮಾನ್ ತಾಹಿರಾ ತುಂಬಿಸಿಟ್ಟಿದ ಪೌಷ್ಟಿಕವಾದ ಎದೆ ಹಾಲನ್ನು ಪ್ರೋಟೀನ್ ಶೇಕ್‍ನೊಂದಿಗೆ ಬೆರೆಸಿ ಕುಡಿದಿದ್ದರು. ಅಂದಿನ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸಲು ತನ್ನ ಪತಿ ಆಯುಷ್ಮಾನ್ ಮಗುವಿಗಾಗಿ ತೆಗೆದಿಟ್ಟ ಎದೆ ಹಾಲನ್ನು ಕದ್ದು ಕುಡಿದಿದ್ದಾರೆ ಎಂದು ತಾಹಿರಾ ಪುಸ್ತಕದಲ್ಲಿ ಹೇಳಿದ್ದಾಳೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

  • ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ವಿವಾಹವಾದ ನಂತರ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಅವರು ಭಾರತ ತೊರೆದರೂ ಇಲ್ಲಿಯ ಸಂಸ್ಕೃತಿಯನ್ನು ಚೂರೂ ಮರೆತಿಲ್ಲ. ಇದಕ್ಕೆ ಸಾಕ್ಷಿ ಇವರು ಅಮೆರಿಕಾದಲ್ಲಿ ಇಂದು ಹಬ್ಬ ಆಚರಣೆ ಮಾಡಿರುವ ಫೋಟೋಗಳಾಗಿವೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ಅವಳ ಕೃಪೆ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ದೀಪಾವಳಿಯ ಶುಭಾಶಯಗಳು ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಪ್ರಿಯಾಂಕಾ ಅವರ ದೇಶ ಪ್ರೇಮ ಮತ್ತು ಸಂಸ್ಕೃತಿ ಕುರಿತಾಗಿ ಇರುವ ಕಾಳಜಿಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    ಪತಿ ನಿಕ್ ಜೋನಸ್ ಜೊತೆ ಸೇರಿಕೊಂಡು ಪ್ರಿಯಾಂಕಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಿಕ್ ಜೋನಸ್ ಬಿಳಿ ಕುರ್ತಾ ತೊಟ್ಟರೆ, ಪ್ರಿಯಾಂಕಾ ಹಳದಿ ಬಣ್ಣದ ಸೀರೆ ಉಟ್ಟಿದ್ದಾರೆ. ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ಈಗ ದೀಪಾವಳಿ ಹಬ್ಬದ ಸಂಭ್ರಮ. ಹಿಂದುಗಳ ಪಾಲಿಗೆ ಇದು ದೊಡ್ಡ ಹಬ್ಬ. ಇದನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದಾರೆ.

  • ಮಗನ ಪುಟ್ಟ ಕೈ ಜೊತೆಗೆ ಹಬ್ಬಕ್ಕೆ ನಿಖಿಲ್ ವಿಶ್

    ಮಗನ ಪುಟ್ಟ ಕೈ ಜೊತೆಗೆ ಹಬ್ಬಕ್ಕೆ ನಿಖಿಲ್ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರು ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯವನ್ನು ಈ ಬಾರಿ ಮಗನ ಜೊತೆಗೆ ಕೊಂಚ ವಿಭಿನ್ನವಾಗಿ  ಕೋರಿದ್ದಾರೆ.

    ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡು ಅವರ ಮುದ್ದು ಕಂದನ ಪುಟ್ಟದಾದ ಕೈ ಫೋಟೋವನ್ನು ಹಂಚಿಕೊಂಡಿದ್ದಾರೆ. ನಿಖಿಲ್, ಪತ್ನಿ, ಮಗ ಈ ಮೂವರು ಕೈ ಇರುವ ಫೋಟೋ ಇದಾಗಿದೆ. ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿ ಪ್ಯಾಮಿಲಿಗೆ ಹಬ್ಬದ ಶುಭಾಶಯವನ್ನು ಕಾಮೆಂಟ್ ಮಾಡಿ ಹೇಳಿದ್ದಾರೆ.  ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    ಈ ಹಿಂದೆ ನಿಖಿಲ್ ಕುಮಾರಸ್ವಾಮಿ ತಂದೆಯಾಗಿರುವ ಸಂತೋಷನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ಇಡೀ ಜಗತ್ತಿಗೆ ಹಂಚಿಕೊಳ್ಳಲು ಸಂತೋಷವಾಗಿದೆ. LOVE YOU MY SON ಎಂದು ಬರೆದುಕೊಂಡು ಮಗುವನ್ನು ಎತ್ತಿಕೊಂಡಿರುವ ಮುದ್ದಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸಂತೋಷ ವಿಚಾರವನ್ನು ಕೇಳುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಮಾಡಿ ಶುಭ ಕೋರಿದ್ದರು.  ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    2020ರ ಏಪ್ರಿಲ್ 17ರಂದು ಲಾಕ್‍ಡೌನ್ ಸಮಯದಲ್ಲಿ ನಿಖಿಲ್ ಹಾಗೂ ರೇವತಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಫಾರ್ಮ್ ಹೌಸ್‍ನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವು ತಿಂಗಳ ಹಿಂದಷ್ಟೇ ಮಾಜಿ ಸಿಎಂ. ಹೆಚ್.ಡಿ ಕುಮಾರಸ್ವಾಮಿಯವರು ತಾವು ತಾತಾ ಆಗುತ್ತಿರುವ ಖುಷಿ ವಿಚಾರವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ಮುದ್ದಿನ ಸೊಸೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಗೌಡರ ಕುಟುಂಬದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೊಸ ಅತಿಥಿ ಆಗಮನವಾಗಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕವಾಗಿ ತಿಳಿಸಿದ್ದರು. ಇದೀಗ ಮಗನ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದಾರೆ.