Tag: publictv

  • ಅಪ್ಪು 3D ಪೇಂಟಿಂಗ್ – ಕಲಾವಿದನಿಂದ ನಮನ ಸಲ್ಲಿಕೆ

    ಅಪ್ಪು 3D ಪೇಂಟಿಂಗ್ – ಕಲಾವಿದನಿಂದ ನಮನ ಸಲ್ಲಿಕೆ

    ಗದಗ: ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಂದು ಎಲ್ಲಾ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸ್ವರ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.

    ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಮಂಜುನಾಥ ಹಾದಿಮನಿ ಎಂಬ ಕಲಾವಿದ ಅಭಿಮಾನಿ, ಅಪ್ಪು ಅವರ ಭಾವಚಿತ್ರ ತ್ರಿ-ಡಿ (3D)ಪೇಂಟಿಂಗ್ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕಲಾವಿದ ಮಂಜುನಾಥ ವಿಶಿಷ್ಟವಾಗಿ ಪುನೀತ್ ರಾಜ್‍ಕುಮಾರ್ ಅವರನ್ನ ನೆನೆದಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಯುವ ಕಲಾವಿದ ಮಂಜುನಾಥ ಹಾದಿಮನಿ ಅವರು ಅಪ್ಪುವಿನ ಅಪ್ಪಟ ಅಭಿಮಾನಿ. ಒಂದಲ್ಲಾ ಒಂದು ದಿನ ಅಪ್ಪು ಅವರನ್ನು ಭೇಟಿಯಾಗಬೇಕು. ಯಾವುದಾರೊಂದು ವೇದಿಕೆಯಲ್ಲಿ ಅವರ ಕಣ್ಮುಂದೆ ಅವರ ಭಾವಚಿತ್ರ ಬಿಡಿಸಬೇಕು ಎಂದುಕೊಂಡಿದ್ದ. ವಿಧಿಯಾಟಕ್ಕೆ ಯುವ ಕಲಾವಿದನ ಕನಸು ಕನಸಾಗಿಯೇ ಉಳಿಯಿತು. ಈಗ ಅವರು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಅದೆಷ್ಟೋ ಜನರಿಗೆ ಆಗುತ್ತಿಲ್ಲ. ಇದನ್ನೂ ಓದಿ:  ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

    ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಅಪ್ಪುಗೆ ಸ್ವರ ಶ್ರದ್ಧಾಂಜಲಿ, ನುಡಿನಮನ ಸಲ್ಲಿಸಲಿದ್ದಾರೆ. ಹೀಗಾಗಿ ಗದಗ ಯುವ ಕಲಾವಿದ ಸಹ ತನ್ನ ಕೈ ಚಳಕದಿಂದ ಅವರ ಸುಂದರ ಚಿತ್ರ ಬಿಡಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಪುನೀತ್ ಅವರನ್ನ ಬಣ್ಣಗಳಲ್ಲಿ ಸೃಷ್ಟಿಸಿ ಗೌರವ ಸಲ್ಲಿಸಿದ ಮಂಜುನಾಥ್ ಕಲೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಿವಾಗಿದೆ.

  • ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

    ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

    ನವದೆಹಲಿ: ನಾನು ಹಿಂದೂ, ಹೀಗಾಗಿ ನಾನು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ಕೇಜ್ರಿವಾಲ್ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಮೃದು ಹಿಂದುತ್ವ ದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ. ನೀವು ದೇವಸ್ಥಾನಕ್ಕೆ ಹೋಗುತ್ತೀರಾ? ನಾನು ಕೂಡ ದೇವಸ್ಥಾನಕ್ಕೆ ಹೋಗುತ್ತೇನೆ. ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ, ನೀವು ಅದನ್ನು ಭೇಟಿ ಮಾಡಿದಾಗ ನಿಮಗೆ ಶಾಂತಿ ಸಿಗುತ್ತದೆ. ಅವರ (ಮೃದು ಹಿಂದುತ್ವದ ಆರೋಪ ಮಾಡುವವರು) ಆಕ್ಷೇಪಣೆ ಏನು? ಏಕೆ ವಿರೋಧ ವ್ಯಕ್ತಪಡಿಸಬೇಕು? ನಾನು ಹಿಂದೂ ಎಂಬ ಕಾರಣಕ್ಕೆ ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ, ನನ್ನ ಪತ್ನಿ ಗೌರಿಶಂಕರ ದೇವಸ್ಥಾನಕ್ಕೆ ಭೇಟಿ ನೀಡುತ್ತಾಳೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಪ್ರಮೋದ್ ಸಾವಂತ್ ನಮ್ಮ ಸರ್ಕಾರವನ್ನು ನಕಲು ಮಾಡುತ್ತಿದ್ದಾರೆ. ನಾವು ವಿದ್ಯುತ್ ಉಚಿತ ನೀಡುತ್ತೇವೆ ಎಂದು ನಾನು ಹೇಳಿದಾಗ ಅವರು ನೀರು ಉಚಿತವಾಗಿ ನೀಡಿದರು. ನಾವು ಉದ್ಯೋಗ ಭತ್ಯೆ ನೀಡುತ್ತೇವೆ ಎಂದು ಹೇಳಿದಾಗ ಅವರು ಸುಮಾರು 10,000 ಉದ್ಯೋಗಗಳನ್ನು ಘೋಷಿಸಿದರು. ನಾನು ತೀರ್ಥಯಾತ್ರೆಗಳ ಬಗ್ಗೆ ಮಾತನಾಡುವಾಗ ಅವರು ತಮ್ಮ ಯೋಜನೆ ಘೋಷಣೆ ಮಾಡಿದರು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ:  ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

  • ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

    ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

    ತಿರುವನಂತಪುರಂ: 2021ರ ಅಕ್ಟೋಬರ್‌ನಲ್ಲಿ ಅತ್ಯಧಿಕ ಮಳೆ ದಾಖಲಾಗಿದ್ದು, ಇದು 120 ವರ್ಷಗಳಲ್ಲಿಯೇ ಆಗಿರುವ ಅತ್ಯಧಿಕ ಮಳೆ ಎಂದು ಭಾರತೀಯ ಇಲಾಖೆ ಹೇಳಿದೆ.

    ಐಎಂಟಿ ಪ್ರಕಾರ ಈ ವರ್ಷದ ಅಕ್ಟೋಬರ್‍ನಲ್ಲಿ 589.9 ಮಿ.ಮೀ ಮಳೆಯಾಗಿದೆ. ಇದು 1901ರ ನಂತರ ಸುರಿದಿರುವ ಅತ್ಯಧಿಕ ಮಳೆಯಾಗಿದೆ. ಅಲ್ಲದೆ ರಾಜ್ಯದಲ್ಲಿ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸುರಿದ ಮಳೆಗಿಂತ ಎರಡು ಪಟ್ಟು ಹೆಚ್ಚು ಮಳೆ ಈ ವರ್ಷದ ಅಕ್ಟೋಬರ್‍ನಲ್ಲಿ ಸುರಿದಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ8 ಸುರಿದ ಮಳೆಯ ಈ ಹಿಂದಿನ ದಾಖಲೆಗಳ ಪ್ರಕಾರ, 1932ರಲ್ಲಿ 543.2 ಮಿ.ಮೀ, 1999ರಲ್ಲಿ 567.9ಮಿ.ಮೀ ಮತ್ತು 2002ರಲ್ಲಿ 511.7ಮಿ.ಮೀ ಮಳೆ ಸುರಿದಿದೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು

    ಕೇರಳದಲ್ಲಿ ಸುರಿಸದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮನೆ, ಗುಡ್ಡ ಬೆಟ್ಟಗಳು ಕುಸಿದು ಬಿದ್ದಿದ್ದವು, ಹಲವು ಕಡೆ ಭೂಕುಸಿತವಾಗಿತ್ತು. ಈಗ 120 ವರ್ಷಗಳಲ್ಲಿಯೇ ಸುರಿದಿರುವ ಅತ್ಯಧಿಕ ಮಳೆ ಕೇರಳದಲ್ಲಿ ಈ ಭಾರೀಯಾಗಿದೆ. ಇದನ್ನೂ ಓದಿ:   ದನ ಕದಿಯಲು ಬಂದು ಪ್ರಾಣ ಬಿಟ್ಟ

  • ದನ ಕದಿಯಲು ಬಂದು ಪ್ರಾಣ ಬಿಟ್ಟ

    ದನ ಕದಿಯಲು ಬಂದು ಪ್ರಾಣ ಬಿಟ್ಟ

    ಗಾಂಧಿನಗರ: 50 ಕ್ಕೂ ಹೆಚ್ಚು ಕಳ್ಳತನ ಮತ್ತು ಲೂಟಿ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ ದನ ಕಳ್ಳತನ ಮಾಡಲು ಬಂದು ಸಾವನ್ನಪ್ಪಿರುವ ಘಟನೆ ಸೆಪಹಿಜಾಲಾ ಜಿಲ್ಲೆಯ ಕಮಲ್ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

    ಮೃತ ಯುವಕನ ಹೆಸರು ಪತ್ತೆಯಾಗಿಲ್ಲ. ಆದರೆ ಆತನ ಬಳಿ ಬಾಂಗ್ಲಾದೇಶದ ಕರೆನ್ಸಿ ಮತ್ತು ಮೊಬೈಲ್ ಫೋನ್ ದೊರೆತಿದೆ. ಹೀಗಾಗಿ ಆತ ಬಾಂಗ್ಲಾದೇಶದ ಪ್ರಜೆ ಎಂದು ಗುರುತಿಸಲಾಗಿದೆ. ಗುಜರಾತ್‍ನ ಸುರೇಂದ್ರನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ ಪೊಲೀಸ್ ಫೈರಿಂಗ್‍ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಹಿನ್ನೆಲೆ: ತಡರಾತ್ರಿ ಜಾನುವಾರು ಕದಿಯಲು ಮೂರು ಜನರು ಗ್ರಾಮಕ್ಕೆ ಬಂದಿದ್ದಾರೆ. ಸಂಜೆ ಸ್ಥಳೀಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮತ್ತು ಆರು ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಆಗ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದಾಗ ತಂಡದ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು, ಪಿಎಸ್‍ಐ ಬೆನ್ನಿಗೆ ಗಾಯವಾಗಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ ಮುನ್ನಾ ಮತ್ತು ಅವರ ಮಗ ಸಾವನ್ನಪ್ಪಿದ್ದಾರೆ ಎಂದು ಡಿಐಜಿ ಮಾಹಿತಿ ನೀಡಿದರು. ಗ್ರಾಮಸ್ಥರು ಅವರನ್ನು ಹಿಡಿದಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಸದ್ಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ತ್ರಿಪುರಾ ನಿಷಿದ್ಧ ವಸ್ತುಗಳು ಮತ್ತು ಜಾನುವಾರುಗಳ ಕಳ್ಳಸಾಗಣೆಗೆ ಸಾಕ್ಷಿಯಾಗಿದೆ. 856 ಕಿ.ಮೀ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ತ್ರಿಪುರಾದಲ್ಲಿ ಅದರಲ್ಲೂ ವಿಶೇಷವಾಗಿ ಗಡಿ ಗ್ರಾಮದ ಬಳಿ ಈ ಮೊದಲು ದನಗಳ ಕಳ್ಳಸಾಗಣೆ ಸಾಮಾನ್ಯ ಸಮಸ್ಯೆಯಾಗಿತ್ತು. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು

  • ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು

    ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು

    ಹೈದರಾಬಾದ್: ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ.

    ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿದೆ. ಮಗುವಿನ ಪೆÇೀಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು

    ಕ್ರಾಂತಿ ಮತ್ತು ಮಮತಾ ದಂಪತಿಯ ಹೆಣ್ಣು ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ದಂಪತಿ ಮನೆಗೆ ಮರಳಿದ್ದರು. ಮಧ್ಯರಾತ್ರಿ ಮಗುವಿನ ಬಾಯಿಂದ ನೊರೆ ಬರುತ್ತಿರುವುದನ್ನು ಕಂಡ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಮರುಘಳಿಗೆಯೇ ಮಗುವಿನ ಮೇಲೆ ಹೊದಿಸಿದ್ದ ಹೊದಿಕೆಯಿಂದ ಹಾವು ಬಿದ್ದಿದೆ. ಅದೇ ಹಾವು ಕ್ರಾಂತಿ ಮತ್ತು ಮಮತಾಗೂ ಕಚ್ಚಿದೆ. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಮಗು ಸಾವನ್ನಪ್ಪಿದೆ. ಕ್ರಾಂತಿ ಮತ್ತು ಮಮತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  •  ವಾಯುಮಾಲಿನ್ಯಕ್ಕೆ ದಿಲ್ಲಿ ತಲ್ಲಣ

     ವಾಯುಮಾಲಿನ್ಯಕ್ಕೆ ದಿಲ್ಲಿ ತಲ್ಲಣ

    ನವದೆಹಲಿ: ಒಂದೆಡೆ ದೀಪಾವಳಿ ವೇಳೆ ಪಟಾಕಿ ಸಿಡಿತ, ಮತ್ತೊಂದೆಡೆ ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ (ಕೊಳೆ) ಸುಡುವಿಕೆಯಿಂದ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ಗಂಭೀರ ಸ್ಥಿತಿಗೆ ತಲುಪಿದೆ.

    ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬದ ಬಳಿಕ ದೆಹಲಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಅತಿ ಗಂಭೀರ ಎನ್ನಬಹುದಾದ 462ಕ್ಕೆ ನಿನ್ನೆ ಏರಿದೆ. ಇದರ ಬೆನ್ನಲ್ಲೇ ದಟ್ಟ ಧೂಳಿನ ಕಣಗಳನ್ನು ಚದುರಿಸುವ ಮತ್ತು ನಿಯಂತ್ರಿಸಲು ದೆಹಲಿ ಸರ್ಕಾರ ದೆಹಲಿ ಸರ್ಕಾರ 114 ನೀರಿನ ಟ್ಯಾಂಕರ್‍ಗಳ ಮುಖಾಂತರ ನಗರದ ರಸ್ತೆಗಳ ಮೇಲೆ ಚಿಮುಕಿಸುತ್ತಿದೆ. ಮತ್ತೊಂದೆಡೆ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ 92 ಕಟ್ಟಡಗಳ ನಿರ್ಮಾಣಕ್ಕೂ ತಡೆ ಒಡ್ಡಲಾಗಿದೆ. ಈ ನಡುವೆ ನಿನ್ನೆ ಗಾಳಿ ಬೀಸಿದ್ದು, ಇದರ ಪರಿಣಾಮ 449ಕ್ಕೆ ಎಕ್ಯುಐ ಸುಧಾರಿಸಿದೆ.

    ನವೆಂಬರ್ 7ರ ಬಳಿಕವಷ್ಟೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಾಯುಮಾಲಿನ್ಯದಿಂದ ಮುಕ್ತಿ ಹೊಂದಿ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಹವಾಮಾನಮುನ್ಸೂಚನೆ ಮತ್ತು ಸಂಶೋಧನಾ ಸಂಸ್ಥೆ(ಎಸ್‍ಎಎಫ್‍ಎಆರ್) ಹೇಳಿದೆ.

    ಪಕ್ಕದ ವಸ್ತೂಗಳು ಕಾಣದ ಪರಿಸ್ಥಿತಿ: ಪಂಜಾಬ್, ಹರಿಯಾಣ ಸೇರಿ ಇತರ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವಿಕೆ ಕಡಿಮೆ ಆಗುತ್ತಿದೆ ಎಂದು ಮೂರು ದಿನ ಹಿಂದಷ್ಟೇ ವರದಿಯೊಂದು ಹೇಳಿತ್ತು. ಆದರೆ ಇದರ ಬೆನ್ನಲ್ಲೆ ಸರ್ಕಾರದ ಸೂಚನೆ, ಕೋರ್ಟ್ ಆದೇಶಗಳನ್ನೂ ಮೀರಿ ದಿಲ್ಲಿ ಜನರು ದೀಪಾವಳಿ ಪಟಾಕಿಗಳನ್ನು ಹಾರಿಸಿದ್ದಾರೆ. ಇದರ ಪರಿಣಾಮ ಶುಕ್ರವಾರ, ಶನಿವಾರ ದಿಲ್ಲಿಯಾದ್ಯಂತ ಭಾರೀ ಹೊಗೆಯ ವಾತಾವರಣ ಕಂಡುಬಂತು. ಜನರು ಮನೆಗಳಲ್ಲಿ ವಾಯುಶುದ್ಧಿ ಯಂತ್ರ ಗಳನ್ನು ಬಂಸುತ್ತಿರು ದೇಶ್ಯ ಸಾಮನ್ಯವಾಗಿತ್ತು. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು

    ರಸ್ತೆಗಳಲ್ಲಿ ಪಕ್ಕದಲ್ಲಿರುವ ವಾಹನಗಳು ಕಾಣದಷ್ಟು ವಾತಾವರಣ ಮಸುಕಾಗಿತ್ತು ಎಂದು ವಾಹನಸವಾರರು ಹೇಳಿದ್ದಾರೆ. ಈ ಮಂದ ಬೆಂಕಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮತ್ತೆ ಸಮ-ಬೆಸ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹಲವರು ಹೇಳಿದ್ದಾರೆ. 2020ರಲ್ಲಿ ದೀಪಾವಳಿ ಮಾರನೇ ದಿನ ಎಕ್ಯೂಐ ಪ್ರಮಾಣ 435, 2029ರಲ್ಲಿ 368, 2018ರಲ್ಲಿ 390, 2017ರಲ್ಲಿ 403, 2016ರಲ್ಲಿ ಎಕ್ಯೂಐ 445ರಷ್ಟು ಇತ್ತು. ಈ ದಾಖಲೆಯನ್ನು ಶುಕ್ರವಾರದ ಎಕ್ಯುಐ 469ಕ್ಕೆ ಏರಿ ಅಳಿಸಿ ಹಾಕಿದೆ.

     

    ಆರೋಗ್ಯಕ್ಕೆ ಅಪಾಯಕಾರಿ: ಈ ಬಗ್ಗೆ ಪ್ರತಿಕ್ರಿಯಿಸಿದ ಹೃದಯ ತಜ್ಞರಾದ ಅರುಣ್ ಮೊಹಾಂತಿ ಅವರು, ಇಂಥವಾಯು ಗುಣಮಟ್ಟವು ಜನರ ಆರೋಗ್ಯದ ಮೇಲೆ ಭಾರೀ ದುಷ್ಟರಿಣಾಮ ಬೀರಲಿದೆ. ಈಗಾಗಲೇ ಎದೆನೋವು ಮತ್ತು ಹೃದಯಕ್ಕೆ ಸಂಬಧಿಸಿದ ಅನಾರೋಗ್ಯಕ್ಕೆ ಇದು ದೊಡ್ಡಗಂಡಾಂತರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಆಗಿರುವುದುದೇನು?
    * ಪಟಾಕಿ ಸಿಡಿತ, ಕೃಷಿ ತ್ಯಾಜ್ಯ ಸುಡುವಿಕೆಯಿಂದ ಮಾಲಿನ್ಯ ಹೆಚ್ಚಳ
    * ದೆಹಲಿ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆಯ ವಾತಾವರಣ
    * ಪಕ್ಕದಲ್ಲಿ ಹೋಗುವ ವಾಹನವೂ ಸ್ಪಷ್ಟವಾಗಿ ಕಾಣಿಸದಂಥ ಪರಿಸ್ಥಿತಿ
    * 114 ಟ್ಯಾಂಕರ್ ಮೂಲಕ ನೀರು ಸಿಂಪಡಿಸಿ ಮಾಲಿನ್ಯ ತಡೆಗೆ ಯತ್ನ
    * ಮಾಲಿನ್ಯ ತಗ್ಗಸಿಲು 92 ಕಟ್ಟಡ ನಿರ್ಮಾಣಕ್ಕೂ ದಿಲ್ಲಿ ಸರ್ಕಾರ ತಡೆ

  • ನವೆಂಬರ್ 16ರಂದು ಪವರ್ ಸ್ಟಾರ್‌ಗೆ  ಸ್ಯಾಂಡಲ್‍ವುಡ್ ನುಡಿನಮನ

    ನವೆಂಬರ್ 16ರಂದು ಪವರ್ ಸ್ಟಾರ್‌ಗೆ ಸ್ಯಾಂಡಲ್‍ವುಡ್ ನುಡಿನಮನ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಸ್ಯಾಂಡಲ್‍ವುಡ್‍ ನುಡಿನಮನ ಕಾರ್ಯಕ್ರಮವನ್ನು ಹಂಬಿಕೊಂಡಿದೆ.

    ನವೆಂಬರ್ 16ರಂದು ಅರಮನೆ ಮೈದಾನದಲ್ಲಿ ಪುನೀತ್‍ಗೆ ನಮನ ಕರ್ಯಕ್ರಮವನ್ನು ಆಯೋಜಿಸಲಾಗಿದೆ. ದಕ್ಷಿಣ ಭಾರತದ ಸಿನಿಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಫಿಲ್ಮಂ ಚೇಂಬರ್ ಅಯೋಜಿಸಿದೆ. ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ಆರಂಭವಾಗುತ್ತದೆ. ಈಗಾಲೇ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಈ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಗಣ್ಯರು, ಕಲಾವಿದರು ಭಾಗಿಯಾಗುತ್ತಾರೆ. ದಕ್ಷಿಣ ಭಾರತದ ಖ್ಯಾತ ಕಲಾವಿದರಿಗೆ ಆಹ್ವಾನಿಸಲಾಗಿದ್ದು, ಚಿರಂಜೀವಿ, ಕಮಲ್ ಹಾಸನ್, ಧನುಷ್ ಸೇರಿ ಹಲವು ಕಲಾವಿದರಿಗೆ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿಸ್‍ವೈ, ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು

    ಗುರುಕಿರಣ್ ಅವರ ಗೀತ ನಮನ ಹಾಗೂ ವಿ, ನಾಗೇಂದ್ರ ಪ್ರಸಾದ್ ಹಾಡು ರಚನೆ ಈ ಕಾರ್ಯಕ್ರಮದಲ್ಲಿ ಇರಲಿದೆ. ಪುನೀತ್ ರಾಜ್‍ಕುಮಾರ್ ಅವರು ನಡೆದ ಬಂದಿರು ಹಾದು ಚಿತ್ರಣ ಇರಲಿದೆ. 2 ಸಾವಿರ ಮಂದಿ ದೀಪ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ

    ಪುನೀತ್ ರಾಜ್‍ಕುಮಾರ್ ಅವರ ಕುಟುಂಬದ ಒಪ್ಪಿಗೆಯನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲಿ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ, ಕೆಲವು ಸೀಟ್‍ಗಳು ಮಾತ್ರ ಇರುವುದರಿಂದ ನಾವು ಸಿನಿಮಾ ಕಲಾವಿದರು, ಗಣ್ಯರು, ನಿರ್ಮಾಪಕರು, ನಿರ್ದೇಶಕರು, ಹೀಗೆ ಹಲವರ ಜೊತೆಗೂಡಿ ಕಾರ್ಯಕ್ರಮದ ನಡೆಸಲಿದ್ದೇವೆ ಎಂದು ಜಯರಾಜ್ ಫಿಲ್ಮ್ ಚೇಂಬರ್ ಅವರು ಹೇಳಿದ್ದಾರೆ.

  • ಟ್ಯಾಂಕರ್‌ನಿಂದ ಆಯಿಲ್ ಲೀಕ್- 92 ಮಂದಿ ಸುಟ್ಟು ಭಸ್ಮ

    ಟ್ಯಾಂಕರ್‌ನಿಂದ ಆಯಿಲ್ ಲೀಕ್- 92 ಮಂದಿ ಸುಟ್ಟು ಭಸ್ಮ

    ಫ್ರೀಟೌನ್: ಟ್ಯಾಂಕರ್‌ನಿಂದ ಆಯಿಲ್ ಲೀಕ್ ಆಗಿದ್ದು, ಈ ವೇಳೆ ತೈಲ ಸಂಗ್ರಹಿಸಲು ಮುಗಿಬಿದ್ದ 92 ಮಂದಿ ಅಗ್ನಿಗಾಹುತಿಯಾಗಿದ್ದಾರೆ.

    ಆಫ್ರಿಕಾದ ಸಿಯೇರಾ ಲಿಯೋನ್‍ನಲ್ಲಿ ನಡೆದ ಭೀಕರ ಟ್ಯಾಂಕರ್ ಸ್ಫೋಟದಲ್ಲಿ 92ಕ್ಕೂ ಹೆಚ್ಚುಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇರಾಕ್‌ ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ!

    ಇಂಧನ ತುಂಬಿದ್ದ ಟ್ಯಾಂಕರ್ ಲಾರಿಯಿಂದ ಸೋರಿಕೆಯಾಗಿದ್ದು, ಇದನ್ನು ಸಂಗ್ರಹಿಸಲು ಜನ ಮುಗಿನಿದ್ದರು. ಈ ವೇಳೆ ಬಸ್‍ವೊಂದು ಟ್ಯಾಂಕರ್‍ಗೆ ಡಿಕ್ಕಿಯಾದ ಪರಿಣಾಮ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಆಗ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?

    ಬೆಂಕಿ ಹೊತ್ತಕೊಂಡಿದ್ದು, ನೋಡನೋಡುತ್ತಿದ್ದಂತೆ ರಸ್ತೆ ಮೇಲಿದ್ದ ಕಾರುಗಳು ಹಾಗೂ ಬೈಕ್‍ಗಳಿಗೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಇನ್ನು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬೆಲೆ ಏರಿಕೆಯಿಂದ ಜನರು ಸೌದೆ ಒಲೆ ಬಳಸಲಾರಂಭಿಸಿದ್ದಾರೆ: ರಾಹುಲ್ ಗಾಂಧಿ

    ಬೆಲೆ ಏರಿಕೆಯಿಂದ ಜನರು ಸೌದೆ ಒಲೆ ಬಳಸಲಾರಂಭಿಸಿದ್ದಾರೆ: ರಾಹುಲ್ ಗಾಂಧಿ

    ನವದೆಹಲಿ: ಅಡುಗೆ ಅನಿಲ (ಎಲ್‍ಪಿಜಿ) ಸಿಲಿಂಡರ್‌ಗಳ  ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ‘ಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

    ಮೋದಿ ಆಡಳಿತದಲ್ಲಿ ದೇಶ ಅಭಿವೃದ್ಧಿ ಮಾತುಗಳಿಂದ ತುಂಬಾ ದೂರ ಉಳಿದಿದ್ದು, ಲಕ್ಷಾಂತರ ಕುಟುಂಬಗಳು ಒತ್ತಾಯಪೂರ್ವಕವಾಗಿ ಸೌದೆ ಒಲೆಗಳನ್ನು ಹಚ್ಚುವಂತೆ ಮಾಡಿದೆ. ಮೋದಿ ಜೀ ಅವರ ಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆ ಮತ್ತು ಬ್ರೇಕ್ ಸಹ ತುಂಡಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರ ನಿದ್ರಿಸುತ್ತಿದೆ- ಲಾರಿ ಚಿತ್ರ ಹಂಚಿಕೊಂಡ ತರೂರ್

    ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಮೀಣ ಭಾಗದ ಶೇ.42ರಷ್ಟು ಜನರು ಎಲ್‍ಪಿಜಿ ಸಿಲಿಂಡರ್ ಖರೀದಿಸಲಾರದೆ ಅದನ್ನು ಬಳಸುವುದನ್ನೇ ನಿಲ್ಲಿಸಿದ್ದಾರೆ. ಹಾಗೆಯೇ ಅಡುಗೆ ಮಾಡಲು ಸೌದೆ ಒಲೆ ಬಳಸಲಾರಂಭಿಸಿದ್ದಾರೆ ಎಂಬ ಸಮೀಕ್ಷೆಯೊಂದರ ಮಾಹಿತಿ ಆಧರಿಸಿಪ್ರಕಟವಾಗಿರುವ ವರದಿಯೊಂದರ ಚಿತ್ರವನ್ನೂ ತಮ್ಮ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಪೆಟ್ರೋಲಿಯಂ ಕಂಪೆನಿಗಳು ಎಲ್‍ಪಿಜಿ ಸಿಲಿಂಡರ್‌ಗಳ ಮೇಲಿನ ಬೆಲೆಯನ್ನು ಅಕ್ಟೋಬರ್ 6ರಂದು 15 ಹೆಚ್ಚಿಸಿದ್ದವು. ಅದೇರೀತಿ ನವೆಂಬರ್ 1ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 266 ಏರಿಕೆ ಮಾಡಲಾಗಿತ್ತು. ಸಬ್ಸಿಡಿ ರಹಿತ 14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 899.50 ಆಗಿದೆ. ಇದೇ ವೇಳೆ ಕೆಜಿ ಸಿಲಿಂಡರ್ ಬೆಲೆ 502ಕ್ಕೆ ತಲುಪಿದೆ. 19ಕೆ.ಜಿ.ಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಬರೋಬ್ಬರಿ 2,000.50ಕ್ಕೇರಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

  • ಬಳಕೆ ಮಾಡಿದ ಪ್ಲಾಸ್ಟಿಕ್‍ನಿಂದ ಬ್ರಿಕ್ಸ್ ತಯಾರಿಸಿದ ಯುವಕರು!

    ಬಳಕೆ ಮಾಡಿದ ಪ್ಲಾಸ್ಟಿಕ್‍ನಿಂದ ಬ್ರಿಕ್ಸ್ ತಯಾರಿಸಿದ ಯುವಕರು!

    ಕೋಲಾರ: ಜೀವರಾಶಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಭೂಮಿ ಮೇಲೆ ಸೃಷ್ಟಿಯಾಗಿರುವ ಕಳೆಯಾಗಿದ್ದು, ನಾಶ ಮಾಡೋದು ಅಸಾಧ್ಯ. ಹೀಗಿರುವಾಗ ಕೋಲಾರದಲ್ಲೊಂದು ತಂಡ ಅದನ್ನು ಸಮರ್ಪಕವಾಗಿ ಮರು ಬಳಕೆ ಮಾಡುವ ಜೊತೆಗೆ ನಿರ್ವಹಣೆ ಮಾಡಿ ಪ್ರಕೃತಿಗೆ ಉಸಿರಾಡಲು ದಾರಿ ಮಾಡಿಕೊಟ್ಟಿದ್ದಾರೆ.

    ಪ್ರವಾಸಿ ತಾಣದ ಬೆಟ್ಟಗುಡ್ಡ ಮರಗಿಡಗಳ ನಡುವೆ ಬಿದ್ದಿರುವ ರಾಶಿ ರಾಶಿ ಪ್ಲಾಸ್ಟಿಕ್‍ನ್ನು ಆರಿಸಿಕೊಂಡು ತಂದು ಒಂದೆಡೆ ಸುರಿಯುತ್ತಿರುವ ವಿದ್ಯಾರ್ಥಿಗಳು ನೀರಿನ ಬಾಟಲ್‍ಗಳಿಗೆ ತುಂಬಿಸುತ್ತಿರುವ ಇನ್ನೊಂದು ತಂಡ, ಇದೆಲ್ಲಾ ಕಂಡುಬಂದಿದ್ದು, ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ. ಹೌದು ಪ್ರವಾಸಿ ತಾಣಗಳು ಸೇರಿದಂತೆ ಎಲ್ಲಂದರಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗಿದೆ, ಇದರಿಂದ ಕೇವಲ ಪ್ರಕೃತಿಗಷ್ಟೇ ಅಲ್ಲಾ ಮಾನವನಿಗೂ ಮಾರಕವಾಗುತ್ತಿದೆ. ಇದನ್ನೂ ಓದಿ: ಮೋದಿ ಸರ್ಕಾರ ನಿದ್ರಿಸುತ್ತಿದೆ- ಲಾರಿ ಚಿತ್ರ ಹಂಚಿಕೊಂಡ ತರೂರ್

    ಹೀಗಿರುವಾಗ ಅದನ್ನು ನಾಶ ಮಾಡೋದಾದರೂ ಹೇಗೆ ಅನ್ನೋ ಆತಂಕದಲ್ಲಿ ಎಲ್ಲರು ಇರುವಾಗ ಕೋಲಾರದಲ್ಲಿ ಸಮಾನ ಮನಸ್ಕರ ತಂಡವೊಂದು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಕೋಲಾರ ಆಂದೋಲನ ಸಮಿತಿ ರಚನೆ ಮಾಡಿಕೊಂಡು ಸದ್ದಿಲ್ಲದೆ ಪ್ಲಾಸ್ಟಿಕ್‍ನ್ನು ಮರುಬಳಕೆ ಮಾಡುತ್ತಿದ್ದಾರೆ. ಹೀಗೆ ಪ್ರವಾಸಿ ತಾಣಗಳಲ್ಲಿ ಇರುವ ಪ್ಲಾಸ್ಟಿಕ್ ಕವರ್ ಸೇರಿ ಹಲವು ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ನೀರಿನ ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಬಿಗಿಯಾಗಿ ತುಂಬಿಸಿ ಅದನ್ನು ಪ್ಲಾಸ್ಟಿಕ್ ಇಟ್ಟಿಗೆ ರೂಪ ಕೊಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಹೀಗೆ ಕಳೆದ 2 ವರ್ಷದಿಂದ ಸಮಾನ ಮನಸ್ಥಿತಿ ಹೊಂದಿರುವ ವಿವಿಧ ಸಂಘಟನೆಗಳು ಒಂದು ವೇದಿಕೆ ಮಾಡಿಕೊಂಡು ಈವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬ್ರಿಕ್ಸ್‍ಗಳನ್ನ ತಯಾರಿ ಮಾಡಿದ್ದಾರೆ. ಇಟ್ಟಿಗೆ ರೀತಿಯಲ್ಲಿ ಬಾಟಲ್‍ಗಳಲ್ಲಿ ಪ್ರಕೃತಿಗೆ ಮಾರಕವಾಗುವ ಪ್ಲಾಸ್ಟಿಕ್ ಕವರಗಳನ್ನು ಅದರೊಳಗೆ ಬಿಗಿಯಾಗಿ ತುಂಬಿಡಲಾಗುತ್ತಿದೆ. ಹೀಗೆ ಮಾಡಲಾದ ಪ್ಲಾಸ್ಟಿಕ್ ಬ್ರಿಕ್ಸ್‍ಗಳನ್ನು ಒಂದೆಡೆ ಸಂಗ್ರಹಿಸಿ ನಂತರ ಅದನ್ನು ವಿವಿದ ಕಲಾಕೃತಿ, ಶೌಚಾಲಯ ಕಟ್ಟಡ, ಪಾರ್ಕ್‍ಗಳಲ್ಲಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಇಂಥಾದೊಂದು ಕೆಲಸಕ್ಕೆ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳು ಕೈಜೋಡಿವೆ. ಈ ಮೂಲಕ ಪ್ಲಾಸ್ಟಿಕ್ ಕವರ್‍ಗಳು ಚರಂಡಿಗಳು, ನೀರಿನ ಕಾಲುವೆಗಳಲ್ಲಿ ತುಂಬಿಕೊಂಡು ಸೃಷ್ಟಿಮಾಡುವ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಕ್ಕಂತಾಗುತ್ತಿದೆ. ಅಷ್ಟೇ ಅಲ್ಲಾ ಪ್ಲಾಸ್ಟಿಕ್‍ನ್ನು ಸಮರ್ಪಕವಾಗಿ ಮರುಬಳಕೆ ಮಾಡಲಾಗುತ್ತಿದೆ ಅನ್ನೋದು ಆಯೋಜಕರ ಮಾತು ಕೂಡ.

     ಪ್ರಕೃತಿಗೆ ಮಾರಕವಾಗುವ ಈ ಪ್ಲಾಸ್ಟಿಕ್‍ನ್ನು ಸುಟ್ಟು ಹಾಕಿದರೂ ಜೀವರಾಶಿಗೆ ಮಾರಕವಾಗುವ ಪರಿಣಾಮ ಮರು ಬಳಕೆ ಮಾಡುವ ಮಹತ್ವದ ಕೆಲಸಕ್ಕೆ ಕೋಲಾರದ ತಂಡ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಜನರು ಸ್ವಯಂಪ್ರೇರಿತರಾಗಿ ಕೈಜೋಡಿಸಿದ್ದೇ ಆದಲ್ಲಿ ಪ್ಲಾಸ್ಟಿಕ್ ಅನ್ನೋ ವಿಷವನ್ನು ನಿರ್ವಹಣೆ ಮಾಡೋದು ದೊಡ್ಡ ವಿಷಯವಲ್ಲ.