Tag: publictv

  • ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ

    ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ

    ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಕುಟುಂಸ್ಥರು ಸೇರಿದಂತೆ ಅಭಿಮಾನಿಗಳ ಮನಸ್ಸಿನಲ್ಲಿ ನೋವು ತರಿಸಿದೆ. ರಾಜ್ಯದ ಹಲವು ಕಡೆಗಳಲ್ಲಿ ಅಪ್ಪು ಮೇಲಿನ ಅಭಿಮಾನದಿಂದ ಅಭಿಮಾನಿಗಳು ತಮ್ಮ ಗ್ರಾಮದ ರಸ್ತೆಗೆ, ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡುತ್ತಿದ್ದಾರೆ. ಅದೇ ರೀತಿ ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರದ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಎಂಬ ಹೆಸರು ನಾಮಕರಣ ಮಾಡಲಾಗಿದೆ.

    ಕಳೆದ ಎರಡು ತಿಂಗಳ ಹಿಂದೆಯಷ್ಟೇ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ವನ್ಯಜೀವಿ ರಕ್ಷಣೆಗೋಸ್ಕರ ಮತ್ತು ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಈ ವೇಳೆ ಬಿಡಾರದಲ್ಲಿದ್ದ ಮರಿಯಾನೆಗೆ ಅಪ್ಪಿ ಮುದ್ದಾಡಿದ್ದರು. ಈ ಮರಿ ಗಜಕ್ಕೆ ಪವರ್ ಸ್ಟಾರ್ ಹೆಸರು ಇಡಬೇಕು ಎಂಬುದು ಮಾವುತರು, ಕಾವಾಡಿಗಳು, ಪ್ರವಾಸಿಗರ ಆಸೆಯಾಗಿದೆ. ಹೀಗಾಗಿಯೇ ಅರಣ್ಯಾಧಿಕಾರಿಗಳು ಸಕ್ಕರೆಬೈಲು ಆನೆ ಬಿಡಾರದ ಮರಿಯಾನೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಿದ್ದಾರೆ.

    ಆನೆ ಬಿಡಾರದ ನೇತ್ರ ಆನೆ ಜನ್ಮವಿತ್ತ ಗಂಡು ಮರಿಯಾನೆ ಇದಾಗಿದ್ದು, ನೇತ್ರ ಎಂಬ ಹೆಣ್ಣಾನೆ ಮತ್ತು ಅದರ ಮರಿಯಾನೆಯನ್ನು ಕ್ರಾಲ್‍ನಲ್ಲಿ ಕಂಡಿದ್ದ ಪುನೀತ್ ತಾಯಿ ಮಗುವಿನ ಬಗ್ಗೆ ಮಾವುತರಿಂದ, ವನ್ಯಜೀವಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಈ ವೇಳೆ ಕೆಲ ಸಮಯ ಈ ಗಜ ರಾಜಕುಮಾರನ ಬಳಿ ಆಟವಾಡಿ, ಮುದ್ದಾಡಿದ್ದರು.

    ವೀನಿಂಗ್ ಎಂದರೆ, ಮರಿಯಾನೆಗಳಿಗೆ ಹುಟ್ಟಿದ ಕೂಡಲೇ ನಾಮಕರಣ ಮಾಡುವುದಿಲ್ಲ. ಬದಲಾಗಿ ಮರಿಯಾನೆಯನ್ನು ಅದರ ತಾಯಿಯಾನೆಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಸಿ, ಅದನ್ನು ಪ್ರತ್ಯೇಕವಾಗಿ ಇರಿಸಿದ ಬಳಿಕ ಮರಿಯಾನೆಗೆ ನಾಮಕರಣ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನ ವೀನಿಂಗ್ ಎಂದು ಕರೆಯುತ್ತಾರೆ. ಇದನ್ನೂ ಓದಿ:  ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

    ಇದೀಗ ಸಕ್ಕರೆಬೈಲು ಆನೆ ಬಿಡಾರದಲ್ಲಿ ನೇತ್ರ ಮತ್ತು ಮರಿಯಾನೆಯನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ವೀನಿಂಗ್ ಕಾರ್ಯವನ್ನು ಇಂದು ಅರಣ್ಯ ಇಲಾಖೆ ಮಾಡಿದ್ದು, ತಾಯಿಯಿಂದ ಬೇರ್ಪಡುವ ಮರಿಯಾನೆಗೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು, ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿದ ಪವರ್ ಸ್ಟಾರ್‍ಗೆ ಗೌರವ ಸೂಚಿಸಿದೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಸಾಮಾನ್ಯವಾಗಿ ಸಕ್ಕರೆಬೈಲು ಆನೆ ಬಿಡಾರದಲ್ಲಿ ಜನಿಸುವ ಮರಿಯಾನೆಗಳಿಗೆ, ನೆಚ್ಚಿನ ಅರಣ್ಯಾಧಿಕಾರಿಗಳದ್ದೋ, ಅಥವಾ ದೇವರ ಹೆಸರು ಇಡುವುದು ಸಾಮಾನ್ಯ. ಆದರೆ ಇದೇ ಪ್ರಥಮವಾಗಿ ನಟನೊಬ್ಬರ ಅದರಲ್ಲೂ, ಎಲ್ಲರಿಗೂ ಪ್ರೀತಿ ಪಾತ್ರರಾಗಿರುವ ಪವರ್ ಸ್ಟಾರ್ ಪುನೀತ್ ಹೆಸರು ನಾಮಕರಣ ಮಾಡಲಾಗಿದ್ದು, ಇನ್ಮುಂದೆ ಬಿಡಾರಕ್ಕೆ ಬರುವ ಪ್ರವಾಸಿಗರು, ಈ ಗಜನಿಗೆ ಪುನೀತ್ ಅಥವಾ ಅಪ್ಪು ಎಂದು ಕೂಗಿ ಕರೆಯಬಹುದಾಗಿದೆ.

  • ಕಾಂಗ್ರೆಸ್ ಎಂಎಲ್‍ಎ ಮಗ ಆತ್ಮಹತ್ಯೆಗೆ ಶರಣು

    ಕಾಂಗ್ರೆಸ್ ಎಂಎಲ್‍ಎ ಮಗ ಆತ್ಮಹತ್ಯೆಗೆ ಶರಣು

    ಭೋಪಾಲ್: ಗುಂಡು ಹಾರಿಸಿಕೊಂಡು ಕಾಂಗ್ರೆಸ್ ಎಂಎಲ್‍ಎ(MLA) ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

    ವೈಭವ್(16) ಮೃತನಾಗಿದ್ದನೆ. ರಿವಾಲ್ವರ್​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕಾಂಗ್ರೆಸ್ ಎಂಎಲ್‍ಎ(MLA) ಸಂಜಯ್ ಯಾದವ್ ಮಗನಾಗಿದ್ದಾನೆ. ಆತ ಪಿಯುಸಿ ಓದುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡಿದ್ದ ವೈಭವ್‍ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಕೆಲವೇ ಕ್ಷಣಗಳಲ್ಲಿ ವೈಭವ್ ಕೊನೆಯ ಕೊನೆಯುಸಿರೆಳೆದಿದ್ದಾನೆ. ಆತ ವಾಷ್‍ರೂಮ್‍ನಲ್ಲಿ ಶೂಟ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಜಬಲ್‍ಪುರ್ ಎಸ್‍ಪಿ ಸಿದ್ಧಾರ್ಥ್ ಬಹುಗುಣ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಖಚಿತಪಡಿಸಿದ್ದು, ಯಾವ ಕಾರಣಕ್ಕೆ ಎಂಬುದನ್ನು ವಿಚಾರಣೆ ಮಾಡುತ್ತಿದ್ದೇವೆ. ಪತ್ರ ದೊರೆಕಿದ್ದು, ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವೈಭವ್ ಬರೆದುಕೊಂಡಿದ್ದಾನೆ. ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ

    ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ

    ನವದೆಹಲಿ: ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯ ತಂತ್ರವನ್ನು ಹೊಂದಿಲ್ಲದ ಕಾರಣ ದೇಶದ ರಾಷ್ಟ್ರೀಯ ಭದ್ರತೆಯು ಕ್ಷಮಿಸಲಾಗದಷ್ಟು ರಾಜಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚು ಎದೆ ಹೇಳಿಕೆ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲದ ಕಾರಣ ನಮ್ಮ ರಾಷ್ಟ್ರೀಯ ಭದ್ರತೆ ಕ್ಷಮಿಸಲಾಗದಷ್ಟು ರಾಜಿಯಾಗಿದೆ. ಮಿಸ್ಟರ್ 56 ಭಯಭೀತರಾಗಿದ್ದಾರೆ. ನನ್ನ ಆಲೋಚನೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರ ಕಡೆಯಿದ್ದರೆ, ಭಾರತ ಸರ್ಕಾರ ಸುಳ್ಳುಗಳನ್ನು ಹೊರಹಾಕುತ್ತಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಚೀನಾ ಗಡಿ ಸಮಸ್ಯೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ವಿಭಿನ್ನ ಅಭಿಪ್ರಾಯ ಹೊಂದಿರುವ ವರದಿಯನ್ನೊಂದನ್ನು ಅವರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ದೇಶದ ಪ್ರದೇಶದೊಳಗೆ ಚೀನಾ ಆಗಮಿಸಿದ್ದು, ಹೊಸ ಹಳ್ಳಿಯೊಂದನ್ನು ನಿರ್ಮಾಣ ಮಾಡಿದೆ ಎಂಬುದು ಸತ್ಯವಲ್ಲ, ಹಳ್ಳಿಗಳು ಚೀನಾ ಕಡೆಯ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ ನೀಡಿದ್ದಾರೆ. ಎಲ್‍ಎಸಿಯ ಪೂರ್ವ ವಲಯ ಅರುಣಾಚಲ ಪ್ರದೇಶ ಮತ್ತು ಟಿಬಿಬ್ ವಲಯ ನಡುವಣದ ವಿವಾದಿತ ಪ್ರದೇಶದ ಒಳಗಡೆ ಚೀನಾ ಹೊಸ ಹಳ್ಳಿಯೊಂದನ್ನು ನಿರ್ಮಾಣ ಮಾಡುತ್ತಿರುವುದಾಗಿ ಅಮೆರಿಕಾ ರಕ್ಷಣಾ ಇಲಾಖೆ ಇತ್ತೀಚಿಗೆ ಹೇಳಿಕೆ ನೀಡಿತ್ತು. ಚೀನಾದ ಕಾನೂನುಬಾಹಿರ ಆಕ್ರಮಣವನ್ನು ಅಥವಾ ಯಾವುದೇ ನ್ಯಾಯಸಮ್ಮತವಲ್ಲದ ಹಕ್ಕುಗಳನ್ನು ಭಾರತ ಒಪ್ಪಿಕೊಂಡಿಲ್ಲ ಎಂದು ಅಮೆರಿಕ ವರದಿ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

  • ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

    ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮಡದಿಗೆ ಮನೆಯಲ್ಲಿ ಪ್ರೀತಿಯಿಂದ ಹಾಡುತ್ತಿದ್ದ ಹಾಡಿನ ಕುರಿತಾಗಿ ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿದೆ.

    PUNEET RAJKUMAR

    ಖಾಸಗಿ ವಾಹಿನಿಯ ಸಂದರ್ಶನ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಭಾಗವಹಿಸಿದ್ದರು. ಈ ವೇಳೆ ಅವರಿಗೆ ಮಡದಿ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅಪ್ಪು ಮಡದಿ ಅಶ್ವಿನಿ ಕುರಿತಾಗಿ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    ಅಪ್ಪು ಸರ್ ಸಿನಿಮಾಗಳಿಗೆ ಹಾಡಿದ್ದನ್ನು ಕೇಳಿದ್ದೇವೆ ಆದರೆ ಮನೆಯಲ್ಲಿ ನಿಮ್ಮ ಪತ್ನಿಗಾಗಿ ಯಾವತ್ತಾದರೂ ಹಾಡಿದ್ದೀರ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಅಪ್ಪು ನಗುತ್ತಾ ನಾನು ಮನೆಯಲ್ಲಿ ಪತ್ನಿಗಾಗಿ ಆಗಾಗ ತಮಾಷೆಗಾಗಿ ಹಾಡುತ್ತಿರುತ್ತೇನೆ. ಎಂಥ ಸೌಂದರ್ಯ ಕಂಡೆ.. ಓಹೋ ಎಂಥ ಸೌಂದರ್ಯ ಕಂಡೆ… ಎಂದು ಹಾಡುತ್ತೇನೆ ಈ ಹಾಡು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಭಾರೀ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ ಒಂದು ಚೂರು ಬೈಯೋದಿಲ್ಲ ರಾತ್ರಿ ಕುಡ್ಕೊಂಡು ಹೋದ್ರೆ.. ಎಂದು 2 ಸಾಲು ಹಾಡನ್ನು ಹೇಳಿದ್ದಾರೆ. ಈ ಹಾಡನ್ನು ತಮ್ಮ ಹೆಂಡತಿಯನ್ನು ಪ್ರೀತಿಸುವವರಿಗಾಗಿ ಬರೆದಿದ್ದಾಗಿದೆ. ನಿಮ್ಮ ಮಧ್ಯೆ ಚಿಕ್ಕ, ಪುಟ್ಟ ಗಲಾಟೆ ಆದರೆ ಈ ಹಾಡನ್ನು ಹೇಳಿ ಸರಿ ಹೋಗುತ್ತದೆ ಎಂದು ಅಪ್ಪು ಸಲಹೆ ಕೂಡ ನೀಡಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ನೀವು ಯಾವತ್ತು ಆದರೂ ಕುಡ್ಕೊಂಡು ಮನೆಗೆ ಹೋಗಿದ್ರಾ? ಎಂದು ಕೇಳಿದಾಗ ಇಲ್ಲ ನಾನು ಯಾವತ್ತೂ ಹಾಗೇ ಮಾಡಿಲ್ಲ ಎಂದು ನಗುತ್ತಾ ಹೇಳಿದ್ದಾರೆ. ಅಪ್ಪು ಅವರು ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಮುಂದೆ ಶಿವಣ್ಣನಿಗೆ ನಿರ್ದೇಶನ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಈ ವೀಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

  • ನಮ್ಮ ಕುಟುಂಬಕ್ಕೆ  MLC ಟಿಕೆಟ್ ಕೊಡಬೇಕು ಅಂತ ಹೇಳಿಲ್ಲ, ಕೇಳಿಲ್ಲ: ಪ್ರಜ್ವಲ್ ರೇವಣ್ಣ

    ನಮ್ಮ ಕುಟುಂಬಕ್ಕೆ MLC ಟಿಕೆಟ್ ಕೊಡಬೇಕು ಅಂತ ಹೇಳಿಲ್ಲ, ಕೇಳಿಲ್ಲ: ಪ್ರಜ್ವಲ್ ರೇವಣ್ಣ

    ಹಾಸನ: ವಿಧಾನ ಪರಿಷತ್ ಚುನಾವಣೆಗೆ ಹಾಸನದಿಂದ ಯಾರು ಸ್ಪರ್ಧಿಸುತ್ತಾರೆ ಎಂದು ಇನ್ನೂ ನಿರ್ಧಾರವಾಗಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

    ಹಾಸನದ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್‍ಸಿ ಚುನಾವಣೆಗೆ ಹಾಸನದಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ಇಂದು ಮಧ್ಯಾಹ್ನ ಜಿಲ್ಲೆಯ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರು ಸಭೆ ಸೇರುತ್ತಿದ್ದಾರೆ. ಅವರೆಲ್ಲ ಸೇರಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದು ಅಂತಿಮವಾಗಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ:  299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    ನಮ್ಮ ಕುಟುಂಬಕ್ಕೆ ಕೊಡಬೇಕೆಂದು ಎಲ್ಲೂ ಹೇಳಿಲ್ಲ, ಎಲ್ಲೂ ಕೇಳಿಲ್ಲ. ಇಂದು ಚರ್ಚೆ ನಡೆಯುತ್ತದೆ. ನಂತರ ತೀರ್ಮಾನ ಆಗುತ್ತದೆ. ಇನ್ನೂ ಚರ್ಚೆಯಾಗಿಲ್ಲ, ಹೀಗಾಗಿ ಚರ್ಚೆಯಾಗದೆ ಆ ಬಗ್ಗೆ ಏನು ಉತ್ತರ ಕೊಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

  • 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    ತಿರುವನಂತಪುರಂ: ಮಹಿಳೆಯೊಬ್ಬಳು ಆನ್‍ಲೈನ್‍ನಲ್ಲಿ ಕೇವಲ 299 ರೂಪಾಯಿ ಬೆಲೆಯ ಚೂಡಿದಾರ್ ಕೊಳ್ಳಲು ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನು ಕಳೆದುಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.

    BRIBE

    ಮಹಿಳೆಯೊಬ್ಬಳು ಫೇಸ್‍ಬುಕ್  ನಲ್ಲಿ ಚೂಡಿದಾರ್ ಬಗ್ಗೆ ಜಾಹೀರಾತು ನೋಡಿದ್ದಾರೆ. ಡ್ರೆಸ್ ಇಷ್ಟವಾಗಿ ಆ ಲಿಂಕ್ ಓಪೆನ್ ಮಾಡಿದ್ದರು, ಬೆಲೆ ಕೇವಲ 299 ರೂಪಾಯಿ ಇದ್ದಿದ್ದರಿಂದ ಅದನ್ನು ಖರೀದಿ ಮಾಡಲು ಮುಂದಾಗಿದ್ದಳು. ಆರ್ಡರ್ ಮಾಡಿ ಗೂಗಲ್ ಪೇ ಮೂಲಕ ಪೇಮೆಂಟ್ ಕೂಡ ಮಾಡಿದ್ದಾರೆ.

    POLICE JEEP

    ತನಗಿಷ್ಟವಾದ ಬಣ್ಣದ ಚೂಡಿದಾರ್ ಬುಕ್ ಮಾಡಿ ಯಾವಾಗ ಆರ್ಡರ್ ಡೆಲಿವರಿ ಆಗುತ್ತದೆ ಎಂದು ಕಾದು ಕೂತಿದ್ದಳು. ಎರಡು ದಿನ ಕಳೆದ ಬಳಿಕವೂ ಆ ಡೆಲಿವರಿ ಬಗ್ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ಬಟ್ಟೆ ಬುಕ್ ಮಾಡಿದ್ದ ಖುಷಿಯಲ್ಲಿ  ಮಹಿಳೆ ತನ್ನ ಮೊಬೈಲ್‍ಗೆ ಬಂದ ಸಂದೇಶವನ್ನು ನೋಡಲು ಮರೆತಿದ್ದಾರೆ. ಮೂರು ದಿನದಲ್ಲಿ ಚೂಡಿದಾರ್ ಡೆಲಿವರಿ ಆಗುತ್ತೆ ಅಂತ ಅಲ್ಲಿ ತೋರಿಸಲಾಗಿತ್ತು. ಮೂರು ದಿನಗಳ ಬಳಿಕ ಜಾಹೀರಾತಿನಲ್ಲಿದ್ದ ನಂಬರ್‍ಗೆ ಮಹಿಳೆ ಮೆಸೇಜ್ ಮಾಡಿದ್ದಾರೆ. ಇದನ್ನೂ ಓದಿ  ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

    ಯಾರು ಫೋನ್ ತಗಯದ ಕಾರಣ ಸುಮ್ಮನಾಗಿದ್ದಾರೆ. ಬಳಿಕ ಈಕೆಯ ಫೋನ್‍ಗೆ 5 ಮೆಸೇಜ್ ಬಂದಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಒಟ್ಟು ಒಂದು ಲಕ್ಷ ಹಣ ಬ್ಯಾಂಕ್ ಅಕೌಂಟ್‍ನಿಂದ ಕಾಣೆಯಾಗಿತ್ತು. ಕೂಡಲೇ ಮತ್ತೆ ಜಾಹೀರಾತಿನಲ್ಲಿದ್ದ ನಂಬರ್‍ಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಆಗಿರುವುದು ತಿಳಿದಿದೆ. ಅದೇ ನಂಬರ್‍ಗೆ ಈಕೆಯ ಬ್ಯಾಂಕ್ ಅಕೌಂಟ್‍ನಿಂದ ಒಂದು ಲಕ್ಷ ಹಣ ವರ್ಗಾವಣೆಯಾಗಿತ್ತು. ಮಹಿಳೆ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

  • ಜೈ ಶ್ರೀರಾಮ್ ಅನ್ನೋರು ರಾಕ್ಷಸರು: ರಶೀದ್ ಅಲ್ವಿ

    ಜೈ ಶ್ರೀರಾಮ್ ಅನ್ನೋರು ರಾಕ್ಷಸರು: ರಶೀದ್ ಅಲ್ವಿ

    ನವದೆಹಲಿ: ರಾಮರಾಜ್ಯ, ಜೈ ಶ್ರೀರಾಮ್ ಘೋಷಣೆ ಕೂಗುವವರು ರಾಕ್ಷಸರು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ರಶೀದ್ ಅಲ್ವಿ, ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಎನ್ನುವುದು ನಮಗೂ ಇದೆ. ಮೇಕೆಗಳು ಮತ್ತು ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ? ಈ ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕಜನರನ್ನು ದಾರಿ ತಪ್ಪಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇದನ್ನೂ ಓದಿ  ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

    ರಾಮರಾಜ್ಯ ಇದೆ ಎಂದು ಹೇಳುತ್ತೇವೆ. ಆದರೆ ರಾಮರಾಜ್ಯ ಹೇಗೆ ಇರಬೇಕು? ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ರಾಮಾಯಣದ ಕಾಲನೇಮಿ ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಅಲ್ವಿ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಸಲ್ಮಾನ್ ಖುರ್ಷಿದ್ ನಂತರ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಜೈ ಶ್ರೀರಾಮ್ ಹೇಳುವವರನ್ನು ನಿಶಾಚರರು ಎಂದು ಕರೆಯುತ್ತಾರೆ. ಭಕ್ತರ ಬಗ್ಗೆ ಕಾಂಗ್ರೆಸ್ಸಿನ ಚಿಂತನೆಗಳಲ್ಲಿ ಎಷು ವಿಷ ಬೆರೆತಿದೆ ಎಂದು ಆಕ್ರೋಶವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೇಂಟಿಂಗ್‌ ಕೆಲಸಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ- ಖತರ್ನಾಕ್‌ ಕಳ್ಳ ಅಂದರ್‌!

  • ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್

    ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್

    ದುಬೈ: ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೂ ನ್ಯೂಜಿಲೆಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಸಂಭ್ರಮಿಸದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಬುಧವಾರ ನಡೆದ ಪಂದ್ಯದಲ್ಲಿ ಡ್ಯಾರೆಲ್ ಮಿಚೆಲ್ ಹಾಗೂ ನೀಶಮ್ ಸಾಹಸದಿಂದ ಕಿವೀಸ್ ಅಮೋಘ ಜಯ ಸಾಧಿಸಿತ್ತು. ಆದರೆ ಪಂದ್ಯದ ಬಳಿಕ ಉಳಿದೆಲ್ಲಾ ಆಟಗಾರರು ಸಂಭ್ರಮಿಸುತ್ತಿದ್ದರೂ ನೀಶಮ್ ಮಾತ್ರ ಬೇಸರದಿಂದ ಕುಳಿತಿರುವ ಫೋಟೋ ವೈರಲ್ ಆಗಿತ್ತು. ದನ್ನೂ ಓದಿ: ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    ಬಳಿಕ ಈ ಬ್ಗಗೆ ಬಾಸ್ಕೆಟ್‍ಬಾಲ್ ದಿಗ್ಗಜ ಕೋಬ್ ಬ್ರ್ಯಾಂಟ್ ಹೇಳಿಕೆಯ ರೀತಿಯಲ್ಲೇ ಟ್ವೀಟ್ ಮಾಡಿದ ನೀಶಮ್, ಕೆಲಸ ಮುಗಿಯಿತೇ? ನಾನು ಹಾಗೆ ಭಾವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 2009ರಲ್ಲಿ ಎನ್‍ಬಿಎ ಫೈನಲ್‍ನಲ್ಲಿ 2-0ನಲ್ಲಿ ಗೆದ್ದರೂ ಕೋಬನ್ ಸಂಭ್ರಮಿಸದೆ, ಕೆಲಸ ಇನ್ನೂ ಮುಗಿದಿಲ್ಲ ಎಂದಿದ್ದರು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

  • ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

    ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

    ಬೆಂಗಳೂರು: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ವೈಯಕ್ತಿಕ ವಿಚಾರವಾಗಿ ಆಗಾಗ ಸುದ್ದಿಯಲ್ಲಿ ಇರುವ ರಶ್ಮಿಕಾ ಯಾರನ್ನಾದರೂ ಲವ್ ಮಾಡುತ್ತಿದ್ದಾರಾ? ಈ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ಕೆಲವು ಸಂದರ್ಶನಗಳಲ್ಲೂ ಅವರಿಗೆ ರಿಲೇಷನ್‍ಶಿಪ್ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಇತ್ತೀಚೆಗೆ ಡೇಟಿಂಗ್ ಕುರಿತ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ.

    ರಶ್ಮಿಕಾ ಮಂದಣ್ಣ ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸಲಾಯಿತು. ಅದಕ್ಕೆ ಬುದ್ಧಿವಂತಿಕೆಯಿಂದ ಅವರು ಉತ್ತರ ನೀಡಿದ್ದಾರೆ. ವಯಸ್ಸು ಮುಖ್ಯವಾಗುವುದಿಲ್ಲ. ವ್ಯಕ್ತಿ ಮುಖ್ಯವಾಗುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ. ಈ ಜಾಣತನದ ಉತ್ತರಕ್ಕೆ ಅವರ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.  ಇದನ್ನೂ ಓದಿ:    ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮಶಿನ್, ಫ್ರಿಡ್ಜ್, ಟಿವಿ ಬಹುಮಾನ


    ರಶ್ಮಿಕಾ ಮಂದಣ್ಣ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸ್ಟಾರ್ ನಟರ ಸಿನಿಮಾಗಳಿಗೆ ಅವರೇ ನಾಯಕಿ ಆಗಬೇಕು ಎನ್ನುವ ಬೇಡಿಕೆ ದಿನದಿಂದದಿನಕ್ಕೆ ಹೆಚ್ಚಾಗುತ್ತಿದೆ. ತೆಲುಗು, ತಮಿಳು ಮಾತ್ರವಲ್ಲದೇ ಹಿಂದಿಯಲ್ಲೂ ಅವರ ಹವಾ ಹೆಚ್ಚಿದೆ. ಅಮಿತಾಭ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ ಸೇರಿದಂತೆ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ.  ಇದನ್ನೂ ಓದಿ:  ಲಸಿಕೆ ಪಡೆಯದಿದ್ದರೆ ರೇಷನ್, ಗ್ಯಾಸ್‌, ಪೆಟ್ರೋಲ್‌ ಇಲ್ಲ

  • ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಇಡ್ಲಿ ಮಂಚೂರಿಯನ್ ಒಮ್ಮೆ ಟ್ರೈ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಇಡ್ಲಿ-5
    * ಮೈದಾ – ಅರ್ಧ ಕಪ್
    * ಕಾರ್ನ್ ಫ್ಲೋರ್- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೆಂಪು ಮೆಣಸಿನ ಪುಡಿ-2 ಚಮಚ
    * ಕರಿಮೆಣಸಿನ ಹುಡಿ-1 ಟೀಸ್ಪೂನ್
    * ಸೋಯಾ ಸಾಸ್- 1 ಚಮಸ
    * ಅಡುಗೆ ಎಣ್ಣೆ- ಅರ್ಧ ಕಪ್
    * ಈರುಳ್ಳಿ – 1
    * ಶುಂಠಿ- ಸ್ವಲ್ಪ
    * ಬೆಳ್ಳುಳ್ಳಿ- 1
    * ಲವಂಗ- 2
    * ಕ್ಯಾಪ್ಸಿಕಂ- 1
    * ಟೊಮೆಟೊ ಸಾಸ್- 1 ಚಮಚ
    * ಚಿಲ್ಲಿ ಸಾಸ್- 2 ಚಮಚ
    * ವಿನೆಗರ್ -2 ಚಮಚ
    * ಸೋಯಾ ಸಾಸ್ – 1 ಚಮಚ ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    ಮಾಡುವ ವಿಧಾನ:
    * ಮೊದಲಿಗೆ ಇಡ್ಲಿಗಳನ್ನು 4 ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
    * ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪುಮೆಣಸಿನ ಪುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಇಡ್ಲಿ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಚೆನ್ನಾಗಿ ಫ್ರೈ ಮಾಡಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಸಾಸ್, ಚಿಲ್ಲಿ ಸಾಸ್, ಉಪ್ಪು, ಸೋಯಾ ಸಾಸ್, ವಿನೆಗರ್ ಸೇರಿಸಿ, ಚೆನ್ನಾಗಿ ಬೇಯಿಸಿರಿ.
    *ನಂತರ ಹುರಿದ ಇಡ್ಲಿಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಇಡ್ಲಿ ಮಂಚೂರಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ