Tag: publictv

  • ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ನವದೆಹಲಿ: ಟೋಕಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕನ್ನಡಿಗ, ಉತ್ತರ ಪ್ರದೇಶ ಗೌತಮ್ ಬುದ್ದ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್‍ಗೆ ಅದೃಷ್ಟ ಖುಲಾಯಿಸಿದ್ದು ಉತ್ತರ ಪ್ರದೇಶ ಸರ್ಕಾರ ವಿಶೇಷ ಪುರಸ್ಕಾರ ನೀಡುವ ಮೂಲಕ ಗೌರವ ಸಲ್ಲಿಸಿದೆ.

    ಬ್ಯಾಂಡ್ಮಿಟನ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್ ಯತಿರಾಜ್‍ಗೆ ಉತ್ತರ ಪ್ರದೇಶ ಸರ್ಕಾರ ನಾಲ್ಕು ಕೋಟಿ ನಗದು ಬಹುಮಾನ ನೀಡಿದ್ದು, ವಿಶೇಷ ತಿದ್ದುಪಡಿ ಮೂಲಕ  ವಿಶೇಷ ಗೌರವ ನೀಡಿದೆ.

    ಒಲಿಂಪಿಕ್ಸಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ವಿಜೇಯರಿಗೆ ಬಹುಮಾನ ಘೋಷಣೆ ಮಾಡಿತ್ತು. ಬಂಗಾರ ಪದಕ ವಿಜೇತರಿಗೆ ಐದು ಕೋಟಿ, ಬೆಳ್ಳಿ ಪದಕ ವಿಜೇತರಿಗೆ ನಾಲ್ಕು ಹಾಗೂ ಕಂಚು ಗೆದ್ದವರಿಗೆ ಎರಡು ಕೋಟಿ ನಗದು ನೀಡುವ ಭರವಸೆ ನೀಡಿತ್ತು ಅಂತೆಯೇ ಈಗ ಸುಹಾಸ್ ಯತಿರಾಜ್‍ಗೆ ನಾಲ್ಕು ಕೋಟಿ ನೀಡುವ ಮೂಲಕ ಗೌರವಿಸಿದೆ. ಇದನ್ನೂ ಓದಿ: ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?

    ಅಲ್ಲದೇ ಇದೇ ಮೊದಲ ಬಾರಿಗೆ ಸುಹಾಸ್ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಐಎಎಸ್ ಅಧಿಕಾರಿಗಳಿಗೆ ತಮ್ಮ ಸೇವಾ ಅವಧಿಯಲ್ಲಿ ನೀಡುವ ಐದು ಇನ್ಕ್ರಿಮೆಂಟ್‍ಗಳನ್ನು ಒಟ್ಟಿಗೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ತಿದ್ದುಪಡಿ ಮಾಡಿದೆ. ಅಂತರಾಷ್ಟ್ರೀಯ ಮಟ್ಡದಲ್ಲಿ ಸಾಧನೆ ಮಾಡುವ ಐಎಎಸ್, ಐಪಿಎಸ್ ಸೇರಿ ಸಮಾನ ಶ್ರೇಣಿಯ ಅಧಿಕಾರಿಗಳಿಗೆ ಈ ರೀತಿಯ ಪುರಸ್ಕಾರ ನೀಡಲು ನಿರ್ಮಾನಿಸಿದ್ದು ಸುಹಾಸ್ ಯತಿರಾಜ್ ಮೂಲಕವೇ ಇದು ಆರಂಭವಾಗಿದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಸುಹಾಸ್ ಯತಿರಾಜ್ 2016ರ ಬೀಜಿಂಗ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, 2017ರ ಟರ್ಕಿಶ್ ಓಪನ್‍ನಲ್ಲಿ ಬೆಳ್ಳಿ, 2018 ರ ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಕಂಚು, 2018ರ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, 2019ರ ಐಲೆರ್ಂಡ್ ಓಪನ್‍ನಲ್ಲಿ ಬೆಳ್ಳಿ, 2019 ರ ಟರ್ಕಿಶ್ ಓಪನ್‍ನಲ್ಲಿ ಚಿನ್ನ, 2020 ರ ಬ್ರೆಜಿಲ್ ಓಪನ್‍ನಲ್ಲಿ ಚಿನ್ನ 2020 ಪೆರು ಓಪನ್‍ನಲ್ಲಿ ಚಿನ್ನ, 2021ರ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

  • ಅನುಮಾನ ವ್ಯಕ್ತಪಡಿಸಿದ ಭಾವಿ ಪತಿ- ಯುವತಿ ಆತ್ಮಹತ್ಯೆಗೆ ಶರಣು

    ಅನುಮಾನ ವ್ಯಕ್ತಪಡಿಸಿದ ಭಾವಿ ಪತಿ- ಯುವತಿ ಆತ್ಮಹತ್ಯೆಗೆ ಶರಣು

    ಹುಬ್ಬಳ್ಳಿ: ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂತೋಷ ನಗರದಲ್ಲಿ ನಡೆದಿದೆ.

    ಪವಿತ್ರ (25) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಸೆ.1 ರಂದು ಹಾವೇರಿಯ ಅಭಿನಂದನ್ ಜೊತೆಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಪವಿತ್ರಾ ಭಾವಿ ಪತಿ ಅಭಿನಂದನ್ ಕಿರುಕುಳದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ

    ಈ ಜೋಡಿ ಕಳೆದವಾರ ದಾಂಡೇಲಿಯಲ್ಲಿ ಫ್ರಿ ವೆಡ್ಡಿಂಗ್ ಶೂಟಿಂಗ್ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಬಂದ ಮೇಲೆ ಪವಿತ್ರಗೆ ವಿಪರಿತ ಕಿರುಕುಳ ನೀಡಿದ್ದನಂತೆ. ಆಕೆಯ ನಡತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಇದರಿಂದ ಮನನನೊಂದ ಪವಿತ್ರ ಇಂದು ಮನೆಯಲ್ಲೆ ನೇಣಿಗೆ ಶರಣಾಗಿದ್ದಾಳೆ ಎಂದು ಭಾವಿ ಪತಿ ಅಭಿನಂದನ್ ವಿರುದ್ದ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

  • ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ

    ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ

    – ಅಪ್ಪು ಇಂದಿಗೂ, ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಾಚರಣೆ ಮಾಡಿದೆ ಎನ್ನುವ ಕುರಿತಾಗಿ ನಿರ್ದೇಶಕ ಪ್ರೇಮ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಈ ಬೆನ್ನಲ್ಲೇ ನಟಿ ರಕ್ಷಿತಾ ಕೂಡಾ  ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

    ನಟಿ ರಕ್ಷಿತಾ ಪ್ರೇಮ್ ಇನ್‍ಸ್ಟಾಗ್ರಾಮ್‍ನಲ್ಲಿ, ಅಪ್ಪು ಅಗಲಿಕೆಯ ನೋವಿನಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಹಲವಾರು ವಿಷಯಗಳು ನನ್ನನ್ನೂ ಇನ್ನೂ ಕಾಡುತ್ತಿವೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು, ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆಯಾಚಿಸುತ್ತೇನೆ. ಇದು ಯಾವುದು ಉದ್ದೇಶಪೂರ್ವಕವಲ್ಲ. ಅಪ್ಪು ಇಂದೀಗೂ ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ ಎಂದು ಬರೆದುಕೊಂಡು ಕ್ಷಮೆಯಾಚಿಸಿದ್ದಾರೆ. ರಕ್ಷತಾ ಈ ಪೋಸ್ಟ್‌ ಹಾಕುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    ನಿರ್ದೇಶಕ ಪ್ರೇಮ್ ಕೂಡಾ ಈ ವಿಚಾರವಾಗಿ ಕ್ಷಮೆ ಕೆಳಿದ್ದರು. ಅಪ್ಪು ಅವರು ಆಸ್ಪತ್ರೆಯಲ್ಲಿ ಮಲಗಿದ್ದರು. ಆಗ ನಾನು ಅವರ ಎರಡೂ ಕಾಲು ಹಿಡಿದುಕೊಂಡು ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿ ಬಾಸ್ ಎಂದು ಕೇಳಿಕೊಂಡಿದ್ದೆ. ಅಪ್ಪು ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದಿದ್ದೇನೆ. ನನ್ನನ್ನು ಕ್ಷಮಿಸಿ. ನನಗೆ ಗೊತ್ತಾಗದೇ ಏನಾದ್ರೂ ಆಗಿದ್ದರೆ ಕ್ಷಮಿಸಿ. ನಿನ್ನೆ ನಮಗೆ ಗೊತ್ತಿಲ್ಲದೆ ತಪ್ಪು ಆಗಿದೆ. ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ನಡೆದಿದ್ದೇನು?: ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್‍ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ, ನಟಿ ರಕ್ಷಿತಾ ಪ್ರೇಮ್, ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

  • ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    – ಗೊತ್ತಿಲ್ಲದೆ ತಪ್ಪಾಗಿದ್ದಕ್ಕೆ ಕ್ಷಮೆಯಿರಲಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಮಾಚರಣೆ ಮಾಡಿದೆ ಎನ್ನುವ ಕುರಿತಾಗಿ ನಿರ್ದೇಶಕ ಪ್ರೇಮ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಗೊತ್ತಿದ್ದು ತಪ್ಪು ಮಾಡಿಲ್ಲ. ಬದಲಾಗಿ ನನಗೆ ಗೊತ್ತಾಗದೇ ಯಾವುದೇ ತಪ್ಪನ್ನು ಮಾಡಿದ್ದರೆ ಕ್ಷಮಿಸಿ. ಅಪ್ಪು ಅವರನ್ನು ಕಳೆದುಕೊಂಡ ಮೇಲೆ ಇನ್ನೊಬ್ಬರಿಗೆ ಸ್ಫೂರ್ತಿಯಾಗಿ ಬದುಕೋಣ, ಇನ್ನೊಬ್ಬರ ಕಾಲು ಎಳೆಯುವುದು ಬೇಡ, ಸಾಧ್ಯವಾದಷ್ಟು ಸಹಾಯ ಮಾಡೋಣ ಎನ್ನುವ ದೃಷ್ಟಿಯಿಂದ ನಿನ್ನೆ ಕಾರ್ಯಕ್ರಮದ ಅಂತ್ಯದಲ್ಲಿ ನನಗೆ ಗೊತ್ತಿಲ್ಲದೇ ತಪ್ಪು, ನೋವು ಆಗಿದ್ದರೆ ಕ್ಷಮಿಸಿ ಎಂದು ನಾನು ಕೇಳಿದ್ದೇನು ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಅಪ್ಪು ಅವರು ಆಸ್ಪತ್ರೆಯಲ್ಲಿ ಮಲಗಿದ್ದರು. ಆಗ ನಾನು ಅವರ ಎರಡೂ ಕಾಲು ಹಿಡಿದುಕೊಂಡು ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿ ಬಾಸ್ ಎಂದು ಕೇಳಿಕೊಂಡಿದ್ದೆ. ಅಪ್ಪು ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದಿದ್ದೇನೆ. ನನ್ನನ್ನು ಕ್ಷಮಿಸಿ. ನನಗೆ ಗೊತ್ತಾಗದೇ ಏನಾದ್ರೂ ಆಗಿದ್ದರೆ ಕ್ಷಮಿಸಿ. ನಿನ್ನೆ ನಮಗೆ ಗೊತ್ತಿಲ್ಲದೆ ತಪ್ಪು ಆಗಿದೆ. ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ:  ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್‍ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ.

  • ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಮಾಚರಣೆ ಮಾಡಿರುವುದು ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಶಾಂಪೇನ್ ಚಿಮ್ಮಿಸಿದ್ದಾರೆ. ಈ ವೇಳೆ ಅಪ್ಪು ಫೋಟೋ ಎಲ್ ಇಡಿ ಮೇಲೆ ಬಂದಿದೆ. ಈ ಕುರಿತಾಗಿ ಚಿತ್ರತಂಡ ಕ್ಷಮೆ ಕೇಳ ಬೇಕು ಎಂದು ಸಾರಾಗೋವಿಂದ್ ಅವರು  ಹೇಳಿದ್ದರು.

    ಅಪ್ಪು ಅಗಲಿಕೆ ನೋವಿನಿಂದ ಹೊರ ಬಂದಿಲ್ಲ. ಆದರೆ ಏಕ್ ಲವ್ ಯಾ ಸಿನಿಮಾ ತಂಡ ಅಪ್ಪು ಫೋಟೋ ಮುಂದೇ ಶಾಂಪೇನ್ ಚಿಮ್ಮಿಸಿ ಸಂಭ್ರಮಾಚರಣೆ ಮಾಡಿ ಎಡವಟ್ಟು ಮಾಡಿಕೊಂಡಿದೆ. ಶಾಂಪೇನ್ ಚಿಮ್ಮಿಸುವ ವೇಳೆ ಹಾಡು ಪ್ರಸಾರವಾಗಿದೆ. ಇದರಿಂದ ಅಪ್ಪು ಫೋಟೋಗೆ ಅವಮಾನ ಮಾಡಿದಂತಾಗಿದೆ. ಈ ಕುರಿತಾಗಿ ಎಲ್ಲೆಡೆ ಆಕ್ರೋಶವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಈ ಕುರಿತಾಗಿ ನಿರ್ದೇಶಕ ಪ್ರೇಮ್ ಪಬ್ಲಿಕ್ ಟಿವಿ ಮೂಲಕವಾಗಿ ಕ್ಷಮೆ ಕೇಳಿದ್ದಾರೆ. ನಮಗೆ ಗೊತ್ತಿಲ್ಲದೆ ತಪ್ಪು ಆಗಿದೆ. ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.

  • 5.5 ತಿಂಗಳಿಗೆ ಜನಿಸಿದ ಮಗು ವಿಶ್ವ ದಾಖಲೆ

    5.5 ತಿಂಗಳಿಗೆ ಜನಿಸಿದ ಮಗು ವಿಶ್ವ ದಾಖಲೆ

    ನ್ಯೂಯಾರ್ಕ್: 2020ರ ಜುಲೈನಲ್ಲಿ ಅಮೆರಿಕಾದ ಅಲಬಾಮದಲ್ಲಿ ಐದೂವರೆ ತಿಂಗಳಲ್ಲೇ ಜನಿಸಿದ ಮಗುವು ಅವಧಿಗಿಂತ ಮುಂಚಿತವಾಗಿ ಹುಟ್ಟಿ ಬದುಕುಳಿದ ಮಗು ಎಂಬ ಗಿನ್ನಿಸ್ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

    2020 ಜುಲೈ4ರಂದು ಮಿಶೆಲ್ ಬಟ್ಲರ್ ಅವರಿಗೆ ಜನಿಸಿದ ಕುರ್ಟಿಸ್ ಝೈ-ಕೀರ್ತ್ ಗಿನ್ನಿಸ್ ದಾಖಲೆಗೆ ಭಾಜನವಾದ ಮಗುವಾಗಿದೆ. ಸಾಮಾನ್ಯವಾಗಿ ಮಹಿಳೆ ಗರ್ಭ ಧರಿಸಿದ 9 ತಿಂಗಳ ಬಳಿಕ ಮಗುವಿನ ಜನ್ಮ ನೀಡುತ್ತಾರೆ. ಆದರೆ ಐದೂವರೆ ತಿಂಗಳಿಗೆ ಈ ಮಗು ಜನಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ತೆರೆದರೆ ಕೆನ್ನಗೆ ಬಾರಿಸಲು ಮಹಿಳೆ ನೇಮಿಸಕೊಂಡ ಉದ್ಯಮಿ

    ಮಿಶೆಲ್ 2020ರ ನವೆಂಬರ್ 11ರಂದು ತಮ್ಮ ಮಗುವಿನ ಜನ್ಮ ನೀಡಬೇಕಿತ್ತು. ಆದರೆ ಆರೋಗ್ಯ ಪರೀಕ್ಷೆಗೆ 2020ರ ಜುಲೈ 4 ರಂದು ಆಸ್ಪತ್ರೆಗೆ ಬಂದ ಮಿಶೆಲ್ ಅವರನ್ನು ಅಲಬಾಮನ ವಿವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

    ಮಿಶೆಲ್ ಅವರಿಗೆ ಒಂದು ಹೆಣ್ಣು, ಗಂಡು ಮಗು ಜನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹೆಣ್ಣು ಮಗುಸಾವನ್ನಪ್ಪಿತ್ತು. ಆದರೆ ಹುಟ್ಟಿದಾಗ ಗಂಡು ಮಗು ಕೇವಲ 420 ಗ್ರಾಂ ಅಂದರೆ ಒಂದು ಪುಟ್ಬಾಲ್ ತೂಕ ಕ್ಕಿಂತ ಕಡಿಮೆ ಇತ್ತು. ಈಗ ಇದು ಸಾಮಾನ್ಯ ಮಗುವಿನಂತೆ ಬೆಳೆಯುತ್ತಿದೆ.

  • ಇಂದು ಮಾಡಿ ಬಿಸಿಯಾದ ಗರಂ ಗರಂ ಕಚೋರಿ

    ಇಂದು ಮಾಡಿ ಬಿಸಿಯಾದ ಗರಂ ಗರಂ ಕಚೋರಿ

    ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಕಚೋರಿ ಒಮ್ಮೆ ಟ್ರೈ ಮಾಡಬಹುದು. ಮಕ್ಕಳು ಕಚೋರಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    * ಮೈದಾಹಿಟ್ಟು – 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಜ್ವಾನ – ಅರ್ಧ ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್
    * ದನಿಯಾ – 1 ಚಮಚ
    * ಜೀರಿಗೆ – 1 ಚಮಚ
    * ಸೋಂಪು – 1 ಚಮಚ
    * ಈರುಳ್ಳಿ – 3
    * ಹಸಿಮೆಣಸು – 2
    * ಕಡಲೆಹಿಟ್ಟು – 2 ಚಮಚ
    * ಖಾರದ ಪುಡಿ – 1 ಚಮಚ
    * ಗರಂಮಸಾಲೆ – ಅರ್ಧ ಚಮಚ
    * ಕಾಳುಮೆಣಸಿನ ಪುಡಿ – ಅರ್ಧ ಚಮಚ
    * ಅರಿಸಿಣ ಪುಡಿ – ಚಿಟಿಕೆ
    * ಆಲೂಗೆಡ್ಡೆ – 3 (ಬೇಯಿಸಿದ್ದು)
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಸಕ್ಕರೆ- 1 ಚಮಚ

    ಮಾಡುವ ವಿಧಾನ:
    * ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಅಡುಗೆಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಟ್ಟಿನ ಹದಕ್ಕೆ ಕಲೆಸಿಕೊಂಡು 20 ನಿಮಿಷಗಳ ಕಾಲ ನೆನೆಸಿಡಿ.
    * ದನಿಯಾ, ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಪಾತ್ರೆಯೊಂದಕ್ಕೆ 3 ಅಡುಗೆಎಣ್ಣೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು, ಖಾರದಪುಡಿ, ಗರಂಮಸಾಲೆ, ಕಾಳುಮೆಣಸಿನ ಪುಡಿ, ಅರಿಸಿನ ಪುಡಿ, ಇಂಗು ಹಾಗೂ ಈಗಾಗಲೇ ಹುಡಿ ಮಾಡಿಟ್ಟುಕೊಂಡ ಹುಡಿಯನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ


    * ಅದಕ್ಕೆ ಪುಡಿ ಮಾಡಿದ ಆಲೂಗೆಡ್ಡೆ ಕೊತ್ತಂಬರಿ ಸೊಪ್ಪು, ಸಕ್ಕರೆ ಸೇರಿಸಿ ಕಲೆಸಿ. ಇದನ್ನು ಉಂಡೆ ಮಾಡಿಕೊಳ್ಳಿ. ಮೈದಾಹಿಟ್ಟಿನ ಮಿಶ್ರಣವನ್ನು ಉಂಡೆ ಮಾಡಿಕೊಂಡು ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರೊಳಗೆ ಆಲೂಗೆಡ್ಡೆ ಉಂಡೆಯನ್ನು ಇರಿಸಿ ಲಟ್ಟಿಸಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಕರಿದರೆ ಕಚೋರಿ ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆ ನೇಮಿಸಿಕೊಂಡ ಉದ್ಯಮಿ

    ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆ ನೇಮಿಸಿಕೊಂಡ ಉದ್ಯಮಿ

    ವಾಷಿಂಗ್ಟನ್: ಉದ್ಯಮಿಯೊಬ್ಬ ತಾನೂ ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆಯನ್ನು ನೇಮಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಜಗತ್ತಿನಾದ್ಯಂತ 2.85 ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿರುವ ಫೇಸ್‍ಬುಕ್ ಜನಪ್ರಿಯ ಜಾಲತಾಣವಾಗಿದೆ. ಆದರೆ ಈ ಭಾರತೀಯ ಅಮೆರಿಕನ್ ತಾನು ಪತ್ರಿ ಬಾರಿ  ಫೇಸ್‍ಬುಕ್ ತೆರೆದಾಗ ತಮ್ಮ ಕೆನ್ನೆಗೆ ಬಾರಿಸಲು ಮಹಿಳೆಯನ್ನು ನೇಮಿಕೊಂಡಿದ್ದಾರೆ.

    ಪ್ಲಾವೋಕ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಮನೀಶ್ ಸೇಠಿ ತಾವು ಕೆಲಸ ಮಾಡುವಾಗ ಅಪ್ಪಿತಪ್ಪಿ ಫೇಸ್‍ಬುಕ್ ತೆರೆದರೆ ಕೂಡಲೇ ತಮ್ಮ ಕೆನ್ನೆಗೆ ಬಾರಿಸಲು ಕಾರಾ ಎನ್ನುವ ಹೆಸರಿನ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

    ಕರಾಗೆ ಈ ಕೆಲಸಕ್ಕೆ ಪ್ರತಿ ತಿಂಗಳು (8 ಡಾಲರ್)594.78 ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಇದರಿಂದ ತನ್ನ ಉತ್ಪಾದಕತೆಯ ಶೇ.98 ರಷ್ಟು ಹೆಚ್ಚಿದೆ ಎಂದು ಮನೀಶ್ ಹೇಳಿದ್ದಾರೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡಾ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಾಲಕ ಮದ್ಯಪಾನ ಮಾಡಿದ್ರೆ ಕಾರು ಚಲಿಸಲ್ಲ-ಅಮೆರಿಕಾ ಹೊಸ ವ್ಯವಸ್ಥೆ

  • ಮಹಿಳಾ ಪೊಲೀಸ್  ಇನ್ಸ್‌ಪೆಕ್ಟರ್‌ ರಕ್ಷಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

    ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ರಕ್ಷಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

    ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬರು ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತೊಯ್ದು ಸುದ್ದಿಯಾಗಿದ್ದರು. ರಕ್ಷಿಸಿದ ಒಂದು ದಿನದ ನಂತರದಲ್ಲಿ ಯುವಕ ಸಾವನ್ನಪಿದ್ದಾನೆ.

    ಉದಯ ಕುಮಾರ್(25) ಮೃತನಾಗಿದ್ದಾನೆ. ಈತ ಇಂದು ಬೆಳಿಗ್ಗೆ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ಗುರುವಾರ ಟಿ.ಪಿ.ಛಾತಿರಾಮ್‍ನ ಇನ್ಸ್‌ಪೆಕ್ಟರ್‌ ರಾಜೇಶ್ವರಿ ಅವರು ಉದಯನನ್ನು ರಕ್ಷಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿದ್ದಾನೆ.

    ಎಡೆಬಿಡದೆ ಸುರಿದ ಮಳೆಗೆ ಮೈ ಮೇಲೆ ಮರ ಬಿದ್ದು ಯುವಕ ಪ್ರಜ್ಞಾಹೀನನಾಗಿದ್ದನು. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದ ಆಟೋರಿಕ್ಷಾ ಬಳಿಗೆ ತಲುಪಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿ ಪ್ರಜ್ಞಾಹೀನ ವ್ಯಕ್ತಿಯನ್ನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ಹೋಗಿದ್ದಾರೆ. ರಾಜೇಶ್ವರಿ ಅವರು ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಕೊಂಡು ಹೋಗುತ್ತಿದ್ದು, ಆಟೋದಲ್ಲಿ ಇಬ್ಬರನ್ನು ಕೂರಿಸಿ ಈ ವ್ಯಕ್ತಿಯನ್ನು ಬದುಕಿಸಿ, ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಹೋದ್ಯೋಗಿಗಳಿಗೆ ಕೂಗಿ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ. ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ ಅಧಿಕಾರಿಯನ್ನು ಜನರು ಶ್ಲಾಘಿಸಿದ್ದಾರೆ. ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್‌ಪೆಕ್ಟರ್‌!

    ಇನ್ಸ್‌ಪೆಕ್ಟರ್‌ ರಾಜೇಶ್ವರಿ ಹೇಳಿದ್ದೇನು?: ನಾನು ಪ್ರಥಮ ಚಿಕಿತ್ಸೆ ನೀಡಿದ ನಂತರ ನಾನು ಅವನನ್ನು ಹೊತ್ತೊಯ್ದಿದ್ದೇನೆ. ಅಲ್ಲಿಗೆ ಒಂದು ಆಟೋ ಬಂತು, ನಾವು ಅವನನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ. ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ, ಅವರ ತಾಯಿ ಅಲ್ಲಿದ್ದರು. ಚಿಂತಿಸಬೇಡಿ ಮತ್ತು ಪೊಲೀಸ್ ಇಲಾಖೆ ಅವರಿಗೆ ಬೆಂಬಲ ನೀಡುತ್ತದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಚಿಕಿತ್ಸೆ ಮುಂದುವರಿದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಇನ್ಸ್‍ಪೆಕ್ಟರ್ ರಾಜೇಶ್ವರಿ ಗುರುವಾರ ಹೇಳಿದ್ದಾರೆ.. ಇದನ್ನೂ ಓದಿ: ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ – 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

  • ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ನವದೆಹಲಿ: ಹಿಂದೂ ಧರ್ಮ, ಹಿಂದುತ್ವ ಎರಡು ಬೇರೆ ಬೇರೆ ವಿಷಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ (digital campaign Jan Jagran Abhiyan) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ

    ಕಾಂಗ್ರೆಸ್ ಪಕ್ಷದ ಸಿದ್ಧಾಂತ ಜೀವಂತವಾಗಿದೆ ಮತ್ತು ರೋಮಾಂಚಕವಾಗಿದೆ. ಆದರೆ ಅದನ್ನು ಮರೆ ಮಾಡಲಾಗಿದೆ. ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) (Bharatiya Janata Party) ದ್ವೇಷದ ಸಿದ್ಧಾಂತವು ನಮಗೆ ಇಷ್ಟವಾಗಲಿ ಅಥವಾ ಇಲ್ಲದಿರಲಿ. ಕಾಂಗ್ರೆಸ್ ಪಕ್ಷದ ಪ್ರೀತಿ, ವಾತ್ಸಲ್ಯ ಮತ್ತು ರಾಷ್ಟ್ರೀಯತೆಯ ಸಿದ್ಧಾಂತವನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    RAHUL GANDHI

    ಕಾಂಗ್ರೆಸ್ ಪಕ್ಷವು ಜನರಲ್ಲಿ ಸಿದ್ಧಾಂತವನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡದ ಕಾರಣ ಪಕ್ಷದ ಸಿದ್ಧಾಂತವು ಮಬ್ಬಾಗಿದೆ ಎಂದು ವಿವರಿಸಿದರು. ಕೇಂದ್ರದ ಬಡವರ ವಿರೋಧಿ ನೀತಿಗಳನ್ನು ಎತ್ತಿ ಹಿಡಿಯಲು, ಈ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷವು ನವೆಂಬರ್ 14ರಿಂದ ನವೆಂಬರ್ 29ರ ನಡುವೆ ಜನ ಜಾಗರಣ ಅಭಿಯಾನ ಎಂಬ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಿದೆ. ಇದನ್ನೂ ಓದಿ:  ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?