Tag: publictv

  • ರಾಜ್ಯದ ಹವಾಮಾನ ವರದಿ: 27-12-2021

    ರಾಜ್ಯದ ಹವಾಮಾನ ವರದಿ: 27-12-2021

    ದಿನದಂತೆ ಇಂದು ಸಹ ಹವಾಮಾನ ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ ಜನರನ್ನು ನಡುಗಿಸುತ್ತಿದೆ. ಕರ್ನಾಟಕದಲ್ಲಿ ಮಳೆಗಾಲ ಮುಗಿದು ಚಳಿಗಾಲ ಆವರಿಸಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ಶೀತಗಾಳಿ ಬೀಸತೊಡಗಿದ್ದು, ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ. ವರ್ಷಾಂತ್ಯಕ್ಕೆ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ, ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-15
    ಮಂಗಳೂರು: 31-22
    ಶಿವಮೊಗ್ಗ: 32-16
    ಬೆಳಗಾವಿ: 31-16
    ಮೈಸೂರು: 29-16

    ಮಂಡ್ಯ: 29-15
    ರಾಮನಗರ: 21-11
    ಮಡಿಕೇರಿ: 28-13
    ಹಾಸನ: 28-14
    ಚಾಮರಾಜನಗರ: 29-16

    ಚಿಕ್ಕಬಳ್ಳಾಪುರ: 28-14
    ಕೋಲಾರ: 27-15
    ತುಮಕೂರು: 29-15
    ಉಡುಪಿ: 31-22
    ಕಾರವಾರ: 31-22

    ಚಿಕ್ಕಮಗಳೂರು: 29-14
    ದಾವಣಗೆರೆ: 32-17
    ಚಿತ್ರದುರ್ಗ: 30-16
    ಹಾವೇರಿ: 32-17
    ಬಳ್ಳಾರಿ: 32-17

    ಗದಗ: 31-17
    ಕೊಪ್ಪಳ: 31-17
    ರಾಯಚೂರು: 32-18
    ಯಾದಗಿರಿ: 31-17

    ವಿಜಯಪುರ: 31-18
    ಬೀದರ್: 29-17
    ಕಲಬುರಗಿ: 31-17
    ಬಾಗಲಕೋಟೆ: 32-17

  • ರಾಜ್ಯದ ಹವಾಮಾನ ವರದಿ: 23-12-2021

    ರಾಜ್ಯದ ಹವಾಮಾನ ವರದಿ: 23-12-2021

    ದಿನದಂತೆ ಇಂದು ಸಹ ಹವಾಮಾನ  ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ ಜನರನ್ನು ನಡುಗಿಸುತ್ತಿದೆ. ಮುಂದಿನ ನಾಲ್ಕೈದು ದಿನ ಚಳಿಯ ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-13
    ಮಂಗಳೂರು: 31-22
    ಶಿವಮೊಗ್ಗ: 31-16
    ಬೆಳಗಾವಿ: 30-16
    ಮೈಸೂರು: 29-15

    ಮಂಡ್ಯ: 27-14
    ರಾಮನಗರ: 29-15
    ಮಡಿಕೇರಿ:  27-13
    ಹಾಸನ: 28-14
    ಚಾಮರಾಜನಗರ: 29-16

    ಚಿಕ್ಕಬಳ್ಳಾಪುರ: 26-12
    ಕೋಲಾರ: 27-13
    ತುಮಕೂರು: 28-14
    ಉಡುಪಿ: 31-22
    ಕಾರವಾರ: 30-22

    ಚಿಕ್ಕಮಗಳೂರು: 28-14
    ದಾವಣಗೆರೆ: 31-15
    ಚಿತ್ರದುರ್ಗ: 29-16
    ಹಾವೇರಿ: 31-15
    ಬಳ್ಳಾರಿ: 31-17

    ಗದಗ: 31-16
    ಕೊಪ್ಪಳ: 30-16
    ರಾಯಚೂರು: 31-16
    ಯಾದಗಿರಿ: 31-16

    ವಿಜಯಪುರ: 31-16
    ಬೀದರ್: 29-14
    ಕಲಬುರಗಿ: 31-15
    ಬಾಗಲಕೋಟೆ: 31-16

  • ರಾಜ್ಯದ ಹವಾಮಾನ ವರದಿ: 14-12-2021

    ರಾಜ್ಯದ ಹವಾಮಾನ ವರದಿ: 14-12-2021

    ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಕಾರಾವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-17
    ಮಂಗಳೂರು: 33-24
    ಶಿವಮೊಗ್ಗ: 29-19
    ಬೆಳಗಾವಿ: 29-18
    ಮೈಸೂರು: 28-18

    ಮಂಡ್ಯ: 28-18
    ರಾಮನಗರ: 27-18
    ಮಡಿಕೇರಿ:26-17
    ಹಾಸನ: 26-17
    ಚಾಮರಾಜನಗರ: 28-19

    ಚಿಕ್ಕಬಳ್ಳಾಪುರ: 25-17
    ಕೋಲಾರ: 26-17
    ತುಮಕೂರು: 27-17
    ಉಡುಪಿ: 32-24
    ಕಾರವಾರ: 33-26

    ಚಿಕ್ಕಮಗಳೂರು: 26-17
    ದಾವಣಗೆರೆ: 29-19
    ಚಿತ್ರದುರ್ಗ: 27-18
    ಹಾವೇರಿ: 26-19
    ಬಳ್ಳಾರಿ: 29-19

    ಗದಗ: 29-19
    ಕೊಪ್ಪಳ: 28 -19
    ರಾಯಚೂರು: 29-19
    ಯಾದಗಿರಿ: 31-20

    ವಿಜಯಪುರ: 29-19
    ಬೀದರ್: 28-17
    ಕಲಬುರಗಿ: 30-19
    ಬಾಗಲಕೋಟೆ: 30-19

  • ರಾಜ್ಯದ ಹವಾಮಾನ ವರದಿ: 30-11-2021

    ರಾಜ್ಯದ ಹವಾಮಾನ ವರದಿ: 30-11-2021

    ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ಇದ್ದು, ಮೋಡ ಕವಿದ ವಾತಾವರಣ ಮುಂದುವರಿಯುತ್ತದೆ. ಹಲವೆಡೆ ಜಿಡಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-19
    ಮಂಗಳೂರು: 31-24
    ಶಿವಮೊಗ್ಗ: 29-19
    ಬೆಳಗಾವಿ: 28-20
    ಮೈಸೂರು: 27-19

    ಮಂಡ್ಯ: 27-19
    ರಾಮನಗರ: 23-13
    ಮಡಿಕೇರಿ: 24-17
    ಹಾಸನ: 26-18
    ಚಾಮರಾಜನಗರ: 27-19

    ಚಿಕ್ಕಬಳ್ಳಾಪುರ: 24-17
    ಕೋಲಾರ: 26-19
    ತುಮಕೂರು: 27-19
    ಉಡುಪಿ: 31-24
    ಕಾರವಾರ: 33-26

    ಚಿಕ್ಕಮಗಳೂರು: 26-18
    ದಾವಣಗೆರೆ: 28-21
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 28-21

    ಗದಗ: 28-21
    ಕೊಪ್ಪಳ: 28-21
    ರಾಯಚೂರು: 29-21
    ಯಾದಗಿರಿ: 30-21

    ವಿಜಯಪುರ: 23-9
    ಬೀದರ್: 28-18
    ಕಲಬುರಗಿ: 29-20
    ಬಾಗಲಕೋಟೆ: 29-21

  • ಮಹಿಳೆಯರ ಕಷ್ಟ ಅವರಿಗೆ ಮಾತ್ರ ಗೊತ್ತು : ಪ್ರಿಯಾಂಕಾ ವಾದ್ರಾ

    ಮಹಿಳೆಯರ ಕಷ್ಟ ಅವರಿಗೆ ಮಾತ್ರ ಗೊತ್ತು : ಪ್ರಿಯಾಂಕಾ ವಾದ್ರಾ

    ನವದೆಹಲಿ: ಉತ್ತರಪ್ರದೇಶ ಮಹಿಳೆಯರು ಆಭರಣ ಧರಿಸಿ ಮಧ್ಯರಾತ್ರಿ ಎಲ್ಲಿಗೆ ಬೇಕಾದರೂ ತೆರಳಬಹುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ.

    ಪ್ರತಿನಿತ್ಯ ಯಾವ ಸಂಕಷ್ಟ ಎದುರಿಸಬೇಕು ಎಂಬುದು ಉತ್ತರ ಪ್ರದೇಶದ ಮಹಿಳೆಯರಿಗೆ ಮಾತ್ರ ಗೊತ್ತು ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ, ದೇಶದ ಗೃಹ ಸಚಿವರು ಆಭರಣಗಳನ್ನು ಧರಿಸುತ್ತಾರೆ ಎಂದು ಹೇಳುತ್ತಾರೆ, ಆದರೆ ಅವರು ಪ್ರತಿದಿನ ಯಾವ ರೀತಿಯ ವಿಷಯಗಳನ್ನು ಎದುರಿಸಬೇಕೆಂದು ಉತ್ತರಪ್ರದೇಶ ಮಹಿಳೆಯರಿಗೆ ಮಾತ್ರ ತಿಳಿದಿದೆ ಎಂದು ಟ್ವೀಟ್‍ಮಾಡಿ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯುವಂತೆ ನವಾಬ್ ಮಲ್ಲಿಕ್ ಒತ್ತಾಯ

    ಹೀಗಾಗಿಯೇ ಲಡ್ಕಿ ಹೂಂ, ಲಢ್ ಸಕ್ತಿ ಹೂಂ ಬೇಕು. ರಾಜಕೀಯದಲ್ಲಿ ಮತ್ತು ಭದ್ರತೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಲ್ಲಿ ಮಹಿಳೆಯರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದ್ದು, ಕಾನ್ಪುರದಲ್ಲಿ ಮೂವರು ಮಹಿಳೆಯರ ಸರ ಅಪಹರಣದ ಬಗ್ಗೆ ಪ್ರಿಯಾಂಕಾ ಟ್ವಿಟ್ಟರ್ ನಲ್ಲಿ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ನನ್ನ ತಪ್ಪು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುವೆ: ಕಂಗನಾ ರಣಾವತ್

  • KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    ಭಾರತೀಯ ಚಿತ್ರರಂಗ ಕಂಡ ಯಶಸ್ವಿ ಹಾಗೂ ಜನಪ್ರಿಯ ನಿರ್ದೇಶಕರಲ್ಲಿ ಎಸ್.ಎಸ್. ರಾಜಮೌಳಿ ಕೂಡ ಒಬ್ಬರು. ದಕ್ಷಿಣ ಭಾರತ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿರುವ ರಾಜಮೌಳಿ ಬಾಹುಬಲಿ ಸಿನಿಮಾ ಮೂಲಕ ಪ್ರಖ್ಯಾತಿಗಳಿಸಿಕೊಂಡಿದ್ದಾರೆ. ಬಾಹುಬಲಿ ನಂತರ ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವಾಗಲೇ ದಿಗ್ಗಜ ನಟರನ್ನು ಒಂದೆಡೆ ಸೇರಿಸಿ ‘RRR’ ಸಿನಿಮಾ ಮೂಲಕ ಮತ್ತೊಮ್ಮೆ ಘರ್ಜಿಸಲು ಶುರು ಮಾಡಿದವರು ರಾಜಮೌಳಿ.

    RRR ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಜನವರಿ 7ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲು ಸಜ್ಜಾಗಿರುವ ಈ ಚಿತ್ರತಂಡದಿಂದ ಸಖತ್ ಸುದ್ದಿಯೊಂದು ಹೊರಬಿದ್ದಿದೆ. ಪಂಚ ಭಾಷೆಯಲ್ಲಿ ತೆರೆ ಮೇಲೆ ಅಬ್ಬರಿಸಲಿರುವ ಈ ಚಿತ್ರದ ಕರ್ನಾಟಕದ ವಿತರಣೆ ಹಕ್ಕು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿದೆ. ಈ ಸಂತಸದ ಸುದ್ದಿಯನ್ನು ಕೆವಿಎನ್ ಪ್ರೊಡಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ.

    ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಖ್ಯಾತಿ ಗಳಿಸಿದೆ. ಸದ್ಯ ಸಖತ್, ಬೈಟು ಲವ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ. ಇದರ ಜೊತೆಗೆ ‘RRR’ ಚಿತ್ರದ ಕರ್ನಾಟಕದ ಹಂಚಿಕೆ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿರುವುದು ಹೆಮ್ಮೆಯ ಸಂಗತಿ.

    ದಕ್ಷಿಣ ಭಾರತ ಹಾಗೂ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಭರವಸೆ ಹುಟ್ಟು ಹಾಕಿರುವ ಸಿನಿಮಾ ‘RRR’. ರಾಮ್ ಚರಣ್, ಜ್ಯೂನಿಯರ್ ಎನ್​ಟಿಆರ್ ನಾಯಕ ನಟರಾಗಿ ತೆರೆ ಮೇಲೆ ಅಬ್ಬರಿಸಲಿರುವ ಈ ಸಿನಿಮಾದಲ್ಲಿ ಬಾಹುಬಲಿ ಮಾಂತ್ರಿಕ ಮತ್ತೇನು ಮ್ಯಾಜಿಕ್ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೂ ಸಜ್ಜಾಗಿ ನಿಂತಿರುವ ಚಿತ್ರತಂಡ ಸಿನಿಮಾದ ಒಂದೊಂದೇ ಝಲಕ್ ಬಿಡುಗಡೆ ಮಾಡಿ ಸೋಶಿಯಲ್ ಮೀಡಿಯಾದಲ್ಲೂ ಧೂಳ್ ಎಬ್ಬಿಸುತ್ತಿದೆ. ದಿನದಿಂದ ದಿನಕ್ಕೆ ಸಖತ್ ಕ್ರೇಜ್ ಕ್ರಿಯೇಟ್ ಮಾಡ್ತಿರುವ RRR ಜನವರಿ 7 ರಂದು ತೆರೆಗೆ ಬರ್ತಿದೆ.

  • ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

    ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಪುತ್ರಿ ಧೃತಿ ಅಮೆರಿಕಗೆ ತೆರಳಿದ್ದಾರೆ.

    ಅಪ್ಪು ನಿಧನರಾದ ಹಿನ್ನೆಲೆಯಲ್ಲಿ ಧೃತಿ ತಂದೆ ಅಂತಿಮ ದರ್ಶನಕ್ಕೆ ನ್ಯೂಯಾರ್ಕ್‍ನಿಂದ ಬೆಂಗಳೂರಿಗೆ ಬಂದಿದ್ದರು. ಇದೀಗ ಕಾರ್ಯಗಳು ಮುಗಿಯುತ್ತಿದ್ದಂತೆ 15 ದಿನಗಳ ನಂತರ ನ್ಯೂಯಾರ್ಕ್ ಹೊರಟಿದ್ದಾರೆ.

    DHRUTHI

    ತಂದೆಯ ಕಾರ್ಯವನ್ನು ಮುಗಿಸಿದ ಧೃತಿವಿದ್ಯಾಭ್ಯಾಸ ಮಾಡಲೇಂದು ನ್ಯೂಯಾರ್ಕ್‍ಗೆ ಹೊರಟಿದ್ದಾರೆ. ಮಗಳನ್ನು ಕಳುಹಿಸಿಕೊಡಲು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಧೃತಿ ಸ್ಕಾಲರ್ ಶಿಪ್ ನೆರವಿನಿಂದ ನ್ಯೂಯಾರ್ಕ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ:  ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

    ಪುನೀತ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಧೃತಿ ವಿಮಾನದ ಮೂಲಕ ದೆಹಲಿಗೆ ಬಂದಿಳಿದಿದ್ದರು. ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ಅಕ್ಟೋಬರ್ 30ರಂದು ಸಂಜೆ 4:15ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಪೊಲೀಸ್ ಭದ್ರತೆಯಲ್ಲಿಯೇ ನೇರವಾಗಿ ತಮ್ಮ ನಿವಾಸ ಸದಾಶಿವ ನಗರಕ್ಕೆ ತೆರಳಿ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪನಿಗೆ ಅಂತಿಮ ನಮನ ಸಲ್ಲಿಸಿದ್ದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

  • ನನ್ನ ತಪ್ಪು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುವೆ: ಕಂಗನಾ ರಣಾವತ್

    ನನ್ನ ತಪ್ಪು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುವೆ: ಕಂಗನಾ ರಣಾವತ್

    ಮುಂಬೈ: ತಪ್ಪು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುವೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

    ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುವ ನಟಿ ಕಂಗನಾ. ಸ್ವಾತಂತ್ರ್ಯದ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಮಾಡಿದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುತ್ತೇನೆ ಎಂದಿದ್ದಾರೆ.

     kangana ranauts

    ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು 2014ರಲ್ಲಿ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಕಂಗನಾ ಗುರುವಾರ ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರವು ನಟಿಗೆ ನೀಡಿರುವ ಪದ್ಮಶ್ರೀ ವಾಪಸ್ ಪಡೆಯಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ತಮ್ಮ ವಿರುದ್ಧದ ಟೀಕೆಗಳಿಗೆ ಇನ್‍ಸ್ಟಾಗ್ರಾಂ ಮೂಲಕ ತಿರುಗೇಟು ನೀಡಿರುವ ಕಂಗನಾ ತಪ್ಪು ಸಾಬೀತಾದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

     kangana ranauts

    ನಡೆದಿದ್ದೇನು: ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುವ ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ 1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. 2014ರಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಪರೋಕ್ಷವಾಗಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದರು. ಇದನ್ನೂ ಓದಿ:  ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯುವಂತೆ ನವಾಬ್ ಮಲ್ಲಿಕ್ ಒತ್ತಾಯ

    ಕಂಗನಾರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು, ಇದಕ್ಕೂ ಮುನ್ನ ವರುಣ್ ಗಾಂಧಿಯಿಂದ ಹಿಡಿದು ಅನೇಕ ನಾಯಕರು ಕಂಗನಾ ರಣಾವತ್ ಅವರನ್ನು ಟೀಕಿಸಿದ್ದಾರೆ. ಇದೀಗ ಅವರು ನನ್ನ ತಪ್ಪು ಸಾಬೀತಾದರೆ ನನಗೆ ಕೊಟ್ಟಿರುವ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಎಂದು ಹೇಳಿದ್ದಾರೆ.

  • ಶಾಂಪೇನ್ ಅಲ್ಲ ಅದು ನಾನ್ ಅಲ್ಕೋಹಾಲಿಕ್ ಬಾಟಲ್: ರಕ್ಷಿತಾ

    ಶಾಂಪೇನ್ ಅಲ್ಲ ಅದು ನಾನ್ ಅಲ್ಕೋಹಾಲಿಕ್ ಬಾಟಲ್: ರಕ್ಷಿತಾ

    – ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ

    ಬೆಂಗಳೂರು: ಏಕ್ ಲವ್ ಯಾ ಸಿನಿಮಾ ಕಾರ್ಯಕ್ರಮದಲ್ಲಿ ಪುನೀತ್‍ಗೆ ಅಪಮಾನ ವಿಚಾರವಾಗಿ ಅಭಿಮಾನಿಗಳಲ್ಲಿ ಮತ್ತು ನಾಡಿನ ಜನತೆಯಲ್ಲಿ ನಟಿ ರಕ್ಷಿತಾ ಪ್ರೇಮ್ ಕ್ಷಮೆ ಕೇಳಿದ್ದಾರೆ.

    ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಕಾರ್ಯಕ್ರಮ ಶುರುವಾಗಿದ್ದು ಅಪ್ಪು ಅವರಿಗೆ ನಮನ ಸಲ್ಲಿಸುವ ಮೂಲಕವಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹೀಗಾಯಿತ್ತು. ಅದು ಶಾಂಪೇನ್ ಅಲ್ಲ ಅದು ನಾನ್ ಅಲ್ಕೋಹಾಲಿಕ್ ಬಾಟಲ್ ಆಗಿದೆ. ಹಾಗೇ ಯಾರು ಬೇಕು ಎಂದು ಮಾಡುವುದಿಲ್ಲ. ನಮಗೆ ಗೊತ್ತಿಲ್ಲದೇ ಆದ ಕಾರಣ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

    ನಾನು ಬಾಟಲ್ ಓಪನ್ ಮಾಡುವಾಗ ತಾಂತ್ರಿಕ ತೊಂದರೆಯಿಂದಾಗಿ ಅಪ್ಪು ಫೋಟೋ ಎಲ್‍ಇಡಿ ಮೇಲೆ ಬಂದು ಬಿಟ್ಟಿತ್ತು. ನಾವು ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ. ಸಾಂಗ್ ರಿಲೀಸ್ ಕಾರ್ಯಕ್ರಮವಾಗಿತ್ತು. ಆ ಹಾಡಿಗೆ ಸಂಬಧಪಟ್ಟಂತೆ ನಾವು ಎನೋ ಮಾಡಲು ಹೋಗಿ ಹೀಗೆ ಆಯ್ತು. ಅಪ್ಪು ಅಭಿಮಾನಿಗಳಿಗೆ ಈ ವಿಚಾರವಾಗಿ ನೋವು ಆಗಿದೆ ಎಂದು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ:  ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ

    ನಾನು ಇನ್‍ಸ್ಟಾಗ್ರಾಮ್‍ನಲ್ಲಿ ಈ ವಿಚಾರವಾಗಿ ಕ್ಷಮೆ ಕೇಳಿ ಪೋಸ್ಟ್ ಹಾಕಿದಾಗ ಕೆಲವು ಅಭಿಪ್ರಾಯಗಳು ಬರುತ್ತವೆ. ಅದನ್ನು ನೋಡಿದಾಗ ಗೊತ್ತಾಗುತ್ತದೆ ಕೆಲವರಿಗೆ ಈ ವಿಚಾರವಾಗಿ ಬೇಸರವಾಗಿದೆ ಎಂದು. ನಾನು ನನ್ನ ಚಿತ್ರ ತಂಡ ಪರವಾಗಿ ಕ್ಷಮೆ ಕೇಳುತ್ತೇನೆ. ನಮಗೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ನಾನು ಬಾಟಲ್ ಓಪನ್ ಮಾಡಿದಾಗ ಅಪ್ಪು ಫೋಟೋ ಎಲ್‍ಇಡಿ ಮೇಲೆ ಬರುತ್ತಿದ್ದಂತೆ, ನಾವು ಆ ವೀಡಿಯೋ ತಕ್ಷಣ ಸ್ಟಾಪ್ ಮಾಡಿದೆವು ಎಂದಿದ್ದಾರೆ. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ನಟಿ ರಕ್ಷಿತಾ ಪ್ರೇಮ್ ಇನ್‍ಸ್ಟಾಗ್ರಾಮ್‍ನಲ್ಲಿ, ಅಪ್ಪು ಅಗಲಿಕೆಯ ನೋವಿನಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಹಲವಾರು ವಿಷಯಗಳು ನನ್ನನ್ನೂ ಇನ್ನೂ ಕಾಡುತ್ತಿವೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು, ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆಯಾಚಿಸುತ್ತೇನೆ. ಇದು ಯಾವುದು ಉದ್ದೇಶಪೂರ್ವಕವಲ್ಲ. ಅಪ್ಪು ಇಂದೀಗೂ ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ ಎಂದು ಬರೆದುಕೊಂಡು ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ:  ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    ನಡೆದಿದ್ದೇನು?: ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್‍ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ, ನಟಿ ರಕ್ಷಿತಾ ಪ್ರೇಮ್, ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ.