Tag: publictv gingili holige

  • ಯುಗಾದಿ ಹಬ್ಬಕ್ಕೆ ಎಳ್ಳು ಹೋಳಿಗೆ ಮಾಡಿ ತಿನ್ನಿ: ಸುಲಭವಾಗಿ ಹೋಳಿಗೆ ತಯಾರಿಸೋದು ಹೇಗೆ?

    ಯುಗಾದಿ ಹಬ್ಬಕ್ಕೆ ಎಳ್ಳು ಹೋಳಿಗೆ ಮಾಡಿ ತಿನ್ನಿ: ಸುಲಭವಾಗಿ ಹೋಳಿಗೆ ತಯಾರಿಸೋದು ಹೇಗೆ?

    ಬೆಂಗಳೂರು: ಯುಗಾದಿ ಹಬ್ಬದಲ್ಲಿ ಹೋಳಿಗೆ ತಯಾರಿಸುವುದು ಸಾಮಾನ್ಯ. ಈ ಹೋಳಿಗೆ ರುಚಿಯಾಗಿರಬೇಕು. ಅಂತೆಯೇ ಸ್ವಾದಿಷ್ಟವಾದ ಎಳ್ಳು ಹೋಳಿಗೆ ಮಾಡುವ ಸುಲಭವಾದ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಬಿಳಿ ಎಳ್ಳು – 1 ಕಪ್
    * ಬೆಲ್ಲ – 1ಕಪ್
    * ಏಲಕ್ಕಿ ಪುಡಿ – ಚಿಟಿಕೆ
    * ಗೋಧಿ ಹಿಟ್ಟು – 1.5 ಕಪ್
    * ಹಾಲು – ಸ್ವಲ್ಪ
    * ಎಣ್ಣೆ – ಸ್ವಲ್ಪ
    * ಉಪ್ಪು – ರುಚಿಗೆ ತಕ್ಕಷ್ಟು
    (ಸೂಚನೆ: ಸಿಹಿ ಅಡುಗೆಗೆ ಉಪ್ಪು ಬಳಸುವುದು ಅವರವರ ಇಚ್ಛೆಗೆ ಬಿಟ್ಟಿದ್ದು, ಬಳಸಿದರೆ ಸ್ವಾದ ಇನ್ನಷ್ಟು ಹೆಚ್ಚುತ್ತದೆ)

    ಮಾಡುವ ವಿಧಾನ
    * ಒಂದು ಅಗಲವಾದ ಪಾತ್ರೆಗೆ ಗೋಧಿಹಿಟ್ಟು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು(ಕಣಕ) ಮೃದುವಾಗಿರಬೇಕು, ಹೆಚ್ಚು ಗಟ್ಟಿ ಇದ್ರೆ ಹೋಳಿಗೆ ಲಟ್ಟಿಸುವುದು ಕಷ್ಟ
    * ಆ ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ತಟ್ಟೆ ಮುಚ್ಚಿ ಇಡಿ.
    * ಒಂದು ಪ್ಯಾನ್‍ಗೆ ಬಿಳಿ ಎಳ್ಳು ಹಾಕಿ ಕೆಂಪಾಗುವರೆಗೆ ಹುರಿಯಿರಿ. ನಂತರ ಅದನ್ನು ಮಿಕ್ಸಿ ಜಾರ್‍ಗೆ ಹಾಕಿ ಬೆಲ್ಲ ಹಾಕಿ ರುಬ್ಬಿಕೊಳ್ಳಿ. (ಸೂಚನೆ: ರುಬ್ಬಲು ನೀರು ಬಳಸಬೇಡಿ)
    * ರುಬ್ಬಿದ ಮಿಶ್ರಣವನ್ನು ಒಂದು ಬೌಲ್‍ಗೆ ಹಾಕಿಕೊಂಡು ಅದಕ್ಕೆ ಏಲಕಿ ಪುಡಿ, ಸ್ವಲ್ಪ ಹಾಲು ಹಾಕಿಕೊಂಡು ಕಲಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ನಿಂಬೆಹಣ್ಣಿನ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಎಳ್ಳು ಹೋಳಿಗೆ ಸವಿಯಲು ಸಿದ್ಧವಾಗುತ್ತದೆ.