Tag: publictv
-

ಪಬ್ಲಿಕ್ ಟಿವಿ `ವಿದ್ಯಾಮಂದಿರ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್, ಟ್ಯಾಬ್ ಗೆದ್ದ ಅದೃಷ್ಟವಂತರು ಇವರೇ…
ಬೆಂಗಳೂರು: `ಪಬ್ಲಿಕ್ ಟಿವಿ’ ಆಯೋಜಿಸಿರುವ 4ನೇ ಆವೃತ್ತಿಯ `ವಿದ್ಯಾಮಂದಿರ’ (Public TV Vidhya Mandira) ಶೈಕ್ಷಣಿಕ ಮೇಳಕ್ಕೆ ಇಂದು ಬೆಳಗ್ಗೆ ಅದ್ಧೂರಿ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸುತ್ತಿದ್ದು ಮುಂದಿನ ಭವಿಷ್ಯಕ್ಕಾಗಿ ತಮ್ಮ ನೆಚ್ಚಿನ ಕಾಲೇಜುಗಳ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದಾರೆ. ಇದರೊಂದಿಗೆ ಬಂಪರ್ ಗಿಫ್ಟ್‌ಗಳನ್ನೂ ಬಾಚಿಕೊಂಡಿದ್ದಾರೆ.

ಹೌದು. ಜೀನಿ ಸ್ಲಿಮ್ ಪ್ರಾಯೋಜಕತ್ವದಲ್ಲಿ ಲಕ್ಕಿಡಿಪ್ ವಿನ್ನರ್‌ಗಳಿಗೆ ಪ್ರತಿ ಒಂದು ಗಂಟೆಗೆ ಒಂದು ಟ್ಯಾಬ್ ಮತ್ತು ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯದ ಕಡೆಯಿಂದ ಲ್ಯಾಪ್‌ಟಾಪ್‌ಗಳನ್ನ ಬಹುಮಾನಗಳನ್ನಾಗಿ ಕೊಡಲಾಗುತ್ತಿದೆ. ಮೊದಲ ದಿನ ಸಪ್ತಗಿರಿ ಎನ್‌ಪಿಎಸ್ ವಿವಿಯು ಓರ್ವ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ಬಹುಮಾನ ನೀಡಿದ್ರೆ, ಜೀನಿ ಸ್ಲಿಮ್ ಲಕ್ಕಿಡಿಪ್‌ನಲ್ಲಿ ಗೆದ್ದ ಇಬ್ಬರು ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನ ಬಹುಮಾನವಾಗಿ ನೀಡಿತು. ಶಿವಮೊಗ್ಗದ ವಿದ್ಯಾರ್ಥಿನಿ ಶ್ವೇತಾ ಲ್ಯಾಪ್‌ಟಾಪ್ ಬಹುಮಾನ ಬಾಚಿಕೊಂಡರೆ, ಸಂಭ್ರಮ, ಆದಿತ್ಯ ಶಂಕರ್ ಲಕ್ಕಿಡಿಪ್‌ನಲ್ಲಿ ಟ್ಯಾಬ್ ಪಡೆದ ಅದೃಷ್ಟವಂತರಾದ್ರು. ಬಹುಮಾನ ಪಡೆದು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ರು.

ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ‘ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಬೆಳಗ್ಗೆ ಚಾಲನೆ ಕೊಟ್ಟರು. ಟೇಪ್ ಕತ್ತರಿಸುವ ಮೂಲಕ ಮೇಳವನ್ನು ಉದ್ಘಾಟಿಸಲಾಯಿತು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್.ಅಶ್ವಥ್ ನಾರಾಯಣ್ (Ashwath Narayan) ಅವರು ಸಾಥ್ ನೀಡಿದರು. ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಿಸಿ ಡಾ. ವಿದ್ಯಾಶಂಕರ್ ಶೆಟ್ಟಿ, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಮುಖ್ಯಸ್ಥರಾದ ರಶ್ಮಿ ರವಿಕಿರಣ್ ಉಪಸ್ಥಿತರಿದ್ದರು.
45ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿ
45ಕ್ಕೂ ಹೆಚ್ಚು ಪ್ರಮುಖ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಪಾಲ್ಗೊಂಡಿವೆ. ಉದ್ಘಾಟನೆ ಬಳಿಕ ಎಜುಕೇಷನ್ ಎಕ್ಸ್‌ಫೋದಲ್ಲಿ ಪಾಲ್ಗೊಂಡಿರುವ ವಿವಿಧ ಸ್ಟಾಲ್‌ಗಳಿಗೆ ಅತಿಥಿಗಳು ಭೇಟಿ ನೀಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಾಯಿತು.ಇನ್ನೂ ಪಬ್ಲಿಕ್ ಟಿವಿಯ ಮೆಗಾ ಎಜುಕೇಷನ್ ಎಕ್ಸ್‌ಪೋಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಮೇಳಕ್ಕೆ ಆಗಮಿಸುತ್ತಿದ್ದಾರೆ. ಪೋಷಕರ ಜೊತೆ ಮೇಳದಲ್ಲಿ ಪಾಲ್ಗೊಂಡು ಪಿಜಿ ಕೋರ್ಸ್‌ಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
-

ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ
– ಟೇಪ್ ಕಟ್ ಮಾಡಿ ಮೇಳ ಉದ್ಘಾಟನೆ; ಹೆಚ್.ಆರ್.ರಂಗನಾಥ್, ಅಶ್ವಥ್ ನಾರಾಯಣ್ ಸಾಥ್
– ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳ ದಂಡುಬೆಂಗಳೂರು: `ಪಬ್ಲಿಕ್ ಟಿವಿ’ ಆಯೋಜಿಸಿರುವ 4ನೇ ಆವೃತ್ತಿಯ `ವಿದ್ಯಾಮಂದಿರ’ (Public TV Vidhya Mandira) ಶೈಕ್ಷಣಿಕ ಮೇಳಕ್ಕೆ ಶನಿವಾರ ಅದ್ದೂರಿ ಚಾಲನೆ ಸಿಕ್ಕಿತು.

ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ‘ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಚಾಲನೆ ಕೊಟ್ಟರು. ಟೇಪ್ ಕತ್ತರಿಸುವ ಮೂಲಕ ಮೇಳವನ್ನು ಉದ್ಘಾಟಿಸಲಾಯಿತು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್.ಅಶ್ವಥ್ ನಾರಾಯಣ್ (Ashwath Narayan) ಅವರು ಸಾಥ್ ನೀಡಿದರು. ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಿಸಿ ಡಾ. ವಿದ್ಯಾಶಂಕರ್ ಶೆಟ್ಟಿ, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಮುಖ್ಯಸ್ಥರಾದ ರಶ್ಮಿ ರವಿಕಿರಣ್ ಉಪಸ್ಥಿತರಿದ್ದರು. ಇದನ್ನೂ ಓದಿ: `ಪಬ್ಲಿಕ್ ಟಿವಿ’ ವಿದ್ಯಾಮಂದಿರಕ್ಕೆ ಇಂದು ಚಾಲನೆ
45 ಕ್ಕೂ ಹೆಚ್ಚು ಪ್ರಮುಖ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಪಾಲ್ಗೊಂಡಿವೆ. ಉದ್ಘಾಟನೆ ಬಳಿಕ ಎಜುಕೇಷನ್ ಎಕ್ಸ್‌ಫೋದಲ್ಲಿ ಪಾಲ್ಗೊಂಡಿರುವ ವಿವಿಧ ಸ್ಟಾಲ್‌ಗಳಿಗೆ ಅತಿಥಿಗಳು ಭೇಟಿ ನೀಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಪಬ್ಲಿಕ್ ಟಿವಿಯ ಮೆಗಾ ಎಜುಕೇಷನ್ ಎಕ್ಸ್‌ಪೋಗೆ ಉದ್ಘಾಟನೆ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಮೇಳಕ್ಕೆ ಆಗಮಿಸುತ್ತಿದ್ದಾರೆ. ಪೋಷಕರ ಜೊತೆ ಮೇಳದಲ್ಲಿ ಪಾಲ್ಗೊಂಡು ಪಿಜಿ ಕೋರ್ಸ್‌ಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ವಿದ್ಯಾಮಂದಿರ ಶೈಕ್ಷಣಿಕ ಮೇಳವು ಇಂದು ಮತ್ತು ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಲಕ್ಕಿ ಡಿಪ್ ಮೂಲಕ ಲ್ಯಾಪ್‌ಟಾಪ್ ಮತ್ತು ಟ್ಯಾಬ್ ಗೆಲ್ಲುವ ಸುವರ್ಣಾವಕಾಶ ಕೂಡ ಇದೆ. ಪ್ರತಿ ಗಂಟೆಗೆ ಲಕ್ಕಿ ಡಿಪ್ ಮೂಲಕ ಟ್ಯಾಬ್ ಗೆಲ್ಲಬಹುದು. ಬೆಳಗ್ಗೆ 9 ರಿಂದ 11 ಗಂಟೆಯೊಳಗೆ ರಿಜಿಸ್ಟರ್‌ಗೆ ಅವಕಾಶ ಇದೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ವಿದ್ಯಾಮಂದಿರಕ್ಕೆ ಬನ್ನಿ – ಪ್ರತಿ ಒಂದು ಗಂಟೆಗೆ ಟ್ಯಾಬ್ ಗೆಲ್ಲಿ
-

ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ ಬಾಯಿ ಚಪ್ಪರಿಸಿ
ರುಚಿಯಾದ ಆಹಾರ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಒಂದೊಂದು ಭಾಗಗಲ್ಲಿ ವಿಶೇಷ ಆಹಾರದ ರುಚಿಯನ್ನು ಒಮ್ಮೆಯಾದ್ರೂ ಸವಿಯಬೇಕು ಅಂತ ಪ್ರತಿಯೊಬ್ಬರು ಅಂದುಕೊಳ್ತಾರೆ. ಪ್ರತಿ ದಿನ ಚಿಕನ್, ಮಟನ್, ಫಿಶ್ ತಿಂದು ಬೇಜಾರಾಗಿದ್ರೆ ಕೊಡಗಿನ ಶೈಲಿಯ ಖಾರ ಖಾರವಾದ ಹಂದಿಕರಿ ಮಾಡಿ ಸವಿಯಿರಿ. ಅದು ಹೇಗಂತೀರಾ ಮುಂದೆ ಓದಿ..

ಬೇಕಾಗುವ ಸಾಮಗ್ರಿಗಳು:
* ಪೋರ್ಕ್ (ಹಂದಿ ಮಾಂಸ) 1 ಕೆಜಿ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
* ಅರಿಶಿಣ ಪುಡಿ- 1 ಟೀ ಸ್ಪೂನ್
* ಖಾರದ ಪುಡಿ-2 ಟೀ ಸ್ಪೂನ್
* ಕೊತ್ತಂಬರಿ ಪುಡಿ 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಕರಿಬೇವು ಸ್ವಲ್ಪ
* ಕೊತ್ತಂಬರಿ ಸೊಪ್ಪು
* ಬೆಳ್ಳುಳ್ಳಿ-2
* ಜೀರಿಗೆ ಪುಡಿ – 1ಟೀ ಸ್ಪೂನ್
* ಮೆಂತೆ ಪುಡಿ- 1ಟೀ ಸ್ಪೂನ್
* ಈರುಳ್ಳಿ – 2
* ಶುಂಠಿ
* ಹಸಿ ಮೆಣಸು 1ರಿಂದ2
* ಕಾಳು ಮೆಣಸಿನ ಪುಡಿ 1 ಟೀ ಸ್ಪೂನ್
* ನಿಂಬೆ ರಸ- 2 ಟೀ ಸ್ಪೂನ್
* ಅಡುಗೆ ಎಣ್ಣೆ- 1 ಕಪ್
ಮಾಡುವ ವಿಧಾನ:
* ಕೊತ್ತಂಬರಿ ಪುಡಿ ಹಾಗೂ ಖಾರದ ಪುಡಿ ಸ್ವಲ್ಪ ಕಾಫಿ ಹುಡಿ ಬಣ್ಣಕ್ಕೆ ಬರುವಷ್ಟು ಹೊತ್ತು ಕಡಿಮೆ ಉರಿಯಲ್ಲಿ ಹುರಿಯಿರಿ.
* ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕರಿಬೇವನ್ನು ಹಾಕಬೇಕು. ನಂತರ ಇದೇ ಪಾತ್ರೆಗೆ ಹಂದಿ ಮಾಂಸವನ್ನು ತೊಳೆದು ಹಾಕಿ ಅರಿಶಿಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಬೇಕು.
* ಜೀರಿಗೆ ಪುಡಿ, ಮೆಂತೆ ಪುಡಿ, ಈರುಳ್ಳಿ, ಶುಂಠಿ, ಕಾಳು ಮೆಣಸಿನ ಪುಡಿ, ಹಸಿ ಮೆಣಸು, ನಿಂಬೆರಸ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ ಸ್ಪಲ್ಪ ಹೊತ್ತು ಬೇಯಿಸಬೇಕು.
* ನಂತರ ಹುರಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ 45-50 ನಿಮಿಷ ಬೇಯಿಸಬೇಕು.
* ನಂತರ 1 ಚಮಚ ನಿಂಬೆರಸ ಸೇರಿಸಿ, ಕೊತ್ತಂಬರಿಯನ್ನು ಹಾಕಿದರೆ ಹಂದಿ ಕರಿ ಕಡಬು ಅಥವಾ ಇಡ್ಲಿ ಜೊತೆ ಸವಿಯಲು ಸಿದ್ಧವಾಗುತ್ತದೆ. -

ಪಬ್ಲಿಕ್ ಟಿವಿ ವಿದ್ಯಾಪೀಠ: ಇಂದು ಕೊನೆಯ ದಿನ ತಪ್ಪದೇ ಬನ್ನಿ, ಮಿಸ್ ಮಾಡಿದ್ರೆ ಮುಂದಿನ ವರ್ಷ ಕಾಯಬೇಕು
ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ವಿದ್ಯಾಪೀಠ (Vidyapeeta) 8ನೇ ಆವೃತ್ತಿಯ ಎಜುಕೇಶನ್ ಎಕ್ಸ್‌ಪೋ (Education Expo) ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಮೊದಲ ದಿನವೇ ಸುಮಾರು 4.5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಉಚಿತ ಪ್ರವೇಶ ಇರುವ ಕಾರಣ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಎಕ್ಸ್‌ಪೋಗೆ ಆಗಮಿಸಿ ಕಾಲೇಜುಗಳ ಮಾಹಿತಿಯನ್ನು ಪಡೆದುಕೊಂಡರು.
ಮೊದಲ ದಿನದ ಎಕ್ಸ್‌ಪೋನಲ್ಲಿ ಸಿಇಟಿ, ಕಾಮೆಡ್-ಕೆ ಕುರಿತು ಉಪನ್ಯಾಸ ನಡೆಯಿತು. ಸಿಇಟಿ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಹೆಚ್ ಪ್ರಸನ್ನ ಮತ್ತು ಕಾಮೆಡ್-ಕೆ ಪ್ರಕ್ರಿಯೆ ಬಗ್ಗೆ ಡಾ.ಕುಮಾರ್ ಅವರು ಮಾಹಿತಿ ನೀಡಿದರು. ಡಾ.ಯುವರಾಜು ಬಿ.ಎನ್ ಸೈಬರ್ ಸೆಕ್ಯೂರಿಟಿ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ `ವಿದ್ಯಾಪೀಠ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್, ಬೈಸಿಕಲ್ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಇವರೇ..
ವಿದ್ಯಾಪೀಠ ಕಾರ್ಯಕ್ರಮದಲ್ಲಿ ಕಾಲೇಜುಗಳ ಮಾಹಿತಿ ಜೊತೆ ಬಂಪರ್ ಗಿಫ್ಟ್ ಕೂಡಾ ವಿದ್ಯಾರ್ಥಿಗಳ ಪಾಲಾಯಿತು. ಜೀನಿ ಪ್ರಾಯೋಜಕತ್ವದಲ್ಲಿ ಪ್ರತಿ ಒಂದು ಗಂಟೆಗೆ ಒಂದು ಬೈಸಿಕಲ್ ಮತ್ತು ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯದ ಕಡೆಯಿಂದ ಎರಡು ದಿನಗಳಲ್ಲಿ 3 ಲ್ಯಾಪ್‌ಟಾಪ್ ಬಂಪರ್ ಗಿಫ್ಟ್ ಕೊಡಲಾಗುತ್ತಿದೆ. ಇಂದೂ ಸಹ ವಿದ್ಯಾರ್ಥಿಗಳು ಮಾಹಿತಿ ಪಡೆಯುವ ಜೊತೆಗೆ ಬಂಪರ್ ಬಹುಮಾನ ಗೆಲ್ಲುವ ಸದವಕಾಶವನ್ನು ಶೈಕ್ಷಣಿಕ ಮೇಳ ಕಲ್ಪಿಸಿಕೊಟ್ಟಿದೆ.
ಪ್ಲಾಟಿನಂ ಆಯೋಜಕರು:
ಗಾರ್ಡನ್ ಸಿಟಿ ಯೂನಿರ್ವಸಿಟಿ, ಸಿಎಂಆರ್ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.ಗೋಲ್ಡ್ ಪ್ರಾಯೋಜಕರು:
ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಂಜಿನಿಯರಿಂಗ್, ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್ ಎಜುಕೇಷನಲ್ ಇನ್‌ಸ್ಟಿಟ್ಯೂಟ್, ಆರ್‌ಆರ್ ಇನ್‌ಸ್ಟಿಟ್ಯೂಷನ್ಸ್, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್, ಎಎಂಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ: ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
ಕ್ರಿಯೇಟಿವ್ ಸ್ಟಾಲ್ ಪಾರ್ಟ್ನರ್ಸ್:
ರಾಮಯ್ಯ ಇನ್‌ಸ್ಟಿಟಯೂಟ್ ಆಫ್ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್, ಪಾರುಲ್ ಯೂನಿವರ್ಸಿಟಿ, ಪ್ಲಾನ್ ಎಡು, ಫ್ಯೂಚರ್ ಮೆಡಿಕೊ.ಸಿಲ್ವರ್ ಪ್ರಯೋಜಕರು:
ಚಾಣಕ್ಯ ಯೂನಿವರ್ಸಿಟಿ, ಪಿಇಎಸ್ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್, ಜಿಎಂ ಯೂನಿವರ್ಸಿಟಿ, ಎಐಎಂಎಸ್ ಇನ್‌ಸ್ಟಿಟ್ಯೂಟಸ್, ಎಬಿಬಿಎಸ್ ಬೆಂಗಳೂರು ಬಿ ಸ್ಕೂಲ್, ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಎಸ್‌ಇಎ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್.ಪಾನೀಯ ಪ್ರಾಯೋಜಕರು
ಸ್ಪ್ರಿಂಗ್ಸ್ಬ್ಯಾಂಕಿಂಗ್ ಪಾರ್ಟ್ನರ್:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಬೆವರೇಜ್ ಪಾರ್ಟ್ನರ್
ಬಾಯರ್ಸ್ ಕಾಫಿಗಿಫ್ಟ್ ಸ್ಪಾನ್ಸರ್
ಜೀನಿ ಸ್ಲಿಮ್, ವೇಯ್ಟ್ ಲಾಸ್ & ಎನರ್ಜಿ ಬೂಸ್ಟರ್. -

ಚುನಾವಣಾ ರಾಜಕೀಯದಿಂದ ಸದ್ಯಕ್ಕೆ ನಿವೃತ್ತಿ ಇಲ್ಲ: ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿಎಂ
– ‘ಪಬ್ಲಿಕ್ ಟಿವಿ’ ವಾರ್ಷಿಕೋತ್ಸವ ಸಂದರ್ಶನದಲ್ಲಿ ಹೆಚ್.ಆರ್.ರಂಗನಾಥ್ ಜೊತೆ ಸಿಎಂ ಸಿದ್ದರಾಮಯ್ಯ ಮಾತು
– ದೇವರಾಜ ಅರಸು ಅವಧಿ ರೆಕಾರ್ಡ್ ಬ್ರೇಕಿಂಗ್ ವಿಶ್ವಾಸ ವ್ಯಕ್ತಪಡಿಸಿದ ಸಿಎಂ
– ಪಬ್ಲಿಕ್ ಟಿವಿ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ ಸಿಎಂಬೆಂಗಳೂರು: ಕನ್ನಡದ ಜನಪ್ರಿಯ ಸುದ್ದಿವಾಹಿನಿ ‘ಪಬ್ಲಿಕ್ ಟಿವಿ’ಯ 13ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಂದರ್ಶನ ನಡೆಸಿದರು. ಈ ವೇಳೆ, ಸಿದ್ದರಾಮಯ್ಯ ಅವರು ಹಲವು ಮಹತ್ವಪೂರ್ಣ ರಾಜಕೀಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚುನಾವಣಾ ರಾಜಕೀಯ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಆರ್.ರಂಗನಾಥ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಚುನಾವಣೆ ರಾಜಕೀಯ ಸ್ವಲ್ಪಮಟ್ಟಿಗೆ ಸಾಕು ಎನಿಸುತ್ತಿದೆ. ಆದರೆ, ಜನರ ಪ್ರೀತಿ-ವಿಶ್ವಾಸ ಜಾಸ್ತಿ ಇರುವುದರಿಂದ ಮುಂದುವರಿಯಬೇಕೋ ಅಥವಾ ಬೇಡವೋ ಎಂಬುದನ್ನು ಜನರ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇನೆ. ಮುಂದೆ ಚುನಾವಣೆಯಲ್ಲಿ ನಿಲ್ಲಬಾರದು ಅಂತ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಆದರೆ, ಜನರು, ಹಿತೈಶಿಗಳು ಮತ್ತು ಸ್ನೇಹಿತರು ರಾಜಕೀಯದಲ್ಲಿ ಮುಂದುವರಿಯಬೇಕು ಅಂತಾ ಒತ್ತಡ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಕೂಡ ಜನರು ನಮಗೆ ಅಧಿಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನರ ನಂಬಿಕೆಯನ್ನು ಉಳಿಸಿದರೆ ಚಾನೆಲ್ ಗಟ್ಟಿಯಾಗಿ ನಿಲ್ಲುತ್ತದೆ: ಡಿಕೆ ಶಿವಕುಮಾರ್
ಹೆಚ್.ಆರ್.ರಂಗನಾಥ್: ಹಿತೈಷಿಗಳು ರಾಜಕೀಯದಲ್ಲಿ ಮುಂದುವರಿಯಬೇಕು ಎನ್ನುತ್ತಾರೆ ಸರಿ.. ಅಧಿಕಾರದಲ್ಲಿ ಮುಂದುವರಿಯುವ ವಿಚಾರದಲ್ಲಿ ಬಗ್ಗೆ ಏನು ಹೇಳುತ್ತೀರಿ?
ಸಿದ್ದರಾಮಯ್ಯ: ಜನರ ಆಶೀರ್ವಾದ ಇಲ್ಲದಿದ್ದರೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನರ ಆಶೀರ್ವಾದ ಬೇಕಾಗುತ್ತದೆ. ಆಮೇಲೆ ಮುಖ್ಯಮಂತ್ರಿ, ಮಂತ್ರಿಯಾಗುವುದಕ್ಕೆ ಹೈಕಮಾಂಡ್ ಮತ್ತು ಶಾಸಕರ ಆಶೀರ್ವಾದ ಬೇಕಾಗುತ್ತದೆ. 2ನೇ ಅವಧಿಗೂ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಂತಸವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಹೆಚ್.ಆರ್.ರಂಗನಾಥ್: ನಿಮಗೆ ದಾಖಲೆಗಳಲ್ಲಿ ನಂಬಿಕೆ ಇದೆಯಾ?
ಸಿದ್ದರಾಮಯ್ಯ: ನಾನು ದಾಖಲೆಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಮಾಡಿದ್ದೀನಿ. ದಾಖಲೆ ಮಾಡುವ ನಂಬಿಕೆ, ವಿಶ್ವಾಸ ನನಗೆ ಇದೆ. ಮುಡಾ ಕೇಸ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು. ಬೇಕು ಅಂತಲೇ ರಾಜಕೀಯವಾಗಿ ಮಾಡಿದ್ರು. ಯಾವಾಗಲೂ ಸತ್ಯಕ್ಕೆ ಜಯ ಸಿಗುತ್ತೆ.ಹೆಚ್.ಆರ್.ರಂಗನಾಥ್: ಮಂಡಿ ನೋವು ಹೇಗಿದೆ ಈಗ?
ಸಿದ್ದರಾಮಯ್ಯ: ಮಂಡಿ ನೋವು ಸ್ವಲ್ಪ ಕಡಿಮೆಯಾಗುತ್ತಿದೆ. ಒತ್ತಡ ಬಿದ್ದಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸ್ವಲ್ಪ ತೂಕ ಜಾಸ್ತಿಯೂ ಆಗಿದೆ ಎಂದು ತಮ್ಮ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ. ಬಜೆಟ್‌ಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಸ್ವಲ್ಪ ಮಂಡಿ ನೋವು ಇರುವುದರಿಂದ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೇ ಸಭೆಗಳನ್ನು ಮಾಡ್ತಿದ್ದೇವೆ. ಈ ಬಾರಿ ಮಂಡಿಸುವುದು 16ನೇ ಬಜೆಟ್ ಎಂದು ತಿಳಿಸಿದ್ದಾರೆ.ಪಬ್ಲಿಕ್ ಟಿವಿ ವಾರ್ಷಿಕೋತ್ಸವಕ್ಕೆ ಸಿಎಂ ಶುಭಹಾರೈಕೆ
2012ರಲ್ಲಿ ನೀವು ಪಬ್ಲಿಕ್ ಟಿವಿ ಪ್ರಾರಂಭ ಮಾಡಿದ್ರಿ. ಅಲ್ಲಿಂದ ಇಲ್ಲಿವರೆಗೆ 13 ವರ್ಷಗಳ ಪ್ರಯಾಣ ಮಾಡಿದ್ದೀರಿ. ಈ ಅವಧಿಯಲ್ಲಿ ಪಬ್ಲಿಕ್ ಟಿವಿ ಜನರ ಪ್ರೀತಿ, ಅಭಿಮಾನ ಗಳಿಸಿದೆ. ಕಾರಣ, ಇದರ ನೇತೃತ್ವ ವಹಿಸಿರುವುದು ನೀವು (ಹೆಚ್.ಆರ್.ರಂಗನಾಥ್). ಪ್ರತಿ ದಿನ ರಾತ್ರಿ 9 ಗಂಟೆಗೆ ಬಿಗ್‌ಬುಲೆಟಿನ್‌ನಲ್ಲಿ ಬರುತ್ತೀರಿ. ಆಗ ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತೀರಿ. ಅಭಿಪ್ರಾಯವನ್ನು ಖಡಾಖಂಡಿತವಾಗಿ ತಿಳಿಸುವ ಪ್ರಯತ್ನ ಮಾಡುತ್ತೀರಿ. ಯಾವುದೇ ದ್ವೇಷ-ಅಸೂಯೆ ಇಲ್ಲದೇ ನಿಮ್ಮ ಅಭಿಪ್ರಾಯವನ್ನು ನೇರವಾಗಿ ಜನತೆಗೆ ತಿಳಿಸುವಂತಹದ್ದು ಸ್ವಾಗತಾರ್ಹ ವಿಚಾರ. 13ರ ಸಂಭ್ರಮ. 14ನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ನೀವು ಮುಂದೆಯೂ ಕೂಡ ಜನರ ಸಮಸ್ಯೆಗಳನ್ನು ಪರಿಹರಿಸುವಂತಹ ಪ್ರಯತ್ನ ಮಾಡುವುದು ಅತ್ಯಂತ ಅವಶ್ಯಕ. ಪ್ರಸ್ತುತ ಸಮಾಜದಲ್ಲಿರುವ ವೈರುಧ್ಯತೆ ಮತ್ತು ಅಸಮಾನತೆ ತೊಡೆದುಹಾಕುವುದು ಅತ್ಯಂತ ಅವಶ್ಯ. ಈ ವಿಚಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರೇ ಬಹಳ ಹಿಂದೆಯೇ ಹೇಳಿದ್ದಾರೆ. ನಿಮ್ಮ ಮಾಧ್ಯಮದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೀರಿ ಎಂಬ ವಿಶ್ವಾಸ, ನಂಬಿಕೆ ಇದೆ. ಅಸಮಾನತೆ ಹೋಗಲಾಡಿಸಲು, ಧ್ವನಿ ಇಲ್ಲದವರಿಗೆ ದನಿಯಾಗುವ ಕೆಲಸ ಮಾಡುತ್ತೀರೆಂಬ ಭರವಸೆ ಇದೆ. ನಿಮ್ಮ ಚಾನಲ್, ನಿಮಗೆ ಮತ್ತು ನಿಮ್ಮ ಸಿಬ್ಬಂದಿ ವರ್ಗಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.




