Tag: publicity

  • ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಬೆಂಗಳೂರು: ಮುಸ್ಲಿಂ ಯುವತಿ ಅವಾಚ್ಯ ಪದಗಳಿಂದ ಬೈದಿದ್ದ ಯುವಕರು ನಾವು ಪ್ರಚಾರದ ಹುಚ್ಚಿಗೆ ವಿಡಿಯೋ ಮಾಡಿದ್ದೆವು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

    ಹಿಂದೂ ಯುವಕನ ಬೈಕ್ ನಲ್ಲಿ ಹೋಗುತ್ತಿದ್ದಳು ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಸೊಹೇಲ್ ಮತ್ತು ನಯಾಜ್ ಅವರನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದರು.

    ಕಳೆದ ಶುಕ್ರವಾರ ನಗರದ ಡೈರಿ ಸರ್ಕಲ್ ನಲ್ಲಿ ಕೆಲಸ ಮುಗಿಸಿ ಹಿಂದೂ ಯುವಕನ ಜೊತೆಗೆ ಬೈಕ್ ನಲ್ಲಿ ಬರುತ್ತಿದ್ದಳು ಎಂಬ ಕಾರಣಕ್ಕೆ, ಬೈಕ್ ತಡೆದ ಇಬ್ಬರು ಇದು ಮುಸ್ಲಿಂ ಸಂಪ್ರದಾಯಕ್ಕೆ ಮಾಡುವ ಅವಮಾನ ಎಂದು ಗಲಾಟೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು. ಇದನ್ನೂ ಓದಿ:  ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯ ನಿರೀಕ್ಷಕ

    ಹಲ್ಲೆಯ ವೀಡಿಯೋವನ್ನು ಸೊಹೇಲ್ ತನ್ನ ಫೇಸ್‍ಬುಕ್ ಅಕೌಂಟ್ ನಲ್ಲಿ ಶೇರ್ ಮಾಡ್ಕೊಂಡಿದ್ದರು. ಈಗ ಆ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು, ಭಯಗೊಂಡ ಸೊಹೇಲ್ ತಕ್ಷಣ ಅದನ್ನು ಡಿಲೀಟ್ ಕೂಡ ಮಾಡಿದ್ದರು. ಅಷ್ಟರೊಳಗೆ ವಿಡಿಯೋ ವೈರಲ್ ಆಗಿದನ್ನು ಗಮನಿಸಿದ ಸುದ್ದಗುಂಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.

    ವಿಚಾರಣೆ ವೇಳೆ ಇಬ್ಬರು ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಚಾರದ ಹುಚ್ಚಿಗೆ ಬಿದ್ದು ಈ ರೀತಿ ಯಡವಟ್ಟು ಮಾಡಿಕೊಂಡ್ವಿ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಧರ್ಮದ ವಿಚಾರವನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ರೆ ಹೆಚ್ಚು ಪ್ರಚಾರ ಸಿಗುತ್ತೆ, ಅದರಿಂದ ಬೇಗ ಫೇಮಸ್ ಆಗಬಹುದು ಎಂದು ಪ್ಲಾನ್ ಮಾಡಿ ಕೃತ್ಯವೆಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:  ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ

    ಮುಸ್ಲಿಂ ಯುವಕರಿಂದ ಹಲ್ಲೆಗೊಳಾಗದ ಮಹಿಳೆ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಅದೇ ದಿನ ಬೆಸ್ಟ್ ಎಂಪ್ಲಾಯ್ ಅವಾರ್ಡ್ ಆಗಿ ಲ್ಯಾಪ್ ಟಾಪ್ ಬಹುಮಾನ ತೆಗೆದುಕೊಂಡಿದ್ದರು. ಇದೇ ವಿಚಾರಕ್ಕೆ ಅಂದು ಕೆಲಸ ಮುಗಿಸಿ ಮನೆಗೆ ಹೊರಡೋದು ತಡವಾಗಿದ್ದರಿಂದ ಸಹೋದ್ಯೋಗಿ ಮಹೇಶ್ ಅವರ ಜೊತೆಗೆ ಬಂದಿದ್ದರು. ತಾನು ಸಹೋದ್ಯೋಗಿ ಜೊತೆ ಬರುತ್ತಿರುವ ವಿಚಾರವನ್ನು ಪತಿಗೆ ತಿಳಿಸಿದ್ದರು.

  • ಅಕ್ರಮ ಗಾಂಜಾ ಮಾರಾಟ – ಮಹಿಳೆ ಸೇರಿ ಇಬ್ಬರ ಬಂಧನ

    ಅಕ್ರಮ ಗಾಂಜಾ ಮಾರಾಟ – ಮಹಿಳೆ ಸೇರಿ ಇಬ್ಬರ ಬಂಧನ

    ಹುಬ್ಬಳ್ಳಿ: ರೈಲ್ವೆ ನಿಲ್ದಾಣದ ಪಾರ್ಸಲ್ ಕಚೇರಿಯ ಪಕ್ಕದಲ್ಲಿರುವ ಪಾರ್ಕ್ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಇಬ್ಬರನ್ನ ಬಂಧಿಸುವಲ್ಲಿ ಹುಬ್ಬಳ್ಳಿಯ ರೈಲ್ವೆ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗ ವಿದ್ಯಾನಗರದ ನಿವಾಸಿ ಸಲ್ಮಾನ್ ಅಕ್ಮಲ್ ಹಾಗೂ ಹುಬ್ಬಳ್ಳಿ ಎಂ.ವಿ ಗಲ್ಲಿಯ ನಿವಾಸಿ ಸಾವಿತ್ರಿಬಾಯಿ ದಿಲೀಪ್ ಹಬೀಬ ಬಂಧಿತ ಆರೋಪಿಗಳಾಗಿದ್ದಾರೆ. ರೈಲ್ವೆ ಪ್ರಯಾಣಿಕರಿಗೆ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ

    ಬಂಧಿತ ಆರೋಪಿಗಳಿಂದ 8 ಸಾವಿರ ರೂಪಾಯಿ ಮೌಲ್ಯದ 800 ಗ್ರಾಂ ಗಾಂಜಾ ಹಾಗೂ 800 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾ ಸಂದರ್ಭದಲ್ಲಿ ನೀಡಿರುವ ಅನ್ನದ ಋಣ ಮರೆಯಬೇಡಿ: ದರ್ಶನ್

    ಕೊರೊನಾ ಸಂದರ್ಭದಲ್ಲಿ ನೀಡಿರುವ ಅನ್ನದ ಋಣ ಮರೆಯಬೇಡಿ: ದರ್ಶನ್

    – ಜಾತಿ-ಬೇಧವಿಲ್ಲದೆ ಮುನಿರತ್ನ ಹಸಿವು ನೀಗಿಸಿದ್ರು

    ಬೆಂಗಳೂರು: ಪ್ರಪಂಚಕ್ಕೇ ಕೊರೊನಾ ಆವರಿಸಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಮಯದಲ್ಲಿ ಕ್ಷೇತ್ರದ ಜನತೆಗೆ ಆಹಾರ ನೀಡುವ ಮೂಲಕ ಮುನಿರತ್ನ ಅವರು ನಿಮ್ಮ ಪರವಾಗಿ ನಿಂತಿದ್ದಾರೆ. ಅವರಿಗೆ ಮತ ನೀಡಿ ಎಂದು ನಟ ದರ್ಶನ್ ಮನವಿ ಮಾಡಿಕೊಂಡರು.

    ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮುನಿರತ್ನ ಅವರು ಹಲವು ವರ್ಷಗಳಿಂದ ನನಗೆ ಗೊತ್ತು. ವ್ಯಕ್ತಿಯಾಗಿ ಅವರನ್ನು ತುಂಬಾ ಇಷ್ಟ ಪಡುತ್ತೇನೆ. ಸಿನಿಮಾ ನಿರ್ಮಾಪಕರನ್ನಾಗಿ ಹಾಗೂ ಶಾಸಕರನ್ನಾಗಿಯೂ ಅವರನ್ನು ನೋಡಿದ್ದೇನೆ. ವ್ಯಕ್ತಿಯಲ್ಲಿ ಒಳ್ಳೆಯ ಗುಣ ಇದೆ ಎಂದಾದರೆ ನಾನು ಅವರ ಬಳಿ ಹೋಗುತ್ತೇನೆ. ಅದೇ ರೀತಿ ಅವರ ಕುರಿತು ಬೆಂಬಲಕ್ಕೂ ಹೋಗುತ್ತೇನೆ ಎಂದರು.

    ಇಡೀ ಪ್ರಪಂಚಕ್ಕೆ ಕೊರೊನಾ ಆವರಿಸಿತು, ಎಲ್ಲರೂ ಮನೆ ಸೇರಿಕೊಂಡೆವು, ಊಟಕ್ಕೆ ಗತಿಯಿಲ್ಲದಂತಾಯಿತು. ಮನೆಯ ಖಜಾನೆಯಲ್ಲಿ ಹಣವಿತ್ತು. ಆದರೆ ತಿನ್ನೋಕೆ ಆಗಲಿಲ್ಲ. ಹಾಲನ್ನೂ ಕುಡಿಯಲು ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ್ದರೂ ಸಹ ಜನಗಳ ಪರ ನಿಂತುಕೊಂಡರು. ಎಷ್ಟು ಕೋಟಿಗಟ್ಟಲೇ ಹಣ ನೀಡಿದರೂ ಬೆಲೆ ಬರುವುದಿಲ್ಲ. ಆದರೆ ಒಂದು ಹೊತ್ತು ಊಟ ಹಾಕಿದರೆ ಅದಕ್ಕೆ ಬೆಲೆ ಬರುತ್ತದೆ ಎಂದು ತಿಳಿಸಿದರು.

    ಅಂದು ಅವರು ಯಾರನ್ನೂ ಕೇಳದೆ, ಯಾವುದೇ ಜಾತಿಯನ್ನೂ ನೋಡದೆ ಹಸಿವು ಅಂತ ಬಂದವರಿಗೆಲ್ಲ ಊಟ ಹಾಕಿದರು. ಅಲ್ಲದೆ ಮನೆ ಮನೆಗೆ ಊಟ ಕಳುಹಿಸಿದರು. ಮತ ಹಾಕಿದ್ದಾರೆ ಎಂಬ ಉದ್ದೇಶದಿಂದಲ್ಲ. ಮಾನವೀಯತೆಯ ದೃಷ್ಟಿಯಿಂದ ಅವರು ಈ ಕೆಲಸ ಮಾಡಿದರು. ಇಂತಹ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿದವರಿಗೆ ನಿಮ್ಮ ಅಮೂಲ್ಯ ಮತಗಳನ್ನು ಅವರಗೆ ಹಾಕಿ, ಮತ್ತೆ ನಿಮ್ಮ ಸೇವೆ ಮಾಡುವ ಅವಕಾಶವನ್ನು ನೀಡಿ ಎಂದು ಮನವಿ ಮಾಡಿದರು.

    ಯಶವಂತಪುರ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿದರು. ಡಿಬಾಸ್ ನೋಡಲು ಮನೆ, ಕಟ್ಟಡಗಳ ಮೇಲೆ ನೂರಾರು ಜನ ನಿಂತಿದ್ದರು. ದರ್ಶನ್ ಮೇಲೆ ಹೂ ಎರಚಿ ದರ್ಶನ್ ಗೆ ಜೈಕಾರ ಕೂಗಿದರು. ಅಲ್ಲದೆ ಯಶವಂತಪುರದ ಬಿ.ಕೆ.ನಗರದಲ್ಲಿ ದರ್ಶನ್‍ಗೆ ಬೃಹತ್ ಸೇಬಿನ ಹಾರ ಹಾಕಿದರು. ಅಭಿಮಾನಿಗಳು ಜೆಸಿಬಿ ಮೂಲಕ 200 ಕೆಜಿ ತೂಕದ ಸೇಬಿನ ಹಾರ ಹಾಕಿದರು. ಪಟಾಕಿ ಸಿಡಿಸಿ, ಬೃಹತ್ ಹಾರ ಅರ್ಪಿಸಿ ಸಂಭ್ರಮಿಸಿದರು. ಇದೇ ವೇಳೆ ಮಾಸ್ಕ್ ಧರಿಸಿ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಸನ್ನೆ ಮೂಲಕ ಮನವಿ ಮಾಡಿದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್.ಅಶೋಕ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಯಶವಂತಪುರದ ವಿವಿಧೆಡೆ ದರ್ಶನ್ ಅದ್ಧೂರಿ ಪ್ರಚಾರ ನಡೆಸಿದರು.

  • ನಾವು ರಾಗಿಣಿ ಅಂತ ತೆಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ: ರಮೇಶ್ ಜಾರಕಿಹೊಳಿ

    ನಾವು ರಾಗಿಣಿ ಅಂತ ತೆಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ: ರಮೇಶ್ ಜಾರಕಿಹೊಳಿ

    ಬೆಂಗಳೂರು: ರಾಗಿಣಿಯಂತ ಪ್ರಚಾರಕ್ಕೆ ತಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪರ ಡ್ರಗ್ಸ್ ಪ್ರಕರಣದ ಆರೋಪಿ ನಟಿ ರಾಗಿಣಿ ಪ್ರಚಾರ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ತನಿಖೆ ನಡೆಯುತ್ತಿದೆ. ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಆಗಲಿದೆ ಎಂದು ತಿಳಿಸಿದರು.

    ರಾಗಿಣಿ ಎಂದು ಭಾವಿಸಿ ನಾವು ಪ್ರಚಾರಕ್ಕೆ ಕರೆ ತಂದಿದ್ವಿ. ಅದನ್ನು ಬಿಟ್ಟು ಡ್ರಗ್ಸ್ ಹುಡುಗಿ ಅಂತ ಕರೆದಿರಲಿಲ್ಲ. ಆಕೆಯ ಫೋಟೋ ಎಲ್ಲರ ಜೊತೆ ಇರಬಹುದು. ಡಿಕೆ ಶಿವಕುಮಾರ್ ಜೊತೆಯೂ ಫೋಟೋ ಇರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಜೊತೆಯೂ ಇರಬಹುದು. ಕುಮಾರಸ್ವಾಮಿ ಜೊತೆಯೂ ಇರಬಹುದು. ಅದರ ಬಗ್ಗೆ ನಾನು ಮಾತಾಡಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇದೇ ವೇಳೆ ರಾಜ್ಯದ ನೆರೆ ವಿಚಾರವಾಗಿ ಮಾತನಾಡಿದ ಅವರು, ನೆರೆ ಬಗ್ಗೆ ಕೇಂದ್ರ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದೆ. ನಮ್ಮ ಕಂದಾಯ ಇಲಾಖೆ ಅದನ್ನು ಫಾಲೋ ಮಾಡುತ್ತಿದೆ. ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳಿಗೆ ನೆರೆ ಎಫೆಕ್ಟ್ ಆಗಿದೆ. ಕೇಂದ್ರ ತಂಡ ಬಂದು ಅಧ್ಯಯನ ಮಾಡಿದೆ. ಈ ಬಾರಿ ಹೆಚ್ಚು ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

    ಎಂಟಿಬಿ, ಶಂಕರ್, ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಸಿಎಂ, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಎಲ್ಲರೂ ಕಾಯಬೇಕು. ನಾವು ಕೂಡಾ 14 ತಿಂಗಳು ಕಾದಿದ್ದೇವೆ. ಕೋರ್ಟು ಕಚೇರಿ ಅಲೆದಾಡಿದ್ದೇವೆ. ಅವರು ಕೂಡಾ ಕಾಯಬೇಕು. ಸಿಎಂ ಮತ್ತು ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.

  • #MeToo ಅಭಿಯಾನವನ್ನ ಕೆಲವರು ಪ್ರಚಾರಕ್ಕೆ ಬಳಸಿಕೊಳ್ತಿದ್ದಾರೆ: ನಟಿ ರಾಗಿಣಿ

    #MeToo ಅಭಿಯಾನವನ್ನ ಕೆಲವರು ಪ್ರಚಾರಕ್ಕೆ ಬಳಸಿಕೊಳ್ತಿದ್ದಾರೆ: ನಟಿ ರಾಗಿಣಿ

    ಹುಬ್ಬಳ್ಳಿ: ಮೀಟೂ ಅಭಿಯಾನವನ್ನು ಕೆಲವರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ.

    ಮೀಟೂ ಅಭಿಯಾನವನ್ನು ಯಾರೂ ಪ್ರಚಾರದ ಗಿಮಿಕ್ ಆಗಿ ತೆಗೆದುಕೊಳ್ಳಬಾರದು. ಕೆಲವು ಘಟನೆಗಳನ್ನು ನೋಡಿದಾಗ ಇದನ್ನು ಪ್ರಚಾರಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿಯಲಾಗುತ್ತೆ. ಪ್ರಚಾರಕ್ಕೆ ಬೇರೆಯವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಯಾರು ಈ ರೀತಿಯ ತೊಂದರೆಗೆ ಒಳಗಾಗಿದ್ದಾರೋ ಅವರು ಮುಂದೆ ಬಂದು ಮಾತನಾಡಲಿ. ಚೇಂಜ್ ಮಾಡುವಂತಹ ಒಂದು ಆಂದೋಲನ ಪ್ರಾರಂಭವಾಗಿದೆ. ಮೀಟೂ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಒಂದು ಒಳ್ಳೆಯ ಉದ್ದೇಶದಿಂದ ಇಂಥ ಅಭಿಯಾನ ಆರಂಭಗೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗುತ್ತಾ ಬಂದಿದ್ದು ಸದ್ಯ ನಾನು ಇದೂವರೆಗೂ ಎಲ್ಲಿಯೂ ಈ ರೀತಿಯ ಶೋಷಣೆಗೆ ಒಳ್ಳಗಾಗಿಲ್ಲ. ನನಗೆ ನನ್ನದೇ ಆದ ಕೆಲಸದ ನಿಯಮಗಳಿವೆ. ಹಾಗಾಗಿ ಕೆಲಸ ಅಥವಾ ವೈಯಕ್ತಿಕ ಜೀವನಲ್ಲಿ ನಾನು ಯಾವುದೇ ಕಾರಣಕ್ಕೂ ಇಂತಹ ತೊಂದರೆಯನ್ನು ಫೇಸ್ ಮಾಡಲಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಡಿಕೆ ಸರ್ಕಾರ ಬೀಳಿಸಲು ಯಾರು ಷಡ್ಯಂತ್ರ ಮಾಡ್ತಿಲ್ಲ ಜಮೀರ್ ಅಹಮ್ಮದ್

    ಎಚ್‍ಡಿಕೆ ಸರ್ಕಾರ ಬೀಳಿಸಲು ಯಾರು ಷಡ್ಯಂತ್ರ ಮಾಡ್ತಿಲ್ಲ ಜಮೀರ್ ಅಹಮ್ಮದ್

    ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಆಗಿದ್ದರಿಂದ ಹಾವೇರಿಗೆ ಪ್ರಚಾರಕ್ಕೆ ಬಂದಿದ್ದೇನೆ ಹೊರತು ಎಚ್‍ಡಿಕೆ ಸರ್ಕಾರ ಬೀಳಿಸಲು ಯಾರು ಷಡ್ಯಂತ್ರ ಮಾಡುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

    ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಗೊಂದಲವನ್ನು ಉಂಟುಮಾಡಿದೆ. ಅವರು ಮುಂದಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದಾರೆ. ಆದ್ರೆ ಅವರೇನು ಕುಮಾರಸ್ವಾಮಿ ಸರ್ಕಾರ ಬೀಳಿಸಿ ಸಿಎಂ ಆಗ್ತಿನಿ ಅಂದಿಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನು ಓದಿ:  ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ

    ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು, ಯಾವತ್ತಿದ್ದರೂ ಅವರೇ ನಮ್ಮ ನಾಯಕರು. ಅವರ ಯೂರೋಪ್ ಪ್ರವಾಸ ಪೂರ್ವ ನಿಗದಿಯಾಗಿದ್ದು, ಅದರೆಲ್ಲೇನು ವಿಶೇಷತೆ ಇಲ್ಲ. ಅವರ ಜೊತೆ ಸಚಿವರು ಹೋಗುವ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ಕರೆದರೆ ನಾನು ಹೋಗುತ್ತಿದ್ದೆ. ಆದರೆ ನನ್ನ ಕರೆದಿಲ್ಲ ಹೀಗಾಗಿ ನಾನು ಹೋಗುತ್ತಿಲ್ಲ ಎಂದು ತಿಳಿಸಿದರು.ಇದನ್ನು ಓದಿ:ನಾನು ಸಿಎಂ ಆಗ್ಬೇಕು ಅನ್ನೋದು ಜನರ ಇಚ್ಛೆ, ನನ್ನ ಆಸೆ ಅಲ್ಲ: ಸಿದ್ದರಾಮಯ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2014 ರ ಚುನಾವಣೆ ವೇಳೆ ಮಾತನಾಡಿದ ಸ್ಥಳದಲ್ಲೇ ಮತ್ತೆ ಮೋದಿ ಭಾಷಣ – ಕಾರ್ಯಕ್ರಮದ ಹೈಲೈಟ್ಸ್ ಹೀಗಿದೆ

    2014 ರ ಚುನಾವಣೆ ವೇಳೆ ಮಾತನಾಡಿದ ಸ್ಥಳದಲ್ಲೇ ಮತ್ತೆ ಮೋದಿ ಭಾಷಣ – ಕಾರ್ಯಕ್ರಮದ ಹೈಲೈಟ್ಸ್ ಹೀಗಿದೆ

    ಬೆಂಗಳೂರು: 2014 ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲೇ ನಾಳೆಯ ಸಮಾವೇಶದಲ್ಲೂ ಭಾಷಣ ಮಾಡಲಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆ ಸಿದ್ಧತೆ ನಡೆಸುವ ವಿಚಾರವಾಗಿ ಆಡಳಿತ ಪಕ್ಷದ ವೈಫಲ್ಯಗಳನ್ನು ತಿಳಿಸುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂದಾಳತ್ವದಲ್ಲಿ ಕೈಗೊಂಡಿದ್ದ ಪರಿವರ್ತನಾ ಯಾತ್ರೆ ನಾಳೆ ಮುಕ್ತಾಯವಾಗಲಿದೆ. ಯಾತ್ರೆ ಮುಕ್ತಾಯದ ಭಾಗವಾಗಿ ಅರಮನೆ ಮೈದಾನದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಅವರ ಆಗಮಿಸುತ್ತಿರುವುದರಿಂದ ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆಗಳಿವೆ.

    2014ರಲ್ಲಿ ಭಾಷಣ ಮಾಡಿದ ಸ್ಥಳ: ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಬೃಹತ್ ಸಮಾವೇಶಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಮೈದಾನ ಪಶ್ಚಿಮ ದಿಕ್ಕಿನಲ್ಲಿ ಪೂರ್ವಕ್ಕೆ ಅಭಿಮುಖವಾಗಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಮೋದಿ ಅವರಿಗೆ ಇದು ಅದೃಷ್ಟದ ಸ್ಥಳ ಎನ್ನಲಾಗಿದ್ದು, 2014 ರ ಚುನಾವಣೆ ವೇಳೆಯೂ ಪ್ರಧಾನಿಗಳು ಇಲ್ಲೇ ಭಾಷಣ ಮಾಡಿದ್ದರು.

    ವೇದಿಕೆ ನಿರ್ಮಾಣ ಮಾಡುವ ಜಾಗದಲ್ಲಿ ಭೂಮಿ ಪೂಜೆ ಮಾಡುವಾಗಲೂ ಸುದರ್ಶನ ಹೋಮ, ವಾಸ್ತು ಹೋಮ, ನವಗ್ರಹ ಹೋಮ ಹವನ ಮೊರೆ ಹೋಗಲಾಗಿತ್ತು. ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆಗಬಾರದೆಂದು ಹೋಮ ನಡೆಸಲಾಗಿದೆ. ನಾಳಿನ ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ ಮೋದಿ ಜೊತೆ ಹಿರಿಯರಿಗಷ್ಟೇ ಸ್ಥಾನ ಕಲ್ಪಿಸಲಾಗಿದೆ. ಇದರಲ್ಲಿ ಎಸ್.ಎಂ.ಕೃಷ್ಣ, ಶ್ರೀನಿವಾಸ್ ಪ್ರಸಾದ್ ಸೇರಿದಂತೆ 27 ಪ್ರಮುಖ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    3,500 ಬಸ್: ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರಿಗೆ ವೇದಿಕೆಯ ಮುಂಭಾಗದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ 60 ಸಾವಿರ ಜನರನ್ನು ಸೇರಿಸಲು ರಾಜ್ಯ ಬಿಜೆಪಿ ಯೋಜನೆ ನಡೆಸಿದೆ. ರಾಜ್ಯದ ಸಾರಿಗೆ ಇಲಾಖೆಯಿಂದ ರಾಜ್ಯದ ವಿವಿಧಡೆಯಿಂದ ಆಗಮಿಸುವ ಕಾರ್ಯಕರ್ತರಿಗಾಗಿ ಸುಮಾರು 3,500 ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

    ಬೃಹತ್ ಪ್ರಮಾಣದಲ್ಲಿ ಜನರು ಅರಮನೆ ಮೈದಾನಕ್ಕೆ ಆಗಮಿಸುತ್ತಿರುವುದರಿಂದ ನಾಳೆ ಸಮಾವೇಶದ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಟ್ರಾಫಿಕ್ ನಿಯಂತ್ರಣಕ್ಕೆ 250 ಮಂದಿ ಬಿಜೆಪಿ ಪ್ರಬಂಧಕರ ನೇಮಕ ಮಾಡಲಾಗಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪ್ರಸಾರ ಮಾಡಲು 20 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ.

    ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಪರಿವರ್ತನಾ ಯಾತ್ರೆ ಮುಕ್ತಾಯದ ನಂತರ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಈ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುತ್ತದೆ.

    ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಗಾಗಿ ಟೋಪಿ ಹಾಗೂ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ ಬಾದುಶಾ, ಪಕೋಡಾ, ರೈಸ್ ಬಾತ್, ಮೊಸರನ್ನ 250 ಫುಡ್ ಕೌಂಟರ್ ಗಳಿಂದ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಸಮಾವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ರಾಜ್ಯ ಬಿಜೆಪಿ ನಾಯಕರಾದ ಸಂಸದ ಅನಂತಕುಮಾರ್, ಮಾಜಿ ಡಿಸಿಎಂ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ 5 ತಂಡಗಳು ಕಾರ್ಯನಿರ್ವಹಿಸುತ್ತಿದೆ.