Tag: public_tv

  • ಆಶ್ಲೇಷ ಪೂಜೆಗೆ ಮಧ್ಯರಾತ್ರಿಯಿಂದ ಬೆಳಗ್ಗೆಯವರೆಗೆ ಸಾಲು – ಸುಬ್ರಹ್ಮಣ್ಯದಲ್ಲಿ ಜನ ಜಂಗುಳಿ

    ಆಶ್ಲೇಷ ಪೂಜೆಗೆ ಮಧ್ಯರಾತ್ರಿಯಿಂದ ಬೆಳಗ್ಗೆಯವರೆಗೆ ಸಾಲು – ಸುಬ್ರಹ್ಮಣ್ಯದಲ್ಲಿ ಜನ ಜಂಗುಳಿ

    ಮಂಗಳೂರು: ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆ ಮಾಡಿಸಲು ಸಹಸ್ರಾರು ಭಕ್ತರು ಮಧ್ಯರಾತ್ರಿಯಿಂದ ಬೆಳಗ್ಗಿನವರೆಗೂ ಸರತಿ ಸಾಲಿನಲ್ಲಿ ನಿಂತು ರಶೀದಿ ತೆಗೆದುಕೊಂಡಿದ್ದಾರೆ.

    ಇಂದು ಭಕ್ತರ ದಂಡೇ ಕುಕ್ಕೆಗೆ ಹರಿದು ಬಂದಿದೆ. ಆನ್ ಲೈನ್ ರಶೀದಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲೇ ರಶೀದಿ ನೀಡಲಾಗುತ್ತಿದೆ. ಆದರೆ ನಿಗದಿತ ರಶೀದಿ ಮಾತ್ರ ಕೌಂಟರ್ ನಲ್ಲಿ ಕೊಡುತ್ತಿರುವುದರಿಂದ ಇಂದಿನ ಪೂಜಾ ರಶೀದಿಗಾಗಿ ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದಲೇ ಇಂದು ಮುಂಜಾನೆ 7 ಗಂಟೆಯವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ನಂತರ ಭಕ್ತರಿಗೆ ಆಶ್ಲೇಷ ಪೂಜಾ ರಶೀದಿ ನೀಡಲಾಯಿತು.

    ದೇವಸ್ಥಾನದ ರಶೀದಿ ಕೌಂಟರ್‌ನಿಂದ ರಥಬೀದಿಯ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ಪೂಜಾ ರಶೀದಿಗಾಗಿ ನಿಂತಿದ್ದರು. ಬಳಿಕ ಕ್ಷೇತ್ರದ ಒಳಗೂ ದೇವರ ದರ್ಶನಕ್ಕೆ ಜನಜಂಗುಳಿಯಾಗಿತ್ತು.

    ಕೊರೋನಾ ಆತಂಕದ ನಡುವೆಯೂ ಈ ರೀತಿ ಜನ ಸೇರಿದ್ದರಿಂದ ಆನ್‍ಲೈನ್ ಮೂಲಕವೇ ಸೇವಾ ರಶೀದಿಯನ್ನು ಪಡೆಯವ ವ್ಯವಸ್ಥೆಯನ್ನು ಮಾಡಬೇಕಿತ್ತು. ಆನ್‍ಲೈನ್ ನಲ್ಲಿ ಬುಕ್ಕಿಂಗ್ ಇಡದೇ ಅವ್ಯವಸ್ಥೆ ಮಾಡಿದ್ದಾರೆ. ಆಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಭಕ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

  • ನಂದಿಬೆಟ್ಟದಲ್ಲಿ ಕೊರೋನಾ ರೂಲ್ಸ್ ಕಂಪ್ಲೀಟ್ ಬ್ರೇಕ್

    ನಂದಿಬೆಟ್ಟದಲ್ಲಿ ಕೊರೋನಾ ರೂಲ್ಸ್ ಕಂಪ್ಲೀಟ್ ಬ್ರೇಕ್

    – ಎಂಜಾಯ್ ಮೂಡ್‍ನಲ್ಲಿ ಪ್ರವಾಸಿಗರು
    – ಸಾಮಾಜಿಕ ಅಂತರ ದೂರದ ಮಾತು

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ವಾರಾಂತ್ಯ ಹಿನ್ನೆಲೆ ಇಂದು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

    ಇಂದು ಬೆಳ್ಳಂಬೆಳಿಗ್ಗೆ ಎಂದಿನಂತೆ ಸಾವಿರಾರು ಮಂದಿ ಪ್ರೇಮಧಾಮ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಆದರೆ ಬಹುತೇಕು ಪ್ರವಾಸಿಗರು ಮಾಸ್ಕ್ ಧರಿಸಿರಲಿಲ್ಲ. ಇನ್ನೂ ಸಾಮಾಜಿಕ ಅಂತರ ಅನ್ನೋ ನಿಯಮ ಪಾಲನೆ ಅನ್ನೋದು ದೂರದ ಮಾತು ಅನ್ನೋ ಹಾಗೆ ಪ್ರವಾಸಿಗರು ವರ್ತಿಸಿದ್ದಾರೆ.

    ನಂದಿಬೆಟ್ಟಕ್ಕೆ ಆಗಮಿಸಿದ ಬಹುತೇಕರು ಮಾಸ್ಕ್ ಧರಿಸದೆ ನಂದಿಬೆಟ್ಟದಲ್ಲಿ ಒಡಾಡುತ್ತಿದ್ದು ಸರ್ವೆ ಸಾಮಾನ್ಯವಾಗಿತ್ತು. ಕೆಲವರು ಧರಿಸಿದ್ರೂ ಅದನ್ನ ಸಂಪೂರ್ಣವಾಗಿ ಬಾಯಿ ಮೂಗು ಮುಚ್ಚುವಂತಿರಲಿಲ್ಲ. ಬದಲಾಗಿ ಅಧರ್ಂಬರ್ಧ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೇಕಾಬಿಟ್ಟಿ ಒಡಾಡಿದ್ದಾರೆ.

    ನಂದಿಬೆಟ್ಟದಲ್ಲಿ ಮೂಲೆ ಮೂಲೆಯಲ್ಲೂ ಪ್ರವಾಸಿಗರು ತುಂಬಿ ತುಳುಕುತ್ತಿದ್ದರೂ ಕೊರೋನಾ ರೂಲ್ಸ್ ಫಾಲೋ ಮಾಡದೆ ಪ್ರವಾಸಿಗರು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿರುವುದು ಕಂಡು ಬಂದಿದೆ. ಇಷ್ಟು ದಿನ ಕೊರೋನಾ ಎಂದರೆ ಅಲ್ಪ ಸ್ವಲ್ಪ ಮಟ್ಟದ ಭಯ ಆದರೂ ಇತ್ತು. ಈಗ ಅದ್ಯಾವುದರ ಭಯವೂ ಪ್ರವಾಸಿಗರಿಗೆ ಇಲ್ಲದಂತಾಗಿದೆ.

    ಕೊರೋನಾನೇ ಇಲ್ಲ ಎಲ್ಲವೂ ಮುಗಿದು ಹೋಗಿದೆ ಅನ್ನೋ ಮನಸ್ಥಿತಿಗೆ ಜನ ಬಂದು ತಲುಪಿದಂತೆ ಭಾಸವಾಗುತ್ತಿತ್ತು. ಕೆಲವರು ಮಾಸ್ಕ್ ತಂದಿದ್ದರೂ ಜೇಬಲ್ಲಿ ಇಟ್ಕೊಂಡು ಅಡ್ಡಾಡುತ್ತಿದ್ದರು. ಇನ್ನೂ ಕ್ಯಾಮರಾ ಕಂಡಾಗ, ಇಲ್ಲ ಪ್ರಶ್ನೆ ಮಾಡಿದಾಗ ಮಾತ್ರ ಪ್ರವಾಸಿಗರು ಮಾಸ್ಕ್ ಧರಿಸುತ್ತಿದ್ದರು.

    ಕೊರೋನಾ ಸಂಖ್ಯೆ ಇಳಿಮುಖ ಆಗುತ್ತಿದೆ. ಆದರೂ ಎರಡನೇ ಅಲೆ ಆಗಮಿಸುವ ಸಾಧ್ಯತೆ ಇದೆ ಜನರೇ ಎಚ್ಚರ ಅಂತ ಸರ್ಕಾರ ಎಚ್ಚರಿಕೆ ಕೊಡ್ತಿದೆ. ಆದರೂ ಕೊರೋನಾ ಇಷ್ಟೇ ನಮಗೇನು ಆಗಲ್ಲ ಅನ್ನೋ ಉದ್ಧಟತನದಲ್ಲೇ ಪ್ರವಾಸಿಗರು ಫೋಟೋ ಸೆಲ್ಫಿ ತೆಗೆದುಕೊಂಡು ತಮ್ಮಿಷ್ಟದಂತೆ ಎಂಜಾಯ್ ಮೂಡ್‍ನಲ್ಲಿದ್ದರು.

  • ಚಪ್ಪಲಿಯಲ್ಲಿ ಚಿನ್ನ ಇಟ್ಟು ಸಾಗಿಸ್ತಿದ್ದ – ಏರ್ ಪೋರ್ಟ್ ನಲ್ಲಿ ಸಿಕ್ಕಿ ಬಿದ್ದ

    ಚಪ್ಪಲಿಯಲ್ಲಿ ಚಿನ್ನ ಇಟ್ಟು ಸಾಗಿಸ್ತಿದ್ದ – ಏರ್ ಪೋರ್ಟ್ ನಲ್ಲಿ ಸಿಕ್ಕಿ ಬಿದ್ದ

    ಚೆನ್ನೈ: ಚಪ್ಪಲಿಯಲ್ಲಿ ಚಿನ್ನವನ್ನು ಇಟ್ಟು ಸಾಗಿಸುತ್ತಿದ್ದ ವ್ಯಕ್ತಿ ಏರ್ ಪೋರ್ಟ್ ನಲ್ಲಿ   ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಏರ್ ಪೋರ್ಟ್ ನಲ್ಲಿ  ವ್ಯಕ್ತಿಯೊಬ್ಬನ ಚಪ್ಪಲಿ ಕಿತ್ತು ಹೋಯಿತ್ತು ಎಂದು ಸಹಾಯ ಮಾಡಲು ಸಿಬ್ಬಂದಿ ಹೋದಾಗ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸಮೇತ ಆರೋಪಿ ಸಿಕ್ಕಿಬಿದ್ದಿರುವ ಘಟನೆ ಚೆನ್ನೈ ಏರ್‍ಪೋರ್ಟ್ ನಲ್ಲಿ ನಡೆದಿದೆ.

    ಆರೋಪಿ ತಮಿಳುನಾಡಿನ ರಾಮನಾಥಪುರಂನ ಮೊಹಮ್ಮದ್ ಹಾಸಿಂ ಅಲಿ(21) ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಚೆನ್ನೈಗೆ ಬರುತ್ತಿದ್ದನು. ಆಗ ವಿಮಾನ ನಿಲ್ದಾಣದಲ್ಲಿ ಈತ ಧರಿಸಿದ್ದ ಚಪ್ಪಲಿ ಕಿತ್ತು ಹೋಗಿದೆ. ಇದನ್ನು ಗಮನಿಸಿದ ಕಸ್ಟಮ್ ಇಲಾಖೆಯ ಸಿಬ್ಬಂದಿ ಚಪ್ಪಲಿಯನ್ನು ಹಿಂದಿರುಗಿಸಲು ಹೋದಾಗ ಸಿಬ್ಬಂದಿಗೆ ಅನುಮಾನ ಬಂದಿದೆ.

    ಸಾಮಾನ್ಯವಾಗಿ ಚಪ್ಪಲಿಗೆ ಅಗಲವಾದ ಪಟ್ಟಿ ಇರುತ್ತದೆ. ಆದರೆ ಈ ಚಪ್ಪಲಿಗೆ ಕೊಂಚ ವಿಭಿನ್ನವಾಗಿ ಇದೆ. ಹಾಗೆ ಭಾರವಾಗಿದೆ ಎಂದು ಅನುಮಾನದಿಂದ ಅಧಿಕಾರಿಗಳು ಪರಿಶೀಲಸಿ ನೋಡಿದಾಗ ಚಪ್ಪಲಿಯ ಪಟ್ಟಿಯಲ್ಲಿ ಸಣ್ಣ ರಂಧ್ರ ಕೊರೆದು ದ್ರವೀಕೃತ ಚಿನ್ನವನ್ನು ಸುತ್ತಿಟ್ಟಿದ್ದು ಪತ್ತೆಯಾಗಿದೆ. ಈ ಹಿಂದೆಯೂ 14.12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಈತ ಹೀಗೆ ಸಾಗಿಸಿದ್ದನು ಎಂದು ತಿಳಿದು ಬಂದಿದೆ.

  • ಚಳಿಗೆ ಬಿಸಿಬಿಸಿ ಬೆಂಡೆಕಾಯಿ ಫ್ರೈ ಮಾಡೋ ವಿಧಾನ

    ಚಳಿಗೆ ಬಿಸಿಬಿಸಿ ಬೆಂಡೆಕಾಯಿ ಫ್ರೈ ಮಾಡೋ ವಿಧಾನ

    ವಾತಾವರಣ ಬದಲಾದಂತೆ ನಾವು ತಿನ್ನುವ ಆಹಾರಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತೇವೆ. ಹೀಗಿರುವಾಗ ಈಗ ಚಳಿ ಹೆಚ್ಚು ಹೀಗಾಗಿ ಬಿಸಿ-ಬಿಸಿಯಾಗಿ ಏನನ್ನಾದರು ತಿನ್ನಬೇಕು ಎಂದು ನಾಲಿಗೆ ಚಪ್ಪರಿಸುವುದು ಸಹಜ. ಸ್ನ್ಯಾಕ್ಸ್‍ಗೆ ಅಥವಾ ಊಟಕ್ಕೆ ಬಿಸಿ ಬಿಸಿಯಾಗಿ ರುಚಿಯಾದ ಬೆಂಡೆಕಾಯಿ ಫ್ರೈ ಮಾಡುವ ಮಾಹಿತಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಬೆಳ್ಳುಳ್ಳಿ- 2
    ಕರೀಬೇವು- 4ರಿಂದ 5
    ಇಂಗು- ಚಿಟಿಕೆ
    ಕಡಲೆ ಹಿಟ್ಟು- ಒಂದು ಕಪ್
    ಬೆಂಡೆಕಾಯಿ-100 ಗ್ರಾಂ
    ಗರಂಮಸಾಲಾ- ಅರ್ಧ ಟೀ ಸ್ಪೂನ್
    ಅರಿಶಿಣ -ಚಿಟಿಕೆ
    ದನಿಯಾ ಪೌಡರ್- 1 ಟೀ ಸ್ಪೂನ್
    ಕಾರದಪುಡಿ -2 ಟೀ ಸ್ಪೂನ್
    ಲಿಂಬು -ಒಂದು
    ಎಣ್ಣೆ -ಒಂದು ಕಪ್
    ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ
    * ಸ್ಟೌ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2ರಿಂದ 3 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.
    * ಎಣ್ಣೆ ಬಿಸಿಯಾದ ನಂತ್ರ 4ರಿಂದ 5 ಕರಿಬೇವು ಮತ್ತು ಸಿಪ್ಪೆ ತೆಗೆದ 2 ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ಇದಕ್ಕೆ ಒಂದು ಕಪ್‍ನಷ್ಟು ಕಡಲೆ ಹಿಟ್ಟನ್ನು ಹಾಕಿ ಸುವಾಸನೆ ಬರುವವರೆಗೂ ಫ್ರೈ ಮಾಡಬೇಕು. ಈ ಮಸಾಲೆಯನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು.
    * ಇತ್ತ 100 ಗ್ರಾಂ ಬೆಂಡೆಕಾಯಿಯನ್ನು ತೆಗೆದುಕೊಂಡು ಮಧ್ಯದಲ್ಲಿ ಸೀಳಿಕೊಳ್ಳಬೇಕು.
    * ಈಗ ಹುರಿದಿರುವ ಮಸಾಲೆಗೆ ಸ್ವಲ್ಪ ಎಣ್ಣೆ, ಅರ್ಧ ಸ್ಪೂನ್ ಗರಂಮಸಾಲಾ , ಚಿಟಿಕೆ ಅರಿಶಿಣ, ಒಂದು ಟೀ ಸ್ಪೂನ್ ದನಿಯಾ ಪೌಡರ್, 2 ಟೀ ಸ್ಪೂನ್ ಖಾರದಪುಡಿ ಹಾಗೂ
    ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಈ ಮಸಾಲೆಯನ್ನು ಸೀಳಿರುವ ಬೆಂಡೆಕಾಯಿ ಒಳಗೆ ತುಂಬಬೇಕು.
    * ನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಮಸಾಲೆ ತುಂಬಿರುವ ಬೆಂಡೆಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.

    ಈಗ ರುಚಿಯಾದ ಬೆಂಡೆಕಾಯಿ ಫ್ರೈ ಸವಿಯಲು ಸಿದ್ಧವಾಗುತ್ತದೆ. ರುಚಿ ರುಚಿಯಾದ ಬೆಂಡೆಕಾಯಿ ಫ್ರೈಯನ್ನು ಊಟದ ಜೊತೆಗೆ ಅಥವಾ ಸಂಜೆ ವೇಳೆ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.

  • ರಾಜ್ಯದ ನಗರಗಳ ಹವಾಮಾನ ವರದಿ: 5-12-2020

    ರಾಜ್ಯದ ನಗರಗಳ ಹವಾಮಾನ ವರದಿ: 5-12-2020

    ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದಂತಹ ವಾತಾವರಣದ ಇರಲಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ. ಈ ಎರಡು ದಿನವೂ ಜಿಟಿ ಜಿಟಿ ಹಾಗೂ ತುಂತುರು ಮಳೆಯಾಗಲಿದೆ. ಡಿಸೆಂಬರ್ 6 ಮತ್ತು 7ರಂದು ರಾಜ್ಯದ ಹಲವೆಡೆ ಮಳೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ಇಂದಿನಿಂದ 6ರವರೆಗೆ ಮಳೆಯಾವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 35ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

     

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 24-19
    ಮಂಗಳೂರು: 34-26
    ಶಿವಮೊಗ್ಗ: 31-21
    ಬೆಳಗಾವಿ: 31-17
    ಮೈಸೂರು: 27-20

    ಮಂಡ್ಯ: 27-21
    ರಾಮನಗರ: 24-12
    ಮಡಿಕೇರಿ: 26-18
    ಹಾಸನ: 26-19
    ಚಾಮರಾಜನಗರ: 26-21

    ಚಿಕ್ಕಬಳ್ಳಾಪುರ: 22-17
    ಕೋಲಾರ: 23-19
    ತುಮಕೂರು: 26-19
    ಉಡುಪಿ: 35-26
    ಕಾರವಾರ: 35-26

    ಚಿಕ್ಕಮಗಳೂರು: 26-18
    ದಾವಣಗೆರೆ: 31-20
    ಚಿತ್ರದುರ್ಗ: 28-19
    ಹಾವೇರಿ: 32-19
    ಬಳ್ಳಾರಿ: 31-19

     

    ಧಾರವಾಡ: 31-18
    ಗದಗ: 31-18
    ಕೊಪ್ಪಳ: 31-19
    ರಾಯಚೂರು: 32-18
    ಯಾದಗಿರಿ: 32-18

    ವಿಜಯಪುರ: 32-17
    ಬೀದರ್: 29-14
    ಕಲಬುರಗಿ: 32-16
    ಬಾಗಲಕೋಟೆ: 32-17

  • ಪಂಚಾಯತಿ ಚುನಾವಣೆ ಘೋಷಣೆ – ಸುಧಾಕರ್ ಅಸಮಾಧಾನ

    ಪಂಚಾಯತಿ ಚುನಾವಣೆ ಘೋಷಣೆ – ಸುಧಾಕರ್ ಅಸಮಾಧಾನ

    ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಮಾಡಿದ ಚುನಾವಣೆ ಆಯೋಗ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್ ಅವರು ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿ ಅಂತ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೆ. ಆದರೆ ಚುನಾವಣಾ ಆಯೋಗ ಇದನ್ನು ಪರಿಗಣಿಸಲಿಲ್ಲ. ಕೋರ್ಟ್‍ಗೂ ಮನವಿ ಮಾಡಿದರೂ ಈ ಬಗ್ಗೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಕೋರ್ಟ್ ಗಳಲ್ಲಿ ಏನೇನ್ ಆಗುತ್ತಿದೆ ಎನ್ನುವ ಮಾಹಿತಿ ಇದೆ. ಪಂಚಾಯತಿ ಚುನಾವಣೆ ನಡೆಸಿದರೆ ಮನೆ ಮನೆಗೆ ವೈರಸ್ ಹರಡಿಸಿದಂತೆ ಆಗುತ್ತದೆ ಎಂದು ತಜ್ಞರು ಹೇಳಿದ್ದರು. ಹೀಗಾಗಿ ಚುನಾವಣೆ ನಡೆಸಬಾರದು ಎಂಬ ನಮ್ಮ ಸಲಹೆಯನ್ನು ಆಯೋಗ, ಕೋರ್ಟ್ ಪರಿಗಣಿಸಲಿಲ್ಲ. ಮಾರ್ಚ್ ವರೆಗೆ ಚುನಾವಣೆ ಮುಂದೂಡಬಹುದಿತ್ತು. ಆದರೆ ಈಗ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಈಗ ಅನಿವಾರ್ಯವಾಗಿ ಚುನಾವಣೆ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಕರ್ನಾಟಕ ಬಂದ್‍ಗೆ ಯಾರು ಪರ್ಮಿಷನ್ ಕೊಟ್ಟಿಲ್ಲ: ಕಮಲ್ ಪಂಥ್

    ಕರ್ನಾಟಕ ಬಂದ್‍ಗೆ ಯಾರು ಪರ್ಮಿಷನ್ ಕೊಟ್ಟಿಲ್ಲ: ಕಮಲ್ ಪಂಥ್

    – ಹೋರಾಟಗಾರರಿಗೆ ಪೊಲೀಸ್ ಕಮಿಷನರ್ ಎಚ್ಚರಿಕೆ

    ಬೆಂಗಳೂರು: ನಾಳೆ ಕರ್ನಾಟಕ ಬಂದ್‍ಗೆ ಯಾರು ಪರ್ಮಿಷನ್ ಕೊಟ್ಟಿಲ್ಲ. ಈ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಬಂದ್ ಹಿನ್ನೆಲೆ ನಾಳೆ ಬೆಳಗ್ಗೆಯಿಂದ ಪೊಲೀಸ್ ಇಲಾಖೆ ಭದ್ರತೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 15 ಸಾವಿರಕ್ಕಿಂತ ಹೆಚ್ಚು ಪೊಲೀಸರು ನಾಳೆ ಕಾರ್ಯ ನಿರ್ವಹಿಸಲಿದ್ದಾರೆ. 5 ಜನ ಅಡಿಷನ್ ಸಿಪಿಗಳು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಿಯೋಜನೆ ಮಾಡಲಾಗುತ್ತದೆ. 35 ಕೆಎಸ್‍ಆರ್‍ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ನಾಳೆ ಬೆಳಗ್ಗೆಯಿಂದನೇ ಪ್ರತಿ ಏರಿಯಾದಲ್ಲಿ ಅಧಿಕಾರಿಗಳು ರೌಂಡನ್‍ನಲ್ಲಿ ಇರುತ್ತಾರೆ ಎಂದರು.

    ಬಂದ್ ಹಿನ್ನಲೆಯಲ್ಲಿ ಯಾರು ಕೂಡ ಕಾನೂನು ಭಂಗ ಮಾಡುವಂತಿಲ್ಲ. ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ಬಂದ್‍ಗಾಗಿ ಯಾರು ಪರ್ಮಿಷನ್ ಕೇಳಿಲ್ಲ. ನಾವು ಯಾವುದೇ ಪರ್ಮಿಷನ್‍ನನ್ನು ಕೊಟ್ಟಿಲ್ಲ. ಯಾರಾದರೂ ಚೇಷ್ಟೆ ಮಾಡಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ನಾಳೆ ಯಾವುದೇ ರ್ಯಾಲಿಗೂ ಅವಕಾಶ ಇರುವುದಿಲ್ಲ. ಯಾವುದೇ ರೀತಿಯ ಕಾನೂನು ಬಾಹೀರ ಘಟನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

    ಜನಸಾಮಾನ್ಯರು ನಿರ್ಭಯವಾಗಿ ಓಡಾಡ ಬಹುದು. ದಿನದ ಚಟುವಟಿಕೆಗಳಲ್ಲಿ ಎಂದಿನಂತೆ ಮಾಡಿಕೊಳ್ಳಬಹುದು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬೆಂಬಲ ಸೂಚಿಸಿಲ್ಲ ಅದನ್ನು ತಡೆಯುವ ಹಾಗೇ ಇಲ್ಲ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಲ್ ಪಂಥ್ ತಿಳಿಸಿದ್ದಾರೆ.

  • ತಂದೆ, ತಾಯಿ ಕಣ್ಣೆದುರೇ ಬಾಲಕ ಸಾವು- ಮುಗಿಲುಮುಟ್ಟಿದ ಆಕ್ರಂದನ

    ತಂದೆ, ತಾಯಿ ಕಣ್ಣೆದುರೇ ಬಾಲಕ ಸಾವು- ಮುಗಿಲುಮುಟ್ಟಿದ ಆಕ್ರಂದನ

    ಹಾಸನ: ತಂದೆ, ತಾಯಿಯ ಎದುರೇ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಯೋಗೇಶ್(4) ಎಂದು ಗುರುತಿಸಲಾಗಿದೆ. ಸ್ಕೂಟರ್‍ನಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಬಂದು ಡಿಕ್ಕಿ ಹೊಡೆದ ಪರಿಣಾಮ ತಂದೆ-ತಾಯಿ ಜೊತೆಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಯೋಗೇಶ್ ಮೃತಪಟ್ಟಿದ್ದಾನೆ.

    ಮೃತ ಯೋಗೇಶ್ ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ಕೆಲಸಕ್ಕೆ ಬಿಡಲು ಸ್ಕೂಟರ್‍ನಲ್ಲಿ ಯೊಗೇಶ್ ತಂದೆ ಹೊರಟಿದ್ದರು. ಅವರ ಜೊತೆ ಮಗ ಯೋಗೇಶ್ ಕೂಡ ಹೊರಟಿದ್ದ. ಆದರೆ ಅರಸೀಕೆರೆಯ ಎಪಿಎಂಸಿ ಮಾರುಕಟ್ಟೆ ಬಳಿ ಮಾರತಿ ಓಮ್ನಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಅಪಘಾತದಲ್ಲಿ ಮೃತ ಯೋಗೇಶ್ ತಂದೆ ಮತ್ತು ತಾಯಿಗೆ ಕೈ, ಕಾಲು, ತಲೆಗೆ ಗಾಯವಾಗಿದೆ. ಆದರೆ ಕಣ್ಣೆದುರೇ ಮಗನ ಸಾವು ಕಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

    ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

    ಮುಂಬೈ: ನಟನರೊಬ್ಬರ ಹೆಂಡತಿಗೆ ವೀಡಿಯೋ ಕರೆ ಮಾಡಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕಾಗಿ ಜೈಪುರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಪೂಜಾ ಜೈನ್ (32) ಜೈಪುರ ಮೂಲದವ ಎಂದು ತಿಳಿದುಬಂದಿದೆ. ನಟರೊಬ್ಬರ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

    ಮಹಿಳೆಗೆ ಕೆಲವು ದಿನಗಳ ಹಿಂದೆ ಆರೋಪಿ ಪೂಜಾ ಜೈನ್‍ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಮಹಿಳೆ ಯಾರೋ ಸಂಬಂಧಿ ಎಂದು ತಿಳಿದು ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಆರೋಪಿಯಿಂದ ಸಂದೇಶಗಳು ಬರಲು ಪ್ರಾರಂಭಿಸಿದವು. ನವೆಂಬರ್ 25 ರಂದು ಮಹಿಳೆಗೆ ಪೂಜಾ ಜೈನ್ ನಿಂದ ವಿಡಿಯೋ ಕರೆ ಒಂದು ಬಂದಿದೆ. ಅಲ್ಲಿ ಆರೋಪಿಗಳು ಅಶ್ಲೀಲ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವುದು ಕಂಡಿದೆ.

    ಮಹಿಳೆ ಈ ವಿಚಾರವನ್ನು ತನ್ನ ಪತಿಗೆ ಹೇಳಿದ್ದಾಳೆ. ಆರೋಪಿಯಿಂದ ಮತ್ತೆ ಕರೆ ಬರುವವರೆಗೂ ಈ ದಂಪತಿ ಕಾದಿದ್ದಾರೆ. ಒಂದು ದಿನ ಮತ್ತೆ ಅದೇ ವ್ಯಕ್ತಿಯಿಂದ ಕೆರೆ ಬಂದಿದೆ. ಆಗ ಅದನ್ನು ಯುವತಿಯ ಪತಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಈ ವಿಚಾರವಾಗಿ ಯುವತಿಯ ಪತಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

    ಡಿ ಬಿ ಮಾರ್ಗ್ ಪೊಲೀಸರು ಜೈಪುರಕ್ಕೆ ಐಪಿ ಅಡ್ರೆಸ್‍ನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಗುರುತಿಸಿದೆವು. ಆರೋಪಿ ರಾಹುಲ್ ಜೈನ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಾನೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಅವರು ನಿರುದ್ಯೋಗಿಗಳಾಗಿದ್ದರು. ಆಗ ಇಂತಹ ಕೆಲಸವನ್ನು ಮಾಡಿದ್ದಾರೆ. ಈ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕರೆ ಮಾಡಿದವರು ಅಪ್ಲಿಕೇಶನ್ ಬಳಸಿ ವೀಡಿಯೋ ಕರೆ ಮಾಡಿದ ಕಾರಣ ಮೊಬೈಲ್ ಸಂಖ್ಯೆ ಇರಲಿಲ್ಲ. ನಾವು ಅಪ್ಲಿಕೇಶನ್‍ನ ಕಚೇರಿಯನ್ನು ಸಂಪರ್ಕಿಸಿ ಐಪಿ ವಿಳಾಸವನ್ನು ತೆಗೆದುಕೊಂಡೆವು. ನಂತರ ಇಂಟರ್ನೆಟ್ ಸೇವೆ ಒದಗಿಸುವವರನ್ನು ಸಂಪರ್ಕಿಸಿ ಜೈಪುರದ ವ್ಯಕ್ತಿಯ ವಿಳಾಸವನ್ನು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿದೆವು ಎಂದು ಪೊಲೀಸರು ತಿಳಿಸಿದ್ದಾರೆ.

  • ಪೊಲೀಸ್ ಕೆಲಸ ಸಿಗ್ತಿದ್ದಂತೆ ವರಸೆ ಬದಲಿಸಿದ ಪ್ರಿಯಕರ- ಯುವತಿ ನೇಣಿಗೆ ಶರಣು

    ಪೊಲೀಸ್ ಕೆಲಸ ಸಿಗ್ತಿದ್ದಂತೆ ವರಸೆ ಬದಲಿಸಿದ ಪ್ರಿಯಕರ- ಯುವತಿ ನೇಣಿಗೆ ಶರಣು

    ಚಾಮರಾಜನಗರ: ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಣೆ ಮಾಡಿದ್ದಾನೆ ಎಂದು ಮನನೊಂದ ಯುವತಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರಿನ ಬೀಚಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನೇಣಿಗೆ ಶರಣಾದ ಯುವತಿಯನ್ನು ನಂದಿನಿ(19) ಎಂದು ಗುರುತಿಸಲಾಗಿದೆ. ನಂದಿನಿ ಅದೇ ಗ್ರಾಮದ ಯೋಗೇಶ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರಿಂದಲೂ ಪ್ರೀತಿಗೆ ಒಪ್ಪಿಗೆ ಇತ್ತು. ಅಲ್ಲದೆ ಇಬ್ಬರು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ತಿಳಿದು ಮದುವೆ ಮಾಡಿಕೊಡಲು ಕುಟುಂಬಸ್ಥರು ಕೂಡ ಒಪ್ಪಿಕೊಂಡಿದ್ದರು.

    ಕಳೆದ ಆರು ತಿಂಗಳ ಹಿಂದೆ ಎರಡೂ ಮನೆಯವರು ಕುಳಿತು ಮದುವೆ ಮಾತು ಕತೆಯನ್ನು ನಡೆಸಿದ್ದರು. ಆದರೆ ಈ ಮಧ್ಯೆ ಯೋಗೇಶ್ ಗೆ ಪೊಲೀಸ್ ಕೆಲಸ ಸಿಕ್ಕಿತ್ತು. ಕೆಲಸ ಸಿಗುತ್ತಿದಂತೆ ಯೋಗೇಶ್ ತನ್ನ ವರಸೆ ಬದಲಾಯಿಸಿದ್ದಾನೆ. ನಂದಿನಿಯನ್ನು ಮದುವೆ ಯಾಗಲು ನಿರಾಕರಿಸಿದ್ದಾನೆ.

    ಪ್ರಿಯತಮನ ಹೊಸ ವರಸೆಯಿಂದ ಮನನೊಂದ ನಂದಿನಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಸಂಬಂಧ ನಂದಿನಿ ಪೋಷಕರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.