Tag: Public Yb

  • ಸೆಕ್ಸ್ ಸಿನ್ಮಾ ನೋಡಿ ಗೆಳೆಯನ 60 ವರ್ಷದ ತಾಯಿಯ ಮೇಲೆ ರೇಪ್

    ಸೆಕ್ಸ್ ಸಿನ್ಮಾ ನೋಡಿ ಗೆಳೆಯನ 60 ವರ್ಷದ ತಾಯಿಯ ಮೇಲೆ ರೇಪ್

    – 21 ವರ್ಷದ ಕಾಮುಕನ ಬಂಧನ
    – ಹಲ್ಲೆಗೈದು ಕೋಣೆಯಲ್ಲಿ ಲಾಕ್ ಮಾಡಿ ಎಸ್ಕೇಪ್

    ಜೈಪುರ: ಸೆಕ್ಸ್ ಫಿಲಂ ನೋಡಿ ಗೆಳೆಯನ ತಾಯಿಯನ್ನ ಅತ್ಯಾಚಾರಗೈದಿರುವ ಭಯಾನಕ, ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    21 ವರ್ಷದ ವಿಕಾಸ್ ಅಲಿಯಾಸ್ ನೇವಲಾ ಕಾಮುಕ ಯುವಕ. ಆನ್‍ಲೈನ್ ಸೆಕ್ಸ್ ಸಿನಿಮಾಗಳನ್ನು ನೋಡಿದ ವಿಕಾಸ್, ಮನೆಯಲ್ಲಿ ಒಂಟಿಯಾಗಿದ್ದ ಗೆಳೆಯನ 60 ವರ್ಷದ ವಿಧವೆ ತಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ವಿಕಾಸ್ ಮದ್ಯ ಸೇವನೆ ಮಾಡಿದ್ದ ಎಂದು ತಿಳಿದು ಬಂದಿದೆ. ಅತ್ಯಾಚಾರದ ಬಳಿಕ ಮಹಿಳೆಯ ಮೇಲೆ ಹಲ್ಲೆಗೈದಿರುವ ವಿಕಾಸ್, ವಿಷಯ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಅತ್ಯಾಚಾರಿಗಳ ಪುರುಷತ್ವ ಹರಣ – ಪಾಕಿಸ್ತಾನದಲ್ಲಿ ಕಠಿಣ ಕಾನೂನು ಜಾರಿ

    ಕೊನೆಗೆ ಮಹಿಳೆಯನ್ನ ಮನೆಯಲ್ಲಿ ಬಂಧಿಸಿ ಎಸ್ಕೇಪ್ ಆಗಿದ್ದಾನೆ. ಮಹಿಳೆ ಸಹಾಯಕ್ಕೆ ಕೂಗುತ್ತಿರುವ ಧ್ವನಿ ಕೇಳಿದ ನೆರೆಹೊರೆಯವರು ಬಾಗಿಲು ತೆರೆದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನ ಬರ್ಡೋಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ

    ಭಾನುವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದ್ದು, ಆರೋಪಿಯನ್ನ ಬಂಧಿಸಲಾಗಿದೆ. ಭಾನುವಾರ ಪೋರ್ನ್ ವೆಬ್‍ಸೈಟ್ ಗಳಲ್ಲಿ ಸಿನಿಮಾ ನೋಡಿದ್ದ ವಿಕಾಸ್, ಗೆಳೆಯನ ಮನೆಗೆ ತೆರಳಿದ್ದಾನೆ. ನಶೆಯಲ್ಲಿದ್ದ ವಿಕಾಸ್ ಗೆಳೆಯನ ತಾಯಿಯನ್ನ ಅತ್ಯಾಚಾರಗೈದು ಎಸ್ಕೇಪ್ ಆಗಿದ್ದನು. ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುನಿಲ್ ಜಂಗಿಡ್ ಹೇಳಿದ್ದಾರೆ.  ಇದನ್ನೂ ಓದಿ: 20 ವರ್ಷದ ಪಾಪಿ ಕಾಮುಕ 90ರ ಅಜ್ಜಿಯನ್ನೇ ರೇಪ್ ಮಾಡಿದ!

     

  • ಅಜಾಗರೂಕತೆ ಅಲ್ಲ, ಆಕಸ್ಮಿಕ: ಸಾವು ಗೆದ್ದ ರೋಹಿತ್ ಮಾತು

    ಅಜಾಗರೂಕತೆ ಅಲ್ಲ, ಆಕಸ್ಮಿಕ: ಸಾವು ಗೆದ್ದ ರೋಹಿತ್ ಮಾತು

    ಉಡುಪಿ: ಮರವಂತೆಯಲ್ಲಿ ಬೋರ್ ವೆಲ್‍ನ ಮಣ್ಣು ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾವು ಗೆದ್ದ ರೋಹಿತ್ ಖಾರ್ವಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಇದು ಅಜಾಗರೂಕತೆ ಅಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂದಿದ್ದಾರೆ.

    ನಾವು ನಾಲ್ಕು ಜನ ಬೋರ್‍ವೆಲ್ ಕೆಲಸಕ್ಕೆ ತೆರಳಿದೆವು. ನಮ್ಮ ಕೆಲಸ ಅಂತಿಮ ಹಂತದಲ್ಲಿತ್ತು. ಏಕಾಏಕಿ ಸುತ್ತ ಇದ್ದ ಮಣ್ಣು ಸುಮಾರು ಹದಿನೈದು ಅಡಿ ಕೆಳಕ್ಕೆ ಕುಸಿಯಿತು. ನಮ್ಮದು ಯಾವುದೇ ಕಾರಣಕ್ಕೆ ಅಜಾಗರೂಕತೆಯಲ್ಲ. ಆಕಸ್ಮಿಕವಾಗಿ ನಡೆದ ಘಟನೆ ಇದು. 25 ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಹಿಂದೆಂದೂ ಹೀಗಾಗಿಲ್ಲ. ಗದ್ದೆಯ ಮಣ್ಣು ಮೃದುವಾಗಿದ್ದರಿಂದ ನಾನು ಕುಸಿದು ಬಿದ್ದೆ ಎಂದರು.

    ನನ್ನ ಎದೆಯ ಮಟ್ಟದವರೆಗೆ ಮಣ್ಣು ಬಿದ್ದಿತ್ತು. ನಾನೇ ಮೇಲೇಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ, ಈ ತರದ ಅನುಭವ ಇದೇ ಮೊದಲು ಎಂದು ಉಡುಪಿಯ ಕುಂದಾಪುರದಲ್ಲಿ ರೋಹಿತ್ ಹೇಳಿದರು.

    ರೋಹಿತ್ ಖಾರ್ವಿ ರಕ್ಷಣೆ ಮಾಡಿದ ತಂಡಕ್ಕೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಮರವಂತೆಯ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ 25 ಸಾವಿರ ನಗದು ನೀಡಿ, ಮರವಂತೆಯಲ್ಲೇ ಸನ್ಮಾನ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಮೊತ್ತ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

     

    ಯುವಕ ರೋಹಿತ್ ಖಾರ್ವಿಗೆ ಯಾವುದೇ ಗಾಯವಾಗದಂತೆ ರಕ್ಷಣೆಯಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಎಲ್ಲರಿಗೂ ಶಕ್ತಿ ಕೊಟ್ಟಳು. ಅಗ್ನಿಶಾಮಕ, ಜಿಲ್ಲಾಡಳಿತ ಕಾರ್ಯ ಯಶಸ್ವಿಯಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರು, ಮಾಧ್ಯಮಗಳು ನಿರಂತರ ಕೆಲಸ ಮಾಡಿವೆ. ಅವರೆಲ್ಲರಿಗೂ ಅಭಿನಂದನೆ ಎಂದು ಹೇಳಿದರು.