Tag: Public Works Department

  • ಕೆಲಸ ಮಾಡದೇ ಹೋದ್ರೆ ಬೂಟಿಂದ ಹೊಡಿತೀನಿ: ನಾಲಗೆ ಹರಿಬಿಟ್ಟ ಉಮೇಶ್ ಕತ್ತಿ

    ಕೆಲಸ ಮಾಡದೇ ಹೋದ್ರೆ ಬೂಟಿಂದ ಹೊಡಿತೀನಿ: ನಾಲಗೆ ಹರಿಬಿಟ್ಟ ಉಮೇಶ್ ಕತ್ತಿ

    ವಿಜಯಪುರ: ಕೆಲಸ ಮಾಡಿದರೆ ಹೂ ಮಾಲೆ ಹಾಕ್ತೀನಿ, ಇಲ್ಲಂದ್ರೆ ಬೂಟಿನಿಂದ ಹೊಡಿತೀನಿ ಅಂತ ಸಚಿವ ಉಮೇಶ್ ಕತ್ತಿ ಲೋಕೋಪಯೋಗಿ ಇಲಾಖೆ ಎಇಇ ಮೇಲೆ ದರ್ಪದ ಮಾತುಗಳನ್ನಾಡಿದ್ದಾರೆ.

    ಬುಧವಾರ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆಂದು ಉಮೆಶ್ ಕತ್ತಿ ತೆರಳಿದ್ದರು. ಈ ವೇಳೆ ಕಾರ್ಯನಿರ್ವಾಹಕ ಅಭಿಯಂತರ ಸಿಬಿ ಚಿಕ್ಕಲಗಿಗೆ ಕೆಲಸ ಮಾಡಿಲ್ಲ ಎಂದರೆ ಬೂಟಿನಿಂದ ಹೊಡೆಯುತ್ತೇನೆ ಎನ್ನುತ್ತ ನಾಲಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಗೆದ್ದಿರೋದು 2024ರಲ್ಲಿ ಅಲ್ಲ, ಮೈತ್ರಿ ಮುರಿದ ಬಳಿಕ ಸಿಎಂ ನಿತೀಶ್ ವಾಗ್ದಾಳಿ

    ನವೆಂಬರ್-ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದು ಕಾರ್ಯನಿರ್ವಾಹಕ ಎಇಇ ಹೇಳುತ್ತಿದ್ದಂತೆ ಏಕಾಏಕಿ ನಾಲಗೆ ಹರಿ ಬಿಟ್ಟ ಉಮೇಶ್ ಕತ್ತಿ, ನಾನು ಮಾರ್ಚ್ ತಿಂಗಳೊಳಗೆ ಕಾಮಗಾರಿ ಮುಗಿಸಿ ಎಂದಿದ್ದೇನೆ. ಡಿಸೆಂಬರ್‌ಗೆ ಕಾಮಗಾರಿ ಪೂರ್ಣವಾದರೆ ನಾನೇ ಬಂದು ಹೂ ಮಾಲೆ ಹಾಕುತ್ತೇನೆ. ಇಲ್ಲದೇ ಹೋದರೆ ಬೂಟಿನಿಂದಲೇ ಹೊಡೆಯುತ್ತೇನೆ, ಈ ರೀತಿ ಕಾಂಪ್ರಮೈಸ್ ಇದೆ ಎಂದು ಕತ್ತಿ ಮಾತನಾಡಿದ್ದಾರೆ. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    Live Tv
    [brid partner=56869869 player=32851 video=960834 autoplay=true]

  • ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

    ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

    ಕಾರವಾರ: ಮಳೆಯಿಂದ ಹೊಂಡ, ಗುಂಡಿಗಳಾದ ರಸ್ತೆ ಸರಿಪಡಿಸಿ ಎಂದು ಪ್ರತಿಭಟನೆಗೆ ಬಂದ ಗ್ರಾಮಸ್ಥರೇ ತಮ್ಮೂರಿನ ರಸ್ತೆ ಸರಿಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಉದ್ಯಮ ನಗರದಲ್ಲಿ ನಡೆದಿದೆ.

    ಅಧಿಕ ಮಳೆಯಿಂದ ಉದ್ಯಮ ನಗರದ ಯಲ್ಲಾಪುರ ತಟಗಾರ ರಸ್ತೆ ಗುಂಡಿಗಳು ಬಿದ್ದು ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಇದರ ದುರಸ್ತಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಕೂಡ ಮಂಜೂರಾಗಿತ್ತು. ಆದರೇ ಮಳೆ ನೆಪ ಹೇಳಿ ಅಧಿಕಾರಿಗಳು ರಸ್ತೆ ಸರಿಪಡಿಸಿರಲಿಲ್ಲ. ಹೀಗಾಗಿ ಈ ಊರಿನ ಜನ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದರು. ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಇದನ್ನೂ ಓದಿ:ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

    ಈ ಹಿನ್ನೆಲೆಯಲ್ಲಿ ಕೋಪಗೊಂಡ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಆದರೂ ಕೂಡ ಗ್ರಾಮಸ್ಥರಿಗೆ ಅಧಿಕಾರಿಗಳು ಸ್ಪಂದಿಸಲೇ ಇಲ್ಲ. ಅಧಿಕಾರಿಗಳು ಇಂದು ರಸ್ತೆ ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಕಾಯುತ್ತಿದ್ದ ಜನರು ಬೇಸತ್ತು, ಕೊನೆಗೆ ತಾವೇ ರಸ್ತೆ ಸರಿಪಡಿಸಿದ್ದಾರೆ.

    ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲ ಎಂದು ಅರಿತು ಜನರೇ ತಮ್ಮೂರಿನ ರಸ್ತೆಗಳನ್ನು ಸರಿಪಡಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಸರ್ಕಾರ ಹಣ ನೀಡಿದ್ದರೂ ಅಧಿಕಾರಿಗಳು ಮಾತ್ರ ಕಾಮಗಾರಿ ಮಾಡಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ‘ದೇವರ’ ಇಲಾಖೆಗೂ ಕೈ ಹಾಕಿದ ‘ಸೂಪರ್’ ಸಿಎಂ

    ‘ದೇವರ’ ಇಲಾಖೆಗೂ ಕೈ ಹಾಕಿದ ‘ಸೂಪರ್’ ಸಿಎಂ

    ಬೆಂಗಳೂರು: `ದೇವರ’ ಇಲಾಖೆಗೂ ಸಿಎಂ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈ ಹಾಕಿದ್ದು, ಮುಜರಾಯಿ ಇಲಾಖೆ ವ್ಯವಹಾರದಲ್ಲೂ ಮಧ್ಯಪ್ರವೇಶ ಮಾಡಿದ್ದಾರೆ.

    ಮುಜರಾಯಿ ಇಲಾಖೆಯನ್ನು ಕಾಂಗ್ರೆಸ್ಸಿನ ಪರಮೇಶ್ವರ್ ನಾಯ್ಕ್ ಅವರು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಕಲ್ಯಾಣ ಮಂಟಪ ಒಂದರ ಗುತ್ತಿಗೆಯನ್ನು ಶೃಂಗೇರಿ ಮಠಕ್ಕೆ ಕೊಡುವಂತೆ ರೇವಣ್ಣ ಅವರು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದು ಕಾನೂನು ಮೀರಿ ಕಲ್ಯಾಣ ಮಂಟಪ ಗುತ್ತಿಗೆ ನೀಡಲು ಹೊರಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ರೇವಣ್ಣ ಅವರು ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು, ಬೆಂಗಳೂರಿನ ಕಲ್ಯಾಣ ಮಂಟಪವನ್ನು ಶೃಂಗೇರಿ ಪೀಠಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ತಿಳಿಸಿದ್ದಾರೆ.

    ಈ ಬಗ್ಗೆ ಸಚಿವರಿಂದ ಪತ್ರ ಪಡೆದಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದುಡ್ಡಿಲ್ಲ. ಆದ್ದರಿಂದ ಪೀಠಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ಹಿಂದೆ ಸಚಿವರ ಮನೆಯ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದ ಸರ್ಕಾರ ಇಂದು ಸಾರ್ವಜನಿಕರ ಉಪಯೋಗಕ್ಕೆ ಬರುವ ಕಲ್ಯಾಣ ಮಂಟಪಕ್ಕೆ ಹಣ ಇಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಈ ಯೋಜನೆಯನ್ನು ಪೀಠಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಸಗೀಕರಣ ಗೊಳಿಸಿ ಹಣ ಮಾಡುವ ಉದ್ದೇಶ ಹೊಂದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

    ಪತ್ರದಲ್ಲೇನಿದೆ:
    ಬಸವನಗುಡಿಯಲ್ಲಿರುವ ಮುಜರಾಯಿಗೆ ಸೇರಿದ ಕಾರಂಜಿ ಅಂಜನೇಯ ದೇಗುಲದ ಅವರಣದಲ್ಲಿ ಕಲ್ಯಾಣ ಮಂಟಪ ಇದೆ. ಈ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದೆ. ಪರಿಷ್ಕೃತ ದರ ಐದುಕೋಟಿಯಷ್ಟು ಆಗಲಿದೆ. ಆದರೆ ದೇಗುಲದ ಖರ್ಚಿನಲ್ಲಿ ಕೇವಲ 66 ಲಕ್ಷ ಭರಿಸಲು ಸಾಧ್ಯವಿದೆ. ಉಳಿದ ಖರ್ಚನ್ನು ಭರಿಸಲು ಸಾಧ್ಯವಿಲ್ಲ. ಅನುದಾನದ ಕೊರತೆ ಇದೆ. ಈ ಕಾರಣಕ್ಕೆ ಲೋಕೋಪಯೋಗಿ ಸಚಿವರು ಈ ಕಲ್ಯಾಣ ಮಂಟಪದ ಗುತ್ತಿಗೆಯನ್ನು ಶೃಂಗೇರಿ ಪೀಠ ಕ್ಕೆ ವರ್ಗಾಯಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಹಾಗೂ ಶೃಂಗೇರಿ ಪೀಠ ಎರಡು ನಿಭಾಯಿಸಿ ಕಲ್ಯಾಣ ಮಂಟಪದ ಲಾಭವನ್ನು ಸರ್ಕಾರ ಹಾಗೂ ಪೀಠ ಶೇ.50 ರಂತೆ ಹಂಚಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಹಾಗಾಗಿ ಈ ಮನವಿಯನ್ನು ಪರಿಗಣಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿದ್ದಾರೆ.

    ನಿಯಮ ಏನು ಹೇಳುತ್ತೆ?
    ನಗರದ ಮುಜರಾಯಿ ಇಲಾಖೆ ಸೇರಿದ ದೇವಾಲಯದ ಈ ಕಲ್ಯಾಣ ಮಂಟಪ ನಿರ್ಮಾಣವನ್ನು ಮಾಡಲಾಗುತ್ತಿದೆ. ಮುಜರಾಯಿಗೆ ಸೇರಿದ ಕಟ್ಟಡ, ಆಸ್ತಿಯನ್ನು ಸಾರ್ವಜನಿಕ ಹರಾಜಿನ ಮೂಲಕವೇ ಗುತ್ತಿಗೆ ನೀಡಬೇಕ್ಕು ಎನ್ನುವ ನಿಯಮವಿದೆ.

    ಈ ಹಿಂದೆ ಸಂಪಗಿರಾಮನಗರದ ದೇಗುಲದ ಜಾಗವನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ತಗಾದೆಯಾದಾಗ ಮುಜರಾಯಿ ಇಲಾಖೆ ತನಗೆ ಸೇರಿದ ಜಾಗವನ್ನು ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿತ್ತು. ಕಾಯ್ದೆ ಹೀಗಿದ್ದರೂ ಧಾರ್ಮಿಕ ಇಲಾಖೆಯ ನಡೆ ಅಚ್ಚರಿ ಮೂಡಿಸಿದೆ. ಈ ಗುತ್ತಿಗೆ ನೀಡಲು ದೇವಾಲಯದ ಸಮಿತಿಯೇ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಮನವಿ ಹಿನ್ನೆಲೆಯಲ್ಲಿ ಕಾನೂನು ಅಂಶಗಳನ್ನು ಪರಿಗಣನೆ ತೆಗೆದುಕೊಳ್ಳದ ಸಚಿವರು ನೇರ ಪತ್ರ ಬರೆದಿದ್ದಾರೆ.

    ಮುಜರಾಯಿ ಇಲಾಖೆ ಆಯುಕ್ತರು ಕೂಡ ಸಚಿವರ ಪತ್ರ ಬರುತ್ತಿದಂತೆ ನಿಯಮ ಮೀರಿ ಪತ್ರ ಬರೆದಿದ್ದಾರೆ. ಇತ್ತ ದೇವಸ್ಥಾನದ ಮುಂಭಾಗದಲ್ಲಿ “ಕಲ್ಯಾಣ ಮಂಟಪಕ್ಕಾಗಿ ದೇಣಿಗೆ ನೀಡಿ ರಸೀದಿ ಪಡೆದುಕೊಳ್ಳಿ” ಎಂದು ಬೋರ್ಡ್ ಹಾಕಲಾಗಿದೆ. ಹಾಗದರೆ ದೇವಾಲಯದ ಕಲ್ಯಾಣ ಮಂಟಪ ನಿರ್ಮಾಣ ಮಾಡುವಲ್ಲಿ ಜನ ಕೊಟ್ಟಿರುವ ದುಡ್ಡು ಎಲ್ಲಿಗೆ ಹೋಗುತ್ತೆ ಎಂಬ ಬಹುದೊಡ್ಡ ಅನುಮಾನವೂ ಮೂಡಿದೆ. ಇತ್ತ ಈ ಕುರಿತು ವರದಿ ಮಾಡಲು ತೆರಳಿದರೆ ದೇಗುಲದ ದೃಶ್ಯಾವಳಿ ತೆಗೆದುಕೊಳ್ಳಲು ಖಾಸಗಿ ವ್ಯಕ್ತಿಗಳು ಪಬ್ಲಿಕ್ ಟಿವಿ ಕ್ಯಾಮೆರಾಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಕಲ್ಯಾಣ ಮಂಟಪ ಕಟ್ಟಲು ದುಡ್ಡಿಲ್ಲ ನೀವು ಹಣ ನೀಡುತ್ತೀರಾ ಎಂದು ಪಬ್ಲಿಕ್ ಟಿವಿ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ.

    ಸಚಿವರು ಏನು ಹೇಳಿದ್ರು:
    ಪಬ್ಲಿಕ್ ಟಿವಿ ನೇರ ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ರೊಂದಿಗೆ ಸಂಪರ್ಕ ಮಾಡಿದ್ದು, ಸಿಎಂ ಅವರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ರಾಜ್ಯದ ಮುಖ್ಯ ದೇವಾಲಯದ ಅಭಿವೃದ್ಧಿಗೆ ನಮ್ಮ ಇಲಾಖೆಯಿಂದ ಹಣ ನೀಡಲಾಗಿತ್ತು. ಆದ್ದರಿಂದ ಸಭೆಯಲ್ಲಿ ಲೋಕೋಪಯೋಗಿ ಸಚಿವರು ಭಾಗವಹಿಸಿದ್ದರು. ಸದ್ಯ ಭಕ್ತರ ಆಶಯದೊಂದಿಗೆ ದೇವಾಲಯದ ಅಭಿವೃದ್ಧಿ ಮಾಡಲಾಗಿದೆ ಅಷ್ಟೇ. ಆದರೆ ನಾವು ಯಾರಿಗೂ ಗುತ್ತಿಗೆ ನೀಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದರು. ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಹಣ ಇಲ್ಲವೇ ಎಂಬ ಪ್ರಶ್ನೆಗೆ ಗರಂ ಆದ ಸಚಿವರು ಕರೆ ಕಡಿತಗೊಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸ್ವಕ್ಷೇತ್ರ ಚನ್ನಪಟ್ಟಣ. ಸಿಎಂ ಸ್ವಕ್ಷೇತ್ರದಲ್ಲೇ ಅವರ ಸಹೋದರ ಎಚ್.ಡಿ ರೇವಣ್ಣರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಸರ್ಕಾರಿ ನೀತಿ ನಿಯಮಗಳನ್ನೇ ಗಾಳಿಗೆ ತೂರಿ ಮೂರೇ ದಿನಗಳಲ್ಲಿ ಸೀಕ್ರೆಟ್ ಟೆಂಡರ್ ನಡೆಸಲಾಗಿದೆ. ಇತ್ತ ಅನಿತಾ ಮೇಡಂ ಕ್ಷೇತ್ರದಲ್ಲೂ ಸೀಕ್ರೆಟ್ ಟೆಂಡರ್ ನಡೀತಿದೆ.

    ಹೌದು. ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸಿಎಂ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿದೆ. ಅದು ಕೂಡ ತಮ್ಮನ ಕ್ಷೇತ್ರದಲ್ಲಿ ಅಣ್ಣನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿಎಂ ಅನುಯಾಯಿಗಳಿಗೆ ಸೀಕ್ರೆಟ್ ಟೆಂಡರ್ ಮೂಲಕ ಕಾಮಗಾರಿ ನೀಡಿರುವುದು ಉಳಿದ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿಎಂಜಿಆರ್ ವೈ ಯೋಜನೆಯಡಿಯಲ್ಲಿ ಚನ್ನಪಟ್ಟಣ ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ 1.90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸೀಕ್ರೆಟ್ ಟೆಂಡರ್ ಖಂಡಿಸಿ ರಾಮನಗರದ ಲೋಕೋಪಯೋಗಿ ಇಲಾಖೆ ಮುಂದೆ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

    ಯಾವುದೇ ಕಾಮಗಾರಿಗಳು ನಡೆಯಬೇಕಿದ್ರೂ ಇಲಾಖೆಗೆ ಅನುದಾನ ಬಂದ ತಕ್ಷಣ ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಆನಂತರ ನೋಟಿಫಿಕೇಷನ್ ಹೊರಡಿಸಬೇಕು. ಅಲ್ಲದೆ ನಾಮಫಲಕದಲ್ಲಿ ನೋಟಿಸ್ ಹಾಗೂ ಪತ್ರಿಕಾ ಜಾಹಿರಾತುಗಳನ್ನು ನೀಡಬೇಕು. ಆದ್ರೆ ಸರ್ಕಾರದ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಸಿಎಂ ಕುಮಾರಸ್ವಾಮಿಯವರ ಅನುಯಾಯಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು ಗುತ್ತಿಗೆದಾರ ಪ್ರೇಮ್ ಕುಮಾರ್ ಗರಂ ಆಗಿದ್ದಾರೆ.

    ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲೂ ಟೆಂಡರ್ ಗೋಲ್‍ಮಾಲ್:
    ಕೇವಲ ಚನ್ನಪಟ್ಟಣ ಮಾತ್ರವಲ್ಲದೆ ರಾಮನಗರ ಕ್ಷೇತ್ರದಲ್ಲೂ ಕೂಡ ಇದೇ ಪರಿಸ್ಥಿತಿಯಿದ್ದು ಸುಮಾರು 1 ಕೋಟಿಯಷ್ಟು ಕಾಮಗಾರಿ ಶಾಸಕಿ ಅನಿತಾ ಕುಮಾರಸ್ವಾಮಿ ಬೆಂಬಲಿಗರ ಪಾಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಟ್ಟಾರೆ ಸಿಎಂ ಕ್ಷೇತ್ರದಲ್ಲೇ ಅವರ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಯ ಟೆಂಡರ್‍ನಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದು ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!

    ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!

    ಬೆಂಗಳೂರು: ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣನವರು ಒಂದೇ ದಿನ ರಾತ್ರಿ ಬರೋಬ್ಬರಿ 206 ಎಂಜಿನಿಯರ್ ಗಳನ್ನು ಎತ್ತಂಗಡಿ ಮಾಡಿ ಮತ್ತೊಮ್ಮೆ ತಮ್ಮ ಸಾರ್ವಭೌಮ ಮೆರೆದಿದ್ದಾರೆ.

    ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಖ್ಯಾತಿ ಹೊಂದಿರುವ ಎಚ್.ಡಿ ರೇವಣ್ಣನವರು, ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಮಾಡಿದ್ದೇ ರೂಲ್ಸ್, ಹೇಳಿದ್ದೆ ಫೈನಲ್ ಆಗಿದೆ. ಅಧಿಕಾರ ಪಡೆದ ಎರಡೇ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‍ಗಳು ಎತ್ತಂಗಡಿಯಾಗಿದ್ದು. ಇದೀಗ ಮತ್ತೆ ರಾತ್ರೋ ರಾತ್ರಿ ಎಂಜಿನಿಯರ್ ಗಳ ಎತ್ತಂಗಡಿ ಮಾಡಿದ್ದಾರೆ.

    ರೇವಣ್ಣನವರು ಕಳೆದ ಬುಧವಾರ ಇಲಾಖೆಯಲ್ಲಿ ಬಿಗ್ ಆಪರೇಷನ್ ಮಾಡಿದ್ದು, ಒಂದೇ ದಿನ ರಾತ್ರೋ ರಾತ್ರಿ ಬರೋಬ್ಬರಿ 206 ಎಂಜಿನಿಯರುಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಅವರ ಆಪ್ತ ಎಂಜಿನಿಯರ್ ಗಳು ಆಯಾ ಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಭಾಗ್ಯ ಹೊಂದಿ ನಿಯೋಜನೆಗೊಂಡಿದ್ದಾರೆ ಎಂದು ತಿಳಿಬಂದಿದೆ.

    ಲೋಕೋಪಯೋಗಿ ಇಲಾಖೆ ಸೇರಿದಂತೆ ಒಳನಾಡು ಬಂದರು ಸಾರಿಗೆ ಇಲಾಖೆಯಿಂದ ಆದೇಶ ರವಾನೆಯಾಗಿದ್ದು, ಈ ಹಿನ್ನೆಲೆಯಲ್ಲಿ 206 ಎಂಜಿನಿಯರ್ ಗಳನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿದೆ. ವಿವಿಧ ಇಲಾಖೆಗಳಿಗೆ ನೇಮಕವಾಗಿದ್ದ ಎಂಜಿನಿಯರ್ ಗಳು, ಪ್ರಸ್ತುತ ಇಲಾಖೆಯಿಂದ ವಿವಿಧ ಸ್ಥಳಗಳಿಗೆ ವರ್ಗಾವಣೆಗೊಂಡಿದ್ದಾರೆ. ಇದನ್ನೂ ಓದಿ: ಅವಧಿ ಮುಗಿದ್ರೂ 115ಕ್ಕೂ ಹೆಚ್ಚು ಎಂಜಿನಿಯರ್ ಗಳು ಬೆಂಗ್ಳೂರಲ್ಲೆ ಠಿಕಾಣಿ!

    ಮಾಧ್ಯಮಗಳಿಗೆ ವರ್ಗಾವಣೆ ವಿಷಯ ಗೊತ್ತಾಗದಂತೆ ರೇವಣ್ಣ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಮಾಧ್ಯಮಗಳಿಂದ ಮಾಹಿತಿ ಮುಚ್ಚಿಟ್ಟಿದೆ. ಅಲ್ಲದೇ ಇನ್ನುಮುಂದೆ ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡೋ ಹಾಗಿಲ್ಲ. ಮಾಹಿತಿ ಕೊಟ್ಟರೆ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲಿಖಿತ ಆದೇಶ ಹೊರಡಿಸಿ ಸೂಪರ್ ಸಿಎಂ ಎಚ್ಚರಿಸಿರುವುದಾಗಿ ತಿಳಿದುಬಂದಿದೆ.