Tag: Public Welfare

  • ಜನಕಲ್ಯಾಣ ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ: ಸುಪ್ರೀಂಕೋರ್ಟ್

    ಜನಕಲ್ಯಾಣ ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ: ಸುಪ್ರೀಂಕೋರ್ಟ್

    ನವದೆಹಲಿ: ಜನಕಲ್ಯಾಣ ಯೋಜನೆ ಅಥವಾ ಕಾನೂನುಗಳನ್ನು ರೂಪಿಸುವಾಗ ಸರ್ಕಾರಗಳು ರಾಜ್ಯದ ಬೊಕ್ಕಸದ ಮೇಲೆ ಬೀರಬಹುದಾದ ಆರ್ಥಿಕ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಯೋಜನೆಗಳಿಗೆ ಬಜೆಟ್ ಅನುದಾನವನ್ನು ಮಿತಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

    ಈ ವಿಚಾರದಲ್ಲಿ ದೂರದೃಷ್ಟಿ ಇಲ್ಲದೇ ಇರುವುದಕ್ಕೆ ಉತ್ತಮ ಉದಾಹರಣೆ ಶಿಕ್ಷಣ ಹಕ್ಕು ಕಾಯ್ದೆ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಶಿಕ್ಷಣದ ಹಕ್ಕು ಒಳ್ಳೆಯ ಉದಾಹರಣೆ ಕಾಯ್ದೆಯಾಗಿ ರೂಪಿಸಲಾಗಿದೆ. ಆದರೆ ಶಾಲೆಗಳು ಎಲ್ಲಿವೆ? ರಾಜ್ಯ ಸರ್ಕಾರಗಳಿಗೆ ಶಿಕ್ಷಕರು ಎಲ್ಲಿಂದ ದೊರೆಯಬೇಕು? ಸಿಬ್ಬಂದಿಯನ್ನು ರೂಪಿಸುವುದು ಹೇಗೆ? ಎಂಬುದನ್ನೂ ತಿಳಿದಕೊಳ್ಳಬೇಕು ಕಿವಿಮಾತು ಹೇಳಿದೆ. ಇದನ್ನೂ ಓದಿ: ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    VIDHANASAUDHA

    ಇದನ್ನು ಇಡಿಯಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಇದು ಕೇವಲ ಬಾಯಿಮಾತಿನ ಕೆಲಸವಾಗುತ್ತದೆ ಎಂದು ಲಲಿತ್ ಸಲಹೆ ನೀಡಿದ್ದಾರೆ. ಕೆಲವು ರಾಜ್ಯಗಳಲ್ಲಿ, ರಾಜ್ಯದ ಭೌಗೋಳಿಕ ಪ್ರಸರಣ ಮತ್ತು ವಿಶಾಲತೆಗೆ ಹೋಲಿಸಿದರೆ ರಕ್ಷಣಾ ಅಧಿಕಾರಿಗಳ ಸಂಖ್ಯೆಯು ಕಡಿಮೆಯಾಗಿದೆ. ಹಾಗಾಗಿ ಮೊದಲು, ದತ್ತಾಂಶವನ್ನು ಪಡೆದುಕೊಳ್ಳಬೇಕು. ನಂತರ ರಾಜ್ಯಕ್ಕೆ ಎಷ್ಟು ಸಿಬ್ಬಂದಿ ಅಗತ್ಯವಿದೆ? ಎಂಬ ಅಂಕಿ-ಅಂಶಗಳನ್ನು ಅಭಿವೃದ್ಧಿಪಡಿಸಬೇಕು. ನಂತರ ಅವರಿಗೆ ಮಾದರಿಗಳನ್ನು ನೀಡಿ ಅಗತ್ಯವಿರುವ ಹಣವನ್ನು ನೀಡಬೇಕು ಎಂದು ನ್ಯಾಯಮೂರ್ತಿ ಭಟ್ ವಿವರಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ, ವೋಟರ್‌ ಐಡಿ, ಆಧಾರ್‌ ನೀಡಿ: ಸುಪ್ರೀಂ ಕೋರ್ಟ್‌

    ಅಲ್ಲದೆ ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರಿಗೆ ಪರಿಣಾಮಕಾರಿ ಕಾನೂನು ನೆರವು ನೀಡಲು ದೇಶಾದ್ಯಂತ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ರೂಪಿಸಲಾಗಿದ್ದು, ಇದರ ಅಡಿಯಲ್ಲಿ ಒದಗಿಸಲಾದ ಮೂಲಸೌಕರ್ಯದ ಕೊರತೆ ನೀಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕಾಯ್ದೆ ಅಡಿಯಲ್ಲಿ ಸಲ್ಲಿಸಿದ್ದ ಮಹಿಳೆಯರು ವಾಸಿಸಲು ರಕ್ಷಣಾ ಗೃಹಗಳನ್ನು ನಿರ್ಮಾಣ ಮಾಡಿಕೊಡುವಂತೆ ಕೋರಿದ್ದರು.