Tag: Public TVs

  • ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಹೆಚ್ಚಾಗಿದ್ದು, ಈ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿಕೆ ಮಾಡುವ ಮೂಲಕ ವಿಭಿನ್ನ ಪ್ರಚಾರ ಕೈಗೊಂಡಿದ್ದಾರೆ.

    ಅಕುಲ ಹನುಮಂತ್ ಎಂಬವರು ಜಗ್ಟಿಯಲ್ ಜಿಲ್ಲೆಯ ಕೊರುಟ್ಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರದ ಮತದಾರರ ಪ್ರಚಾರ ನಡೆಸುವ ವೇಳೆ ಚಪ್ಪಲಿ ಹಂಚಿಕೆ ಮಾಡಿ ನನಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ಮಾಡದಿದ್ದರೆ ನನಗೆ ಚಪ್ಪಲಿ ಸೇವೆ ಮಾಡಿ ಎಂದು ಹೇಳಿ ಪ್ರಚಾರ ಮಾಡುತ್ತಿದ್ದಾರೆ.

    ಸದ್ಯ ಹನುಮನ್ ಅವರ ಈ ವಿಭಿನ್ನ ಪ್ರಚಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಎಲ್ಲಾ ರಾಜಕೀಯ ವ್ಯಕ್ತಿಗಳು ಈ ವಿಧಾನವನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.

    ಮನೆ ಮನೆ ಪ್ರಚಾರಕ್ಕೆ ತೆರಳುವ ಹನುಮಂತ್, ಕ್ಷೇತ್ರದ ಜನರ ಅಗತ್ಯಗಳನ್ನು ಪೂರೈಸಲು ಶ್ರಮವಹಿಸುವುದಾಗಿ ಆಶ್ವಾಸನೆ ನೀಡುತ್ತಿದ್ದು, ಇದರಲ್ಲಿ ವಿಫಲವಾದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಕೇವಲ ಪ್ರಚಾರ ಪಡೆಯಲು ಮಾತ್ರ ನಾನು ಈ ರೀತಿ ಮತ ಕೇಳುತ್ತಿಲ್ಲ ಎಂದು ತಿಳಿಸಿದ್ದಾರೆ.

    ಸದ್ಯ ಹನುಮಂತ್ ಅವರು ಸ್ಪರ್ಧೆ ಮಾಡುತ್ತಿರುವ ಕೊರುಟ್ಲಾ ಕ್ಷೇತ್ರದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಪ್ರಮುಖ ನಾಯಕರಾದ ಶಾಸಕ ಕೆ ವಿದ್ಯಾ ಸಾಗರ್ ರಾವ್ ಸ್ಪರ್ಧೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv