Tag: Public Tv New Zealand

  • ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ಲಂಡನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಮ್ಮೆ ಕ್ರೀಸ್‍ಗೆ ಅಂಟಿ ನಿಂತರೆ ಎದುರಾಳಿಗಳನ್ನು ಚೆಂಡಾಡುತ್ತಾರೆ. ಅದರೆ ಇದೀಗ ಮುಂದಿನ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ವಿರಾಟ್‍ಗೆ ನ್ಯೂಜಿಲೆಂಡಿನ ಒಬ್ಬ ಬೌಲರ್‌ನಿಂದ ಕಂಟಕವಿದೆ ಎಂದು ಅವರ ಬಾಲ್ಯದ ಕೋಚ್ ರಾಜ್‍ಕುಮಾರ್ ಶರ್ಮಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

    ವಿಶ್ವದ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಇನ್ನೂ ಕೆಲವೇ ದಿನ ಬಾಕಿ ಉಳಿದುಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಕೊಹ್ಲಿಯ ಬಾಲ್ಯದ ಕೋಚ್ ಅವರ ವೀಕ್ನೆಸ್ ಒಂದನ್ನು ಬಿಚ್ಚಿಟ್ಟಿದ್ದು, ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ವೇಗಿ ಟೀಮ್ ಸೌಥಿ ಅವರ ಬೌಲಿಂಗ್‍ನ್ನು ಎದುರಿಸಲು ಪರದಾಡುತ್ತಾರೆ ಎಂದಿದ್ದಾರೆ.

    ರಾಜ್‍ಕುಮಾರ್ ಶರ್ಮಾ, ವಿರಾಟ್ ಬಗ್ಗೆ ಈ ರೀತಿ ಹೇಳಲು ಕಾರಣವಿದೆ. ವಿರಾಟ್ ಕೊಹ್ಲಿ ಮತ್ತು ಟಿಮ್ ಸೌಥಿ ಪರಸ್ಪರ ಎದುರಾಳಿಗಳಾಗಿ ಆಡಿದಾಗ ಸೌಥಿ ಅವರ ಬೌಲಿಂಗ್‍ನ್ನು ಸರಿಯಾಗಿ ಎದುರಿಸಲಾಗದೆ ಕೊಹ್ಲಿ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೊಹ್ಲಿಯನ್ನು ಸೌಥಿ 10 ಬಾರಿ ಔಟ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‍ನಲ್ಲಿ 3 ಬಾರಿ ಕೊಹ್ಲಿ ವಿಕೆಟ್ ಕಿತ್ತಿರುವ ಸೌಥಿ ಟೆಸ್ಟ್ ಕ್ರಿಕೆಟ್‍ನ ಡೆಡ್ಲಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.  ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಈಗಾಗಲೇ ಟೆಸ್ಟ್ ಕ್ರಿಕೆಟ್‍ನಲ್ಲಿ ಸೌಥಿ ಅವರ 214 ಎಸೆತವನ್ನು ಎದುರಿಸಿರುವ ವಿರಾಟ್ 109 ರನ್‍ಗಳಿಸಿ, 3 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇದಲ್ಲದೇ ಸೌಥಿ ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳನ್ನು ಕಾಡಿದ್ದಾರೆ. ಹಾಗಾಗಿ ಸೌಥಿ ಬಗ್ಗೆ ಎಚ್ಚರ ತಪ್ಪಿದರೆ ಭಾರತದ ಬ್ಯಾಟಿಂಗ್ ಲೈನ್‍ಅಪ್‍ಗೆ ಸೌಥಿ ಮುಳುವಾಗುವುದರಲ್ಲಿ ಸಂಶಯವಿಲ್ಲ. ಇದನ್ನೂ ಓದಿ:ಆರ್​ಸಿಬಿ ಬಿಟ್ಟರೆ ಈ ತಂಡದಲ್ಲಿ ಆಡುವ ಬಯಕೆ ಇದೆ ಎಂದ ಚಹಲ್

    ಸದ್ಯ ಜಗತ್ತಿನ ಎರಡು ಬಲಾಢ್ಯ ತಂಡಗಳ ನಡುವಿನ ಕಾದಾಟಕ್ಕೆ ವಿಶ್ವದ ಅಪಾರ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತ್ತಿದ್ದು, ಯಾರು ಚೊಚ್ಚಲ ಟೆಸ್ಟ್ ಚಾಂಪಿಯನ್‍ಶಿಪ್‍ನ ವಿಜಯಿಯಾಗುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಜೂನ್ 18ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್‍ನ ಸೌಥಾಂಪ್ಟನ್‍ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.