Tag: Public TV Mega Survey

  • ಅಮಿತ್ ಶಾ ಕೈ ತಲುಪಿದ ಪಬ್ಲಿಕ್ ಟಿವಿಯ ಮೆಗಾ ಸಮೀಕ್ಷೆ ವರದಿ

    ಅಮಿತ್ ಶಾ ಕೈ ತಲುಪಿದ ಪಬ್ಲಿಕ್ ಟಿವಿಯ ಮೆಗಾ ಸಮೀಕ್ಷೆ ವರದಿ

    -ಯಡಿಯೂರಪ್ಪ ಅಂಡ್ ಟೀಂಗೆ ಫುಲ್ ಕ್ಲಾಸ್!

    ಬೆಂಗಳೂರು: ಪಬ್ಲಿಕ್ ಟಿವಿ ನಡೆಸಿದ್ದ ಚುನಾವಣಾ ಪೂರ್ವ ಮೆಗಾಸರ್ವೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಸರ್ವೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಸರ್ವೆಯಿಂದ ರಾಜಕೀಯ ಪಕ್ಷಗಳಲ್ಲಿ ತಳಮಳ, ಹೊಸ ಲೆಕ್ಕಾಚಾರ ಮೂಡಿಸಿತ್ತು. ಮೆಗಾ ಸರ್ವೆಯ ವರದಿ ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೈ ಸೇರಿದೆ.

    ಸಮೀಕ್ಷೆಯನ್ನ ನೋಡಿ ಆತಂಕಗೊಂಡಿರುವ ಅಮಿತ್ ಶಾ, ತಮ್ಮ ಮಿಷನ್ 150ಗಾಗಿ ಇನ್ನು 35 ರಿಂದ 40 ಸೀಟು ಕೊರತೆ ಇದೆ ಅನ್ನೋದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ಸಮೀಕ್ಷೆಯ ವರದಿಯ ಪೂರ್ಣ ಅಧ್ಯಯನ ಮಾಡುವಂತೆ ತಮ್ಮ `ವಾರ್ ಟೀಂ’ಗೆ ಸೂಚಿಸಿದ್ದಾರೆ ಅಂತ ತಿಳಿದು ಬಂದಿದೆ.

    ಇದೇ ವೇಳೆ, ಸಂಸದರು, ಸತತ ಮೂರು ಬಾರಿ ಸೋತವರಿಗೆ ಟಿಕೆಟ್ ಇಲ್ಲ ಅನ್ನೋ ಹೊಸ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಅಲ್ಲದೆ, ರಾಜ್ಯ ಬಿಜೆಪಿಯನ್ನ ಕಂಟ್ರೋಲ್‍ಗೆ ತೆಗೆದುಕೊಂಡಿದ್ದು, ಯಡಿಯೂರಪ್ಪ ಅವರೇ ಬೆಚ್ಚಿಬಿದ್ದಿದ್ದಾರೆ ಅಂತ ತಿಳಿದು ಬಂದಿದೆ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ಬಿಎಸ್‍ವೈ ಘೋಷಣೆ ಮಾಡಿದವವರಿಗೆಲ್ಲಾ ಟಿಕೆಟ್ ಸಿಗುತ್ತಾ…? ಅನ್ನೋ ಪ್ರಶ್ನೆ ಎದುರಾಗಿದೆ.

  • ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸರ್ವೆ ಬಿಜೆಪಿಗೆ ಎಚ್ಚರಿಕೆ ಗಂಟೆ: ವಿ.ಸೋಮಣ್ಣ

    ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸರ್ವೆ ಬಿಜೆಪಿಗೆ ಎಚ್ಚರಿಕೆ ಗಂಟೆ: ವಿ.ಸೋಮಣ್ಣ

    ತುಮಕೂರು: ಪಬ್ಲಿಕ್ ಟಿವಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ನಮಗೆ ಎಚ್ಚರಿಕೆ ಗಂಟೆಯಾಗಿದೆ. ಆ ಎಚ್ಚರಿಕೆ ಗಂಟೆಯನ್ನು ಸ್ವೀಕಾರ ಮಾಡಿ, ಸರ್ವೆಯಲ್ಲಿ ನಮಗೆ ಎಲ್ಲಿ ತೊಂದರೆಗಳಿವೆ ಎಂಬುದು ಗೊತ್ತಾಗಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುತ್ತೆವೆ ಎಂದು ಮಾಜಿ ಸಚಿವ ಬಿಜೆಪಿ ನಾಯಕ ವಿ.ಸೋಮಣ್ಣ ತಿಳಿಸಿದ್ದಾರೆ.

    ಚುನಾವಣೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾಲಾವಧಿ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜನಾಭಿಪ್ರಾಯ ಬದಲಾಗುವ ಸಾಧ್ಯತೆಗಳಿರುತ್ತವೆ. ಪಬ್ಲಿಕ್ ಟಿವಿ ಸರ್ವೆ ನಡೆಸಿರುವುದು ಸಂತೋಷ. ನಮ್ಮಲ್ಲಿ ಕೂಡ ಕೆಲವು ಸಮೀಕ್ಷೆಗಳ ಫಲಿತಾಂಶಗಳಿವೆ ಅಂತಾ ಅಂದ್ರು. ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

    ಇಂದು ಬೆಳಗ್ಗೆ ತುಮಕೂರು ಜಿಲ್ಲೆಯ ಗುಬ್ಬಿ ನಗರದಲ್ಲಿ ಸೋಮಣ್ಣ ಅವರು ಕೆಲವೊಂದು ವಾರ್ಡ್ ಗಳಿಗೆ ಭೇಟಿ ಕೊಟ್ಟು ಕುಂದುಕೊರತೆ ಆಲಿಸಿದರು. ನಾನು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಅಂತೆಕಂತೆಗಳಿಗೆ ಕಾರ್ಯಕರ್ತರು ಬೆಲೆ ಕೊಡಬಾರದು. ಫೆಬ್ರವರಿ ಎರಡನೇ ವಾರದಲ್ಲಿ ಟಿಕೆಟ್ ಯಾರಿಗೆಂದು ಹೈಕಮಾಂಡ್ ಅಂತಿಮ ಮಾಡುತ್ತದೆ ಅಂತಾ ಹೇಳಿದರು. ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?

    ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?