Tag: Public TV Live

  • ಬಟ್ಟೆ ಹಾಕೊಂಡು ಬಂದ್ರೆ ಈ ಬೀಚ್‌ಗೆ ನೋ ಎಂಟ್ರಿ – ಎಲ್ಲಿದೆ ‘ನ್ಯೂಡಿಸ್ಟ್‌ ಬೀಚ್‌’; ಯಾಕೆ ಈ ರೂಲ್ಸ್‌?

    ಬಟ್ಟೆ ಹಾಕೊಂಡು ಬಂದ್ರೆ ಈ ಬೀಚ್‌ಗೆ ನೋ ಎಂಟ್ರಿ – ಎಲ್ಲಿದೆ ‘ನ್ಯೂಡಿಸ್ಟ್‌ ಬೀಚ್‌’; ಯಾಕೆ ಈ ರೂಲ್ಸ್‌?

    – ಸಂಪೂರ್ಣ ಬೆತ್ತಲಾಗಿ ಹೋಗೋರಿಗೆ ಮಾತ್ರ ಸಿಗುತ್ತೆ ಎಂಟ್ರಿ

    ಬೀಚ್‌ಗಳು ನ್ಯೂ ಜನರೇಷನ್‌ನ ಫೇವರಿಟ್. ಪಡ್ಡೆಗಳಿಗಂತೂ ಹಾಟ್ ಸ್ಪಾಟ್. ಹದವಾಗಿ ನೆತ್ತಿ ಸುಡುವ ಬಿಸಿಲಲ್ಲಿ, ಮಾಗದ ಮನಸಿನ ಏರಿಳಿತದ ಅಲೆಗಳ ಅನುಭವದಲಿ, ಅರ್ಧಂಬರ್ಧ ತೊಟ್ಟ ಬಟ್ಟೆ, ಕಣ್ಣಿಗೆ ಕೂಲಿಂಗ್ಲಾಸ್ ಹಾಕ್ಕೊಂಡು ಕಡಲ ತೀರದ ಸುಂದರ ನೋಟ ಕಣ್ತುಂಬಿಕೊಳ್ಳುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಬೆಚ್ಚನೆಯ ಮುದ ನೀಡುವ ನುಣುಪಾದ ಮರಳಿಗೆ ಮೈ ತಾಕಿಸಿ ಹೊರಳಾಡುತ್ತ, ಹೀಗೆ ಬಂದು ಹಾಗೆ ಹೋಗುವ ತಂಪನೆಯ ಉಪ್ಪಿನಲೆಗಳೊಂದಿಗೆ ಆಟವಾಡುತ್ತ ಕಾಲ ಕಳೆಯೋದರ ಮಜವೇ ಬೇರೆ. ಬೀಚ್‌ನಲ್ಲಿ ಬಿಕಿನಿ ತೊಟ್ಟು ಸುಳಿದಾಡುವ ಬ್ಯೂಟಿಗಳ ನೋಡಿದಾಗ ಪಡ್ಡೆಗಳಲ್ಲಿ ಅಡಗಿದ ಪೋಲಿತನ ಅಲೆಯಂತೆ ಆಗಾಗ ಉಕ್ಕಿ ಮರೆಯಾಗುತ್ತೆ. ಕಡಲತೀರ ಅನ್ನೋದೆ ಒಂಥರಾ ಸ್ಪೆಷಲ್.

    ಮೇಲೆ ಹೇಳಿದ್ದು ಒಂದು ವರ್ಷನ್. ಇನ್ನೊಂದು ವರ್ಷನ್ ಕೇಳಿದ್ರೆ ಎಂಥವರೂ ಗಲ್ಲಕ್ಕೆ ಬೆರಳಿಟ್ಟು ‘ಹೌದಾ!’ ಅಂತ ಅಚ್ಚರಿ ವ್ಯಕ್ತಪಡಿಸೋದು ಗ್ಯಾರಂಟಿ. ಅದೇನು ಅಂತೀರಾ? ತುಂಡುಡುಗೆ, ಬಿಕಿನಿ ತೊಟ್ಟು ಬೀಚ್‌ಗಳಲ್ಲಿ ಓಡಾಡುವವರನ್ನು ನೋಡರ‍್ತೀರಾ. ಆದರೆ, ಬಟ್ಟೆಯೇ ಇಲ್ಲದೇ ಬೆತ್ತಲಾಗಿ ಜನರು ಓಡಾಡುವ ಬೀಚ್ ಬಗ್ಗೆ ಕೇಳಿದ್ದೀರಾ? ಈ ಬೀಚ್‌ಗೆ ಎಂಟ್ರಿ ಕೊಟ್ಟರೆ, ‘ನಿಮ್ಮ ಬಟ್ಟೆ ಬಿಚ್ಚಿಡಿ ಪ್ಲೀಸ್..’ ಎಂಬ ಸೂಚನಾ ಫಲಕಗಳು ಕಾಣಿಸುತ್ತವೆ. ಬೀಚ್‌ಗೆ ಬರುವವರು ಬಟ್ಟೆಯಿಲ್ಲದೇ ಸಂಪೂರ್ಣ ಬೆತ್ತಲಾಗಿಯೇ ಹೋಗಬೇಕು. ಇದು ಉತ್ಪ್ರೇಕ್ಷೆಯಲ್ಲ.

    ಯಾವುದು ಆ ಬೀಚ್? ಎಲ್ಲಿದೆ? ಯಾಕೆ ಅಲ್ಲಿ ಇಂಥ ನಿಯಮ? ಇದರ ಉದ್ದೇಶ ಏನು? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆ ಬಗ್ಗೆ ಇಲ್ಲಿದೆ ವಿವರ.

    ಜರ್ಮನ್‌ನಲ್ಲಿ ನ್ಯೂಡಿಸ್ಟ್ ಬೀಚ್

    ಜರ್ಮನಿಯ (Germany) ಪ್ರಸಿದ್ಧ ಬಾಲ್ಟಿಕ್ ಕರಾವಳಿಗೆ ಪ್ರವಾಸ ಹೋಗಲು ಯೋಜಿಸಿರುವವರು, ಪ್ರಕೃತಿವಾದಿ ಜೀವನಶೈಲಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಿದ್ಧರಾಗಿರಿ. ಏಕೆಂದರೆ ಇಲ್ಲಿ ಗೊತ್ತುಪಡಿಸಿದ ನಗ್ನ ಪ್ರದೇಶಗಳಲ್ಲಿ ಬಟ್ಟೆಗಳನ್ನು ಧರಿಸುವಂತಿಲ್ಲ. ಕರಾವಳಿ ನಗರವಾದ ರೋಸ್ಟಾಕ್‌ನಲ್ಲಿ ಹೊಸ ನಿಯಮವೊಂದನ್ನು ಜಾರಿ ಮಾಡಲಾಗಿದೆ. ಇಲ್ಲಿ ಬಟ್ಟೆ ಧರಿಸಿ ಓಡಾಡುವವರನ್ನು ಬೀಚ್ ವಾರ್ಡನ್‌ಗಳು ಹೊರಹಾಕುತ್ತಾರೆ.

    ಇಲ್ಲಿ ಬಟ್ಟೆ ಬಿಚ್ಚಿ ಪ್ಲೀಸ್..

    ಪ್ರಕೃತಿ ಅನ್ನೋದೆ ಬಯಲು, ಬೆತ್ತಲು ಎನ್ನುವುದು ಪರಿಸರವಾದಿಗಳ ಕಲ್ಪನೆ. ಅವರ ಚಿಂತನೆಗಳಿಗೆ ಗೌರವ ಕೊಡಬೇಕೆಂಬ ಉದ್ದೇಶದಿಂದ ಜರ್ಮನ್‌ನಲ್ಲಿ ನಗ್ನ ಕಡಲತೀರಗಳಿವೆ. ಇಲ್ಲಿ ಸೆನ್ಸಾರ್‌ಗಳಿಲ್ಲ. ಇಲ್ಲಿ ಸಂಕೋಚವನ್ನು ಗಾಳಿಗೆ ತೂರಿ, ಪ್ರಕೃತಿ ಜೊತೆ ಬಾಂಧವ್ಯ ಬೆಸೆಯಬೇಕು. ನಗ್ನರಾಗಿಯೇ ಕಡಲತೀರದ ಪ್ರಕೃತಿ ಸೌಂದರ್ಯ ಸವಿಯಬೇಕು. ಆ ಮೂಲಕ ನೇಚರ್‌ಗೆ ಇನ್ನಷ್ಟು ಹತ್ತಿರವಾಗಬೇಕು ಎಂಬ ಕಲ್ಪನೆಯಲ್ಲಿ ಈ ಬೀಚ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕಡಲತೀರಗಳಿಗೆ ಬರುವವರಿಗೆ ಆರಂಭದಲ್ಲೇ, ‘ಇಲ್ಲಿ ಬಟ್ಟೆ ಬಿಚ್ಚಿ ಪ್ಲೀಸ್..’ ಎಂಬ ಸೂಚನಫಲಕ ಕಾಣುತ್ತದೆ. ಇಲ್ಲಿ ನಿಯಮ ಪಾಲಿಸದವರಿಗೆ ಪ್ರವೇಶವಿಲ್ಲ.

    ಬಟ್ಟೆ ಧರಿಸಿದ್ರೆ ಹೊರಹಾಕ್ತಾರೆ ಬೀಚ್ ವಾರ್ಡನ್

    ಉತ್ತರ ಜರ್ಮನ್‌ನ ಬಾಲ್ಟಿಕ್ ಸಮುದ್ರ ತೀರದ ರೋಸ್ಟಾಕ್‌ನಲ್ಲಿರುವ ಬೀಚ್‌ನಲ್ಲಿ ವಾರ್ಡನ್‌ಗಳು, ನ್ಯಾಚುರಿಸ್ಟ್‌ಗಳನ್ನು ನೇಮಿಸಲಾಗಿರುತ್ತದೆ. ಬೀಚ್‌ಗಳಿಗೆ ಬಟ್ಟೆ ಧರಿಸಿ ಬರುವವರನ್ನು ಇವರು ತಡೆಯುವ ಅಧಿಕಾರವನ್ನು ಹೊಂದಿರುತ್ತಾರೆ. ನಗ್ನತೆಯನ್ನು ಒಪ್ಪಿ ಬರುವವರಿಗೆ ಮಾತ್ರ ನಗ್ನ ಕಡಲತೀರಗಳಲ್ಲಿ ವಿಹರಿಸಲು ಅನುಮತಿ ಇರುತ್ತದೆ. ಅದಕ್ಕಾಗಿ ಸ್ಥಳೀಯ ಪುರಸಭೆ ಕೌನ್ಸಿಲ್ 23 ಪುಟಗಳ ನಿಮಗಳನ್ನು ಹೊರಡಿಸಿದೆ.

    ನ್ಯಾಚುರಿಸ್ಟ್‌ಗಳಿಗೆ (ನೈಸರ್ಗಿಕವಾದಿಗಳು) ಮೀಸಲಾದ ಪ್ರದೇಶಗಳಲ್ಲಿ ಕೆಲವರು ಬಟ್ಟೆ ಧರಿಸಿ ಓಡಾಡಿ ಅನಾನುಕೂಲ ವಾತಾವರಣ ಉಂಟು ಮಾಡಿದ್ದರಂತೆ. ಈ ಬಗ್ಗೆ ಮೇಲ್ವಿಚಾರಕರಿಗೆ ಹಲವು ದೂರಗಳು ಹೋಗಿದ್ದವಂತೆ. ಇನ್ಮುಂದೆ ಇಂತಹ ಅನಾನುಕೂಲ ವಾತಾವರಣ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂಬ ಉದ್ದೇಶದಿಂದ ವಾರ್ಡನ್‌ಗಳನ್ನು ನಿಯೋಜಿಸಲಾಗಿದೆ. ಬೀಚ್‌ನಲ್ಲಿ ನಿಯಮ ಉಲ್ಲಂಘಿಸುವವರನ್ನು ಮುಲಾಜಿಲ್ಲದೇ ಹೊರಹಾಕುವ ಅಧಿಕಾರವನ್ನು ಬೀಚ್ ವಾರ್ಡನ್‌ಗಳಿಗೆ ನೀಡಲಾಗಿದೆ.

    ಕಂಡೀಷನ್ ಅಪ್ಲೈ

    ನ್ಯಾಚುರಿಸಂ ಜಗತ್ತಿಗೆ ಹೊಸಬರಾದವರು ಕೆಲವು ನಿಯಮಗಳನ್ನು ಗೌರವಿಸುವುದು ಅತ್ಯಗತ್ಯ. ನಗ್ನ ಬೀಚ್‌ಗೆ (Nudist Beach) ಭೇಟಿ ನೀಡುವವರು ಈ ನಿಯಮಗಳನ್ನು ಮೀರುವಂತಿಲ್ಲ.
    * ದಿಟ್ಟಿಸಿ ನೋಡಬಾರದು: ಎದುರಿಗೆ ಬೆತ್ತಲಾಗಿ ಓಡಾಡುವವರನ್ನು ದಿಟ್ಟಿಸಿ ನೋಡುವಂತಿಲ್ಲ. ಇತರರಿಗೆ ಅನಾನುಕೂಲ ಆಗದಂತೆ ನಡೆದುಕೊಳ್ಳಬೇಕು.
    * ಫೋಟೊ ತೆಗೆಯಬಾರದು: ಒಪ್ಪಿಗೆ ನೀಡದ ಹೊರತು ಫೋಟೊಗಳನ್ನು ತೆಗೆಯುವಂತಿಲ್ಲ. ಈ ವಲಯದಲ್ಲಿ ಫೋಟೊ ತೆಗೆಯುವುದಕ್ಕೆ ನಿಷೇಧವಿದೆ.
    * ಕೆಟ್ಟ ಕಾಮೆಂಟ್‌ಗಳನ್ನು ಮಾಡುವಂತಿಲ್ಲ: ಯಾರೊಬ್ಬರ ಬಗ್ಗೆಯೂ ಕೆಟ್ಟ ರೀತಿಯಲ್ಲಿ ಮಾತನಾಡುವಂತಿಲ್ಲ.

    ಜರ್ಮನಿಯು ರೋಸ್ಟಾಕ್‌ನಲ್ಲಿಯೇ ಸರಿಸುಮಾರು 15 ಕಿಲೋಮೀಟರ್‌ಗಳಷ್ಟು ಕಡಲತೀರಗಳನ್ನು ಹೊಂದಿದೆ. ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. 1.ನ್ಯಾಚುರಿಸ್ಟ್ಗಳಿಗೆ ಮಾತ್ರ, 2.ಮಿಶ್ರ ಬಳಕೆಗೆ ಮತ್ತು 3. ಬಟ್ಟೆ ಧರಿಸುವವರಿಗೆ ಮಾತ್ರ ಎಂದು ವರ್ಗೀಕರಿಸಲಾಗಿದೆ. ನ್ಯಾಚುರಿಸ್ಟ್ಗಳಿಗೆ ಮಾತ್ರ ಎಂದು ಗೊತ್ತುಪಡಿಸಿದ ನಗ್ನ ಕಡಲತೀರಕ್ಕೆ ಹೋಗುವವರು ಬಟ್ಟೆ ಧರಿಸದೇ ನಗ್ನರಾಗಿಯೇ ಹೋಗಬೇಕು. ಉಳಿದ ಎರಡು ವಿಭಾಗಗಳಲ್ಲಿ ಬಟ್ಟೆ ಧರಿಸಬೇಕೋ ಅಥವಾ ಬೇಡವೋ ಎಂಬ ಆಯ್ಕೆಯನ್ನು ಪ್ರವಾಸಿಗರಿಗೆ ಬಿಡಲಾಗಿದೆ.

    ನಗ್ನತೆಯನ್ನು ಆನಂದಿಸೋ ಜರ್ಮನ್ನರು

    ಜರ್ಮನಿಯಲ್ಲಿ ನಗ್ನತೆ ಪ್ರತಿಪಾದನೆ ಹೊಸದೇನಲ್ಲ. ಇದಕ್ಕೆ ದೀರ್ಘಕಾಲದ ಇತಿಹಾಸ ಇದೆ. ನ್ಯಾಚುರಿಸಂ ಎಂಬುದು 19 ನೇ ಶತಮಾನದ ಉತ್ತರಾರ್ಧದ ಸಾಂಸ್ಕೃತಿಕ ಆಂದೋಲನವಾಗಿದೆ. ಇದನ್ನು ಫ್ರೀಕೋರ್‌ಪರ್‌ಕಲ್ಟೂರ್ (ಎಫ್‌ಕೆಕೆ) ಅಥವಾ ಮುಕ್ತ ದೇಹ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಹಿಂದಿನಿAದಲೂ ಜರ್ಮನ್ನರು ಗೊತ್ತುಪಡಿಸಿದ ಕಡಲತೀರಗಳು, ಉದ್ಯಾನಗಳು ಮತ್ತು ಫುಟ್‌ಪಾತ್‌ನಲ್ಲಿ ಓಡಾಡುವಾಗಲೂ ಸಾಮಾಜಿಕ ನಗ್ನತೆಯನ್ನು ಆನಂದಿಸಿದ್ದಾರೆ. ಆದರೆ, ಈಗಿನ ಯುವ ಪೀಳಿಗೆಯು ಈ ಸಂಪ್ರದಾಯದಿಂದ ವಿಮುಖವಾಗುತ್ತಿದೆ. ಪರಂಪರೆಯ ಸಂಸ್ಕೃತಿಯನ್ನು ಅಭ್ಯಾಸ ಮಾಡುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ನ್ಯಾಚುರಿಸ್ಟ್‌ಗಳ ವಾದ. ಬದಲಾಗುತ್ತಿರುವ ಕಾಲದಲ್ಲಿ ರೋಸ್ಟಾಕ್ ಈಗಾಗಲೇ ತನ್ನ ಅಧಿಕೃತ ನ್ಯಾಚುರಿಸ್ಟ್ ವಲಯಗಳನ್ನು 37 ರಿಂದ 27 ಕ್ಕೆ ಇಳಿಸಿದೆ.

    130 ವರ್ಷಗಳ ಹಿಂದಿನಿಂದಲೂ ನಗ್ನತೆ ಎನ್ನುವುದು ಆಂದೋಲನವಾಗಿ ನಡೆದುಕೊಂಡು ಬಂದಿದೆ. ನಗ್ನತೆ ಎಂಬ ಪ್ರಕೃತಿವಾದವು ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಹೆಚ್ಚಿಸುತ್ತದೆ ಎಂದು ನ್ಯಾಚುರಿಸ್ಟ್‌ಗಳು ಪ್ರತಿಪಾದಿಸುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ, ಜರ್ಮನ್ ಅಸೋಸಿಯೇಷನ್ ಫಾರ್ ಫ್ರೀ ಬಾಡಿ ಕಲ್ಟರ್ (ಡಿಎಫ್‌ಕೆ) ಕೇವಲ 30,000 ಸದಸ್ಯರನ್ನು ಹೊಂದಿದೆ. 25 ವರ್ಷಗಳ ಹಿಂದೆ ಸದಸ್ಯರ ಸಂಖ್ಯೆ 65,000 ಇತ್ತು. ಕ್ಯಾಂಪ್‌ಗ್ರೌಂಡ್‌ಗಳನ್ನು ನಡೆಸುವ, ವಾಲಿಬಾಲ್ ಮತ್ತು ಪೆಟಾಂಕ್‌ನಂತಹ ಕ್ರೀಡೆಗಳನ್ನು ಆಯೋಜಿಸುವ ಅನೇಕ ನಗ್ನ ಸಂಘಟನೆಗಳು ಪ್ರಸ್ತುತ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನೇ ಹೊಂದಿವೆ. ಈ ಒಂದು ಪಾರಂಪರಿಕ ಪದ್ಧತಿಯಿಂದ ಜನರು ವಿಮುಖರಾಗುತ್ತಿರುವ ಬಗ್ಗೆ ನ್ಯಾಚುರಿಸ್ಟ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ.

  • ಪಬ್ಲಿಕ್ ಟಿವಿ ಆ್ಯಪ್‍ನಲ್ಲಿ ಲೈವ್ ನೋಡಿ

    ಪಬ್ಲಿಕ್ ಟಿವಿ ಆ್ಯಪ್‍ನಲ್ಲಿ ಲೈವ್ ನೋಡಿ

    ಬ್ಲಿಕ್ ಟಿವಿಯ ನೇರಪ್ರಸಾರವನ್ನು ನೀವು ಈಗ ಪಬ್ಲಿಕ್ ಟಿವಿ ಆ್ಯಪ್ ಹಾಗೂ ವೆಬ್‍ಸೈಟ್‍ನಲ್ಲೇ ವೀಕ್ಷಿಸಬಹುದು.

    ಪಬ್ಲಿಕ್ ಟಿವಿ ಆಂಡ್ರಾಯ್ಡ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಆ್ಯಪ್, ಆ್ಯಪ್ ಸ್ಟೋರ್‍ನಲ್ಲಿ ಲಭ್ಯವಿದ್ದು ನಿಮ್ಮ ಮೊಬೈಲ್‍ಗೆ ನೀವು ಫ್ರೀಯಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಆ್ಯಪ್ ಕ್ಲಿಕ್ ಮಾಡಿದ ತಕ್ಷಣ ಹೋಮ್ ಸ್ಕ್ರೀನ್ ನಿಮಗೆ ಲಭ್ಯವಾಗಲಿದ್ದು, ಹೋಮ್ ಪೇಜ್‍ನ ಕೆಳಭಾಗದಲ್ಲಿ ಲೈವ್ ಬಟನ್ ಇದೆ. ಈ ಲೈವ್ ಬಟನ್ ಕ್ಲಿಕ್ ಮಾಡಿ ನೀವು ಪಬ್ಲಿಕ್ ಟಿವಿಯ ನೇರಪ್ರಸಾರವನ್ನು ವೀಕ್ಷಿಸಬಹುದು.

    ಪಬ್ಲಿಕ್ ಟಿವಿಯ ಆಂಡ್ರಾಯ್ಡ್ ಆ್ಯಪ್ ನೀವಿನ್ನೂ ಡೌನ್‍ಲೋಡ್ ಮಾಡಿಲ್ಲ ಎಂದಾದರೆ ಈ ಲಿಂಕ್ ಕ್ಲಿಕ್ ಮಾಡಿ. https://play.google.com/store/apps/details?id=com.phonegap.publictv&hl=en_IN

    ನೀವು ಐಫೋನ್ ಬಳಸುವವರಾಗಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ.

    https://play.google.com/store/apps/details?id=com.phonegap.publictv&hl=en_IN

    ಪಬ್ಲಿಕ್ ಟಿವಿಯ ವೆಬ್‍ಸೈಟ್‍ನಲ್ಲೂ ನೇರಪ್ರಸಾರ ಲಭ್ಯವಿದ್ದು, ಇದನ್ನು https://publictv.in/live ಕ್ಲಿಕ್ ಮಾಡಿ ನೋಡಬಹುದು.

  • ಗುಜರಾತ್‍ನಲ್ಲಿ ಸಿಕ್ಸರ್ ಭಾರಿಸಿದ ಬಿಜೆಪಿ: ಫಲಿತಾಂಶ ಸಂಪೂರ್ಣ ಮಾಹಿತಿ ಇಲ್ಲಿದೆ

    ಗುಜರಾತ್‍ನಲ್ಲಿ ಸಿಕ್ಸರ್ ಭಾರಿಸಿದ ಬಿಜೆಪಿ: ಫಲಿತಾಂಶ ಸಂಪೂರ್ಣ ಮಾಹಿತಿ ಇಲ್ಲಿದೆ

    ನವದೆಹಲಿ: ಇಡೀ ದೇಶದ ಕುತೂಹಲ ಕೆರಳಿಸಿದ್ದ ಗುಜರಾತ್ ಫಲಿತಾಂಶ ಹೊರಹೊಮ್ಮಿದೆ. ಗುಜರಾತ್‍ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ, ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿಯ ಗೆಲುವು ಭರ್ಜರಿಯಾಗಿಲ್ಲ.

    182 ಕ್ಷೇತ್ರಗಳಲ್ಲಿ 99 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ. ಹಾಗಂದ ಮಾತ್ರಕ್ಕೆ ಬಿಜೆಪಿ ಖುಷಿ ಪಡುವಂತ್ತಿಲ್ಲ. ಯಾಕಂದ್ರೆ, ಕಾಂಗ್ರೆಸ್ ಭಾರೀ ಪೈಪೋಟಿಯನ್ನೇ ನೀಡಿದೆ. ಕಳೆದ ಮೂರು ದಶಕಗಳಲ್ಲಿಯೇ ಈ ಬಾರಿಯ ಫಲಿತಾಂಶ ಕಾಂಗ್ರೆಸ್‍ಗೆ ಅದ್ವಿತೀಯ ಸಾಧನೆಯೇ ಸರಿ.

    ಒಟ್ಟು ಕ್ಷೇತ್ರ – 182
    ಸರಳ ಬಹುಮತ – 92
    ಪಕ್ಷ         2017 2012 ವ್ಯತ್ಯಾಸ
    ಬಿಜೆಪಿ        99   115    – 16
    ಕಾಂಗ್ರೆಸ್    80   61    + 19
    ಇತರೆ        03     06   – 03

    ಗುಜರಾತ್‍ನ ವಲಯವಾರು ಫಲಿತಾಂಶ ಹೇಗಿದೆ?
    * ಉತ್ತರ ಗುಜರಾತ್ – 53 ಸ್ಥಾನ ಬಿಜೆಪಿ- 30, ಕಾಂಗ್ರೆಸ್- 23
    * ಸೌರಾಷ್ಟ್ರ-ಕಚ್ – 54 ಸ್ಥಾನ ಬಿಜೆಪಿ- 23, ಕಾಂಗ್ರೆಸ್ – 30, ಇತರೆ – 01
    * ದಕ್ಷಿಣ ಗುಜರಾತ್ – 35 ಸ್ಥಾನ ಬಿಜೆಪಿ- 24, ಕಾಂಗ್ರೆಸ್- 11
    * ಮಧ್ಯ ಗುಜರಾತ್ – 40 ಸ್ಥಾನ ಬಿಜೆಪಿ- 22, ಕಾಂಗ್ರೆಸ್- 16, ಇತರೆ – 02

    ಗುಜರಾತ್ ನಗರ:
    ನಗರವಾರು ಫಲಿತಾಂಶ – 55 ಸ್ಥಾನ ಬಿಜೆಪಿ- 46 , ಕಾಂಗ್ರೆಸ್ – 09
    ಅಹಮದಾಬಾದ್: ಬಿಜೆಪಿ – 16, ಕಾಂಗ್ರೆಸ್ – 05
    ರಾಜ್‍ಕೋಟ್ : ಬಿಜೆಪಿ – 06, ಕಾಂಗ್ರೆಸ್ – 02
    ಸೂರತ್ : ಬಿಜೆಪಿ – 15, ಕಾಂಗ್ರೆಸ್ – 01
    ವಡೋದರ : ಬಿಜೆಪಿ – 09, ಕಾಂಗ್ರೆಸ್ – 01

    ಗುಜರಾತ್ ಗ್ರಾಮೀಣ
    ಗ್ರಾಮೀಣ ಭಾಗ ಒಟ್ಟು 127 ಸ್ಥಾನ ಬಿಜೆಪಿ 56, ಕಾಂಗ್ರೆಸ್ – 71

    ಜಯಗಳಿಸಿದ ನಾಯಕರು:
    ವಿಜಯರೂಪಾನಿ, ಬಿಜೆಪಿ – ರಾಜ್‍ಕೋಟ್ ಪಶ್ಚಿಮ
    ನಿತಿನ್ ಪಟೇಲ್, ಬಿಜೆಪಿ – ಮಹೆಸಾನ
    ಜಿಗ್ನೇಶ್ ಮೇವಾನಿ, ಪಕ್ಷೇತರ – ವಡಗಾಂವ್ (ಕಾಂಗ್ರೆಸ್ ಬೆಂಬಲಿತ)
    ಅಲ್ಪೇಶ್ ಠಾಕೂರ್, ಕಾಂಗ್ರೆಸ್ – ರಾಧನ್‍ಪುರ

    ಸೋತ ನಾಯಕರು:
    ಅರ್ಜುನ್ ಮೊಧ್ವಾಡಿಯಾ, ಕಾಂಗ್ರೆಸ್ – ಪೋರ್‍ಬಂದರ್
    ಶಕ್ತಿಸಿಂಘ್ ಗೋಯಲ್, ಕಾಂಗ್ರೆಸ್ – ಮಾಂಡ್ವಿ
    ಸಿದ್ದಾರ್ಥ್ ಪಟೇಲ್, ಕಾಂಗ್ರೆಸ್ – ದಾಬೋಯ್
    ಇಂದ್ರನೀಲ್ ರಾಜಗುರು, ಕಾಂಗ್ರೆಸ್ – ರಾಜ್‍ಕೋಟ್ ಪಶ್ಚಿಮ

    ಯಾವ ವರ್ಷ ಬಿಜೆಪಿ ಎಷ್ಟು ಸ್ಥಾನ ಗೆದ್ದಿದೆ?
    1995 – 121
    2002 – 127
    2007 – 117
    2012 – 115

    ಕೈಗೆ ಮುಖಭಂಗ:
    ಹಿಮಾಚಲ ಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ. ಜನಾಕ್ರೋಶಕ್ಕೆ ಕಾಂಗ್ರೆಸ್ ಬಲಿಯಾಗಿದ್ದು, ಬಿಜೆಪಿ ಅಧಿಕಾರಕ್ಕೇರಿದೆ. ಈ ಮೂಲಕ, ಬಿಜೆಪಿ ಮತ್ತು ಎನ್‍ಡಿಎ ಮಿತ್ರಕೂಟ ಇರೋ ರಾಜ್ಯಗಳ ಸಾಲಿಗೆ 19ನೇ ರಾಜ್ಯವಾಗಿ ಹಿಮಾಚಲ ಪ್ರದೇಶ ಸೇರಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್‍ಕುಮಾರ್ ಧುಮಾಲ್ ಸೋಲನ್ನ ಕಂಡಿದ್ರೆ, ಕಾಂಗ್ರೆಸ್‍ನ ವೀರಭದ್ರ ಸಿಂಗ್ ಜಯ ಸಾಧಿಸಿದ್ದಾರೆ. ಇನ್ನು

    ಒಟ್ಟು ಕ್ಷೇತ್ರ – 68
    ಸರಳ ಬಹುಮತ – 35
    ಪಕ್ಷ 2017 2012 ವ್ಯತ್ಯಾಸ
    ಬಿಜೆಪಿ 44 26 + 17
    ಕಾಂಗ್ರೆಸ್ 21 36 – 15
    ಇತರೆ 03 06 – 2

  • 2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    ನವದೆಹಲಿ: ಗುಜರಾತ್ ಉಳಿಸಿಕೊಂಡು ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ನಿಂದ ತನ್ನ ತೆಕ್ಕೆಗೆ ಹಾಕುವ ಮೂಲಕ ಮೋದಿ ತನ್ನ ಸಮಾಜ್ರ್ಯವನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ.

    2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ ಮೂರೇ ವರ್ಷದಲ್ಲಿ ಬಿಜೆಪಿ 12 ರಾಜ್ಯದಲ್ಲಿ ಗೆಲ್ಲುವ ಮೂಲಕ ಒಟ್ಟು 19 ರಾಜ್ಯದಲ್ಲಿ ಈಗ ಆಡಳಿತ ವಿಸ್ತರಣೆ ಮಾಡಿಕೊಂಡಿದೆ. ಕಾಂಗ್ರೆಸ್ 9 ರಾಜ್ಯಗಳನ್ನು ಕಳೆದುಕೊಂಡು ಈಗ ಕೇವಲ  ಕರ್ನಾಟಕ, ಮಿಜೋರಾಂ, ಪಂಜಾಬ್, ಮೇಘಾಲಯದಲ್ಲಿ  ಅಧಿಕಾರಲ್ಲಿದೆ.

    ಕರ್ನಾಟಕ, ಮಿಜೋರಾಂ, ಮೇಘಾಲಯದಲ್ಲಿ  ಮೋದಿ ಅಧಿಕಾರಕ್ಕೆ ಏರುವ ಮೊದಲೇ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ಪಂಜಾಬ್ ನಲ್ಲಿ 2012ರಲ್ಲಿ  ಶೀರೋಮಣಿ ಅಖಾಲಿದಳ ಗೆದ್ದಿತ್ತು. ಆದರೆ ಈ ವರ್ಷ ಎನ್‍ಡಿಎ ಮೈತ್ರಿಕೂಟಕ್ಕೆ ಸೋಲಾಗಿದ್ದರಿಂದ ಕಾಂಗ್ರೆಸ್ ತೆಕ್ಕೆಗೆ ಪಂಜಾಬ್ ಸಿಕ್ಕಿದೆ.  ಹೀಗಾಗಿ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಗುಜರಾತ್ ನಲ್ಲೂ ಸೋಲಾಗಲಿದೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಆಗಿದೆ.

    ಈ ವರ್ಷ ಉತ್ತರಪ್ರದೇಶದಲ್ಲಿ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಒಟ್ಟು 403 ಸ್ಥಾನಗಳಲ್ಲಿ 312 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿತ್ತು. ಇದರ ಜೊತೆ ಮಣಿಪುರ ಮತ್ತು ಗೋವಾದಲ್ಲೂ ಸರ್ಕಾರ ರಚನೆ ಮಾಡಿತ್ತು.

    ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಜಯಗಳಿಸಿದ ಬಳಿಕ ಬಿಜೆಪಿ, ಬಿಜೆಪಿ ಮೈತ್ರಿಕೂಟ ಇಲ್ಲದೇ ಇರುವುದು ಕೇವಲ 10 ರಾಜ್ಯಗಳು ಮಾತ್ರ. ಕರ್ನಾಟಕ(ಕಾಂಗ್ರೆಸ್), ತಮಿಳುನಾಡು(ಎಐಎಡಿಎಂಕೆ), ಕೇರಳ(ಸಿಪಿಐಎಂ), ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್), ಒಡಿಶಾ(ಬಿಜು ಜನತಾ ದಳ) ಮೇಘಾಲಯ(ಕಾಂಗ್ರೆಸ್), ತೆಲಂಗಾಣ(ತೆಲಂಗಾಣ ರಾಷ್ಟ್ರೀಯ ಸಮಿತಿ), ಮಿಜೋರಾಂ( ಕಾಂಗ್ರೆಸ್) ದೆಹಲಿ(ಆಮ್ ಆದ್ಮಿ ಪಾರ್ಟಿ), ತ್ರಿಪುರಾ(ಸಿಪಿಐ-ಎಂ)

    ಆಂಧ್ರಪ್ರದೇಶವನ್ನು ಆಳುತ್ತಿರುವ ಟಿಡಿಪಿ ಮತ್ತು ನಾಗಾಲ್ಯಾಂಡ್ ನಲ್ಲಿರುವ ಎನ್‍ಪಿಎಫ್ ಎನ್‍ಡಿಎ ಸದಸ್ಯ ಪಕ್ಷವಾಗಿದೆ. ಬಿಹಾರ ಮತ್ತು ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿಕೂಟ ಆಡಳಿತದಲ್ಲಿದೆ. 2018ರಲ್ಲಿ ಕರ್ನಾಟಕ, ಮಿಜೋರಾಂ, ತ್ರಿಪುರ, ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

     ಅರುಣಾಚಲ ಪ್ರದೇಶ್, ಅಸ್ಸಾಂ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‍ಗಡ, ಗೋವಾ, ಗುಜರಾತ್, ಜಾರ್ಖಂಡ್, ಜಮ್ಮುಮತ್ತು ಕಾಶ್ಮೀರ, ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ.

     

  • ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ: ಪ್ರಿಯಾಂಕ್ ಖರ್ಗೆ

    ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ: ಪ್ರಿಯಾಂಕ್ ಖರ್ಗೆ

    ಯಾದಗಿರಿ: ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಏನಾದರೂ ಲೋಪದೋಷಗಳಿದ್ದರೆ ಬಗೆಹರಿಸಲು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದೆವು ಎಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯದ ಸ್ಥಿತಿ ನೋಡಿದರೆ ನಾವು ಈಗಲೇ ಫಲಿತಾಂಶ ಹೇಳಲು ಸಾಧ್ಯವಿಲ್ಲ. ಚುನಾವಣೋತ್ತರ ಸರ್ವೆಯಲ್ಲಿ ಕಾಂಗ್ರೆಸ್ ಹಿನ್ನೆಡೆಯಾಗಲಿದೆ ಎನ್ನುವ ಫಲಿತಾಂಶ ಬಂದಿದ್ದರೆ, ಈಗ ನಾವು ಮುನ್ನಡೆಯಲ್ಲಿದ್ದೇವೆ. ಈಗಲೇ ನಾನು ಫಲಿತಾಂಶದ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದರು.

    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ಇವಿಎಂ ಇಷ್ಟ ಪಟ್ಟರೆ ಇರಲಿ. ಗುಜರಾತ್ ಹಾಗೂ ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದರೆ ನೇರವಾಗಿ ನಮ್ಮ ರಾಜ್ಯದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದಕ್ಕಿಂತ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಲಿದೆ. 22 ವರ್ಷಗಳ ನಂತರ ಗುಜರಾತ್‍ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಪ್ರಮುಖ ವಿಚಾರವೇ ಎಂದು ಅವರು ಪ್ರತಿಕ್ರಿಯಿಸಿದರು.

    ಗುಜರಾತ್ ಚುನಾವಣೆಯಲ್ಲಿ ಬಳಕೆಯಾದ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕೆಯ ವೇಳೆ ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಚುನಾವಣೆ ಮತ ಎಣಿಕೆ ವೇಳೆ ವಿವಿಪ್ಯಾಟ್ ಗಳಲ್ಲಿ ಬಿದ್ದಿರುವ ವೋಟ್ ಮತ್ತು ಇವಿಎಂನಲ್ಲಿ ಬಿದ್ದಿರುವ ವೋಟ್ ಗಳನ್ನು ತಾಳೆ ಮಾಡಬೇಕು. ಕನಿಷ್ಟ 25% ಇವಿಎಂ ಗಳನ್ನಾದರೂ ಬಳಸಿ ಕ್ರಾಸ್ ಚೆಕ್ ಮಾಡಲು ಚುನಾವಣಾ ಆಯೋಗಕ್ಕೆ ಆದೇಶಿಸಬೇಕು ಎಂದು ಗುಜರಾತ್ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು.

    ವಿಚಾರಣೆ ವೇಳೆ ಈ ಅರ್ಜಿ ಪರಿಶೀಲಿಸಲು ಯೋಗ್ಯವಲ್ಲ. ಇದರ ಬದಲಾಗಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಒಂದು ರಿಟ್ ಅರ್ಜಿ ಸಲ್ಲಿಸಿ ಎಂದು ಸೂಚಿಸಿ ಈ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ತನ್ನ ಪರಮಾಧಿಕಾರವನ್ನು ಬಳಸಿ ಚುನಾವಣಾ ಆಯೋಗದ ಕಾರ್ಯದಲ್ಲಿ ನಾನು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

    ಗುಜರಾತ್ ಕಾಂಗ್ರೆಸ್, ಇವಿಎಂ ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಇವಿಎಂಗಳಿಗೆ ಬ್ಲೂ ಟೂತ್ ಸಾಧನಗಳನ್ನು ಅಳವಡಿಸಲಾಗಿದೆ. ಹೀಗಾಗಿ ಮತ ಎಣಿಕೆಯ ವೇಳೆ ಇವಿಎಂಗಳನ್ನು ಮರು ಪರಿಶೀಲಸಬೇಕು ಎಂದು ಮನವಿ ಮಾಡಿತ್ತು

    ಇದನ್ನೂ ಓದಿ: ರಾಜ್ಯದಲ್ಲೂ ಶುರುವಾಯ್ತು ಇವಿಎಂ ಗದ್ದಲ

  • ಹಿಮಾಚಲದಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಹಿಮಾಚಲದಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಶಿಮ್ಲಾ: ಆರಂಭಿಕ ಮತ ಎಣಿಕೆಯ ವೇಳೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಸರಳ ಬಹುಮತ ಸಿಕ್ಕಿದೆ.

    ಒಟ್ಟು 68 ಕ್ಷೇತ್ರಗಳಿದ್ದು, ಬಹುಮತಕ್ಕೆ 35 ಸ್ಥಾನಗಳ ಅಗತ್ಯ. ಬೆಳಗ್ಗೆ 9.30ರ ವೇಳೆಗೆ ಬಿಜೆಪಿ 39 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಮುನ್ನಡೆ ಸಾಧಿಸಿದ ಮಾತ್ರಕ್ಕೆ ಇದೇ ಅಂತಿಮ ಫಲಿತಾಂಶವಲ್ಲ. ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿತ್ತು.

    2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಕ್ಷಣ, ಕ್ಷಣಕ್ಕೂ ಬದಲಾಗುತ್ತಿದೆ ಗುಜರಾತ್ ಫಲಿತಾಂಶ: ಮುನ್ನಡೆಯಲ್ಲಿ ಕಾಂಗ್ರೆಸ್

    ಕ್ಷಣ, ಕ್ಷಣಕ್ಕೂ ಬದಲಾಗುತ್ತಿದೆ ಗುಜರಾತ್ ಫಲಿತಾಂಶ: ಮುನ್ನಡೆಯಲ್ಲಿ ಕಾಂಗ್ರೆಸ್

    ಗಾಂಧಿನಗರ: ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ.

    ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ.

    ಒಂದು ಹಂತದಲ್ಲಿ 95 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದಾಗ ಬಿಜೆಪಿಗೆ ಸರಳ ಬಹುಮತ ಸಿಕ್ಕಿದೆ ಎಂದು ವಿಶ್ಲೇಷಣೆ ಆರಂಭವಾಗಿತ್ತು. ಆದರೆ ಬೆಳಗ್ಗೆ 9.15ರ ವೇಳಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ನೇರಾ ಸ್ಪರ್ಧೆ ಇರುವುದು ಗೊತ್ತಾಯಿತು. ಬಿಜೆಪಿ 77 ಕ್ಷೇತ್ರಗಳಲ್ಲಿ  ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 82, ಇತರೇ ಮೂರು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

    2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಗುಜರಾತ್‍ನಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಗುಜರಾತ್‍ನಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಗಾಂಧಿನಗರ: ಗುಜರಾತ್ ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರುವ ಎಲ್ಲ ಸಾಧ್ಯತೆಯಿದೆ. ಮತ ಎಣಿಕೆ ಆರಂಭದ 50 ನಿಮಿಷದಲ್ಲೇ 95 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

    ಬೆಳಗ್ಗೆ 8.50ರ ವೇಳೆಗೆ ಬಿಜೆಪಿ 95 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 54 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಂದ ಮಾತ್ರಕ್ಕೆ ಇದೆ ಅಂತಿಮವಲ್ಲ. 10 ಗಂಟೆಯ ವೇಳೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

    ಗುಜರಾತ್ ನಲ್ಲಿ ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದ್ದು, ಆರಂಭದ 10 ನಿಮಿಷದಲ್ಲೇ ಬಿಜೆಪಿ 22 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 8 ಸ್ಥಾನದಲ್ಲಿ ಮುನ್ನಡೆಯಲ್ಲಿತ್ತು.

    2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ- ಬಿಜೆಪಿಗೆ ಆರಂಭಿಕ ಮುನ್ನಡೆ

    ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ- ಬಿಜೆಪಿಗೆ ಆರಂಭಿಕ ಮುನ್ನಡೆ

    ಶಿಮ್ಲಾ: ಇಂದು ದೇಶದ ಚಿತ್ತ ಗುಜರಾತ್ ಹಾಗೂ ಹಿಮಾಚಲ ಪ್ರದೇಶದತ್ತ ತಿರುಗಿದ್ದು, ಈಗಾಗಲೇ ಈ ಎರಡೂ ಕಡೆಗಳಲ್ಲೂ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಗುಜರಾತ್ ನಂತೆ ಹಿಮಾಚಲ ಪ್ರದೇಶದಲ್ಲಿಯೂ ಕೂಡ ಆರಂಭಿಕ ಮತ ಎಣಿಕೆಯ ವೇಲೆ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

    ಬೆಳಗ್ಗೆ 8.30ರ ವೇಳೇಗೆ ಒಟ್ಟು 68 ಕ್ಷೇತ್ರಗಳಲ್ಲಿ ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡರೆ 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು.

    68 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚನೆಗೆ ಬೇಕಿರುವಂತಹ ಸರಳ ಬಹುಮತ 35. ಇಲ್ಲೂ ಕೂಡ ಬಿಜೆಪಿ ಜಯಭೇರಿ ಬಾರಿಸುತ್ತೆ ಅಂತ ಸಮೀಕ್ಷೆಗಳು ಸ್ಪಷ್ಟವಾಗಿ ಹೇಳಿದ್ದು ಹೀಗಾಗಿ ಕಮಲ ಪಾಳಯದಲ್ಲಿ ಈಗಾಗ್ಲೆ ಬಿರುಸಿನ ಚಟುವಟಿಕೆಗಳು ಶುರುವಾಗಿದೆ. ಆದ್ರೆ ಆಡಳಿತರೂಢ ಕಾಂಗ್ರೆಸ್ ಭರವಸೆಯನ್ನ ಇನ್ನು ಕಳೆದುಕೊಂಡಿಲ್ಲ.

    ತಾವು ಬಹುಮತವನ್ನ ಪಡೆದು ಮತ್ತೆ ಅಧಿಕಾರಿಕ್ಕೆ ಏರೋದಾಗಿ ಸಿಎಂ ವೀರಭದ್ರಸಿಂಗ್ ಹೇಳಿಕೊಂಡಿದ್ದರು. ಅತ್ತ ಬಿಜೆಪಿಯ ಪ್ರೇಮ್‍ಕುಮಾರ್ ದುಮಾಲ್ ಕೂಡ ಬಹುಮತ ಸಿಗೋದು ನಮಗೆ ಅಂತ ವಿಶ್ವಾಸದಲ್ಲಿದ್ದಾರೆ.

    2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಗುಜರಾತ್ ಚುನಾವಣೆ – ಬಿಜೆಪಿಗೆ ಆರಂಭಿಕ ಮುನ್ನಡೆ

    ಗುಜರಾತ್ ಚುನಾವಣೆ – ಬಿಜೆಪಿಗೆ ಆರಂಭಿಕ ಮುನ್ನಡೆ

    ಅಹಮದಾಬಾದ್: ಬಹುನಿರೀಕ್ಷಿತ ಗುಜರಾತ್ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಬಿಜೆಪಿಗೆ ಆರಂಭಿಕ ಮುನ್ನಡೆ ಸಿಕ್ಕಿದೆ.

    8 ಗಂಟೆ ವೇಳೆಗೆ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 22 ರಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 10 ಗಂಟೆ ಹೊತ್ತಿಗೆ ನಿಖರವಾಗಿ ಫಲಿತಾಂಶ ಹೊರಬೀಳಲಿದ್ದು, ಗಾಂಧಿನಾಡು ಯಾರ ಪಾಲಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

    2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಈಗಾಗಲೇ ಸಮೀಕ್ಷೆಗಳು ಗುಜರಾತ್‍ನಲ್ಲಿ ಕಮಲ ಅರಳಲಿದೆ ಅಂತ ಬಿಜೆಪಿ ಪಾಳಯಕ್ಕೆ ಖುಷಿ ಸುದ್ದಿ ಕೊಟ್ಟಿವೆ. ಈ ಸಮೀಕ್ಷೆಗಳಿಂದ ಬಿಜೆಪಿ ಶಕ್ತಿ ಇನ್ನಷ್ಟು ಜಾಸ್ತಿ ಆಗಿದೆ. ಹೀಗಾಗಿ ಫಲಿತಾಂಶ ಬಂದ ಬಳಿಕ ಮುಂದೆ ಚುನಾವಣೆ ಎದುರಿಸಲಿರೋ ಕರ್ನಾಟಕದತ್ತ ಬಿಜೆಪಿ ಗಮನ ಹರಿಸಲು ನಿಚ್ಚಳವಾಗಿದೆ.

    ಆದ್ರೆ ಕಾಂಗ್ರೆಸ್ ಮಾತ್ರ ಗುಜರಾತ್‍ನಲ್ಲಿ ಸೋತ್ರು, ಗೆದ್ರು ಸತತ ಎರಡನೇ ಬಾರಿಗೆ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನ ರಚಿಸಬೇಕೆಂಬ ಹಠಕ್ಕೆ ಬಿದ್ದಿವೆ. ಇನ್ನು ರಾಜಸ್ತಾನ, ಈಶಾನ್ಯ ರಾಜ್ಯಗಳ ಚುನಾವಣೆ ಮೇಲೂ ಗುಜರಾತ್ ಫಲಿತಾಂಶ ನಿರ್ಣಾಯಕವಾಗಲಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ.