Tag: public tv

  • ಇಂದೇ ಲೋಕಸಭೆಯಲ್ಲಿ ಬಜೆಟ್ ಮಂಡನೆ

    ನವದೆಹಲಿ: ಹಣಕಾಸು ಬಜೆಟ್ ಇಂದೇ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸ್ಪೀಕರ್ ಅವರ ಅನುಮತಿ ಪಡೆದು ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.

    ಕಣ್ಣೂರು ಸಂಸದ ಇ.ಅಹ್ಮದ್ ನಿಧನರಾದ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು ಮುಂದೂಡಬೇಕೆಂದು ಕೇರಳ ಸಂಸದರು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದರು.  ಆದರೆ ಸರ್ಕಾರ ಬಜೆಟ್ ಮುಂದೂಡದೇ  ಇಂದೇ ಮಂಡಿಸಲು ನಿರ್ಧಾರ ಕೈಗೊಂಡಿದೆ.

    ಮಂಗಳವಾರದಂದು ಸಂಸತ್ ಅಧಿವೇಶನದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಅಹ್ಮದ್ ಅವ್ರನ್ನ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಂಸದ ಅಹ್ಮದ್ ಕೊನೆಯುಸಿರೆಳೆದಿದ್ದಾರೆ. ಅಹ್ಮದ್ ಸಾವಿನ ಸುದ್ದಿ ಕೇಳಿ ತಡರಾತ್ರಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿ ಅನೇಕರು ಆಸ್ಪತ್ರೆಗೆ ಭೇಟಿ ನೀಡಿದ್ರು.

    ಅಹ್ಮದ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದಿಂದ ಸಂಸದರಾಗಿ ಆಯ್ಕೆ ಆಗಿದ್ರು. ಕೇಂದ್ರ ವಿದೇಶಾಂಗ ಸಚಿವರಾಗಿ ರಾಜ್ಯ ರೈಲ್ವೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು.

  • ಅವ್ರು ಮಾಡಿದ ತಪ್ಪಿಗೆ ನನ್ನ ಹೆಸ್ರು ಹೇಳಿ ಸರ್ ಕೈಲಿ ಹೊಡೆಸ್ತಾರೆ: ಕ್ಲಾಸ್‍ಮೇಟ್ಸ್ ಹೆಸರು ಬರೆದಿಟ್ಟು ಬಾಲಕ ಆತ್ಮಹತ್ಯೆ

    ಬೆಂಗಳೂರು: 14 ವರ್ಷದ ಬಾಲಕನೊಬ್ಬ ಡೆತ್‍ನೋಟ್‍ನಲ್ಲಿ ತನ್ನ ಸಹಪಠಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಗರದ ಹೊರವಲಯ ನೆಲಮಂಗಲದ ದಾಸನಪುರ ಗ್ರಾಮದಲ್ಲಿ ನಡೆದಿದೆ.

    ವಿಕಾಸ್ ಆತ್ಮಹತ್ಯೆಗೆ ಶರಣಾದ ಬಾಲಕ. ವಿಕಾಸ್ ಆಚಾರ್ಯ ಗುರುಪರಂಪರ ಶಾಲೆಯಲ್ಲಿ 7ನೆ ತರಗತಿ ವ್ಯಾಸಂಗ ಮಾಡುತ್ತಿದ್ದ. ಅವರು ಮಾಡಿದ ತಪ್ಪಿಗೆ ನನ್ನ ಹೆಸರು ಹೇಳಿ ಶಿಕ್ಷಕರಿಂದ ಹೊಡೆಸುತ್ತಾರೆ ಎಂದು ವಿಕಾಸ್ ಡೆತ್‍ನೋಟ್‍ನಲ್ಲಿ ತನ್ನ ಸಹಪಾಠಿಗಳ ಹೆಸರು ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಡೆತ್‍ನೋಟ್‍ನಲ್ಲಿ ಏನಿದೆ: ಅಮ್ಮ..ನೀವು ಎಲ್ಲರೂ ಹೋಗು ಹೋಗು ಅಂತಾ ಹೇಳುತ್ತಿದ್ದೀರಿ. ಡೈರೆಕ್ಟಾಗಿ ಮೇಲಕ್ಕೆ ಹೋಗಿದ್ದಿನಿ. ನಿಮಗೆ ಸಮಧಾನ ಆಯಿತು. ನಮ್ಮ ಸ್ಕೂಲ್‍ನಲ್ಲಿ ನಾನು ಏನು ಮಾಡದಿದ್ರು ಅವರು ಮಾಡಿದ ತಪ್ಪಿಗೆ ನನ್ನ ಹೆಸರು ಸೇರಿಸಿ ಸರ್ ಕೈಯಲ್ಲಿ ಹೊಡೆಸ್ತಾರೆ. ನನ್ನ ಸಾವಿಗೆ ಹರಿಣಿ, ಚೇತನ್ ಜಿ.ಟಿ, ಶಶಾಂಕ್, ಭಾರತಿ ಸಿ., ಇವರೆಲ್ಲ ಕಾರಣ
    ಇಂತಿ ನಿಮ್ಮ,
    ವಿಕಾಸ್

    ಘಟನೆಯ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಬಹುನಿರೀಕ್ಷಿತ ಕೇಂದ್ರ ಬಜೆಟ್‍ಗೆ ಕ್ಷಣಗಣನೆ – ಮೋದಿ ಸರ್ಕಾರಕ್ಕೆ ಲಕ್ ತರುತ್ತಾ ಜೇಟ್ಲಿ ಲೆಕ್ಕಾ

    ನವದೆಹಲಿ: ದೇಶದ 133 ಕೋಟಿ ಜನ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವ ಕೇಂದ್ರ ಬಜೆಟ್ ಇವತ್ತು ಸಂಸತ್‍ನಲ್ಲಿ ಮಂಡನೆಯಾಗಲಿದೆ. ನೋಟು ನಿಷೇಧದ ಬಳಿಕ ಏರುಪೇರಾಗಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವ ಅರುಣ್ ಜೇಟ್ಲಿ ಇವತ್ತು ಬಜೆಟ್ ಮಂಡಿಸ್ತಿದ್ದಾರೆ.

    ಬೆಳಗ್ಗೆ 9.30ಕ್ಕೆ ಬಜೆಟ್ ಅಧಿವೇಶನ ಆರಂಭವಾಗಲಿದೆ. 10 ಗಂಟೆ ಸುಮಾರಿಗೆ ಬಜೆಟ್ ಪ್ರತಿಗಳು ಸಂಸತ್‍ಗೆ ಬರಲಿವೆ. ಲೋಕಸಭಾ ಸ್ಪೀಕರ್ ಅನುಮತಿ ನೀಡಿದ ಬಳಿಕ ಬೆಳಗ್ಗೆ 11 ಗಂಟೆಗೆ ಕುತೂಹಲಕಾರಿ ಬಜೆಟ್ ಮಂಡನೆಯಾಗಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ಬಜೆಟ್ ಜೊತೆ ರೈಲ್ವೆ ಬಜೆಟ್ ಕೂಡ ಮಂಡನೆಯಾಗ್ತಿದೆ. ಈ ಮೂಲಕ 92 ವರ್ಷಗಳ ಹಿಸ್ಟರಿಗೆ ಮೋದಿ ಸರ್ಕಾರ ಬ್ರೇಕ್ ಹಾಕಿದೆ.

    1921ರಲ್ಲಿ ಬ್ರಿಟೀಷ್ ಅಧಿಕಾರಿ ವಿಲಿಯಂ ಮಿಚೆಲ್ ಮೊದಲ ರೈಲ್ವೆ ಬಜೆಟ್ ಮಂಡಿಸಿದ್ರು. ಕಳೆದ ವರ್ಷ ಸುರೇಶ್ ಪ್ರಭು ರೈಲ್ವೆ ಬಜೆಟ್ ಮಂಡಿಸಿದ್ರು. ಡಿಜಿಟಲ್ ಇಂಡಿಯಾಗೆ ಒತ್ತು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಮೊದಲ ಬಾರಿಗೆ ಆನ್‍ಲೈನ್‍ನಲ್ಲಿ ಬಜೆಟ್ ಪ್ರತಿಗೆ ಮೊರೆ ಹೋಗಿದೆ. ಆದ್ರೆ ಸಂಸತ್ ಸದಸ್ಯರಿಗಾಗಿ ಮಾತ್ರ 1 ಸಾವಿರ ಬಜೆಟ್ ಪ್ರತಿಗಳನ್ನ ಮುದ್ರಣ ಮಾಡಿದೆ.

  • ಸ್ವಚ್ಛ್ ಧನ್: ವಿಶೇಷ ಸಾಫ್ಟ್ ವೇರ್ ಬಳಸಿ ಐಟಿ ಶೋಧ- 18 ಲಕ್ಷ ಖಾತೆದಾರರಿಗೆ ನೋಟಿಸ್

    ನವದೆಹಲಿ: ನೋಟ್‍ಬ್ಯಾನ್ ಬಳಿಕ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್‍ಗಳಲ್ಲಿ ಡೆಪಾಸಿಟ್ ಮಾಡಿರುವ ಹಣದ ಮೇಲೆ ಐಟಿ ಈ ಮೊದಲೇ ಕಣ್ಣಿಟ್ಟಿತ್ತು. ಮಂಗಳವಾರದಂದು ಸ್ವಚ್ಛ್ ಧನ್/ಕ್ಲೀನ್ ಮನಿ ಅಭಿಯಾನವನ್ನು ಆರಂಭಿಸಿರೋ ಕೇಂದ್ರ ಸರ್ಕಾರ ವಿಶೇಷ ಸಾಫ್ಟ್‍ವೇರ್ ಬಳಸಿ ಬ್ಯಾಂಕ್‍ಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಖಾತೆದಾರರ ಡೆಪಾಸಿಟ್ ಮಾಹಿತಿ ಹೊಂದಾಣಿಕೆ ಆಗದ ಕಾರಣ 18 ಲಕ್ಷ ಮಂದಿಗೆ ನೋಟಿಸ್ ನೀಡಿದೆ.

    ಇ-ಮೇಲ್, ಎಸ್‍ಎಂಎಸ್ ಮೂಲಕ ನೊಟೀಸ್ ರವಾನಿಸಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಪ್ರತಿಕ್ರಿಯೆ ಬರದಿದ್ರೆ ಐಟಿಯಿಂದ ಮತ್ತೊಮ್ಮೆ ನೋಟಿಸ್ ಸಿಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ನಿಂದ ನೋಟ್‍ಬ್ಯಾನ್ ನಂತರ ಬ್ಯಾಂಕ್‍ಗಳಲ್ಲಾಗಿರುವ ಎಲ್ಲಾ ಠೇವಣಿಗಳ ಬಗ್ಗೆ ಇ- ವೇರಿಫಿಕೇಷನ್ ಮಾಡಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ.

    ಈ ಮಧ್ಯೆ, ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಕೋಟಿ 12 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಮೂವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ಅಬ್ದುಲ್, ಶಂಶುದ್ದೀನ್, ಅಫ್ಜಲ್ ಅಂತ ಗುರುತಿಸಲಾಗಿದೆ. ಇವರ ಬಳಿ ಹೊಸ 2000 ರೂಪಾಯಿಯ 3 ಕೋಟಿ 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಷ್ಟು ಹೊಸ 500 ಹಾಗು 100 ರೂಪಾಯಿಗಳ 193 ಕಂತೆಗಳಿದ್ದವು.

  • ಹೃದಯಾಘಾತದಿಂದ ಸಂಸದ ಇ.ಅಹ್ಮದ್ ನಿಧನ- ಬಜೆಟ್ ಮುಂದೂಡುವ ಸಾಧ್ಯತೆ

    ನವದೆಹಲಿ: ಕೇರಳದ ಕಣ್ಣೂರು ಸಂಸದ ಇ.ಅಹ್ಮದ್ ನಿಧನರಾಗಿದ್ದು, ಬಜೆಟ್ ಅಧಿವೇಶನದ ಮೇಲೆ ಸೂತಕದ ನೆರಳು ಆವರಿಸಿದೆ.

    ಮಂಗಳವಾರದಂದು ಸಂಸತ್ ಅಧಿವೇಶನದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಅಹ್ಮದ್ ಅವ್ರನ್ನ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಂಸದ ಅಹ್ಮದ್ ಕೊನೆಯುಸಿರೆಳೆದಿದ್ದಾರೆ. ಅಹ್ಮದ್ ಸಾವಿನ ಸುದ್ದಿ ಕೇಳಿ ತಡರಾತ್ರಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿ ಅನೇಕರು ಆಸ್ಪತ್ರೆಗೆ ಭೇಟಿ ನೀಡಿದ್ರು.

    ಅಹ್ಮದ್ ಅಕಾಲಿಕ ಸಾವಿನಿಂದ ಇವತ್ತಿನ ಬಜೆಟ್ ಅಧಿವೇಶನವನ್ನ ಕೆಲವು ಗಂಟೆಗಳ ಕಾಲ ಮುಂದೂಡ್ತಾರಾ? ಇಲ್ಲಾಂದ್ರೆ ಸಂತಾಪ ಸೂಚಿಸಿ ಸಮಯಕ್ಕೆ ಸರಿಯಾಗಿ ಬಜೆಟ್ ಮಂಡಿಸ್ತಾರ ಅನ್ನೋ ಪ್ರಶ್ನೆ ಶುರುವಾಗಿದೆ.

    ಅಹ್ಮದ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದಿಂದ ಸಂಸದರಾಗಿ ಆಯ್ಕೆ ಆಗಿದ್ರು. ಕೇಂದ್ರ ವಿದೇಶಾಂಗ ಸಚಿವರಾಗಿ ರಾಜ್ಯ ರೈಲ್ವೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು.