Tag: public tv

  • ಹೋರಾಟಗಾರರ ಭಾಷಣದಂತೆ ಮಾತನಾಡ್ತೀರಿ: ಸತ್ಯನಾರಾಯಣ

    ಬೆಂಗಳೂರು: ಹೋರಾಟಗಾರರು ಹೇಗೆ ಭಾಷಣ ಮಾಡುತ್ತಾರೋ ಅದೇ ರೀತಿ ನೀವು ಬಿಗ್ ಬುಲೆಟಿನ್‍ನಲ್ಲಿ ಮಾಡುತ್ತಿದ್ದೀರಿ ಎಂದು ಹಿರಿಯ ಪತ್ರಕರ್ತ ಸತ್ಯನಾರಾಯಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯ ವಿಶೇಷ ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಕ್ಯಾಮೆರಾ ನಿಮ್ಮದು, ಮೈಕ್ ನಿಮ್ಮ ಬಳಿಯೇ ಇದೆ. ಚರ್ಚೆಯಲ್ಲಿ ಬೇರೆ ಅವರಿಗೆ ಮಾತನಾಡಲು ಅವಕಾಶ ನೀಡದ ಕಾರಣ ಸತ್ಯದ ದರ್ಶನಕ್ಕೆ ಅಪಚಾರವಾಗಬಹುದು ಎನ್ನುವ ಶಂಕೆ ನನ್ನದು ಎಂದು ಅವರು ಹೇಳಿದರು.

    ರಾಜಕೀಯ ವ್ಯಕ್ತಿಗಳಿಗೆ ಮಾತನಾಡಲು ಅವಕಾಶ ನೀಡದೇ ಇದ್ದರೆ, ಜನರಿಗೆ ತಪ್ಪು ಮಾಹಿತಿ ರವಾನಿಸಿದಂತೆ ಆಗುತ್ತದೆ. ಕೆಲವೊಮ್ಮೆ ಆಕ್ರೋಶ ಇರಬೇಕು ಎಂದು ತಿಳಿಸಿದರು.

    ಬೇರೆಯವರ ಧ್ವನಿ ಕೇಳಲ್ಲ: ನಿಮ್ಮ ಮತನಾಡುವ ಭಾಷೆ ವಾಕ್ಯಗಳು ಚೆನ್ನಾಗಿದೆ. ನಿಮ್ಮ ಧ್ವನಿ ಮಾತ್ರ ಕೇಳುತ್ತದೆ, ಬೇರೆಯವರ ಧ್ವನಿ ಸ್ಪಷ್ಟವಾಗಿ ಕೇಳುವುದಿಲ್ಲ ಯಾಕೆ ಎಂದು ಹಿರಿಯ ನಟಿ ಅರುಂಧತಿ ನಾಗ್ ಎಚ್.ಆರ್.ರಂಗನಾಥ್ ಅವರಲ್ಲಿ ಪ್ರಶ್ನಿಸಿದರು.

    ಇದಕ್ಕೆ ಉತ್ತರ ನೀಡಿದ ರಂಗನಾಥ್, ನಮ್ಮದು ಸ್ಟುಡಿಯೋದ ಜೊತೆ ನೇರಸಂಪರ್ಕ ಇರುತ್ತದೆ. ಬೇರೆಯವರ ಮಾತನಾಡುವ ಸಿಗ್ನಲ್ ಸಮಸ್ಯೆಯಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ದೃಶ್ಯ, ಆಡಿಯೋ ಸರಿಯಾಗಿ ಬರುವುದಿಲ್ಲ ಎಂದು ತಿಳಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

    https://www.youtube.com/watch?v=gExNvrRr3zI

    https://www.youtube.com/watch?v=2T6LZpEtf6o

    https://www.youtube.com/watch?v=LZjrhKNgCDY

    https://www.youtube.com/watch?v=A3EdUMpeOwI

  • ಸುದ್ದಿಯಲ್ಲಿ ವಾಖ್ಯಾನ ನೀಡೋದು ಎಷ್ಟು ಸರಿ: ಮುಖ್ಯಮಂತ್ರಿ ಚಂದ್ರು ಪ್ರಶ್ನೆ

    ಬೆಂಗಳೂರು: ಸುದ್ದಿಯಲ್ಲಿ ವಾಖ್ಯಾನ ನೀಡುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಚಂದ್ರು ಅವರು ರಂಗನಾಥ್ ಅವರನ್ನು ಪ್ರಶ್ನಿಸಿದ್ದಾರೆ.

    ವಿಶೇಷ ಬಿಗ್‍ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುದ್ದಿಯನ್ನು ಸುದ್ದಿಯಾಗಿ ಓದಬೇಕು. ವಾಖ್ಯಾನ ಮಾಡಬೇಕು ಎಂದಿದ್ದರೆ ನೀವು ಸಂವಾದಕ್ಕೆ ಬರಬೇಕು. ಸುದ್ದಿಯಲ್ಲಿ ವಾಖ್ಯಾನ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

    ಐದು ವರ್ಷಗಳಿಂದ ನಾವು ನೋಡಿಕೊಂಡು ಬಂದಿದ್ದೇವೆ. ಆದರೆ ಪಬ್ಲಿಕ್ ಟಿವಿ ರಂಗನಾಥ್ ಟಿವಿ ಆಗಿದೆ. ಈ ರೀತಿ ಆಗಬಾರದು ಎಂದು ಅಭಿಪ್ರಾಯ ಪಟ್ಟರು.

    ಜನಪ್ರಿಯತೆ ಜಾಸ್ತಿ ಆಗುತ್ತಿದ್ದಂತೆ ಜಾವಾಬ್ದಾರಿ ಜಾಸ್ತಿ ಆಗುತ್ತದೆ. ಹೊಗಳಿಕೆ ಬಂದಾಗ ಏರಬಾರದು. ನಿರಂತರವಾಗಿ ಜನಪ್ರಿಯತೆಯನ್ನು ಉಳಿಸಿಕೊಳ್ಳುವುದು ಕಷ್ಟ. ಈ ರೀತಿಯ ಜನಪ್ರಿಯತೆಯನ್ನು ಉಳಿಸಿಕೊಂಡವರು ಅಂದರೆ ಅದು ಡಾ. ರಾಜ್‍ಕುಮಾರ್ ಮಾತ್ರ. ಅಣ್ಣಾವ್ರು ಮೃತಪಟ್ಟ ಬಳಿಕವೂ ಜನಪ್ರಿಯ ವ್ಯಕ್ತಿಯಾಗಿ ಈಗಲೂ ಇದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಮೂಲಭೂತ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಜನರಿಗೆ ಮಾಹಿತಿ ನೀಡುವಂತಹ ಕಾರ್ಯಕ್ರಮಗಳು ಮೂಡಿಬರಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

  • ಕೆಲವೊಮ್ಮೆ ನೀವೇ ಹಿಂಸೆಗೆ ಕರೆಕೊಟ್ಟಂತೆ ಅನಿಸುತ್ತದೆ: ನಿವೃತ್ತ ಡಿಜಿಪಿ ರೇವಣ ಸಿದ್ದಯ್ಯ

    ಬೆಂಗಳೂರು: ಕೆಲವೊಮ್ಮೆ ನೀವೇ ಹಿಂಸೆಗೆ ಕರೆಕೊಟ್ಟಂತೆ ಅನಿಸುತ್ತದೆ ಎಂದು ನಿವೃತ್ತ ನಿವೃತ್ತ ಡಿಜಿಪಿ ರೇವಣ ಸಿದ್ದಯ್ಯ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯ 5ನೇ ವರ್ಷದ ಸಂಭ್ರಮದ ಸಂಭ್ರಮದಲ್ಲಿ ನಡೆದ ಸ್ಪೆಷಲ್ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಕೆಲ ಸಂದರ್ಭದಲ್ಲಿ ಆಕ್ರೋಶ ಬೇಕು, ನಿರ್ಭಯವಾಗಿ ಹೇಳಬೇಕು. ಆದರೆ ಕೆಲವೊಮ್ಮೆ ಬುಲೆಟಿನ್‍ನಲ್ಲಿ ಹಿಂಸೆಗೆ ಕರೆಕೊಟ್ಟಂತೆ ಪ್ರಚೋದನೆ ನೀಡಿದಂತೆ ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕ್ರೈಂ ರಿರ್ಪೋಟರ್ ಆಗಿದ್ದಾಗ ಜಾಸ್ತಿ ಪ್ರಶ್ನೆ ಕೇಳಿ ಪೊಲೀಸರ ಕಾಲನ್ನು ನೀವು ಎಳೆಯುತ್ತಿದ್ದ ವಿಚಾರ ನನಗೆ ಗೊತ್ತಿದೆ. ಆದರೆ ಇಲ್ಲಿ ವ್ಯಕ್ತಿಗಳು ರಂಗನಾಥ್ ಸಾಹೆಬ್ರೆ ಎಂದು ಹೇಳುತ್ತಿದ್ದರೂ ನೀವು ಅವರ ಅಭಿಪ್ರಾಯವನ್ನು ಪೂರ್ಣವಾಗಿ ಹೇಳಲು ಬಿಡುವುದಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

  • ಕರ್ನಾಟಕ ಅಂದ್ರೆ ಬೆಂಗಳೂರು ಮಾತ್ರವೇ ಯಾಕೆ: ಡಾ. ಚಂದ್ರಶೇಖರ ಸಾಂಬ್ರಾಣಿ

    ಬೆಂಗಳೂರು: ಕರ್ನಾಟಕ ಎಂದರೆ ವಾಹಿನಿಗಳಿಗೆ ಬೆಂಗಳೂರು ಮಾತ್ರವೇ ಯಾಕೆ ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದ ಸಂಚಾಲಕ ಡಾ.ಚಂದ್ರಶೇಖರ ಸಾಂಬ್ರಾಣಿ ಪ್ರಶ್ನಿಸಿದ್ದಾರೆ.

    ವಿಶೇಷ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹಿನಿಗಳು ಬೆಂಗಳೂರನ್ನು ಬಿಟ್ಟು ಉತ್ತರ ಕರ್ನಾಟಕದ ಕಡೆ ಬರಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಹೇಳಿದರು.

    ಈ ವೇಳೆ ಯಾಕೆ ನಿಮ್ಮ ಸಹ ನಿರೂಪಕರಿಗೆ ನೀವು ಮಾತನಾಡಲು ಬಿಡುವುದಿಲ್ಲ ಎಂದು ಚಂದ್ರಶೇಖರ ಸಾಂಬ್ರಾಣಿ ಪ್ರಶ್ನಿಸಿದರು.

    ನವಲಗುಂದದ ಜೆಡಿಎಸ್ ಶಾಸಕ ಕೋನ ರೆಡ್ಡಿ ಮಾತನಾಡಿ, ನಾನು ಸಿಟ್ಟನ್ನು ಒಪ್ಪಿಕೊಳ್ಳುತ್ತೇನೆ. ಉತ್ತರ ಕರ್ನಾಟಕದಲ್ಲಿ ಬೈಗುಳವೇ ವಿಶೇಷ. ವ್ಯಕ್ತಿಯನ್ನು ಬೈದುಕೊಂಡೆ ಹೊಗಳುತ್ತೇವೆ. ಹೀಗಾಗಿ ಜನ ಸಾಮಾನ್ಯ ಭಾಷೆ ಮತ್ತು ಸರಳ ವಿವರಣೆಯಿಂದ ಬಿಗ್ ಬುಲೆಟಿನ್ ಗ್ರಾಮೀಣ ಭಾಗದ ಜನತೆಗೆ ಇಷ್ಟವಾಗುತ್ತದೆ ಎಂದು ಹೇಳಿದರು.

    ನೀವು ಅತಿಥಿಗಳಿಗೆ ಮಾತನಾಡಲು ಬಿಡುವುದಿಲ್ಲ. ಬಹಳಷ್ಟು ಸಲ ನನಗೆ ಈ ಅನುಭವ ಆಗಿದೆ. ಕಳಸಾ ಬಂಡೂರಿ ಸಮಸ್ಯೆ ವೇಳೆ ನಿಮ್ಮ ವಾಹಿನಿ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತ ವ್ಯಕ್ತಿಗಳಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳನ್ನು ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

  • ಊಹೆ ಮಾಡಿ ಸುದ್ದಿ ಹೇಳಿದ್ರೆ, ಚಾನೆಲ್ ನಂಬಿಕೆ ಕಡಿಮೆ ಆಗುತ್ತೆ: ಅಶ್ವತ್ಥನಾರಾಯಣ

    ಬೆಂಗಳೂರು: ಊಹೆ ಮಾಡಿ ಸುದ್ದಿ ಹೇಳಿದರೆ, ಚಾನೆಲ್ ನಂಬಿಕೆ ಕಡಿಮೆ ಆಗುತ್ತದೆ ಎಂದು ಬಿಜೆಪಿ ಮುಖಂಡ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಸ್ಪೆಷಲ್ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವೊಮ್ಮೆ ಊಹೆಯ ಆಧಾರದಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತೀರಿ. ನಿಮ್ಮ ಊಹೆ ಸರಿಯಾದರೆ ಓಕೆ ಆದರೆ ಕೆಲವೊಮ್ಮೆ ಆ ರೀತಿ ಆಗಿರುವುದಿಲ್ಲ. ಊಹೆ ಸತ್ಯಕ್ಕೆ ಹತ್ತಿರವಾಗಿ ಇದ್ದಾಗ ಪಕ್ಕಾ ಮಾಡಿಕೊಂಡು ಹೇಳಬೇಕು ಎಂದು ಸಲಹೆ ನೀಡಿದರು.

    ಮಹದಾಯಿ, ಕಾವೇರಿ ಗಲಾಟೆ, ಸರ್ಜಿಕಲ್ ಸ್ಟ್ರೈಕ್ ಜೊತೆಗೆ ಗಣರಾಜ್ಯೋತ್ಸವ ಪರೇಡ್ ವೇಳೆ ನೀಡಿದ ವಿಶ್ಲೇಷಣೆ ಉತ್ತಮವಾಗಿತ್ತು ಎಂದು ಹೇಳಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಜೆಡಿಎಸ್ ಶಾಸಕ ಕೋನ ರೆಡ್ಡಿ, ಉತ್ತರ ಕರ್ನಾಟಕ ನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

  • ಪ್ರಾದೇಶಿಕ ವಿಚಾರ ಬಂದಾಗ ಪತ್ರಕರ್ತ ಪಕ್ಷಪಾತಿಯಾದ್ರೆ ತಪ್ಪಿಲ್ಲ: ದ್ವಾರಕನಾಥ್

    ಬೆಂಗಳೂರು: ಪ್ರಾದೇಶಿಕ ವಿಚಾರ ಬಂದಾಗ ಪತ್ರಕರ್ತ ಪಕ್ಷಪಾತಿ ಆಗಿರುವುದರಲ್ಲಿ ತಪ್ಪಿಲ್ಲ ಎಂದು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯ 5ನೇ ವರ್ಷದ ಸಂಭ್ರಮದಲ್ಲಿ ಆಯೋಜನೆಗೊಂಡ ಸ್ಪೆಷಲ್ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವಾಗಲೂ ಒಂದೇ ರೀತಿ ಇರಬಾರದು. ಸಂಪ್ರದಾಯವನ್ನು ಬ್ರೇಕ್ ಮಾಡಬೇಕು. ರಾಜಕಾರಣಿಗಳ ಜೊತೆ ಮಾತನಾಡಲು ಜನಸಾಮಾನ್ಯರಿಗೆ ಆಗುವುದಿಲ್ಲ. ಹೀಗಾಗಿ ಬುಲೆಟಿನ್ ನಲ್ಲಿ ಅಕ್ರೋಶ ಹೊರ ಹಾಕಿದರೆ ತಪ್ಪೇನು ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

    ಚೌಕಟ್ಟು ಒಳಗಡೆ ನೈತಿಕ ಆಕ್ರೋಶಕ್ಕೆ ಯಾವುದೇ ಅಜೆಂಡಾ ಇರುವುದಿಲ್ಲ. ಆದಿವಾಸಿಗಳು ಮತ್ತು ಬಡವರ ಸಮಸ್ಯೆಗಳನ್ನು ಬಿಂಬಿಸಿ ಅವರ ಕಷ್ಟಕ್ಕೆ ವಾಹಿನಿಗಳಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

    ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ನಾನು ಬಿಗ್ ಬುಲೆಟಿನ್ ಹೆಡ್‍ಲೈನ್ ನೋಡಿ ಮಲಗುತ್ತೇನೆ. ಪಬ್ಲಿಕ್ ಹೀರೋ ನಿಜವಾಗಿಯೂ ಉತ್ತಮ ಕಾರ್ಯಕ್ರಮ. ಪ್ರತಿ ದಿನ ಒಬ್ಬೊಬ್ಬ ಹೀರೋವನ್ನು ಗುರುತಿಸುವುದು ಕಷ್ಟದ ಕೆಲಸ ಎಂದು ಹೇಳಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳನ್ನು ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

  • ಬಿಗ್ ಬುಲೆಟಿನ್ ಚೆನ್ನಾಗಿದೆ, ಆದ್ರೆ ಬೇರೆಯವರಿಗೆ ಮಾತನಾಡಲು ಬಿಡಲ್ಲ ಯಾಕೆ: ಬಿವಿ ಆಚಾರ್ಯ ಪ್ರಶ್ನೆ

    ಬೆಂಗಳೂರು: ಬಿಗ್ ಬುಲೆಟಿನ್ ಚೆನ್ನಾಗಿದೆ. ಆದರೆ ಕೋಪ ಯಾಕೆ? ವಿರೋಧ ಮಾತನಾಡುವರ ಮಾತನ್ನು ಕೇಳಲು ಬೀಡುವುದಿಲ್ಲ ಯಾಕೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ ಅವರು ಎಚ್.ಆರ್.ರಂಗನಾಥ್ ಅವರನ್ನು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೋಪ ಕಡಿಮೆಯಾದರೆ ಬಿಗ್ ಬುಲೆಟಿನ್ ಮತ್ತಷ್ಟು ಚೆನ್ನಾಗಿ ಮೂಡಿಬರಬಹುದು ಎಂದು ಸಲಹೆ ನೀಡಿದರು.

    ಜಡ್ಜ್ ಆಗಿದ್ದವರಿಗೆ ಸಂಯಮ ಇರಬೇಕು. ಎರಡೂ ಕಡೆಯ ವಾದವನ್ನು ಅಲಿಸಬೇಕಾಗುತ್ತದೆ. ಅದೇ ರೀತಿಯಾಗಿ ವಾರ್ತಾ ನಿರೂಪಕರು ಎರಡು ಕಡೆಯ ವಾದವನ್ನು ಕೇಳಬೇಕು ಎನ್ನುವ ಅಭಿಪ್ರಾಯವನ್ನು ಹೇಳಿದರು.

    ದೇಶದಲ್ಲಿ ಒಬ್ಬರು ಪ್ರಖ್ಯಾತ ಪ್ರರ್ತಕರ್ತರಿದ್ದಾರೆ. ಅವರು ಏನು ಮಾತನಾಡಿರುತ್ತಾರೋ ಆ ವಿಚಾರದ ಪರ ಮಾತನಾಡಿದರೆ ಅತಿಥಿಗಳನ್ನು ಬಿಡುತ್ತಾರೆ. ವಿರೋಧ ಮಾತನಾಡಿದರೆ ಮಾತನಾಡಲು ಬಿಡುವುದಿಲ್ಲ. ಹಾಗೆ ನೀವು ಮಾಡುವುದಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಎಚ್‍ಆರ್ ರಂಗನಾಥ್ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಬಿವಿ ಆಚಾರ್ಯ ಅವರ ಜೊತೆಗಿನ ಅನುಭವವನ್ನು ಮೆಲುಕು ಹಾಕಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳನ್ನು ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

  • ಸ್ಟುಡಿಯೋದ ಒಳಗಡೆ ಆಕ್ರೋಶ ವ್ಯಕ್ತಪಡಿಸುವುದು ಎಷ್ಟು ಸರಿ: ವಿಮಲಾ ಪ್ರಶ್ನೆ

    ಬೆಂಗಳೂರು: ವಾಹಿನಿಯ ಆ್ಯಂಕರ್ ಆಗಿ ಸ್ಟುಡಿಯೋದ ಒಳಗಡೆ ಆಕ್ರೋಶವನ್ನು ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಮಹಿಳಾ ಹೋರಾಟಗಾರ್ತಿ ವಿಮಲಾ ಅವರು ರಂಗನಾಥ್ ಅವರಲ್ಲಿ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯ 5ನೇ ವರ್ಷದ ಸಂಭ್ರಮದಲ್ಲಿ ವಿಶೇಷ ಬಿಗ್‍ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಬೀದಿಯಲ್ಲಿ ಪ್ರತಿಭಟನೆ ಮಾಡುವಾಗ ಅಕ್ರೋಶ ವ್ಯಕ್ತಪಡಿಸುತ್ತೇವೆ. ಕಲಾವಿದರು ನಾಟಕದಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಆದರೆ ನೀವು ಸ್ಟುಡಿಯೋದಲ್ಲಿ ಏರು ಧ್ವನಿಯಲ್ಲಿ ಆಕ್ರೋಷವನ್ನು ಹೊರ ಹಾಕದೇ ತಾಳ್ಮೆಯಿಂದ ಮಾತನಾಡಬಹುದಲ್ಲ ಎಂದು ಪ್ರಶ್ನಿಸಿದರು.

    ಅತಿಥಿಗಳ ಜೊತೆ ಮಾತನಾಡುವಾಗ ಸಮಾಧಾನದಿಂದ ಇರಬೇಕು. ತಾಳ್ಮೆ ಕಳೆದುಕೊಳ್ಳಬಾರದು. ಎಚ್‍ವೈ ಮೇಟಿಯಂತಹ ಪ್ರಕರಣ ಬಂದಾಗ ವಿಡಿಯೋವನ್ನು ಪ್ರಸಾರ ಮಾಡಿದ್ದು ಸರಿ ಕಾಣಲಿಲ್ಲ. ಪದೇ ಪದೇ ವಿಡಿಯೋಗಳನ್ನು ಪ್ರಸಾರ ಮಾಡಿದರೆ ಅದು ಬೇರೊಂದು ಪ್ರಕರಣಕ್ಕೆ ಪ್ರಚೋದನೆ ನೀಡುತ್ತದೆ ಎಂದು ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಸುಳ್ಳು ಕೇಸ್ ವಿಚಾರವನ್ನು ವಿಮಲಾ ಅವರು ಉದಾಹರಣೆಯಾಗಿ ನೀಡಿದರು.

    ಮಾಧ್ಯಮಗಳು ಮೇಟಿಯಂತಹ ಪ್ರಕರಣ ಬಂದಾಗ ಸ್ವಯಂನಿಯಂತ್ರಣ ಅಳವಡಿಸಿಕೊಳ್ಳಬೇಕು ಎಂದು ಈ ವೇಳೆ ಸಲಹೆ ನೀಡಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕ ನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ ಅತಿಥಿಗಳಾಗಿ ಭಾಗವಹಿಸಿದ್ದರು.

  • ಧಾರವಾಡದ ಈ ಗ್ರಾಮದ ಮಕ್ಕಳು ಶಾಲೆಗೆ 7ಕಿ.ಮೀ. ನಡಿಬೇಕು..!

    ಧಾರವಾಡ: ಜಲ್ಲೆಯ ಗಡಿಭಾಗದ ಹಾಗೂ ಧಾರವಾಡ ತಾಲೂಕಿನ ಹುಣಶಿಕುಮರಿ ಗ್ರಾಮದ ಮಕ್ಕಳು ಪ್ರೌಢ ಶಾಲೆಗೆ ಹೋಗಬೇಕಾದರೆ ಪ್ರತಿನಿತ್ಯ 7 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.

    ಹುಣಶಿಕುಮರಿ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ. ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ಬಸ್ಸು ಬಿಟ್ರೆ ಬೇರೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಸೈಕಲ್ ಇದ್ದವರು ಸೈಕಲ್ಲಿನ ಮೇಲೆ ಹೋದ್ರೆ, ಉಳಿದವರಿಗೆ ಕಾಲೇ ಗತಿ. ಈ ಗ್ರಾಮದಿಂದ ಪ್ರತಿ ದಿನ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಕೇರಿ ಗ್ರಾಮದ ಶಾಲೆಗೆ ಹೋಗ್ತಾರೆ. 80 ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದ ಮಕ್ಕಳು ಇವಾಗ ವಿದ್ಯಾಭ್ಯಾಸದ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ.

    ಈ ಗ್ರಾಮ ದಟ್ಟ ಅರಣ್ಯ ಪ್ರದೇಶದಲ್ಲಿದೆ. ದಟ್ಟವಾದ ಅರಣ್ಯದಲ್ಲೇ ಇಲ್ಲಿನ ಮಕ್ಕಳು ಸೈಕಲ್ ಮೂಲಕ ಅಥವಾ ನಡೆದುಕೊಂಡು ಹೋಗಬೇಕು. ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಕಾರ್ಮಿಕ ಸಚಿವ ಹಾಗು ಕ್ಷೇತ್ರದ ಶಾಸಕ ಸಚಿವ ಸಂತೋಷ ಲಾಡ್ ಅವರಿಗೆ ಕೇಳಿದ್ರೆ, ಅರಣ್ಯ ಪ್ರದೇಶ ಇರುವುದರಿಂದ ರಸ್ತೆ ಡಾಂಬರಿಕರಣ ಮಾಡಿಲ್ಲ ಎಂದು ಹೇಳುತ್ತಾರೆ.

    ಸದ್ಯ ಗ್ರಾಮದ ರಸ್ತೆ ಆಗದೇ ಇದ್ರೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಹೀಗೆಯೇ ಎದ್ದು ಬಿದ್ದು ಓಡಾಡಬೇಕೊ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರಿದ್ರು ಇಲ್ಲಿ ಕಳಪೆ ರಸ್ತೆಗಳಿರುವುದು ವಿಪರ್ಯಾಸ.

  • ಗಂಡನ ಅನಾರೋಗ್ಯದಿಂದ ಬೇಸತ್ತು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ

    ರಾಮನಗರ: ಗಂಡನ ಅನಾರೋಗ್ಯದಿಂದ ಬೇಸತ್ತ ಪತ್ನಿ ತನ್ನ ಮಕ್ಕಳ ಜೊತೆ ಮನೆಯ ಎದುರಿನ ನೀರಿನ ಸಂಪ್ ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ.

    ರೇಖಾ (28), ಮಕ್ಕಳಾದ ನೂತನ್ (7) ಮತ್ತು ಮಾನ್ಯ (4) ಮೃತ ದುರ್ದೈವಿಗಳು. ಮೊದಲು ತಾಯಿ ರೇಖಾ ತನ್ನ ಮಕ್ಕಳನ್ನು ನೀರಿನ ಸಂಪ್ ನಲ್ಲಿ ಮುಳುಗಿಸಿ ಕೊನೆಗೆ ತಾವು ನೀರಿನ ಸಂಪ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನವೀನ್ ಅವರಿಗೆ ಲಿವರ್ ಜಾಂಡೀಸ್ ಇದ್ದು ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು.

    ಗಂಡನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು ಗುಣಮುಖವಾಗಿರಲಿಲ್ಲ. ಹೀಗಾಗಿ ಮುಂದೆ ಪತಿ ಸಾಯಬಹುದು ಅವರ ಅಗಲಿಕೆಯಿಂದ ಜೀವನ ಸಾಗಿಸುವುದು ಕಷ್ಟ ಅಂತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.