Tag: Public Television

  • ದೋಣಿವಿಹಾರಕ್ಕೆ ಹೋದ ತಂದೆ, ಮಗ ಸೆಲ್ಫಿಗೆ ಬಲಿ

    ದೋಣಿವಿಹಾರಕ್ಕೆ ಹೋದ ತಂದೆ, ಮಗ ಸೆಲ್ಫಿಗೆ ಬಲಿ

    ಮುಂಬೈ: ಕುಟುಂಬಸ್ಥರು ಒಟ್ಟಾಗಿ ದೋಣಿ ವಿವಾಹರಕ್ಕೆಂದು ಹೋದವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ತಂದೆ, ಮಗ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಉಜನಿ ಹಿನ್ನೀರಿನಲ್ಲಿ ನಡೆದಿದೆ.

    13 ವರ್ಷದ ಮಗ ಮತ್ತು 49 ವರ್ಷದ ತಂದೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸೆಲ್ಫಿ ಹುಚ್ಚಾಟಕ್ಕೆ ಇಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ದಂಪತಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೋಗಿದ್ದಾರೆ. ಈ ವೇಳೆ ಬೇರೆ ಬೇರೆ ಪೋಸ್ ಕೊಟ್ಟು ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲ್ಫಿಗೆ ಪೋಸ್ ಕೊಡುತ್ತಾ ತುದಿಯವರೆಗೂ ಹೋಗಿ ನೀತಿದ್ದಾರೆ.

    ಈ ವೇಳೆ ನಿಯಂತ್ರಣ ತಪ್ಪಿ ನೀರಿಗೆ ದೋಣಿಯಲ್ಲಿದ್ದ 6 ಮಂದಿ ಬಿದ್ದಿದ್ದಾರೆ. ದೋಣಿ ಮಗುಚಿರುವುದನ್ನು ಕಂಡು ಹತ್ತಿರದಲ್ಲೇ ಇದ್ದ ಮೀನುಗಾರರು ಬಂದು ರಕ್ಷಣೆ ಮಾಡುವಷ್ಟರಲ್ಲಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಉಳಿದವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬರಲಾಗಿದೆ.

    ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸೋಲ್ಲಾಪುರ ಎಸ್‍ಪಿ ತೇಜಸ್ವಿ ಸತ್ಪು ತಿಳಿಸಿದ್ದಾರೆ.

  • ಸೀರಿಯಲ್ ನೋಡಿ ರಾಮಾಯಣ ಬರೆದ ಬಾಲಕ

    ಸೀರಿಯಲ್ ನೋಡಿ ರಾಮಾಯಣ ಬರೆದ ಬಾಲಕ

    ಭುವನೇಶ್ವರ: ಲಾಕ್‍ಡೌನ್ ವೇಳೆ ಸೀರಿಯಲ್ ನೋಡಿ ಒಡಿಶಾದ 10 ವರ್ಷದ ಬಾಲಕ ರಾಮಾಯಣ ಪುಸ್ತಕ ಬರೆದಿದ್ದಾರೆ.

    ಆಯುಷ್ ಕುಮಾರ್(10) ರಾಮಾಯಣ ಪುಸ್ತಕವನ್ನು ಬರೆದಿದ್ದಾನೆ. ಈತ ರಾಮಾಯಣದ ಸೀರಿಯಲ್‍ಗಳನ್ನು ನೋಡಿ ಒಡಿಯಾ ಭಾಷೆಯಲ್ಲಿ 104 ಪುಟ ಇರುವ ರಾಮಾಯಣವನ್ನು ಬರೆದಿದ್ದಾನೆ.

    ಲಾಕ್‍ಡೌನ್ ಸಮಯದಲ್ಲಿ ಮರುಪ್ರಸಾರವಾಗುವ ರಾಮಾಯಣವನ್ನು ನೋಡಲು ನನ್ನ ಅಂಕಲ್ ಹೇಳಿದ್ದರು. ನೋಡುವುದು ಮಾತ್ರವಲ್ಲ ಅದನ್ನು ಬರೆಯಲು ಪ್ರಯತ್ನಿಸು ಎಂದು ಹೇಳಿದ್ದರು. ಪ್ರತಿದಿನ ನೋಡುತ್ತಿದ್ದೆ. ಪ್ರತಿನಿತ್ಯ ನಾನು ನೋಡಿದ ಎಪಿಸೋಡ್‍ಗಳನ್ನು ಬರೆಯತೊಡಗಿದ್ದೆ. ರಾಮಾಯಣವನ್ನು ಬರೆದು ಮುಗಿಸಲು ಸರಿ ಸುಮಾರು 2 ತಿಂಗಳ ಸಮಯವನ್ನು ತೆಗೆದುಕೊಂಡಿತ್ತು ಎಂದು ಆಯುಷ್ ಹೇಳಿದ್ದಾನೆ.

     

    ರಾಮನ 14 ವರ್ಷಗಳ ಕಾಲ ವನವಾಸ, ಸೀತೆಯ ಅಪಹರಣ ಹೀಗೆ ಅನೇಕ ಪ್ರಮುಖ ಘಟನೆಯನ್ನು ರಾಮಾಯಣದ ಪುಸ್ತಕದಲ್ಲಿ ಬರೆದಿದ್ದೇನೆ. ರಾಮ ಅಯೋಧ್ಯೆಗೆ ಹಿಂದಿರುಗುವಾಗ ಆತನಿಗೆ ಸಿಕ್ಕಿರುವ ಸ್ವಾಗತವನ್ನು ತುಂಬಾ ಸರಳವಾಗಿ ಚೆನ್ನಾಗಿ ವಿವರಿಸಿ ಬರೆದಿದ್ದೇನೆ ಎಂದು ಹೇಳಿದ್ದಾನೆ.