Tag: Public Music

  • ಪಬ್ಲಿಕ್‌ ಮ್ಯೂಸಿಕ್‌ ಅಸೋಸಿಯೇಟ್‌ ಎಡಿಟರ್‌ ವಿಜಯ್‌ ತಂದೆ ನಿಧನ

    ಪಬ್ಲಿಕ್‌ ಮ್ಯೂಸಿಕ್‌ ಅಸೋಸಿಯೇಟ್‌ ಎಡಿಟರ್‌ ವಿಜಯ್‌ ತಂದೆ ನಿಧನ

    ಬೆಂಗಳೂರು: ಪಬ್ಲಿಕ್‌ ಮ್ಯೂಸಿಕ್‌ ಅಸೋಸಿಯೇಟ್‌ ಎಡಿಟರ್‌ ವಿಜಯ್‌ ಅವರ ತಂದೆ ಹನುಮಂತರಾಜು(72) ನಿಧನರಾಗಿದ್ದಾರೆ.

    ಹಾಸನದ ವಿಜಯನಗರದಲ್ಲಿರುವ ಸ್ವಗೃಹದಲ್ಲಿ ಇಂದು ಬೆಳಗ್ಗೆ ಹನುಮಂತರಾಜು ವಿಧಿವಶರಾಗಿದ್ದಾರೆ. ತುಮಕೂರು ಸಿದ್ದಾರ್ಥ ಶಾಲೆಯಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಬಳಿಕ ಹಾಸನದಲ್ಲಿರುವ ಮನೆಯಲ್ಲಿ ನಿವೃತ್ತ ಜೀವನವನ್ನು ಅವರು ಕಳೆಯುತ್ತಿದ್ದರು.

    ತುಮಕೂರಿನಲ್ಲಿ ಅಂತ್ಯಂಸ್ಕಾರ ನಡೆಯಲಿದೆ. ಹನುಮಂತರಾಜು ಅವರು ಪತ್ನಿ, ಮಕ್ಕಳು ಅಪಾರ ಸಂಖ್ಯೆಯ ಶಿಷ್ಯರನ್ನು ಅಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಮ್ಯೂಸಿಕ್‌ಗೆ 8ರ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‌ಗೆ 8ರ ಸಂಭ್ರಮ

    ಬೆಂಗಳೂರು: 8 ವರ್ಷಗಳಿಂದ ಸೂಪರ್ ಹಿಟ್ ಹಾಡುಗಳ ಜೊತೆ ಲೈವ್ ಶೋ, ಹಬ್ಬ-ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮ, ಸ್ಪೆಷಲ್ ಕಾಂಟೆಸ್ಟ್ ಹಾಗೂ ಸೆಲೆಬ್ರೆಟಿ ಷೋಗಳೊಂದಿಗೆ ಕನ್ನಡಿಗರ ಮನಗೆದ್ದ ಪಬ್ಲಿಕ್ ಮ್ಯೂಸಿಕ್ (Public Music) ಇಂದು 8 ನೇ ವಾರ್ಷಿಕೋತ್ಸವವನ್ನು (Anniversary) ಆಚರಿಸಿಕೊಂಡಿದೆ.

    ಇಂದು ಪಬ್ಲಿಕ್ ಮ್ಯೂಸಿಕ್‌ನ 8ನೇ ವಾರ್ಷಿಕೋತ್ಸವದ ಹಿನ್ನೆಲೆ ಹಲವು ಕಾರ್ಯಕ್ರಮಗಳಿಗೆ ಪಬ್ಲಿಕ್ ಟಿವಿ (Public TV) ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ (HR Ranganath), ಅವರು ದೀಪ ಬೆಳಗಿ ಚಾಲನೆ ನೀಡಿದರು.

    ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ತಮ್ಮ ಬಾಲ್ಯದ ದಿನಗಳನ್ನು ಹಾಗೂ ಸಂಗೀತದೊಂದಿಗಿನ ಒಡನಾಟವನ್ನು ನೆನೆಸಿಕೊಂಡರು. ನಾನು ಚಿಕ್ಕವನಾಗಿದ್ದಾಗ ತುಂಬಾ ತುಂಟನಾಗಿದ್ದೆ. ಮನೆಯಲ್ಲಿ ಊಟದ ತಟ್ಟೆಯನ್ನು ಕವುಚಿ ಹಾಕಿ, ಅದರ ಮೇಲೆ ಊಟ ಮಾಡುತ್ತಿದ್ದೆ. ನನಗೆ ಅದೇ ದೊಡ್ಡ ಉಗ್ರ ಹೋರಾಟವಾಗಿತ್ತು. ಬಳಿಕ ನನ್ನ ಪೋಷಕರು ನನ್ನ ತುಂಟತನವನ್ನು ತಾಳಲಾರದೇ ಸಂಗೀತ ತರಗತಿಗೆ ಕಳುಹಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

    ಈ ಸಂದರ್ಭದಲ್ಲಿ ವಾಹಿನಿಗೆ ಪ್ರೋತ್ಸಾಹ ನೀಡಿದ ಡಿಟಿಎಚ್ ವಾಹಿನಿಗಳಿಗೆ, ಕೇಬಲ್‌ಗಳಿಗೆ ಮತ್ತು ಜನತೆಗೆ ಎಚ್.ಆರ್.ರಂಗನಾಥ್ ಧನ್ಯವಾದ ಹೇಳಿದರು.

    ಲಹರಿ ಕಂಪನಿಯ ಮುಖ್ಯಸ್ಥ ಲಹರಿ ವೇಲು, ಸಿಒಒ ಹರೀಶ್, ಸಂಪಾದಕರಾದ ದಿವಾಕರ್ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮಾಲೀಕರಾದ ಅಶ್ವಿನಿ ರಾಮ್‌ಪ್ರಸಾದ್, ಜೇಂಕಾರ್ ಮ್ಯೂಸಿಕ್‌ನ ಭರತ್ ಜೈನ್, ನಟರಿಷಭ್ ಶೆಟ್ಟಿ, ನಿರ್ದೇಶಕ ಜೋಗಿ ಪ್ರೇಮ್, ನಟಿ ಧನ್ಯಾರಾಮ್ ಕುಮಾರ್ ಹಾಗೂ ನಟ ಚಿಕ್ಕಣ್ಣ ಅತಿಥಿಗಳಾಗಿ ಭಾಗವಹಿಸಿದರು. 

    ಕಾರ್ಯಕ್ರಮದ ಕೊನೆಯಲ್ಲಿ ರಂಗನಾಥ್ ಅವರು ಪಬ್ಲಿಕ್ ಮ್ಯೂಸಿಕ್ ವತಿಯಿಂದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

    ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

    ಪ್ರತೀ ತಾಯಿ, ಚಿನ್ನ, ಮುದ್ದು, ಬಂಗಾರಿ, ಪುಟ್ಟ, ಚಿನ್ನುಮರಿ ಅಂತೆಲ್ಲ ಹೆಸರಿಡಿದು ಕರೆಯುವ ಲಾಲಿ ಹಾಡಿಗೆ ಮಗು ಮಲಗುತ್ತದೆ. ಎಂತಹ ಕಠಿಣ ಮನುಷ್ಯನಾದರೂ ಸಹ ಸಂಗೀತದ ರಾಗಕ್ಕೆ, ಒಮ್ಮೆಯಾದರೂ ತಲೆದೂಗಿಯೇ ಇರುತ್ತಾನೆ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕೆ ಇರುತ್ತಾನೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್(Public Music) ಸತತ ಎಂಟು ವರ್ಷಗಳಿಂದ ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.

    ಈ ಎಂಟು ಮೆಟ್ಟಿಲುಗಳನ್ನು ಸಲೀಸಾಗಿ ದಾಟುವಂತೆ ಮಾಡಿದ್ದು ಕನ್ನಡಿಗರು. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎನ್ನುವ ಭರವಸೆಯೂ ನಮಗೆ ಕೊಟ್ಟಿದ್ದೀರಿ. 8 ವರ್ಷಗಳ ಕಾಲ ಪಬ್ಲಿಕ್ ಮ್ಯೂಸಿಕ್ ಸೂಪರ್‌ ಹಿಟ್‌ ಹಾಡುಗಳ ಜೊತೆಗೆ ಲೈವ್ ಶೋ, ಹಬ್ಬ-ಹರಿದಿನಗಳಲ್ಲಿ ಹೊಸ ಕಾರ್ಯಕ್ರಮ, ಸ್ಪೆಷಲ್ ಕಾಂಟೆಸ್ಟ್ ಹಾಗೂ ಸೆಲೆಬ್ರೆಟಿ ಷೋಗಳು ನಮ್ಮ-ನಿಮ್ಮ ಭಾಂದವ್ಯ ಹೆಚ್ಚುವಂತೆ ಮಾಡಿವೆ. ʼಪಬ್ಲಿಕ್ ಮ್ಯೂಸಿಕೋತ್ಸವ ಎನ್ನುವ ಟೈಟಲ್‍ನಲ್ಲಿ 8ನೇ ವರ್ಷದ ವಾರ್ಷಿಕೋತ್ಸವವನ್ನು ಸ್ಯಾಂಡಲ್‍ವುಡ್ ದಿಗ್ಗಜರ ಜೊತೆ ಆಚರಿಸುತ್ತಿದ್ದೇವೆ. 8 ವರ್ಷಗಳ ಏಳುಬೀಳುಗಳ ಜರ್ನಿಯಲ್ಲಿ ಜೊತೆಗಿದ್ದ ಎಲ್ಲರಿಗೂ ನಮ್ಮದೊಂದು ದೊಡ್ಡ ಸೆಲ್ಯೂಟ್.

    ಈ ಎಂಟರ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಸಂಗೀತದ ರೆಂಬೆ-ಕೊಂಬೆ, ಬೇರಿನಂತಿರೋ ಸ್ಯಾಂಡಲ್‍ವುಡ್‍ನ ಎಂಟು ವಿಭಾಗದ ಎಂಟು ಸೆಲೆಬ್ರಿಟಿಗಳನ್ನು ಕರೆಸಿ ಸಂಗೀತದ ಮಾಧುರ್ಯವನ್ನು ಸವಿಯಲಾಗುತ್ತಿದೆ. ನಟರಾಗಿಯೂ ಹಾಗೂ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರೋ ರಿಷಬ್ ಶೆಟ್ಟಿ, ಜೋಗಿ ಪ್ರೇಮ್, ಕನ್ನಡಿಗರಿಗೆ ಸದಾ ಕಾಮಿಡಿ ಕಚಗುಳಿ ಕೊಡುತ್ತಿರುವ ಚಿಕ್ಕಣ್ಣ, ನಟಿ ನಿಶ್ವಿಕಾ ನಾಯ್ಡು, ಸಿನಿಮಾ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಸೇರಿದಂತೆ ರಾಜ್ ಕುಟುಂಬದ ಕುಡಿ ಧನ್ಯಾ ರಾಮ್‍ಕುಮಾರ್ ಹಾಗೂ ಸಿಂಗರ್ ಸಂತೋಷ್ ವೆಂಕಿ ಪಬ್ಲಿಕ್ ಮ್ಯೂಸಿಕೋತ್ಸವದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಅಷ್ಟೇ ಅಲ್ಲದೆ ಅನಿವರ್ಸರಿ ಪ್ರಯುಕ್ತ ಪ್ರತೀ ಗಂಟೆ ಸ್ಯಾಂಡಲ್‍ವುಡ್ ದಿಗ್ಗಜರು ಪಬ್ಲಿಕ್ ಮ್ಯೂಸಿಕ್‍ನ ಬಹುಮುಖ್ಯ ಭಾಗವಾಗಿರೋ ʼಪಬ್ಲಿಕ್‌ʼಗೆ ಚಿಕ್ಕ ಪ್ರಶ್ನೆ ಕೇಳಿ, ದೊಡ್ಡ ಗಿಫ್ಟ್ ಕೊಡುತ್ತಿದ್ದಾರೆ. ಇದರ ಜೊತೆಗೆ ದಿನವಿಡಿ ಕಲರ್‍ಫುಲ್ ಲೈ ಶೋಗಳ ಮೂಲಕ ಪಬ್ಲಿಕ್ ಮ್ಯೂಸಿಕ್ ರಸಿಕರಿಗೆ ಸಾಗರದಷ್ಟು ಮನರಂಜನೆಯನ್ನು ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಬೆಂಗಳೂರು: ಕನ್ನಡಿಗರ ನೆಚ್ಚಿನ ಮ್ಯೂಸಿಕ್ ಚಾನೆಲ್, ನಿಮ್ಮ ಪಬ್ಲಿಕ್ ಮ್ಯೂಸಿಕ್ ಇಂದಿಗೆ ಏಳು ವರ್ಷದ ಸಂಭ್ರಮ. ಕಳೆದ ಎರಡು ವರ್ಷಗಳ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಡಿದವರಿಗೆ ನಾವು 7ನೇ ವರ್ಷದ ವಿಶೇಷ ‘ಸಪ್ತಸ್ವರ’ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದೇವೆ.

    Public Music

    ಪಬ್ಲಿಕ್ ಟಿವಿ ಕಚೇರಿಯಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್, ರೈಟ್ ಮ್ಯಾನ್ ಸಂಸ್ಥೆಯ ನಿರ್ದೇಶಕ, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್ ನಾಯ್ಡ್, ಅಶ್ವಿನಿ ಆಡಿಯೋ ಕಂಪನಿಯ ಮಾಲೀಕ ರಾಮ್ ಪ್ರಸಾದ್, ರೈಟ್ ಮ್ಯಾನ್ ಮೀಡಿಯಾ ಸಿಒಒ ಮತ್ತು ಮಾರ್ಕೆಟಿಂಗ್ ಹೆಡ್ ಹರೀಶ್ ಕುಮಾರ್ ದೀಪ ಬೆಳಗಿಸಿ ಶುಭ ಕೋರಿದರು. ಇದನ್ನೂ ಓದಿ: ಸಂತೋಷ್ ಆನಂದ್ ರಾಮ್ ಕಚೇರಿಗೆ ಪುನೀತ್, ಜಗ್ಗೇಶ್ ಭೇಟಿ

    Public Music

    ಸಪ್ತಸ್ವರ ಕಾರ್ಯಕ್ರಮ:
    ಕಳೆದೆರೆಡು ವರ್ಷಗಳಿಂದ, ಕೊರೊನಾ ವೈರಸ್‍ನಿಂದ, ಹಸಿವಿನಿಂದ ಪರದಾಡಿದ ಒಡಲುಳೆಷ್ಟೋ? ಹನಿ ಆಕ್ಸಿಜನ್‍ಗಾಗಿ ಅಂಗಲಾಚಿದ ಸ್ವರಗಳೆಷ್ಟೋ? ಕೊನೆಗೆ ಮಣ್ಣು ಸೇರಲು ಜಾಗ ತಡಕಿದ ಹೃದಯಗಳೆಷ್ಟೋ? 2ವರ್ಷಗಳಲ್ಲಿ ಅತೀ ಹೆಚ್ಚು ಕಿವಿ ಕೇಳಿದ ಸ್ವರ, ಸಂಕಟ. ಈ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನಾವಿದ್ದೇವೆ ಎಂದು ಸಹಾಯಾಸ್ತ ಚಾಚಿದವರಿಗೆ 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದೇವೆ. ಇದನ್ನೂ ಓದಿ: ಬಟರ್ ಚಿಕನ್ ಗೋಲ್ ಗಪ್ಪ ಫೋಟೋ ವೈರಲ್ – ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?

    Public Music

    ಸಂಗೀತಕ್ಕೆ ಹೇಗೆ ಏಳು ಸ್ವರ ಮುಖ್ಯವೋ ಹಾಗೆ ಕೊರೊನಾ ಸಮಯದಲ್ಲಿ ನೆರವಾದ ಏಳು ಸ್ವರಗಳು ಈ ಜಗತ್ತಿಗೆ ಅಷ್ಟೆ ಮುಖ್ಯವಾಗಿದೆ. ಸಪ್ತಸ್ವರ ಕಾರ್ಯಕ್ರಮದಲ್ಲಿ ಹೆಚ್.ಆರ್ ರಂಗನಾಥ್ ಅವರು ಕೊರೊನಾ ಸಮಯದಲ್ಲಿ ನೆರವಾದ ಏಳು ವಿಭಾಗದ ಗಣ್ಯರ ಜೊತೆ ಮಾತನಾಡಿ ಅವರನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    75 ಸಾವಿರ ಜನರ ಹೊಟ್ಟೆ ತುಂಬಿಸಿದ ಬುಹುಭಾಷಾ ನಟಿ ಪ್ರಣಿತಾ, ರಾಜಕೀಯ ವಿಭಾಗದಿಂದ ಆರೋಗ್ಯ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ ನಾರಾಯಣ ನೇತ್ರಾಲಯ ಚೇರ್‍ಮ್ಯಾನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಕೆ.ಭುಜಂಗ ಶೆಟ್ಟಿ, ಶಿಕ್ಷಣ ವಿಭಾಗದಿಂದ ರೇವಾ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಪಿ ಶ್ಯಾಮರಾಜು, ಹಾಗೂ ಎನ್‍ಜಿಓ ವಿಭಾಗದಿಂದ ಚಿಂತಕ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ಇಲಾಖೆಯಿಂದ ನಗರ ಶಸಸ್ತ್ರ ಮೀಸಲು ಪಡೆ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಹಾಗೂ ಕೊನೆಯ ಸ್ವರವಾಗಿ ಡಿ.ಎಸ್ ಮ್ಯಾಕ್ಸ್ ಪ್ರಾಪಟ್ರೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ ದಯಾನಂದ್‍ರಂತಹ ಸಾಧಕರನ್ನು ಗೌರವಿಸಲಾಯಿತು.

  • ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ

    – ಕೋವಿಡ್ ಕಾಲದಲ್ಲಿ ಮಿಡಿದವರಿಗೆ ಅರ್ಪಣೆಯಾಗಲಿದ ಸಪ್ತಸ್ವರ
    – ಬೆಳಗ್ಗೆ 10:30ಕ್ಕೆ ನೇರಪ್ರಸಾರ

    ಬೆಂಗಳೂರು: ಕನ್ನಡಿಗರ ನೆಚ್ಚಿನ ಮ್ಯೂಸಿಕ್ ಚಾನೆಲ್, ನಿಮ್ಮ ಪಬ್ಲಿಕ್ ಮ್ಯೂಸಿಕ್ ಇಂದಿಗೆ ಏಳು ವಸಂತಗಳನ್ನು ಪೂರೈಸಲಿದೆ. ಕಳೆದ ಎರಡು ವರ್ಷಗಳ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಡಿದವರಿಗೆ ನಾವು 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡುತ್ತಿದ್ದೇವೆ.

    ಸಂಗೀತದ ತೇರನ್ನು ಸ.ರಿ.ಗ.ಮ.ಪ.ದ.ನಿ, ಏಳು ಸ್ವರಗಳು ಎಳೆದೋಯ್ಯತ್ತವೆ. ಈ ಏಳು ಸ್ವರಗಳಂತೆ, ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್, ಪಬ್ಲಿಕ್ ಮ್ಯೂಸಿಕ್ ಏಳು ಹೆಜ್ಜೆಗಳನ್ನು ಪೂರೈಸಿದೆ.

    ಕಳೆದೆರೆಡು ವರ್ಷಗಳಿಂದ, ಕೊರೊನಾ ವೈರಸ್‍ನಿಂದ, ಹಸಿವಿನಿಂದ ಪರದಾಡಿದ ಒಡಲುಳೆಷ್ಟೋ? ಹನಿ ಆಕ್ಸಿಜನ್‍ಗಾಗಿ ಅಂಗಲಾಚಿದ ಸ್ವರಗಳೆಷ್ಟೋ? ಕೊನೆಗೆ ಮಣ್ಣು ಸೇರಲು ಜಾಗ ತಡಕಿದ ಹೃದಯಗಳೆಷ್ಟೋ? 2ವರ್ಷಗಳಲ್ಲಿ ಅತೀ ಹೆಚ್ಚು ಕಿವಿ ಕೇಳಿದ ಸ್ವರ, ಸಂಕಟ. ಈ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನಾವಿದ್ದೇವೆ ಎಂದು ಸಹಾಯಾಸ್ತ ಚಾಚಿದವರಿಗೆ 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡುತ್ತಿದ್ದೇವೆ.

    ಸಂಗೀತಕ್ಕೆ ಹೇಗೆ ಏಳು ಸ್ವರ ಮುಖ್ಯವೋ ಹಾಗೆ ಕೊರೊನಾ ಸಮಯದಲ್ಲಿ ನೆರವಾದ ಏಳು ಸ್ವರಗಳು ಈ ಜಗತ್ತಿಗೆ ಅಷ್ಟೇ ಮುಖ್ಯವಾಗಿದೆ. ಬೆಳಗ್ಗೆ 10:30ರ ಸಪ್ತಸ್ವರ ಕಾರ್ಯಕ್ರಮದಲ್ಲಿ ಹೆಚ್.ಆರ್ ರಂಗನಾಥ್ ಜೊತೆ ಅತಿಥಿಗಳಾಗಿ ಕೊರೊನಾ ಸಮಯದಲ್ಲಿ ನೆರವಾದ ಏಳು ವಿಭಾಗದ ಗಣ್ಯರು ಜೊತೆಯಲ್ಲಿರುತ್ತಾರೆ.

    75 ಸಾವಿರ ಜನರ ಹೊಟ್ಟೆ ತುಂಬಿಸಿದ ಬುಹುಭಾಷಾ ನಟಿ ಪ್ರಣಿತಾ, ರಾಜಕೀಯ ವಿಭಾಗದಿಂದ ಆರೋಗ್ಯ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ ನಾರಾಯಣ ನೇತ್ರಾಲಯ ಚೇರ್‌ಮ್ಯಾನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಕೆ.ಭುಜಂಗ ಶೆಟ್ಟಿ, ಶಿಕ್ಷಣ ವಿಭಾಗದಿಂದ ರೇವಾ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಪಿ ಶ್ಯಾಮರಾಜು, ಹಾಗೂ ಎನ್‍ಜಿಓ ವಿಭಾಗದಿಂದ ಚಿಂತಕ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ಇಲಾಖೆಯಿಂದ ನಗರ ಶಸಸ್ತ್ರ ಮೀಸಲು ಪಡೆ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಹಾಗೂ ಕೊನೆಯ ಸ್ವರವಾಗಿ ಡಿ.ಎಸ್ ಮ್ಯಾಕ್ಸ್ ಪ್ರಾಪಟ್ರೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ ದಯಾನಂದ್‍ರಂತಹ ಸಾಧಕರನ್ನು ಗೌರವಿಸಲಾಗುತ್ತದೆ.

  • ಪಬ್ಲಿಕ್ ಮ್ಯೂಸಿಕ್‍ಗೆ 6ನೇ ವಸಂತದ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‍ಗೆ 6ನೇ ವಸಂತದ ಸಂಭ್ರಮ

    ನಿಮ್ಮ ನೆಚ್ಚಿನ ಪಬ್ಲಿಕ್ ಮ್ಯೂಸಿಕ್‍ಗೆ ಇಂದು ಆರರ ಸಂಭ್ರಮ. ಸೆಪ್ಟೆಂಬರ್ 28, 2014ರಂದು ಪಬ್ಲಿಕ್ ಟಿವಿಯ ಕೂಸು ಪಬ್ಲಿಕ್ ಮ್ಯೂಸಿಕ್ ತನ್ನ ಸಂಗೀತ ಪಯಣವನ್ನು ಶುರು ಮಾಡಿತ್ತು. ಇಂದು ಪಬ್ಲಿಕ್ ಮ್ಯೂಸಿಕ್‍ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

    ಆರರ ಮ್ಯೂಸಿಕ್ ತೇರಿನಲ್ಲಿ ಎಸ್.ಪಿ ಬಾಲಸುಬ್ರಹ್ಮಣಂ ಅವರ ನೆನಪನ್ನು ಮೆಲುಕು ಹಾಕೋದರ ಜೊತೆಗೆ ಆ ಆಚರಣೆಯನ್ನು ಅವರಿಗೆ ಅರ್ಪಣೆ ಮಾಡಲಾಗುತ್ತಿದೆ. ಪಬ್ಲಿಕ್ ಮ್ಯೂಸಿಕ್ 6 ವರ್ಷಗಳ ಆಚರಣೆಗೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಟರಾದ ಪುನಿತ್ ರಾಜ್‍ಕುಮಾರ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಅರ್ಜುನ್ ಜನ್ಯ ಸೇರಿದಂತೆ ಸ್ಟಾರ್ ನಟ-ನಟಿಯರು ಗಾಯಕರು, ಮ್ಯೂಸಿಕ್ ಡೈರೆಕ್ಟರ್ಸ್ ಶುಭ ಕೋರಿದ್ದಾರೆ.

    ಇನ್ನೂ ಇಂದಿನ ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ಚಂದನಾ, ಸಿಂಗರ್ ಅನುರಾಧ ಭಟ್, ಕಿಸ್ ಹೀರೋ ವಿರಾಟ್ ಹಾಗೂ ದಿಯಾ ಖುಷಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ರ‍್ಯಾಪರ್ ಚಂದನ್ ಶೆಟ್ಟಿ, ಪಾರು ಸಿನಿಮಾದ ನಟ-ನಟಿ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ- ಸೂರಜ್ ಕೂಡ ಆಚರಣೆಯಲ್ಲಿ ನಿಮ್ಮನ್ನ ಮನರಂಜಿಸಲಿದ್ದಾರೆ.

  • ವಿಡಿಯೋ ಮೂಲಕ ಪಬ್ಲಿಕ್ ಮ್ಯೂಸಿಕ್‍ಗೆ ಶುಭ ಕೋರಿ ಬೇಡಿಕೆ ಇಟ್ಟ ಕಿಚ್ಚ

    ವಿಡಿಯೋ ಮೂಲಕ ಪಬ್ಲಿಕ್ ಮ್ಯೂಸಿಕ್‍ಗೆ ಶುಭ ಕೋರಿ ಬೇಡಿಕೆ ಇಟ್ಟ ಕಿಚ್ಚ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪಬ್ಲಿಕ್ ಮ್ಯೂಸಿಕ್‍ನ 5ನೇ ವರ್ಷದ ಸಂಭ್ರಮಕ್ಕೆ ವಿಡಿಯೋ ಮೂಲಕ ಶುಭ ಕೋರಿದ್ದಾರೆ.

    ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಾಕಿ ಅದಕ್ಕೆ, “5ನೇ ವರ್ಷ ಪೂರ್ಣಗೊಳಿಸಿ 6ನೇ ವರ್ಷಕ್ಕೆ ಕಾಲಿಡುತ್ತಿರುವ ಪಬ್ಲಿಕ್ ಮ್ಯೂಸಿಕ್ ಚಾನೆಲ್‍ಗೆ ಆಲ್ ದಿ ಬೆಸ್ಟ್. 5 ವರ್ಷ ಪೂರ್ಣಗೊಳಿಸಿದ್ದಕ್ಕೆ ಶುಭಾಶಯಗಳು ಹಾಗೂ 6ನೇ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಆಲ್ ದಿ ಬೆಸ್ಟ್. ಪಬ್ಲಿಕ್ ಮ್ಯೂಸಿಕ್ ಹುಟ್ಟುಹಬ್ಬದ ಶುಭಾಶಯಗಳು” ಎಂದು ಹೇಳಿದ್ದಾರೆ.

    ಇದೇ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್. ಆರ್. ರಂಗನಾಥ್ ಅವರಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. “ರಂಗನಾಥ್ ಅವರೇ ನೀವು ಪಬ್ಲಿಕ್ ಟಿವಿ ಚಾನೆಲ್‍ನಲ್ಲೂ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೀರಾ. ನಿಮಗೆ ಸಂಗೀತದ ಮೇಲೆ ಒಲವು ಜಾಸ್ತಿ ಎಂದು ಕೇಳ್ ಪಟ್ಟೆ. ಅದು ನಿಜವಾದರೆ ಸ್ವಲ್ಪ ಬಿಡುವು ಮಾಡಿಕೊಟ್ಟು ಈ ಚಾನೆಲ್‍ನಲ್ಲೂ ಕಾರ್ಯಕ್ರಮ ನಡೆಸಿಕೊಡಬಹುದಲ್ವಾ. ನನಗೆ ಕೇಳಬೇಕು ಎಂದು ಎನಿಸಿತು. ಹಾಗಾಗಿ ಕೇಳಿದೆ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ವಿಡಿಯೋ ಟ್ವೀಟ್ ಮಾಡಿದಲ್ಲದೇ ಸುದೀಪ್ ಅವರು, ಪಬ್ಲಿಕ್ ಮ್ಯೂಸಿಕ್ ಚಾನೆಲ್ ಹಾಗೂ 5 ವರ್ಷ ಪೂರ್ಣಗಳಿಸಲು ಕಾರಣರಾದ ಎಲ್ಲರಿಗೂ ಶುಭಾಶಯಗಳು. ಮುಂದಿನ ವರ್ಷಗಳಲ್ಲಿ ಶುಭವಾಗಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಮ್ಯೂಸಿಕ್ 5ನೇ ವರ್ಷದ ಸಂಭ್ರಮವನ್ನು ದೀಪ ಬೆಳಗುವ ಮೂಲಕ ಶುಭಾರಂಭ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್ ರಂಗನಾಥ್, ಸಿನಿ ತಾರೆಯರಾದ ಶರಣ್, ಶ್ರೀಮುರಳಿ, ರಾಗಿಣಿ, ಚಂದನ್ ಶೆಟ್ಟಿ, ಶ್ರೀಲೀಲಾ, ಲಹರಿ ಆಡಿಯೋ ಸಂಸ್ಥೆ ಮುಖ್ಯಸ್ಥರಾದ ಮನೋಹರ್ ನಾಯ್ಡು, ಲಹರಿ ವೇಲು, ಅಶ್ವಿನಿ ಆಡಿಯೋ ಸಂಸ್ಥೆ ಮುಖ್ಯಸ್ಥರಾದ ರಾಮ್‍ಪ್ರಸಾದ್, ಅಕ್ಷಯ್ ಆಡಿಯೋ ಸಂಸ್ಥೆ ಮುಖ್ಯಸ್ಥರಾದ ಸಿದ್ದರಾಜು, ಆನಂದ್ ಆಡಿಯೋ ಮುಖ್ಯಸ್ಥರಾದ ಶ್ಯಾಮ್ ಉಪಸ್ಥಿತರಿದ್ದರು.

    https://www.youtube.com/watch?v=lS51uEJbwgI

  • ಪಬ್ಲಿಕ್ ಮ್ಯೂಸಿಕ್‍ಗೆ 5ನೇ ವರ್ಷದ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‍ಗೆ 5ನೇ ವರ್ಷದ ಸಂಭ್ರಮ

    ಬೆಂಗಳೂರು: ಸೆಪ್ಟೆಂಬರ್ 28, 2014 ರಂದು ಆ ದಿನವನ್ನ ಖಂಡಿತಾ ಮರೆಯಲು ಸಾಧ್ಯವೇ ಇಲ್ಲ. ಪಬ್ಲಿಕ್ ಟಿವಿಯ ಒಂದು ಕುಡಿ ‘ಪಬ್ಲಿಕ್ ಮ್ಯೂಸಿಕ್’ ನಿಮ್ಮೆಲ್ಲರ ಸಮ್ಮುಖದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರ ಮೂಲಕ ಕನ್ನಡಿಗರಿಗೆ ಅರ್ಪಣೆಯಾದ ವರ್ಷವದು. ಆ ಮಧುರ ನೆನಪಿಗೆ ಹಾಗೂ ಆ ಕೂಸಿಗೆ ಇವತ್ತು ಐದರ ವಸಂತ.

    ಈ ಐದು ವರ್ಷದ ಮ್ಯೂಸಿಕಲ್ ಜರ್ನಿ ನಮಗೆಲ್ಲ ಅತ್ಯದ್ಭುತ ಅನುಭವದ ಜೊತೆಗೆ ಏಳುಬೀಳುಗಳನ್ನು ತೋರಿಸಿಕೊಟ್ಟಿದೆ. ಆದರೂ ಅದ್ಯಾವುದಕ್ಕು ನಾವು ಅಂಜದೆ ಅಳುಕದೆ ಮಾಧ್ಯಮ ಕ್ಷೇತ್ರದಲ್ಲಿ ಮುನ್ನುಗ್ಗಲು ಕಾರಣರಾದವರು ನೀವು. ಆರಂಭದಿಂದಲು ಪಬ್ಲಿಕ್ ಮ್ಯೂಸಿಕ್ ವಿಭಿನ್ನ ರೀತಿಯ ಪ್ರಯತ್ನಕ್ಕೆ ಸಾಕ್ಷಿಯಾಗುವ ಮೂಲಕ ಬೆಂಬಲ ನೀಡಿ ನಮ್ಮ ಏಳಿಗೆಗೆ ಸಾಕ್ಷಿಯಾಗಿದ್ದೀರಿ.

    ನಿಮ್ಮ ನಮ್ಮ ನಡುವಿನ ಭಾಂದವ್ಯ ಈ ಐದು ವರ್ಷಗಳಲ್ಲೂ ಮುಂದುವರಿಯಲು ಕಾರಣ ಅಂದ್ರೆ ಅದು ಪ್ರತಿ ದಿನ ಪ್ರಸಾರವಾಗುವ ಪಬ್ಲಿಕ್ ಮ್ಯೂಸಿಕ್‍ನ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕಾರ್ಯಕ್ರಮಗಳು. ಪ್ರತಿ ದಿನ ಪ್ರಸಾರವಾಗುವ ಲೈವ್ ಶೋಗಳಾದ ಕಿಕ್ ಸ್ಟಾರ್ಟ್ ಹಾಗೂ ಚುರುಮುರಿ ಕಾರ್ಯಕ್ರಮಗಳು. ಇವುಗಳ ಜೊತೆಗೆ ಈ ಹಿಂದೆ ಪ್ರಸಾರವಾಗುತ್ತಿದ್ದ ಪಬ್ಲಿಕ್ ಮ್ಯೂಸಿಕ್‍ನ ಶೋಗಳಾದ, ಜಾಲಿ ರೈಡ್, ಹೈ ಫೈ ಶೋಗಳು ನಿಮ್ಮೆಲ್ಲರ ಮೆಚ್ಚುಗೆ ಪಡೆದಿರುವ ಜೊತೆಗೆ ಅಭೂತಪೂರ್ವ ಯಶಸ್ಸು ತಂದು ಕೊಡುವ ಮೂಲಕ ಹೊಸ ಹೊಸ ಕಾರ್ಯಕ್ರಮಗಳಿಗೆ ಸ್ಪೂರ್ತಿದಾಯಕವಾದವು.

    ಇವುಗಳ ಜೊತೆಗೆ ಹೊಸ ಹಾಡುಗಳ ಮೂಲಕ ನಿಮ್ಮ ಮನಸಿಗೆ ಹತ್ತಿರವಾದ ಸ್ಯಾಂಡಲ್‍ವುಡ್ ನಾನ್ ಸ್ಟಾಪ್, ಎವರ್‍ಗ್ರೀನ್ ಸಾಂಗ್ಸ್, ನಿಮ್ಮನ್ನು ಕುಳಿತಲ್ಲಿಯೇ ಹಾಡುಗಳ ಜರ್ನಿಗೆ ಕರೆದುಕೊಂಡುವ ಹೋಗುವ ಮ್ಯೂಸಿಕ್ ಸಫಾರಿ, 90ರ ದಶಕದ ಎವರ್ ಗ್ರೀನ್ ಹಾಡುಗಳ ಮ್ಯೂಸಿಕ್ ಬಾಕ್ಸ್, ಅಲ್ಲದೆ ನೀವು ವಾಟ್ಸಪ್ ಮೂಲಕ ಕಳುಹಿಸುವ ನಿಮ್ಮ ಅಚ್ಚುಮೆಚ್ಚಿನ ಹಾರ್ಟ್ ಫೇವರೇಟ್ ಸಾಂಗ್, ಮ್ಯೂಸಿಕ್ ಎಕ್ಸ್‍ಪ್ರೆಸ್, ಸ್ಟಾರ್ ವಾರ್ಸ್, ಜಸ್ಟ್ ಚಿಲ್, ಟಾಪ್ 12 ಹಾಡುಗಳು, ಫಿಲ್ಮ್ ಫ್ಯಾಕ್ಟರಿ ಇವೆಲ್ಲಾ ಜನಮನಗೆದ್ದ ಕಾರ್ಯಕ್ರಮಗಳು. ಇದಕ್ಕೆ ನಿಮ್ಮಿಂದ್ದ ಸಿಕ್ಕಿದ್ದು ಔಟ್ ಆಫ್ ಔಟ್ ಮಾರ್ಕ್.

    ಪಬ್ಲಿಕ್ ಮ್ಯೂಸಿಕ್ ಈ ಐದು ವರ್ಷದ ಜರ್ನಿಯಲ್ಲಿ ಪ್ರತಿ ವರ್ಷವು ಹಲವು ಕಾರ್ಯಕ್ರಮಗಳನ್ನ ನೀವು ನೋಡಿ ಮೆಚ್ಚಿದ್ದೀರಿ ಮೊದಲ ವರ್ಷದ ಮ್ಯೂಸಿಕ್ “ದರ್ಬಾರ್” “ಹರುಷ ಎರಡು ವರುಷ”ದ ಜೊತೆಗೆ ಮ್ಯೂಸಿಕ್ ಮ್ಯಾರಥಾನ್, “ಮೂರು ವರ್ಷ ಪ್ಲಸ್” ಜೊತೆಗೆ ಹ್ಯಾಟ್ರಿಕ್ ಹಾಡುಗಳು, “ಮ್ಯೂಸಿಕ್ ಮ್ಯಾಜಿಕ್ ಸೆಲೆಬ್ರೇಷನ್ ನಾಲ್ಕು” ನಂತಹ ವಿಭಿನ್ನ ಪ್ರಯತ್ನಕ್ಕೆ ಬೆನ್ನು ತಟ್ಟಿ ನಮ್ಮನ್ನ ಮುನ್ನಡೆಸಿದ್ದೀರಿ ಕೂಡ. ಇದೇ ಸಂತಸದಲ್ಲಿ ಪಬ್ಲಿಕ್ ಮ್ಯೂಸಿಕ್ ಐದನೇ ವರ್ಷದ ವಾರ್ಷಿಕೋತ್ಸವವನ್ನ ಆಚರಿಸಿಕೊಂಡು ನಿಮಗೊಂದು ವಂದನೆ ಹೇಳಲು ಬಯಸಿದೆ.

    ಇಂದು ಇಡೀ ದಿನ ಮಸ್ತ್ ಮಜಾ ನೀಡೋ ಲೈವ್ ಶೋಗಳ ಜೊತೆಗೆ ಸೆಲೆಬ್ರೆಟೀಸ್‍ಗಳ ಜೊತೆಗೆ ಮಾತು ಹರಟೆ ಕಾರ್ಯಕ್ರಮವೂ ಕೂಡ ನಿಮಗಾಗಿ ನಿಮ್ಮ ಮನರಂಜನೆಗಾಗಿ ನೀಡಲಾಗುತ್ತಿದ್ದು ನಿಮ್ಮ ಗೆಲುವನ್ನು ನಿಮಗಾಗಿಯೇ ಅರ್ಪಿಸುತ್ತಿದ್ದೇವೆ. ನಮ್ಮ ಧ್ಯೇಯ ಒಂದೇ “ಅತೀ ಹೆಚ್ಚು ಹಾಡುಗಳು ನಿಮ್ಮ ಇಷ್ಟದ ಹಾಡುಗಳು” ಅದು ನಿಮ್ಮ ಪಬ್ಲಿಕ್ ಮ್ಯೂಸಿಕ್ ನಲ್ಲಿ ಮಾತ್ರ.

    ಒಟ್ಟಿನಲ್ಲಿ ಹೇಗೆ ಐದನೇ ವರ್ಷದ ಸಂಗೀತ ಪಯಣದಲ್ಲಿ ಸಾಗಿ ಬಂದೆವೋ ಗೊತ್ತಿಲ್ಲ. ಒಳ್ಳೆಯ ಹಾಡುಗಳನ್ನು ನಿಮಗೆ ಕೇಳಿಸುತ್ತೇವೆ ಅಂತ ನಿಮಗೆ ಕೊಟ್ಟಿರುವ ಆಣೆಯನ್ನು ಉಳಿಸಿಕೊಂಡು ಮುಂದಿನ ದಿನಮಾನಗಳಲ್ಲೂ ನಿಮ್ಮೆಲ್ಲರ ಬೆಂಬಲವನ್ನ ನಿರೀಕ್ಷೆ ಮಾಡುತ್ತ ಮುಂದಿನ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಇದಕ್ಕೆ ಇಡೀ ಪಬ್ಲಿಕ್ ಮ್ಯೂಸಿಕ್ ಟೀಂ ರೆಡಿಯಾಗಿದೆ. ನಮ್ಮನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

  • ಪಬ್ಲಿಕ್ ಟಿವಿ ಸಮೂಹದ ‘ಪಬ್ಲಿಕ್ ಮೂವೀಸ್’ ಫೆ.12ಕ್ಕೆ ಶುಭಾರಂಭ

    ಪಬ್ಲಿಕ್ ಟಿವಿ ಸಮೂಹದ ‘ಪಬ್ಲಿಕ್ ಮೂವೀಸ್’ ಫೆ.12ಕ್ಕೆ ಶುಭಾರಂಭ

    – ಪಬ್ಲಿಕ್ ಟಿವಿಗೆ 6ನೇ ವರ್ಷದ ಸಂಭ್ರಮ

    ಬೆಂಗಳೂರು: ಕರ್ನಾಟಕದಲ್ಲಿ ಮನೆ ಮಾತಾಗಿರುವ ಪಬ್ಲಿಕ್ ಟಿವಿ ಈಗ ಸಿನೆಮಾ ಕ್ಷೇತ್ರಕ್ಕೂ ಕಾಲಿಡುತ್ತಿದೆ. ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಮೂಹದಿಂದ ಆರಂಭವಾಗಲಿರುವ ‘ಪಬ್ಲಿಕ್ ಮೂವೀಸ್’ ಚಾನೆಲ್ ಫೆ.12ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಎಚ್.ಆರ್.ರಂಗನಾಥ್ ನೇತೃತ್ವದ ಪಬ್ಲಿಕ್ ಮೂವೀಸ್ ಚಾನೆಲ್ ಉದ್ಘಾಟನೆಗೆ ಚಿತ್ರರಂಗದ ಪ್ರಮುಖ ಗಣ್ಯರು ಆಗಮಿಸಿ ಶುಭ ಕೋರಲಿದ್ದಾರೆ.

    ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಆರಂಭವಾದ ಪಬ್ಲಿಕ್ ಟಿವಿ ಕೂಡಾ ಫೆಬ್ರವರಿ 12ರಂದು 6ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. 2012ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಲೋಕಾರ್ಪಣೆಗೊಂಡಿತ್ತು. ಬಳಿಕ 2014ರ ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿ ಆರಂಭಗೊಂಡಿತ್ತು.

    2012ರಲ್ಲಿ ಆರಂಭಗೊಂಡ ಪಬ್ಲಿಕ್ ಟಿವಿ ಹಾಗೂ 2014ರಲ್ಲಿ ಆರಂಭಗೊಂಡ ಪಬ್ಲಿಕ್ ಮ್ಯೂಸಿಕ್ ವಾಹಿನಿ ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದೆ. ಇದಕ್ಕೆ ಕಾರಣೀಕರ್ತರಾದ ಜನರಿಗೆ ನಾವು ಆಭಾರಿ. ಈ ಹಿಂದೆ ಎರಡು ಚಾನೆಲ್‍ಗಳನ್ನು ಕೈ ಹಿಡಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿಯನ್ನು ಕೂಡಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಎಂದು ಪಬ್ಲಿಕ್ ಟಿವಿ, ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿದ್ದಾರೆ.

    ಪಬ್ಲಿಕ್ ಮೂವೀಸ್ ಚಾನೆಲ್ ನಲ್ಲಿ ನೀವು 24 ಗಂಟೆಗಳ ಕಾಲವೂ ಕನ್ನಡ ಸಿನೆಮಾಗಳನ್ನು ನೋಡಿ ಆನಂದಿಸಬಹುದು. ನಿಮ್ಮೂರಲ್ಲಿ ಪಬ್ಲಿಕ್ ಮೂವೀಸ್ ನಿಮಗೆ ವೀಕ್ಷಣೆಗೆ ಲಭ್ಯವಾಗದಿದ್ದರೆ ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದು.

    ಪಬ್ಲಿಕ್ ಮೂವೀಸ್ ಫೇಸ್ ಬುಕ್ ಪೇಜ್ ಲೈಕ್ ಮಾಡಿ: https://www.facebook.com/PublicTVMovies

    ಟ್ವಿಟ್ಟರ್‍ನಲ್ಲಿ ಪಬ್ಲಿಕ್ ಮೂವೀಸ್ ಫಾಲೋ ಮಾಡಿ: https://twitter.com/PublicTVMovies

  • ಪಬ್ಲಿಕ್ ಟಿವಿಯಿಂದ ಮತ್ತೊಂದು ಚಾನೆಲ್ – ‘ಪಬ್ಲಿಕ್ ಮೂವೀಸ್’ ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆ

    ಪಬ್ಲಿಕ್ ಟಿವಿಯಿಂದ ಮತ್ತೊಂದು ಚಾನೆಲ್ – ‘ಪಬ್ಲಿಕ್ ಮೂವೀಸ್’ ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆ

    ಬೆಂಗಳೂರು: ಸಮಸ್ತ ಕನ್ನಡದ ಜನತೆಗೆ ಪಬ್ಲಿಕ್ ಟಿವಿ ವತಿಯಿಂದ ಸಂತಸದ ಸುದ್ದಿ. ನೀವು ಹರಸಿ, ಹಾರೈಸಿ ಬೆಳೆಸಿದ ನಿಮ್ಮ ರೈಟ್‍ಮೆನ್ ಮೀಡಿಯಾದ ಪಬ್ಲಿಕ್ ಟಿವಿ ನ್ಯೂಸ್ ಹಾಗೂ ಪಬ್ಲಿಕ್ ಮ್ಯೂಸಿಕ್ ಚಾನೆಲ್ ಜೊತೆಗೆ ಹೊಸದೊಂದು ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

    2018ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ 6ನೇ ವರ್ಷದ ಸಂಭ್ರಮಾಚರಣೆ ವೇಳೆ ನಿಮ್ಮ ಪಬ್ಲಿಕ್ ಟಿವಿ ಸಮೂಹದ 3ನೇ ಚಾನೆಲ್ ಪಬ್ಲಿಕ್ ಮೂವೀಸ್ ಲಾಂಚ್ ಆಗಲಿದೆ. ಪಬ್ಲಿಕ್ ಮ್ಯೂಸಿಕ್ 3ರ ಸಂಭ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಈ ವಿಷಯವನ್ನು ಘೋಷಣೆ ಮಾಡಿದ್ರು.

    ಇದೇ ವರ್ಷ ಫೆಬ್ರವರಿ 12 ರಂದು ಪಬ್ಲಿಕ್ ಟಿವಿ 5ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತು. ಸೆಪ್ಟೆಂಬರ್ 28 ಅಂದ್ರೆ ಇಂದು ಪಬ್ಲಿಕ್ ಮ್ಯೂಸಿಕ್ ಚಾನೆಲ್ ತನ್ನ ಮೂರನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತಿದೆ. ಇದೀಗ ಈ ಎರಡು ಚಾನೆಲ್‍ಗಳ ಜೊತೆ ಪಬ್ಲಿಕ್ ಮೂವೀಸ್ ಚಾನೆಲ್ ಕೂಡ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

    ಈ ಬಾರಿ ಮೂರು ವರ್ಷ ಪ್ಲಸ್ಸು ಎಂಬ ಕಾನ್ಸೆಪ್ಟ್ ನೊಂದಿಗೆ ಪಬ್ಲಿಕ್ ಮ್ಯೂಸಿಕ್ ನಿಮ್ಮ ಮುಂದೆ ಬಂದಿದೆ. ಮೂರನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ನಟ ಧ್ರುವಾ ಸರ್ಜಾ, ನಟಿ ರಚಿತಾ ರಾಮ್, ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಮುಖ್ಯ ಅತಿಥಿಗಳಾಗಿದ್ರು. ಆನಂದ್ ಆಡಿಯೋ ಸಂಸ್ಥೆಯ ಮಾಲೀಕರಾದ ಶ್ಯಾಮ್, ಅಶ್ವಿನಿ ರೆಕಾರ್ಡಿಂಗ್ ಸಂಸ್ಥೆಯ ಮಾಲೀಕರಾದ ಅಶ್ವಿನಿ ರಾಮ್‍ಪ್ರಸಾದ್, ಸ್ವರ್ಣ ಆಡಿಯೋ ರೆಕಾರ್ಡಿಂಗ್ ಕಂಪೆನಿಯ ಇಬ್ಬರು ಮಾಲೀಕರಾದ ನವೀನ್ ಯಜಮಾನ್ ಹಾಗೂ ಶಶಾಂಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

     ಪಬ್ಲಿಕ್ ಮ್ಯೂಸಿಕ್ 2ನೇ ವರ್ಷದ ಸಂಭ್ರಮಾಚರಣೆ ವೇಳೆ ದಾಖಲೆಯ ಮ್ಯೂಸಿಕಲ್ ಮ್ಯಾರಥಾನ್ ಕಾರ್ಯಕ್ರಮ ಮಾಡಿದ್ದಾಗ ನೀವು ನೀಡಿದ್ದ ಅಭೂತಪೂರ್ವ ಬೆಂಬಲ ನಮಗೆ ಇನ್ನೂ ನೆನಪಿದೆ. ನಮ್ಮನ್ನು ನಿರಂತರ ಬೆಂಬಲಿಸಿ, ಕೈಹಿಡಿದು ಮುನ್ನಡೆಸಿದ ನಿಮಗೆ ಹೃದಯಪೂರ್ವಕ ಕೃತಜ್ಞತೆಗಳು.