Tag: Public Eye

  • ಸಂಚಾರ ಉಲ್ಲಂಘನೆಯ ಫೋಟೋ ಸೆಂಡ್ ಮಾಡಿ – ಜನರಲ್ಲಿ ಭಾಸ್ಕರ್ ರಾವ್ ಮನವಿ

    ಸಂಚಾರ ಉಲ್ಲಂಘನೆಯ ಫೋಟೋ ಸೆಂಡ್ ಮಾಡಿ – ಜನರಲ್ಲಿ ಭಾಸ್ಕರ್ ರಾವ್ ಮನವಿ

    ಬೆಂಗಳೂರು: ನಗರದಲ್ಲಿ ಸಂಚಾರ ಉಲ್ಲಂಘನೆಯ ಫೋಟೋವನ್ನು ಕಳುಹಿಸಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ಲೇ ಸ್ಟೋರಿಗೆ ಹೋಗಿ ‘ಪಬ್ಲಿಕ್ ಐ’ ಆ್ಯಪ್ ಡೌನ್‍ಲೋಡ್ ಮಾಡಿ ಸಂಚಾರ ಉಲ್ಲಂಘನೆಯಾಗಿದ್ದರೆ ಈ ಆ್ಯಪ್ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿ. ನೀವು ಕಳುಹಿಸಿದ ಫೋಟೋವನ್ನು ಟ್ರಾಫಿಕ್ ನಿಯಂತ್ರಣ ಕೇಂದ್ರದಲ್ಲಿ ಪರಿಶೀಲಿಸಿ ಇ ಚಲನ್ ಕಳುಹಿಸಲಾಗುವುದು. ಕಳುಹಿಸಿದ ವ್ಯಕ್ತಗಳ ವಿವರವನ್ನು ಗೌಪ್ಯವಾಗಿಡಲಾಗುವುದು. ನೀವು ನಾಗರಿಕ ಪೊಲೀಸರಾಗಿ ಎಂದು ಕೇಳಿಕೊಂಡಿದ್ದಾರೆ.

    ಈ ಟ್ವೀಟ್ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಹಿಂದೆಯೇ ನಾವು ಫೋಟೋಗಳನ್ನು ಕಳುಹಿಸುತ್ತಿದ್ದೇವೆ. ಆದರೆ ಈ ಪ್ರಕರಣಗಳು ಇನ್ನೂ ಪೆಂಡಿಂಗ್ ನಲ್ಲಿದೆ ಎಂದು ಪ್ರತ್ರಿಕ್ರಿಯೆ ನೀಡಿದ್ದಾರೆ.