ವಿಜಯಪುರ: ಹಾಸ್ಯ ನಟ ರಾಜು ತಾಳಿಕೋಟೆ ಮೇಲೆ ಮಾರಾಣಾಂತಿಕ ಹಲ್ಲೆ ಜೊತೆಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಸದ್ಯ ರಾಜು ತಾಳಿಕೋಟಿ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ತ ರಾಜು ತಾಳಿಕೋಟೆ ಅಕ್ಕನ ಮಗನ ಹೆಂಡತಿ ಸನಾಗೆ ರಾಜು ತಾಳಿಕೋಟಿ ವಿಷ ಕುಡಿಸಿರುವುದಾಗಿ ಆರೋಪಿಸಿ ಸನಾ ದೂರು ದಾಖಲಿಸಿದ್ದಾರೆ. ಇತ್ತ ರಾಜು ತಾಳಿಕೋಟೆ ಕೂಡ ಶೇಖ್ ಮೋದಿ,ಸನಾ ಸೇರಿದಂತೆ ಸನಾ ತಂದೆ,ತಾಯಿ ಮೇಲೆ ದೂರು ದಾಖಲಿಸಿದ್ದಾರೆ.
ಸನಾಳ ಅಕ್ಕನ ಗಂಡ ಶೇಖ್ ಮೋದಿ ಜೊತೆ ಸನಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅದರ ಹಿನ್ನೆಲೆ ನನ್ನ ಅಳಿಯ ಫಯಾಜ ಪರವಾಗಿ ಕೌಟುಂಬಿಕ ಕಲಹ ಬಗೆಹರಿಸಲು ಹೋದಾಗ ಈ ರೀತಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆಂದು ರಾಜು ತಾಳಿಕೋಟೆ ತಮ್ಮ ಮೇಲೆ ಸನಾ ಕುಟುಂಬಸ್ಥರು ಮಾಡಿದ ಆರೋಪವನ್ನ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ
ರಾಜು ತಾಳಿಕೋಟೆ ಅವರ ಅಕ್ಕನ ಮಗ ಫಯಾಜ್ ಹೆಂಡತಿ ಸನಾ ಕೂಡ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು, ರಾಜು ತಾಳಿಕೋಟೆ, ಗಂಡ ಫಯಾಜ್ ಸೇರಿದಂತೆ ಹಲವರು ನನ್ನ ಮೇಲೆ ಹಲ್ಲೆಗೈದಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಪತಿಬಫಯಾಜ್ ಅನೈತಿಕ ಸಂಬಂಧ ಹೊಂದಿದ್ದಾನೆ. ಅದನ್ನ ಪ್ರಶ್ನಿಸಿದ್ದಕ್ಕೆ ನನಗೆ ಈ ಶಿಕ್ಷೆ ಎಂದು ದೂರಿದ್ದಾರೆ.
ಸದ್ಯ ಎರಡು ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.
ಗಾಂಧಿನಗರ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ಸಿಎಂ ಯಾರಾಗಲಿದ್ದಾರೆ ಎಂಬುದು ಕೂತುಹಲ ಮೂಡಿಸಿದೆ.
ಕರ್ನಾಟಕದಂತೆ ಗುಜರಾತ್‍ನಲ್ಲೂ ನಾಯಕತ್ವ ಬದಲಾವಣೆಯಾಗಿದ್ದು, ಇಂದು ಅಥವಾ ನಾಳೆ ನೂತನ ಸಿಎಂ ಆಯ್ಕೆ ಮಾಡವ ಸಾಧ್ಯತೆ ಇದೆ. ಮುಂದಿನ ಸಿಎಂ ಆಯ್ಕೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದ್ದು, ಪಟೇಲ್ ಸಮುದಾಯಕ್ಕೆ ಮಣೆ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಅವರದಿಯಾಗಿದೆ. ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ರಾಜ್ಯ ಕೃಷಿ ಸಚಿವರಾದ ಆರ್.ಸಿ ಫಾಲ್ಡು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ, ಮನ್ಸುಖ್ ಮಾಂಡವೀಯ ಸೇರಿದಂತೆ ಕೆಲ ನಾಯಕರ ಹೆಸರುಗಳು ನೂತನ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ
ಗುಜರಾತ್‍ನಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದು ವರ್ಷವಷ್ಟೇ ಬಾಕಿ ಇದೆ. ಈ ನಡುವೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಯಾವುದೇ ಕಾರಣವನ್ನೂ ತಿಳಿಸದೇ ಸಿಎಂ ಬದಲಾವಣೆ ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ ರಾಜೀನಾಮೆ ಬಳಿಕ ಮಾತನಾಡಿದ ವಿಜಯ್ ರೂಪಾನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ. ಗುಜರಾತ್ ಪ್ರಗತಿಗೆ ಹೊಸ ನಾಯಕತ್ವ ಬರಬೇಕೆಂದು ನಾನು ನಂಬುತ್ತೇನೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ
ಇದೀಗ ಹೊಸ ನಾಯಕರ ರೇಸ್ ನಲ್ಲಿ ಪಟೇಲ್, ಫಾಲ್ಡು, ರೂಪಾಲ, ಮಾಂಡವೀಯ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸಿದ್ದಾರೆ ಹಾಗಾಗಿ ಅಚ್ಚರಿಯ ಹೆಸರು ಸೇರ್ಪಡೆಗೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಅಭಿಪ್ರಾಯವು ಕೇಳಿಬರುತ್ತಿದೆ.
2016 ರಲ್ಲಿ ಆನಂದಿ ಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ, ನಿತಿನ್ ಪಟೇಲ್ ಮುಂದಿನ ಸಿಎಂ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರೂಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ನಿತಿನ್ ಪಟೇಲ್ ಅವರನ್ನೇ ಸಿಎಂ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಹೈಕಮಾಂಡ್ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್
ಬೆಂಗಳೂರು: ಕೊರೊನಾ 3ನೇ ಅಲೆ ಆತಂಕದ ನಡುವೆ ದ್ವಿತೀಯ ಪಿಯುಸಿ ಎಕ್ಸಾಂ ನಡೀತಿದೆ. ಖಾಸಗಿ ಅಭ್ಯರ್ಥಿಗಳು ಮತ್ತು ಸರ್ಕಾರ ಕೊಟ್ಟ ಫಲಿತಾಂಶ ರಿಜೆಕ್ಟ್ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದು, ಕಠಿಣ ಮಾರ್ಗಸೂಚಿ ಅಡಿ ಪರೀಕ್ಷೆ ನಡೆಸಲು ಪಿಯುಸಿ ಬೋರ್ಡ್ ಮುಂದಾಗಿದೆ.
ನಾಳೆಯಿಂದ ಸೆಪ್ಟೆಂಬರ್ 3 ವರೆಗೆ ಪರೀಕ್ಷೆ ನಡೆಯಲಿದೆ. ಮೊದಲ ದಿನವಾದ ನಾಳೆ ಐಚ್ಛಿಕ ಕನ್ನಡ, ಗಣಿತ ಮತ್ತು ಬೇಸಿಕ್ ಗಣಿತ ಪರೀಕ್ಷೆಗಳು ನಡೆಯಲಿವೆ. ದ್ವಿತಿಯ ಪಿಯುಸಿ ಪರೀಕ್ಷೆ ಫಲಿತಾಂಶ ರಿಜೆಕ್ಟ್ ಮಾಡಿದ್ದ 945 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ಸಾವಿರದ 414 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈ ನಡುವೆ ಕಾಲೇಜು ಆರಂಭಕ್ಕೆ ಪಿಯು ಬೋರ್ಡ್ ಮಾರ್ಗಸೂಚಿ ರಿಲೀಸ್ ಮಾಡಿದೆ. ಈ ತಿಂಗಳ 23 ರಿಂದ ಪ್ರಥಮ ಮತ್ತು ದ್ವೀತಿಯ ಪಿಯುಸಿ ತರಗತಿಗಳು ಶುರುವಾಗಲಿದೆ. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ
ಮಾರ್ಗಸೂಚಿಗಳೇನು..?
ಆನ್‍ಲೈನ್ ಅಥವಾ ಆಫ್‍ಲೈನ್ ಕ್ಲಾಸ್‍ಗೆ ಹಾಜರಾತಿ ಕಡ್ಡಾಯವಾಗಿರುತ್ತದೆ. ಭೌತಿಕ ತರಗತಿಗೆ ಹಾಜರಾಗೋದು ಕಡ್ಡಾಯ ಅಲ್ಲ. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ. 50:50 ಪಾಳಿಯಲ್ಲಿ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಮೊದಲ ಬ್ಯಾಚ್‍ಗೆ 3 ದಿನ, 2ನೇ ಬ್ಯಾಚ್‍ಗೆ 3 ದಿನ ಕ್ಲಾಸ್ ನಡೆಯಲಿದೆ. ಹಾಗೂ 50 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಫೇಸ್ ಶೀಲ್ಡ್ ಕಡ್ಡಾಯ ಮಾಡಲಾಗುತ್ತದೆ.
ರಾಯಚೂರು: ಅನಾಮಿಕ ಅಜ್ಜಿಯ ಮಾತು ನಂಬಿದ ನೂರಾರು ಮಹಿಳೆಯರು ನೈವೇದ್ಯವಾಗಿ ಮೊಸರನ್ನ ತಂದಿದ್ದನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಕೊರೊನಾ ಲಾಕ್‍ಡೌನ್ ನಡುವೆ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರನ್ನು ಮನೆಗೆ ಕಳುಹಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
ಕೊರಾನಾ ವೈರಸ್ ಗೆ ಶಾಂತಿ ಆಗಬೇಕೆಂದರೆ ಮಾರೆಮ್ಮ ದೇವಿಗೆ ಮೊಸರನ್ನ ನೀಡಬೇಕಂತೆ. ಹೀಗಂತ ರಾಯಚೂರಿನಲ್ಲಿ ಅನಾಮಿಕ ಅಜ್ಜಿಯೊಬ್ಬಳು ಹೇಳಿದ ಮಾತನ್ನ ಕೇಳಿ ನೂರಾರು ಜನ ಮಹಿಳೆಯರು ನಗರದ ಕಂದಗಡ್ಡೆ ಮಾರೆಮ್ಮ ದೇವಾಲಯಕ್ಕೆ ಮೊಸರನ್ನ ನೈವೇದ್ಯ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ಲೆಕ್ಕಿಸದೇ ನೂರಾರು ಜನ ದೇವಾಲಯಕ್ಕೆ ಬಂದು ಮುಗಿಬಿದ್ದು ನೈವೇದ್ಯ ಕೊಟ್ಟಿದ್ದಾರೆ.
ಮೈಯಲ್ಲಿ ದೇವರು ಬಂದು ಹೇಳಿದೆ ಅಂತ ಹೇಳಿದ್ದ ಅಜ್ಜಿ ಮಾತನ್ನ ಕೇಳಿ ಜನ ನೈವೇದ್ಯ ನೀಡಲು ಬಂದಿದ್ದಾರೆ. ಕೊರೊನಾ ಗಂಭೀರತೆಯನ್ನ ಅರ್ಥಮಾಡಿಕೊಳ್ಳದೆ, ಯಾವುದೇ ಸಾಮಾಜಿಕ ಅಂತರ ಕಾಪಾಡದೆ ಜನ ಯಾವುದೋ ಅಜ್ಜಿ ಮಾತು ಕೇಳಿ ಗುಂಪುಗುಂಪಾಗಿ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜನ ಗುಂಪು ಸೇರುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದವರನ್ನ ಚದುರಿಸಿ ಕಳುಹಿಸಿದ್ದಾರೆ.
ಇದೇ ರೀತಿ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನಂದಾದೀಪ ಆರಿದೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ವಾಟ್ಸಪ್ ಗಳಲ್ಲಿ ಸುದ್ದಿ ನೋಡಿದ ಜನರು ರಾತ್ರೋರಾತ್ರಿ ಮನೆಯನ್ನು ಶುಚಿಗೊಳಿಸಿ ಮನೆಯ ಮುಂದೆ ದೀಪ ಬೆಳಗಿದ್ದರು. ನಂತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಅವರು ಸ್ಪಷ್ಟನೆ ನೀಡಿ ಜನರ ಆತಂಕವನ್ನು ದೂರು ಮಾಡಿದ್ದರು.
ಬೆಂಗಳೂರು: 14 ವರ್ಷದ ಬಾಲಕ ಸೇರಿದಂತೆ ಇಂದು ಒಟ್ಟು 14 ಮಂದಿಗೆ ಕೊರೊನಾ ಬಂದಿದ್ದು ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ಗಣಿ ನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ನಂಜನಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರ ರೋಗಿ 81ನೇ ವ್ಯಕ್ತಿ ಪುತ್ರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?
14 ವರ್ಷದ ಬಾಲಕ ಪೋಷಕರ ಸ್ನೇಹಿತರೊಂದಿಗೆ ವಿವಿಧ ವಾಹನಗಳನ್ನು ಬಳಸಿಕೊಂಡು ನಾಲ್ಕು ದಿನಗಳ ಹಿಂದೆ ನಂಜನಗೂಡಿನಿಂದ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ನಗರಕ್ಕೆ ಆಗಮಿಸಿದ್ದ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಂಜನಗೂಡಿನಿಂದ ಬಂದ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಮೂವರ ಪರೀಕ್ಷೆ ವರದಿ ಬಂದಿದ್ದು, ಅವರಲ್ಲಿ ಬಾಲಕನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಬಳ್ಳಾರಿ ಜಿಲ್ಲೆಯ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ ಆಗಿದೆ.
ಜಿಲ್ಲಾಡಳಿತ ನಂಜನಗೂಡಿನಿಂದ ಬಂದ ಈ ಮೂವರನ್ನು ಬಳ್ಳಾರಿಗೆ ಬಂದ ಕೂಡಲೇ ಚಿಕಿತ್ಸೆಗೆ ಒಳಪಡಿಸಿ ಪ್ರತ್ಯೇಕವಾಗಿ ವಾರ್ಡ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಸೋಂಕಿತರು ಬೇರೆ ಯಾರನ್ನು ಸಂಪರ್ಕ ಮಾಡಲು ಬಿಟ್ಟಿಲ್ಲ. ದೆಹಲಿಯ ಜಮಾತ್‍ಗೆ ತೆರಳಿದ್ದ ಬೀದರಿನ 9 ಮಂದಿ ಜೊತೆ ಒಬ್ಬರ ಪತ್ನಿಗೂ ಕೊರೊನಾ ಬಂದಿದೆ. ಇದನ್ನೂ ಓದಿ: ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು
ರೋಗಿ 111: ಮೈಸೂರಿನ 24 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್‍ಮೇಟ್) ಸಂಪರ್ಕಿತರಾಗಿದ್ದರು. ಅವರನ್ನು ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್
ರೋಗಿ 112: ಮೈಸೂರಿನ 22 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್‍ಮೇಟ್) ಸಂಪರ್ಕಿತರಾಗಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 114: ಬೀದರ್‍ನ ಬಿಲಾಲ್ ಕಾಲೋನಿ ನಿವಾಸಿ 48 ವರ್ಷದ ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 115: ಬೀದರ್ ಲಾಲ್ವಾಡಿ ರಸ್ತೆಯ ನಿವಾಸಿ 30 ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 116: 41 ಪುರುಷ ಶಹಗುಂಜ್, ಬೀದರ್ ನಿವಾಸಿಯಾಗಿದ್ದಾರೆ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 117: 66 ಪುರುಷ ಗೊಲೆಕ್ಬಾನಾ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 118: 59 ಪುರುಷ ಬಸವಕಲ್ಯಾಣ್, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 119: 39 ಪುರುಷ ಪಹೇಲಿ ಚೌಕಿ, ಹೈದರಾಬಾದ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 120: 60 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 121: 63 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 122: 73 ಪುರುಷ ಕಿರಮಣಿ ಕಾಲೋನಿ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೋಗಿ 123: 45 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 124: 60 ಮಹಿಳೆ ಕಲಬುರಗಿ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಸದ್ಯ ಅವರನ್ನು ಕಲಬುರಗಿಯಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ನಗರದ ಜೆಪಿ ಪಾರ್ಕ್ ನಲ್ಲಿ ನಿರ್ಮಾಪಕ ಮುನಿರತ್ನ ಅವರ ನೇತೃತ್ವದಲ್ಲಿ ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವ ಸಮಾರಂಭ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ದರ್ಶನ್, ಸಿಎಂ ಯಡಿಯೂರಪ್ಪ, ಅಭಿಷೇಕ್ ಅಂಬರೀಷ್, ಶ್ರೀನಿವಾಸ್ ಮೂರ್ತಿ, ರವಿಶಂಕರ್, ಹರಿಕೃಷ್ಣ, ಯಶಸ್ಸ್ ಸೂರ್ಯ, ಶಾಸಕ ಬೈರತಿ ಬಸವರಾಜ್ ಭಾಗವಹಿಸಿದ್ದರು. ವೇದಿಕೆಗೆ ಆಗಮಿಸಿದ ದರ್ಶನ್ ಸಿಎಂ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿದರು. ಬಳಿಕ ಎಲ್ಲರನ್ನೂ ಮಾತನಾಡಿಸಿ ತಮ್ಮ ಆಸನದ ಮೇಲೆ ಕುಳಿತುಕೊಂಡರು.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 30 ಅಡಿ ಶಿವನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಮೆಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದಾರೆ. ಆಹೋ ರಾತ್ರಿ ಜಾಗರಣೆ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಕುರುಕ್ಷೇತ್ರ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಭೀಷ್ಮನ ಪಾತ್ರ ಮಾಡಿದ್ದರು. ಹೀಗಾಗಿ ಅವರ ಪರವಾಗಿ ನೆನಪಿನ ಕಾಣಿಕೆ ಸ್ವೀಕರಿಸಲು ಅಭಿಷೇಕ್ ಅಂಬರೀಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಷಯ ಕೋರಿದರು. ಅಪರೂಪದ ಮತ್ತು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ಮುನಿರತ್ನ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಒಂದು ಗಂಟೆಗಳ ಕಾಲ ಇದ್ದು ಸಮಾರಂಭವನ್ನ ನೋಡಿದ್ದೇನೆ ಖುಷಿ ಆಗಿದೆ ಎಂದು ತಿಳಿಸಿದರು.
ಚಂಡೀಗಢ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಯುವಕನೊಬ್ಬನಿಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗೂಸಾ ಕೊಟ್ಟಿದ್ದಾರೆ.
ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿದೆ. ಹೀಗಾಗಿ ಕರ್ನಾಲ್‍ನಲ್ಲಿ ಇಂದು ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮ ಆಯೋಜಿಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಯುವಕನೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಬಿಜೆಪಿ ಕಾರ್ಯಕರ್ತನೊಬ್ಬ ಮನೋಹರ್ ಲಾಲ್ ಖಟ್ಟರ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾನೆ. ಬಳಿಕ ಅವರ ಜೊತೆಗೆ ಸೆಲ್ಫಿ ಫೋಟೋ ತೆಗೆದುಕೊಳ್ಳುವ ಸಲುವಾಗಿ ಮೊಬೈಲ್ ಹಿಡಿಯುತ್ತಾನೆ. ಈ ವೇಳೆ ಏಕಾಏಕಿ ಕೋಪಗೊಂಡ ಸಿಎಂ ಯುವಕನ ಕೈಗೆ ಹೊಡೆದು, ಹಿಂದಕ್ಕೆ ತಳ್ಳುತ್ತಾರೆ. ಮನೋಹರ್ ಲಾಲ್ ಖಟ್ಟರ್ ಅವರ ವರ್ತನೆಯಿಂದ ಮುಜುಗುರಕ್ಕೆ ಒಳಗಾದ ಯುವಕ ಕಾರ್ಯಕ್ರಮದಿಂದ ಹೊರ ನಡೆದಿದ್ದಾನೆ.
#WATCH Haryana CM Manohar Lal Khattar pushes aside a man who tries to take a selfie with him, at an event in Karnal. pic.twitter.com/HZK10VWWQy
ಈ ದೃಶ್ಯವನ್ನು ಸ್ಥಳದಲ್ಲಿದ್ದ ಸುದ್ದಿಗಾರರು ಹಾಗೂ ಸ್ಥಳೀಯರು ವಿಡಿಯೋ ಕ್ಯಾಮೆರಾ, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮನೋಹರ್ ಲಾಲ್ ಖಟ್ಟರ್ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂಬ ವಿವಾದತ್ಮಕ ಹೇಳಿಕೆ ನೀಡಿ, ರಾಜ್ಯದ ಹಾಗೂ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಪಂಚಕುಲ ಜಿಲ್ಲೆಯ ಕಾಲ್ಕಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಮಾಡಿದ್ದ ಅವರು, ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳನ್ನು ಮಹಿಳೆಯರು ಪರಿಚಿತರ ವಿರುದ್ಧ ದಾಖಲಿಸುತ್ತಾರೆ. ಅದರಲ್ಲೂ ಸುಳ್ಳು ಆರೋಪಗಳೇ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ. ಆದರೇ ಹಿಂದೆ ಎಂದೋ ನಡೆದ ಘಟನೆಗಳು ಹಾಗೂ ಇಂದು ನಡೆಯುತ್ತಿರುವ ಘಟನೆಗಳನ್ನು ಮುಂದಿಟ್ಟುಕೊಂಡು ಬೇಕಂತಲೇ ಸುಳ್ಳು ಅತ್ಯಾಚಾರ ಕೇಸ್‍ಗಳನ್ನು ಕೆಲವರು ದಾಖಲಿಸುತ್ತಾರೆ. ಆದ್ದರಿಂದ ಇಂತಹ ಘಟನೆಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗುತ್ತಿದೆಯೇ ಹೊರತು ಪ್ರಕರಣಗಳಲ್ಲ ಎಂದು ಹೇಳಿಕೆ ನೀಡಿದ್ದರು.
ಶಿವಮೊಗ್ಗ: ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳ ಪೈಕಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಭೀರವಾಗಿದೆ.
ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಆಯನೂರು ಗ್ರಾಮದ ಕೆಲ ಯುವಕರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್‍ಗೆ ಪದೇ ಪದೇ ಕರೆ ಮಾಡಿ, ಐದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡಲು ನಿರಾಕರಿಸಿದರೆ ವಿಡಿಯೋವನ್ನು ವಾಟ್ಸಪ್, ಫೇಸ್ ಬುಕ್‍ಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ.
ಬೆದರಿಕೆಯಿಂದ ಬೇಸತ್ತಿದ್ದ ಪ್ರೇಮಿಗಳಿಬ್ಬರು ಸೋಮವಾರದಂದು ಕುಂಸಿ ಸಮೀಪದ ಮಂಡಘಟ್ಟದ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದು, ಯುವತಿ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಂಡೀಗಢ: ಪ್ರಾರ್ಥನಾ ಮಂದಿರಲ್ಲಿ ಬಾಂಬ್ ಸ್ಫೋಟಗೊಂಡು ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಂಜಾಬ್‍ನ ಅಮೃತಸರ ಸಮೀಪದ ರಾಜಸಾನ್ಸಿ ಗ್ರಾಮದಲ್ಲಿ ಇಂದು ನಡೆದಿದೆ.
ಅಮೃತಸರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 8 ಕಿ.ಮೀ. ಅಂತರದಲ್ಲಿ ದುರ್ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ 10 ಜನರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದಂತೆ ಮೂವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಐಜಿ ಸುರೇಂದ್ರ ಪಾಲ್ ಸಿಂಗ್ ಪರ್ಮರ್ ತಿಳಿಸಿದ್ದಾರೆ.
ಆಗಿದ್ದೇನು?:
ಪ್ರತಿ ಭಾನುವಾರ 500ಕ್ಕೂ ಹೆಚ್ಚು ಜನರು ನಿರಂಕಾರಿ ಭವನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇದನ್ನೇ ಗುರಿಯಾಗಿಸಿಕೊಂಡಿದ್ದ ದುಷ್ಕರ್ಮಿಗಳು, ಪಾರ್ಥನಾ ಸಮಯದಲ್ಲಿ ಬಾಂಬ್ ದಾಳಿ ಮಾಡಿದ್ದಾರೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
Visuals from the hospital where those injured have been shifted after the blast at Nirankari Bhawan in Amritsar district, earlier today. #Punjabpic.twitter.com/NpumSbHq4e
ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬೈಕಿನಲ್ಲಿ ಬಂದಿದ್ದು, ನಿರಂಕಾರ ಭವನದಲ್ಲಿ ಬಾಂಬ್ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಅಂತಾ ವರದಿಯಾಗಿದೆ. ಮೃತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನಿಧಿ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಪಂಚಾಬ್ ಮುಖ್ಯಮಂತ್ರಿ ಅಮರೀಂದ್ರ ಸಿಂಗ್ ತಿಳಿಸಿದ್ದಾರೆ.
Amritsar blast: Punjab CM Captain Amarinder Singh announces Rs. 5 lakh compensation for the kin of the dead and free treatment for the injured. #Punjabpic.twitter.com/Qxig8I5cNO