Tag: Pubklic TV

  • ರಾಜ್ಯದಲ್ಲಿ ಲಾಕ್‍ಡೌನ್, ಸೆಮಿ ಲಾಕ್‍ಡೌನ್ ಇಲ್ಲ: ಸುಧಾಕರ್ ಸ್ಪಷ್ಟನೆ

    ರಾಜ್ಯದಲ್ಲಿ ಲಾಕ್‍ಡೌನ್, ಸೆಮಿ ಲಾಕ್‍ಡೌನ್ ಇಲ್ಲ: ಸುಧಾಕರ್ ಸ್ಪಷ್ಟನೆ

    ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಅಥವಾ ಸೆಮಿ ಲಾಕ್‍ಡೌನ್ ಇಲ್ಲ ಎಂದು ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿಗಳನ್ನು ಅವಲೋಕನ ಮಾಡಿ ಕೆಲವೊಂದು ನಿರ್ಣಯಗಳನ್ನು ನಿನ್ನೆ ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗಗಳಿಂದ ಬರುವ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದವರನ್ನು ಕಡ್ಡಾಯವಾಗಿ ಒಳಗಡೆ ಬಿಡದಂತೆ ಸೂಚಿಸಲಾಗಿದ್ದು, ಸ್ಥಳದಲ್ಲೇ ಪರೀಕ್ಷೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಸಾರ್ವಜನಿಕ ಸ್ಥಳಗಳಲ್ಲಿ ಬಹಳಷ್ಟು ಮಂದಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಹೀಗಾಗಿ ಮಾಸ್ಕ್ ಇಲ್ಲದೆ ಓಡಾಡುವವರಿಗೆ 250 ದಂಡ ವಿಧಿಸುವ ಕ್ರಮವನ್ನು ಎರಡು ದಿನಗಳೊಳಗೆ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೊರೊನಾ ವೈರಸ್ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

    ಮದುವೆ ಸಮಾರಂಭಗಳಲ್ಲಿ ನಿಗದಿಯಾದ ಮಿತಿಗಿಂತ ಜನ ಸೇರುವಂತಿಲ್ಲ. ಒಂದು ವೇಳೆ ಈ ರೂಲ್ಸ್ ಪಾಲೋ ಮಾಡದಿದ್ದರೆ ಮಾರ್ಷಲ್ ಗಳನ್ನು ಕಳುಹಿಸಲಾಗುವುದು ಅಲ್ಲದೆ ದಂಡ ಕೂಡ ವಿಧಿಸಲಾಗುತ್ತದೆ. ಸಮಾರಂಭದ ಆಯೋಜಕರು ಹಾಗೂ ಸ್ಥಳದ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಹೀಗಾಗಿ ಸೆಮಿ ಲಾಕ್ ಡೌನ್ ಅಥವಾ ಲಾಕ್ ಡೌನ್ ಮಾಡಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

  • ಬೆಂಬಲಿಗರ ವಾಹನಗಳಿಗೆ ಸಿಗದ ಫ್ರೀ ಎಂಟ್ರಿ- ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ

    ಬೆಂಬಲಿಗರ ವಾಹನಗಳಿಗೆ ಸಿಗದ ಫ್ರೀ ಎಂಟ್ರಿ- ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ

    – ಸೋಶಿಯಲ್ ಮೀಡಿಯಾದಲ್ಲಿ ಶಾಸಕನ ದರ್ಪ ಸೆರೆ

    ಲಕ್ನೋ: ಬೆಂಬಲಿಗರ 200 ವಾಹನಗಳಿಗೆ ಫ್ರೀ ಎಂಟ್ರಿ ನೀಡದ ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕ ನರೇಶ್ ರಾವತ್ ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕರ ವಿರುದ್ಧ ಟೋಲ್ ಪ್ಲಾಜಾ ಮ್ಯಾನೇಜರ್ ಲಕ್ನೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಲಕ್ನೋ ಮಾರ್ಗದಲ್ಲಿರುವ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಎನ್‍ಹೆಚ್-30 ಮಾರ್ಗವಾಗಿ ಬಂದ ಶಾಸಕರ ವಾಹನಗಳನ್ನ ಟೋಲ್ ಸಿಬ್ಬಂದಿ ತಡೆದು ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡ ಶಾಸಕ ಟೋಲ್ ಪ್ಲಾಜಾ ಕಚೇರಿಯೊಳಗೆ ನುಗ್ಗಿ ದರ್ಪ ಮರೆದಿದ್ದಾರೆ.

    ಟೋಲ್ ಸಿಬ್ಬಂದಿ ಅನುಮತಿ ನೀಡದ ಹಿನ್ನೆಲೆ ಶಾಸಕ ತಮ್ಮ ಬೆಂಬಲಿಗರ ಜತೆ ಸೇರಿ ರೌಡಿಯಂತೆ ವರ್ತಿಸಿದ್ದಾರೆ. ಈ ಎಲ್ಲ ದೃಶ್ಯಗಳು ಕಚೇರಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಶಾಸಕರು ಪ್ರತಿದಿನ ಈ ಮಾರ್ಗವಾಗಿ ಸಂಚರಿಸುತ್ತಾರೆ. ಶಾಸಕರ ಹಿಂದೆ ಬರುವ ವಾಹನಗಳಿಗೆ ಟೋಲ್ ಫ್ರೀ ನೀಡಬೇಕೆಂದು ನಮ್ಮ ಮೇಲೆ ಒತ್ತಡ ಹಾಕುತ್ತಾರೆ. ಪ್ರವೇಶ ನೀಡದಕ್ಕೆ ಕಚೇರಿಯೊಳಗೆ ನುಗ್ಗೆ ಹಲ್ಲೆ ನಡೆಸಿದ್ದಾರೆ ಎಂದು ಟೋಲ್ ಪ್ಲಾಜಾ ಮ್ಯಾನೇಜರ್ ಆರೋಪಿಸಿದ್ದಾರೆ.