Tag: pubic tv

  • ಎಚ್‍ಡಿಕೆಯಿಂದ ತುರ್ತು ಸುದ್ದಿಗೋಷ್ಠಿ!

    ಎಚ್‍ಡಿಕೆಯಿಂದ ತುರ್ತು ಸುದ್ದಿಗೋಷ್ಠಿ!

    ಬೆಂಗಳೂರು: ಮಾಧ್ಯಮಗಳ ಮೇಲೆ ಪದೇ ಪದೇ ಮುನಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ.

    ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಚ್‍ಡಿಕೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಮಂಡ್ಯ, ತುಮಕೂರಿನಲ್ಲಿ ಫಲಿತಾಂಶ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹಿನ್ನೆಲೆಯಲಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮನೆಯಿಂದ ತಾಜ್ ವೆಸ್ಟೆಂಡ್ ಹೋಟೆಲ್ ಗೆ ತೆರಳಿದ್ದಾರೆ.

    Image result for hd kumaraswamy

    ಯಾವ ಕಾರಣಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

  • ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ ಸುಮಲತಾ!

    ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ ಸುಮಲತಾ!

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ. ಚುನಾವಣಾ ಆಯೋಗ ಸುಮಲತಾ ಅವರಿಗೆ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ನೀಡಿದೆ.

    ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತನ ಚಿಹ್ನೆಗಳನ್ನು ಸುಮಲತಾ ಅವರು ಆಯ್ಕೆ ಮಾಡಿಕೊಂಡಿದ್ದರು. ಈಗ ಆಯೋಗ ಸುಮಲತಾ ಅವರು ಕೇಳಿದ್ದ ಕಹಳೆ ಊದುತ್ತಿರುವ ರೈತನ ಚಿತ್ರವನ್ನು ನೀಡಿದೆ.

    ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನ 4 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

    ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಲು ಸುಮಲತಾ ಎಂಬ ಹೆಸರಿನ ಮಹಿಳೆಯರನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಿಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳನ್ನು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.

  • ಫಸ್ಟ್ ನ್ಯೂಸ್ 25-7-2018

    ಫಸ್ಟ್ ನ್ಯೂಸ್ 25-7-2018

    https://www.youtube.com/watch?v=_8sB2SqNk_0

  • ನರ್ಸ್ ಗಳಿಗೆ ನಿಂದನೆ ಪ್ರಕರಣ- ಸ್ಪಷ್ಟನೆ ನೀಡಿದ್ರು ವಿಕ್ಟೋರಿಯಾ ವಿಶೇಷಾಧಿಕಾರಿ

    ನರ್ಸ್ ಗಳಿಗೆ ನಿಂದನೆ ಪ್ರಕರಣ- ಸ್ಪಷ್ಟನೆ ನೀಡಿದ್ರು ವಿಕ್ಟೋರಿಯಾ ವಿಶೇಷಾಧಿಕಾರಿ

    ಬೆಂಗಳೂರು: ನರ್ಸ್ ಗಳಿಗೆ ಅಶ್ಲೀಲವಾಗಿ ನಿಂದಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವಿಶೇಷಾಧಿಕಾರಿ ಬಾಲಾಜಿ ಪೈ ಅವರು ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವೈದ್ಯರೊಬ್ಬರು ಬಂದು ರೆಕಾರ್ಡ್ ಕೇಳಿದ್ದಾರೆ ಅಂತ ನನ್ನ ಬಳಿ ದೂರು ಕೊಟ್ಟರು. ಈ ವೇಳೆ ನಾನು ಲಿಖಿತ ದೂರು ನೀಡಿ ಅಂತ ಹೇಳಿದ್ದೆ. ಆದ್ರೆ ಅವರು ನನ್ನ ಜೊತೆ ಉಲ್ಟಾ ಮಾತಾಡಿದ್ರು. ಆದ್ರೆ ಸಚಿವರ ಹೆಸರನ್ನು ಪ್ರಸ್ತಾಪವೇ ಮಾಡಿಲ್ಲ. ಅಷ್ಟೊಂದು ತಿಳಿಯದ ದಡ್ಡ ನಾನಲ್ಲ. ಇದೀಗ ಈ ವಿಚಾರ ನನಗೆ ಇರುಸುಮುರುಸು ತಂದಿದೆ ಅಂತ ಹೇಳಿದ್ರು.

    ಘಟನೆ ಬಗ್ಗೆ ಅವರನ್ನೇ ತನಿಖೆ ನಡೆಸಲಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಅವರಿಗೆ ಬೈದಿಲ್ಲ. ಬದಲಾಗಿ ನಾನೇ ನಿಮಗೆ ಬೆಂಬಲ ಕೊಡುತ್ತೇನೆ. ಈ ಬಗ್ಗೆ ನೀವು ಚಿಂತೆ ಮಾಡಬೇಡಿ. ಏನಾದ್ರೂ ನಾನಿದ್ದೇನೆ ಅಂತ ಹೇಳಿದ್ದೆ. ಆದ್ರೆ ನರ್ಸ್ ಯಾಕೆ ನನ್ನ ವಿರುದ್ಧ ಡೀನ್ ಗೆ ದೂರು ನೀಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ಬಗ್ಗೆ ನನಗೇನೂ ಗೊತ್ತಿಲ್ಲ ಅಂತ ಅವರು ಹೇಳಿದ್ರು.

    ಏನಿದು ಆರೋಪ?:
    ರೆಕಾರ್ಡ್ ನಿರ್ವಹಿಸುವ ವಿಚಾರದಲ್ಲಿ ಜಗಳವಾಗಿದೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಡೀನ್ ಗೆ ರೆಕಾರ್ಡ್ ಕೊಡುವುದು ಆಕೆಯ ಜವಾಬ್ದಾರಿಯಾಗಿತ್ತು. ಹಾಗೆಯೇ ಆಕೆ ಅದನ್ನು ಡೀನ್ ಗೆ ಕೊಟ್ಟಿದ್ದಾರೆ. ಆದ್ರೆ ಬಾಲಾಜಿ ಅವರ ಗಮನಕ್ಕೆ ತಾರದೇ ಕೊಟ್ಟಿದ್ದಕ್ಕೆ ಪೈ ನರ್ಸ್ ಅನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿತ್ತು.

    ಏನಮ್ಮ ಅವರು ಕೇಳಿದ್ದನ್ನೆಲ್ಲಾ ಕೋಡೋಕೆ ನಿಮಗೆ ನಾಚಿಕೆ ಆಗಲ್ವಾ. ನಾಳೆ ಸಚಿವ ಡಿಕೆ ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಫ್ ನರ್ಸ್‍ಗಳನ್ನು ರೇಪ್ ಮಾಡು ಅಂತಾರೆ. ಆಗ ನೀವು ರೇಪ್ ಮಾಡಿಸಿಕೊಳ್ಳಲು ರೆಡಿ ಇರ್ತೀರಾ? ಯಾಕಂದ್ರೆ ಮಂತ್ರಿಗಳಲ್ವಾ ಅವರು. ಹೀಗಾಗಿ ಅವರು ಹೇಳಿದಾಗ ನೀವು ರೆಪ್ಯೂಸ್ ಮಾಡಂಗಿಲ್ಲ ಅಂತ ಪೈ ನಿಂದಿಸಿದ್ದಾರೆ ಅಂತ ನರ್ಸ್ ಗಳು ಆರೋಪಿಸಿದ್ದರು. ಅಲ್ಲದೇ ಬಾಲಾಜಿ ಪೈ ವಿರುದ್ಧ ಟ್ರಾಮಾ ಸೆಂಟರ್‍ನ ಸ್ಟಾಫ್ ನರ್ಸ್, ಬಿಎಂಸಿ ಡೀನ್‍ಗೆ ದೂರು ನೀಡಿದ್ದರು. 20ಕ್ಕೂ ಹೆಚ್ಚು ಸ್ಟಾಫ್ ನರ್ಸ್‍ಗಳು ನೀಡಿದ ಲಿಖಿತ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

  • ಕಾಂಗ್ರೆಸ್, ಜೆಡಿಎಸ್ ಸೇರಿ ಒಳ್ಳೆಯ ಆಡಳಿತ ಕೊಡ್ತೀವಿ- ಎಚ್‍ಡಿಕೆ

    ಕಾಂಗ್ರೆಸ್, ಜೆಡಿಎಸ್ ಸೇರಿ ಒಳ್ಳೆಯ ಆಡಳಿತ ಕೊಡ್ತೀವಿ- ಎಚ್‍ಡಿಕೆ

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಒಳ್ಳೆ ಆಡಳಿತ ಕೊಡುತ್ತೇವೆ. ಖಾತೆ ಹಂಚಿಕೆ ಬಗ್ಗೆ ಇದೂವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ನಾಯಕರ ಭೇಟಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಅಂತ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಬುಧವಾರ ಸಿಎಂ ಆಗಿ ಹೆಚ್‍ಡಿಕೆ ಪ್ರಮಾಣವಚನ- ಕಾಂಗ್ರೆಸ್‍ಗೆ 20, ಜೆಡಿಎಸ್ ಗೆ 12 ಸಚಿವ ಸ್ಥಾನ

    ತಮ್ಮ ಹುಟ್ಟೂರು ಹಾಸನಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಊರಿಗೆ ಹುಟ್ಟೂರಿಗೆ ಹೋಗುತ್ತಿದ್ದೇನೆ. ಅಲ್ಲಿಂದ 11 ಗಂಟೆಗೆ ಮತ್ತೆ ವಾಪಾಸ್ ಬೆಂಗಳೂರಿಗೆ ಬರುತ್ತೇನೆ. ಬೆಂಗಳೂರಿನಿಂದ ದೆಹಲಿಗೆ ತೆರಳುತ್ತೇನೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ ಅಂತ ತಿಳಿಸಿದ್ರು. ಇದನ್ನೂ ಓದಿ: ಲಾಬಿ ಮಾಡೋಕೆ ದೆಹಲಿಗೆ ಬರಬೇಡಿ – ಕೈ ನಾಯಕರಿಗೆ ಹೈಕಮಾಂಡ್ ಸೂಚನೆ!

    ಈ ವೇಳೆ ಖಾತೆ ಒಂದೇ ಅಲ್ಲ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ ಅವರು, ಮತ್ತೆ ಸಂಜೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಬರುತ್ತೇನೆ. ಹಲವಾರು ರಾಷ್ಟ್ರೀಯ ನಾಯಕರು ಪ್ರಮಾಣವಚನ ಸಮಾರಂಭಕ್ಕೆ ಭಾಗವಹಿಸ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸೇರಿದಂತೆ ಹಲವರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನ ನೀಡುತ್ತೇನೆ. ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಕೂಡ ಫೋನಿನಲ್ಲಿ ಮಾತಾನಾಡಿದ್ದೇನೆ. ಅವರೂ ಕೂಡ ಪ್ರಮಾಣ ವಚನಕ್ಕೆ ಬರುವ ನಿರೀಕ್ಷೆಯಲ್ಲಿದ್ದೇನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಶನಿವಾರ ರಾತ್ರಿ ಎಚ್‍ಡಿಕೆಗೆ ಮುಖ್ಯವಾದ ಒಂದು ಸೂಚನೆ ಕೊಟ್ಟ ಎಚ್‍ಡಿಡಿ!

  • ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನ

    ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನ

    ಕೋಲಾರ: 32 ವರ್ಷದ ಇಬ್ಬರು ಮಕ್ಕಳ ತಂದೆ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ ಮಾಸ್ತಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ. ಸೋಮವಾರ ಬಾಲಕಿ ಹೇಳಿಕೆ ಆಧರಿಸಿ ಮಾಸ್ತಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    35 ವರ್ಷದ ಇಬ್ಬರು ಮಕ್ಕಳ ತಂದೆಯಿಂದ ಈ ಕೃತ್ಯ ನಡೆದಿದ್ದು, ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಹೇಳಿದ್ದಾಳೆ. ಅಲ್ಲದೆ ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿರುವ ಆರೋಪಿ ಕೃತ್ಯದ ನಂತರ ಪರಾರಿಯಾಗಿದ್ದ.

    ಸದ್ಯ ಮಾಸ್ತಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

  • ರೌಡಿಗಳ ನಿಯಂತ್ರಣ ಯಜ್ಞಕ್ಕೆ ಮುಂದಾದ ಬೆಂಗ್ಳೂರು ಪೊಲೀಸ್- ರಾತ್ರೋರಾತ್ರಿ ರೌಡಿ ಕಾಲಿಗೆ ಗುಂಡೇಟು

    ರೌಡಿಗಳ ನಿಯಂತ್ರಣ ಯಜ್ಞಕ್ಕೆ ಮುಂದಾದ ಬೆಂಗ್ಳೂರು ಪೊಲೀಸ್- ರಾತ್ರೋರಾತ್ರಿ ರೌಡಿ ಕಾಲಿಗೆ ಗುಂಡೇಟು

    ಬೆಂಗಳೂರು: ನಗರದ ಪೊಲೀಸರ ರಿವಾಲ್ವರ್ ಮತ್ತೆ ಘರ್ಜಿಸಿದೆ. ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಆರ್‍ಎಂಸಿ ಯಾರ್ಡ್ ಇನ್ಸ್‍ಪೆಕ್ಟರ್ ಮಹ್ಮದ್ ಮುಖರಾಮ್, ರೌಡಿ ಅಶ್ವಥ್ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಕಳೆದ ರಾತ್ರಿ ರಾಬರಿ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ರೌಡಿ ಅಶ್ವಥ್ ನನ್ನು ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಅಶ್ವಥ್ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ರಿವಾಲ್ವರ್‍ಗೆ ಕೆಲಸ ಕೊಟ್ಟ ಇನ್ಸ್ ಪೆಕ್ಟರ್ ಮಹ್ಮದ್, ಎರಡು ಸುತ್ತು ಗುಂಡು ಹಾರಿಸಿದ್ದಾರೆ.

    ಅಶ್ವಥ್ ಬಲಗಾಲಿಗೆ ಗಾಯವಾಗಿದ್ದು, ಇದೀಗ ಆತನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯಷ್ಟೇ ಕೋಣನಕುಂಟೆ ವ್ಯಾಪ್ತಿಯಲ್ಲಿ ಪೊಲೀಸ್ ಫೈರಿಂಗ್ ನಡೆದಿತ್ತು. ರೌಡಿಶೀಟರ್ ಸಂತೂ ಅಲಿಯಾಸ್ ಪಳನಿ ಕಾಲಿಗೆ ಕೋಣನಕುಂಟೆ ಪೊಲೀಸರು ಗುಂಡು ಹಾರಿಸಿದ್ದರು.

    ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ರೌಡಿಶೀಟರ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ರೌಡಿಶೀಟರ್ ಪಳನಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಹೀಗಾಗಿ ಭಾನುವಾರ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ರೌಡಿಶೀಟರ್ ಪಳನಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

    ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

    ಚಿಕ್ಕಬಳ್ಳಾಪುರ:  ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಭದ್ರತೆ ದೃಷ್ಟಿಯಿಂದ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರನ್ನ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ತೀವ್ರ ತಪಾಸಣೆ ನಡೆಸಲಾಗಿತ್ತು. ತಪಾಸಣೆ ವೇಳೆ ಸಾರ್ವಜನಿಕರ ಬಳಿ ರಾಶಿ ರಾಶಿ ಬೀಡಿ, ಬೆಂಕಿಪಟ್ಟಣ, ಸಿಗರೇಟ್ ಪಾಕೆಟ್, ಮದ್ಯದ ಪಾಕೆಟ್‍ಗಳು ದೊರೆತಿದ್ದು ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪ್ರವೇಶ ದ್ವಾರದಲ್ಲೇ ಬೀಡಿ, ಬೆಂಕಿ ಪಟ್ಟಣ, ಗುಟ್ಕಾ, ಮದ್ಯದ ಪಾಕೆಟ್ ಗಳನ್ನು ರಾಶಿ ಮಾಡಿದ್ದು, ಬೀಡಿ ಪಾಕೆಟ್ ಗಳನ್ನ ಪೊಲೀಸರ ಕಣ್ಣು ತಪ್ಪಿಸಿ ಹಲವರು ಕದ್ದು ಒಯ್ದಿದ್ದಾರೆ. ಆದ್ರೆ ಬೀಡಿ ಸಿಗರೇಟನ್ನು ಕಸಿದುಕೊಂಡ ಪೊಲೀಸರ ಕ್ರಮಕ್ಕೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದು ಕಂಡು ಬಂತು.