Tag: PUBG Lover

  • ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    – ಹಸಿರು ಸೀರೆ, ಒಡವೆ ತೊಟ್ಟು ಫುಲ್‌ ಮಿಂಚಿಂಗ್‌

    ಲಕ್ನೋ: ಪಬ್‌ಜಿ ಪ್ರಿಯಕರನಿಗಾಗಿ (PUBG Lover) ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನದ (Pakistan) ಮಹಿಳೆ ಸೀಮಾ ಹೈದರ್‌ (Seema Haider) ಇದೀಗ ಭಾರತದಲ್ಲೇ ಪತಿ ಸಚಿನ್‌ ಮೀನಾ ಜೊತೆಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಬುಧವಾರ (ಇಂದು) ಪತಿ ಸಚಿನ್ ಮೀನಾಗಾಗಿ ಮೊದಲ ಕರ್ವಾ ಚೌತ್ ಉಪವಾಸ ಆಚರಿಸಿದ್ದಾರೆ.

    ಹಿಂದೂ ಸಂಪ್ರದಾಯದಂತೆ ಹಸಿರು ಸೀರೆ, ಒಡವೆ ತೊಟ್ಟು ಕಳಶ ಪೂಜೆ ಮಾಡಿ ಉಪವಾಸ ಆಚರಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಪಬ್‌ಜೀ ಮೂಲಕವೇ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಸೀಮಾ – ಸ್ಫೋಟಕ ರಹಸ್ಯ ಬಯಲು

    ದೇಶದ ವಿವಿಧೆಡೆ ಕರ್ವ ಚೌತ್‌ (Karva Chauth) ಹಬ್ಬವನ್ನು ಮಹಿಳೆಯರು ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ. ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಆಚರಿಸುವ ಹಬ್ಬ ಇದಾಗಿದೆ. ಈ ಹಿಂದೆ ಪಬ್ಜಿಯಲ್ಲಿ ಸಚಿನ್‌ ಪರಿಚಯವಾಗಿದ್ದಾಗ, ಪಾಕಿಸ್ತಾನದಲ್ಲಿದ್ದುಕೊಂಡೇ 2 ಬಾರಿ ಕರ್ವ ಚೌತ್‌ ಆಚರಿದ್ದಳು. ಆಗ ಮೊಬೈಲ್‌ನಲ್ಲೇ ಸಚಿನ್‌ ಫೋಟೋ ನೋಡಿಕೊಂಡು ಪೂಜೆ ಕೂಡ ಮಾಡಿದ್ದಳಂತೆ. ಭಾರತಕ್ಕೆ ಬಂದ ಬಳಿಕ ತನ್ನ ಪತಿಗಾಗಿ ಇದೇ ಮೊದಲಬಾರಿಗೆ ಉಪವಾಸ ಆಚರಿಸಿದ್ದಾಳೆ ಎನ್ನಲಾಗಿದೆ. ಕರ್ವ ಚೌತ್‌ ಆಚರಣೆಗಾಗಿ ಸೀಮಾ ತಾಯಿ ಮನೆಯಿಂದ ಕೆಂಪು ಬಣ್ಣದ ಲೆಹೆಂಗಾ, ಕರ್ವಾ ಚೌತ್ ಥಾಲಿ ಹಾಗೂ ಇತರ ಮೇಕಪ್‌ ಆಭರಣಗಳು ಬಂದಿರುವುದಾಗಿ ತೋರಿಸಿದ್ದಾಳೆ.

    ಈ ನಡುವೆ ಮಾತನಾಡಿರುವ ಸೀಮಾ, ಭಾರತವು ಅತ್ಯಂತ ಉತ್ತಮ ದೇಶವಾಗಿದೆ. ಇತರ ದೇಶಗಳ ಜನರನ್ನೂ ತನ್ನವರಾಗಿಸುವ ಮೂಲಕ ಅವರಿಗೆ ಹೆಚ್ಚಿನ ಗೌರವ ನೀಡುತ್ತದೆ. ಬದುಕಲು ಅವಕಾಶ ಮಾಡಿಕೊಡುತ್ತದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಪಬ್‌ಜೀ ಪ್ರೇಮಕಥೆ ಸಿನಿಮಾದಷ್ಟೇ ರೋಚಕ: ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರ ಪ್ರದೇಶದವನು. 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ರಾಂಚಿ: ಪ್ರೀತಿಗೆ ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ (PUBG Lover) ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಈ ಬೆನ್ನಲ್ಲೇ ಬಾಂಗ್ಲಾದೇಶದ ಯುವತಿಯು ಭಾರತದ ಪ್ರೇಮಿಗಾಗಿ ಭಾರತಕ್ಕೆ ಬಂದಿದ್ದಳು. ಇದೀಗ ಪೋಲೆಂಡಿನ ಮಹಿಳೆ (Polish Woman) ಸುದ್ದಿಯಲ್ಲಿದ್ದಾಳೆ.

    ಇನ್ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾದ ಬಾಯ್‌ಫ್ರೆಂಡ್‌ಗಾಗಿ 49 ವರ್ಷದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿದ್ದಾಳೆ. ತನ್ನ ಪ್ರೇಮಿಯನ್ನು ಮದುವೆಯಾಗಿ ಭಾರತದಲ್ಲೇ ಹೊಸ ಜೀವನ ಶುರು ಮಾಡಲು ಜಾರ್ಖಂಡ್‌ನ (Jharkhand) ಹಜಾರಿಬಾಗ್‌ಗೆ ಹಾರಿ ಬಂದಿದ್ದಾಳೆ. ಇದನ್ನೂ ಓದಿ: ಮತ್ತೊಂದು ಕೇಸ್‌ – ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ ಬಾಂಗ್ಲಾದೇಶದ ಯುವತಿ!

    ಇನ್ಸ್ಟಾಗ್ರಾಮ್‌ ಪ್ರೀತಿ ಶುರುವಾದ ರೀತಿ: ಪೋಲೆಂಡಿನ ಮಹಿಳೆ ಬಾರ್ಬಾರಾ ಪೊಲಾಕ್ ಹಾಗೂ ಜಾರ್ಖಂಡ್‌ನ ಹಜಾರಿಬಾಗ್‌ನ ಶಾದಾಬ್ ಮಲಿಕ್ 2021 ರಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ‌ ಸ್ನೇಹಿತರಾಗಿದ್ದಾರೆ. ಕೆಲವು ದಿನಗಳಲ್ಲೇ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟೂ ಪ್ರೀತಿಸಲು ಶುರು ಮಾಡಿದ್ದಾರೆ. ಬಳಿಕ ಪೊಲಾಕ್‌ ತನ್ನ 6 ವರ್ಷದ ಮಗಳು ಅನನ್ಯಾಳೊಂದಿಗೆ ಭಾರತಕ್ಕೆ ಹಾರಿಬಂದಿದ್ದು, ಹಜಾರಿಬಾಗ್‌ನಲ್ಲಿ ಪ್ರಿಯಕರ ಶಾದಾಬ್ ಜೊತೆ ನೆಲೆಸಿದ್ದಾಳೆ. ಪೊಲಾಕ್‌ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಅದು 2027ರ ವರೆಗೆ ಮಾನ್ಯವಾಗಿರುತ್ತದೆ.

    ಮದುವೆಗೆ ತಯಾರಿ: ಪೊಲಾಕ್‌ ಮತ್ತು ಮಲಿಕ್‌ ಇಬ್ಬರು ಮದುವೆಯಾಗಲು ತಯಾರಿ ಶುರು ಮಾಡಿದ್ದಾರೆ. ಹಜಾರಿಬಾಗ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಬಾರ್ಬಾರಾ ಅವರ ಮಗಳು ಈಗಾಗಲೇ ಶಾದಾಬ್ ಅನ್ನು ʻಅಪ್ಪʼ ಎಂದು ಕರೆಯಲು ಶುರು ಮಾಡಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಈ ಸಂತಸವನ್ನು ಹಂಚಿಕೊಂಡಿರುವ ಪೊಲಾಕ್‌, ಶಾದಾಬ್ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಲ್ಲದೇ, ಭಾರತವನ್ನು ಸುಂದರ ದೇಶ ಎಂದು ಹೊಗಳಿದ್ದಾಳೆ. ‘ನಾನು ಹಜಾರಿಬಾಗ್‌ಗೆ ಬಂದಾಗ, ಅನೇಕ ಜನರು ನನ್ನನ್ನು ನೋಡಲು ಬಂದರು. ನಾನು ಸೆಲೆಬ್ರಿಟಿ ಎಂದು ಭಾವಿಸಿದೆ. ನನಗೆ ಸ್ವಂತ ಮನೆ, ಕಾರು ಮತ್ತು ಒಳ್ಳೆಯ ಕೆಲಸವಿದೆ. ಆದ್ರೆ ನಾನು ಶಾದಾಬ್‌ಗಾಗಿ ಭಾರತಕ್ಕೆ ಬಂದಿದ್ದೇನೆ. ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಬಾರ್ಬಾರಾ ಹೇಳಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಇಸ್ಲಾಮಾಬಾದ್‌/ರಿಯಾದ್: ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೇ ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿ (Love) ಮಾಡ್ತೀನಿ ಸೀಮಾ, ದಯವಿಟ್ಟು ಹಿಂತಿರುಗಿ ಬಂದುಬಿಡು, ನಿನಗೆ ಏನಾದ್ರೂ ಆದ್ರೆ ಯಾರು ನೋಡಿಕೊಳ್ತಾರೆ? ಮಕ್ಕಳ ಜವಾಬ್ದಾರಿ ಯಾರು ತೆಗೆದುಕೊಳ್ತಾರೆ? ವಾಪಸ್‌ ಬಂದುಬಿಡು ನಾವಿಬ್ಬರು ಹೊಸ ಜೀವನ ಶುರು ಮಾಡೋಣ… ಭಾರತಕ್ಕೆ ಓಡಿ ಬಂದ ಪಾಕ್‌ ಮಹಿಳೆ ಸೀಮಾ ಹೈದರ್‌ (Seema Haider) ಮೊದಲ ಪತಿ ಭಾವುಕ ನುಡಿಗಳಿವು.

    ಪಬ್‌ಜಿ (PUBG) ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್‌ ಮೊದಲ ಪತಿ ಗುಲಾಮ್‌ ಹೈದರ್‌ ಸೀಮಾ ಹಿಂತಿರುಗುವಂತೆ ಮನವಿ ಮಾಡಿದ್ದಾನೆ. ಭಾರತ ಸರ್ಕಾರಕ್ಕೂ (Indian Government) ತನ್ನ ಪತ್ನಿಯನ್ನು ಕಳುಹಿಸಿಕೊಡುವಂತೆ ಕೋರಿ ಪತ್ರ ಬರೆದಿದ್ದಾನೆ. ಇದನ್ನೂ ಓದಿ: ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

    ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ಪತಿ ಗುಲಾಮ್‌ ಹೈದರ್‌ ಪಾಕಿಸ್ತಾನಿ ಯುಟ್ಯೂಬರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೀಗೆ ಮಾತನಾಡಿದ್ದಾನೆ. ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿಸುತ್ತೇನೆ ಮುಂದೆಯೂ ಪ್ರೀತಿಸುತ್ತೇನೆ, ಬಂದುಬಿಡು. ನಿನ್ನನ್ನ, ಮಕ್ಕಳನ್ನ ಕಳೆದುಕೊಳ್ಳಲು ಇಷ್ಟವಿಲ್ಲ. ನಾವು ಮತ್ತೆ ಹೊಸಜೀವನ ಶುರು ಮಾಡೋಣ ಬೇಗನೆ ಬಾ. ನಿನಗೆ ಪಾಕಿಸ್ತಾನ ಸುರಕ್ಷಿತವಲ್ಲ ಅನ್ನಿಸಿದ್ರೆ ಮಕ್ಕಳನ್ನು ಕರೆದುಕೊಂಡು ಸೌದಿಗೆ ಬಂದುಬಿಡು. ನಾವು ಇಲ್ಲಿಯೇ ನೆಲಸೋಣ ಎಂದು ಗೋಳಾಡಿದ್ದಾನೆ.

    ಈ ಹಿಂದೆ ನಾನು ಸೀಮಾಳಿಗೆ ತಿಂಗಳಿಗೆ 40-50 ಸಾವಿರ ರೂ. ಕಳುಹಿಸಿಕೊಡ್ತಿದೆ. ಈಗ 80 ರಿಂದ 90 ಸಾವಿರ ಕಳುಹಿಸ್ತೇನೆ ಇಬ್ಬರು ಚೆನ್ನಾಗಿರಬಹುದು. ಅಲ್ಲದೇ ಆಕೆಗೋಸ್ಕರ ಮನೆ ಖರೀದಿಗೆ 17 ಲಕ್ಷ ರೂ. ಇಟ್ಟಿದ್ದೇನೆ ಎಂದಿದ್ದಾನೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    ʻ’ಹಿಂದುಸ್ತಾನ್ ಜಿಂದಾಬಾದ್ʼ ಘೋಷಣೆ:
    ಸೀಮಾ ಮಕ್ಕಳು ಕೆಲ ಸಮಯಗಳ ಹಿಂದೆ ಹಿಂದೂಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗುತ್ತಿದ್ದ ವೀಡಿಯೋ ಕಂಡುಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಗುಲಾಮ್‌, ಅವರು ಮಕ್ಕಳು ಈಗ ನೀವು ಕೇಳಿದ್ರೆ ಪಾಕಿಸ್ತಾನ್‌ ಜಿಂದಾಬಾದ್‌ ಅಂತಲೂ ಹೇಳ್ತಾರೆ ಎಂದಿದ್ದಲ್ಲದೇ, ಸೀಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾ ಅವಳ ಮಾನಹಾನಿ ಮಾಡ್ತಿದ್ದಾರೆ. ಅವಳ ಬಗ್ಗೆ ನನಗೆ ಗೊತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಕೋರಿದ್ದಾರೆ.

    ಪಬ್‌ಜೀ ಪ್ರೇಮಕಥೆ (PUBG Love Story) ಶುರುವಾಗಿದ್ದೇ ಥ್ರಿಲ್ಲಿಂಗ್:
    ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್

    ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್

    ಇಸ್ಲಾಮಾಬಾದ್: ಪಬ್‌ಜಿ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್ ಇದೀಗ ತಮ್ಮ ಕುಟುಂಬ ಹಾಗೂ ನೆರೆಹೊರೆಯವರಿಂದ ಬಹಿಷ್ಕಾರಕ್ಕೊಳಗಾಗಿದ್ದಾಳೆ. ಸೀಮಾ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರು ಅವಳು ಪಾಕಿಸ್ತಾನಕ್ಕೆ (Pakistan) ವಾಪಸ್ ಬರೋದು ಬೇಡ ಎಂದು ಹೇಳಿದ್ದಾರೆ.

    ನಾಲ್ಕು ಮಕ್ಕಳ ಅವಿದ್ಯಾವಂತ ತಾಯಿ ಸೀಮಾ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಹಾಗೂ ಸಂಪ್ರದಾಯವಾದಿ ಸಮಾಜ ಎಲ್ಲವನ್ನ ತ್ಯಜಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಈಗ ಅವಳು ಮುಸಲ್ಮಾನಳಲ್ಲ, ಬೇಕಿದ್ದರೆ ಅವಳು ತನ್ನ ನಾಲ್ಕು ಮಕ್ಕಳನ್ನ ಕಳುಹಿಸಬಹುದು. ಆದ್ರೆ ಸೀಮಾ ಮಾತ್ರ ಬರೋದು ಬೇಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

    ಗುಲಿಸ್ತಾನ್-ಎ-ಜೌಹರ್ ನಗರದ ಬಿತ್ತೈಯಾಬಾದ್‌ನಲ್ಲಿದ್ದ ಸೀಮಾ ಕಳೆದ ಮೂರು ವರ್ಷಗಳಿಂದ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಅವಳ ಸೋದರ ಮಾವ ನೂರ್ ಅಹ್ಮದ್ ಸ್ವಲ್ಪ ದೂರದಲ್ಲಿ ಮನೆ ಮಾಡಿಕೊಂಡಿದ್ದ. ಸೀಮಾ ಇದ್ದ ಜಾಗದಲ್ಲಿ ಹೆಚ್ಚು ಸೌಲಭ್ಯಗಳು ಇರಲಿಲ್ಲ. ಅಲ್ಲಿಯ ಸುತ್ತ ಮುತ್ತಲಿನ ವಾತಾವರಣವೂ ಅನೈರ್ಮಲ್ಯದಿಂದ ಕೂಡಿತ್ತು. ಇದೆಲ್ಲವನ್ನ ನೋಡಿದ್ದ ಪತಿ ಗುಲಾಮ್ ಹೈದರ್ ಆಕೆಗಾಗಿ ಸ್ವಂತ ಮನೆ ಮಾಡಲು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ 1.2 ಮಿಲಿಯನ್‌ಗೆ (12 ಲಕ್ಷ ಪಾಕಿಸ್ತಾನ ರೂಪಾಯಿ) ಮನೆಯೊಂದನ್ನು ಖರೀದಿಸಿದ್ದ. ಅಷ್ಟರಲ್ಲೇ ಸೀಮಾ ಭಾರತಕ್ಕೆ ಪಲಾಯನ ಮಾಡಿದ್ದಾಳೆ ಎಂದು ನೆರೆಹೊರೆಯವರಿಂದ ತಿಳಿದುಬಂದಿದೆ.

    ಸೀಮಾ ಒಂದು ದಿನ ಟ್ಯಾಕ್ಸಿಗೆ ಕರೆ ಮಾಡಿ ತನ್ನ ಮಕ್ಕಳೊಂದಿಗೆ ಲಗೇಜ್ ತುಂಬಿಕೊಂಡು ಹೊರಡುತ್ತಿದ್ದುದನ್ನ ನೋಡಿದೆವು. ಆಕೆ ಜಾಕೋಬಾಬಾದ್‌ನಲ್ಲಿರುವ ತನ್ನ ಹಳ್ಳಿಗೆ ಹೋಗುತ್ತಿದ್ದಾಳೆ ಅಂತಾ ನಾವು ಅಂದುಕೊಂಡಿದ್ದೆವು. ಆದ್ರೆ ಒಂದು ತಿಂಗಳ ನಂತರ ಆಕೆ ಭಾರತಕ್ಕೆ ಪಲಾಯನ ಮಾಡಿರುವುದು ಟಿವಿ ಮಾಧ್ಯಮಗಳಿಂದ ತಿಳಿದುಬಂದಿತು. ಅದನ್ನು ಕಂಡು ನಮ್ಮೆಲ್ಲರಿಗೂ ಆಘಾತವಾಯಿತು ಎಂದು ನೆರೆಯ ಜಮಾಲ್ ಜಕ್ರಾನಿ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    ಸೀಮಾ ಮತ್ತು ಗುಲಾಮ್ ಹೈದರ್ ಸಹ ಕಳೆದ 10 ವರ್ಷದ ಹಿಂದೆ ಕರಾಟಿಗೆ ಓಡಿ ಬಂದು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು.

    ಪಬ್‌ಜೀ ಪ್ರೇಮಕಥೆ (PUBG Love Story) ಶುರುವಾಗಿದ್ದೇ ಥ್ರಿಲ್ಲಿಂಗ್: ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]