Tag: PubG Game

  • ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

    ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

    ಕಲಬುರಗಿ: ಪಬ್‌ಜಿ (PUBG) ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಪ್ರವೀಣ್ ಪಾಟೀಲ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಕಲಬುರಗಿ ನಗರದ ದೇವಿ ನಗರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರವೀಣ್ ನೇಣಿಗೆ ಶರಣಾಗಿದ್ದಾನೆ. ಈತ ಕಲಬುರಗಿ ನಗರದ ಖಾಸಗಿ ಕಾಲೇಜ್‌ನಲ್ಲಿ ಬಿಇ (BE) ವ್ಯಾಸಂಗ ಮಾಡುತ್ತಿದ್ದು, ಬಿಇ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್ ಕೋರ್ಸ್ ಮಾಡಿದ್ದ. ಇದನ್ನೂ ಓದಿ: ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಅರೆಸ್ಟ್

    ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಪ್ರವೀಣ್ ಪಬ್‌ಜಿ ಗೇಮ್‌ನಿಂದ ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್‌ಪೆಕ್ಟರ್ ಅನುಮಾನಾಸ್ಪದ ಸಾವು

    ಈ ಹಿಂದೆ ಉತ್ತರಕನ್ನಡದ (Uttara Kannada) ಯುವಕನೋರ್ವ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಇದೇ ರೀತಿಯಾಗಿ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡ ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಇದನ್ನೂ ಓದಿ: ಹಿಟ್ ಆ್ಯಂಡ್ ರನ್ ಕೇಸ್‌ಗೆ ತಂದೆ, ಮಗ ಬಲಿ – ಮತ್ತೋರ್ವನ ಸ್ಥಿತಿ ಗಂಭೀರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್‍ಜಿ ಬ್ಯಾನ್‍ನಿಂದ ಬೇಸತ್ತು 14ರ ಬಾಲಕ ಆತ್ಮಹತ್ಯೆ

    ಪಬ್‍ಜಿ ಬ್ಯಾನ್‍ನಿಂದ ಬೇಸತ್ತು 14ರ ಬಾಲಕ ಆತ್ಮಹತ್ಯೆ

    – ಮನೆ ಬದಲಿಸಿದರೂ ಬಾಲಕನ ಮನಸ್ಸು ಬದಲಾಗಲಿಲ್ಲ

    ಚೆನ್ನೈ: ಪಬ್‍ಜಿ ಗೇಮ್ ನಿಷೇಧದಿಂದ ಬೇಸತ್ತು 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಈರೋಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪುಂಜೈಪುಲಿಯಂಪಟ್ಟಿಯ ಕಲ್ಲಿಪಾಳಯಂನ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕನನ್ನು 14 ವರ್ಷದ ಕೆ.ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಕೊಯಂಬತ್ತೂರು ಮೂಲದವನಾಗಿದ್ದು, ಪಬ್‍ಜಿ ಗೇಮ್‍ಗೆ ದಾಸನಾಗಿದ್ದ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್ ಆಧರಿತ ಗೇಮ್‍ನನ್ನು ನಿಷೇಧಿಸಿದೆ.

    ಅರುಣ್ ತಂದೆ ಕಂಡವೇಲ್ ಈ ಕುರಿತು ಮಾಹಿತಿ ನೀಡಿದ್ದು, ಅರುಣ್ ತನ್ನ ಮೊಬೈಲ್‍ನಲ್ಲಿ ಪಬ್‍ಜಿ ಆಡುತ್ತಿದ್ದ. ಆ್ಯಪ್ ನಿಷೇಧವಾದ ಬಳಿಕ ಆತ ತುಂಬಾ ಬೇಸರಗೊಂಡಿದ್ದ. ಅಲ್ಲದೆ ಬ್ಯಾನ್‍ನಿಂದ ಆಘಾತಕ್ಕೊಳಗಾಗಿ ಸೂಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲ ದಿನ ಹೊಸ ಪ್ರದೇಶಕ್ಕೆ ತೆರಳಿ ಬಾಲಕ ಸರಿಯಾಗಬಹುದು ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಅರುಣ್ ಹಾಗೂ ಆತನ ತಾಯಿ ರಾಮಪ್ರಭಾ ಕಲ್ಲಿಪಾಳಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

    ಸೋಮವಾರ ಸಂಜೆ ರಾಮಪ್ರಭಾ ದಿನಸಿ ತರಲು ಪುಂಜೈಪುಲಿಯಂಪಟ್ಟಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಅರುಣ್ ಒಬ್ಬನೆ ಇದ್ದ. ರಾತ್ರಿ 9ರ ವೇಳೆ ರಾಮಪ್ರಭಾ ಮನೆಗೆ ಮರಳಿದ್ದು, ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಅಕ್ಕ ಪಕ್ಕದವರು ಬಾಲಕನ ಶವವನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

    ಪಬ್‍ಜಿ ಆಟವನ್ನು ದಕ್ಷಿಣ ಕೊರಿಯಾದ ಕಂಪನಿ ಅಭಿವೃದ್ಧಿ ಪಡಿಸಿದ್ದರೂ ಇದರ ಮೊಬೈಲ್ ಆವೃತ್ತಿಯನ್ನು ಚೀನಾ ಮೂಲದ ಟೆನ್ಸೆಂಟ್ ಹೋಲ್ಡಿಂಗ್ಸ್ ಕಂಪನಿ ಖರೀದಿಸಿತ್ತು. ಪಬ್‍ಜಿ ಆಟದ ದೊಡ್ಡ ಮಾರುಕಟ್ಟೆಯಾಗಿದ್ದ ಭಾರತದಲ್ಲಿ 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ ಮತ್ತು ಜನರ ಖಾಸಗಿತನವನ್ನು ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರ 117 ಚೀನಿ ಅಪ್ಲಿಕೇಶನ್‍ಗಳನ್ನು ನಿಷೇಧ ಮಾಡಿತ್ತು.

    ಮಕ್ಕಳ ಮೆದುಳಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯುವ ಜನತೆ ಹಾಳಾಗುತ್ತಿದ್ದಾರೆ ಹೀಗಾಗಿ ಪಬ್‍ಜಿ ನಿಷೇಧಿಸಬೇಕೆಂದು ಜನ ಆಗ್ರಹಿಸಿದ್ದರು. ಗಲ್ವಾನ್ ಘರ್ಷಣೆಯ ಬಳಿಕ ಟಿಕ್‍ಟಾಕ್ ಸೇರಿದಂತೆ 59 ಅಪ್ಲಿಕೇಶನ್‍ಗಳನ್ನು ಭಾರತ ನಿಷೇಧಿಸಿತ್ತು. ಇದಾದ ಬಳಿಕ ಮತ್ತೆ 47 ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು

  • ಪಬ್‍ಜಿ ಆಡಲು ನೆಟ್ ಪ್ಯಾಕ್‍ಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕತ್ತರಿಸಿ ಕೊಂದ ಮಗ

    ಪಬ್‍ಜಿ ಆಡಲು ನೆಟ್ ಪ್ಯಾಕ್‍ಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕತ್ತರಿಸಿ ಕೊಂದ ಮಗ

    ಬೆಳಗಾವಿ: ಪಬ್‍ಜಿ ಆಡಲು ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಳ್ಳಲು ಹಣ ಕೊಡದಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪಾ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಶಂಕ್ರಪ್ಪಾ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ಪಬ್‍ಜಿ ಆಟಕ್ಕೆ ಹೆಚ್ಚು ಅಡಿಕ್ಟ್ ಆಗಿದ್ದ ಕಾರಣಕ್ಕೆ ತಂದೆ ಹಲವು ಬಾರಿ ಆತನಿಗೆ ಆಡದಂತೆ ಬುದ್ಧಿ ಹೇಳಿದ್ದರು. ಆದರೆ ಮಗ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಪಬ್‍ಜಿ ಆಡಿಕೊಂಡು ಅದರಲ್ಲೇ ಮುಳುಗಿದ್ದನು.

    ಭಾನುವಾರ ರಘುವೀರ್ ನ ಮೊಬೈಲ್‍ನಲ್ಲಿ ಇಂಟರ್‌ನೆಟ್ ಪ್ಯಾಕ್ ಖಾಲಿಯಾಗಿತ್ತು. ಆದ್ದರಿಂದ ಪ್ಯಾಕ್ ಹಾಕಿಕೊಳ್ಳಲು ಆತ ತಂದೆ ಬಳಿ ಹಣ ಕೇಳಿದ್ದನು. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಕ್ಕೆ ಮಗ ಸಿಟ್ಟಿಗೆದ್ದಿದ್ದನು. ಇದೇ ಕೋಪಕ್ಕೆ ರಾತ್ರಿ ತಂದೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ವಿಕೃತವಾಗಿ ಮಗ ಕೊಲೆ ಮಾಡಿದ್ದಾನೆ.

    ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.