Tag: Pub

  • ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ

    ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ

    ಬೆಂಗಳೂರು: ಪಬ್‌ವೊಂದರಲ್ಲಿ (Pub) ಕನ್ನಡ ಹಾಡು (Kannada Song) ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ (Bengaluru) ಆರ್‌ಆರ್ ನಗರದ (RR Nagar) ಐಡಿಯಲ್ ಹೋಮ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಐಡಿಯಲ್ ಹೋಮ್ ಬಳಿಯ ಪಬ್‌ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದ್ದು, ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತರು ರಾತ್ರಿ 10:45ರ ಸುಮಾರಿಗೆ ಪಬ್‌ಗೆ ಬಂದಿದ್ದರು. ಈ ವೇಳೆ ಪಬ್‌ನಲ್ಲಿ ಕನ್ನಡ ಹಾಡು ಹಾಕಲಾಗಿತ್ತು. ಈ ವೇಳೆ ಕನ್ನಡ ಹಾಡು ಹಾಕಿದ್ದಕ್ಕೆ ಜಗಳ ತೆಗೆದಿದ್ದಾರೆ. ಇದನ್ನೂ ಓದಿ: ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಯುವಕರು – ನಾಲ್ವರು ವಶಕ್ಕೆ

    ಪಬ್ ಮಾಲೀಕ ರವಿಕಾಂತ್ ನೀಡಿದ ದೂರಿನನ್ವಯ ಎಫ್‌ಐಆರ್ (FIR) ದಾಖಲು ಮಾಡಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತನ ವಿರುದ್ಧ ಪಬ್ ಮ್ಯಾನೇಜರ್ ದೂರು ನೀಡಿದ್ದು, ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಗುಡ್ಡ ಕುಸಿದು ಮೂವರು ಕೂಲಿ ಕಾರ್ಮಿಕರ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    ಬೆಂಗಳೂರು: ಕೋರಮಂಗಲದ (Koramangala) ಕೆಫೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿದ ಬೆನ್ನಲ್ಲೇ ಬಿಬಿಎಂಪಿ (BBMP) ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಲ್ಲಿಯವರೆಗೆ ನಗರದ 54 ಪಬ್‌ಗಳಿಗೆ (Pub) ಬೀಗ ಹಾಕಿದ್ದಾರೆ.

    ಬಿಬಿಎಂಪಿ ಅಧಿಕಾರಿಗಳು ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 6 ದಿನಗಳಿಂದ ಒಟ್ಟು 1,058 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ 492 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

    ಬುಧವಾರ ಒಂದೇ ದಿನ 234 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದು, ಅವುಗಳ ಪೈಕಿ 122 ಕ್ಕೆ ನೋಟಿಸ್ ನೀಡಿದೆ. 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ

    ಯಾವತ್ತು ಎಷ್ಟು ರೆಸ್ಟೋರೆಂಟ್‌ಗೆ ನೋಟಿಸ್?
    ಶುಕ್ರವಾರ (ಅ.20) – 12, ಶನಿವಾರ (ಅ.21) – 21, ಭಾನುವಾರ (ಅ.22) – 10, ಸೋಮವಾರ (ಅ.23) – 5, ಬುಧವಾರ (ಅ.25) – 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗೆ ನೋಟಿಸ್ ನೀಡಿ ಬೀಗ ಜಡಿಯಲಾಗಿದೆ. ಇದನ್ನೂ ಓದಿ: `ಕೈ ಕಮಲ’ ಕ್ರೆಡಿಟ್ ಗಲಾಟೆ – ಬಿಜೆಪಿ ಶಾಸಕ ಚಾಲನೆ ನೀಡಿದ್ದ ಕಾಮಗಾರಿಗೆ ಮತ್ತೆ ಭೂಮಿ ಪೂಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತರಿಗೆ ಮದ್ಯ ಸಪ್ಲೈ – ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ

    ಅಪ್ರಾಪ್ತರಿಗೆ ಮದ್ಯ ಸಪ್ಲೈ – ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ (Alcohol) ಸಪ್ಲೈ ಮಾಡುತ್ತಿದ್ದ ಆರೋಪದ ಹಿನ್ನೆಲೆ ಬೆಂಗಳೂರಿನ (Benagluru) ಪಬ್, ಬಾರ್, ಹುಕ್ಕಾಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು (CCB Police) ದೊಡ್ಡ ಮಟ್ಟದ ರೇಡ್ ನಡೆಸಿ ಕೇಸ್ ಜಡಿದಿದ್ದಾರೆ. ಎಂಎಲ್‌ಎ ಸಂಬಂಧಿಕರು ಎಂದು ಹೇಳಿಕೊಂಡಿರುವ ಅಪ್ರಾಪ್ತರು ರೇಡ್ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆದಿದೆ.

    ಶುಕ್ರವಾರ ರಾತ್ರಿ ಬೆಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ 510 ಕ್ಕೂ ಹೆಚ್ಚು ಪಬ್, ಬಾರ್, ಹುಕ್ಕಾಬಾರ್‌ಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಅಬಕಾರಿ ನಿಯಮ ಸೇರಿದಂತೆ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದ ಆರೋಪದ ಮೇಲೆ ಕೆಲ ಪಬ್‌ಗಳ ಮೇಲೆ ಕೇಸ್ ಜಡಿಯಲಾಗಿದೆ.

    ಇತ್ತೀಚೆಗೆ ಶಾಲಾ ಮುಖ್ಯಸ್ಥರು ಪೊಲೀಸ್ ಆಯುಕ್ತರಿಗೆ ಮನವಿಯೊಂದನ್ನು ಕೊಟ್ಟಿದ್ದರು. ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡಲಾಗುತ್ತಿದೆ. ಇದನ್ನು ಸರಿಪಡಿಸುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಕಮಿಷನರ್ ಅವರಿಂದ ನಿರ್ದೇಶನ ಪಡೆದು ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿ, ತಪಾಸಣೆ ನಡೆಸಿ ನಿಯಮ ಉಲ್ಲಂಘನೆ ಆಗುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಆರಂಭಿಕ ಹಂತದಲ್ಲಿದೆ: ಹೆಚ್.ಡಿ.ಕುಮಾರಸ್ವಾಮಿ

    ಅನಧಿಕೃತವಾಗಿ ಪಬ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ಕೊಡಲಾಗಿದೆ. ಪ್ರತಿ ಪಬ್‌ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ರೂಂ ವ್ಯವಸ್ಥೆ ಇರಬೇಕು. ಇದಲ್ಲದೆ ಅಬಕಾರಿ ನಿಯಮಗಳನ್ನು ಸಹ ಉಲ್ಲಂಘನೆ ಮಾಡಿದ್ದಾರೆ. ಅಪ್ರಾಪ್ತರಿಗೆ ಮದ್ಯ ನೀಡುತ್ತಿರೋದು ಕಂಡುಬಂದಿದ್ದು, ಜುವೆನಿಲ್ ಜಸ್ಟಿಸ್ ಆಕ್ಟ್ ಹಾಗೂ ಕೋಪ್ಟಾ ಆಕ್ಟ್ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

    ಬಾಣಸವಾಡಿಯ ಪಬ್ ಒಂದರಲ್ಲಿ ಕಿರುತೆರೆ ನಟಿಯರು ಎಂದು ಹೇಳಿಕೊಂಡ ಅಪ್ರಾಪ್ತೆಯರು ಮದ್ಯ ಸೇವನೆ ವೇಳೆ ಸಿಸಿಬಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ನಾವು ಮಾಜಿ ಸಚಿವ, ಹಾಲಿ ಶಾಸಕರ ಸಂಬಂಧಿಕರು ಅಂತಾ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಜಿ20 ಅತಿಥಿಗಳಿಗೆ ಭಾರತದ ವಾಸ್ತವತೆ ಮರೆಮಾಡುವ ಅಗತ್ಯವಿಲ್ಲ: ರಾಹುಲ್ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲಿಕಾನ್ ಸಿಟಿ ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ; ಗೃಹಸಚಿವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ

    ಸಿಲಿಕಾನ್ ಸಿಟಿ ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ; ಗೃಹಸಚಿವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ದುಶ್ಚಟಗಳಿಗೆ ಕಡಿವಾಣ ಹಾಕಿ ಎಂದು ಖಾಸಗಿ ಶಾಲೆಗಳ ಒಕ್ಕೂಟ (Union of Private Schools) ಗೃಹಸಚಿವರಿಗೆ (Home Minister) ಪತ್ರ ಬರೆದಿದೆ.

    ನಗರದಲ್ಲಿ ವಿದ್ಯಾರ್ಥಿಗಳು (Students) ಶಾಲಾ-ಕಾಲೇಜಿಗೆ ಚಕ್ಕರ್ ಹಾಕಿ ಪಬ್ (Pub) , ಬಾರ್ ಹಾಗೂ ಹುಕ್ಕಾಬಾರ್‌ಗಳಿಗೆ ಹಾಜರಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಅಪ್ರಾಪ್ತರಿಗೆ (Minors) ಪ್ರವೇಶ ಕೊಡುವ ಪಬ್, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಮ್ಸ್ ಸಂಘಟನೆಯಿಂದ ಗೃಹಸಚಿವರಿಗೆ ಪತ್ರ (Letter) ಬರೆಯಲಾಗಿದೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

    ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಬ್, ರೆಸ್ಟ್ರೋ ಬಾರ್, ಹುಕ್ಕಾ ಬಾರ್‌ಗಳು ಮದ್ಯಪಾನ, ಧೂಮಪಾನ ಸೇವಿಸುವ ತಾಣಗಳಾಗಿವೆ ಎಂದು ಕೆಲ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಪೋಷಕರಿಂದ ಕ್ಯಾಮ್ಸ್‌ಗೆ ನಿರಂತರ ದೂರು ಬರುತ್ತಿತ್ತು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ಇನ್ನೂ ಬಚ್ಚ – ಮುತಾಲಿಕ್ ಕಿಡಿ

    ಈ ಹಿನ್ನೆಲೆ ಖಾಸಗಿ ಶಾಲೆಗಳ ಒಕ್ಕೂಟ ಗೃಹಸಚಿವರಿಗೆ ಪತ್ರ ಬರೆದಿದ್ದು, ಅಪ್ರಾಪ್ತ ವಯಸ್ಸಿನವರಿಗೆ ಮದ್ಯಪಾನ, ಧೂಮಪಾನ ಮಾರಾಟ ಮಾಡುವುದು ನಿಷೇಧ. ಹೀಗಿದ್ದರೂ ನಗರದ ಪಬ್, ಬಾರ್‌ಗಳಿಗೆ ಮಕ್ಕಳಿಗೆ ಎಂಟ್ರಿ ಸಿಗುತ್ತಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಬೆಂಗಳೂರು: ಬ್ರಿಗೇಡ್ ರೋಡ್‍ನ (Brigade road) ಪಬ್ (Pub) ಒಂದರಲ್ಲಿ ಲೈಟ್ ನೈಟ್ ಪಾರ್ಟಿ (Light Night Party) ಮಾಡುತ್ತಿದ್ದವರ ಮೇಲೆ ಕರ್ನಾಟಕ ಕಾರ್ಮಿಕರ ಪರಿಷತ್ ಕಾರ್ಯಕರ್ತರು ತಡರಾತ್ರಿ ದಾಳಿ ಮಾಡಿದ ಘಟನೆ ನಡೆದಿದೆ.

    ನಗರದಲ್ಲಿ ಹೆಚ್ಚುತ್ತಿರುವ ಪಾಶ್ಚಿಮಾತ್ಯ ಸಂಸ್ಕøತಿ ವಿರೋಧಿಸಿ ಡೋಲು ಬಡಿದುಕೊಂಡು 15 ಜನರ ಗುಂಪು ಪಬ್ ಪ್ರವೇಶಿಸಲು ಮುಂದಾಗಿದೆ. ಸಂಘಟನೆಯ ಕಾರ್ಯಕರ್ತರನ್ನು ಪಬ್ ಬೌನ್ಸರ್‍ಗಳು ಬಾಗಿಲಿನಲ್ಲೇ ತಡೆದಿದ್ದಾರೆ. ಬೌನ್ಸರ್‍ಗಳು ಹಾಗೂ ಗುಂಪಿನ ನಡುವೆ ಮಾತಿನ ಚಕಮುಕಿ ನಡೆದಿದೆ. ನಂತರ ಪಬ್‍ನ ಎದುರು ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

    ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕನಗರ (Ashoka Nagar) ಪೊಲೀಸರು (Police) ಭೇಟಿ ನೀಡಿ ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದವರನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್

  • ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್

    ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್

    ಬೆಳಗಾವಿ: ಬಾರ್ ಹಾಗೂ ಪಬ್‌ಗಳಲ್ಲಿ (Bar And Pub) ಕುಳಿತು ಡ್ರಿಂಕ್ಸ್ (Drinks) ಮಾಡಲು ಮಾರುಕಟ್ಟೆಯಲ್ಲಿ ಈಗಾಗಲೇ ವಿಶೇಷ ಮಾಸ್ಕ್‌ಗಳನ್ನು (Speical Mask) ಬಿಡುಗಡೆ ಮಾಡಲಾಗಿದೆ. ಮಾಲೀಕರು ಅಥವಾ ನಿರ್ವಾಹಕರು ಆ ಮಾಸ್ಕ್‌ಗಳನ್ನು ಪಡೆದು ಬರುವ ಗ್ರಾಹಕರಿಗೆ ನೀಡಬೇಕು. ಇದರಿಂದ ಅವರು ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಚಿವ ಆರ್.ಅಶೋಕ್ (R Ashoka) ತಿಳಿಸಿದ್ದಾರೆ.

    ನಗರದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರ ವಿರೋಧದ ಕುರಿತು ಮಾತನಾಡಿದ ಸಚಿವರು, ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಬರುವ ಗ್ರಾಹಕರಿಗೆ ಆ ಮಾಸ್ಕ್ಗಳನ್ನು ನೀಡಬೇಕು. ಇದರಿಂದ ಯಾರಿಗೂ ತೊಂದರೆಯಾಗೋದಿಲ್ಲ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 74 ದಿನದ ಸಿಜೆಐ ಅವಧಿಯಲ್ಲಿ ಯುಯು ಲಲಿತ್‌ಗಿದ್ರು 40+ ಸಿಬ್ಬಂದಿ

    ಜನರ ಪ್ರಾಣ ಉಳಿದರೆ ಎಲ್ಲಾ ಸಿಗುತ್ತದೆ. ಜನರ ಪ್ರಾಣಕ್ಕೇ ಕಂಟಕ ಬಂದ್ರೆ ಏನು ಸಿಗುತ್ತದೆ? ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕು ಅಂತಾ ಜನರ ಪ್ರಾಣ ತೆಗೆಯೋದು ಒಳ್ಳೆಯದಲ್ಲ. ನಾನು ಅವರಲ್ಲಿ ವಿನಂತಿ ಮಾಡ್ತೀನಿ, ದಯಮಾಡಿ ಸಹಕಾರ ನೀಡಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ವಿದೇಶಿಯರಿಗೆ ಟಫ್ ರೂಲ್ಸ್ – ಫೈಜರ್ ಲಸಿಕೆ ನೀಡಲು ನಿರ್ಧಾರ

    ಕೋವಿಡ್ (Covid 19) ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿಯ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕೋವಿಡ್ ಯೂನಿಟ್ಸ್, ಆಕ್ಸಿಜನ್ ಪ್ಲಾಂಟ್, ಐಸಿಯು (ICU) ಘಟಕ ಸೇರಿದಂತೆ ಎಲ್ಲ ಸೌಲಭ್ಯಗಳ ಪರಿಶೀಲನೆ ನಡೆಸಲಾಗಿದೆ. ಅಂತೆಯೇ ರಾಜ್ಯದ ಎಲ್ಲೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕು. ಎಲ್ಲಿಯೂ ಸಹ ಆಕ್ಸಿಜನ್, ಅಂಬುಲೆನ್ಸ್ ಹಾಗೂ ಔಷಧಗಳ ಕೊರತೆ ಆಗಬಾರದು ಎಂದು ಸಲಹೆ ನೀಡಿದ್ದಾರೆ.

    ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾತನಾಡಿ, ಏನೋ ಮಾಡಲು ಹೋಗಿ, ಇನ್ನೇನೋ ಆಗೋದು ಬೇಡ. ಎಲ್ಲರೂ ಜಾಗ್ರತೆಯಿಂದ ಇದ್ದು, ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಬೆಂಗಳೂರು: ನ್ಯೂ ಇಯರ್ ವೆಲ್‌ಕಮ್‌ಗೆ (New Year Celebration) ಬೆಂಗಳೂರು ಪೊಲೀಸ್ (Bengaluru Police) ಸರ್ಪಗಾವಲಿನಲ್ಲಿ ಇರಲಿದೆ. ಈಗಾಗಲೇ ತಯಾರಿ ಶುರುವಾಗಿದ್ದು, ಕ್ಲಬ್ -ಪಬ್‌ಗಳೂ (Club, Pub) ಸಹ ತಯಾರಿ ನಡೆಸಿವೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸ್ಪೆಷಲ್ ಪಿಂಕ್‌ಸ್ಕ್ವಾಡ್‌ (Police Pink Squad) ಫೀಲ್ಡಿಗಿಳಿದಿದೆ.

    ಮಹಿಳಾ ಪೊಲೀಸರನ್ನು (Women Police) ವಿವಿಧ ತಂಡಗಳಾಗಿ ಮಾಡಿ ಫೀಲ್ಡ್‌ಗೆ ಇಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆ ಮೂಲಕ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಸಿಸಿಟಿವಿ, 50 ಬಾಡಿ ಕ್ಯಾಮೆರಾ (BodyCamera) ಹಾಕಲು ತೀರ್ಮಾನಿಸಲಾಗಿದೆ. ಕ್ಲಬ್ ಮತ್ತು ಪಬ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಕ್ಲಬ್‌ನವರೇ ಲೇಡಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಲಬ್ ಮತ್ತು ಪಬ್, ಹೋಟೆಲ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಲಬ್ ನವರೇ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಯಾವ ಕ್ಲಬ್ ಮತ್ತು ಪಬ್‌ನಲ್ಲಿ ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಹೋಟೆಲ್ ಮತ್ತು ಪಬ್ ಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ರೆ ಕ್ಲಬ್ ನವರೇ ಹೊಣೆಯಾಗ್ತಾರೆ. ಪಾರ್ಟಿ ವೇಳೆ ಡ್ರಗ್ಸ್ ಬಳಕೆ ಮಾಡಿರೋದು ಗೊತ್ತಾದರೆ ಕಠಿಣ ಕ್ರಮದ ಜೊತೆಗೆ ಲೈಸೆನ್ಸ್ (ಪರವಾನಗಿ) ರದ್ದು ಮಾಡಲಾಗುತ್ತದೆ. ಇನ್ನೂ 2-3 ದಿನಗಳಲ್ಲಿ ಈ ಸಂಬಂಧ ಕಂಪ್ಲೀಟ್ ಡಿಟೇಲ್ಸ್ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಯುವತಿ ವಿಚಾರಕ್ಕೆ ಗಲಾಟೆ – ರೌಡಿ ಕಾರ್ಪೊರೇಟರ್‌ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಯುವತಿ ವಿಚಾರಕ್ಕೆ ಗಲಾಟೆ – ರೌಡಿ ಕಾರ್ಪೊರೇಟರ್‌ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಹುಬ್ಬಳ್ಳಿ: ನಗರದಲ್ಲಿ (Hubballi) ರೌಡಿ ಕಾರ್ಪೊರೇಟರ್ ಮತ್ತೆ ಬಾಲಬಿಚ್ಚಿದ್ದು, ರಾತ್ರಿ ವೇಳೆ ಪಬ್‍ನಲ್ಲಿ ಗಲಾಟೆ ಮಾಡಿ ಅಂದರ್ ಆಗಿದ್ದಾನೆ.

    ರಾತ್ರಿ ವೇಳೆ ಪಬ್‍ವೊಂದರಲ್ಲಿ ಇಬ್ಬರ ಮೇಲೆ ಕಾರ್ಪೊರೇಟರ್ ಚೇತನ್ ಆ್ಯಂಡ್ ಗ್ಯಾಂಗ್ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪದಡಿ ಪಾಲಿಕೆ ಸದಸ್ಯ ಮತ್ತು ಆತನ ಸ್ನೇಹಿತರನ್ನು ಗೋಕುಲ್ ಠಾಣೆಯ (Gokul Police Staton)) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧಿಸದಿದ್ರೆ ಹೆಣ್ಮಕ್ಕಳು ಧರಣಿಗೆ ಕೂರ್ತಿವಿ ಅಂದಿದ್ದಾರೆ: ಸಿದ್ದರಾಮಯ್ಯ

    ಯುವತಿ ವಿಚಾರಕ್ಕೆ ರಾಹುಲ್ ಮತ್ತು ಚೇತನ್ ನಡುವೆ ಹಿರೇಕೆರೂರು ಗೋಕುಲ್ ರಸ್ತೆಯ ಐಸ್ ಕ್ಯೂಬ್ ಪಬ್‍ನಲ್ಲಿ ಗಲಾಟೆಯಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಪಾಲಿಕೆ ಸದಸ್ಯ ಚೇತನ್, ರಾಹುಲ್ ತಲೆಗೆ ಮದ್ಯದ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಗೋಕುಲ್ ರೋಡ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾರ್ಪೊರೇಟ್ ಚೇತನ್ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ದೆಹಲಿ ರೇಪ್ ಕೇಸ್ – ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಖುಲಾಸೆಗೊಳಿಸಿದ ಸುಪ್ರೀಂ

    Live Tv
    [brid partner=56869869 player=32851 video=960834 autoplay=true]

  • ಪ್ರತಿಷ್ಠಿತ ಪಬ್‍ನಲ್ಲಿ ಹೊಡೆದಾಟ – ಸುನಾಮಿ ಕಿಟ್ಟಿಯಿಂದ ಹಲ್ಲೆ ಆರೋಪ

    ಪ್ರತಿಷ್ಠಿತ ಪಬ್‍ನಲ್ಲಿ ಹೊಡೆದಾಟ – ಸುನಾಮಿ ಕಿಟ್ಟಿಯಿಂದ ಹಲ್ಲೆ ಆರೋಪ

    ಬೆಂಗಳೂರು: ಪ್ರತಿಷ್ಠಿತ ಬಾರ್‌ವೊಂದರಲ್ಲಿ ಕಿರುತೆರೆ ನಟ ಹಾಗೂ ಆತನ ಗೆಳೆಯರು ಕಂಠ ಪೂರ್ತಿ ಕುಡಿದು ಶಾಂಪೇನ್ ಬಾಟೆಲ್ ಓಪನ್ ಮಾಡುವ ವಿಚಾರಕ್ಕೆ ಗಲಾಟೆ ಮಾಡಿದ ಆರೋಪ ಬಂದಿದೆ.

    ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಆತನ ಗೆಳೆಯ ಚೇತನ್ ಗೌಡ ಶಾಂಪೇನ್ ಓಪನ್ ಮಾಡಿದ್ದಾಗ ಪಕ್ಕದಲ್ಲಿ ಇದ್ದ ಕೃಷ್ಣ ಮತ್ತು ಪ್ರಶಾಂತ್ ಮೇಲೆ ಚೆಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ಪ್ರಶಾಂತ್ ಶಾಂಪೇನ್ ಚೆಲ್ಲಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಆತನ ಗೆಳೆಯ ಚೇತನ್ ಗೌಡ ಇಬ್ಬರು ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಚಿರತೆ ಆತಂಕ – ಶಾಲೆಗಳಿಗೆ ರಜೆ

    POLICE JEEP

    ಘಟನೆ ಸಂಬಂಧಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದು, ಅಪರಿಚಿತ ವ್ಯಕ್ತಿಗಳು ನಮ್ಮ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನೂ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತ ದೂರು ನೀಡಿದ್ದು, ಮದ್ಯ ಚಲ್ಲಿದ್ದ ಕಾರಣಕ್ಕೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಎರಡು ಕೇಸ್ ದಾಖಲು ಮಾಡಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ

    Live Tv
    [brid partner=56869869 player=32851 video=960834 autoplay=true]

  • ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಮಂಗಳೂರು: ಮಂಗಳೂರಿನ ಪಬ್ ಮೇಲೆ ಭಜರಂಗದಳ ದಾಳಿ ವಿಚಾರವಾಗಿ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

    ಸೋಮವಾರ ರಾತ್ರಿ ಕಾಲೇಜು ಫೇರ್‌ವೆಲ್ ನೆಪದಲ್ಲಿ ಮಂಗಳೂರಿನ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‍ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‍ನಿಂದ ಹೊರಗೆ ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.  ಇದನ್ನೂ ಓದಿ: ಇತ್ತೀಚಿನ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಶಶಿಕುಮಾರ್ ಅವರು, ನಗರದಲ್ಲಿ ಯಾವುದೇ ಪಬ್ ಮೇಲೆ ದಾಳಿ ಆಗಿಲ್ಲ. ಬಲ್ಮಠದ ಪಬ್ ಮುಂದೆ ಭಾನುವಾರ ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಾಗಿತ್ತು. ಈ ಬಗ್ಗೆ ಬೌನ್ಸರ್ ಜೊತೆ ಸಂಘಟನೆಯೊಂದಕ್ಕೆ ಸೇರಿದ ಯುವಕರು ಮಾತನಾಡಿದ್ದರು. ಬೌನ್ಸರ್ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾನೆ. ಇದನ್ನೂ ಓದಿ: ಮಂಗಳೂರಿನ ಪಬ್‍ನಲ್ಲಿ ವಿದ್ಯಾರ್ಥಿಗಳ ಮೋಜು – ಪಾರ್ಟಿಗೆ ಭಜರಂಗದಳದಿಂದ ತಡೆ

    ಇಲ್ಲಿ ಯಾವುದೇ ಅಟ್ಯಾಕ್, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ತಡರಾತ್ರಿ ನಡೆದ ಘಟನೆಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆ ಪ್ರಕರಣದಲ್ಲಿ ಭಾಗಿಯಾದವರು ಯಾರೂ ನಿನ್ನೆ ಪಬ್‍ನ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಇನ್ನೂ ಈ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]